Tag: biscuit

  • ಒಂದೇ ಒಂದು ಬಿಸ್ಕೆಟ್‌ ತಿನ್ನಲು ಹೋದ ಮಗು – ಮಿಷಿನ್‌ ಬೆಲ್ಟ್‌ಗೆ ಸಿಲುಕಿ ಸಾವು!

    ಒಂದೇ ಒಂದು ಬಿಸ್ಕೆಟ್‌ ತಿನ್ನಲು ಹೋದ ಮಗು – ಮಿಷಿನ್‌ ಬೆಲ್ಟ್‌ಗೆ ಸಿಲುಕಿ ಸಾವು!

    ಮುಂಬೈ: ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ (Biscuit Factory) ಯಂತ್ರದ ಬೆಲ್ಟ್‌ಗೆ ಸಿಲುಕಿ ಮೂರು ವರ್ಷದ ಗಂಡು ಮಗು ಸಾವನ್ನಪ್ಪಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಥಾಣೆ ಜಿಲ್ಲೆಯ ಅಂಬರನಾಥದಲ್ಲಿ (Ambarnath) ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುಷ್ ಚೌಹಾಣ್ ಮೃತಪಟ್ಟ ಮಗು. ಇದನ್ನೂ ಓದಿ: 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    ಅಷ್ಟಕ್ಕೂ ಅಲ್ಲಿ ಆಗಿದ್ದೇನು?
    ಮಗು ಆಯುಷ್ ಚೌಹಾಣ್ ತನ್ನ ತಾಯಿಯೊಂದಿಗೆ ಬಿಸ್ಕೆಟ್‌ ಫ್ಯಾಕ್ಟರಿಗೆ ಹೋಗಿದ್ದನು. ಈ ವೇಳೆ ಮಗುವನ್ನು ಒಂದು ಕಡೆ ಕೂರಿಸಿ, ಮಗುವಿನ ತಾಯಿ ತನ್ನ ಪತಿಗೆ ಉಪಾಹಾರ ಕೊಟ್ಟುಬರಲು ತೆರಳಿದ್ದರು. ಈ ವೇಳೆ ಯಂತ್ರದಲ್ಲಿದ್ದ ರಾಶಿ ರಾಶಿ ಬಿಸ್ಕೆಟ್‌ ನೋಡಿದೆ. ಒಂದೇ ಒಂದು ಬಿಸ್ಕೆಟ್‌ ತೆಗೆದುಕೊಳ್ಳಲು ಕೈಹಾಕಿದೆ. ಆದ್ರೆ ಬೆಲ್ಟ್‌ಗೆ ಕೈ ಸಿಕ್ಕಿಕೊಂಡಿದೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಎಂದು ಅಂಬರನಾಥ್ ಪೊಲೀಸ್
    (Ambarnath Police) ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್‌ – ದರ್ಶನ್‌ & ಗ್ಯಾಂಗ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

  • ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನವದೆಹಲಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ  (Social Media) ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ತನ್ನು (Biscuit )ನೀಡಿದ್ದಾರೆ. ಆದರೆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ:  ಕೇಂದ್ರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಮಂಡನೆ

    ಘಟನೆ ಕುರಿತು ಬಿಜೆಪಿ ನಾಯಕಿ ಪಲ್ಲವಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ, ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವೀಯ ಅವರು ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಬರೆದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಹೈಕೋರ್ಟ್‌ ಆದೇಶ

  • ಮೊಬೈಲ್ ಕಿತ್ತುಕೊಂಡು ಓಡಿ ಹೋದ ಕೋತಿ – ಮಂಗನಿಂದ ಫೋನ್ ಪಡೆಯಲು ಸರ್ಕಸ್

    ಮೊಬೈಲ್ ಕಿತ್ತುಕೊಂಡು ಓಡಿ ಹೋದ ಕೋತಿ – ಮಂಗನಿಂದ ಫೋನ್ ಪಡೆಯಲು ಸರ್ಕಸ್

    ಕೋತಿಯೊಂದು ಮೊಬೈಲ್‍ನನ್ನು ಕಿತ್ತುಕೊಂಡು ಓಡಿ ಹೋಗಿರುವ ವೀಡಿಯೋಯೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಕೋತಿಯೊಂದು ಮೊಬೈಲ್‍ನನ್ನು ಕಿತ್ತುಕೊಂಡು, ಓಡಿ ಹೋಗಿ ಟೆರಸ್ ಮೇಲೆ ಕುಳಿತುಕೊಂಡು ಆಟವಾಡುತ್ತಿರುತ್ತದೆ. ಈ ವೇಳೆ ಇಬ್ಬರು ಹುಡುಗರು ಕೋತಿಯ ಚೇಷ್ಟೆಗೆ ಬೇಸತ್ತು, ಆತಂಕಗೊಂಡು ಟೆರಸ್ ಬಳಿ ನಿಂತಿರುತ್ತಾರೆ. ಅಲ್ಲದೇ ಕೋತಿಗೆ ಫೋನ್ ಕೇಳಿದರೆ ಹಿಂದಿರುಗಿಸಿ ಕೊಡುವಂತೆ ಕಾಣಿಸುತ್ತಿರಲಿಲ್ಲ. ಹಾಗಾಗಿ ಅಲ್ಲೇ ಇದ್ದ ಮತ್ತೊಬ್ಬರು ಒಂದು ಪ್ಯಾಕೆಟ್ ಬಿಸ್ಕೆಟ್ ಮೇಲಕ್ಕೆ ಎಸೆಯುತ್ತಾರೆ.

    ಆಗ ಕೋತಿ ಒಂದು ಕೈನಲ್ಲಿ ಬಿಸ್ಕೆಟ್ ಪ್ಯಾಕೆಟ್‍ನನ್ನು ಕ್ಯಾಚ್ ಹಿಡಿದು, ಮತ್ತೊಂದು ಕೈನಲ್ಲಿ ಹಿಡಿದುಕೊಂಡಿದ್ದ ಸ್ಮಾರ್ಟ್ ಫೋನ್‍ನನ್ನು ಕೆಳಗೆ ಬೀಳಿಸುತ್ತದೆ. ಈ ವೇಳೆ ಮೊಬೈಲ್‍ಗಾಗಿ ಕಾಯುತ್ತಿದ್ದ ಇಬ್ಬರು ಹುಡುಗರು ನಿರಾಶೆಗೊಳ್ಳುತ್ತಾರೆ.

    ಕೋತಿ ಮೊಬೈಲ್ ಕೆಳಗೆ ಬೀಸಾಡಿದಾಗ ಅದು ಒಡೆದು ಹೋಗಿದೆಯೋ ಅಥವಾ ಚೆನ್ನಾಗಿದೆಯೋ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಬಿಸ್ಕೆಟ್ ಪ್ಯಾಕ್ ನೀಡಿದ ನಂತರ ಕೋತಿ ಮಾತ್ರ ಖುಷಿಪಟ್ಟಿದೆ.

    https://youtu.be/KOL-2sPRcdw

  • ಬಿಸ್ಕೆಟ್ ಖರೀದಿಗೆ ಬಂದು ಚಿನ್ನದ ಸರ ಎಗರಿಸಿದ

    ಬಿಸ್ಕೆಟ್ ಖರೀದಿಗೆ ಬಂದು ಚಿನ್ನದ ಸರ ಎಗರಿಸಿದ

    ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳ ಚಿನ್ನ ಎಗರಿಸಿ ಪರಾರಿಯಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.

    ಮುಲ್ಕಿಯ ಚರಂತಿಪೇಟೆಯಲ್ಲಿ ಸೀತಾ ಅವರ ಅಂಗಡಿಗೆ ಬಿಸ್ಕೆಟ್ ಖರೀದಿಸಲು ವ್ಯಕ್ತಿಯೊಬ್ಬ ಬಂದಿದ್ದ. ಆದರೆ ಬಿಸ್ಕೆಟ್ ಖರೀದಿಸಲು ಬಂದವ ಸೀತಾ ಅವರ ಚಿನ್ನದ ಸರವನ್ನೇ ಎಗರಿಸಿ ಪರಾರಿಯಾಗಿದ್ದಾನೆ. ಖದೀಮನ ಕಳ್ಳತನ ಕೃತ್ಯದ ದೃಶ್ಯ ಸ್ಥಳೀಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಂಗಡಿಗಿಂತ ಸ್ವಲ್ಪ ದೂರದಲೇ ಸ್ಕೂಟರನ್ನು ಸ್ಟಾರ್ಟ್ ನಲ್ಲೇ ಇರಿಸಿ ಬಂದಿದ್ದ. ಅಂಗಡಿಯಲ್ಲಿದ್ದ ವೃದ್ಧೆ ಬಿಸ್ಕೆಟ್ ಕೊಡಲು ಮುಂದಾಗುತ್ತಿದ್ದಂತೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾಗಿದ್ದಾನೆ. ಕಳ್ಳತನ ನಡೆಸಿ ತಕ್ಷಣವೇ ಆರೋಪಿ ಕಾಲ್ಕಿತ್ತಿದ್ದು, ಹೆದ್ದಾರಿ ಮೂಲಕ ಮಂಗಳೂರು ಕಡೆಗೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

  • ಲಾಕ್‍ಡೌನ್ ವೇಳೆ 82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ

    ಲಾಕ್‍ಡೌನ್ ವೇಳೆ 82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ

    ಮುಂಬೈ: ಲಾಕ್‍ಡೌನ್ ವೇಳೆ ಪಾರ್ಲೆ ಜಿ ಬಿಸ್ಕಟ್ ತನ್ನ 82 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿ ಇತಿಹಾಸ ರಚಿಸಿದೆ. ಕೊರೊನಾ ತಡೆಗಾಗಿ ಸರ್ಕಾರ ಎರಡು ತಿಂಗಳು ಸಂಪೂರ್ಣ ಲಾಕ್‍ಡೌನ್ ವಿಧಿಸಿದ್ದರಿಂದ ಬಹುತೇಕ ಉದ್ಯಮಗಳು ನಷ್ಟ ಅನುಭವಿಸಿವೆ. ಆದ್ರೆ ಪಾರ್ಲೆ ಜಿ ಈ ಸಮಯದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ.

    ಕೇವಲ 5 ರೂ.ಗೆ ದೊರೆಯುವ ಪಾರ್ಲೆ ಜಿ ಬಿಸ್ಕಟ್ ಎಷ್ಟೋ ಪ್ರವಾಸಿ ಕಾರ್ಮಿಕರಿಗೆ ಸಂಜೀವಿನಿ ಆಗಿತ್ತು. ಕಾಲ್ನಡಿಗೆಯಲ್ಲಿ ಗೂಡು ಸೇರಿಕೊಳ್ಳಲು ಹೊರಟ್ಟಿದ್ದ ಕಾರ್ಮಿಕರಿಗೆ ಪಾರ್ಲೆ ಜೀ ಆಸರೆಯಾಗಿತ್ತು. ಹಲವರು ದುಡ್ಡು ನೀಡಿ ಖರೀದಿಸಿದ್ರೆ, ಕಾರ್ಮಿಕರ ಕಷ್ಟಕ್ಕೆ ನೆರವಾಗಲು ಪಾರ್ಲೆ ಜಿ ಖರೀದಿಸಿ ನೀಡುತ್ತಿದ್ದರು. ಇನ್ನು ಲಾಕ್‍ಡೌನ್ ಆಹಾರ ಕೊರತೆ ಉಂಟಾಗಬಹುದು ಎಂಬ ಭಯದಿಂದ ಪಾರ್ಲೆ ಜಿ ಬಿಸ್ಕಟ್ ಗಳನ್ನು ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದರು.

    ದಾಖಲೆ ಬ್ರೇಕ್: ಪಾರ್ಲೆ ಜಿ 1938ರಿಂದಲೂ ಜನರ ಫೇವರೇಟ್ ಬಿಸ್ಕಟ್. ಲಾಕ್‍ಡಭನ್ ಮಧ್ಯೆ ಪಾರ್ಲೆ ತನ್ನ 82 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದೆ. ಆದ್ರೆ ಪಾರ್ಲೆ ಕಂಪನಿ ಉತ್ಪನ್ನಗಳ ಮಾರಾಟದ ಅಂಕಿ ಅಂಶಗಳನ್ನು ರಿವೀಲ್ ಮಾಡಿಲ್ಲ. ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಎಂಟು ದಶಕಗಳಲ್ಲಿಯೇ ಕಂಪನಿಯ ಉತ್ಪನ್ನಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

    ಇನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಂಪನಿಯ ಶೇರುಗಳ ಬೆಲೆ ಶೇ.5ರಷ್ಟು ಏರಿಕೆ ಕಂಡಿವೆ. ಮಾರಾಟದ ದರ ಸಹ ಶೇ.80 ರಿಂದ 90ಕ್ಕೆ ಏರಿಕೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಬ್ರಿಟಾನಿಯಾದ ಗುಡ್ ಡೇ, ಟೈಗರ್, ಮಿಲ್ಕ್ ಬಿಕಿಸ್, ಬಾರ್ಬರ್ನ್ ಮತ್ತು ಮಾರಿ ಬಿಸ್ಕಟ್ ಗಳು ಅಧಿಕ ಮಾರಾಟಗೊಂಡಿವೆ. ಪಾರ್ಲೆಯ ಇನ್ನಿತರ ಉತ್ಪನ್ನಗಳಾದ ಕ್ರ್ಯಾಕ್‍ಜ್ಯಾಕ್, ಮೊನೆಕಾ, ಹೈಡ್ ಆ್ಯಂಡ್ ಸೀಕ್ ಬಿಸ್ಕಟ್ ಗಳು ಮಾರಾಟ ಆಗಿವೆ.

  • ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ – ಸೀಕ್ರೆಟ್ ಬಿಚ್ಚಿಟ್ಟ ನಿತಿನ್

    ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ – ಸೀಕ್ರೆಟ್ ಬಿಚ್ಚಿಟ್ಟ ನಿತಿನ್

    ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದಿದ್ದಾರೆ ಎಂದು ಟಾಲಿವುಡ್ ನಟ ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.

    ನಿತಿನ್ ಮತ್ತು ರಶ್ಮಿಕಾ ಅಭಿನಯದ ‘ಭೀಷ್ಮ’ ಸಿನಿಮಾ ಫೆ.21 ರಂದು ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ನಿತಿನ್ ಮತ್ತು ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಂದರೆ ಪ್ರೇಮಿಗಳ ದಿನಾಚರಣೆಯಂದು ಇಬ್ಬರೂ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ನಿತಿನ್, ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ.

    ನಿತಿನ್ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ, “ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸಂಗತಿಯನ್ನ ಹೇಳಿ ಎಂದು ನನಗೆ ಕೇಳಿ, ನಾನು ಉತ್ತರ ಕೊಡುತ್ತೇನೆ. ಅದೇ ರೀತಿ ನನ್ನ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವನ್ನು ರಶ್ಮಿಕಾಗೆ ಕೇಳಿ. ಅವರು ಉತ್ತರ ಕೊಡುತ್ತಾರೆ” ಎಂದು ನಿರೂಪಕಿಗೆ ಸಲಹೆ ನೀಡಿದರು. ಅದರಂತೆಯೇ ನಿರೂಪಕಿ ರಶ್ಮಿಕಾಗೆ ಪ್ರಶ್ನೆ ಮಾಡಿದ್ದಾರೆ.

    ಆಗ ರಶ್ಮಿಕಾಗೆ ನಿತಿನ್ ಬಗ್ಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಈ ವೇಳೆ ರಶ್ಮಿಕಾ ಬಗ್ಗೆ ಒಂದು ಸೀಕ್ರೆಟ್ ಹೇಳುತ್ತೇನೆ ಎಂದು ಅವರ ಸೀಕ್ರೆಟ್ ಒಂದನ್ನು ನಟ ನಿತಿನ್ ರಿವೀಲ್ ಮಾಡಿದ್ದಾರೆ.

    ಸಾಮಾನ್ಯವಾಗಿ ನಾವು-ನೀವೆಲ್ಲಾ ಸಂಜೆ ಹೊತ್ತಲ್ಲಿ ಇಡ್ಲಿ, ದೋಸೆ, ಚಿಪ್ಸ್, ಸ್ವೀಟ್ ಹೀಗೆ ಏನಾದರೂ ಸ್ನ್ಯಾಕ್ಸ್ ತಿನ್ನುತ್ತೀವಿ ಅಲ್ವಾ. ಆದರೆ ರಶ್ಮಿಕಾ ಮಂದಣ್ಣ ಏನು ತಿಂತಾರೆ ಗೊತ್ತಾ? ಎಂದು ಹೇಳಲು ಮುಂದಾಗಿದ್ದಾರೆ. ಆಗ ರಶ್ಮಿಕಾ ಹೇಳಬೇಡಿ ಎಂದು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ನಿತಿನ್, ಸ್ನ್ಯಾಕ್ಸ್ ಆಗಿ ರಶ್ಮಿಕಾ ನಾಯಿ ಬಿಸ್ಕೆಟ್ ತಿಂದಿದ್ದಾರೆ” ಎಂದು ಹೇಳಿಯೇ ಬಿಟ್ಟಿದ್ದಾರೆ.

    ಈ ವಿಚಾರ ರಶ್ಮಿಕಾಗೆ ಮುಜುಗರ ಉಂಟುಮಾಡಿತು. ಕೊನೆಗೆ ರಶ್ಮಿಕಾ ನಕ್ಕು ನಾಯಿ ಬಿಸ್ಕೆಟ್ ತಿಂದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ಒಮ್ಮೆ ಮಾತ್ರ ನಾಯಿ ಬಿಸ್ಕೆಟ್ ತಿಂದಿದ್ದೇನೆ. ಅದರ ರುಚಿ ಹೇಗಿರುತ್ತೆ ಎಂದು ತಿಳಿದುಕೊಳ್ಳಲು ಟೇಸ್ಟ್ ಮಾಡಿದ್ದೆ ಅಷ್ಟೆ. ನಮ್ಮ ಮನೆಯಲ್ಲೂ ನಾಯಿ ಮರಿ ಇದೆ. ಅದು ಯಾವಾಗಲೂ ಪೆಡಿಗ್ರೀ ಬಿಸ್ಕೆಟ್ ಇಷ್ಟ ಪಡುತ್ತೆ. ಹೀಗಾಗಿ ಹೇಗಿರುತ್ತೆ ಎಂಬ ಕುತುಕೂಲದಿಂದ ಅದರ ರುಚಿಯನ್ನ ನೋಡಿದ್ದೆ. ಅದನ್ನ ಒಮ್ಮೆ ನಿತಿನ್ ಬಳಿ ಹೇಳಿಕೊಂಡಿದ್ದೆ. ಆಗ ನಿತಿನ್ ಶಾಕ್ ಆಗಿದ್ದರು” ಅಂತ ರಶ್ಮಿಕಾ ನಾಯಿ ಬಿಸ್ಕೆಟ್ ತಿಂದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  • 2 ರೂ. ಬಿಸ್ಕೆಟ್ ಕೊಡಿಸದ್ದಕ್ಕೆ 11ರ ಬಾಲಕ ಆತ್ಮಹತ್ಯೆಗೆ ಶರಣು!

    2 ರೂ. ಬಿಸ್ಕೆಟ್ ಕೊಡಿಸದ್ದಕ್ಕೆ 11ರ ಬಾಲಕ ಆತ್ಮಹತ್ಯೆಗೆ ಶರಣು!

    ಲಕ್ನೋ: ಕೇವಲ ಎರಡು ರೂಪಾಯಿಯ ಬಿಸ್ಕೆಟ್ಟನ್ನ ತಾಯಿ ಕೊಡಿಸಲು ನಿರಾಕರಿಸಿದ್ದಕ್ಕೆ ಆಕೆಯ 11 ವರ್ಷದ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಷಹಜಹಾನ್‍ಪುರ್ ದ ಹರಿಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಜಹಾರ್ಹರ್ ಹರಿಪುರ ಗ್ರಾಮದ ಚಂದ್ರಬಾನ್ (11) ಆತ್ಮಹತ್ಯೆಗೆ ಶರಣಾದ ಬಾಲಕ. ಚಂದ್ರಬಾನ್ ರಾಜೇಂದ್ರ ಕುಮಾರ್ ಹಾಗೂ ಸುಖಿ ದಂಪತಿಯ ಮೂರು ಮಕ್ಕಳ ಪೈಕಿ ಹಿರಿಯ ಮಗನಾಗಿದ್ದ. ಕಳೆದ ಮಂಗಳವಾರ ಶಾಲೆಗೆ ಹೋಗುವ ಮುನ್ನ ತನ್ನ ತಾಯಿಯ ಬಳಿ ಒಂದು ಕಪ್ ಟೀ ಹಾಗೂ ಬಿಸ್ಕೆಟ್ ಕೊಡುವಂತೆ ಕೇಳಿಕೊಂಡಿದ್ದನು. ಆದರೆ ತಾಯಿ ಟೀ ಮಾತ್ರ ಕೊಟ್ಟು, ಮನೆಯಲ್ಲಿ ಬಿಸ್ಕೆಟ್ ಇಲ್ಲ ಎಂದು ಹೇಳಿದ್ದರು. ನನಗೆ ಬಿಸ್ಕೆಟ್ ಬೇಕೇ ಬೇಕು. ಬಿಸ್ಕೆಟ್ ತರಲು 2 ರೂಪಾಯಿ ಕೊಡುವಂತೆ ತಾಯಿ ಬಳಿ ಬಾಲಕ ಹಠ ಹಿಡಿದಿದ್ದ. ಆದರೆ ತಾಯಿ ಮಾತ್ರ ಅವನ ಮಾತನ್ನು ನಿರಾಕರಿಸಿದ್ದರು.

    ತಾಯಿಯ ಮಾತಿನಿಂದ ಕುಪಿತಗೊಂಡಿದ್ದ ಚಂದ್ರಬಾನ್ ತನ್ನ ತಾಯಿ ಹಾಗೂ ಸಹೋದರಿ ಜೊತೆ ಜಗಳವಾಡಿದ್ದನು. ಅಲ್ಲದೇ ತಾಯಿಯ ವೇಲ್ ಅನ್ನು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದ. ಮನೆಯಿಂದ ಹೋದ ಬಳಿಕ ಎಷ್ಟೇ ಸಮಯವಾದರೂ ಬಾಲಕ ಮನೆಗೆ ಹಿಂದಿರುಗಿರಲಿಲ್ಲ. ಆದರೆ ಮಧ್ಯಾಹ್ನದ ಹೊತ್ತಿಗೆ ಜಮೀನಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಮದ್ನಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

    ಈ ಬಗ್ಗೆ ಮದ್ನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಇಶ್ತಿಯಾಕ್ ಅಹಮದ್ ಮಾತನಾಡಿ, ಕೇವಲ ತನ್ನ ತಾಯಿ ಬಿಸ್ಕೆಟ್ ತಿನ್ನಲು 2 ರೂಪಾಯಿ ಹಣವನ್ನು ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸಂಗತಿಯನ್ನು ಪೋಷಕರು ಹೇಳಿದ್ದರು. ಆದರೆ ನಾವು ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೆ ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕ ಸ್ವತಃ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ವರದಿ ಬಂದಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ, ನನ್ನ ಮಗ ತುಂಬಾ ಮುಂಗೋಪಿಯ ಸ್ವಭಾವ ಹೊಂದಿದ್ದ. ಆದರೆ ಅವನು ಈ ರೀತಿ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಮಗನ ಸಾವಿನಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಬೆಂಗಳೂರು: ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

    ರಾಮನಾಥಪುರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ದೇವರನ್ನು ನಂಬುವ ವ್ಯಕ್ತಿ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು.

    25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ದೂರಿದರು.

    ನಾನು ಬೇಕು ಅಂತಾ ಮಾಡಲಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಹಿಂದೆ ಕುಳಿತಿದ್ದ ಮಹಿಳೆಯರು ಒಂದೇ ಸಮನೇ ಬೇಕು ಅಂತಾ ಕೂಗುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಕೊಡುವುದಕ್ಕೆ ಆಗಲಿಲ್ಲ, ನಿಂತಲ್ಲಿಯೇ ಕೊಡಬೇಕಾದ ಪರಿಸ್ಥಿತಿ ಬಂದಿತ್ತು. ಅದನ್ನು ಎಸೆದಿದ್ದಾರೆ ಅಂತಾ ಹೇಳಿದರೆ ಹೇಗೆ? ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಎಲ್ಲಾ ಮಾಧ್ಯಮದವರು ಅಂದು ಅಲ್ಲಿಯೇ ಇದ್ದರು. ಆದರೆ ಅಂದೇ ಸುದ್ದಿ ಮಾಡಲಿಲ್ಲ ಎಂದರು.

    ನಿರಾಶ್ರಿತ ಕೇಂದ್ರದಲ್ಲಿ ಇದ್ದವರು ಶ್ರೀಮಂತರಲ್ಲ, ಎಲ್ಲರೂ ಬಡವರು. ನಾನು ಪ್ರವಾಹ ಪೀಡಿತ ಭಾಗಗಳಿಗೆ ರಾತ್ರಿ, ಹಗಲು ಹೋಗಿದ್ದೇನೆ. ಏನು ಗ್ರಹಚಾರಾನೋ ಏನೋ, ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನವೇ ಶುರುವಾಗಿದೆ ಎಂದು ಹೇಳಿದ ಸಚಿವರು, ಕೊಡಗು ಹಾಗೂ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಚಿವರು ಬಂದ ಪರಿಸ್ಥಿತಿಯನ್ನು ನೋಡಲಿ. ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ, ಆದರೂ ನೆರವಿಗೆ ನಿಂತೆ. ಈಗ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಚುನಾವಣೆ ವೇಳೆ ರಾಜಕೀಯ ಮಾಡೋಣ, ಇಂತಹ ಸಂದರ್ಭದಲ್ಲಿ ಬೇಡ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ಕೋಲಾರ: ಮಳೆ ಸಂತ್ರಸ್ತರಿಗೆ ಬಿಸ್ಕೆಟ್ ಕೊಡುವ ರೀತಿ ತಪ್ಪು, ಆದರೆ ಉದ್ದೇಶ ಪೂರ್ವಕವಾಗಿ ನಿರಾಶ್ರಿತರಿಗೆ ಅವಮಾನ ಮಾಡಬೇಕೆಂದು ಹಾಗೆ ಸಚಿವ ರೇವಣ್ಣ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ವಿಚಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಸ್ಕೆಟ್ ಎಸೆದಿರುವುದು ತಪ್ಪು, ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ವಿತರಣೆ ಮಾಡುವಾಗ ಸರಿಯಾಗಿ ವಿತರಣೆ ಮಾಡಬೇಕಿತ್ತು. ಆದರೆ ಸಂತ್ರಸ್ತರಿಗೆ ಅವಮಾನಮಾಡಬೇಕೆಂದು ಹಾಗೆ ಮಾಡಿಲ್ಲ ಎಂದು ರೇವಣ್ಣನವರ ಪರ ಬ್ಯಾಟ್ ಬೀಸಿದ್ದಾರೆ.

    ಈಗಾಗಲೇ ಸಿಎಂ ಕುಮಾರಸ್ವಾಮಿಗಳು ಈ ವಿಚಾರಕ್ಕೆ ಸ್ಪಷ್ಟನೆ ನೀಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಈ ವೇಳೇ ಕಂದಾಯ ಅದಾಲತ್ 6 ತಿಂಗಳುಗಳ ಕಾಲ ವಿಸ್ತರಣೆ ಮಾಡಿದ್ದು, ರಾಜ್ಯದ 30 ಸಾವಿರ ಹಳ್ಳಿಗಳಲ್ಲಿ 10 ಸಾವಿರ ಹಳ್ಳಿಗಳು ಪೋಡಿ ಮುಕ್ತವಾಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!

    ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!

    ಬೆಂಗಳೂರು: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿದ್ದು ಸಾವಿರ ರೂಪಾಯಿಗಳ ಪರಿಹಾರ. ಆದ್ರೆ ಸಿಎಂ ಮನೆಯ ಬಿಸ್ಕೆಟ್ ಖರ್ಚು ಲಕ್ಷಾಂತರ ರೂಪಾಯಿ ಅನ್ನೋದು ನಿಮಗೆ ಗೊತ್ತಾ?

    ಹೌದು. ಕಳೆದ 4 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ಮನೆ ಹಾಗೂ ಗೃಹ ಕಚೇರಿ ಕೃಷ್ಣದಲ್ಲಿನ ಮನೆಗೆ ಕಾಫಿ, ಟೀ, ಬಿಸ್ಕೆಟ್ ಹಾಗೂ ನೀರಿಗೆ ಬರೋಬ್ಬರಿ 60 ಲಕ್ಷ ಹಣ ಖರ್ಚು ಮಾಡಿದ್ದಾರೆ. ಗಣ್ಯರು, ಅತಿಗಣ್ಯರಿಗೆ ಲೆಕ್ಕ ಬಿಟ್ಟು ಇದು ಕೇವಲ ಸಿಎಂ ನಿವಾಸಕ್ಕೆ ಆಗಿರೋ ಖರ್ಚು ಮಾತ್ರ. ಈ ವಿಚಾರ ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ.

    2013-2014 ಸಾಲಿನಲ್ಲಿ ಬಿಸ್ಕೆಟ್‍ಗೆ 3.65 ಲಕ್ಷ ರೂ. ಖರ್ಚು ಮಾಡಲಾಗಿದೆ. ಕಾಫಿ, ಟೀ, ಮಿನರಲ್ ವಾಟರ್‍ಗಾಗಿ 10 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಒಟ್ಟಾರೆ 13.65 ಲಕ್ಷ ರೂ. ಕಾಫಿ, ಟೀ, ಬಿಸ್ಕೆಟ್‍ಗೆ ಖರ್ಚು ಮಾಡಲಾಗಿದೆ. ಇದೇ ರೀತಿ 2014-15ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ, ಕಾಫಿ, ಟೀ, ನೀರಿಗೆ 6.5 ಲಕ್ಷ ರೂ. ಖರ್ಚು ಮಾಡಲಾಗಿದೆ. 2015-16ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ ರೂ., ಕಾಫಿ, ಟೀ, ನೀರಿಗೆ 6.7 ಲಕ್ಷ ರೂ. ಖರ್ಚಾಗಿದೆ.

    2016-17 ಸಾಲಿನಲ್ಲಿ ಬಿಸ್ಕೆಟ್ ಗೆ 4.5 ಲಕ್ಷ ರೂ., ಕಾಫಿ,ಟೀ,ನೀರು 7 ಲಕ್ಷ ರೂ. ವೆಚ್ಚ ಮಾಡಿದ್ರೆ, 2017-18 ನೇ ಸಾಲಿನಲ್ಲಿ ಬಿಸ್ಕೆಟ್‍ಗೆ 4.5 ಲಕ್ಷ ರೂ., ಕಾಫಿ, ಟೀ, ನೀರು 7.2 ಲಕ್ಷ ರೂ. ಖರ್ಚಾಗಿದೆ. ಒಟ್ಟಾರೆ ಬಿಸ್ಕೆಟ್‍ಗೆ 22 ಲಕ್ಷ ರೂ. ಖರ್ಚಾಗಿದ್ದು ಕಾಫಿ, ಟೀ, ನೀರಿಗೆ 38 ಲಕ್ಷ ರೂಪಾಯಿ ಆಗಿದೆ.

    ಇನ್ನೊಂದು ಇಂಟ್ರಸ್ಟಿಂಗ್ ವಿಷಯ ಅಂದ್ರೆ ನಾಲ್ಕು ವರ್ಷಗಳಲ್ಲಿ ಬಿಸ್ಕೆಟ್ ಖರೀದಿಗೆ ಪ್ರತೀ ವರ್ಷ ನೀಡಿರೋದು 4.5 ಲಕ್ಷ ರೂ. ಯಾವ ವರ್ಷವೂ ಒಂದು ರೂಪಾಯಿ ಹೆಚ್ಚು ಕಡಿಮೆ ಆಗಿಲ್ಲ. ಅದೇ ರೀತಿ ನೀರಿಗೂ ಕೂಡ 1.75 ಲಕ್ಷ ರೂ. ಪ್ರತಿ ವರ್ಷ ಬಿಲ್ ಮಾಡಲಾಗಿದೆ. ಇಷ್ಟು ಲೆಕ್ಕ ಜಸ್ಟ್ ಸಿಎಂ ನಿವಾಸಕ್ಕೆ ಮಾತ್ರ. ಸಿಎಂ ನಿವಾಸಕ್ಕೆ ಬರೋ ಗಣ್ಯರು, ಅತೀ ಗಣ್ಯರಿಗೆ ಬಿಟ್ಟು ಖರ್ಚು ಮಾಡಿರೋ ಲೆಕ್ಕ ಇದು.

    https://www.youtube.com/watch?v=9RWwu3sLLpg