ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಅಖಾಡದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ಜನರಿಗೆ ಹಂಚಲು ತಯಾರು ಮಾಡಿಟ್ಟಿದ್ದ ಬಿರಿಯಾನಿಯನ್ನು (Biryani) ಚುನಾವಣಾ ಅಧಿಕಾರಿಗಳು (Election Officers) ಸೀಜ್ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಚನ್ನಪಟ್ಟಣದ ರೆಸಾರ್ಟ್ನಲ್ಲಿ ಕರೆಯಲಾಗಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸಿದ್ಧವಾಗಿದ್ದ ಬಿರಿಯಾನಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿಯಾದ ಉಪವಿಭಾಗಾಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿಮಾಡಿದ ಅಧಿಕಾರಿಗಳು ಬಿರಿಯಾನಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ
ನೀತಿಸಂಹಿತೆಯನ್ವಯ ಬಾಡೂಟ ಮಾಡಿಸಲು ಅವಕಾಶವಿಲ್ಲ. ಸಭೆಗೆ ಅನುಮತಿ ಪಡೆಯಲಾಗಿತ್ತಾದರೂ ಕಾರ್ಯಕರ್ತರಿಗೆ ಮಜ್ಜಿಗೆ ನೀರು, ಕಾಫಿ, ಟೀ ವಿತರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿ ಕಾರ್ಯಕರ್ತರನ್ನ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಆದೇಶ ಆಗಿ 10 ದಿನ ಕಳೆದರೂ ಕಾರವಾರ ಅಪರ ಜಿಲ್ಲಾಧಿಕಾರಿ ಖುರ್ಚಿ ಖಾಲಿ
ಚಿಕ್ಕಮಗಳೂರು: ಭಾನುವಾರ ಮಾಡಿದ್ದ ಬಿರಿಯಾನಿಯನ್ನು (Biriyani) ಸೋಮವಾರ ತಿಂದು 17 ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಕಡೂರು (Kadur) ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಖಾಸಗಿ ಕಾರ್ಯಕ್ರಮವೊಂದು ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರಿಗಾಗಿ ಬಿರಿಯಾನಿ ತಯಾರಿಸಿದ್ದರು. ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದ 17 ಜನ ಗ್ರಾಮಸ್ಥರು ಅಸ್ವಸ್ಥರಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮರವಂಜಿ ಗ್ರಾಮದ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಯಾರಿಸಿದ ಬಿರಿಯಾನಿಯನ್ನು ಸೋಮವಾರ ಕುಟುಂಬಸ್ಥರು ಹಾಗೂ ಕೆಲ ಗ್ರಾಮಸ್ಥರು ಸೇವಿಸಿದ್ದಾರೆ. ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಹಿನ್ನೆಲೆ ಗ್ರಾಮಸ್ಥರು ಅಂಬುಲೆನ್ಸ್‌ನಲ್ಲಿ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ
ಭಾನುವಾರ ತಯಾರಿಸಿದ್ದ ಮಾಂಸಾಹಾರ ಸೋಮವಾರ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದರಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಯಾರ ಪ್ರಾಣಕ್ಕೂ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರ ಪೈಕಿ 8 ಪುರುಷರು ಹಾಗೂ 9 ಮಹಿಳೆಯರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಕಡೂರು ಶಾಸಕ ಕೆಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್
ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಭರ್ಜರಿ ಬಾಡೂಟ ಕಳುಹಿಸಿದ್ದಾರೆ. ಆದರೆ ಆಟೋ ರಿಕ್ಷಾದಲ್ಲಿ ಕಳುಹಿಸಲಾಗಿದ್ದ ಬಿರಿಯಾನಿಯನ್ನು (Biryani) ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ಬಿಡದ ಹಿನ್ನೆಲೆ ಬೆಂಜ್ ಕಾರ್‌ನಲ್ಲಿ ಕೊಂಡೊಯ್ಯಲಾಗಿದೆ.
ಹೌದು, ಜಮೀರ್ ಅಹಮದ್ ಖಾನ್ ಅವರು ಹಬ್ಬದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಸಿಎಂ ಸರ್ಕಾರಿ ನಿವಾಸದ ಬಳಿ ಆಟೋದಲ್ಲಿ ಬಂದ ಬಿರಿಯಾನಿಯನ್ನು ಅನುಮತಿ ಇಲ್ಲದೆ ಒಳಗೆ ಕೊಂಡುಹೋಗಲು ಬಿಡಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಿತಾ ಅಥವಾ ಕೂರ್ಮ ಇಲ್ಲದೇ ಹೋದರೆ ಬಿರಿಯಾನಿಯಲ್ಲಿ ಏನೋ ಮಿಸ್ಸಿಂಗ್ ಅಂತ ಯಾವಾಗಲೂ ಅನ್ನಿಸುತ್ತದೆ. ಬಿರಿಯಾನಿಯೊಂದಿಗೆ ಸವಿಯೋ ಮಟನ್ ದಾಲ್ಚಾ ನೀವು ಕೇಳಿದ್ದೀರಾ? ತಮಿಳುನಾಡು ಮುಖ್ಯವಾಗಿ ಕೊಯಮತ್ತೂರಿನಲ್ಲಿ ಈ ರೆಸಿಪಿ ತುಂಬಾ ಫೇಮಸ್. ಈ ಬಾರಿ ಬಿರಿಯಾನಿಯೊಂದಿಗೆ ರಾಯಿತಾ ಅಥವಾ ಚಿಕನ್ ಕೂರ್ಮ ಸವಿಯೋ ಬದಲು ದಾಲ್ಚಾವನ್ನು ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು: ಬೇಯಿಸಲು:
ಮೂಳೆ ಸಹಿತ ಮಟನ್ – 100 ಗ್ರಾಂ
ಕಡಲೆ ಬೇಳೆ – ಕಾಲು ಕಪ್
ತೊಗರಿ ಬೇಳೆ – ಕಾಲು ಕಪ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ನೀರು – 2 ಕಪ್ ಪೇಸ್ಟ್ ತಯಾರಿಸಲು:
ಬೆಳ್ಳುಳ್ಳಿ – 6
ಶುಂಠಿ – 1 ಇಂಚು
ಈರುಳ್ಳಿ – 1
ನೀರು – ಕಾಲು ಕಪ್
ಇತರ ಪದಾರ್ಥಗಳು:
ಎಣ್ಣೆ – 2 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕರಿಬೇವಿನ ಎಲೆ – 2 ಚಿಗುರುಗಳು
ಹೆಚ್ಚಿದ ಟೊಮೆಟೊ – 1
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಹುಣಸೆಹಣ್ಣಿನ ಪೇಸ್ಟ್ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಹೆಚ್ಚಿದ ಸಣ್ಣ ಬದನೆ – 5
ಹೆಚ್ಚಿದ ಹಸಿ ಮಾವಿನಕಾಯಿ – ಅರ್ಧ
ಹೆಚ್ಚಿದ ಬಾಳೆ ಕಾಯಿ – ಅರ್ಧ
ತೆಂಗಿನ ಹಾಲು – ಅರ್ಧ ಕಪ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಮಟನ್ ತುಂಡುಗಳನ್ನು ಹಾಕಿ, ತೊಗರಿ ಬೇಳೆ, ಕಡಲೆ ಬೇಳೆ, 2 ಕಪ್ ನೀರು ಹಾಕಿ 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ಒತ್ತಡ ತಾನಾಗೇ ಬಿಡುಗಡೆಯಾಗುವವರೆಗೆ ಕಾಯಿರಿ.
* ಈ ನಡುವೆ ಮಿಕ್ಸರ್ ಜಾರ್‌ನಲ್ಲಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಕಾಲು ಕಪ್ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
* ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಈರುಳ್ಳಿ ಮೃದುವಾಗುವವರೆಗೆ 3-4 ನಿಮಿಷಗಳ ಕಾಲ ಫ್ರೈ ಮಾಡಿ.
* ಬಳಿಕ ಟೊಮೆಟೊ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದೆರಡು ನಿಮಿಷ ಫ್ರೈ ಮಾಡಿ.
* ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಹುಣಸೆಹಣ್ಣಿನ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
* ಬದನೆ, ಮಾವು, ಬಾಳೆ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಬೇಯಿಸಿದ ಮಟನ್ ಮಿಶ್ರಣಕ್ಕೆ ಹುರಿದ ಮಿಶ್ರಣ ಸೇರಿಸಿ ತೆಂಗಿನ ಹಾಲು ಹಾಕಿ ಒಂದೆರಡು ನಿಮಿಷಗಳ ಕಾಲ ಕುದಿಯಲು ಬಿಡಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ದಾಲ್ಚಾ ತಯಾರಾಗುತ್ತದೆ. ಇದನ್ನು ಬಿರಿಯಾನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್
ಭೋಪಾಲ್: ಮಧ್ಯಪ್ರದೇಶದ (Madhya Pradesh) ಭೋಪಾಲ್‍ನ (Bhopal) ನರೇಲಾ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ನೆಲೆಯೂರಿಸುವ ಸಲುವಾಗಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ನಾಯಕರೊಬ್ಬರು ಜನರಿಗೆ ಬಿರಿಯಾನಿ (Biriyani) ಮತ್ತು ಉಪಹಾರವನ್ನು ನೀಡುತ್ತಿದ್ದಾರೆ.
ಬಿಜೆಪಿಯಾಗಲಿ (BJP) ಅಥವಾ ಕಾಂಗ್ರೆಸ್ (Congress) ಆಗಲಿ ಅವರ ಪಕ್ಷದಲ್ಲಿ ಗೌರವ ಸಿಗದಿದ್ದರೆ, ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಸೇರಲು ಕಚೇರಿಗೆ ಬಂದಾಗ ಅವರಿಗೆ ಗೌರವದ ಸಂಕೇತವಾಗಿ ಬಿರಿಯಾನಿ ಅಥವಾ ಸಮೋಸಾ (Samosa) ಮತ್ತು ಚಹಾದಂತಹ ಉಪಹಾರವನ್ನು ನೀಡುತ್ತೇವೆ. ನಮ್ಮ ಮನೆಯಲ್ಲೂ ನಾವು ಅತಿಥಿಗಳಿಗೆ ಇದನ್ನೇ ನೀಡುತ್ತೇವೆ ಎಂದು ಎಐಎಂಐಎಂ ನಾಯಕ ಪೀರ್ಜಾದಾ ತೌಕೀರ್ ನಿಜಾಮಿ (Peerzada Tauqeer Nizami) ಹೇಳಿದ್ದಾರೆ.
ಹೊಸದಾಗಿ ಪಕ್ಷ ಸೇರಿಕೊಳ್ಳುವವರಿಗೆ ಹಾರ ಹಾಕಿ ಸಂಪ್ರದಾಯಿಕವಾಗಿ ಬರಮಾಡಿಕೊಂಡು, ಉಪಹಾರವನ್ನು ನೀಡುತ್ತೇವೆ. ಅವರು ಸರಿಯಾದ ಜಾಗಕ್ಕೆ ಬಂದಿದ್ದೇವೆ ಅಂತ ಅಂದುಕೊಂಡರೆ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್
ಮುಂಬೈ: ರಾತ್ರಿ ಊಟಕ್ಕೆ ಬಿರಿಯಾನಿ ಮಾಡಿಲ್ಲ ಎಂಬ ಕಾರಣಕ್ಕೆ ಕುಡಿದ ನಶೆಯಲ್ಲಿದ್ದ ಪತಿರಾಯ ಪತ್ನಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.
ಆಗಸ್ಟ್ 31ರಂದು ರಾತ್ರಿ ವ್ಯಕ್ತಿ ಕುಡಿದ ಅಮಲಿನಲ್ಲಿ ಮನೆಗೆ ಬಂದು, ಊಟಕ್ಕೆ ಬಿರಿಯಾನಿ ಮಾಡದೇ ಇದ್ದುದಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಕುಟುಂಬದ ಇತರ ಸದಸ್ಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗಲೂ ಆತ ತನ್ನ ಹೆಂಡತಿಗೆ ಥಳಿಸಿದ್ದಾನೆ. ಬಳಿಕ ಚಾಕು ತೆಗೆದುಕೊಂಡು ಆಕೆಗೆ ಇರಿದಿದ್ದಾನೆ. ಇದನ್ನೂ ಓದಿ: ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಆರೋಪಿ ವಿಕ್ರಂ ವಿನಾಯಕ್ ದೇಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಆತನನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತಪಾತ – ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ
Live Tv
[brid partner=56869869 player=32851 video=960834 autoplay=true]
ಬಿರಿಯಾನಿ ತಿನ್ನಬೇಕು ಅಂತ ಹಲವರಿಗೆ ಆಗಾಗ ಅನ್ನಿಸುತ್ತಲೇ ಇರುತ್ತೆ. ಆದರೆ ಕೆಲವೊಮ್ಮೆ ನಾನ್‌ವೆಜ್ ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಬಿರಿಯಾನಿ ಮಾಡಲು ವೆಜ್ ಆಯ್ಕೆಯನ್ನೇ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭ ಮಶ್ರೂಮ್, ಪನೀರ್ ನಿಮ್ಮ ತಲೆಯಲ್ಲಿ ಹೊಳೆಯಬಹುದು. ಆದರೆ ಅದಾವುದೂ ನಿಮ್ಮ ಮನೆಯಲ್ಲಿ ಇಲ್ಲದೇ ಹೋದಾಗ ಟೊಮೆಟೊ ಬಳಸಿಯೇ ಬಿರಿಯಾನಿ ಮಾಡಿ ನೋಡಿ. ಟೊಮೆಟೊ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಲವಂಗ – 5
ದಾಲ್ಚಿನ್ನಿ – 1 ಇಂಚು
ಏಲಕ್ಕಿ – 2
ಜೀರಿಗೆ – 1 ಟೀಸ್ಪೂನ್
ಸೋಂಪು – ಅರ್ಧ ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಹಸಿರು ಮೆಣಸಿನಕಾಯಿ – 1
ಟೊಮೆಟೊ ಪ್ಯೂರಿ – 1 ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಬಿರಿಯಾನಿ ಮಸಾಲಾ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕತ್ತರಿಸಿದ ಕ್ಯಾರೆಟ್ – ಅರ್ಧ
ಬಟಾಣಿ – 2 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ತೆಂಗಿನ ಹಾಲು – 1 ಕಪ್
ಸಣ್ಣಗೆ ಕತ್ತರಿಸಿದ ಪುದಿನಾ – 2 ಟೀಸ್ಪೂನ್
ನೀರು – 1 ಕಪ್
ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಮತ್ತು ಸೋಂಪು ಹಾಕಿ ಹುರಿಯಿರಿ.
* ಬಳಿಕ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಭಾಗ ಮಾಡಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
* ಈಗ ಟೊಮೆಟೊ ಪ್ಯೂರಿಯನ್ನು ಸೇರಿಸಿ, ಅದು ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
* ಬಳಿಕ ಅರಿಶಿನ, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಸಾಲೆಗಳು ಸಂಪೂರ್ಣವಾಗಿ ಬೇಯುವವರೆಗೆ ಹುರಿಯಿರಿ.
* ಹೆಚ್ಚುವರಿಯಾಗಿ ಕ್ಯಾರೆಟ್, ಬಟಾಣಿ, ಪುದಿನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ನಿಮಿಷ ಹುರಿಯಿರಿ.
* ಈಗ ತೆಂಗಿನ ಹಾಲು ಮತ್ತು ನೀರನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
* 20 ನಿಮಿಷ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಪ್ರೆಶರ್ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 2 ಸೀಟಿ ಹೊಡೆಯುವವರೆಗೆ ಬೇಯಿಸಿ.
* ಇದೀಗ ಟೊಮೆಟೊ ಬಿರಿಯಾನಿ ರೆಡಿಯಾಗಿದ್ದು, ಈರುಳ್ಳಿ ಟೊಮೆಟೊ ರಾಯಿತದೊಂದಿಗೆ ಬಡಿಸಿದರೆ ಸೂಪರ್ ಟೇಸ್ಟ್ ನೀಡುತ್ತದೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ನಗರದ ವಡಪಳನಿಯಲ್ಲಿರುವ ಬಿರಿಯಾನಿ ಅಂಗಡಿಯೊಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಇನ್ಮುಂದೆ ಅಂಗಡಿಯಲ್ಲಿ ಬಿರಿಯಾನಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ದಾಳಿ ವೇಳೆ 70 ಕೆಜಿ ಅವಧಿ ಮೀರಿದ ಮಾಂಸ ಮತ್ತು ತಯಾರಿಸಲಾದ 30 ಕೆಜಿ ಬಿರಿಯಾನಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರೆಫ್ರಿಜರೇಟರ್‍ಗಳಲ್ಲಿ ಅವಧಿ ಮೀರಿದ ಮಾಂಸವನ್ನು ಸಂಗ್ರಹಿಸಲಾಗಿದ್ದು, ಜೊತೆಗೆ ರೆಫ್ರಿಜರೇಟರ್ ತಾಪಮಾನವನ್ನು ಸರಿಯಾಗಿ ಅಳವಡಿಸಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಅಂಗಡಿ ಮಾಲೀಕನಿಗೆ 5,000ರೂ ದಂಡ ವಿಧಿಸಿದ್ದು, ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (ಎನ್‍ಎಬಿಎಲ್) ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಕೋಲ್ಡ್ ಚೈನ್ ಮ್ಯಾನೇಜ್‍ಮೆಂಟ್‍ನಲ್ಲಿ ಪ್ರಮಾಣಪತ್ರವನ್ನು ಪಡೆಯುವಂತೆ ಅಂಗಡಿ ಮಾಲೀಕನಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು ನಗರಸಭೆಯಿಂದ ಕಲುಷಿತ ನೀರು ಸರಬರಾಜು – ಮತ್ತೋರ್ವ ವ್ಯಕ್ತಿ ಸಾವು
ಸದ್ಯ ವಶಪಡಿಸಿಕೊಂಡ ಮಾಂಸ ಮತ್ತು ಬಿರಿಯಾನಿಯನ್ನು ಪರೀಕ್ಷೆಗಾಗಿ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ, ಆಹಾರ ಸುರಕ್ಷತಾ ಕಾಯಿದೆಗೆ ಅನುಗುಣವಾಗಿ ಅಂಗಡಿಯವರ ಮೇಲೆ ಹೆಚ್ಚಿನ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ
ಮಂಡ್ಯ: ಸನ್ನಿಲಿಯೋನ್ ಎಂದರೆ ಸಮಾಜದಲ್ಲಿ ಜನ ನೋಡುವ ದೃಷ್ಟಿಯೇ ಬೇರೆ, ಆದರೆ ಸಕ್ಕರೆ ನಾಡು ಮಂಡ್ಯದ ಅಭಿಮಾನಿಗಳು ಸನ್ನಿಲಿಯೋನ್‍ನ ಸಮಾಜ ಸೇವೆಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ಮಂಡ್ಯದ ಕಾರಸವಾಡಿ ಗ್ರಾಮದ ಪ್ರಸಾದ್ ನಗರದ ನೂರಡಿ ರಸ್ತೆಯ ಕರ್ನಾಟಕ ಬಾರ್ ವೃತ್ತದಲ್ಲಿ ಡಿಕೆ ಫ್ರೆಶ್ ಚಿಕನ್ ಸೆಂಟರ್ ಇಟ್ಟಿದ್ದಾರೆ. ಇವರು ಸನ್ನಿಲಿಯೋನ್ ಮಾಡುವ ಸಮಾಜ ಸೇವೆಗೆ ಮಾರುಹೋಗಿ ಆಕೆಯ ಅಪ್ಪಟ ಅಭಿಮಾನಿಯಾಗಿದ್ದಾರೆ. ಆಕೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ಕೆಲಸಕ್ಕೆ ಫುಲ್ ಫಿದಾ ಆಗಿದ್ದು, ಆಕೆಯ ಸಮಾಜ ಸೇವೆಗೆ ಮಾರುಹೋಗಿದ್ದಾರೆ. ಹೀಗಾಗಿ ಇಂದು ಸನ್ನಿಲಿಯೋನ್ ಅವರ 41ನೇ ಹುಟ್ಟು ಹಬ್ಬದ ಹಿನ್ನೆಲೆ ಚಿಕನ್ ಸೆಂಟರ್ ಎದುರು ಕೇಕ್ ಕತ್ತರಿಸಿ ಬಡವರಿಗೆ ಬಿರಿಯಾನಿಯನ್ನು ಹಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಸನ್ನಿಯ ಪೋಸ್ಟ್‍ಗಳಿಗೆ ಅತೀ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡಿದ ಅಭಿಮಾನಿಗಳಗೆ ತಮ್ಮ ಚಿಕನ್ ಸೆಂಟರ್‍ನಲ್ಲಿ 10% ಡಿಸ್ಕೌಂಟ್‍ನ್ನು ಸಹ ನೀಡಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40
ಇದಲ್ಲದೇ ಮಂಡ್ಯ ತಾಲೂಕಿನ ಕೊಮ್ಮೇರನಹಳ್ಳಿ ಗ್ರಾಮದಲ್ಲೂ ಸಹ ಸನ್ನಿಲಿಯೋನ್ ಬರ್ತಡೇ ಆಚರಣೆ ಮಾಡಿದ್ದು, ಗ್ರಾಮದ ರಸ್ತೆಯ ಬಳಿ ಅನಾಥ ಮಕ್ಕಳ ತಾಯಿ ಎಂದು ಸನ್ನಿಲಿಯೋನ್‍ನ 20 ಅಡಿ ಉದ್ದದ ಫೆಕ್ಸ್ ಹಾಕಲಾಗಿದೆ. ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಮಾಡಬೇಕೆಂದು ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ರಕ್ತದಾನ ಶಿಬಿರ ಮಾಡಲಾಯಿತು. ಬಳಿಕ ಗ್ರಾಮದ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ ಇಲ್ಲಿನ ಗ್ರಾಮಸ್ಥರು ಸಂಭ್ರಮಿಸಿ ನಂತರ ಜನರಿಗೆ ಮಾಂಸದ ಊಟವನ್ನು ಹಂಚಲಾಯಿತು.
ಚೆನ್ನೈ: ಈದ್ ಹಬ್ಬದ ಪ್ರಯುಕ್ತ ಸ್ನೇಹಿತರನ್ನು ಮನೆಗೆ ಔತಣಕ್ಕೆಂದು ಆಹ್ವಾನಿಸಿದ್ದ ವೇಳೆ 32 ವರ್ಷದ ವ್ಯಕ್ತಿಯೋರ್ವ ಬಿರಿಯಾನಿ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿದ್ದಾನೆ. ನಂತರ ಆತನ ಹೊಟ್ಟೆಯನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಆಭರಣಗಳು ಪತ್ತೆಯಾಗಿದೆ.
ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ 3ರಂದು ಈದ್ ಪ್ರಯುಕ್ತ ತನ್ನ ಸ್ನೇಹಿತರನ್ನು ಔತಣಕ್ಕೆಂದು ಮನೆಗೆ ಕರೆದಿದ್ದರು. ಈ ವೇಳೆ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವ್ಯಕ್ತಿಯೋರ್ವ ನುಂಗಿ ಹಾಕಿದ್ದಾನೆ. ಅಲ್ಲದೇ ಈ ಸಮಯದಲ್ಲಿ ಆತ ಮದ್ಯ ಸೇವಿಸಿದ್ದ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ
ಊಟ ಮುಗಿದು ಅತಿಥಿಗಳು ಮನೆಗೆ ತೆರಳಿದ ನಂತರ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ಕುರಿತಂತೆ ಅತಿಥಿಗಳನ್ನು ವಿಚಾರಿಸಿದಾಗ, ಯುವತಿಯೊಬ್ಬಳು ತನ್ನ ಸ್ನೇಹಿತೆಯ ಗೆಳೆಯ ಚಿನ್ನಾಭರಣಗಳನ್ನು ಕದ್ದಿರಬಹುದು ಎಂದು ಶಂಕಿಸಿ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ
ನಂತರ ಮೇ 4 ರಂದು ಬುಧವಾರ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿಸಿದಾಗ ಆಭರಣಗಳು ಹೊಟ್ಟೆಯಲ್ಲಿರುವುದು ದೃಢಪಟ್ಟಿದೆ. ಇದೀಗ ವೈದ್ಯರು ಆತನಿಗೆ ಎನಿಮಾ (ಮಲ ಮತ್ತು ಉದರವಾಯುವನ್ನು ಹೊರಹಾಕಲು ಎನಿಮಾ ಚಿಕಿತ್ಸೆ ನೀಡಲಾಗುತ್ತದೆ) ನೀಡಿದ್ದು, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪೆಂಡೆಂಟ್ ಆತನ ಹೊಟ್ಟೆಯಲ್ಲಿಯೇ ಉಳಿದಿದ್ದು, ಅದನ್ನು ಹೊರ ತೆಗೆಯಲು ವೈದ್ಯರು ಆತನಿಗೆ ಔಷಧಿ ನೀಡಿದ್ದಾರೆ.