Tag: birthday

  • ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್

    ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್ ಪ್ರತಾಪ್

    ಮ್ಮ ಹುಟ್ಟು ಹಬ್ಬದ ನೆಪದಲ್ಲಿ ಬಡವರಿಗೆ ಕಣ್ಣು ಆಪರೇಷನ್ ಮಾಡಿಸೋದಾಗಿ ಡ್ರೋನ್ ಪ್ರತಾಪ್ ಹೇಳಿದ್ದರು. ಈಗ ತಾವು ಹೇಳಿದಂತೆ ನಡೆದುಕೊಂಡಿದ್ದಾರೆ. ಅಜ್ಜಿಗೆ ಕಣ್ಣು ಆಪರೇಷನ್ (Eye operation) ಮಾಡಿಸಿರೋ ಪ್ರತಾಪ್, ನಂತರ ಆ  ಅಜ್ಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆ ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ.

    ಡ್ರೋನ್ ಪ್ರತಾಪ್ ಈವರೆಗೂ ಏನೆಲ್ಲ ಮಾತು ಕೊಟ್ಟಿದ್ದರೋ, ಅದೆಲ್ಲವನ್ನೂ ಪಾಲಿಸ್ತಾ ಬಂದಿದ್ದಾರೆ. ಹಾಗಾಗಿ ಪ್ರತಾಪ್ ಮೇಲೆ ಮೆಚ್ಚುಗೆಯ ಮಹಾಪುರವೇ ಹರಿದು ಬರ್ತಿದೆ. ಬಿಗ್ ಬಾಸ್ (Big Boss) ಸ್ಪರ್ಧೆಯಲ್ಲಿ ತಮಗೆ ಬಹುಮಾನವಾಗಿ ಬಂದಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ದಾನ ಮಾಡುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದರು ಡ್ರೋನ್ ಪ್ರತಾಪ್ (Drone Pratap). ಅಗತ್ಯವಿದ್ದವರಿಗೆ ಈ ಬೈಕ್ ಅನ್ನು ನೀಡುವುದಾಗಿ ತಿಳಿಸಿದ್ದರು. ಹೇಳಿದ ಹಾಗೆ ಪ್ರತಾಪ್ ನಡೆದುಕೊಂಡಿದ್ದರು.

    ಬಿಗ್ ಬಾಸ್ ಸ್ಪರ್ಧೆಯಲ್ಲಿ ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂಪಾಯಿ ಹಣ ಮತ್ತು ಒಂದು ಎಲೆಕ್ಟ್ರಿಕ್ ಬೈಕ್ (Bike) ಬಹುಮಾನವಾಗಿ ಬಂದಿತ್ತು. ತಮಗೆ ಬಹುಮಾನವಾಗಿ ಬಂದ ಅಷ್ಟೂ  ಹಣವನ್ನೂ ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ಮೊದಲ ಭಾಗವಾಗಿ ಈಗ ಬೈಕ್ ಅನ್ನು ನೀಡಿದ್ದರು.

     

    ಬೆಂಗಳೂರಿನ ರಾಜು (Raju) ಎನ್ನುವವರು ತಮ್ಮ ಗೆಳೆಯನ ಹೆಸರಿನಲ್ಲಿ ಬೈಕ್ ತೆಗೆದುಕೊಂಡು ತಿಂಗಳ ಕಂತು ಕಟ್ಟುತ್ತಾ ಫುಡ್ ಡಿಲೆವರಿ ಮಾಡುತ್ತಿದ್ದರು. ಗೆಳೆಯ ಮೋಸ ಮಾಡಿದ್ದಕ್ಕೆ ಬೈಕ್ ಅನ್ನು ಬ್ಯಾಂಕ್ ನವರು ಸೀಸ್ ಮಾಡಿದ್ದರು. ಅಂತಹ ರಾಜುವಿಗೆ ತಮಗೆ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಡ್ರೋನ್ ನೀಡಿದ್ದರು. ಬೈಕ್ ನೀಡುವುದಷ್ಟೇ ಅಲ್ಲ, ರಾಜು ಅವರ ಮನೆಗೂ ಡ್ರೋನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಮತ್ತಷ್ಟು ನೆರವಿನ ಅಗತ್ಯವಿದ್ದರೆ ಮಾಡುವುದಾಗಿಯೂ ಅವರು ಹೇಳಿದ್ದರು.

  • ಪ್ರಿಯಾಂಕ ಚೋಪ್ರಾ ಹುಟ್ಟು ಹಬ್ಬಕ್ಕೆ ಪತಿ ಕೊಟ್ಟ ಸರ್ಪ್ರೈಸ್ ಗಿಫ್ಟ್

    ಪ್ರಿಯಾಂಕ ಚೋಪ್ರಾ ಹುಟ್ಟು ಹಬ್ಬಕ್ಕೆ ಪತಿ ಕೊಟ್ಟ ಸರ್ಪ್ರೈಸ್ ಗಿಫ್ಟ್

    ಬಾಲಿವುಡ್‌ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾಗೆ (Priyanka Chopra) ಹುಟ್ಟುಹಬ್ಬದ (Birthday) ಸಂಭ್ರಮ. ಪತ್ನಿಯ ಹುಟ್ಟು ಹಬ್ಬಕ್ಕೆ ನಿಕ್ ಜೋನ್ಸ್ (Nick Jones) ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ಗೆ ನೆಟ್ಟಿಗರನ್ನ ಕಣ್ಣರಳಿಸಿ ನೋಡುವಂತೆ ಮಾಡಿದೆ. ಹೌದು, ತಮ್ಮ ಪತ್ನಿಯ 42ನೇ ಹುಟ್ಟುಹಬ್ಬಕ್ಕೆ ಕೊಟ್ಟ ಗಿಫ್ಟ್ ಏನು ಗೊತ್ತಾ..? ಮುಂದೆ ಓದಿ..

    ಪತ್ನಿ ಹುಟ್ಟುಹಬ್ಬ ಅಂದ್ರೆ ಸಾಕು ಒಂದು ವಾರಕ್ಕಿಂತಲೂ ಮುಂಚೆ ವಿವಿಧ ರೀತಿಯಲ್ಲಿ ಪ್ಲಾನ್ ಮಾಡುವ ಸಿನಿ ಜೋಡಿಗಳು ಅದಕ್ಕೆ ತಕ್ಕಂತೆ ಸರ್ಪ್ರೈಸ್  ಗಿಫ್ಟ್ಗಳನ್ನೂ ಸಹ ರೆಡಿ ಮಾಡಿಕೊಂಡಿರ್ತಾರೆ. ಅದೇ ಸಾಲಿನಲ್ಲಿ ನಟಿ ಪ್ರಿಯಾಂಕ ಚೋಪ್ರಾ ಹುಟ್ಟುಹಬ್ಬಕ್ಕೆ ನಿಕ್ ಜೋನ್ಸ್ ಇಲ್ಲಿಯವರೆಗೂ ಹಂಚಿಕೊಳ್ಳದ ರೋಮ್ಯಾಂಟಿಕ್ ಫೋಟೋಗಳನ್ನ ಹಂಚಿಕೊಂಡು ಪತ್ನಿಗೆ  ಸರ್ಪ್ರೈಸ್ ನೀಡಿದ್ದಾರೆ. ನಿನ್ನಂತವಳನ್ನ ಹೆಂಡತಿಯಾಗಿ ಪಡೆದ ನಾನು ಅದೃಷ್ಟವಂತ. ಹುಟ್ಟು ಹಬ್ಬದ ಶುಭಾಶಯಗಳು ಅಂತಾ ವಿಶ್ ಮಾಡಿದ್ದಾರೆ.

    ನಿಕ್ ಜೋನ್ಸ್ ಹಾಗೂ ಪ್ರಿಯಾಂಕ ಚೋಪ್ರಾ ಪ್ರೀತಿಸಿ, ೨೦೧೮ರಲ್ಲಿ ಮದುವೆಯಾದ ಜೋಡಿ. ತನಗಿಂತಲೂ ಹಿರಿಯಳಾದ ಪ್ರಿಯಾಂಕರನ್ನ ಕೈಹಿಡಿದ ನಿಕ್ ಸುಖಿ-ಸುಂದರ ಸಂಸಾರವನ್ನ ನಡೆಸುತ್ತಿದ್ದಾರೆ. ಸದ್ಯ ನಟಿ ಪ್ರಿಯಾಂಕ ಚೋಪ್ರಾ `ಬ್ಲಫ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿನ ವೇಳೆ ಮಗಳ ಜೊತೆ ಹಾಗೂ ಗಂಡ ನಿಕ್ ಜೊತೆ ಕಾಲ ಕಳೆಯುತ್ತಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರ್ತಾರೆ.

  • ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ಸ್ನೇಹಿತರಿಂದ ರಕ್ತದಾನ ಶಿಬಿರ

    ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ಸ್ನೇಹಿತರಿಂದ ರಕ್ತದಾನ ಶಿಬಿರ

    ಸಂಚಾರಿ ವಿಜಯ್‍ (Sanchari Vijay) ಅವರ ಹುಟ್ಟು ಹಬ್ಬಕ್ಕಾಗಿ (Birthday) ಅವರ ಗೆಳೆಯರ ಬಳಗ ಇಂದು ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ವಿಜಯ್ ಅವರ ಹುಟ್ಟು ಹಬ್ಬದ ದಿನದಂದು ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಆಪ್ತ ಸ್ನೇಹಿತ ಅನಿಲ್ ಗೌಡ.

    ಇಂದು ಬೆಂಗಳೂರಿನ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಐವತ್ತು ಹೆಚ್ಚು ವಿಜಯ್ ಗೆಳೆಯರು ರಕ್ತದಾನ ಮಾಡುವ ಮೂಲಕ ಗೆಳೆಯನನ್ನು ನೆನಪಿಸಿಕೊಂಡರು. ಹುಟ್ಟು ಹಬ್ಬದ ನೆಪದಲ್ಲಿ ಇದೇ ರೀತಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂಥ ಪ್ರತಿಜ್ಞೆ ಮಾಡಿದರು.  ಪೂರ್ಣ, ವಿವೇಕ್, ನಾರಾಯಣ್, ನಂದ, ರಾಜೇಶ್, ಸಾಗರ್, ಅನಿಲ್ ಸೇರಿದಂತೆ ಹಲವಾರು ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಈ ಕುರಿತು ಮಾತನಾಡಿದ  ಅನಿಲ್ ಗೌಡ, ‘ಗೆಳೆಯ ವಿಜಯ್ ಬದುಕಿದ್ದಾಗ ಒಟ್ಟಿಗೆ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೆವು. ಅವರೊಂದಿಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೆವು. ಈಗ ಅವರ ಕೆಲಸಗಳನ್ನು ಸಾಧ್ಯವಾದ ಮಟ್ಟಿಗೆ ನಾವೆಲ್ಲ ನೆಡಸಿಕೊಂಡು ಹೋಗುತ್ತಿದ್ದೇವೆ. ಅವರು ಕೂಡ ಅನೇಕ ಸಲ ರಕ್ತದಾನ ಮಾಡುವ ಮೂಲಕ ನಮಗೆಲ್ಲ ಮಾದರಿ ಆಗಿದ್ದರು’ ಅಂದರು.

     

    ರಂಗಭೂಮಿ ಹಿನ್ನೆಲೆಯ ವಿಜಯ್ ಕಿರುತೆರೆ, ಸಂಗೀತ ಮತ್ತು ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ನಟನೆಯ ಹರಿವು ಸೇರಿದಂತೆ ಹಲವಾರು ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅತೀ ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ವಿಜಯ್ ನಿಧನ ಹೊಂದಿದ್ದಾರೆ.

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಸಾಂಗ್ ಗಿಫ್ಟ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಸಾಂಗ್ ಗಿಫ್ಟ್

    ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ (, Kiran Raj) ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” (Rani) ಚಿತ್ರತಂಡ ಹಾಡೊಂದನ್ನು ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಪ್ರಮೋದ್ ಮರವಂತೆ ಅವರು ಬರೆದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿರುವ ‘ಹವಮಾನವೆ ಸುಂದರ ಸುಂದರ’ ಎಂಬ ಹಾಡು   ಟಿ-ಸೀರೀಸ್‍ನ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

    ಹುಟ್ಟುಹಬ್ಬ ಹಾಗು ಹಾಡು ಬಿಡುಗಡೆ  ಸಂದರ್ಭದಲ್ಲಿ ಮಾತನಾಡಿದ ಕಿರಣ್‍ ರಾಜ್‍, ‘ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, “ರಾನಿ” ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ‌. ಹೆವಿ ಬಜೆಟ್ ನ ಚಿತ್ರವಿದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದರು.

    ‘ಇದು ಆ್ಯಕ್ಷನ್‍ ಚಿತ್ರವಾದರೂ, ಪಕ್ಕಾ ಕೌಟುಂಬಿಕ ಚಿತ್ರ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು “ರಾನಿ” ಚಿತ್ರದಲ್ಲಿ ನೋಡಬಹುದು‌. ಆರು ಆಕ್ಷನ್ ಸನ್ನಿವೇಶಗಳಿದೆ. ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ. ಆರು ಫೈಟ್‍ಗಳಿಗೂ ವಿನೋದ್‍ ಮಾಸ್ಟರ್ ಅವರೆ ಸಾಹಸ ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೂ ಸದ್ದು ಮಾಡುತ್ತಿರುವ “ರಾನಿ” ಆಗಸ್ಟ್ 30ಕ್ಕೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದರು.

    ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಬಂದಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ. “ಹವಮಾನ” ಹಾಡು ಹುಟ್ಟಿದ ಬಗ್ಗೆ ಪ್ರಮೋದ್ ಮರವಂತೆ ಹೇಳಿದರು‌. ಸಂಗೀತದ ಕುರಿತು ಮಣಿಕಂತ್ ಕದ್ರಿ ವಿವರಿಸಿದರು. ನಟಿಯರಾದ ಸಮೀಕ್ಷಾ, ರಾಧ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸ್ಥಿರ ಛಾಯಾಗ್ರಾಹಕರಾಗಿದ್ದ ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ  ಛಾಯಾಗ್ರಾಹಕರಾಗಿದ್ದಾರೆ.

  • ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ಪುನೀತ್ ರಾಜಕುಮಾರ್‌ ನಿರ್ಮಾಣದ “ಕವಲುದಾರಿ” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ಹಾಗೂ “ಶೈತಾನ್” ವೆಬ್ ಸಿರೀಸ್ ಮೂಲಕ ತೆಲುಗಿನಲ್ಲೂ ಮನೆಮಾತಾಗಿರುವ ನಟ ರಿಷಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಈ ಸಂದರ್ಭದಲ್ಲಿ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಷಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ‌.

    ಈಗಾಗಲೇ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.  ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ(ತನಿಖಾಧಿಕಾರಿ)  ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಚಿತ್ರದ ಫಸ್ಟ್ ಲುಕ್ ಗೆ ರಿಷಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  “ಡಿಯರ್ ವಿಕ್ರಮ್” ಚಿತ್ರ ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಈ ಚಿತ್ರಕ್ಕಿದೆ.

    ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ,  ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರಿದ್ವಿ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ‌ಮಾಡುವ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿರುವ ನಿರ್ದೇಶಕರು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎನ್ನುತ್ತಾರೆ.

  • ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಬಾಲಕನ ಕಿಡ್ನಾಪ್ – ಆರೋಪಿ ಅರೆಸ್ಟ್

    ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಬಾಲಕನ ಕಿಡ್ನಾಪ್ – ಆರೋಪಿ ಅರೆಸ್ಟ್

    – ಪೋಷಕರಲ್ಲಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ

    ಬೆಂಗಳೂರು: ಬರ್ತ್‌ಡೇ ಪಾರ್ಟಿ (Birthday Party) ಇದೆ ಎಂದು ಆಸೆ ತೋರಿಸಿ ಬಾಲಕನೊಬ್ಬನನ್ನು ಕಿಡ್ನಾಪ್ (Boy Kidnap) ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ದೊಡ್ಡತೋಗೂರು ಬಳಿ ನಡೆದಿದೆ.

    ಸೋಮವಾರ ಸಂಜೆ 6 ಸುಮಾರಿಗೆ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಮಗನನ್ನು ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್ (24) ಕಿಡ್ನಾಪ್ ಮಾಡಿದ್ದ. ಮನೆ ಬಳಿಯಿದ್ದ ಬಾಲಕನಿಗೆ ಕೇಕ್ (Cake) ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಹಲವು ಕಡೆ ಆಟೋದಲ್ಲಿ ಸುತ್ತಾಟ ನಡೆಸಿದ್ದಲ್ಲದೇ ಬಳಿಕ ಪೋಷಕರಿಗೆ ಕರೆ ಮಾಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನೂ ಓದಿ: ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ: ಡಿಕೆಶಿ

    ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆರೋಪಿ ಓಡಾಟ ನಡೆಸಿದ್ದು, ಪದೇ ಪದೇ ಲೊಕೇಶನ್ ಬದಲಿಸುತ್ತಿದ್ದ. ಕೊನೆಗೆ ಇಂದು ಬೆಳಗ್ಗೆ ಬಾಲಕ ಸಹಿತ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊನೆಗೂ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಹಂತಕ ಬಾಲಕನಿಗೆ ಏನು ಮಾಡುತ್ತಾನೋ ಎನ್ನುವ ಆತಂಕದಿಂದ ಸೋಮವಾರ ಇಡೀ ರಾತ್ರಿ ನಿದ್ದೆ ಮಾಡದೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೊಬೈಲ್ ಲೊಕೇಶನ್ ಸೇರಿ ಹಲವು ದಾಖಲೆಗಳನ್ನು ಇನ್ಸ್‌ಪೆಕ್ಟರ್ ರಾತ್ರಿಯೇ ಕಲೆ ಹಾಕಿದ್ದರು. ಇನ್ಸ್ಪೆಕ್ಟರ್ ನವೀನ್, ಪಿಎಸ್‌ಐ ಸಿದ್ದಪ್ಪ ಸೇರಿ ಹಲವು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.‌ ಇದನ್ನೂ ಓದಿ: ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದ್ರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತೆ: ಎಎಪಿ

  • ಬರ್ತ್‍ಡೇ ಪಾರ್ಟಿಗೆ ಕರೆದು ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

    ಬರ್ತ್‍ಡೇ ಪಾರ್ಟಿಗೆ ಕರೆದು ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

    ಬೆಳಗಾವಿ: ಸ್ನೇಹಿತನನ್ನು ಬರ್ತ್‍ಡೇ (Birthday) ಪಾರ್ಟಿಗೆ ಕರೆದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ಹತ್ಯೆಗೀಡಾದ ಯುವಕನನ್ನು ಬಸವರಾಜ್ ಮುದ್ದಣ್ಣವರ (23) ಎಂದು ಗುರುತಿಸಲಾಗಿದೆ. ಬಸವರಾಜ್ ಎಂಎಸ್‍ಡಬ್ಲ್ಯೂ (MSW) ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆತನನ್ನು ಸ್ನೇಹಿತ ಮಲ್ಲಿಕಾರ್ಜುನ್ ಬರ್ತ್ ಡೇ ಪಾರ್ಟಿಗೆ ಕರೆದಿದ್ದ. ಬಳಿಕ ಆತ ಬರುತ್ತಿದ್ದಂತೆ ಗಲಾಟೆ ಆರಂಭಿಸಿ, ಐವರು ಸ್ನೇಹಿತರು ಸೇರಿ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!

    ತೀವ್ರವಾಗಿ ಗಾಯಗೊಂಡ ಬಸವರಾಜ್‍ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಮುರಗೋಡ ಪೊಲೀಸ್ (Muragod Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

  • ನಟ ರವಿಚಂದ್ರನ್ ಹುಟ್ಟುಹಬ್ಬ: ಕನಸುಗಾರನ ಹೊಸ ಕನಸೇನು?

    ನಟ ರವಿಚಂದ್ರನ್ ಹುಟ್ಟುಹಬ್ಬ: ಕನಸುಗಾರನ ಹೊಸ ಕನಸೇನು?

    ಕ್ರೇಜಿಸ್ಟಾರ್ ರವಿಚಂದ್ರನ್ ಇಂದು ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ರಾಜಾಜಿನಗರದ ತಮ್ಮ ನಿವಾಸದಲ್ಲಿ 63ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕನಸುಗಾರ, ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಸಾಕಷ್ಟು ಅಭಿಮಾನಿಗಳು ರಾಜಾಜಿನಗರದ ನಿವಾಸಕ್ಕೆ ಆಗಮಿಸಿದ್ದರು.

    ಕನಸುಗಾರ ಇದೀಗ ಮತ್ತೊಂದು ಪ್ರೇಮಲೋಕ ಹಾಡಲು ಸಜ್ಜಾಗಿರುವ ವಿಷಯ ಗೊತ್ತೇ ಇದೆ. ಮೊದಲ ಪ್ರೇಮಲೋಕಕ್ಕೆ ರವಿಮಾಮ ಬಾಲಿವುಡ್‌ನಿಂದ ಜೂಹಿ ಚಾವ್ಲಾ ಅವರನ್ನು ಕರೆತಂದಿದ್ದರು. ಪ್ರೇಮಲೋಕ 2 ಚಿತ್ರಕ್ಕೆ ತಮಿಳು ನಟಿಗೆ ಬಲೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳು ನಟ ತೇಜು ಅಶ್ವಿನಿ (Teju Ashwini) ಈ ಸಿನಿಮಾದ ನಾಯಕಿ ಎನ್ನುವುದು ಸದ್ಯಕ್ಕಿರುವ ವರ್ತಮಾನ. ಈ ನಡುವೆ ಪ್ರೇಮಲೋಕ 2 ಸಿನಿಮಾ ಕುರಿತಂತೆ ಅನೇಕ ವಿಶೇಷಗಳು ಆಚೆ ಬರುತ್ತಿವೆ. ಅದರಲ್ಲಿ ರವಿಮಾಮ ಮಕ್ಕಳ ಸುದ್ದಿಯೂ ಸೇರಿಕೊಂಡಿದೆ. ಈ ಸಿನಿಮಾದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಪಾತ್ರ ಕೊಟ್ಟಿದ್ದಾರೆ. ಆ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಸುತ್ತಿದ್ದಾರೆ.

    ಪ್ರೇಮಲೋಕ 2 ಚಿತ್ರಕ್ಕಾಗಿ ಡಾನ್ಸ್ ಮತ್ತು ಮೈ ಹುರಿಗೊಳಿಸಿಕೊಳ್ಳುತ್ತಿರುವೆ. ಅಪ್ಪನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರೇಮಲೋಕ ಸಿನಿಮಾದ ಹೆಸರೇ ದೊಡ್ಡದು. ಹಾಗಾಗಿ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ ಎನ್ನುತ್ತಾರೆ (Manoranjan) ಮನೋರಂಜನ್.

    ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2  ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ (Premaloka 2) ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿಸ್ಟಾರ್ ತಿಳಿಸಿದ್ದಾರೆ.

     

    ‘ಪ್ರೇಮಲೋಕ 2’ ಸಿನಿಮಾದಲ್ಲಿ ಬರೀ 20-25 ಹಾಡುಗಳು ಇರುತ್ತದೆ ಅಷ್ಟೇ. ಆದರೆ ಜೀವನಪೂರ್ತಿ ಇಡೀ ಸಿನಿಮಾ ಚಿಕ್ಕವರಿಂದಿಡಿದು ದೊಡ್ಡವರ ತನಕ ಎಲ್ಲರಿಗೂ ಕಾಡುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಇದೆ, ಜಾತಿ ಇಲ್ಲ. ಭೇದ-ಭಾವ ಇಲ್ಲ, ಹಣದ ಕುರಿತು ಇಲ್ಲ. ಇದೇ ಬೇರೆ ಥರದ ಕಥೆ ಇರುವ ಸಿನಿಮಾ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.

  • ಅಂಬರೀಶ್ ಜನ್ಮದಿನ; ಪೂಜೆ ಸಲ್ಲಿಸಿದ ಕುಟುಂಬ, ಫ್ಯಾನ್ಸ್

    ಅಂಬರೀಶ್ ಜನ್ಮದಿನ; ಪೂಜೆ ಸಲ್ಲಿಸಿದ ಕುಟುಂಬ, ಫ್ಯಾನ್ಸ್

    ಹೆಸರಾಂತ ಹಿರಿಯ ನಟ ಅಂಬರೀಶ್ (Ambarish) ಅವರ ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ಮತ್ತು ಅವರ ಕುಟುಂಬ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

    ಬೆಳಗ್ಗೆ ಅಂಬರೀಶ್ ಸಮಾಧಿ ಬಳಿ ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಸಂಖ್ಯಾತ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸಿದರು.

     

    ಅಂಬರೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಮಂಡ್ಯದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  • ಹಮಾಸ್‌ ಥೀಮ್‌ ಕೇಕ್‌ನಲ್ಲಿ 4ರ ಬಾಲಕನ ಬರ್ತ್‌ ಡೇ ಸೆಲೆಬ್ರೇಶನ್‌- ಭಾರೀ ಆಕ್ರೋಶ

    ಹಮಾಸ್‌ ಥೀಮ್‌ ಕೇಕ್‌ನಲ್ಲಿ 4ರ ಬಾಲಕನ ಬರ್ತ್‌ ಡೇ ಸೆಲೆಬ್ರೇಶನ್‌- ಭಾರೀ ಆಕ್ರೋಶ

    ಕ್ಯಾನ್‌ಬೆರಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹಮಾಸ್‌ (Hamas) ಉಗ್ರರ ಥೀಮ್‌ ನಲ್ಲಿ ಹುಟ್ಟುಹಬ್ಬ (Boy Birthday) ಆಚರಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಆಸ್ಟ್ರೇಲಿಯಾದಲ್ಲಿ 4 ವರ್ಷದ ಮಗುವಿನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಕೇಕ್‌ ಮಾಡಲಾಗಿತ್ತು. ಅದರಲ್ಲಿ ಪ್ಯಾಲೆಸ್ತೀನ್ ಧ್ವಜಗಳಿಂದ ಸುತ್ತುವರಿದಿರುವ ಉಗ್ರಗಾಮಿಗಳನ್ನು ಬಿಂಬಿಸಲಾಗಿತ್ತು. ಇತ್ತ ಕೇಕ್ ತಯಾರಿಸುವ ಜವಾಬ್ದಾರಿಯುತ ಆಸ್ಟ್ರೇಲಿಯನ್ ಬೇಕರಿ ಅದರ ಫೋಟೋಗಳನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಬಳಿಕ ಈ ಫೋಟೋಗಳು ಭಾರೀ ವೈರಲ್‌ ಆದವು. ಪರಿಣಾಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

    ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆಗಿಳಿದಿದ್ದಾರೆ. ವರದಿಗಳ ಪ್ರಕಾರ, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಲಾಗಿದೆ.

    ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫುಫು ಅವರ ಓವನ್ ಬೇಕರಿ ಮಂಗಳವಾರ ಪ್ಯಾಲೇಸ್ಟಿನಿಯನ್ ಧ್ವಜದಿಂದ ಅಲಂಕರಿಸಲ್ಪಟ್ಟ ದೊಡ್ಡ ಕೇಕ್ ಪಕ್ಕದಲ್ಲಿ ಬಾಲಕ ನಿಂತಿರುವ ಹಾಗೂ ಹಮಾಸ್‌ನ ವಕ್ತಾರ ಅಬು ಒಬೈದಾ ಅವರ ಬೆರಳನ್ನು ಮೇಲಕ್ಕೆತ್ತಿದ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇತ್ತ ಬರ್ತ್‌ ಡೇ ಬಾಯ್‌ ಕೂಡ ತಲೆಗೆ ಸ್ಕಾರ್ಫ್ ಮತ್ತು ಕೇಕ್ ಮೇಲಿನ ಆಕೃತಿಯನ್ನು ಹೋಲುವ ಉಡುಪನ್ನು ಧರಿಸಿ ಫೋಟೋಗೆ ಪೋಸ್‌ ಕೊಟ್ಟಿದ್ದಾನೆ.

    ಫೋಟೋ ಸೋಶಿಯಲ್‌ ಮೀಡಿಯಾಗೆ ಅಪ್ಲೋಡ್‌ ಮಾಡುತ್ತಿದ್ದಂತೆಯೇ ಮೊದ ಮೊದಲು ಕೇಕ್‌ ಬಗ್ಗೆ ಪಾಸಿಟಿವ್‌ ಕಾಮೆಂಟ್‌ಗಳು ಬರತೊಡಗಿದರೆ ಆ ನಂತರ ಭಾರೀ ಟೀಕೆ ವ್ಯಕ್ತವಾಯಿತು. ಮಗುವನ್ನು ಭಯೋತ್ಪಾದಕನಂತೆ ಬಿಂಬಿಸುವುದು ಖಂಡನೀಯ ಎಂಬ ಆಕ್ರೋಶ ಹೊರಬಂದ ಬೆನ್ನಲ್ಲೇ ಫೋಟೋ ಅಪ್ಲೋಡ್‌ ಮಾಡಿದವರು ತಮ್ಮ Instagram ಮತ್ತು Facebook ಖಾತೆಗಳನ್ನೇ ಬ್ಲಾಕ್‌ ಮಾಡಿದ್ದಾರೆ.

    ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಪ್ರಧಾನಿ ಕ್ರಿಸ್ ಮಿನ್ಸ್ ಅವರು ಕೇಕ್ ಫೋಟೋಗಳನ್ನು ನೋಡಿ ಭಯಾನಕ ಬೆಳವಣಿಗೆ ಎಂದರು. ಹಮಾಸ್ ಒಂದು ದುಷ್ಟ ಭಯೋತ್ಪಾದಕ ಸಂಘಟನೆಯಾಗಿದೆ. ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಮುಗ್ಧ ಮತ್ತು ವಿನೋದಮಯವಾಗಿರಬೇಕು. ಈ ರೀತಿ ದ್ವೇಷಪೂರಿತವಾಗಿರಬಾರದು ಎಂದು ಕಿಡಿಕಾರಿದರು.

    ಹಮಾಸ್ ನೇತೃತ್ವದ ಉಗ್ರರು ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ 1,200 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಗಾಜಾದಲ್ಲಿ ಸುಮಾರು ಎಂಟು ತಿಂಗಳ ಸುದೀರ್ಘ ಯುದ್ಧವನ್ನು ಪ್ರಚೋದಿಸಿದರು. ಸುಮಾರು 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು.