Tag: Birthday gift

  • ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ಗಲಾಟೆ; ಪತ್ನಿ, ಅತ್ತೆ ಕೊಂದ ವ್ಯಕ್ತಿ

    ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ಗಲಾಟೆ; ಪತ್ನಿ, ಅತ್ತೆ ಕೊಂದ ವ್ಯಕ್ತಿ

    ನವದೆಹಲಿ: ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ.

    ಕುಸುಮ್ ಸಿನ್ಹಾ (63) ಮತ್ತು ಅವರ ಮಗಳು ಪ್ರಿಯಾ ಸೆಹಗಲ್ (34) ಹತ್ಯೆಯಾದವರು. ಕುಸುಮ್ ಅವರ ಮಗ ಮೇಘ ಸಿನ್ಹಾ (30) ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

    ಆ.28 ರಂದು ಮೊಮ್ಮಗ ಚಿರಾಗ್‌ನ ಹುಟ್ಟುಹಬ್ಬವನ್ನು ಆಚರಿಸಲು ಮಗಳು ಪ್ರಿಯಾ ಮನೆಗೆ ಕುಸುಮ್ ಬಂದಿದ್ದಾರೆ. ಸಮಾರಂಭದ ಸಮಯದಲ್ಲಿ ಉಡುಗೊರೆಗಳ ವಿಷಯದಲ್ಲಿ ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕುಸುಮ್‌ ಅಲ್ಲೇ ಉಳಿದಿದ್ದರು.

    ಆ.30 ರಂದು ಮೇಘ ತನ್ನ ತಾಯಿ ಕುಸುಮ್‌ಗೆ ಕರೆ ಮಾಡಿದ್ದಾರೆ. ಆದರೆ, ತಾಯಿ ಕರೆ ಸ್ವೀಕರಿಸಿಲ್ಲ. ಆಗ ಪ್ರಿಯಾಳ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಯಾರೂ ಇರಲಿಲ್ಲ. ಬಾಗಿಲಿನ ಬಳಿ ರಕ್ತದ ಕಲೆ ಇರುವುದನ್ನು ಕಂಡಿದ್ದಾನೆ. ನಂತರ ಬೀಗ ಒಡೆದಾಗ, ಕೋಣೆಯೊಳಗೆ ತನ್ನ ತಾಯಿ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಪ್ರಿಯಾಳ ಪತಿ ಯೋಗೇಶ್ ಸೆಹಗಲ್, ನನ್ನ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಕೊಂದು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮೇಘ ಆರೋಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಯೋಗೇಶ್‌ನನ್ನು ಕೆಎನ್‌‌ ಕೆ ಮಾರ್ಗ್ ಪೊಲೀಸರು ಬಂಧಿಸಿದ್ದು, ಆತನ ರಕ್ತದ ಕಲೆಗಳಿರುವ ಬಟ್ಟೆಗಳು ಮತ್ತು ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಕತ್ತರಿಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕೌಟುಂಬಿಕ ಕಲಹಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

  • ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ಸಾಮಾನ್ಯವಾಗಿ ಹುಡುಗರಿಗೆ ತಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇ ವೇಳೆ ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಆದರೆ ಪ್ರತಿಯೋರ್ವ ಮಹಿಳೆಯರಿಗೆ ಆಭರಣಕ್ಕಿಂತ ಪ್ರಿಯವಾದದ್ದು ಮತ್ತೊಂದಿಲ್ಲ. ಚಿಕ್ಕ ಆಭರಣಗಳು ಸಹ ಮಹಿಳೆಯರಿಗೆ ಸಖತ್ ಖುಷಿ ನೀಡುತ್ತದೆ. ನೀವು ನಿಮ್ಮ ಗರ್ಲ್‍ಫ್ರೆಂಡ್‍ಗೆ ವಿಶೇಷವಾದ ಉಡುಗೊರೆ ನೀಡಲು ಬಯಸುತ್ತಿದ್ದರೆ, ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸಿಗುವ ಪುಟ್ಟ-ಪುಟ್ಟ ಆಭರಣಗಳನ್ನು ಗಿಫ್ಟ್ ಆಗಿ ನೀಡಬಹುದು.

    ಇಯರಿಂಗ್ಸ್ ಸೆಟ್
    ಈ ಇಯರಿಂಗ್ ಸೆಟ್‍ನಲ್ಲಿ 6 ರೀತಿಯ ಸುಂದರವಾದ ಇಯರಿಂಗ್ಸ್‍ಗಳಿದ್ದು, ಇದನ್ನು ನಿಮ್ಮ ಗೆಳತಿ ದಿನನಿತ್ಯ ಬಳಸಬಹುದಾಗಿದೆ. ಅಲ್ಲದೇ ಡೈಮಂಡ್ ಸ್ಟಡ್‍ಗಳು ಮತ್ತು ಪರ್ಲ್ ಸ್ಟಡ್, ರೌಂಡ್ ಶೇಪ್ ಇಯರಿಂಗ್ ಸೇರಿದಂತೆ ಹಲವಾರು ಆಕಾರಗಳಲ್ಲಿ ಇಯರಿಂಗ್ಸ್‍ಗಳಿದ್ದು, ಇವುಗಳನ್ನು ನಿಮ್ಮ ಗೆಳತಿ ಆಫೀಸ್ ವೇರ್ ಮತ್ತು ಡೇಟ್ ನೈಟ್‍ಗೆ ತೆರಳುವ ವೇಳೆ ಕೂಡ ಧರಿಸಬಹುದಾಗಿದೆ.

    Jewelry

    ಟ್ರೆಡಿಷನಲ್ ಇಯರಿಂಗ್
    ಮಹಿಳೆಯರ ಇಯರ್ ಕಲೆಕ್ಷನ್‍ನಲ್ಲಿ ಟ್ರೆಡಿಷನಲ್ ಇಯರ್ ಕೂಡ ಒಂದು. ಮದುವೆ ಸಮಾರಂಭಗಳಲ್ಲಂತೂ ಮಹಿಳೆಯರಿಗೆ ಟ್ರೆಡಿಷನಲ್ ಇಯರಿಂಗ್ಸ್ ಬಹಳ ಮುಖ್ಯ. ಸದ್ಯ ಕೆಳಗೆ ನೀಡಲಾಗಿರುವ ಈ ಚಿನ್ನದ ಇಯರಿಂಗ್ ಸೀರೆ ಹಾಗೂ ಲೆಹೆಂಗಾದ ಜೊತೆ ಧರಿಸುವುದರಿಂದ ಇದು ನಿಮ್ಮ ಗೆಳತಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    Jewelry

    ಜ್ಯುವೆಲರಿ ಕೊಂಬೋ
    ಈ ಜ್ಯುವೆಲರಿ ಕೊಂಬೋದಲ್ಲಿ ಇಯರಿಂಗ್, ಮ್ಯಾಚಿಂಗ್ ನೆಕ್ಲೇಸ್ ಮತ್ತು ಬ್ರೇಸ್ಲೆಟ್‍ಗಳನ್ನು ನೀಡಲಾಗಿರುತ್ತದೆ. ಈ ಸೆಟ್ ಶೈನಿಂಗ್ ನೀಡುವುದರ ಜೊತೆಗೆ ನಿಮ್ಮ ಗೆಳತಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಇದನ್ನು ಕೋಬಾಲ್ಟ್ ನೀಲಿ ಕಲ್ಲು ಮತ್ತು ಸಣ್ಣ ವಜ್ರಗಳಿಂದ ತಯಾರಿಸಲಾಗಿದೆ. ಈ ಜ್ಯುವೆಲರಿ ಸೆಟ್ ಟ್ರೆಡಿಷನ್ ಮತ್ತು ವೆಸ್ಟ್ರನ್ ಡ್ರೆಸ್ ಎರಡಕ್ಕೂ ಸೂಟ್ ಆಗುತ್ತದೆ.

    Jewelry

    ಸಾಲಿಟೇರ್ ರಿಂಗ್
    ಏಕ ವಜ್ರದ ಉಂಗುರವನ್ನು ಸಾಲಿಟೇರ್ ರಿಂಗ್ ಎಂದು ಕರೆಯಲಾಗುತ್ತದೆ. ಇದು ನಿಶ್ಚಿತಾರ್ಥದ ರಿಂಗ್ ಎಂದೇ ಫೇಮಸ್ ಆಗಿದೆ. ಇದರಲ್ಲಿ ಸಾಕಷ್ಟು ಬೆಸ್ಟ್ ಡಿಸೈನ್‍ಗಳಿದೆ. ನಿಮ್ಮ ಗರ್ಲ್ ಫ್ರೆಂಡ್ ಅಥವಾ ಪತ್ನಿ ವಜ್ರದ ಉಂಗುರಗಳಲ್ಲಿ ಕ್ಲಾಸಿಕ್ ಅಥವಾ ದೊಡ್ಡ ಸಾಲಿಟೇರ್ ಡೈಮಂಡ್ ರಿಂಗ್‍ಗಳನ್ನು ಇಷ್ಟಪಟ್ಟರೆ ಈ ಉಂಗುರಗಳನ್ನು ಗಿಫ್ಟ್ ಆಗಿ ನೀಡಬಹುದಾಗಿದೆ.

    Jewelry

  • ಬೆಂಗ್ಳೂರು ನಗರ ಆಯುಕ್ತರಿಂದ ಪೊಲೀಸರಿಗೆ ಹುಟ್ಟು ಹಬ್ಬದ ಗಿಫ್ಟ್

    ಬೆಂಗ್ಳೂರು ನಗರ ಆಯುಕ್ತರಿಂದ ಪೊಲೀಸರಿಗೆ ಹುಟ್ಟು ಹಬ್ಬದ ಗಿಫ್ಟ್

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಿಬ್ಬಂದಿಯ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ್ದಾರೆ.

    ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟು ಹಬ್ಬಕ್ಕೆ ರಜೆ ನೀಡಬೇಕು. ಜೊತೆಗೆ ಅವರಿಗೆ ಗ್ರೀಟಿಂಗ್ ಕಳಿಸುವಂತೆ ವಿಶೇಷ ಆದೇಶವೊಂದನ್ನು ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟು ಹಬ್ಬದ ದಿನದಂದು ಯಾವುದೇ ಕೆಲಸದ ಒತ್ತಡವಿದ್ದರೂ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

    ಆದೇಶದ ಪತ್ರದಲ್ಲಿ ಏನಿದೆ?:
    ಹುಟ್ಟು ಹಬ್ಬದ ಗ್ರೀಟಿಂಗ್ ಕಾರ್ಡ್ ಗಳನ್ನು ಆಯಾ ಠಾಣೆಯ ಹಿರಿಯ/ಮೇಲುಸ್ತುವಾರಿ ಅಧಿಕಾರಿಗಳು ಖುದ್ದಾಗಿ ಠಾಣಾ/ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ನಗರ ಪೊಲೀಸ್ ಘಟಕದ ಎಲ್ಲಾ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರ ಬರಲು ಹಾಗೂ ಅವರ ಹುಟ್ಟು ಹಬ್ಬದ ದಿನದಂದು ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ರಜೆ ಕೊಡಬೇಕು. ಎಎಸ್‍ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿ ರಜೆಯೊಂದನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡುವಂತೆ ಸೂಚಿಸಲಾಗಿದೆ.