Tag: Birthday Banner

  • ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಅಮರಾವತಿ: ತಮಿಳು ಚಿತ್ರರಂಗದ ನಟ ಸೂರ್ಯ (Actor Surya) ಅವರ ಹುಟ್ಟುಹಬ್ಬದ ಬ್ಯಾನರ್‌ ಕಟ್ಟುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೋಪುಲವಾರಿಪಾಲೆಂ ಗ್ರಾಮದಲ್ಲಿ ನರಸರಾವ್‌ ಪೇಟೆ ಮಂಡಲದ ನಕ್ಕಾ ವೆಂಕಟೇಶ್‌ ಮತ್ತು ಪೋಲೂರಿ ಸಾಯಿ ಹೆಸರಿನ ಅಭಿಮಾನಿಗಳಿಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು (Andhra Police) ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆಯಿಂದ 5,000 ರೂ. ಪಡೆದು ರಶೀದಿ ಕೊಡದೇ ಯಾಮಾರಿಸಿದ್ದ ಟ್ರಾಫಿಕ್‌ ಪೊಲೀಸ್‌ ಅಮಾನತು

    ಪೊಲೀಸರ ಪ್ರಕಾರ, ಬ್ಯಾನರ್‌ ಕಟ್ಟುತ್ತಿದ್ದ ಇಬ್ಬರೂ ನಟ ಸೂರ್ಯ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬಕ್ಕೆ ಬ್ಯಾನರ್‌ ಕಟ್ಟುತ್ತಿದ್ದರು. ಈ ವೇಳೆ ಫ್ಲೆಕ್ಸ್‌ನ ಕಬ್ಬಿಣದ ರಾಡ್‌ ಓವರ್ಹೆಡ್‌ ವಿದ್ಯುತ್‌ ತಂತಿಗೆ ತಗುಲಿ ದುರಂತ ಸಂಭವಿಸಿದೆ. ಇಬ್ಬರು ಯುವಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ನರಸರಾವ್‌ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತದೇಹಗಳನ್ನ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ಈ ನಡುವೆ ಮೃತ ಪೋಲೂರಿ ಸಾಯಿ ಅವರ ಸಹೋದರಿ ಅನನ್ಯಾ ತನ್ನ ಅಣ್ಣನ ಸಾವಿಗೆ ತಾನೇ ಕಾರಣ ಎಂಬುದಾಗಿ ಮರುಕ ವ್ಯಕ್ತಪಡಿಸಿದ್ದಾಳೆ. ಕಾಲೇಜಿಗೆ ಸಾಕಷ್ಟು ಶುಲ್ಕ ಕಟ್ಟುತ್ತಿದ್ದೇವೆ. ಕಾಲೇಜಿಗೆ ಸೇರುವ ಮುನ್ನವೇ ವಿದ್ಯಾರ್ಥಿಗಳಿಗೆ ಭದ್ರತೆ, ನಿಗಾ ಇಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಕಾಲೇಜು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ರಕ್ಷಣೆ, ನಿಗಾ ಇಡುತ್ತಿಲ್ಲ. ನಾವು ದಿನಗೂಲಿ ನೌಕರರು, ಕಾಲೇಜು ಶುಲ್ಕ ಕಟ್ಟಲು ಅಣ್ಣ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ. ನನಗಾಗಿ ಶುಲ್ಕ ಕಟ್ಟಲು ಕೆಲಸ ಮಾಡುತ್ತಿದ್ದ ವೇಳೆ ನನ್ನ ಅಣ್ಣ ಸಾವನ್ನಪ್ಪಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರ

    ಬಿಜೆಪಿಯ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರ

    – ಮತ್ತೆ ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವರು?

    ಹಾಸನ: ಹಾಸನ ಲೋಕಸಭಾ ಚುನಾವಣೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾವಚಿತ್ರ ಹಾಕಿ ಶುಭಕೋರಲಾಗಿದೆ.

    ನವೆಂಬರ್ 1ರಂದು ಎ.ಮಂಜು ಹುಟ್ಟುಹಬ್ಬ. ಹೀಗಾಗಿ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಅಭಿಮಾನಿಗಳು ಕರ್ನಾಟಕ ರಾಜ್ಯೋತ್ಸವ ಹಾಗೂ ಎ.ಮಂಜು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಮಾಡಿಸಿ ಗ್ರಾಮದಲ್ಲಿ ಹಾಕಿದ್ದಾರೆ. ಈ ಬ್ಯಾನರ್ ಭಾರೀ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‍ನಿಂದ ಹೊರ ಬಂದಿದ್ದ ಎ.ಮಂಜು, ಹಾಸನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಈಗ ಅವರ ಹುಟ್ಟು ಹಬ್ಬದ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎ.ಮಂಜು ಮಂತ್ರಿಯಾಗಿದ್ದರು. ಜೊತೆಗೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಎ.ಮಂಜು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಲೋಕಸಭಾ ಚುನಾವಣಾ ಸ್ಪರ್ಧೆ ಎದುರಿಸಿ, ಸೋತಿದ್ದರು.

    ಎ.ಮಂಜು ಬಿಜೆಪಿಯಿಂದ ಹೊರ ಬಂದು ಮತ್ತೆ ಕಾಂಗ್ರೆಸ್ ಮನೆ ಸೇರುತ್ತಾರಾ? ಹಾಸನ ಜಿಲ್ಲೆಯಲ್ಲಿ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.