Tag: birth rate

  • 75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    ನವದೆಹಲಿ: ಮುಂಬರುವ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಲ್ಲದೇ 75ನೇ ವಯಸ್ಸಿನಲ್ಲೇ ನಿವೃತ್ತಿ ಆಗಲಿದ್ದಾರೆ ಅನ್ನೋ ಚರ್ಚೆ ಹುಟ್ಟುಹಾಕಿತ್ತು. ಇದೀಗ ಎಲ್ಲ ಊಹಾಪೋಹಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ.

    ಸ್ವತಃ ಭಾಗವತ್ ಅವರು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಯವರಿಗಿಂತ ಆರು ದಿನ ಮುಂಚಿತವಾಗಿ 75ನೇ ವಯಸ್ಸಿಗೆ ಕಾಲಿಡುತ್ತಿರುವುದು ಇಲ್ಲಿ ಗಮನಾರ್ಹ.

    ಆರ್‌ಎಸ್‌ಎಸ್‌ 100ನೇ ವರ್ಷದ‌ ಹಿನ್ನೆಲೆ ನಡೆಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಗವತ್‌ ಅವರು, 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ, ಎಂದು ಸ್ಪಷ್ಟಪಡಿಸಿದರು.

    ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಾನು 80 ವರ್ಷವಾದರೂ ಸಂಘವನ್ನು ಮುನ್ನಡೆಸುತ್ತೇನೆ ಎಂದು ಸಹ ತಿಳಿಸಿದರು. ಇದನ್ನೂ ಓದಿ: ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

  • ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    – ಸರಿಯಾದ ವಯಸ್ಸಿನಲ್ಲಿ ಮದ್ವೆಯಾದ್ರೆ ಪೋಷಕರು, ಮಕ್ಕಳು ಆರೋಗ್ಯವಾಗಿರ್ತಾರೆ
    – ಹಿಂದೂಗಳು ಎಲ್ಲವನ್ನೂ ಕಿತ್ತುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ; ಕಳವಳ

    ನವದೆಹಲಿ: ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ (Mohan Bhagwat) ಹೇಳಿದರು.

    ಆರ್‌ಎಸ್‌ಎಸ್‌ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು. ಮೂರಕ್ಕಿಂತ ಕಡಿಮೆ ಜನನದರ (Birth Rate) ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗಣೇಶ ಹಬ್ಬದ ಬಂಪರ್‌ ಗಿಫ್ಟ್‌ – ಪಿಎಂ ಸ್ವನಿಧಿ ಯೋಜನೆ 5 ವರ್ಷ ವಿಸ್ತರಣೆ

    ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗೋದ್ರಿಂದ (Marriage) ಮೂವರು ಮಕ್ಕಳನ್ನು ಹೊಂದಬಹುದು. ಜೊತೆಗೆ ಪೋಷಕರು ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿರ್ತಾರೆ ಅಂತ ವೈದ್ಯರೇ ಹೇಳಿದ್ದಾರೆ. ಮೂವರು ಒಡಹುಟ್ಟಿದವರು ಇರುವ ಮನೆಗಳಲ್ಲಿ ಅಹಂಕಾರ ನಿಯಂತ್ರಿಸೋದನ್ನ ಕಲಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆ ಇರೋದಿಲ್ಲ. ಇದಕ್ಕೂ ಕೂಡ ವೈದ್ಯರೇ ಹೇಳಿರುವುದಾಗಿ ತಿಳಿಸಿದರು.

    ಪ್ರಸ್ತುತ ದೇಶದ ಜನಸಂಖ್ಯೆಯು 2.1 ಜನನ ದರವನ್ನ ಶಿಫಾರಸು ಮಾಡುತ್ತೆ. ಇದು ಉತ್ತಮ ನೀತಿಯಾಗಿದೆ. ಯಾರೊಬ್ಬರು ಒಂದು ಮಗು ಹೊಂದಲು ಸಾಧ್ಯವಿಲ್ಲ. ಗಣಿತದಲ್ಲಿ 2.1 2 ಆಗುತ್ತದೆ. ಆದ್ದರಿಂದ ಮೂರು ಮಕ್ಕಳ ನೀತಿ ಉತ್ತಮ ಎಂದು ಮೋಹನ್‌ ಭಾಗವತ್‌ ಹೇಳಿದರು. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಜನಸಂಖ್ಯೆ ಮೇಲೆ ಮತಾಂತರದ ಪರಿಣಾಮವೇ?
    ಇನ್ನೂ ಜನಸಂಖ್ಯಾ ಮಾದರಿಗಳ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳನ್ನು ಮೋಹನ್‌ ಭಾಗವತ್‌ ಗುರುತಿಸಿದ್ದು, ಮತಾಂತವೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮತಾಂತರವು ಜನಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಕಾಥೊಲಿಕರು, ಉಲೇಮಾಗಳು ನಾವು ಮತಾಂತರದಲ್ಲಿ ತೊಡಗುವುದಿಲ್ಲ ಎನ್ನುತ್ತಾರೆ ಎಂದು ವಿವರಿಸಿದರು.

    ಹಿಂದೂ – ಮುಸ್ಲಿಂ ಒಂದೇ
    ಇದೇ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಮುಸ್ಲಿಮರು ಮೂಲಭೂತವಾಗಿ ಒಬ್ಬರು, ನಮ್ಮ ನಡುವೆ ಏಕತೆಯಿದೆ. ಆದ್ರೆ ಒಂದು ಭಯವನ್ನು ಸೃಷ್ಟಿಸಲಾಗಿದೆ. ಹಿಂದೂಗಳು ಎಲ್ಲವನ್ನೂ ತೆಗೆದುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ನಮ್ಮ ಗುರುತು ಏಕೀಕೃತವಾಗಿದೆ. ಸಾಂಸ್ಕೃತಿಕವಾಗಿ, ನಾವು ಹಿಂದೂಗಳು ಎಂದು ಬಣ್ಣಿಸಿದರು. ಇದನ್ನೂ ಓದಿ: ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ಮುಂದುವರಿದು.. ಅನೇಕ ಹಿಂದೂಗಳು ತಾವು ದುರ್ಬಲರೆಂದು ಭಾವಿಸಿ ಅಸುರಕ್ಷಿತವಾಗಿದ್ದೇವೆ. ಅವರಿಗೊಂದು ಸಲಹೆ ನೀಡುತ್ತೇನೆ. ಇತರರೊಂದಿಗೆ ಸಹಬಾಳ್ವೆ ನಡೆಸುವುದರಿಂದ ಸ್ವಂತ ನಂಬಿಕೆಗೆ ಹಾನಿಯಾಗಲ್ಲ. ಈ ವಿಶ್ವಾಸ ಬೇರೂರಿದರೆ, ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್‌

  • ಚೀನಾದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲವ್‌ ಮಾಡಲು ಒಂದು ವಾರ ರಜೆ

    ಚೀನಾದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲವ್‌ ಮಾಡಲು ಒಂದು ವಾರ ರಜೆ

    ಬೀಜಿಂಗ್: ಚೀನಾದಲ್ಲಿ (China) ಯುವಜನರ ಸಂಖ್ಯೆ ಕಡಿಮೆಗೊಳ್ಳುತ್ತಿದ್ದು, ಇದನ್ನು ಹೋಗಲಾಡಿಸಲು ಅಲ್ಲಿ ಕಾಲೇಜುಗಳಲ್ಲಿ (College) ವಿದ್ಯಾರ್ಥಿಗಳಿಗೆ (Students) ಪ್ರೀತಿ (Love) ಮಾಡಲೆಂದೇ ಒಂದು ವಾರಗಳ ಕಾಲ ರಜೆಯನ್ನು ನೀಡಲಾಗಿದೆ.

    ಈಗಾಗಲೇ ಚೀನಾದಲ್ಲಿ ಜನಸಂಖ್ಯೆಯು ಕಡಿಮೆಗೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ಆರ್ಥಿಕತೆಯ ಮೇಲೆ ಪ್ರಭಾವವನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಜನನ ಪ್ರಮಾಣವನ್ನು (Birth Rate) ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ರೀತಿಯ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಇದೀಗ ಚೀನಾದ 9 ಕಾಲೇಜಿಗಳಲ್ಲಿ ಏಪ್ರಿಲ್‍ನಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲು ಒಂದು ವಾರಗಳ ಕಾಲ ರಜೆ ನೀಡುವ ಯೋಜನೆಯನ್ನು ತಂದಿದೆ.

    ವರದಿಗಳ ಪ್ರಕಾರ ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ 9 ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜ್, ಮಾ. 21 ರಂದು ಈ ರೀತಿಯ ರಜೆಯನ್ನು ಘೋಷಿಸಿತ್ತು. ಅದಾದ ಬಳಿಕ ಏ.1 ರಿಂದ 7 ರವರೆಗೆ ವಿದ್ಯಾರ್ಥಿಗಳಿಗೆ ಪ್ರೀತಿಸಲು ಹಾಗೂ ಪ್ರೀತಿಯನ್ನು ಆನಂದಿಸಲು ಅದರ ಜೊತೆ ಜೊತೆಗೆ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸುವುದನ್ನು ಕಲಿಯಲು ಪ್ರೋತ್ಸಾಹಿಸುತ್ತಿದೆ.

    ಈ ಬಗ್ಗೆ ಅಲ್ಲಿನ ಪ್ರಾಂಶುಪಾಲರು ಮಾತನಾಡಿ, ಇದರಿಂದಾಗಿ ವಿದ್ಯಾರ್ಥಿಗಳು ಹಸಿರಾದ ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಿದರು.

    ಜನನ ದರವನ್ನು ಹೆಚ್ಚಿಸಲು ಸರ್ಕಾರವು 20ಕ್ಕೂ ಹೆಚ್ಚು ಶಿಫಾರಸುಗಳನ್ನು ತಂದಿದೆ. ಆದರೆ 1980 ಮತ್ತು 2015 ರ ನಡುವೆ ಹೇರಲಾದ ತನ್ನ ಒಂದು ಮಗುವಿನ ನೀತಿಯ ಮೂಲಕ ಚೀನಾದಲ್ಲಿ ಜನಸಂಖ್ಯಾ ಪ್ರಮಾಣ ತೀವ್ರವಾಗಿ ಕುಸಿದಿತ್ತು. ಇದನ್ನೂ ಓದಿ: ಅಮಿತ್ ಶಾ ಭೇಟಿ ರದ್ದಾದ ಪ್ರದೇಶದಲ್ಲಿ ಬಾಂಬ್ ಸ್ಫೋಟ – ಐವರಿಗೆ ಗಾಯ

    ಅಧಿಕಾರಿಗಳು 2021ರಲ್ಲಿ ಒಂದೇ ಮಗು ಎನ್ನುವ ಯೋಜನೆಯನ್ನು ಮೂರಕ್ಕೆ ಏರಿಸಿದರು. ಆದರೂ ಕೊರೊನಾ ಸಮಯದಲ್ಲಿ ಯುವಜನರು ಹೆಚ್ಚಿನ ಶಿಶುಪಾಲನಾ ಮತ್ತು ಶಿಕ್ಷಣ ವೆಚ್ಚಗಳು, ಕಡಿಮೆ ಆದಾಯಗಳು, ದುರ್ಬಲ ಸಾಮಾಜಿಕ ಸುರಕ್ಷತೆ ಮತ್ತು ಲಿಂಗ ಅಸಮಾನತೆ ಸೇರಿದಂತೆ ಈ ರೀತಿಯ ನಾನಾ ಕಾರಣದಿಂದಾಗಿ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ

  • ಕೊರೊನಾ ಅವಧಿಯಲ್ಲಿ ಕೇರಳದಲ್ಲಿ ತೀವ್ರ ಕುಸಿತ ಕಂಡ ಜನನ ಪ್ರಮಾಣ

    ಕೊರೊನಾ ಅವಧಿಯಲ್ಲಿ ಕೇರಳದಲ್ಲಿ ತೀವ್ರ ಕುಸಿತ ಕಂಡ ಜನನ ಪ್ರಮಾಣ

    ತಿರುವನಂತಪುರಂ: ಕೊರೊನಾ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ಜನನ ಪ್ರಮಾಣ ಅಧಿಕವಾಗುತ್ತಿದ್ದರೆ ಕೇರಳದಲ್ಲಿ ತದ್ವಿರುದ್ಧ ಎನ್ನುವಂತೆ ಜನನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. 2020ಕ್ಕೆ ಹೋಲಿಸಿದರೆ 2021ರ ಅವಧಿಯಲ್ಲಿ ಶೇ.50ರಷ್ಟು ಜನನ ಪ್ರಮಾಣ ಕಡಿಮೆ ದಾಖಲಾಗಿರುವುದು ವರದಿಯಾಗಿದೆ.

    CORONA-VIRUS.

    ರಾಜ್ಯದ ಮುಖ್ಯ ಜನನ ನೋಂದಣಿದಾರರ ಅಂಕಿ-ಅಂಶಗಳ ಪ್ರಕಾರ ಕೇರಳವು ಜನನ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡಿದ್ದು, 2021ರ ಮೊದಲ 9 ತಿಂಗಳಲ್ಲಿ ಜನನಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್

    ಕೊರೊನಾ ಪೂರ್ವದಲ್ಲಿ 2010ರಿಂದ 2015ರ ವರೆಗೂ ಪ್ರತಿ ವರ್ಷ ಸರಾಸರಿ 5.30 ಲಕ್ಷ ಜನನ ಪ್ರಮಾಣ ಇತ್ತು, 2017ರಲ್ಲಿ 5.03, 2018 ರಲ್ಲಿ 4.88, 2019 ರಲ್ಲಿ 4.80, ಮತ್ತು 2020 ರಲ್ಲಿ ಈ ಪ್ರಮಾಣ 4.53 ಲಕ್ಷ ಇತ್ತು. ಆದರೆ 2021 ರಲ್ಲಿ ಮಾತ್ರ 2.17 ಲಕ್ಷ ಜನನಗಳು ದಾಖಲಾಗಿವೆ. ವಿದೇಶಗಳಿಂದ ಜನ ವಾಪಸ್ ಆದರೂ, ವರ್ಕ್ ಫ್ರಮ್ ಹೋಮ್ ನಡುವೆಯೂ ಜನನ ಪ್ರಮಾಣ ಕುಸಿತ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    ಈ ವರ್ಷದ ಮೊದಲ ಆರು ತಿಂಗಳಲ್ಲಿ ನೋಂದಣಿಯಾದ ಜನನಗಳ ಸಂಖ್ಯೆಯು ಕನಿಷ್ಠ 27,534 (ಫೆಬ್ರವರಿಯಲ್ಲಿ) ರಿಂದ ಗರಿಷ್ಠ 32,969 (ಜೂನ್) ವರೆಗೆ ಇತ್ತು. ಆದಾಗ್ಯೂ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜನನಗಳ ಸರಾಸರಿ ಸಂಖ್ಯೆ 10,000 ದಾಖಲಾಗಿತ್ತು. ಇದು ಸೆಪ್ಟೆಂಬರ್ ನಲ್ಲಿ 12,227 ಜನನಗಳು ನೋಂದಣಿಯಾಗಿವೆ. ಕಳೆದ ಒಂದು ದಶಕದಲ್ಲಿ ಅತಿದೊಡ್ಡ ಕುಸಿತ ಎಂದು ಹೇಳಲಾಗುತ್ತಿದ್ದು, ಇದು ಮುಂಬರುವ ವರ್ಷಗಳಲ್ಲಿ ಕೇರಳದ ಜನಸಂಖ್ಯಾಶಾಸ್ತ್ರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.