Tag: Birth Day Party

  • ಕೇಕ್ ಕತ್ತರಿಸಲು ತಂದ ಚಾಕುವಿನಿಂದಲೇ ಸ್ನೇಹಿತನ ಕತ್ತು ಕೊಯ್ದು ಕೊಲೆ

    ಕೇಕ್ ಕತ್ತರಿಸಲು ತಂದ ಚಾಕುವಿನಿಂದಲೇ ಸ್ನೇಹಿತನ ಕತ್ತು ಕೊಯ್ದು ಕೊಲೆ

    ಚಿಕ್ಕಬಳ್ಳಾಪುರ: ಬರ್ತ್ ಡೇ ಪಾರ್ಟಿಗೆಂದು (Birth Day Party) ಕರೆಸಿ ಯುವಕನಿಗೆ ಕಂಠಪೂರ್ತಿ ಕುಡಿಸಿ ನಂತರ ಆತನ ಸ್ನೇಹಿತರೇ (Friends) ಚಾಕುವಿನಿಂದ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

    ಚಿಂತಾಮಣಿಯ (Chintamani) ಅಂಜನಿ ಬಡಾವಣೆಯ ನಿವಾಸಿ ದುರ್ಗೇಶ್ ಅಲಿಯಾಸ್ ಚಿನ್ನಿ(24) ಮೃತ ದುರ್ದೈವಿ. ಈತ ಚಿಂತಾಮಣಿ ನಗರದ ಕನ್ನಂಪಲ್ಲಿ ಬಳಿಯ ನಿರ್ಜನಪ್ರದೇಶದಲ್ಲಿ ಹೇಮಂತ್ ಎಂಬಾತನ ಬರ್ತಡೇ ಪಾರ್ಟಿಗೆ ಹೋಗಿದ್ದ. ಆ ಪಾರ್ಟಿಯಲ್ಲಿ ಸುಮಾರು 10ಕ್ಕೂ ಅಧಿಕ ಜನರು ಸೇರಿದ್ದರು.

    ಪಾರ್ಟಿ ವೇಳೆ ಹೇಮಂತ್ ಹಾಗೂ ಆತನ ಸ್ನೇಹಿತರಾದ ಶರತ್, ಮಧು, ಮಹೇಶ್ ಸೇರಿದಂತೆ ದುರ್ಗೇಶ್ ಕಂಠಪೂರ್ತಿ ಕುಡಿದಿದ್ದರು. ಅದಾದ ಬಳಿಕ ಗುರಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶರತ್, ಹೇಮಂತ್, ದುರ್ಗೇಶ್ ಮಧ್ಯೆ ವಾಗ್ವಾದ ನಡೆದಿದೆ. ಜೊತೆಗೆ ಹೇಮಂತ್ ಹಾಗೂ ದುರ್ಗೇಶ್ ಮಧ್ಯೆ ಮೊದಲೇ ಹಳೇ ವೈಷಮ್ಯ ಇತ್ತು. ಇದೇ ಕ್ಷುಲ್ಲಕ ನೆಪದಿಂದ ಕುಡಿದ ಅಮಲಿನಲ್ಲಿ ಬರ್ತ್‍ಡೇ ಬಾಯ್ ಹೇಮಂತ್ ಕೇಕ್ ಕಟ್ ಮಾಡಲು ತಂದಿದ್ದ ಚಾಕುವಿನಿಂದ ಸ್ನೇಹಿತ ದುರ್ಗೇಶನ ಕತ್ತು ಸೀಳಿದ್ದಾನೆ. ಅದಕ್ಕೆ ಆತನ ಸ್ನೇಹಿತರಾದ ಶರತ್, ಮಧು, ಮಹೇಶ್ ಸಾಥ್ ನೀಡಿದ್ದಾರೆ. ದುರ್ಗೇಶ್‍ನ ಕೊಲೆಯಾಗುತ್ತಿದ್ದಂತೆ ಅಲ್ಲಿದ್ದ ಸ್ನೇಹಿತರು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅಸ್ತು

    ಪೊಲೀಸರು ಬೆಳಗ್ಗೆ ಘಟನಾ ಸ್ಥಳಕ್ಕೆ ಹೋದಾಗ ದುರ್ಗೇಶ್‍ನ ಹತ್ಯೆಯಾಗಿತ್ತು. ಆದರೂ ಯಾರೋಬ್ಬರೂ ಪೊಲೀಸರಿಗೆ ಬಾಯ್ಬಿಡದೇ ದುರ್ಗೇಶನ ಶವವಿರಿಸಿದ್ದ ಶವಾಗಾರದ ಬಳಿ ಜಮಾಯಿಸಿ ಅಮಾಯಕರಂತೆ ನಟಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police) ತನಿಖೆ ಕೈಗೊಂಡಿದ್ದಾರೆ.

    ಘಟನೆಗೆ ಸಂಬಂಧಿಸಿ ಬರ್ತ್ ಡೇ ಬಾಯ್ ಹೇಮಂತ್ ಸೇರಿದಂತೆ ಮೃತನ ಸ್ನೇಹಿತರಾದ ಶರತ್, ಮಧು ಮಹೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬರ್ತ್‍ಡೇ ಪಾರ್ಟಿಗೆ ಸ್ನೇಹಿತ ಕರೆದಿದ್ದಾನೆಂದು ವೈಮನಸ್ಸು ಮರೆತು ದುರ್ಗೇಶ್ ಅಲಿಯಾಸ್ ಚಿನ್ನಿ ಮೈಮರೆತು ಕಂಠಪೂರ್ತಿ ಕುಡಿದಿದ್ದ. ಇದೇ ಸಂದರ್ಭವನ್ನು ಬಳಸಿಕೊಂಡ ಬರ್ತಡೇ ಬಾಯ್ ಹೇಮಂತ್ ಸ್ನೇಹಿತ ಎನ್ನುವುದನ್ನು ಮರೆತು ಕೇಕ್ ಕಟ್ ಮಾಡಿದಂತೆ ಕತ್ತು ಕಟ್ ಮಾಡಿ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ಬಯಲಾಗಿದೆ. ಘಟನೆಗೆ ಸಂಬಂಧಿಸಿ 4 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಚಾಕು ಪೂರೈಸಿದ್ದ ಆರೋಪದ ಮೇರೆಗೆ ಇನ್ನಿಬ್ಬರನ್ನ ಸಹ ಬಂಧಿಸಲಾಗಿದೆ. ಇದನ್ನೂ ಓದಿ: 60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ

    Live Tv
    [brid partner=56869869 player=32851 video=960834 autoplay=true]

  • ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

    ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

    ಮೈಸೂರು: ಗೆಳೆಯನ ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮದ ಬಳಿ ನಡೆದಿದೆ.

    ಅಭಿಷೇಕ್ (21) ಮತ್ತು ಅಂಕೇಶ್ (21) ನೀರು ಪಾಲಾದ ಯುವಕರು. ಇಬ್ಬರು ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಚಾಮರಾಜನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದನ್ನೂ ಓದಿ: ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ತಡಿಮಾಲಂಗಿ ಗ್ರಾಮಕ್ಕೆ ಸ್ನೇಹಿತನ ಹುಟ್ಟುಹಬ್ಬಕ್ಕೆ ಇಬ್ಬರು ಆಗಮಿಸಿದ್ದರು. ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಬರ್ತ್ ಡೇ ಪಾರ್ಟಿ ವೀಡಿಯೋ ವೈರಲ್ – ಪೊಲೀಸರ ಅತಿಥಿಯಾದ ಯುವಕರು

    ಬರ್ತ್ ಡೇ ಪಾರ್ಟಿ ವೀಡಿಯೋ ವೈರಲ್ – ಪೊಲೀಸರ ಅತಿಥಿಯಾದ ಯುವಕರು

    ಲಕ್ನೋ: ಹುಟ್ಟು ಹಬ್ಬದ ಕೇಕ್ ಗನ್ ನಿಂದ ಕತ್ತರಿಸಿದ್ದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ. ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಕೆಲ ಯುವಕರ ಬರ್ತ್ ಡೇ ಪಾರ್ಟಿಯ ವೀಡಿಯೋ ವೈರಲ್ ಬಳಿಕ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.

    ಜನವರಿ 10ರಂದು ಹಾಪುರ ಯುವಕರು ಬರ್ತ್ ಡೇ ಪಾರ್ಟಿ ಮಾಡಿದ್ದರು. ಇದರಲ್ಲಿ ಒಬ್ಬ ಗನ್ ಬಳಸಿ ಕೇಕ್ ಕತ್ತರಿಸಿದ್ದನು. ನಂತರ ಎಲ್ಲರೂ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದರು. ಯುವಕರ ಬರ್ತ್ ಡೇ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ವೀಡಿಯೋ ವೈರಲ್ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. ಯುವಕರ ಬಳಿಯಲ್ಲಿದ್ದ ಗನ್ ಹಾಗೂ ಎರಡು ಜೀವಂತ ಗುಂಡುಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಇನ್ನುಳಿದವರು ಮತ್ತು ಗನ್ ಇವರ ಬಳಿಯಲ್ಲಿ ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.