Tag: Birth day

  • ಜೈಲಿನಲ್ಲೇ ರೌಡಿಶೀಟರ್ ಬರ್ತ್ ಡೇ ಆಚರಣೆ – ಐವರ ವಿರುದ್ಧ FIR

    ಜೈಲಿನಲ್ಲೇ ರೌಡಿಶೀಟರ್ ಬರ್ತ್ ಡೇ ಆಚರಣೆ – ಐವರ ವಿರುದ್ಧ FIR

    ರಾಮನಗರ: ಜಿಲ್ಲಾ ಕಾರಾಗೃಹದಲ್ಲಿ (Jail) ಕೈದಿಗಳು (Prisoners) ಹುಟ್ಟುಹಬ್ಬ (Birth Day) ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೈದಿಗಳ ಮೇಲೆ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ (Jail) ಪ್ರಕರಣ ದಾಖಲಾಗಿದೆ.

    ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಎಂಬಾತನ ಬರ್ತ್ ಡೇ ಆಚರಣೆ ಮಾಡಿ ಜೈಲಿನಲ್ಲೇ ಕೇಕ್ ಕತ್ತರಿಸಲಾಗಿತ್ತು. ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಕೇಕ್ ಕತ್ತರಿಸಿ, ಹ್ಯಾಪಿ ಬರ್ತ್ ಡೇ ಕಿರಣ್ ಅಣ್ಣ ಎಂದು ಹೂವಿನಲ್ಲಿ ಬರೆದು ಗ್ರೂಪ್ ಫೋಟೋ ತೆಗೆದುಕೊಂಡಿರುವ ಎರಡು ಫೋಟೋಗಳು ವೈರಲ್ ಆಗಿತ್ತು.

    ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳಲು ಜೈಲಿನ ಅಧಿಕಾರಿಗಳೇ ಸಾಥ್ ನೀಡಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಅಲ್ಲದೇ ಜೈಲಿನ ಒಳಗಡೆ ಕೇಕ್ ತೆಗೆದುಕೊಂಡು ಹೋಗಲು ಅಧಿಕಾರಿ, ಸಿಬ್ಬಂದಿಗಳೇ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಮನಗರ ಎಸ್ಪಿ ಸಂತೋಷ್ ಬಾಬು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷನ ಮಗನಿಂದ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ- ದೂರು ದಾಖಲು

    ಈ ವೇಳೆ ಎರಡು ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದು ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಕಿರಣ್ ಹಾಗೂ ಆತನ ಸಹ ಖೈದಿಗಳಾದ ಲೋಕೇಶ್, ವೇಣುಕುಮಾರ್, ಕಾರ್ತಿಕ್, ಅಪ್ಪು ನಾಯ್ಕ್ ಎಂಬುವವರ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಹಕಾರ ನೀಡಿದ ಜೈಲು ಸಿಬ್ಬಂದಿ ವಿರುದ್ಧ ತನಿಖೆಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್‌ ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ಹುಟ್ಟುಹಬ್ಬಕ್ಕೆ ಸುವರ್ಣಸೌಧ ಬಾಡಿಗೆ ಕೊಡಿ – ಸಭಾಪತಿ, ಡಿಸಿಗೆ ಪತ್ರ ಬರೆದ ತಂದೆ

    ಮಗಳ ಹುಟ್ಟುಹಬ್ಬಕ್ಕೆ ಸುವರ್ಣಸೌಧ ಬಾಡಿಗೆ ಕೊಡಿ – ಸಭಾಪತಿ, ಡಿಸಿಗೆ ಪತ್ರ ಬರೆದ ತಂದೆ

    ಬೆಳಗಾವಿ: ಸುವರ್ಣಸೌಧ (Suvarna Soudha) ಖಾಲಿ ಇರುವ ಸಮಯದಲ್ಲಿ ನನ್ನ 5 ವರ್ಷದ ಮಗಳ (Daughter) ಹುಟ್ಟುಹಬ್ಬ (Birth Day) ಆಚರಿಸಲು ಅದನ್ನು ಬಾಡಿಗೆ ಕೊಡಿ ಎಂದು ವಕೀಲರೊಬ್ಬರು ಸಭಾಪತಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್​ ತಾಲೂಕಿನ ಘಟಪ್ರಭಾ ನಿವಾಸಿ ಹಾಗೂ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವರೇ ಪತ್ರ ಬರೆದವರಾಗಿದ್ದಾರೆ. ಸುವರ್ಣಸೌಧ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಖಾಲಿ ಇರುತ್ತದೆ. ಇದರಿಂದ ಶುಭ ಕಾರ್ಯಗಳಿಗೆ ಬಾಡಿಗೆ ಕೊಟ್ಟರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ವಧು ಹುಡುಕಿಕೊಡಿ- ಮರೆವಣಿಗೆಯಲ್ಲಿ ವರರಂತೆ ಬಂದು ಸರ್ಕಾರಕ್ಕೆ ಮನವಿ ಮಾಡಿದ ಯುವಕರು

    ಪತ್ರದಲ್ಲೇನಿದೆ?: ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ನೀಡಿ. ಜೊತೆಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಹುಟ್ಟದಟ್ಟಿ ಮಾಡುವ ಪದ್ಧತಿಯಿದ್ದು, ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ವಿನಂತಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ದಾಳಿ – ವನ್ಯಜೀವಿಗಳು ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮೇಕೆಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ದಂಪತಿ- ಕಂಬಳಿ ಗಿಫ್ಟ್

    ಮೇಕೆಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ದಂಪತಿ- ಕಂಬಳಿ ಗಿಫ್ಟ್

    ಲಕ್ನೋ: ಮೇಕೆ (Goat) ಮರಿಗಳ ಹುಟ್ಟುಹಬ್ಬವನ್ನು (Birth Day) ದಂಪತಿ ಅದ್ಧೂರಿಯಾಗಿ ಉತ್ತರ ಪ್ರದೇಶದಲ್ಲಿ (UttaraPradesh) ಆಚರಿಸಿದ್ದಾರೆ.

    ಉತ್ತರಪ್ರದೇಶದ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುವ ರಾಜಾ ಮತ್ತು ಅವರ ಪತ್ನಿಗೆ ಮಕ್ಕಳಿರಲಿಲ್ಲ. ಇದರಿಂದಾಗಿ ಕಳೆದ ವರ್ಷ ಅವರು ಸಾಕಿದ್ದ ಮುದ್ದಿನ ಮೇಕೆ 2 ಮರಿಗಳಿಗೆ ಜನನ ನೀಡಿತ್ತು. ಈ 2 ಮರಿಗಳನ್ನು ಮುದ್ದಿನಿಂದ ಸಾಕಿದ್ದ ದಂಪತಿ ಆ ಮರಿಗಳ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

    ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಮೇಕೆ ಮರಿಗಳ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದರು. ಈ ವೇಳೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜೊತೆಗೆ ಡಿಜೆಗೂ ವ್ಯವಸ್ಥೆ ಮಾಡಿದ್ದರು. ಅಷ್ಟೇ ಅಲ್ಲದೇ ಆ 2 ಮೇಕೆಗಳಿಗೆ ಕಂಬಳಿಯನ್ನು (Blanket) ರಾಜು ದಂಪತಿ ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಪಾರ್ಟಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

    ಈ ಬಗ್ಗೆ ರಾಜಾ ಮತನಾಡಿ, ನಾವು ಮೇಕೆಗಳನ್ನು ನಮ್ಮ ಮಕ್ಕಳಂತೆ ನೋಡಿದ್ದೇವೆ. ಆ 2 ಮರಿಗಳಿಗೆ ಕುಬೇರ ಮತ್ತು ಲಕ್ಷ್ಮೀ ಎಂದು ಹೆಸರಿಟ್ಟಿದ್ದೇವೆ. ನಾವು ಅವುಗಳನ್ನು ರಿಕ್ಷಾದಲ್ಲೂ ಹೊರಗಡೆ ಕರೆದುಕೊಂಡು ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೆವು ಎಂದರು. ಇದನ್ನೂ ಓದಿ: ಚಲಿಸುವ ಕಾರಿನ ಬಾನೆಟ್ ಮೇಲೆ ಕೂತು ಯುವತಿ ಜಾಲಿ ರೈಡ್ – ವಾಹನ ಪೊಲೀಸರ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ತುಮಕೂರು: ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣವಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ.

    ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ.  ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಶಾ ಅವರು ಬೆಳಗ್ಗೆ 10-30ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿಯುತ್ತಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಮೊದಲು ಶ್ರೀಗಳ ಗದ್ದಿಗೆ ದರ್ಶನ ಹಾಗೂ ಪೂಜೆ ಮಾಡುತ್ತಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮ 11 ಗಂಟೆಯಿಂದ 1 ಗಂಟೆವರೆಗೂ ನಡೆಯುತ್ತದೆ.

    ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತದೆ. ವೇದಿಕೆ ಮೇಲೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಾಧು ಸಂತರು ಸೇರಿದಂತೆ ಒಟ್ಟು 22 ಜನರಿಗೆ ಅವಕಾಶವಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ಮಾಡಲಾಗುತ್ತಿದೆ. ಇದನ್ನೂ ಓದಿ: ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ.

  • ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಮುಂಬೈ: ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ಸೋಮವಾರ ತಮ್ಮ 67ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೆ ಒಂದಿಲ್ಲೊಂದು ವಿಶೇಷ ಉಡುಗೊರೆಯನ್ನು ಅಭಿಮಾನಿಗಳಿಗೆ ನೀಡುವ ಈ ಹಿರಿಯ ನಟ, ತಮ್ಮ 67ನೇ ವಯಸ್ಸಿನಲ್ಲಿ ದೇಹ ಹುರಿಗೊಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆ ದೇಹಸಿರಿ ತೋರಿಸಲೆಂದೇ ಅವರು ಒಳ ಉಡುಪಿನಲ್ಲೇ ಫೋಟೋಶೂಟ್ ಮಾಡಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

    ಹುಟ್ಟು ಹಬ್ಬದ ಪ್ರಯುಕ್ತ ಅನುಪಮ್ ಖೇರ್, ತಮ್ಮ ದೈಹಿಕ ರೂಪಾಂತರ ಮಾಡಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದೇ ತಡ, ಅಭಿಮಾನಿಗಳು ಕೂಡ ಕ್ರೇಜಿಯಾಗಿಯೇ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. ಒಳ ಉಡುಪಿನ ಮೇಲೆ ಕುಳಿತ, ಅನುಪಮ್ ಖೇರ್ ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ್ದಕ್ಕೆ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    “ಅಭಿಮಾನಿಗಳೇ 37 ವರ್ಷಗಳ ಹಿಂದೆ ನೀವು ಅತ್ಯಂತ ಅಸಾಂಪ್ರದಾಯಿಕ ರೀತಿಯಲ್ಲಿ ಪಾದಾರ್ಪಣೆ ಮಾಡಿದ ಮತ್ತು 65 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ ಯುವ ನಟನನ್ನು ಭೇಟಿಯಾಗಿದ್ದಿರಿ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಪ್ರದರ್ಶಕನಾಗಿ ಪ್ರತಿಯೊಂದು ಮಾರ್ಗವನ್ನೂ ಅನ್ವೇಷಿಸಲು ಪ್ರಯತ್ನಿಸಿದೆ. ಆದರೆ ನನ್ನೊಳಗೆ ಯಾವಾಗಲೂ ಒಂದು ಕನಸು ಇದೆ. ಅದನ್ನು ನನಸಾಗಿಸಲು ಎಂದಿಗೂ ಏನನ್ನೂ ಮಾಡಲಿಲ್ಲ. ಹೀಗಾಗಿ 2022ರಲ್ಲಿ ನಾನು ನನ್ನ ಫಿಟ್‍ನೆಸ್ ಅನ್ನು ಗಂಭೀರವಾಗಿ ಪರಿಗಣಿಸಿ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಲು ಇಚ್ಚಿಸಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, “ನನ್ನ ಜೀವನದಲ್ಲಿ ನಡೆದ ಕೆಲ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದೂ ಅವರು ಹೇಳಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಅನುಪಮ್ ಅವರ ಜನ್ಮದಿನಕ್ಕಾಗಿ ಹಲವು ಬಾಲಿವುಡ್ ತಾರೆಯರು ಅಭಿನಂದಿಸಿದ್ದು, ಅವರ ದೈಹಿಕ ರೂಪಾಂತರದ ಈ ಪೋಸ್ಟ್‍ಗೆ ಕಾಮೆಂಟ್ ಮೂಲಕ ಶ್ಲಾಘಿಸಿದ್ದಾರೆ. ಅನುಪಮ್ ಪುತ್ರ ಸಿಕಂದರ್ ಖೇರ್ ಕೂಡ ಶುಭಾಶಯ ಕೋರಿ, ಅಪ್ಪನ ಸಾಧನೆ ಕೊಂಡಿದ್ದಾನೆ. ಅನುಪಮ್ ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ.

  • ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಸಿಗ್ತಾರೆ: ಕ್ರೇಜಿ ಕ್ವೀನ್‍ಗೆ ಸಾರಥಿಯ ವಿಶ್

    ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಸಿಗ್ತಾರೆ: ಕ್ರೇಜಿ ಕ್ವೀನ್‍ಗೆ ಸಾರಥಿಯ ವಿಶ್

    ಬೆಂಗಳೂರು: ಚಂದನವನದ ಕ್ರೇಜಿ ಕ್ವೀನ್, ಸುಂಟರಗಾಳಿ ನಟಿ ರಕ್ಷಿತಾ ಪ್ರೇಮ್ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ತಮ್ಮ ಆಪ್ತ ಸ್ನೇಹಿತೆಯಾಗಿರುವ ರಕ್ಷಿತಾ ಪ್ರೇಮ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ದರ್ಶನ್ ಟ್ವೀಟ್: ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್ ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

    ಸ್ಕ್ರೀನ್ ಮೇಲೆ ದರ್ಶನ್ ಮತ್ತು ರಕ್ಷಿತಾ ಜೋಡಿ ಮಾಡಿದ ಮೋಡಿ ಹಚ್ಚಹಸಿರಾಗಿದೆ. ಕಲಾಸಿಪಾಳ್ಯ ಬಳಿಕ ದರ್ಶನ್‍ಗೆ ನಾಯಕಿ ರಕ್ಷಿತಾ ಇರಬೇಕೆಂದು ಪ್ರತಿಯೊಬ್ಬರು ಇಷ್ಟಪಡುತ್ತಿದ್ದರು. ದರ್ಶನ್ ಮತ್ತು ರಕ್ಷಿತಾ ಜೋಡಿಯನ್ನೇ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಥಿಯೇಟರ್ ನತ್ತ ಆಗಮಿಸುತ್ತಿದ್ದರು.

    ಸಿನಿಮಾ ಹೊರತಾಗಿ ರಕ್ಷಿತಾ ಮತ್ತು ದರ್ಶನ್ ಒಳ್ಳೆಯ ಸ್ನೇಹಿತರು ಅನ್ನೋದು ಜಗಜ್ಜಾಹೀರು. ಇನ್ನು ರಕ್ಷಿತಾ ಪ್ರೇಮ್ ಅವಕಾಶ ಸಿಕ್ಕಾಗೆಲ್ಲಾ ದರ್ಶನ್ ಸರಳತೆ, ಕಷ್ಟಕ್ಕೆ ಮಿಡಿಯುವ ಹೃದಯ, ಮಾಸ್ ಹೀರೋನ ಒಳಗಿರುವ ಹೆಂಗರಳು ಹೀಗೆ ಯಜಮಾನನ ಗುಣಗಾನ ಮಾಡುತ್ತಿರುತ್ತಾರೆ. ಸದ್ಯ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್, ಮುದ್ದಾಗಿ ಡ್ಯಾನ್ಸ್ ಮಾಡಿದ ಮಕ್ಕಳಿಗೆ ದರ್ಶನ್ ಜೊತೆ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದರು.

    ರಮ್ಯಾ ವಿಶ್: ರಕ್ಷಿತಾ ಪ್ರೇಮ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ರಕ್ಷಿತಾಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಇಲ್ಲದೇ ನನ್ನ ಸಿನಿಮಾ ಪ್ರಯಾಣ ಅಪೂರ್ಣ. ಆ ದಿನಗಳೇ ತುಂಬಾ ಸುಂದರ. ಇಂದು ಮತ್ತು ಯಾವಾಗಲೂ ಎಲ್ಲರ ಪ್ರೀತಿಗೆ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ. ಈ ದಿನ ಮತ್ತಷ್ಟು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ. ಇಬ್ಬರು ಜೊತೆಯಾಗಿ ಕುಳಿತು ಕ್ಲಿಕ್ಕಿಸಿಕೊಂಡಿರುವ ಹಳೆಯ ಫೋಟೋವನ್ನ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.

  • ಕಾಫಿನಾಡಲ್ಲಿ ಬರ್ತ್ ಡೇ ಆಚರಿಸಿಕೊಂಡ ಹೆಚ್‍ಡಿಕೆ

    ಕಾಫಿನಾಡಲ್ಲಿ ಬರ್ತ್ ಡೇ ಆಚರಿಸಿಕೊಂಡ ಹೆಚ್‍ಡಿಕೆ

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನ ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿರೋ ಜಾವರಿನ್ ರೆಸಾರ್ಟ್‍ನಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

    ಸೋಮವಾರ ರಾತ್ರಿಯೇ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ರೆಸಾರ್ಟಿನಲ್ಲೇ ಕಾಲ ಕಳೆದಿದ್ದಾರೆ. ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದಿರೋ ವಿಷಯ ಜಿಲ್ಲೆಯ ಬಹುತೇಕ ಜೆಡಿಎಸ್ ಕಾರ್ಯಕರ್ತರಗೆ ಗೊತ್ತಿರಲಿಲ್ಲ. ಎರಡು ದಿನಗಳ ಕಾಲ ರೆಸಾರ್ಟ್ ನಲ್ಲೇ ವಿಶ್ರಾಂತಿ ಪಡೆದ ಮಾಜಿ ಸಿಎಂ ಇಂದು ಸರಳವಾಗಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತ ಸಿರಾಜ್ ಹಾಗೂ ಇತರೆ ಕಾರ್ಯಕರ್ತರೊಂದಿಗೆ ಸರಳವಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಜೊತೆಗಿದ್ದರು. ಎರಡು ದಿನಗಳ ಕಾಲ ಜಿಲ್ಲೆಯಲ್ಲಿದ್ದರೂ ಬಹುತೇಕ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.

    ಇಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿರೋ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ.

  • ಬರ್ತ್ ಡೇ ಪಾರ್ಟಿ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಸಾವು

    ಬರ್ತ್ ಡೇ ಪಾರ್ಟಿ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಸಾವು

    ಬೆಂಗಳೂರು: ಬರ್ತ್ ಡೇ ಪಾರ್ಟಿ ಮುಗಿಸಿ, ಕುಡಿತದ ಅಮಲಿನಲ್ಲೇ ಬೈಕ್ ಚಲಾಯಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ನಡೆದಿದೆ.

    ಶಿವಶಂಕರ್ ಚೌದರಿ ಮೃತ ವಿದ್ಯಾರ್ಥಿ. ಭಾನುವಾರ ಮೃತ ಶಿವಶಂಕರ್ ತನ್ನ ಹುಟ್ಟುಹಬ್ಬದ ನಿಮಿತ್ತ ಬೊಮ್ಮನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ಬೈಕಿನ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮೃತ ಶಿವಶಂಕರ್ ಕುಡಿದ ಮತ್ತಿನಲ್ಲೇ ವೇಗವಾಗಿ ಬೈಕ್ ಚಲಾಯಿಸಿದ್ದ. ತಲೆಗೆ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಪೆಟ್ಟಾದ ಕಾರಣ ಸ್ಥಳದಲ್ಲೇ ಅಸುನೀಗಿದ್ದಾನೆ.

    ಶಿವಶಂಕರ್ ಮೂಲತಃ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯವನಾಗಿದ್ದಾನೆ. ವಿದ್ಯಾಭ್ಯಾಸ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ. ಕಳೆದ ಮೂರು ವರ್ಷಗಳಿಂದ ಅಪಾರ್ಟ್ ಮೆಂಟ್‍ನಲ್ಲಿ ನೆಲೆಸಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv