Tag: birds

  • ಸಚಿವ ಜಾರ್ಜ್‌ಗೆ ಶುರುವಾಯ್ತು ಹೊಸ ಕ್ರೇಜ್

    ಸಚಿವ ಜಾರ್ಜ್‌ಗೆ ಶುರುವಾಯ್ತು ಹೊಸ ಕ್ರೇಜ್

    – ಸಚಿವರ ಕ್ರೇಜ್‍ನಿಂದ ಪಕ್ಷಿಗಳಿಗೆ ಆಪತ್ತು

    ಬೆಂಗಳೂರು: ಸಚಿವ ಜಾರ್ಜ್ ಅವರಿಗೆ ಈಗ ಹೊಸ ರೇಸ್ ಕ್ರೇಜ್ ಶುರುವಾಗಿದೆ. ಅದುವೇ ಡ್ರೋಣ್ ರೇಸ್ ಕ್ರೇಜ್. ಇದೇ 29 ರಂದು ಸತತ ಮೂರು ದಿನಗಳ ಕಾಲ ಅರಮನೆ ಮೈದಾನದಂಗಳದಲ್ಲಿ ಡ್ರೋಣ್ ರೇಸ್ ನಡೆಯಲಿದೆ.

    ಡಿ.1ರಿಂದ ವಾಣಿಜ್ಯ ಉದ್ದೇಶಕ್ಕೆ ಡ್ರೋಣ್ ಬಳಕೆಗೆ ಕೇಂದ್ರ ಅನುಮತಿ ನೀಡಿದ್ದು, ಇದೇ ಸಂಭ್ರಮದ ಹೆಸರಲ್ಲಿ ಬೆಂಗಳೂರಿನ ಒಪನ್ ಗ್ರೌಂಡ್‍ನಲ್ಲಿ ಡ್ರೋಣ್ ರೇಸ್ ನಡೆಯಲಿದೆ. 3 ದಿನಗಳ ರೇಸ್‍ನಲ್ಲಿ 30 ಡ್ರೋಣ್ ತಯಾರಿಕಾ ಕಂಪನಿಗಳು ಭಾಗಿಯಾಗಲಿವೆ. ಆದ್ರೆ ಸಚಿವ ಕೆ .ಜೆ ಜಾರ್ಜ್ ಅವರ ಡ್ರೋಣ್ ರೇಸ್ ಕುರಿತು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಡ್ರೋಣ್ ಹಾರಾಟದಿಂದ ಬೆಂಗಳೂರಿನ ಅಪರೂಪದ ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಿದೆ. ಅಲ್ಲದೇ ಪಕ್ಷಿಗಳು ಮೈಗ್ರೇಟ್ ಆಗಲಿದೆ. ಹೀಗಾಗಿ ಈ ರೇಸ್ ನಡೆಯಬಾರದು ಅಂತ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ರೇಸ್‍ಗೆ ತಡೆಯೊಡ್ಡುವಂತೆ ಅರಣ್ಯ ಇಲಾಖೆಗೆ ದೂರು ಕೊಡಲು ಪರಿಸರವಾದಿಗಳು ಮುಂದಾಗಿದ್ದಾರೆ. ತೆರೆದ ಮೈದಾನದಲ್ಲಿ ಈ ರೀತಿ ಮಾಡೋದು ಪಕ್ಷಿ ಸಂಕುಲಕ್ಕೆ ತೊಂದರೆಯಾಗಲಿದೆ. ಅಲ್ಲದೇ ಅರಮನೆ ಮೈದಾನದ ಸುತ್ತಮುತ್ತ ಅಪರೂಪದ ಪಕ್ಷಿಗಳಿವೆ. ಇಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡಿರೋದ್ರಿಂದ ಸಮಸ್ಯೆ ಎದುರಾಗಲಿದೆ ಅಂತಾ ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ ಅಂತ ಪರಿಸರವಾದಿ ರಾಜೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಲಿಕಾನ್ ಸಿಟಿಯಲ್ಲೊಂದು ವೈಜ್ಞಾನಿಕ ಪಕ್ಷಿಲೋಕ

    ಸಿಲಿಕಾನ್ ಸಿಟಿಯಲ್ಲೊಂದು ವೈಜ್ಞಾನಿಕ ಪಕ್ಷಿಲೋಕ

    ಬೆಂಗಳೂರು: ಸಿಲಿಕಾನ್ ಸಿಟಿ ಅಂದಾಕ್ಷಣ ಕಣ್ಮುಂದೆ ಬರುವುದೇ ಇಲ್ಲಿನ ಟ್ರಾಫಿಕ್ ಕಿರಿಕಿರಿ. ಎತ್ತ ನೋಡಿದರೂ ಜನ ದಟ್ಟಣೆ. ಬೃಹತ್ ಅಪಾರ್ಟ್ ಮೆಂಟ್ ಗಳು, ಐಟಿಬಿಟಿ ಸೆಂಟರ್, ಇದರ ನಡುವೆ ಜಗತ್ತಿನ ನಾನಾ ಭಾಗದ ಪಕ್ಷಿಗಳು, ಕಾಡಿನ ಬುಡಕಟ್ಟು ಜನರು ಕೂಡ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದಾರೆ

    ಬೆಂಗಳೂರಿನ ಮಾರತಹಳ್ಳಿಯಲ್ಲಿ ಇಂಟರ್ ನ್ಯಾಷನಲ್ ರೋಬೋಟಿಕ್ ಬರ್ಡ್ಸ್ ವರ್ಲ್ಡ್ ಎಂಬ ವೈಜ್ಞಾನಿಕ ಪಕ್ಷಿಲೋಕವೊಂದು ಅನಾವರಣಗೊಂಡಿದೆ. ಇಲ್ಲಿ ಅಪರೂಪದ ಪಕ್ಷಿಗಳಾದ ಪೆಂಗ್ವಿನ್ ಗಳು, ಅಳಿವಿನಂಚಿನಲ್ಲಿರುವ ಆಸ್ಟ್ರಿಚ್, ಎಲಿಫಟ್ ಹಕ್ಕಿಗಳು, ನವಿಲುಗಳು ಮತ್ತು ಅಪರೂಪದ ಫೈರ್ ಡ್ರ್ಯಾಗನ್ ಇದೆ. ಇವೆಲ್ಲ ರೋಬೋಟಿಕ್ ಬರ್ಡ್ಸ್ ಅನ್ನೋದು ವಿಶೇಷ.

    ಸತತ 2 ತಿಂಗಳ ಕಾಲ 30 ಜನ ಕಲಾವಿದರ ಪರಿಶ್ರಮದಿಂದ ರೋಬೋಟ್ ಪಕ್ಷಿಗಳನ್ನ ನಿರ್ಮಾಣ ಮಾಡಲಾಗಿದೆ. ಕೇವಲ ಪಕ್ಷಿ ವೀಕ್ಷಣೆ ಉದ್ದೇಶವಾಗಿರದೆ, ಜನರಲ್ಲಿ ಪಕ್ಷಿಗಳ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಗುರಿಯಾಗಿದೆ. ಅಲ್ಲದೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಶಿಲಾಯುಗ, ಕಾಡಲ್ಲಿ ವಾಸಿಸೋ ಆದಿವಾಸಿಗಳ ಬದುಕು, ಪ್ರಾಣಿ ಪಕ್ಷಿಗಳ ವೈವಿಧ್ಯಮಯ ಪ್ರದರ್ಶನ ಇದಾಗಿದೆ ಎಂದು ಕಾರ್ಯಕ್ರಮ ಆಯೋಜಕ ಖಾನ್ ಹೇಳ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಮಂಡ್ಯ: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಪ್ರಾಣ ಹಾನಿಯಾಗಿದ್ದ ಪರಿಣಾಮ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಕೆಆರ್‍ಎಸ್, ಬೃಂದಾವನ ಪ್ರವೇಶ ನಿಷೇಧಿಸಲಾಗಿದೆ.

    ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್ ಎಸ್‍ನ ಬೃಂದಾವನದ ಎರಡು ಮರಗಳು ಉರುಳಿಬಿದ್ದಿವೆ. 30 ಕ್ಕೂ ಹೆಚ್ಚು ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿರುವುದರಿಂದ ಮರದಲ್ಲಿದ್ದ ನೂರಾರು ಪಕ್ಷಿಗಳು ಧರೆಗುರುಳಿ ನರಳಾಡುತ್ತಿವೆ. ತಮಿಳುನಾಡು ಮೂಲದ ಓರ್ವ, ಕೇರಳ ಮೂಲದ ಇಬ್ಬರು ಸೇರಿ ಮೂವರು ಮೃತಪಟ್ಟು, ಹನ್ನೊಂದು ಪ್ರವಾಸಿಗರು ಗಾಯಗೊಂಡಿದ್ದರು. ಈ ಹಿನ್ನೆಲೆ ಬೃಂದಾವನ ಪ್ರವೇಶ ನಿಷೇಧ ಮಾಡಲಾಗಿದೆ. ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ ಅಂತ ನಿಗಮದ ಇಇ ಬಸವರಾಜೇಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

    ಕೆಲವು ಪಕ್ಷಿಗಳು ಮರದಿಂದ ಬಿದ್ದು ಗಾಯಗೊಂಡು ನರಳಾಡುತ್ತಿವೆ. ಪಕ್ಷಿಗಳ ಸ್ಥಿತಿ ನೋಡಿ ಸಂಕಟಪಡುತ್ತಿರುವ ಸಾರ್ವಜನಿಕರು ಗಾಯಗೊಂಡಿರುವ ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

    ವಿಶ್ವವಿಖ್ಯಾತ ಕೆಆರ್ ಎಸ್ ಬೃಂದಾವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅವಘಡ ನಡೆದಿದ್ದು, ಮುರಿದು ಬಿದ್ದ ಮರಗಳು, ರೆಂಬೆಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರವಾಸಿಗರಿಗೆ ಎರಡು ದಿನ ಕೆಆರ್‍ಎಸ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

  • ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

    ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

    ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ ನಿರೂಪಕಿ ಕ್ರಿಸ್ಟೀನ್ ಡೊಬ್ಬಿನ್ ಫೆಬ್ರವರಿ 2ರಂದು ಪೆಟ್ರೋಲ್ ಹಾಕಿಸಲೆಂದು ಬಂಕ್‍ಗೆ ಹೋದಾಗ ಈ ದೃಶ್ಯ ಕಂಡುಬಂದಿದ್ದು, ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

     

    ಈ ಬಂಕ್‍ನಲ್ಲಿ ಮುಂಚೆಯೂ ಪಕ್ಷಿಗಳನ್ನ ನೋಡಿದ್ದೇನೆ. ಆದ್ರೆ ಇಷ್ಟೊಂದು ಸಂಖ್ಯೆಯಲ್ಲಿ ನೆಲದ ಮೇಲೆ ಕುಳಿತಿರೋದು ನೋಡಿರಲಿಲ್ಲ. ಸಾಮಾನ್ಯವಾಗಿ ಅವು ವಿದ್ಯುತ್ ತಂತಿಗಳ ಮೇಲೆ ಇರುತ್ತವೆ ಎಂದು ಕ್ರಿಸ್ಟೀನ್ ಹೇಳಿದ್ದಾರೆ. ಅಂದು ರಾತ್ರಿ ನಿಜಕ್ಕೂ ರೋಚಕವಾಗಿತ್ತು. ನಾನು ಕೊನೆಗೆ ಮತ್ತೊಂದು ಬಂಕ್‍ಗೆ ಹೋಗಬೇಕಾಯ್ತು. ಆದ್ರೆ ಅಲ್ಲೂ ಕೆಲವು ಪಕ್ಷಿಗಳಿದ್ದವು ಎಂದಿದ್ದಾರೆ.

    ಪಕ್ಷಿಗಳು ದಾಳಿ ಮಾಡಬಹುದೆಂಬ ಭಯವಿದ್ದರೂ ಯಾವುದೇ ತೊಂದರೆ ಇಲ್ಲದೆ ಕಾರಿಗೆ ಇಂಧನ ಹಾಕಿಸಿದೆ. ಆದ್ರೆ ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಯಾಕೆ ಕುಳಿತಿದ್ದವು ಅಂತ ಅರ್ಥವಾಗ್ಲಿಲ್ಲ ಎಂದಿದ್ದಾರೆ.

    ವಿಜ್ಞಾನಿಗಳು ಹೇಳೋದಿಷ್ಟು: ಅಷ್ಟೊಂದು ಪಕ್ಷಿಗಳು ನೆಲದ ಮೇಲೆ ಕುಳಿತಿದ್ದು ಯಾಕೆ ಅಂತ ಈಗ ವಿಜ್ಞಾನಿಗಳು ವಿವರಿಸಿದ್ದಾರೆ. ಈ ಹೊತ್ತಲ್ಲಿ ಪಕ್ಷಿಗಳು ಮರದಲ್ಲಿ ಮಲಗಿರಬೇಕಿತ್ತು. ಆದ್ರೆ ಪೆಟ್ರೋಲ್ ಬಂಕ್‍ನ ಪ್ರಕಾಶಮಾನವಾದ ವಿದ್ಯುತ್ ಬೆಳಕಿಗೆ ಆಕರ್ಷಿತವಾಗಿ ಅಲ್ಲಿಗೆ ಬಂದಿವೆ ಎಂದು ಹೇಳಿದ್ದಾರೆ.

    ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯ ಡಾ. ಕೆವಿನ್ ಮೆಕ್‍ಗಾವ್ನ್ ಈ ಬಗ್ಗೆ ಮಾತನಾಡಿ, ಈ ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಕಾರ್ ಪಾರ್ಕ್‍ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಂದು ನಿದ್ದೆ ಮಾಡುತ್ತವೆ ಎಂದಿದ್ದಾರೆ.

    ಯೇಲ್‍ನ ಆರ್ನಿಥಾಲಜಿ(ಪಕ್ಷಿ ವಿಜ್ಞಾನ) ಪ್ರಾಧ್ಯಾಪಕರಾದ ರಿಚರ್ಡ್ ಪ್ರಮ್ ಪ್ರತಿಕ್ರಿಯಿಸಿ, ಬಹುಶಃ ಆ ರಾತ್ರಿ ಈ ಪಕ್ಷಿಗಳ ಮೂಲ ಸ್ಥಳದಲ್ಲಿ ಏನೋ ತೊಂದರೆಯಾಗಿರಬಹುದು. ಹೀಗಾಗಿ ಅವು ಹೆಚ್ಚಿನ ಬೆಳಕಿದ್ದ ಸ್ಥಳಕ್ಕೆ ಬಂದಿವೆ. ಪಕ್ಷಿಗಳ ನಿದ್ದೆಗೆ ಅಡಚಣೆಯಾಗಿ ಅವು ಕತ್ತಲಲ್ಲಿ ಆ ಸ್ಥಳವನ್ನ ಬಿಟ್ಟು ಬಂದಿವೆ ಎಂದಿದ್ದಾರೆ. ಇಂಥ ಸಂದರ್ಭದಲ್ಲಿ ಅವು ಸುರಕ್ಷಿತ ಜಾಗವನ್ನ ಹುಡುಕಿ ಹಾರಿಬಿಡುತ್ತವೆ. ಈ ಕಾರಣ ಚೆನ್ನಾಗಿ ಬೆಳಕಿದ್ದ ಪೆಟ್ರೋಲ್ ಬಂಕ್‍ಗೆ ಬಂದಿರಬಹುದು. ಅವು ಅಲ್ಲಿ ಏನೂ ತಿನ್ನುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಅಲ್ಲಿಗೆ ಅವು ಬರಲು ಬೆಳಕು ಹಾಗು ತೊಂದರೆ ಬರಲ್ಲ ಎನ್ನುವ ಕಾರಣ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದ್ದಾರೆ.

    https://www.youtube.com/watch?v=FofoSA-FKy0

  • ಶೋಕಿಗಾಗಿ ಡ್ರೋನ್ ಮೂಲಕ ಪಕ್ಷಿಗಳ ಬೇಟೆ- ಹೆಸರಘಟ್ಟದಲ್ಲಿ ಪಕ್ಷಿಗಳ ಮಾರಣ ಹೋಮ

    ಶೋಕಿಗಾಗಿ ಡ್ರೋನ್ ಮೂಲಕ ಪಕ್ಷಿಗಳ ಬೇಟೆ- ಹೆಸರಘಟ್ಟದಲ್ಲಿ ಪಕ್ಷಿಗಳ ಮಾರಣ ಹೋಮ

    ಬೆಂಗಳೂರು: ಆಕಾಶದಲ್ಲಿ ಸ್ವಚ್ಛಂದವಾಗಿ ಕಲರವ ಮಾಡೋ ಪಕ್ಷಿಗಳ ಕಂಡ್ರೆ ಯಾರಿಗೆ ಇಷ್ಟವಿಲ್ಲ. ಆದ್ರೇ ಇದೇ ಪಕ್ಷಿಗಳನ್ನು ವಿಚಿತ್ರವಾಗಿ ಕೊಲ್ಲುವ ವಿಕೃತರು ಇದ್ದಾರೆ ಅಂದ್ರೆ ನಂಬಲೇಬೇಕು.

    ಹೌದು. ಹೆಸರಘಟ್ಟದ ವಿಶಾಲ ಕೆರೆಯ ತೀರದಲ್ಲಿ ದೇಶವಿದೇಶದ ಅಪರೂಪ ಪಕ್ಷಿಗಳನ್ನು ಕೆಲ ವಿಕೃತರು ಡ್ರೋನ್ ಕ್ಯಾಮೆರಾದ ಮೂಲಕ ಕೊಲ್ಲುತ್ತಿದ್ದಾರೆ ಎನ್ನಲಾಗಿದೆ. ಹಸಿರು ಬಣ್ಣದ, ಪಕ್ಷಿಗಳಂತೆ ಕಾಣುವ ಕಲರ್ ಆಟಿಕೆಯ ಡ್ರೋನ್ ಗಳನ್ನು ಪಕ್ಷಿಗಳ ಸಮೀಪ ಹಾರಿಸಿ ಪಕ್ಷಿಗಳನ್ನು ಸೆಳೆಯುತ್ತಾರೆ. ಅದು ಪಕ್ಷಿಗಳ ರೆಕ್ಕೆಗೆ ತಗುಲಿ ಸಾವನ್ನಪ್ಪುತ್ತಿದೆ ಅಂತಾ ವನ್ಯಜೀವಿ ಪರಿಪಾಲಕರು ಹೇಳಿದ್ದಾರೆ.

    ಕೇವಲ ಪಕ್ಷಿಗಳು ಮಾತ್ರವಲ್ಲ ಹೆಸರಘಟ್ಟ ಸುತ್ತಾಮುತ್ತ ನಾಯಿ, ಹಸುಗಳಿಗೂ ಈ ಡ್ರೋನ್ ಕ್ಯಾಮೆರಾದ ಬ್ಯಾಟರಿಗಳು ತಗುಲಿ ಸಾವನ್ನಪ್ಪಿವೆ. ಮೋಜು ಮಸ್ತಿಯ ಶೋಕಿಯಿಂದ ಇಲ್ಲಿನ ಜನ ನೆಮ್ಮದಿಯಿಂದ ಇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

  • ಹಣ್ಣಿನ ತೋಟದ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳ ಸಾವು- ಶ್ರೀರಂಗಪಟ್ಟಣದಲ್ಲಿ ಮನಕಲಕುವ ಘಟನೆ

    ಹಣ್ಣಿನ ತೋಟದ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳ ಸಾವು- ಶ್ರೀರಂಗಪಟ್ಟಣದಲ್ಲಿ ಮನಕಲಕುವ ಘಟನೆ

    ಮಂಡ್ಯ: ಹಣ್ಣಿನ ತೋಟಗಳ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿ ನಡೆದಿದೆ.

    ಟಿಪ್ಪು ಸುಲ್ತಾನ್ ಸಮಾಧಿ ಸ್ಥಳ ಗುಂಬಸ್‍ಗೆ ಕೂಗಳತೆ ದೂರದಲ್ಲಿರುವ ತೋಟದಲ್ಲಿ ಅಂದಾನಯ್ಯ ಎಂಬವರು ಸೀಬೆ ಮತ್ತು ಪನ್ನೇರಳೆ ಬೆಳೆ ಬೆಳೆದಿದ್ದಾರೆ. ಬೆಳೆಗೆ ಪ್ರಾಣಿ ಪಕ್ಷಿಗಳಿಂದ ತೊಂದರೆ ಆಗದಂತೆ ಹಣ್ಣಿನ ತೋಟದ ಸುತ್ತ ಬಲೆ ಕಟ್ಟಿದ್ದಾರೆ. ಇದೀಗ ತೋಟದ ಸುತ್ತ ಹರಡಿರುವ ಬಲೆಗೆ ಪಕ್ಷಿಗಳು ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ.

    ಕೋಗಿಲೆ, ಬಿಳಿಚುಕ್ಕೆ ಗೂಬೆ, ಕಿಂಗ್ ಫಿಷರ್, ಹಸಿರು ಗಿಳಿ, ಮರಕುಟಿಕ, ಸನ್ ಬರ್ಡ್, ಬುಲ್ ಬುಲ್ ಇನ್ನಿತರ ಜಾತಿಯ ಪಕ್ಷಿಗಳ ದೇಹಗಳು ಬಲೆಗೆ ಸಿಲುಕಿ ನೇತಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಸುಮಾರು 2 ಎಕರೆ ವಿಸ್ತೀರ್ಣದ ತೋಟದಲ್ಲಿ ಆರೇಳು ತಿಂಗಳುಗಳಿಂದಲೂ ಪಕ್ಷಿಗಳು ಬಲೆಗೆ ಸಿಲುಕಿರುವ ಕುರುಹುಗಳಿವೆ. ಪಕ್ಷಿಗಳ ಮೂಳೆ, ರೆಕ್ಕೆ, ಪುಕ್ಕಗಳ ಅವಶೇಷಗಳು ಅಲ್ಲಲ್ಲಿ ಬಿದ್ದಿವೆ.

    ಆಹಾರ ಅರಸಿಕೊಂಡು ಬಂದ ಪಕ್ಷಿಗಳು ಗಟ್ಟಿಯಾದ ಬಲೆಗೆ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡಿವೆ. ಪನ್ನೇರಳೆ ಮರಕ್ಕೆ ಕೋತಿಗಳ ಹಾವಳಿ ನಿಯಂತ್ರಿಸಲು ಬಲೆ ಹಾಕಲಾಗಿತ್ತು. ಬಲೆಗೆ ಪಕ್ಷಿಗಳು ಸಿಲುಕಿ ಮೃತ ಪಟ್ಟಿವೆ. ಇದು ಉದ್ದೇಶಪೂರ್ವಕವಲ್ಲ ಅಂತಿದ್ದಾರೆ ತೋಟದ ಮಾಲೀಕ ಅಂದಾನಯ್ಯ.

  • ಮಡಿಕೇರಿ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವ!

    ಮಡಿಕೇರಿ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವ!

    ಮಡಿಕೇರಿ: ಆಧುನಿಕತೆ ಬೆಳೆದ ಹಾಗೆಲ್ಲಾ ಪರಿಸರದ ಮೇಲೆ ತುಂಬಾ ಹಾನಿಯುಂಟಾಗುತ್ತಿದೆ. ಮಾನವ ತನ್ನ ಸ್ವಹಿತಾಸಕ್ತಿಗಾಗಿ ಜೀವ ಸಂಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದಾನೆ. ತನ್ನ ಹಿತಾಸಕ್ತಿಗಾಗಿ ಎಲ್ಲೆಡೆ ಮೊಬೈಲ್ ಟವರ್‍ಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಗುಬ್ಬಚ್ಚಿ ಸಂತತಿಯು ಕ್ಷೀಣಿಸುತ್ತಿದೆ.

    ಕೊಡಗುಜಿಲ್ಲೆ ಬೆಟ್ಟಗುಡ್ಡಗಳ ಪ್ರದೇಶ. ಆದ್ರೆ ಇಲ್ಲಿ ಗುಬ್ಬಚ್ಚಿಗಳನ್ನು ಕೆಲವು ಕಡೆ ಮಾತ್ರ ನಾವು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಗಲ್ಲಿಗಲ್ಲಿಗೊಂದು ಮೊಬೈಲ್ ಟವರ್‍ಗಳು ತಲೆ ಎತ್ತಿ ನಿಂತಿವೆ. ಇವುಗಳ ರೇಡಿಯೇಷನ್‍ನ ತೊಂದರೆಯಂದಾಗಿ ಪಕ್ಷಿ ಸಂಕುಲ ಕ್ಷೀಣಿಸುತ್ತಿದೆ. ಪಕ್ಷಿ ಸಂಕುಲದಲ್ಲಿ ಪ್ರಮುಖವಾಗಿ ಗುಬ್ಬಚ್ಚಿಯ ಸಂತತಿ ಕ್ಷೀಣಿಸುತ್ತಿದ್ದು ಇವು ವಿನಾಶದ ಅಂಚಿನಲ್ಲಿದೆ. ದರೆ ಮಡಿಕೇರಿಯ ಪ್ರವಾಸಿಗರ ಹಾಟ್ ಸ್ಪಾಟ್ ಆದ ಪ್ರಸಿದ್ಧ ಇತಿಹಾಸವುಳ್ಳ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವವನ್ನು ಕಾಣಬಹುದು.

    ರಾಜಾಸೀಟ್ ನೋಡಿ ಎಂಜಾಯ್ ಮಾಡಲು ಹೇಗೆ ಪ್ರೇಮಿಗಳು ಬರುತ್ತಾರೋ ಹಾಗೆಯೇ ಗುಬ್ಬಚ್ಚಿಗಳನ್ನು ಇಲ್ಲಿಗೆ ಆಗಮಿಸುತ್ತಿವೆ. ಇವುಗಳ ಚಿಲಿಪಿಲಿ ಕಲರವ ಕಿವಿಗೆ ತಂಪೆರೆಯುತ್ತದೆ. ಪ್ರವಾಸಿಗರು ತಾವು ತಿಂದು ಬಿಟ್ಟ ಆಹಾರ ಪದಾರ್ಥಗಳನ್ನು ತಿಂದು ಅಲ್ಲಿಲ್ಲಿ ಗುಂಡಿಗಳಲ್ಲಿನ ನೀರು ಕುಡಿದು ಸ್ವಚ್ಚಂದವಾಗಿ ಹಾರಾಟಮಾಡುತ್ತವೆ.

    ಮಡಿಕೇರಿಯ ಪ್ರೆಸ್ ಕ್ಲಬ್‍ನ ಕೆಳ ಮಹಡಿಯಲ್ಲಿ ಈ ಗುಬ್ಬಚ್ಚಿಗಳಿಗಾಗಿ ಗೂಡು ನಿರ್ಮಿಸಿ ಇಲ್ಲಿ ಕಾಳುಗಳನ್ನು ಹಾಕುತ್ತಿದ್ದಾರೆ. ಇನ್ನು ಕಾಡನ್ನು ನಾಶಮಾಡಿ ಮರಗಿಡಗಳನ್ನು ಕಡಿಯುವುದ್ರಿಂದಲೂ ಸಹ ಈ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಿತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

    ಪರಿಸರಕ್ಕೆ ಪೂರಕವಾದಂತಹ ಜೀವಸಂಕುಲಗಳನ್ನು ರಕ್ಷಿಸಬೇಕಾದದ್ದು ಮಾನವ ಧರ್ಮ. ಹಾಗಾಗಿ ಸ್ವ ಹಿತಾಸಕ್ತಿಗಾಗಿ ಅನ್ಯ ಜೀವಿಗಳನ್ನು ಬಲಿಕೊಡವುದು ಸರಿಯಲ್ಲ. ಈಗಾಗಲೇ ಇವುಗಳ ಸಂತತಿ ಕ್ಷೀಣಿಸುತ್ತಿದ್ದು, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪುಸ್ತಕಗಳಲ್ಲಿ ನಾವು ಗುಬ್ಬಚ್ಚಿಯನ್ನು ಕಾಣಬಹುದು. ಆ ಹಂತಕ್ಕೆ ತಲುಪುವದ್ರಲ್ಲಿ ಸಂಶಯವಿಲ್ಲ.