Tag: bird lover

  • ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ರಾಯಚೂರು: ಮಾನ್ವಿ ಪಟ್ಟಣದ ಪಕ್ಷಿ ಪ್ರೇಮಿ ಪಬ್ಲಿಕ್ ಹೀರೋ ಸಲ್ಲಾವುದ್ದೀನ್ ಗಾಯಗೊಂಡಿದ್ದ ನವಿಲೊಂದನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿ ಪುನಃ ಕಾಡಿಗೆ ಬಿಡುವ ಮೂಲಕ ಪಕ್ಷಿ ಪ್ರೇಮ ಮೆರೆದಿದ್ದಾರೆ. ಪಕ್ಷಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಸಲ್ಲಾವುದ್ದೀನ್ ಈಗ ನವಿಲೊಂದಕ್ಕೆ ಪುನರ್ಜನ್ಮ ನೀಡಿದ್ದಾರೆ.

    ಸೆಪ್ಟೆಂಬರ್ 26 ರಂದು ಮಾನ್ವಿ ತಾಲೂಕಿನ ಬಾಪೂರಿನ ಜಮೀನೊಂದರಲ್ಲಿ ಅನಾರೋಗ್ಯದಿಂದ ಬಿದ್ದಿದ್ದ ನವಿಲನ್ನು ಸ್ಥಳೀಯರಾದ ಫಯಾಜ್ ರುಮಾಲ್ ವಾಲೆ ಹಾಗೂ ಅವರ ಸ್ನೇಹಿತರು ಸಲ್ಲಾವುದ್ದೀನ್ ಅವರಿಗೆ ತಂದು ಒಪ್ಪಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿ ರಾಜೇಶ್ ನಾಯಕ್‍ಗೆ ಮಾಹಿತಿ ನೀಡಿ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆರೈಕೆ ಶುರು ಮಾಡಿದ್ದಾರೆ. ಇದನ್ನೂ ಓದಿ:  ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು!

    ಪಕ್ಷಿಧಾಮದಂತೆ ಮಾಡಿಕೊಂಡಿರುವ ತಮ್ಮ ಮನೆಯಲ್ಲಿ ಕೋಳಿಗಳ ಜೊತೆ ನವಿಲನ್ನು ಬಿಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆಯನ್ನೂ ಕೊಡಿಸಿ ಗುಣಮುಖ ಮಾಡಿದ್ದಾರೆ. ಈಗ ನವಿಲು ಸಂಪೂರ್ಣ ಗುಣಮುಖವಾದ ಹಿನ್ನೆಲೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಪುನಃ ಕಾಡಿಗೆ ಬಿಡಲಾಗಿದೆ.

    ಇದೇ ರೀತಿ ಎಲ್ಲೇ ಪಕ್ಷಿಗಳು ಗಾಯಗೊಂಡು ಬಿದ್ದಿದ್ದರೂ ಜನ ಸಲ್ಲಾವುದ್ದೀನ್ ಬಳಿ ತರುತ್ತಾರೆ. ಅವುಗಳಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿ ಪುನಃ ಕೆಲಸದಲ್ಲಿ ನಿರತರಾಗಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಸಲಾವುದ್ದೀನ್ ಪಕ್ಷಿಪ್ರೇಮ ಕುರಿತು ಈ ಹಿಂದೆ ಪಬ್ಲಿಕ್ ಟಿವಿ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಇದನ್ನೂ ಓದಿ:  ರೂರ್ಕಿ ಚರ್ಚ್ ದಾಳಿ- ಇನ್ನೂ ಬಂಧಿಯಾಗದ ಆರೋಪಿಗಳು

  • ಮರಗಳನ್ನು ಸ್ಥಳಾಂತರಿಸಿ ಪರಿಸರ ಕಾಳಜಿ- ಕೆರೆಗೂ ಕಾಯಕಲ್ಪ ನೀಡ್ತಿದ್ದಾರೆ ಧಾರವಾಡದ ಅಸ್ಲಂ ಜಹಾನ್

    ಮರಗಳನ್ನು ಸ್ಥಳಾಂತರಿಸಿ ಪರಿಸರ ಕಾಳಜಿ- ಕೆರೆಗೂ ಕಾಯಕಲ್ಪ ನೀಡ್ತಿದ್ದಾರೆ ಧಾರವಾಡದ ಅಸ್ಲಂ ಜಹಾನ್

    -ಪಕ್ಷಿ ಸಂಕುಲ ರಕ್ಷಣೆಗೆ ವಿಶೇಷ ಮುತುವರ್ಜಿ

    ಧಾರವಾಡ: ಸಸ್ಯ ಹಾಗೂ ಪಕ್ಷಿ ಸಂಕುಲ ರಕ್ಷಣೆಗೆ ಪಣತೊಟ್ಟಿರುವ ಧಾರವಾಡ ಹೊರವಲಯದ ಆಂಜನೇಯ ನಗರದ ಅಸ್ಲಂಜಹಾನ್ ಅಬ್ಬಿಹಾಳ ಇವತ್ತಿನ ಪಬ್ಲಿಕ್ ಹೀರೋ.

    ವೃತ್ತಿಯಲ್ಲಿ ಪೇಂಟಿಂಗ್ ಕಾಂಟ್ರ್ಯಾಕ್ಟರ್ ಆಗಿರೋ ಅಸ್ಲಂ ಜಹಾನ್ ಪರಿಸರ ಪ್ರೇಮಿ. ಪಕ್ಷಿಗಳು ಎಂದರೆ ಅತೀ ಪ್ರೀತಿ. ಕೆರೆ ಪಕ್ಕ ಕಸ ತೆಗೆಯುವಾಗ ಪಕ್ಷಿಗಳು ಮರಿ ಮಾಡಲು ತೊಂದರೆಯಾಗುವುದನ್ನ ಗಮನಿಸಿ, ಏಳು ನಡುಗಡ್ಡೆಯನ್ನ ನಿರ್ಮಾಣ ಮಾಡಿದ್ದಾರೆ. ಈ ನಡುಗಡ್ಡೆಗಳ ಮೇಲೆ 200ಕ್ಕೂ ಹೆಚ್ಚು ಜಾಲಿ, ಅರಳಿ, ಬೇವು ಹಾಗೂ ಇನ್ನಿತರ ಸಸಿಗಳನ್ನ ನೆಟ್ಟಿದ್ದಾರೆ. ಇದರ ಜೊತೆಗೆ ರಸ್ತೆ ಅಗಲೀಕರಣಕ್ಕೆ ಬಲಿಯಾಗುತ್ತಿದ್ದ ಮರಗಳನ್ನ ಇದೇ ಕೆರೆಗೆ ತಂದು ಬೆಳೆಸುತ್ತಿದ್ದಾರೆ.

    ಕಳೆದ 15 ವರ್ಷಗಳಿಂದ ಮರಗಳನ್ನ ಶಿಫ್ಟಿಂಗ್ ಮಾಡಿರುವ ಇವರು, ಮರ ಕಡಿದರೆ ಆ ಮರ ಬೆಳೆಸಲು 30 ವರ್ಷಗಳು ಬೇಕು. ಅದರ ಬದಲಿಗೆ ಆ ಮರವನ್ನ ಸ್ಥಳಾಂತರಿಸಿ ಬೆಳೆಸಬಹುದು ಅನ್ನೋದು ಅಸ್ಲಂ ಅವರ ಮಾತು. ಅಸ್ಲಂ ಅವರ ಈ ಕಾರ್ಯ ಸುತ್ತಮುತ್ತಲ ಗ್ರಾಮಗಳಲ್ಲೂ ಸುದ್ದಿಯಾಗಿದೆ. ಪಕ್ಷಿಗಳನ್ನ ಉಳಿಸಿ ಬೆಳೆಸುವುದರ ಜೊತೆಗೆ ಮರಗಳ ರಕ್ಷಕರೂ ಆಗಿರುವ ಆಂಜನೇಯ ನಗರದ ಅಸ್ಲಂ ಕಾರ್ಯ ಶ್ಲಾಘನೀಯ.

    https://www.youtube.com/watch?v=J5ZEILMnN8o

  • ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೇ ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ರಾಯಚೂರಿನ ಇವತ್ತಿನ ಪಬ್ಲಿಕ್ ಹೀರೋ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ.

    ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ ಎಂದು ಸಲಾವುದ್ದೀನ್ ಹೇಳ್ತಾರೆ.

    ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ. ಸಲಾವುದ್ದೀನ್‍ರ ಮನೆ ಬಳಿ ಯಾವಾಗಲು ಹಕ್ಕಿಗಳ ಚಿಲಿಪಿಲಿ ಇರುತ್ತದೆ.

    ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ. ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    https://www.youtube.com/watch?v=NwLGZRYzLIQ