Tag: Bird flu

  • ರಾಯಚೂರಿನಲ್ಲಿ ಹೆಚ್ಚಾದ ಹಕ್ಕಿ ಜ್ವರದ ಭೀತಿ – ಜಿಲ್ಲಾಡಳಿತ ಹೈ ಅಲರ್ಟ್

    ರಾಯಚೂರಿನಲ್ಲಿ ಹೆಚ್ಚಾದ ಹಕ್ಕಿ ಜ್ವರದ ಭೀತಿ – ಜಿಲ್ಲಾಡಳಿತ ಹೈ ಅಲರ್ಟ್

    ರಾಯಚೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರದ ಭೀತಿ ಹೆಚ್ಚಾಗುತ್ತಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿಯಲ್ಲಿರುವ ರಾಯಚೂರು (Raichuru) ಜಿಲ್ಲೆಯಲ್ಲೂ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರ ಶಂಕೆ ಭಯ ಹುಟ್ಟಿಸಿದೆ. ಹಕ್ಕಿಗಳ ನಿಗೂಢ ಸಾವಿನ ಬೆನ್ನಲ್ಲೇ ಇದೀಗ ಜಿಲ್ಲಾಡಳಿತ ಅಲರ್ಟ್ ಆಗಿದೆ.

    ಇದುವರೆಗೂ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ವಿವಿಧ ಪಕ್ಷಿಗಳು ಸಾವನ್ನಪ್ಪಿವೆ. ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪ್ರತಿದಿನ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳು ನಿಗೂಢವಾಗಿ ಪ್ರಾಣ ಬಿಡುತ್ತಿವೆ. ಪಕ್ಕದ ಆಂಧ್ರಪ್ರದೇಶ ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಜಿಲ್ಲೆಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿಕೊಳ್ಳಲು ಕ್ಷೇತ್ರ ಮರುವಿಂಗಡಣೆಗೆ ಅಪಸ್ವರ: ಬೊಮ್ಮಾಯಿ

    ಮಾನ್ವಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಕುರಿತ `ಪಬ್ಲಿಕ್ ಟಿವಿ’ ವರದಿ ಬಳಿಕ ಜಿಲ್ಲಾಡಳಿತ, ಪಶುಸಂಗೋಪನೆ ಇಲಾಖೆ ಎಚ್ಚೆತ್ತುಕೊಂಡಿವೆ. ತೆಲಂಗಾಣ, ಆಂಧ್ರಪ್ರದೇಶ ಗಡಿಭಾಗದಲ್ಲಿ ಹೈಅಲರ್ಟ್ ಆಗಿದೆ. ರ‍್ಯಾಪಿಡ್ ರೆಸ್ಪಾನ್ಸ್ ಟೀಂ ರಚನೆ ಮಾಡಲಾಗಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶ ಗಡಿಯಿಂದ ಕೋಳಿ, ಕೋಳಿ ಉತ್ಪನ್ನ ಬರದಂತೆ ತಡೆಯಲು ಚೆಕ್ ಪೋಸ್ಟ್ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.

    ಹಕ್ಕಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿ ಸಾವನ್ನಪ್ಪುತ್ತಿವೆ. ಕೆಳಗೆ ಬಿದ್ದ ಬಳಿಕ ಕುಡಿಯಲು ನೀರನ್ನ ಇಟ್ಟರೂ ಕುಡಿಯದೆ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯದೇ ಸ್ಥಳೀಯರಿಗೆ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ. ಈಗಾಗಲೇ ಸಾವನ್ನಪ್ಪಿದ ಪಕ್ಷಿಯ ಕಳೆಬರವನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರುವುದು ಇನ್ನೂ ಬಾಕಿಯಿದೆ. ಆದ್ರೆ ಜನರಲ್ಲಿ ಆತಂಕ ಎಂದು ಒತ್ತಾಯಿಸಿದ್ದಾರೆ.

    ಒಟ್ಟಿನಲ್ಲಿ, ಜಿಲ್ಲೆಯಲ್ಲಿ ಪಕ್ಷಿಗಳು ಏಕಾಏಕಿ ಸಾವನ್ನಪ್ಪುತ್ತಿರುವುದು ಅಚ್ಚರಿ, ಆತಂಕವನ್ನ ಒಟ್ಟೋಟ್ಟಿಗೆ ಮೂಡಿಸಿದೆ. ಹೆಚ್ಚುತ್ತಿರುವ ತಾಪಮಾನವು ಪರಿಣಾಮ ಬೀರಿರುವ ಶಂಕೆಯಿದ್ದು, ಹಕ್ಕಿ ಜ್ವರದ ಅನುಮಾನವೂ ಇದೆ. ಗಡಿರಾಜ್ಯಗಳಿಂದ ಕೋಳಿ ಹಾಗೂ ಕೋಳಿ ಉತ್ಪನ್ನಗಳು ಬರದಂತೆ ತಡೆದು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿರುವುದು ಜನರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ನಾ ಪುಣೆ ಅತ್ಯಾಚಾರ ಆರೋಪಿ? – ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

     

  • ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ – 2 ದಿನದ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿ ಸಾಗಾಟ

    ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ – 2 ದಿನದ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿ ಸಾಗಾಟ

    ಚಿಕ್ಕಬಳ್ಳಾಪುರ: ಆಂಧ್ರ ಹಾಗೂ ತೆಲಂಗಾಣದಲ್ಲಿ ಮರಣಮೃದಂಗ ಬಾರಿಸಿರುವ ಡೆಡ್ಲಿ ಹಕ್ಕಿ ಜ್ವರ ರಾಜ್ಯಕ್ಕೂ ಕಾಲಿಟ್ಟಿದೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಬರ್ಡ್ ಫ್ಲೂಗೆ (Bird Flu) ಕಾರಣವಾಗುವ ಎಚ್5ಎನ್1 ವೈರಸ್ ಇರೋದು ಧೃಡವಾಗಿದೆ. ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೈಅಲರ್ಟ್ ಆಗಿ ತುರ್ತು ಸಭೆ ನಡೆಸಿದ್ದು, ಸೋಂಕಿತ ಗ್ರಾಮದ ಸುತ್ತಲೂ ಕಟ್ಟೆಚ್ಚರ ವಹಿಸಿ ಕೋಳಿಗಳ ಸಾಗಾಣಿಕೆ ಬಂದ್ ಮಾಡಿ ನಾಕಾಬಂಧಿ ವಿಧಿಸಲು ಆದೇಶ ಮಾಡಲಾಗಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಇರೋದು ಪ್ರಯೋಗಾಲಯದ ವರದಿಯಿಂದ ಅಧಿಕೃತವಾಗಿ ಧೃಡವಾಗಿದೆ. ಈ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮ ಕೈಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಈ ನಡುವೆ ಫಾರಂ ಮಾಲೀಕರು ರಾತ್ರೋ ರಾತ್ರಿ ಕೋಳಿಗಳನ್ನ ಸಾಗಾಟ ಮಾಡಿರುವುದು ಕಂಡುಬಂದಿದೆ. ಕಳೆದ 2 ದಿನಗಳ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿಗಳನ್ನ ಸಾಗಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾ ಕುಂಭ ಮೇಳ | ಡೇರೆಯಲ್ಲಿ ಅಗ್ನಿ ಅವಘಡ – ಓರ್ವನಿಗೆ ಗಾಯ

    ಹಕ್ಕಿ ಜ್ವರ ಪತ್ತೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಡಿಸಿ ಪಿಎನ್ ರವೀಂದ್ರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಧಿಢೀರ್ ತುರ್ತು ಸಭೆ ನಡೆಸಿದರು. ಅಂದಹಾಗೆ ಗ್ರಾಮದ ದ್ಯಾವಪ್ಪ ಎಂಬುವವರ ಮನೆಯಲ್ಲಿ ಧಿಢೀರ್ ಅಂತ 28 ಕೋಳಿಗಳು ಸಾವನ್ನಪ್ಪಿದ್ದವು. ನಂತರ ಇದೇ ಗ್ರಾಮದಲ್ಲಿ ಬೇರೇ ಬೇರೆಯವರ ಕೋಳಿಗಳ ಸಹ ಸಾವನ್ನಪ್ಪುತ್ತಿದ್ದವು.

    ಸತ್ತ ಕೋಳಿ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಎಚ್5 ಎನ್1 ವೈರಸ್ ಧೃಡವಾಗಿದೆ. ಹೀಗಾಗಿ ರೋಗ ನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಡಿಸಿ ಹಕ್ಕಿ ಜ್ವರ ನಿರ್ಮೂಲನೆಗಾಗಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: 28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಪತ್ತೆ – ದೆಹಲಿ ಮೂಲದ ಪ್ರಮುಖ ಆರೋಪಿ ಅರೆಸ್ಟ್‌

    ಇನ್ನೂ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಧೃಢ ಹಿನ್ನಲೆ, ವರದಹಳ್ಳಿ ಗ್ರಾಮದ ಕೋಳಿಗಳು ಬೇರಡೆಗೆ ಸಾಗಾಣಿಕೆ ಮಾಡದಂತೆ ಸೂಚಿಸಲಾಗಿದೆ. ಬೇರೆ ಕಡೆಯಿಂದ ಕೋಳಿಗಳನ್ನೂ ಸಹ ಗ್ರಾಮಕ್ಕೆ ತರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್‌ನಿಂದ ನಾಕಾಬಂಧಿ ಹಾಕಲಾಗಿದೆ. ಗಡಿಗಳಲ್ಲಿ ಹದ್ದಿನ ಕಣ್ಣಿಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ವರದಹಳ್ಳಿ ಗ್ರಾಮದ ಸುತ್ತಲೂ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ವರದಹಳ್ಳಿ ಗ್ರಾಮದಲ್ಲಿ 96 ಮನೆ ಇದ್ದು 405 ಮಂದಿ ಜನಸಂಖ್ಯೆ ಇದೆ. ಈಗಾಗಲೇ ಮನೆ ಮೆನೆಗೆ ಹೋಗಿ ಕೋಳಿಗಳ ಸರ್ವೆ ಸಹ ಮಾಡಲಾಗಿದೆ. ಗ್ರಾಮದ ರಸ್ತೆಗಳಿಗೆ ಬ್ಲೀಚಿಂಗ್ ಪೌಡರ್ ಹಾಗೂ ಗ್ರಾಮದ ವಾಹನಗಳಿಗೆ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದೆ..

    ಒಟ್ನಲ್ಲಿ ಹಕ್ಕಿ ಜ್ವರ ಧೃಡದಿಂದ ಜಿಲ್ಲಾಡಳಿತದ ಟೆನ್ಷನ್ ಹೆಚ್ಚಾಗಿದೆ.. ಹಕ್ಕಿ ಜ್ವರ ನಿರ್ಮೂಲನೆಗೆ ಕೋಳಿಗಳನ್ನ ವಶಕ್ಕೆ ಪಡೆದು ಸಾಮೂಹಿಕ ಹತ್ಯೆಗೂ ಪ್ಲಾನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಹ ಗ್ರಾಮದ ಜನರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಇದನ್ನೂ ಓದಿ: ʻಕೈʼಮುಖಂಡನ ಹತ್ಯೆ ಕೇಸ್‌ – ಶಿವಮೊಗ್ಗದಿಂದ ಗಡಿಪಾರಾಗಿದ್ದ ಆರೋಪಿಗಳಿಗೆ ಸುಪಾರಿ ಕೊಟ್ಟು ಕೊಲೆ

  • ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಇರೋದು ದೃಢ – ಕೋಳಿಗಳ ಮಾರಣಹೋಮಕ್ಕೆ ಮುಂದಾದ ಜಿಲ್ಲಾಡಳಿತ

    ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಇರೋದು ದೃಢ – ಕೋಳಿಗಳ ಮಾರಣಹೋಮಕ್ಕೆ ಮುಂದಾದ ಜಿಲ್ಲಾಡಳಿತ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ (Chikkaballapur) ಹಕ್ಕಿ ಜ್ವರ (Bird flu) ಇರುವುದು ದೃಢಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.

    ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಭೂಪಾಲ್‍ನ ಪ್ರಯೋಗಾಲಯ ನೀಡಿದ ವರದಿಯಿಂದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ. ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರಬಹುದು. ರೋಗನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

    ಗ್ರಾಮದಲ್ಲಿರುವ ಇತರೆ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಗುವುದು. ವರದಹಳ್ಳಿ ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ಕೋಳಿಗಳನ್ನು ಪಡೆದು ನಿಯಾಮಾನುಸಾರ ನಿಗದಿತ ಏರಿಯಾದಲ್ಲಿ ಕೋಳಿಗಳ ಹತ್ಯೆ ಮಾಡಿ ಮುಚ್ಚಿ ಹಾಕುತ್ತೇವೆ. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ICC Champions Trophy | ಟೂರ್ನಿಯಿಂದ ಔಟ್‌ ಆದ್ರೂ ಪಾಕ್‌ಗೆ ಸಿಕ್ತು ನಗದು ಬಹುಮಾನ

  • ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು – ಹಕ್ಕಿ ಜ್ವರದ ಶಂಕೆ

    ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು – ಹಕ್ಕಿ ಜ್ವರದ ಶಂಕೆ

    ರಾಯಚೂರು: ಜಿಲ್ಲೆಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ತೆಲಂಗಾಣದಲ್ಲಿ (Telangana) ಕಾಣಿಸಿಕೊಂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ.

    ಜಿಲ್ಲೆಯಲ್ಲಿ ಬರ್ಡ್ ಫ್ಲೂ (Bird flu) ಹರಡುತ್ತಿರುವ ಆತಂಕ ಸೃಷ್ಟಿಯಾಗಿದ್ದು, ಮಾನ್ವಿ (Manvi) ತಾಲೂಕಿನಲ್ಲಿ ಪ್ರತೀದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳ ಸಾವನ್ನಪ್ಪುತ್ತಿದೆ. ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – 5ನೇ ದಿನವೂ ರಕ್ಷಣಾ ಕಾರ್ಯ, 10,000 ಘನ ಮೀಟ‌ರ್ ಕೆಸರು ತೆಗೆಯುವುದೇ ಸವಾಲು!

    ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ 8-10 ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಸಾಯುತ್ತಿವೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯದಿರುವುದರಿಂದ ಸ್ಥಳೀಯರಲ್ಲಿ ಹಕ್ಕಿ ಜ್ವರದ ಆತಂಕ ಶುರುವಾಗಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪಶುವೈದ್ಯಾಧಿಕಾರಿಗಳು, ಮರದಿಂದ ಬಿದ್ದ ಪಕ್ಷಿಗಳಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಐಎಚ್‌ವಿವಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಮಂಡ್ಯ | KSRTC ಬಸ್ ಚಕ್ರಕ್ಕೆ ತಲೆಕೊಟ್ಟು ಯುವಕ ಆತ್ಮಹತ್ಯೆ

    ಈ ವೇಳೆ ಮಾತನಾಡಿದ ಮಾನ್ವಿ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ ಅವರು, ಪಕ್ಷಿಗಳ ಸಾವಿಗೆ ಬೇರೆ ಬೇರೆ ಕಾರಣಗಳು ಇರುತ್ತದೆ. ಈಗಲೇ ಏನನ್ನೂ ಹೇಳಲು ಆಗಲ್ಲ. ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ನೆರೆ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರ (Bird Flu) ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಸೋಂಕು ದೇಶೀಯ ಕೋಳಿಗಳಿಗೆ ಸುಲಭವಾಗಿ ಹರಡುತ್ತದೆ. ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರಾವ ಅಥವಾ ಬಾಯಿ ಅಥವಾ ಕಣ್ಣುಗಳಿಂದ ಸ್ರವಿಸುವಿಕೆಯ ಸಂಪರ್ಕದ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ. ಹಾಗಿದ್ರೆ ಈ ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. 

    ಹಕ್ಕಿ ಜ್ವರ ಎಂದರೇನು?
    ಏವಿಯನ್ ಇನ್ ಫ್ಲುಯೆಂಜಾ (Avian Influenza) ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

    ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

    H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

    ಆದರೆ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.

    2020ರಿಂದ H5N1 ವೈರಸ್ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ.  80ಕ್ಕೂ ಹೆಚ್ಚು ದೇಶಗಳಲ್ಲಿ (ಡಿಸೆಂಬರ್ 2023 ರಂತೆ) ಪಕ್ಷಿಗಳಿಗೆ ಈ ಸೋಂಕು ತಗುಲಿದೆ.  ಈ ವೈರಸ್‌ ಕಾಣಿಸಿಕೊಂಡ ಹಿನ್ನೆಲೆ ವಾಣಿಜ್ಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ.

    ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

    ರೋಗ ಲಕ್ಷಣಗಳೇನು?
    -ಕೆಮ್ಮು
    -ಉಸಿರಾಟದಲ್ಲಿ ತೊಂದರೆ
    -ತೀವ್ರ ಜ್ವರ
    -ತಲೆನೋವು
    -ಸ್ನಾಯುಗಳ ನೋವು
    -ಮೂಗು ಸೋರುವಿಕೆ
    -ಗಂಟಲಿನ ಊತ
    -ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ

    *ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುತ್ತದೆ ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಅಪಾಯದಿಂದ ಪಾರಾಗಬಹುದು.

    *ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆ ಕಡಿಮೆ ಆಗುತ್ತದೆ.

    ಮನುಷ್ಯರಿಗೆ ಹಕ್ಕಿ ಜ್ವರ ಹರಡುವುದು ಹೇಗೆ?
    ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುತ್ತದೆ.

    ಮಾಂಸಾಹಾರ ಸೇವಿಸುವವರು ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಹರಡುವುದಿಲ್ಲ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸಬಾರದು.

    ರೋಗ ಬಾರದಂತೆ ತಡೆಯುವುದು ಹೇಗೆ?
    *ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ.
    *ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ಪ್ರಯಾಣದ ವೇಳೆ ಬಳಸಿ.
    *ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
    *ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ.
    *ಹಸಿ ಮೊಟ್ಟೆ ಸೇವಿಸಬೇಡಿ.
    *ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
    *H5N1 ಹಕ್ಕಿಜ್ವರದ ವೈರಸ್ ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್ ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
    *ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಬೇಕು.
    *ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ. 

  • ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಚಾಮರಾಜನಗರ: ನೆರೆಯ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರದ (Bird flu) ಆತಂಕದ ಹಿನ್ನೆಲೆಯಲ್ಲಿ ಚಾಮರಾಜನಗರ ಗಡಿಯಲ್ಲಿ (Chamarajanagar Border) ಕಟ್ಟೆಚ್ಚರ ವಹಿಸಲಾಗಿದೆ.

    ಬಂಡೀಪುರ ಅಭಯಾರಣ್ಯದ ಕೇರಳ ಕರ್ನಾಟಕ ಗಡಿ ಮೂಳೆ ಹೊಳೆಯಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಭಯಾರಣ್ಯದ ಬಳಿ ಹಕ್ಕಿ ಜ್ವರ ಭೀತಿಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕೇರಳದಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು, ಕೋಳಿ ತುಂಬಿದ್ದ ವಾಹನಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಮೋದಿ ಭೇಟಿ – ಬೀದರ್‌ನಲ್ಲಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಟ

    ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ನಾಟಿ ಕೋಳಿ ಸಾವನ್ನಪ್ಪಿದ್ದವು. ಇದರಿಂದ ಹಕ್ಕಿ ಜ್ವರದ ಆತಂಕವಿತ್ತು. ಇದೀಗ ಆ ಕೋಳಿಯ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ರವಾನಿಸಲಾಗಿದೆ.

    ಸದ್ಯ ಯಾವುದೇ ಭಯಪಡುವ ಅಗತ್ಯವಿಲ್ಲ, ವರದಿ ಬಂದ ನಂತರ ಮತ್ತಷ್ಟು ಸೂಕ್ತ ಕ್ರಮ ವಹಿಸುತ್ತೇವೆ ಎಂದು ಚಾಮರಾಜನಗರದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ತಿರುವನಂತಪುರಂ: ಕೇರಳದ (Kerala) ಕೊಟ್ಟಾಯಂ (Kottayam) ಜಿಲ್ಲೆಯ 3 ಪಂಚಾಯಿತಿಗಳಲ್ಲಿ ಏಕಾಏಕಿ ಹಕ್ಕಿ ಜ್ವರ (Bird Flu) ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 6,000ಕ್ಕೂ ಅಧಿಕ ಪಕ್ಷಿಗಳನ್ನು (Birds) ಹತ್ಯೆ ಮಾಡಲಾಗಿದೆ.

    ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಭೀತಿ ಆವರಿಸಿದ್ದು, ಈ ಮಧ್ಯೆ ದೇಶದಲ್ಲಿ ಹಕ್ಕಿ ಜ್ವರ ಸದ್ದು ಮಾಡುತ್ತಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ವೇಚೂರು, ನಿಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ 6,017 ಪಕ್ಷಿಗಳನ್ನು ಸಂಹರಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಬಾತುಕೋಳಿಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    Bird flu

    ಕೇರಳದ ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ಈ ಹಕ್ಕಿ ಜ್ವರದ ಭೀತಿಯಿಂದಾಗಿ ಇಂದು ಮುಂಜಾನೆ ಕೇರಳದ ರೈತರು ಬಾತುಕೋಳಿಗಳನ್ನು ಹಿಡಿದು ಅವುಗಳನ್ನು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಕೇರಳದಲ್ಲಿ ಹಕ್ಕಿಜ್ವರದ ಹರಡುತ್ತಿರುವುದರ ಬಗ್ಗೆ ವರದಿಯಾದ ಬೆನ್ನಲ್ಲೇ ಲಕ್ಷದ್ವೀಪಗಳಿಗೆ ಕೋಳಿಯನ್ನು ಸಾಗಿಸುವುದನ್ನು ನಿಷೇಧಿಸಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. ಇದನ್ನೂ ಓದಿ: ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದ ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ – 25,000 ಕೋಳಿಗಳನ್ನು ಕೊಲ್ಲಲು ಆದೇಶ

    ಮಹಾರಾಷ್ಟ್ರದ ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ – 25,000 ಕೋಳಿಗಳನ್ನು ಕೊಲ್ಲಲು ಆದೇಶ

    ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಪೀಡಿತ ಕೋಳಿ ಫಾರ್ಮ್‍ನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 25,000 ಕೋಳಿಗಳನ್ನು ಮುಂದಿನ ಕೆಲವು ದಿನಗಳಲ್ಲಿ ಕೊಲ್ಲಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಶ್ ಜೆ. ನಾರ್ವೇಕರ್ ಹೇಳಿದ್ದಾರೆ.

    Bird flu

    ಜಿಲ್ಲೆಯ ಪಶುಸಂಗೋಪನಾ ಇಲಾಖೆಯು ಇತರ ಪಕ್ಷಿಗಳಿಗೆ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳಲಿದೆ. ಹಕ್ಕಿ ಜ್ವರ ಕಾಣಿಸಿಕೊಂಡಿರುವ ಕೋಳಿಯ ಮಾದರಿಗಳನ್ನು ಪುಣೆಯ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ನಾರ್ವೇಕರ್ ತಿಳಿದ್ದಾರೆ. ಇದನ್ನೂ ಓದಿ: ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

    ಶಹಾಪುರದ ಕೋಳಿ ಫಾರಂನಲ್ಲಿ ಸುಮಾರು 100 ಕೋಳಿಗಳು ಸಾವನ್ನಪ್ಪಿದ ಬಳಿಕ ಥಾಣೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಶಹಾಪುರ ತಾಲೂಕಿನ ವೆಹ್ಲೋಳಿ ಗ್ರಾಮದ ಕೋಳಿ ಫಾರಂನಲ್ಲಿ ಇತ್ತೀಚೆಗೆ ಸುಮಾರು 100 ಕೋಳಿಗಳು ಸಾವನ್ನಪ್ಪಿದ್ದು, ಅದರ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳು ಎಚ್5ಎನ್1 ಏವಿಯನ್ ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಿದೆ ಎಂದು ಥಾಣೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಭೌಸಾಹೇಬ್ ಡಾಂಗ್ಡೆ ಹೇಳಿದ್ದಾರೆ. ಜೊತೆಗೆ ಥಾಣೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

  • ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ತಿರುವನಂತಪುರಂ: ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಆಲಪ್ಪುಳ ಜಿಲ್ಲೆಯ ಕೋಟ್ಟನಾಡ್‍ನಲ್ಲಿ ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು. ಇದೀಗ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದೆ.

    ಹೀಗಾಗಿ ಹಕ್ಕಿ ಜ್ವರ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಸೋಂಕು ಹರಡುವುದನ್ನು ತಡೆಗಟ್ಟಲು 12 ಕಿ.ಮೀ. ದೂರದಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಹಕ್ಕಿಗಳ ಚಲನೆಯ ಮೇಲೆ ನಿರ್ಬಂಧ ಹೇರಲಾಗಿದೆ. ಈ ವರ್ಷ ಕೇರಳದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ದೃಢಪಟ್ಟಿದೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

  • ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ- 48 ಕಾಗೆಗಳ ಸಾವು!

    ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ- 48 ಕಾಗೆಗಳ ಸಾವು!

    ಭೋಪಾಲ್: ಮಧ್ಯಪ್ರದೇಶದ ಅಗರ್‌ ಮಲ್ವಾ ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದಾಗಿ ಕಳದ ನಾಲ್ಕು ದಿನಗಳ ಅವಧಿಯಲ್ಲಿ 48 ಕಾಗೆಗಳು ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ಕಾಗೆಗಳ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಾಗೆಗಳು ಹಕ್ಕಿ ಜ್ವರದಿಂದ ಮೃತಪಟ್ಟಿವೆ (ಎಚ್‌5ಎನ್‌8) ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಅಗರ್‌ ಮಾಲ್ವಾ ಡಿಸಿ ಅವಧೇಶ್‌ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಹಕ್ಕಿ ಜ್ವರ ಹರಡುವುದನ್ನು ನಿಯಂತ್ರಿಸಲು ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಮಟನ್‌ ಅಂಗಡಿಗಳನ್ನು ಬಂದ್‌ ಮಾಡಿಸುವ ಸಂಬಂಧ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಹಾಗೂ ಗಡಿ ಭಾಗಗಳಲ್ಲಿ ಪರಿಸ್ಥಿತಿ ಅವಲೋಕಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಪಕ್ಷಿಗಳ ಅಸಹಜ ಸಾವಿನ ಕುರಿತು ಮಾಹಿತಿ ಸಿಕ್ಕ ಕೂಡಲೇ ಪ್ರಕರಣ ದಾಖಲಿಸುವಂತೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಎನ್.ಕಾನ್ಸೋಟಿಯಾ ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ಚಳಿಗಾಲದ ಸಂದರ್ಭದಲ್ಲಿ ಹಕ್ಕಿ ಜ್ವರ ಹರಡುವಲ್ಲಿ ವಲಸೆ ಹಕ್ಕಿಗಳು ಮುಖ್ಯ ಕಾರಣವಾಗುತ್ತವೆ. ವಲಸೆ ಹಕ್ಕಿಗಳ ಬಗ್ಗೆ ನಿಗಾವಹಿಸಬೇಕು. ವಲಸೆ ಹಕ್ಕಿಗಳು ಹಾಗೂ ಕೋಳಿ ಮಾರುಕಟ್ಟೆಗಳಲ್ಲಿ ಸ್ಯಾಂಪಲ್ಸ್‌ ಪಡೆದು ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಸೂಚನೆ ನೀಡಿದ್ದಾರೆ.