Tag: Biporjoy Cyclone

  • ರಾಜ್ಯದ ಹವಾಮಾನ ವರದಿ: 19-06-2023

    ರಾಜ್ಯದ ಹವಾಮಾನ ವರದಿ: 19-06-2023

    ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಒಳನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ, ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 31-21
    ಶಿವಮೊಗ್ಗ: 32-23
    ಬೆಳಗಾವಿ: 32-22
    ಮೈಸೂರು: 32-22

    ಮಂಡ್ಯ: 32-22 ಮಳೆ
    ಮಡಿಕೇರಿ: 24-18
    ರಾಮನಗರ: 32-22
    ಹಾಸನ: 29-21
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 30-21

    ಕೋಲಾರ: 31-22
    ತುಮಕೂರು: 32-22
    ಉಡುಪಿ: 31-26
    ಕಾರವಾರ: 31-27
    ಚಿಕ್ಕಮಗಳೂರು: 28-20
    ದಾವಣಗೆರೆ: 34-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 34-23
    ಹಾವೇರಿ: 34-24
    ಬಳ್ಳಾರಿ: 37-25
    ಗದಗ: 36-23
    ಕೊಪ್ಪಳ: 37-24

    ರಾಯಚೂರು: 38-27
    ಯಾದಗಿರಿ: 39-28
    ವಿಜಯಪುರ: 38-24
    ಬೀದರ್: 38-26
    ಕಲಬುರಗಿ: 39-27
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ: 17-06-2023

    ರಾಜ್ಯದ ಹವಾಮಾನ ವರದಿ: 17-06-2023

    ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಅಬ್ಬರದ ಮಧ್ಯೆ ಕರ್ನಾಟಕಕ್ಕೆ ಮುಂಗಾರಿನ ಮೇಘಸ್ಫೋಟದ ಮುನ್ಸೂಚನೆ ಸಿಕ್ಕಿದೆ. ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ವರುಣಾರ್ಭಟದ ಹೈಅಲರ್ಟ್ ಘೋಷಿಸಿಲಾಗಿದೆ. ಜೂನ್ 18ರ ಬಳಿಕ ಮುಂಗಾರು ಪ್ರಬಲವಾಗಲಿದ್ದು ಜೂನ್ 21ರ ವರೆಗೆ ಮಳೆಯಾಗಲಿದೆ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಮಳೆಯಾರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಜೂನ್ 18, 19ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ. 2-3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದ್ದು, 65-110 ಎಂಎಂ ಮಳೆಯಾಗುವ ಸಾಧ್ಯತೆಯಿದೆ. ಜೂನ್ 18 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಹಾಗೂ ಜೂನ್ 19 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರಿಗೆ ಭಾರೀ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ 39 ಡಿಗ್ರಿ, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-21
    ಮಂಗಳೂರು: 31-26
    ಶಿವಮೊಗ್ಗ: 32-23
    ಬೆಳಗಾವಿ: 30-22
    ಮೈಸೂರು: 33-22

    ಮಂಡ್ಯ: 34-23
    ಮಡಿಕೇರಿ: 25-18
    ರಾಮನಗರ: 38-26
    ಹಾಸನ: 31-21
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 33-21

    ಕೋಲಾರ: 34-22
    ತುಮಕೂರು: 34-22
    ಉಡುಪಿ: 32-26
    ಕಾರವಾರ: 32-27
    ಚಿಕ್ಕಮಗಳೂರು: 29-19
    ದಾವಣಗೆರೆ: 35-23

    weather

    ಹುಬ್ಬಳ್ಳಿ: 33-23
    ಚಿತ್ರದುರ್ಗ: 35-22
    ಹಾವೇರಿ: 34-23
    ಬಳ್ಳಾರಿ: 38-28
    ಗದಗ: 36-23
    ಕೊಪ್ಪಳ: 37-24

    weather

    ರಾಯಚೂರು: 39-27
    ಯಾದಗಿರಿ: 39-27
    ವಿಜಯಪುರ: 37-24
    ಬೀದರ್: 37-25
    ಕಲಬುರಗಿ: 39-26
    ಬಾಗಲಕೋಟೆ: 37-24

  • ರಾಜ್ಯದ ಹವಾಮಾನ ವರದಿ: 16-06-2023

    ರಾಜ್ಯದ ಹವಾಮಾನ ವರದಿ: 16-06-2023

    ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಅಬ್ಬರದ ಮಧ್ಯೆ ಕರ್ನಾಟಕಕ್ಕೆ ಮುಂಗಾರಿನ ಮೇಘಸ್ಫೋಟದ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಈ ವೀಕೆಂಡ್‌ನಲ್ಲಿ ಬೆಂಗಳೂರಿನಲ್ಲಿ ವರುಣಾರ್ಭಟದ ಹೈಅಲರ್ಟ್ ಘೋಷಿಸಿಲಾಗಿದೆ. ಇದುವರೆಗೆ ಮುಂಗಾರು ದುರ್ಬಲದ ಪರಿಣಾಮವಾಗಿ ರಾಜ್ಯಾದ್ಯಂತ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಆದರೀಗ ಹವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜೂನ್ 18ರ ಬಳಿಕ ಮುಂಗಾರು ಪ್ರಬಲವಾಗಲಿದ್ದು ಜೂನ್ 21ರ ವರೆಗೆ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಮಳೆಯಾರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಮೇಸ್ಫೋಟ:
    ಜೂನ್ 18, 19ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ. 2-3 ದಿನಗಳ ಕಾಲ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, 65-110 ಎಂಎಂ ಮಳೆಯಾಗುವ ಸಾಧ್ಯತೆಯಿದೆ. ಜೂನ್ 18 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಹಾಗೂ ಜೂನ್‌ 19 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರಿಗೆ ಭಾರೀ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ 39 ಡಿಗ್ರಿ, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-21
    ಮಂಗಳೂರು: 32-26
    ಶಿವಮೊಗ್ಗ: 34-23
    ಬೆಳಗಾವಿ: 31-22
    ಮೈಸೂರು: 34-21

    ಮಂಡ್ಯ: 34-22
    ಮಡಿಕೇರಿ: 26-18
    ರಾಮನಗರ: 34-22
    ಹಾಸನ: 31-20
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-22
    ತುಮಕೂರು: 34-21
    ಉಡುಪಿ: 32-27
    ಕಾರವಾರ: 32-27
    ಚಿಕ್ಕಮಗಳೂರು: 30-19
    ದಾವಣಗೆರೆ: 36-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 35-22
    ಹಾವೇರಿ: 35-23
    ಬಳ್ಳಾರಿ: 38-25
    ಗದಗ: 36-23
    ಕೊಪ್ಪಳ: 37-24

    weather

    ರಾಯಚೂರು: 39-26
    ಯಾದಗಿರಿ: 39-26
    ವಿಜಯಪುರ: 37-24
    ಬೀದರ್: 38-25
    ಕಲಬುರಗಿ: 39-26
    ಬಾಗಲಕೋಟೆ: 38-25

  • ರಾಜ್ಯದ ಹವಾಮಾನ ವರದಿ: 15-06-2023

    ರಾಜ್ಯದ ಹವಾಮಾನ ವರದಿ: 15-06-2023

    ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಅಬ್ಬರ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮರ‍್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಮಿಂಚಿನ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಸುಮಾರು 60 ರಿಂದ 65 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಎಚ್ಚರಿಕೆಯಿಂದಿರುವಂತೆ ಹವಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ 39 ಡಿಗ್ರಿ, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-21
    ಮಂಗಳೂರು: 32-26
    ಶಿವಮೊಗ್ಗ: 33-23
    ಬೆಳಗಾವಿ: 31-22
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 26-18
    ರಾಮನಗರ: 34-22
    ಹಾಸನ: 30-20
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 33-20

    ಕೋಲಾರ: 34-22
    ತುಮಕೂರು: 34-21
    ಉಡುಪಿ: 32-26
    ಕಾರವಾರ: 32-27
    ಚಿಕ್ಕಮಗಳೂರು: 29-19
    ದಾವಣಗೆರೆ: 35-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 35-22
    ಹಾವೇರಿ: 35-24
    ಬಳ್ಳಾರಿ: 38-24
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 39-26
    ಯಾದಗಿರಿ: 39-26
    ವಿಜಯಪುರ: 37-24
    ಬೀದರ್: 38-24
    ಕಲಬುರಗಿ: 39-26
    ಬಾಗಲಕೋಟೆ: 37-24

  • ರಾಜ್ಯದ ಹವಾಮಾನ ವರದಿ: 14-06-2023

    ರಾಜ್ಯದ ಹವಾಮಾನ ವರದಿ: 14-06-2023

    ಅರಬ್ಬೀ ಸಮುದ್ರದಲ್ಲಿ ಬಿಪರ್‌ ಜಾಯ್‌ ಚಂಡಮಾರುತದ ಅಬ್ಬರ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೂ 5 ದಿನಗಳ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಮಿಂಚಿನ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಸುಮಾರು 60 ರಿಂದ 65 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಎಚ್ಚರಿಕೆಯಿಂದಿರುವಂತೆ ಹವಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-21
    ಮಂಗಳೂರು: 32-26
    ಶಿವಮೊಗ್ಗ: 33-23
    ಬೆಳಗಾವಿ: 30-22
    ಮೈಸೂರು: 33-21

    ಮಂಡ್ಯ: 34-22
    ಮಡಿಕೇರಿ: 24-18
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 32-20

    ಕೋಲಾರ: 33-22
    ತುಮಕೂರು: 33-21
    ಉಡುಪಿ: 32-26
    ಕಾರವಾರ: 31-27
    ಚಿಕ್ಕಮಗಳೂರು: 28-19
    ದಾವಣಗೆರೆ: 35-23

    ಹುಬ್ಬಳ್ಳಿ: 33-23
    ಚಿತ್ರದುರ್ಗ: 34-22
    ಹಾವೇರಿ: 33-23
    ಬಳ್ಳಾರಿ: 38-25
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 39-26
    ಯಾದಗಿರಿ: 38-26
    ವಿಜಯಪುರ: 37-24
    ಬೀದರ್: 37-24
    ಕಲಬುರಗಿ: 39-26
    ಬಾಗಲಕೋಟೆ: 37-24

  • ರಾಜ್ಯದ ಹವಾಮಾನ ವರದಿ: 13-06-2023

    ರಾಜ್ಯದ ಹವಾಮಾನ ವರದಿ: 13-06-2023

    ಅರಬ್ಬೀ ಸಮುದ್ರದಲ್ಲಿ ಬಿಪೊರ್‌ಜೊಯ್ ಚಂಡಮಾರುತದ ಅಬ್ಬರ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿಯೊಂದಿಗೆ ಮಳೆ ಸುರಿಯಲಿದೆ. ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-21
    ಮಂಗಳೂರು: 32-26
    ಶಿವಮೊಗ್ಗ: 33-23
    ಬೆಳಗಾವಿ: 31-22
    ಮೈಸೂರು: 31-22

    weather

    ಮಂಡ್ಯ: 33-22
    ಮಡಿಕೇರಿ: 25-18
    ರಾಮನಗರ: 33-22
    ಹಾಸನ: 29-21
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 32-21

    weather

    ಕೋಲಾರ: 33-22
    ತುಮಕೂರು: 33-21
    ಉಡುಪಿ: 32-26
    ಕಾರವಾರ: 31-27
    ಚಿಕ್ಕಮಗಳೂರು: 28-19
    ದಾವಣಗೆರೆ: 35-24

    weather

    ಹುಬ್ಬಳ್ಳಿ: 33-23
    ಚಿತ್ರದುರ್ಗ: 34-22
    ಹಾವೇರಿ: 34-24
    ಬಳ್ಳಾರಿ: 38-25
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 39-26
    ಯಾದಗಿರಿ: 39-27
    ವಿಜಯಪುರ: 37-24
    ಬೀದರ್: 37-25
    ಕಲಬುರಗಿ: 39-26
    ಬಾಗಲಕೋಟೆ: 37-24

  • ರಾಜ್ಯದ ಹವಾಮಾನ ವರದಿ: 12-06-2023

    ರಾಜ್ಯದ ಹವಾಮಾನ ವರದಿ: 12-06-2023

    ರಬ್ಬೀ ಸಮುದ್ರದಲ್ಲಿ ಬಿಪೊರ್‌ಜೊಯ್ ಚಂಡಮಾರುತದ ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಇಂದು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇನ್ನೆರಡು ದಿನಗಳ ಕಾಲ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗಾಳಿಯ ವೇಗವು ಘಂಟೆಗೆ 45-55 ಕಿಮೀ ತಲುಪಬಹುದಾಗಿದ್ದು, ಈ ಹಿನ್ನಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-21
    ಮಂಗಳೂರು: 32-26
    ಶಿವಮೊಗ್ಗ: 33-23
    ಬೆಳಗಾವಿ: 31-22
    ಮೈಸೂರು: 31-22

    ಮಂಡ್ಯ: 33-22
    ಮಡಿಕೇರಿ: 26-19
    ರಾಮನಗರ: 33-22
    ಹಾಸನ: 29-21
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 32-21

    ಕೋಲಾರ: 33-22
    ತುಮಕೂರು: 33-22
    ಉಡುಪಿ: 32-26
    ಕಾರವಾರ: 31-27
    ಚಿಕ್ಕಮಗಳೂರು: 28-20
    ದಾವಣಗೆರೆ: 35-23

    ಹುಬ್ಬಳ್ಳಿ: 33-23
    ಚಿತ್ರದುರ್ಗ: 34-22
    ಹಾವೇರಿ: 34-23
    ಬಳ್ಳಾರಿ: 38-25
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 38-26
    ಯಾದಗಿರಿ: 39-26
    ವಿಜಯಪುರ: 37-24
    ಬೀದರ್: 37-25
    ಕಲಬುರಗಿ: 38-26
    ಬಾಗಲಕೋಟೆ: 37-24

  • ಬಿಪರ್ಜೋಯ್ ಚಂಡಮಾರುತ ಎಫೆಕ್ಟ್- ಅಲೆಯ ಅಬ್ಬರಕ್ಕೆ ಯುವತಿಯರು ತಬ್ಬಿಬ್ಬು

    ಬಿಪರ್ಜೋಯ್ ಚಂಡಮಾರುತ ಎಫೆಕ್ಟ್- ಅಲೆಯ ಅಬ್ಬರಕ್ಕೆ ಯುವತಿಯರು ತಬ್ಬಿಬ್ಬು

    ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಬಿಪರ್ಜೋಯ್ ಚಂಡಮಾರುತ (Biporjoy Cyclone) ದ ಪರಿಣಾಮ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮಳೆ (Rain In Dakshina Kannada) ಯಾಗಿದ್ದು, ಪ್ರಕ್ಷುಬ್ಧಗೊಂಡಿದೆ. ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮುದ್ರ ತೀರಕ್ಕೆ ಜನರು ಹೋಗದಂತೆ ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಗಂಟೆಗೆ 40-50ಕೀಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಣಿಯನ್ನು ಕೂಡ ಜಿಲ್ಲಾಡಳಿತ ತೆರೆದಿದೆ.

    ಕಡಲ ತೀರಕ್ಕೆ ಹೋಗದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಕಡಲ ತೀರದಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಕಡಲ ಅಬ್ಬರದ ಜೊತೆ ಫೋಟೋಗೆ ಫೋಸ್ ಕೊಡುತ್ತಿದ್ದ ಯುವತಿಯರ ಮೇಲೇಯೇ ರಕ್ಕಸ ಗಾತ್ರದ ಅಲೆ ಅಪ್ಪಳಿಸಿದೆ. ಅಲೆಯ ಅಬ್ಬರಕ್ಕೆ ಯುವತಿಯರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಕೊನೆಗೆ ಯುವತಿಯರನ್ನು ದಡದಿಂದ ಜಾಗ ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯ ಕರಾವಳಿಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಆರಂಭಗೊಂಡಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯಾಗಿದೆ. ಈ ಮೂಲಕ ನೀರಿನ ಅಭಾವ ಎದುರಿಸುತ್ತಿದ್ದ ಜಿಲ್ಲೆಯ ಜನತೆಗೆ ಖುಷಿ ತಂದಿದೆ. ಇದನ್ನೂ ಓದಿ: ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

  • ಬಿಪೊರ್‌ಜೊಯ್‌ ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

    ಬಿಪೊರ್‌ಜೊಯ್‌ ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಬಿಪೊರ್‌ಜೊಯ್‌ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗಿತ್ತು. ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಲಕ್ಷದೀಪ ಸಮೂಹಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ರಾಜಸ್ಥಾನ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಚಂಡಮಾರುತದ ಎಫೆಕ್ಟ್‌ ರಾಜ್ಯದ 9 ಜಿಲ್ಲೆಗಳಿಗೆ ತಟ್ಟಲಿದೆ. ಮುಂದಿನ 3 ದಿನಗಳ ಕಾಲ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗವು ಘಂಟೆಗೆ 30-40 ಕಿಮೀ ತಲುಪಬಹುದು ಎಂದು ಎಚ್ಚರಿಸಿದೆ.

    ಗರಿಷ್ಠ ಉಷ್ಣಾಂಶವು ರಾಜ್ಯದಾದ್ಯಂತ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ಕಿಮೀನಿಂದ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ಹಿನ್ನಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

    ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆ ಮುನ್ಸೂಚನೆ ನೀಡಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.