Tag: Bipasha Basu

  • ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯನ್ನ ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ನಟಿ ಬಿಪಾಶಾ ಮತ್ತು ಕರಣ್ ಪರಸ್ಪರ ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಏಪ್ರಿಲ್ 30, 2016ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ವರ್ಷಗಳ ನಂತರ ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನ ಅಭಿಮಾನಿಗಳ ಜತೆ ಬೇಬಿ ಬಂಪ್ ಫೋಟೋಶೂಟ್ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಬೋಲ್ಡ್ ಅವತಾರ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಶಾಕಿಂಗ್‌ ನ್ಯೂಸ್‌ ಕೊಟ್ರು ನಯನತಾರಾ

     

    View this post on Instagram

     

    A post shared by Bipasha Basu (@bipashabasu)

    ಬಿಪಾಶಾ ಬಸು ಟ್ರಾನ್ಸ್ಪರೆಂಟ್ ಉಡುಗೆಯಲ್ಲಿ ಮತ್ತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ. ಸದ್ಯ ಫೋಟೋಶೂಟ್ ಮೂಲಕ ನಟಿ ಬಿಪಾಶಾ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಪಾಶಾ ಬಸು ದಂಪತಿ

    ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಪಾಶಾ ಬಸು ದಂಪತಿ

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಬಿಪಾಶಾ ಬಸು ಸದ್ಯ ತಾಯಿಯಾಗಿರುವ ಖುಷಿಯಲ್ಲಿದ್ದಾರೆ. ಬಿಪಾಶಾ ಮತ್ತು ಕರಣ್ ದಂಪತಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜೋಡಿ ಬಿಪಾಶಾ ಮತ್ತು ಕರಣ್ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬಿಪಾಶಾ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮಿಬ್ಬರಿಗೆ ಹೆಣ್ಣು ಮಗು ಬೇಕು. ಅವಳ ನಿರೀಕ್ಷೆಯಲ್ಲಿದ್ದೇವೆ ಎಂದು ಬಿಪಾಶಾ ಮಾತನಾಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಮದುವೆಯಾಗಿ ಸಾಕಷ್ಟು ವರ್ಷಗಳಾಗಿದ್ದರು ಪೋಷಕರಾಗುವ ಬಗ್ಗೆ ನಾವು ಚಿಂತಿಸಿರಲಿಲ್ಲ. ಇದೀಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದೇವೆ ಇದಕ್ಕೆಲ್ಲ ಕಾರಣ ಅವಳು ನಮ್ಮ ಮಗಳು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

     

    View this post on Instagram

     

    A post shared by Bipasha Basu (@bipashabasu)

    ಇನ್ನು ಇತ್ತೀಚಿಗೆ ಪತಿ ಕರಣ್ ಜೊತೆ ಬಿಪಾಶಾ ಬಸು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಶೂಟ್ ಸಖತ್ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಿಪಾಶಾ ಬಸು ಪ್ರೆಗ್ನೆಂಟ್, ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ನಟಿ

    ಬಿಪಾಶಾ ಬಸು ಪ್ರೆಗ್ನೆಂಟ್, ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ನಟಿ

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಬಿಪಾಶಾ ಬಸು ತಮ್ಮ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಬಿಪಾಶಾ ತಾಯಿತ್ತನದ ಖುಷಿಯಲ್ಲಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಅವಕಾಶಗಳು ಅರಸಿ ಬರುತ್ತಿರುವಾಗಲೇ ಹಸೆಮಣೆ ಏರಿದ ನಟಿ ಬಿಪಾಶಾ ಬಸು, 2016ರಲ್ಲಿ ಸಹನಟ ಕರಣ್ ಸಿಂಗ್ ಅವರ ಜತೆ ಬಿಪಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದರು. ಇದೀಗ ಬಿಪಾಶಾ ದಂಪತಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಇದನ್ನೂ ಓದಿ:`ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

     

    View this post on Instagram

     

    A post shared by bipashabasusinghgrover (@bipashabasu)


    ನಾವೀಗ ಇಬ್ಬರಲ್ಲ, ಮೂವರು ಎಂದು ಗುಡ್ ನ್ಯೂಸ್ ಹೇಳಿ, ಪತಿ ಜತೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳಿಗೆ ಅಧಿಕೃತವಾಗಿ ತಾವು ತಾಯಿ ಆಗುತ್ತಿರೋದರ ಸಿಹಿ ಸುದ್ದಿಯನ್ನ ತಿಳಿಸಿದ್ದಾರೆ. ಸದ್ಯ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು ದಂಪತಿ

    ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾದ ಒಂದಾಗಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷಿಯಲ್ಲಿ ಬಿಪಾಶಾ ಬಸು ದಂಪತಿ ಇದ್ದಾರೆ.

    ಬಿಟೌನ್‌ನ ಸಾಕಷ್ಟು ಸಿನಿಮಾಗಳಲ್ಲಿ ಸಂಚಲನ ಮೂಡಿಸಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್, ಮೊದಲು ಭೇಟಿಯಾಗಿದ್ದು, ಅಲೋನ್ ಸಿನಿಮಾದ ಚಿತ್ರೀಕರಣದಲ್ಲಿ. ಈ ಚಿತ್ರದಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದರು. ಈ ಗಳೆತನವೇ ಪ್ರೀತಿಯಾಗಿ, 2016ರಲ್ಲಿ ಬಿಪಾಶಾ ಮತ್ತು ಕರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

     

    View this post on Instagram

     

    A post shared by bipashabasusinghgrover (@bipashabasu)

    ಸಾಕಷ್ಟು ಸಿನಿಮಾಗಳಲ್ಲಿ ಮೋಡಿ ಮಾಡಿರುವ ಬಿಪಾಶಾ ಮತ್ತು ಕರಣ್ ಸಿಂಗ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೊಸ ಅತಿಥಿ ಆಗಮನದ ಖುಷಿಯಲ್ಲಿರುವ ಈ ಜೋಡಿ ಸದ್ಯದಲ್ಲಿಯೇ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗುತ್ತಾ ಅವಕಾಶ?

    ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗುತ್ತಾ ಅವಕಾಶ?

    ಲ್ಮಾನ್ ಖಾನ್ ಮತ್ತು ಇತರರು ನಟಿಸಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕರು. 2005ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್ ನಟಿಸಿದ್ದಾರೆ. ಈ ಬಾರಿ ಅಷ್ಟೂ ಪಾತ್ರಗಳು ತ್ರಿಪಾತ್ರಗಳು ಎನ್ನಲಾಗುತ್ತಿದ್ದು, ಪ್ರತಿ ಪಾತ್ರಕ್ಕೂ ಒಬ್ಬೊಬ್ಬ ಹಿರೋಯಿನ್ ಇರಲಿದ್ದಾರೆ. ಅಲ್ಲಿಗೆ ಒಂಬತ್ತು ನಾಯಕಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೋರ್ವ ನಟಿ ಕೂಡ ವಿಶೇಷ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.  

    ನಿರ್ದೇಶಕ ಅನೀಸ್ ಬಾಜ್ಮಿ ಹೇಳುವಂತೆ ಈ ಹಿಂದೆ ನೋ ಎಂಟ್ರಿ ಸಿನಿಮಾದಲ್ಲಿ ನಟಿಸಿದ್ದ, ಅಷ್ಟೂ ಕಲಾವಿದರು ಸಿಕ್ವೆಲ್‌ನಲ್ಲಿ ನಟಿಸಲು ಉತ್ಸುಕರಾಗಿದ್ದು, ಶೀಘ್ರದಲ್ಲೇ ಹಲವು ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಶೂಟಿಂಗ್ ಶುರು ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈಗಾಗಲೇ ಹಲವರೊಂದಿಗೆ ಮಾತುಕತೆ ಕೂಡ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಹೊಸ ಚಿತ್ರಕ್ಕೆ ನೋ ಎಂಟ್ರಿ ಮೇ ಎಂಟ್ರಿ ಎಂದು ಹೆಸರಿಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    salman

    ಇಶಾ ಡಿಯೋಲ್, ಬಿಪಾಶಾ ಬಸು, ಸೆಲಿನಾ ಜೇಟ್ಲಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ಸ್ಯಾಂಡಲ್‌ವುಡ್ ಮೂಲಕ ನಾಯಕಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೇ, ದಕ್ಷಿಣದ ಕೆಲವು ತಾರೆಯರು ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ಸಲ್ಮಾನ್ ಖಾನ್ ಕಭಿ ಈದ್ ಕಭಿ ದೀವಾಲಿ ಚಿತ್ರೀಕರಣದಲ್ಲಿದ್ದು, ಈ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಹಾಗಾಗಿ ದಕ್ಷಿಣದ ತಾರೆಯರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. 

     

    Live Tv

  • ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ: ಬಿಪಾಶಾ ಬಸು

    ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ: ಬಿಪಾಶಾ ಬಸು

    ಮುಂಬೈ: ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಹೇಳಿದರು.

    ನಟರಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಪರಸ್ಪರ ಪ್ರೀತಿಸುತ್ತಿದ್ದು, 2016 ಏಪ್ರಿಲ್ 30 ರಂದು ಬಂಗಾಳಿ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಕರಣ್‍ರವರ ಎರಡು ಹಿಂದಿನ ವಿವಾಹಗಳು ವಿಫಲವಾಗಿದ್ದ ಕಾರಣ ಬಿಪಾಶಾರವರ ಹೆತ್ತವರು ಈ ವಿವಾಹದ ಕುರಿತು ಮತ್ತು ಅವರ ಆಯ್ಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದು ಬಿಪಾಶಾ ಬಹಿರಂಗಪಡಿಸಿದ್ದಾರೆ. ‘ಕುಬೂಲ್ ಹೈ’ ಚಿತ್ರದ ಖ್ಯಾತ ನಟ ಮೊದಲು ಶ್ರದ್ಧಾ ನಿಗಮ್ ಮತ್ತು ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

     

    View this post on Instagram

     

    A post shared by bipashabasusinghgrover (@bipashabasu)

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಿಪಾಶಾ ತಮ್ಮ ಪ್ರಸ್ತುತ ದಾಂಪತ್ಯ ಜೀವನದ ಹಿಂದಿನ ಕೆಲ ಕರಾಳ ನೆನಪುಗಳ ಬಗ್ಗೆ ಮಾತನಾಡಿ, ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಖಂಡಿಸಬೇಕು ಅಂತ ಅಲ್ಲ. ನಾನು ಇಷ್ಟಪಟ್ಟಂತಹ ವ್ಯಕ್ತಿತ್ವವುಳ್ಳ ಹುಡುಗ ನನಗೆ ಸಿಕ್ಕಿದ್ದಾನೆ. ನನ್ನ ಆಯ್ಕೆಯ ಸಂಬಂಧವು ಯಾವಾಗಲೂ ದೀರ್ಘಾವಧಿಯವರೆಗೆ ಇರಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದರು.

     

    View this post on Instagram

     

    A post shared by bipashabasusinghgrover (@bipashabasu)

    ನಾನು ರಿಜಿಸ್ಟರ್ ಆಫೀಸಿನ ಕಾಗದದ ತುಂಡಿಗೆ ಸಹಿ ಮಾಡಲಿಲ್ಲ. ಮದುವೆಯ ಮೊದಲಿನ ಯಾವ ಸಂಬಂಧಗಳು ಗಟ್ಟಿ ಇರಲು ಸಾಧ್ಯವಿಲ್ಲ. ಇದು ದುರದೃಷ್ಟಕರ ಆದರೆ ದೀರ್ಘಾವಧಿಯ ಸಂಬಂಧಗಳ ಕೆಲ ನೆನಪುಗಳನ್ನು ನೀವು ಹಿಂದಿರುಗಿ ನೋಡಿದಾಗ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಏನಾದರೂ ಒಂದು ಮರೆಯಲಾಗದ ಘಟನೆ ಸಂಭವಿಸಿರುತ್ತದೆ ಎಂದು ಕರಣ್ ಮತ್ತು ಅವರ ಪೋಷಕರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆ ತಿಳಿ ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಬಿಪಾಶಾ ಕರಣ್‍ರವರನ್ನ ವಿವಾಹವಾಗುವ ಮೊದಲು, ಜಾನ್ ಅಬ್ರಹಾಂ ಜೊತೆ ಸಂಬಂಧದಲ್ಲಿದ್ದರು. ಇಬ್ಬರೂ 9 ವರ್ಷಗಳ ಕಾಲ ಡೇಟಿಂಗ್ ಕೂಡಾ ನಡೆಸಿದ್ದರು. ನಂತರ 2011ರಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.

  • ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂದವರು ಶಾಕ್ ಆಗಿದ್ದು, ಎಲ್ಲರೂ ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, “ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್‍ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.

    “ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸುಶಾಂತ್ ಕುಟುಂಬದವರಿಗೆ ನಟ ಅಜಯ್ ದೇವಗನ್ ಸಂತಾಪ ಸೂಚಿಸಿದರು.

    “ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

    ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

    ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಪ್ರೇಮಿಗಳ ದಿನದಂದು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೆ ಮುತ್ತು ನೀಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ಬಿಪಾಶಾ ತಮ್ಮ ಪತಿ ಕರಣ್ ಬರೆದಿರುವ ಪ್ರೇಮ ಪತ್ರವನ್ನು ಓದುತ್ತಿದ್ದಾರೆ. ಬಳಿಕ ಖುಷಿಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತು ನೀಡಿದ್ದಾರೆ. ಈ ವಿಡಿಯೋ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ಬಿಪಾಶಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ನಾನು ಈ ದಿನಕ್ಕಾಗಿ ಪ್ರತಿ ವರ್ಷ ಕಾಯುತ್ತೇನೆ. ನಾನು ಪ್ರಪಂಚದ ಲಕ್ಕಿಯೆಷ್ಟ್ ಮಹಿಳೆ. ಕರಣ್ ನನಗೆ ಪ್ರತಿ ದಿನ ಪ್ರತಿ ಕ್ಷಣ ಸ್ಪೆಷಲ್ ಆಗಿ ಫೀಲ್ ಮಾಡಿಸುತ್ತಾನೆ” ಎಂದು ಬರೆದುಕೊಂಡಿದ್ದರು.

    ಬಿಪಾಶಾ ಬಸು ಅವರ ‘ಅಲೋನ್’ ಸಿನಿಮಾಗೆ ಕರಣ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ ವೇಳೆ ಇಬ್ಬರ ನಡುವೆ ಪ್ರೀತಿಯಲ್ಲಿ ಬೆಳೆದಿತ್ತು. ಬಳಿಕ 2016ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ನಿ, ಬಿಪಾಶಾ ಜಾಹೀರಾತಿನ ಕಾಂಡೋಮ್ ಬಳಸ್ಬೇಡಿ: ರಾಖಿ ಸಾವಂತ್

    ಸನ್ನಿ, ಬಿಪಾಶಾ ಜಾಹೀರಾತಿನ ಕಾಂಡೋಮ್ ಬಳಸ್ಬೇಡಿ: ರಾಖಿ ಸಾವಂತ್

    -ನನ್ನ ಕಾಂಡೋಮ್ ಯಾರಿಗೂ ಮೋಸ ಮಾಡಲ್ಲ

    ಮುಂಬೈ: ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ. ಸದ್ಯ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಜಾಹೀರಾತಿನ ಕಾಂಡೋಮ್ ಗಳನ್ನು ಬಳಸಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

    ಸನ್ನಿ ಲಿಯೋನ್, ಬಿಪಾಶಾ ಮತ್ತು ನಾನು ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇವೆ. ಆದ್ರೆ ನೀವುಗಳು ಮಾತ್ರ ನಾನು ತೋರಿಸುವ ಕಾಂಡೋಮ್ ಬಳಸಬೇಕು. ನನ್ನ ಕಾಂಡೋಮ್ ಗಳು ಯಾರಿಗೂ ಮೋಸ ಮಾಡಲ್ಲ. ನೋಡಿ ನನ್ನ ಪರ್ಸ್ ನಲ್ಲಿಯೂ ಕಾಂಡೋಮ್ ಇದೆ. ಪಾಕೆಟ್ ಮೇ ರಾಕೆಟ್ ಎಂದು ಡೈಲಾಗ್ ಹೊಡೆದಿರುವ ರಾಖಿ ಸಾವಂತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆಗೆ ಶುಭಕೋರುವಾಗ, ನಾನು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಕಾಂಡೋಮ್ ಗಳನ್ನೇ ಬಳಸಿ ಎಂಬ ಉಚಿತ ಸಲಹೆಯನ್ನು ನೀಡಿದ್ದರು. ಬಾಬಾ ರಾಮ್‍ದೇವ್ `ಪತಂಜಲಿ’ ಬ್ರಾಂಡ್ ಮೂಲಕ ಎಲ್ಲ ಉತ್ಪನ್ನಗಳನ್ನು ಉತ್ಪಾದಿಸುತ್ತಾ ತಮ್ಮ ಕಂಪೆನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಾಬಾ ರಾಮ್‍ದೇವ್ ಜೀ, ಜನರು ಪತಂಜಲಿ ಕಾಂಡೋಮ್ ಹೇಗಿರುತ್ತೆ ಎಂಬ ಕುತೂಹಲವನ್ನು ಜನರು ಹೊಂದಿದ್ದಾರೆ. ಆದಷ್ಟು ಬೇಗ ನಿಮ್ಮ ಕಂಪೆನಿಯಿಂದ `ಪತಂಜಲಿ ಕಾಂಡೋಮ್’ ತಯಾರಿಸಿ ಅಂತಾ ರಾಖಿ ಸಾವಂತ್ ಚಾಲೆಂಜ್ ಹಾಕಿದ್ದರು.

    ಈ ಹಿಂದೆ ಸನ್ನಿ ಲಿಯೋನ್ ನನ್ನ ಫೋನ್ ನಂಬರನ್ನು ವಯಸ್ಕರ ಚಿತ್ರರಂಗದವರಿಗೆ(ಪೋರ್ನ್ ಫಿಲ್ಮ್ ಜನರಿಗೆ) ನೀಡಿದ್ದಾರೆ. ನನಗೆ ಕರೆ ಮಾಡಿದ ಕೆಲವರು ನನ್ನನ್ನು ಪೋರ್ನ್ ಫಿಲ್ಮ್ ಗಳಲ್ಲಿ ನಟಿಸಲು ಆಹ್ವಾನಿಸಿದ್ದಾರೆ. ನನ್ನ ನಂಬರ್ ನಿಮಗೆ ಯಾರು ಕೊಟ್ಟರು ಅಂತಾ ಕೇಳಿದ್ದಕ್ಕೆ ಆ ವ್ಯಕ್ತಿ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ ಅಂತಾ ರಾಖಿ ಸಾವಂತ್ ಆರೋಪಿಸಿದ್ದರು.

    ನಾನು ಸಾಯುತ್ತೇನೆ ವಿನಃ ಸೆಕ್ಸ್ ಫಿಲ್ಮ್ ಗಳಲ್ಲಿ ನಟಿಸಲಾರೆ. ನಾನು ಭಾರತೀಯ ಮಹಿಳೆಯಾಗಿದ್ದು, ಸಮಾಜದ ಮೌಲ್ಯಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದೇನೆ. ಬಿ-ಟೌನ್ ಗೆ ಒಳ್ಳೆಯ ಸಿನಿಮಾಗಳನ್ನು ನೀಡಿದ್ದೇನೆ. ನಾನು ನಟಿಸಿರುವ ಚಿತ್ರಗಳನ್ನು ಫ್ಯಾಮಿಲಿ ಜೊತೆ ನೋಡಬಹುದು. ನನಗೆ ಕರೆ ಮಾಡಿದ ವ್ಯಕ್ತಿ, ನನ್ನ ಮೊಬೈಲ್ ನಂಬರ್ ಸನ್ನಿ ನೀಡಿದ್ದಾಳೆ ಅಂತಾ ಹೇಳಿದನು ಅಂತಾ ರಾಖಿ ಸಾವಂತ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H5czxhtkyzI&feature=youtu.be&a=

  • ಬಾಲಿವುಡ್ ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು!

    ಬಾಲಿವುಡ್ ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು!

    ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ತೀವ್ರ ಉಸಿರಾಟದ ಸಮಸ್ಯೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇತ್ತೀಚೆಗೆ ಬಿಪಾಶಾ ಬಸು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೇ ಆಗಾಗ ಆಸ್ಪತ್ರೆಗೂ ಕೂಡ ಭೇಟಿ ನೀಡುತ್ತಿದ್ದರು. ಆದರೆ ಈಗ ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಆಸ್ಪತ್ರೆಯಲ್ಲೇ ದಾಖಲಾಗಿದ್ದಾರೆ.

    ಬಿಪಾಶಾ ಆರೋಗ್ಯದ ಬಗ್ಗೆ ಆಕೆಯ ಕುಟುಂಬದವರಾಗಲೀ ಅಥವಾ ಸ್ನೇಹಿತರಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಸದ್ಯ ಬಿಪಾಶಾ ಅವರನ್ನು ಎಲ್ಲಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ.