Tag: bindu

  • ಮುತ್ತಿಟ್ಟಿದ್ದು ಬಿಂದುಗಲ್ಲ, ಹೊಸ ಗರ್ಲ್ ಫ್ರೆಂಡ್ ಹರಿತಾಗೆ : ಎಡವಟ್ಟು ಮಾಡಿಕೊಂಡ ನಟ

    ಮುತ್ತಿಟ್ಟಿದ್ದು ಬಿಂದುಗಲ್ಲ, ಹೊಸ ಗರ್ಲ್ ಫ್ರೆಂಡ್ ಹರಿತಾಗೆ : ಎಡವಟ್ಟು ಮಾಡಿಕೊಂಡ ನಟ

    ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದ ರಾಹುಲ್ ರಾಮಕೃಷ್ಣ ತಮ್ಮ ಮದುವೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹುಡುಗಿಯೊಬ್ಬಳಿಗೆ ಮುತ್ತಿಡುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ಕೊನೆಗೂ ಮದುವೆ ಆಗುತ್ತಿದ್ದೇನೆ. ಶೀಘ್ರದಲ್ಲೇ’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಈ ಅಕ್ಷರಗಳನ್ನು ಎಡಿಟ್ ಮಾಡಿ, ಆಗುತ್ತಿದ್ದ ಮುಜಗರವನ್ನು ತಪ್ಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿರುವ ರಾಹುಲ್ ರಾಮಕೃಷ್ಣ, ಮೂಲತಃ ಲೇಖಕರೂ ಹೌದು. ಸೈನ್ಮಾ ಎಂಬ ಕಿರುಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು ಆನಂತರ ಹಲವು ಚಿತ್ರಗಳಲ್ಲಿ ನಟಿಸಿದರು. ಇವರನ್ನು ಹೆಚ್ಚು ಜನಪ್ರಿಯತೆಗೆ ತಂದ ಸಿನಿಮಾ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ್ದ ಅರ್ಜುನ್ ರೆಡ್ಡಿ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ರಾಹುಲ್ ರಾಮಕೃಷ್ಣ ಈ ಹಿಂದೆ ಬಿಂದು ಎಂಬ ಹುಡುಗಿಯೊಂದಿಗೆ ಅಫೇರ್ ಇತ್ತು. ಇಬ್ಬರೂ ಗಾಢವಾಗಿಯೇ ಪ್ರೀತಿಸುತ್ತಿದ್ದರು. ಹಾಗಾಗಿ ರಾಹುಲ್ ಯುವತಿಯೊಬ್ಬಳ ತುಟಿಗೆ ತುಟಿ ಬೆರೆಸಿ ಹಾಕಿದ್ದ ಫೋಟೋವನ್ನು ಬಹುತೇಕರು ಬಿಂದು ಎಂದೇ ನಂಬಿದ್ದರು. ಹೊಸ ಜೋಡಿಗೆ ಶುಭವಾಗಲಿ ಎಂದು ಹಲವು ಸಂದೇಶ ರವಾನಿಸಿದ್ದರು. ಬಿಂದು ಮತ್ತು ನಿಮ್ಮ ಜೀವನ ಸುಖಮಯವಾಗಿರಲಿ ಎಂದೂ ಹಾರೈಸಿದ್ದರು. ಇದನ್ನು ಅರಿತ ರಾಹುಲ್ ತಕ್ಷಣವೇ ಟ್ವಿಟ್ ಅನ್ನು ತಿದ್ದುಪಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ರಾಹುಲ್ ಮದುವೆ ಆಗುತ್ತಿರುವ ಹುಡುಗಿ ಬಿಂದು ಅಲ್ಲವಂತೆ. ಆಕೆ ಹರಿತ ಎಂದು ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ‘ಸಣ್ಣ ತಿದ್ದುಪಡೆ ಅಂದರೆ, ನಾನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಬಿಂದು ಅಲ್ಲ, ಹರಿತ’ ಎಂದು ಅವರೇ ಬರೆದುಕೊಂಡಿದ್ದಾರೆ.

  • ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ

    ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ

    – ಮಾಂಸ ತಿಂದು ಅಯ್ಯಪ್ಪನ ದರ್ಶನ ಪಡೆದ್ರಾ..?

    ಮಡಿಕೇರಿ: ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು 8 ಶತಮಾನದ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಮಹಾನ್ ಸಾಧಕಿಯರು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವೀರಮಣಿಕಂಠನ ಸನ್ನಿಧಿಗೆ ಪ್ರವೇಶಿಸಲು ಸಂಚು ರೂಪಿಸಿರುವ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪ್ರವೇಶಕ್ಕೂ 4 ದಿನಗಳ ಮೊದಲೇ ಅಂದ್ರೆ ಡಿಸೆಂಬರ್ 29ರ ಮಧ್ಯಾಹ್ನ 2 ಗಂಟೆ ವೇಳೆಗೆ ಬಿಂದು ಮತ್ತು ಕನಕದುರ್ಗ ಕೊಡಗಿನ ವಿರಾಜಪೇಟೆಗೆ ಬಂದಿಳಿದಿದ್ದರು. ದೊಡ್ಡೆಟ್ಟಿ ವೃತ್ತದ ಬಳಿಯಿರೋ ಸೀತಾಲಕ್ಷ್ಮೀ ಲಾಡ್ಜ್‍ನಲ್ಲಿ ಬಿಂದು ಹೆಸರಲ್ಲಿ ರೂಂ ಬುಕ್ ಮಾಡಿದ್ರು. ಇವರೊಂದಿಗೆ ಬಂದಿದ್ದ ಪುರುಷ ಇವರನ್ನು ಬಿಟ್ಟು ವಾಪಸ್ ಹೋಗಿದ್ದನು. ಲಾಡ್ಜ್‍ನಲ್ಲಿ ಬಿರಿಯಾನಿ ಅದು ಇದು ಅಂತ ಭರ್ಜರಿ ಮಾಂಸದೂಟ ಮಾಡಿದ್ದ ಈ ಮಹಿಳೆಯರು ಯಾವುದೇ ವೃತ ಪಾಲಿಸಿರಲಿಲ್ಲ. 2 ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಡಿಸೆಂಬರ್ 31ರಂದು ರೂಂ ಖಾಲಿ ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಅಂತ ಲಾಡ್ಜ್ ಮಾಲೀಕ ಹರಿಹರನ್ ತಿಳಿಸಿದ್ದಾರೆ.

    ಬಿಂದು ಮತ್ತು ಕನಕದುರ್ಗ ಅಲ್ಲಿಂದ ನೇರವಾಗಿ ಅಯ್ಯಪ್ಪನ ಸನ್ನಿಧಿಗೆ ಹೊರಟಿದ್ರು. ಕುಟುಂಬದ ಜೊತೆ ಸಂಪರ್ಕದಲ್ಲಿರದೇ ಅಜ್ಞಾತವಾಗಿದ್ದ ಇವರು ಜನವರಿ 2ರಂದು ನಸುಕಿನಲ್ಲಿ ದೇವಾಲಯ ಪ್ರವೇಶಿಸಿದ್ರು. ಶತಶತಮಾನಗಳಿಂದ ವೀರಮಣಿಕಂಠನ ಸನ್ನಿಧಿಯಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮೀರಿ ದೇಶಾದ್ಯಂತ ಸುದ್ದಿಯಾದ್ರು. ಇದನ್ನೂ ಓದಿ:  ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!


    ಈ ಮಹಿಳೆಯರಿಗೆ ನಿಜವಾಗಿಯೂ ಅಯ್ಯಪ್ಪನ ಮೇಲೆ ಭಕ್ತಿ ಇದ್ದಿದ್ದರೆ, ವ್ರತ ಪಾಲಿಸಿ ದರ್ಶನಕ್ಕೆ ತೆರಳಬಹುದಿತ್ತು. ಆದ್ರೆ ಇವರು ಮಾಂಸದೂಟ ಸೇವಿಸಿ, ಯಾವ ವ್ರತವನ್ನೂ ಪಾಲಿಸದೇ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಲಾಡ್ಜ್‍ನಲ್ಲಿ ಪೊಲೀಸರೇ ರೂಂ ಬುಕ್ ಮಾಡಿದ್ದು, ಎಲ್ಲವೂ ಕೇರಳ ಸರ್ಕಾರವೇ ಮಾಡಿಸಿತಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಇದ್ರಿಂದಾಗಿ ದೇವರ ನಾಡು ಮತ್ತಷ್ಟು ಧಗಧಗಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv