Tag: bindas actress

  • ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

    ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

    ಟಾಲಿವುಡ್ (Tollywood) ಬ್ಯೂಟಿ ಹನ್ಸಿಕಾ ಮೋಟ್ವಾನಿ(Hansika Motwani) ಸದ್ಯ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ. ಉದ್ಯಮಿ ಸೊಹೈಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹನ್ಸಿಕಾ ಮೋಟ್ವಾನಿ ಮದುವೆಯನ್ನ ಲೈವ್ ಆಗಿ ಅಭಿಮಾನಿಗಳು ನೋಡಬಹುದು ಅಂತಾ ಅವಕಾಶವನ್ನ ಒದಗಿಸಲು ಹನ್ಸಿಕಾ ಟೀಮ್ ಪ್ಲಾನ್ ಮಾಡಿದ್ದಾರೆ.

    ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಸದ್ಯ ತಮ್ಮ ಖಾಸಗಿ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಈ ನಟಿ, ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಉದ್ಯಮಿ (Businessman) ಸೊಹೈಲ್(Sohail) ಜೊತೆಗಿನ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ತಿಳಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಸೌತ್ ಸುಂದರಿ ಹನ್ಸಿಕಾ ಮೋಟ್ವಾನಿಗೆ ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟಿಯ ಮದುವೆ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಿದ್ದಾರೆ. ಹಾಗಾಗಿ ತಮ್ಮ ಮದುವೆಯನ್ನು ಓಟಿಟಿಯಲ್ಲಿ ಸ್ಟ್ರಿಮಿಂಗ್‌ ಮಾಡಲು ಯೋಚಿಸಿದ್ದಾರೆ. ಹನ್ಸಿಕಾ ಅವರ ಮದುವೆಯನ್ನು ಎಲ್ಲರೂ ಲೈವ್ ಆಗಿ ಓಟಿಟಿ ಮೂಲಕ ನೋಡಬಹುದಾಗಿದೆ.

     

    View this post on Instagram

     

    A post shared by Hansika Motwani (@ihansika)

    ಹನ್ಸಿಕಾ ಮತ್ತು ಸೊಹೈಲ್ ಜೋಡಿಯ ಮದುವೆ ಜೈಪುರದ 450 ವರ್ಷಗಳ ಹಳೆಯ ಮುಂಡೋಟಾ ಕೋಟೆಯಲ್ಲಿ ನಡೆಯಲಿದೆ. ಡಿಸೆಂಬರ್ 4ರಂದು ಗುರುಹಿರಿಯರು, ಆಪ್ತರು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 3ರಂದು ಮೆಹೆಂದಿ ಶಾಸ್ತ್ರ ನಡೆಯಲಿದೆ. ಈ ಸಂಭ್ರಮದ ಕ್ಷಣವನ್ನು ಫ್ಯಾನ್ಸ್ ಓಟಿಟಿ ಮೂಲಕ ಲೈವ್ ಆಗಿ ನೋಡಬಹುದಾಗಿದೆ. ಈ ಕುರಿತ ಮತ್ತಷ್ಟು ಅಪ್‌ಡೇಟ್‌ ಸದ್ಯದಲ್ಲೇ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]