Tag: Billgates

  • ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ‘ಬಿಲ್ ಗೇಟ್ಸ್’ ಈ ಹೆಸರು ಕೇಳಿದಾಕ್ಷಣ ಅಮೇರಿಕಾದ ಸಿರಿವಂತ, ಉದ್ಯಮಿ ನೆನಪಿಗೆ ಬರ್ತಿದ್ರು. ಆದರೆ ಈಗ ಇದೇ ಹೆಸರಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡ್ತಿರೋ ಬಿಲ್‍ಗೇಟ್ಸ್ ಸಿನ್ಮಾ ನೆನಪಾಗತ್ತೆ. ಚಂದನವನದಲ್ಲಿ ಇಷ್ಟು ದಿನ ತಮ್ಮ ಕಚಗುಳಿಯ ಕಾಮಿಡಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಈ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಈಗಾಗಲೇ ರಿಲೀಸ್ ಆದ ಟೀಸರ್ ಎಲ್ಲೆಡೆ ಸದ್ದು ಮಾಡೋ ಮೂಲಕ ಸಿನೆಮಾದ ಯಮಲೋಕದ ಅರಮನೆಯ ಅನಾವರಣದ ಅದ್ದೂರಿ ಸೆಟ್ ನಿಂದ ಎಲ್ಲರ ಚಿತ್ತ ತನ್ನತ್ತ ಹರಿಯುವಂತೆ ಮಾಡಿತ್ತು.

    ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರೋ ಬಿಲ್‍ಗೇಟ್ಸ್ ಸಿನಿಮಾ ಪೋಸ್ಟರ್ ನಿಂದಾಗಿಯೇ ದೊಡ್ಡ ಹೈಪ್ ಸೃಷ್ಟಿಸಿತ್ತು. ಕಾಮಿಡಿ ಕಥಾ ಹಂದರ ಹೊಂದಿರೋ ಸಿನಿಮಾ ಇದಾಗಿದ್ದು, ಈಗಾಗಲೇ ‘ಬಿಲ್‍ಗೇಟ್ಸ್’ ಸೆನ್ಸಾರ್ ಪರೀಕ್ಷೆ ಮುಗಿಸಿ, ಫೆಬ್ರವರಿ 7ಕ್ಕೆ ಪ್ರೇಕ್ಷಕರೆದುರು ಬರಲಿದೆ.

    ಚಿತ್ರದಲ್ಲಿ ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜನಾರ್ಧನ್, ವಿ.ಮನೋಹರ್ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಒಟ್ಟಾರೆ ಸಿನೆಮಾ ನೋಡಲು ಕೂತ ಸಿನಿಪ್ರೇಕ್ಷಕನಿಗೆ ಎಲ್ಲೂ ಬೋರಾಗದಂತೆ ನೋಡಿಕೋಳ್ಳೋ ಎಲಿಮೆಂಟ್ಸ್ ಜೊತೆ ಬರ್ತಿರೋ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಏನಂತಾರೆ ಅನ್ನೋದನ್ನ ರಿಲೀಸ್ ಬಳಿಕವೇ ನೋಡ್ಬೇಕಿದೆ.

  • ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪನ್ನು ರಿವೀಲ್ ಮಾಡಿದ್ರು ಗೇಟ್ಸ್

    ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪನ್ನು ರಿವೀಲ್ ಮಾಡಿದ್ರು ಗೇಟ್ಸ್

    ವಾಷಿಂಗ್ಟನ್: ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಗ್ಗೆ ನಾವು ಗಮನ ನೀಡದ್ದು ಮೈಕ್ರೋಸಾಫ್ಟ್ ಕಂಪನಿಯ ಅತಿ ದೊಡ್ಡ ತಪ್ಪು ಎಂದು ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

    ವಾಷಿಂಗ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೊಬೈಲ್ ಆಪರೇಟಿಂಗ್ ಸಿಸ್ಟಂ ಯುದ್ಧದಲ್ಲಿ ಮೈಕ್ರೋಸಾಫ್ಟ್ ಹಿಡಿತ ಹೊಂದಿದ್ದರೆ ಮತ್ತಷ್ಟು ಮೌಲ್ಯಯುತ ಕಂಪನಿಯಾಗುತಿತ್ತು ಎಂದು ತಿಳಿಸಿದರು.

    ಪರ್ಸನಲ್ ಕಂಪ್ಯೂಟರ್ ಗಳಿಗೆ ಅಪರೇಟಿಂಗ್ ಸಿಸ್ಟಂ ನೀಡುವ ಕ್ಷೇತ್ರದಲ್ಲಿ ನಾವಿದ್ದೇವೆ. ಆದರೆ ಮೊಬೈಲ್ ಓಎಸ್ ಕ್ಷೇತ್ರದಲ್ಲಿ ಕಡಿಮೆ ಮೊತ್ತದಲ್ಲಿ ನಾವು ಅವಕಾಶವನ್ನು ಕಳೆದುಕೊಂಡಿದ್ದೇವೆ. ಉತ್ತಮ ಜನರನ್ನು ನಿಯೋಜಿಸದ ಕಾರಣ ಈ ಕ್ಷೇತ್ರದಲ್ಲಿ ನಾವು ಅಭಿವೃದ್ಧಿಯಾಗಲಿಲ್ಲ ಎಂದು ಹೇಳಿದರು.

    ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಡುವ ವಿಚಾರದಲ್ಲಿ ನಮ್ಮಲ್ಲಿ ಕೌಶಲ್ಯವಿತ್ತು. ಎಲ್ಲ ಸಂಪನ್ಮೂಲಗಳಿದ್ದರೂ ನಾವು ಈ ಕ್ಷೇತ್ರದಲ್ಲಿ ಸಾಧನೆ ಮಾಡದೇ ಇರುವುದು ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪು ಎಂದು ಎಂದರು.

    ಆಂಡ್ರಾಯ್ಡ್ ಗೂಗಲ್‍ನ ಅತಿ ದೊಡ್ಡ ಸಂಪತ್ತು ಎಂದ ಗೇಟ್ಸ್ ಹಾಲಿ ಸಿಇಒ ಸತ್ಯ ನಾದೆಲ್ಲಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

    2015ರಲ್ಲಿ ಗೂಗಲ್ ಕಂಪನಿ 50 ದಶಲಕ್ಷ ಡಾಲರ್(ಅಂದಾಜು 347 ಕೋಟಿ ರೂ.) ನೀಡಿ ಆಂಡ್ರಾಯ್ಡ್ ಖರೀದಿಸಿತ್ತು. ಆರಂಭದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಂ ರೀತಿ ಆಂಡ್ರಾಯ್ಡ್ ಬೆಳೆಸಬೇಕೆಂಬ ಯಾವುದೇ ಪ್ರಸ್ತಾಪ ಇರಲಿಲ್ಲ. ಆದರೆ ಆಂಡ್ರಾಯ್ಡ್ ಸಹ ಸಂಸ್ಥಾಪಕ ಆಂಡಿ ರುಬಿನ್ ನೇತೃತ್ವದ ತಂಡದ ಕೆಲಸದಿಂದಾಗಿ ವಿಶ್ವದ ನಂಬರ್ ಒನ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿ ಹೊರ ಹೊಮ್ಮಿದೆ.

    ಗೂಗಲ್ ಆಂಡ್ರಾಯ್ಡ್ ಓಎಸ್ ಅಭಿವೃದ್ಧಿ ಪಡಿಸುತ್ತಿದ್ದರೆ 2010ರ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಓಎಸ್ ಅಭಿವೃದ್ಧಿ ಪಡಿಸುತಿತ್ತು. ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ವೀವ್ ಬಲ್ಮರ್ ಆಂಡ್ರಾಯ್ಡ್ ಸ್ಪರ್ಧೆ ನೀಡಲೆಂದೇ ವಿಂಡೋಸ್ ಫೋನ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಆದರೆ ಆಂಡ್ರಾಯ್ಡ್ ಮುಂದೆ ಮಾರುಕಟ್ಟೆಯಲ್ಲಿ ಸೋಲನ್ನು ಅನುಭವಿಸಿತ್ತು. 2017ರಲ್ಲಿ ಮೈಕ್ರೋಸಾಫ್ಟ್ ಅಧಿಕೃತವಾಗಿ ವಿಂಡೋಸ್ ಫೋನ್ ಓಎಸ್‍ಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿತ್ತು.

  • ತಿಂಡಿ ಖರೀದಿಗಾಗಿ ಸಾಮಾನ್ಯರಂತೆ ಕ್ಯೂನಲ್ಲಿ ನಿಂತ ಬಿಲ್ ಗೇಟ್ಸ್!

    ತಿಂಡಿ ಖರೀದಿಗಾಗಿ ಸಾಮಾನ್ಯರಂತೆ ಕ್ಯೂನಲ್ಲಿ ನಿಂತ ಬಿಲ್ ಗೇಟ್ಸ್!

    ವಾಷಿಂಗ್ಟನ್: ಕೆಲವರು ಎಷ್ಟೇ ಶ್ರೀಮಂತರಾಗಿದ್ದರೂ, ಸಾಮಾನ್ಯರಂತೆಯೇ ಬದುಕಿರುತ್ತಾರೆ. ಮತ್ತೆ ಕೆಲವರು ಏನೂ ಇಲ್ಲದೇ ಇದ್ದರೂ ಎಲ್ಲದರಲ್ಲಿಯೂ ಶ್ರೀಮಂತಿಕೆ ಪ್ರದರ್ಶಿಸುವರನ್ನು ಸಮಾಜದಲ್ಲಿ ಕಾಣಬಹುದು. ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರಾಗಿರುವ ಬಿಲ್‍ಗೇಟ್ಸ್ ಓರ್ವ ಸಾಮಾನ್ಯ ವ್ಯಕ್ತಿಯಂತೆ ತಿಂಡಿ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ವಿಶ್ವದಾದ್ಯಂತ ಮಿಂಚಿನಂತೆ ಹರಿದಾಡುತ್ತಿದೆ.

    ಮೈಕ್ರೋಸಾಫ್ಟ್ ಕಂಪನಿಯ ಮಾಜಿ ಉದ್ಯೋಗಿ ಮೈಕ್ ಗೆಲೋಸ್ ಎಂಬವರು ಭಾನುವಾರ ಸಂಜೆ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಕೆಂಪು ಸ್ವೆಟ್ಟರ್, ಕಂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಶೂ ಧರಿಸಿರುವ ಬಿಲ್ ಗೇಟ್ಸ್ ಯುವಕನೊಬ್ಬನ ಹಿಂದೆ ಪಿಜ್ಜಾ, ಬರ್ಗರ್ ಮತ್ತು ಕೋಕ್ ಖರೀದಿಸಲು ನಿಂತಿರುವುದನ್ನು ಕಾಣಬಹುದು. ಫೋಟೋ ಹಾಕಿಕೊಂಡಿರುವ ಗೆಲೋಸ್, $100,000,000,000 ಇಷ್ಟು ಆಸ್ತಿಯ ಒಡೆಯ, ವಿಶ್ವದಲ್ಲಿಯೇ ಅತಿ ದೊಡ್ಡ ಚಾರಿಟಿಯನ್ನು ನಡೆಸುವಂತಹ ವ್ಯಕ್ತಿ ಬರ್ಗರ್ ಖರೀದಿಗಾಗಿ ರೆಸ್ಟೋರೆಂಟ್ ನಲ್ಲಿ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ್ರೆ ನೀವು ನಮ್ಮ ಹಾಗೆ ಎಂಬ ಭಾವನೆ ಮೂಡುತ್ತದೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಮತ್ತೆರೆಡು ಸಾಲುಗಳಲ್ಲಿ ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿದ್ದಾರೆ. ಕೆಲ ಶ್ರೀಮಂತರ ಸಾಮಾನ್ಯನಂತೆ ಬದುಕುತ್ತಾರೆ. ಮತ್ತೆ ಕೆಲವರು ವೈಟ್ ಹೌಸ್‍ನ ಚಿನ್ನದ ಕುರ್ಚಿಯಲ್ಲಿ ಕುಳಿತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಪರೋಕ್ಷವಾಗಿ ಟ್ರಂಪ್ ಅವರನ್ನು ಟೀಕಿಸಿದ್ದಾರೆ.

    ಬಿಲ್‍ಗೇಟ್ಸ್ 7.68 ಡಾಲರ್ (547 ರೂ) ಬೆಲೆಯ ಬ್ರಗರ್, ಫ್ರೈಸ್ ಮತ್ತು ಕೋಕ್ ಖರೀದಿಸಲು ನಿಂತಿದ್ದರು. ಬಿಲ್‍ಗೇಟ್ಸ್ ಬೇಕಾದರೆ ಯಾವುದಾದರೂ ದೊಡ್ಡ ಹೋಟೆಲ್ ಗೆ ತೆರಳಿ ಇದೇ ತಿಂಡಿಯನ್ನು ಖರೀದಿಸಬಹುದಿತ್ತು. ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಬಿಲ್‍ಗೇಟ್ಸ್ ರಸ್ತೆ ಬದಿಯ ರೆಸ್ಟೋರೆಂಟ್ ತಮಗೆ ಬೇಕಾಗಿದ್ದನ್ನು ಖರೀದಿಸಿದ್ದಾರೆ. ಫೋಟೋ ಇದೂವರೆಗೂ 16 ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, 21 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv