Tag: billboard

  • ಮುಂಬೈ ಬಿಲ್ ಬೋರ್ಡ್ ದುರಂತ – ಜಾಹೀರಾತು ಕಂಪನಿಯ ಮಾಲೀಕ ಅರೆಸ್ಟ್

    ಮುಂಬೈ ಬಿಲ್ ಬೋರ್ಡ್ ದುರಂತ – ಜಾಹೀರಾತು ಕಂಪನಿಯ ಮಾಲೀಕ ಅರೆಸ್ಟ್

    ಮುಂಬೈ: ಘಾಟ್‍ಕೋಪರ್‌ನಲ್ಲಿ (Ghatkopar) ಬಿಲ್ ಬೋರ್ಡ್ (Billboard) ಕುಸಿದು ಬಿದ್ದು 16 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀರಾತು ಫಲಕ ಅಳವಡಿಸುವ ಹೊಣೆ ಹೊತ್ತಿದ್ದ ಉದ್ಯಮಿ ಭವೇಶ್ ಭಿಂಡೆ (Bhavesh Bhinde) ಎಂಬವರನ್ನು ರಾಜಸ್ಥಾನದ ಉದಯಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾಲೀಕ ಭಿಂಡೆ ಅವರನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ (Mumbai Police Crime Branch) ಬಂಧಿಸಿದೆ. ಆರೋಪಿಯ ಬಂಧನಕ್ಕೆ ಮುಂಬೈ ಪೊಲೀಸರಿಂದ ಒಟ್ಟು ಎಂಟು ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗಿತ್ತು. ಆರೋಪಿ ಪದೇ ಪದೇ ಸ್ಥಳ ಬದಲಿಸುತ್ತಿದ್ದ. ಅಲ್ಲದೇ ಹೆಸರು ಬದಲಿಸಿಕೊಂಡು ಉದಯಪುರದ ಹೋಟೆಲ್ ಒಂದರಲ್ಲಿ ತಂಗಿದ್ದ. ಇದೀಗ ಆರೋಪಿಯ ಬಂಧನವಾಗಿದ್ದು, ಇಂದು (ಶುಕ್ರವಾರ) ಬೆಳಗ್ಗೆ ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

    ಜಾಹೀರಾತು ಫಲಕ ಅಳವಡಿಕೆ ಕಂಪನಿ, ಫಲಕ ಅಳವಡಿಸುವಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಕಂಪನಿಗೆ 40*40 ಅಡಿಗಳ ಫಲಕ ಅಳವಡಿಸಲು ಮಾತ್ರ ಪರವಾನಿಗೆ ಇತ್ತು. ದುರ್ಘಟನೆಗೆ ಕಾರಣವಾದ ಜಾಹೀರಾತು ಫಲಕ 120*120 ಅಡಿ ಇತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.

    ಮೇ 12ರ ಸಂಜೆ ಘಾಟ್‍ಕೋಪರ್‌ನಲ್ಲಿ ಗಾಳಿ ಮಳೆಗೆ ಬೃಹತ್ ಜಾಹೀರಾತು ಫಲಕ ಕುಸಿದು ಬಿದ್ದಿತ್ತು. ಇದರ ಪರಿಣಾಮ ಮಳೆಯಿಂದಾಗಿ ಪೆಟ್ರೋಲ್ ಬಂಕ್‍ನಲ್ಲಿ ನಿಂತುಕೊಂಡಿದ್ದ 16 ಮಂದಿ ಸಾವಿಗೀಡಾಗಿದ್ದರು. ಘಟನೆಯಲ್ಲಿ 75 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಎಕ್ಸ್‌‌ಪ್ರೇಸ್‌ವೇಯಲ್ಲಿ ಸಂಚರಿಸುವ ಚಾಲಕರೇ ಎಚ್ಚರವಾಗಿರಿ – ಕೇವಲ 16 ದಿನದಲ್ಲಿ 12 ಸಾವಿರ ಕೇಸ್‌ ದಾಖಲು

  • ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    ಚೆನ್ನೈ: ತಮಿಳುನಾಡುನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್ ಜಾಹೀರಾತು ಬೋರ್ಡ್‍ಗಳಿಗೆ ಬಿಜೆಪಿ ತಂಡ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಅಂಟಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಜುಲೈ 28 ರಿಂದ ಆರಂಭವಾಗಲಿರುವ ತಮಿಳುನಾಡು ಸರ್ಕಾರದ 44ನೇ ಚೆಸ್ ಒಲಿಂಪಿಯಾಡ್ ಜಾಹಿರಾತು ಫಲಕಕ್ಕೆ ಮೋದಿ ಅವರ ಫೋಟೋವನ್ನು ಹಾಕಿರಲಿಲ್ಲ. ಈ ಹಿನ್ನೆಲೆ ಪ್ರಚಾರ ಅಭಿಯಾನದ ಭಾಗವಾಗಿ ಬಿಜೆಪಿ ಪದಾಧಿಕಾರಿಯೊಬ್ಬರು ತನ್ನ ತಂಡದೊಂದಿಗೆ ಜಾಹೀರಾತು ಫಲಕಗಳ ಮೇಲೆ ಮೋದಿ ಅವರ ಫೋಟೋವನ್ನು ಅಂಟಿಸಿದ್ದಾರೆ. ಇದನ್ನೂ ಓದಿ: ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ  

    ಈ ವೀಡಿಯೋವನ್ನು ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯ ಅಭಿವೃದ್ಧಿ ಘಟಕದ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಅವರು ಟ್ವೀಟ್ ಮಾಡಿದ್ದು, ಸಿಎಂ ಸ್ಟಾಲಿನ್‍ಗೆ ನೆನಪಿರಲಿ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ರಾಷ್ಟ್ರದ ಏಕೈಕ ಪ್ರತಿನಿಧಿ ಎಂದು ಬರೆದು ಶೇರ್ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಬಿಜೆಪಿ ಪದಾಧಿಕಾರಿ ಮಾತನಾಡಿದ್ದು, ಒಲಿಂಪಿಯಾಡ್ ರಾಜ್ಯ ಮಟ್ಟದ ಈವೆಂಟ್ ಅಲ್ಲ, ಅಂತರಾಷ್ಟ್ರೀಯ ಪಂದ್ಯಾವಳಿ. ಇದು ಡಿಎಂಕೆ ಪಕ್ಷದ ಕಾರ್ಯಕ್ರಮವಲ್ಲ. ಇದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಅದಕ್ಕೆ ಇದು ಪ್ರಧಾನಿ ಅವರ ಭಾವಚಿತ್ರವನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.

    ಜಾಹೀರಾತು ಫಲಕಕ್ಕೆ ಮೋದಿ ಅವರ ಭಾವಚಿತ್ರಗಳನ್ನು ಅಂಟಿಸಲು ಅಧಿಕಾರಿಗಳಿಂದ ಅನುಮತಿ ಪಡೆದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಅವರ ಭಾವಚಿತ್ರವು ಪ್ರಚಾರದ ಭಾಗವಾಗಿರಬೇಕು. ಅವರು ಇಡೀ ವಿಶ್ವಕ್ಕೆ ಗೊತ್ತು. ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ತಿಳಿಸಿದ್ದಾರೆ.

    ವೀಡಿಯೋ ಎಲ್ಲಕಡೆ ಶೇರ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಾಧ್ಯಕ್ಷರು, ಮೋದಿ ಅವರ ಛಾಯಾಚಿತ್ರವನ್ನು ಸೇರಿಸದೆ ಚೆಸ್ ಈವೆಂಟ್‍ನ ಪ್ರಚಾರವನ್ನು ಮುಂದುವರೆಸಿದ್ದಕ್ಕಾಗಿ ಡಿಎಂಕೆ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಇದು ‘ದೊಡ್ಡ ತಪ್ಪು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪನವರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ 

    ಮಾಮಲ್ಲಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ ಜುಲೈ 28 ರಂದು ಆರಂಭವಾಗಿ ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ಈ ಕ್ರೀಡಾಕೂಟ ನಡೆಸಲು ರಾಜ್ಯ ಸರ್ಕಾರ 92.13 ಕೋಟಿ ರೂ. ಮಂಜೂರು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ಲಂಡನ್: ಮದುವೆಯಾಗಲು ವಧು, ವರ ಸಾಕಷ್ಟು ಕಷ್ಟ ಪಟ್ಟಿರುವ ಎಷ್ಟೋ ಉದಾಹರಣೆಗಳು ಇವೆ. ಅದರೆ ಇಲ್ಲೊಬ್ಬ ಯುವಕ, ವಧು ಹುಡುಕಾಟಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿ ಅಚ್ಚರಿ ಮೂಡಿಸಿದ್ದಾನೆ.

    ಮುಹಮ್ಮದ್ ಮಲಿಕ್, ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಜಾಹೀರಾತು ನೀಡಿದ್ದಾನೆ. ಅಷ್ಟೇ ಅಲ್ಲದೇ ಆ ಜಾಹೀರಾತಿನಲ್ಲಿ ಅವನೇ ಕಾಣಿಸಿಕೊಂಡಿದ್ದು, ಸಂಗಾತಿ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾನೆ ಎಂದು ಬರೆಯಲಾಗಿದೆ. 29ರ ಹರೆಯದ ಬರ್ಮಿಂಗ್‍ ಹ್ಯಾಮ್ ಮೂಲದ ಈ ಯುವಕ ಸದ್ಯ ಮದುವೆಯಾಗಲು ವಧು ಹುಡುಕಾಟದಲ್ಲಿ ಸಾಹಸ ಮಾಡುತ್ತಿದ್ದಾನೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಜನಸಂಚಾರ ದಟ್ಟಣೆ ಇರೋ ಪ್ರದೇಶಗಳಲ್ಲಿ ಭಿತ್ತಿ ಚಿತ್ರ ಮೂಲಕ ನನಗೆ ಮದುವೆಯಾಗಲು ಕನ್ಯೆ ಬೇಕೆಂದು ವಿನಂತಿಸುತ್ತಿದ್ದಾನೆ.  ಜೊತೆಗೆ ಈ ಕುರಿತು ಅಗತ್ಯ ಮಾಹಿತಿ ಬೇಕಿದ್ದರೆ ನನ್ನ ಸಂಪರ್ಕಿಸಿ ಎಂದು ತನ್ನ ವೆಬ್‍ಸೈಟ್‍ನ್ನು ಕೂಡಾ ನಮೂದಿಸಿದ್ದಾನೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ವಧುಗೆ ಕೆಲವು ಕಂಡಿಷನ್ಸ್ ಕೂಡಾ ಹಾಕಿದ್ದಾನೆ. ಈ ಬೃಹತ್‌ ಜಾಹೀರಾತುಗಳನ್ನು ಕಂಡ ನೆಟ್ಟಿಗರು ಯುವಕನ ಕ್ರಿಯೇಟಿವ್ ಪ್ಲ್ಯಾನ್‍ಗೆ ಫಿದಾ ಆಗಿದ್ದು, ಕಾಮೆಂಟ್‍ಗಳ ಸುರಿಮಳೆಗೈದಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

  • ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಮನಿಲಾ: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ ಜಾಹಿರಾತು ಪ್ರಸಾರವಾಗೋ ಬದಲು ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ಫಿಲಿಪೈನ್ಸ್ ನ ರಾಜಧಾನಿ ಮನಿಲಾದ ಮಕಾಟಿ ಸಿಟಿಯಲ್ಲಿ ನಡೆದಿದೆ.

    30 ಸೆಕೆಂಡ್‍ಗಳಿರುವ ಈ ಪೋರ್ನ್ ವಿಡಿಯೋ ಅಕಸ್ಮಾತಾಗಿ ರಸ್ತೆ ಮಧ್ಯೆ ಜನಸಂದಣಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಫಲಕದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಒಂದು ಕ್ಷಣ ದಂಗಾಗಿ ಹೋದರು. ವಿಡಿಯೋದಲ್ಲಿದ್ದ ಜೋಡಿ ನಗ್ನವಾಗಿದ್ದು, ಆ ರಸ್ತೆಯಲ್ಲಿದ್ದ ಲಕ್ಷಾಂತರ ಮಂದಿ ಅಂದ್ರೆ ಮಕ್ಕಳಿಂದ ವಯೋವೃದ್ಧರವರೆಗೂ ಈ ವಿಡಿಯೋ ನೋಡುವಂತಾಯಿತು.

    ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಮಕಾಟಿಯ ಮೇಯರ್ ಅಭಿಗೇಲ್ ಬಿನಯ್ ಅದನ್ನು ನಿಲ್ಲಿಸಲ್ಲು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದಿದ್ದರು. ಇನ್ನೂ ಕೆಲವರು ಆ ವಿಡಿಯೋ ನೋಡಲಾಗದೇ ಅದನ್ನು ನಿರ್ಲಕ್ಷಿಸಿದರು.

    ಫಿಲಿಪೈನ್ಸ್ ನಲ್ಲಿ ಈ ರಸ್ತೆ ಅತ್ಯಂತ ಬ್ಯೂಸಿ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಹಾಗೂ ಸಾಕಷ್ಟು ಜನರು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಇಂತಹ ರಸ್ತೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.