Tag: Bilateral Talks

  • ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ

    ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ

    ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಧ್ಯಕ್ಷ ಜೋ ಬೈಡನ್‍ರನ್ನು ಭೇಟಿ ಮಾಡಿದ್ದಾರೆ. ರಕ್ಷಣೆ, ಭಯೋತ್ಪಾದನೆ, ಕೋವಿಡ್, ಆಫ್ಘಾನಿಸ್ತಾನ ಸೇರಿ ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

    ಜೋ ಬೈಡೆನ್ ಭೇಟಿಗೂ ಮೊದಲು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‍ರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಕಾಶಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಮೀನಾಕರಿ ಚೆಸ್ ಬೋರ್ಡ್ ಮತ್ತು ಕಮಲ ಹ್ಯಾರೀಸ್ ಅಜ್ಜ, ತಮಿಳುನಾಡಿನ ಪಿವಿ ಗೋಪಾಲನ್‍ಗೆ ಸೇರಿದ ನೊಟಿಫಿಕೇಷನ್ ಒಂದನ್ನು ಮೋದಿ ಕಾಣಿಕೆಯಾಗಿ ನೀಡಿದ್ದರು. ಇದನ್ನೂ ಓದಿ: ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ

    ಕೊರೊನಾ ಹತ್ತಿಕ್ಕಲು ಸಹಕರಿಸಿದ ಅಮೆರಿಕಕ್ಕೆ ಧನ್ಯವಾದ ಹೇಳಿದರು. ಬೈಡನ್-ಕಮಲಾ ಅವಧಿಯಲ್ಲಿ ಭಾರತ-ಅಮೆರಿಕಾ ನಡುವಣ ಸಂಬಂಧ ಇನ್ನಷ್ಟು ಗಟ್ಟಿಯಾಗುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ಭಾರತಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಇದೇ ವೇಳೆ ಭಾರತದ ಲಸಿಕಾ ಕಾರ್ಯಕ್ರಮ, ವ್ಯಾಕ್ಸಿನ್ ರಾಯಭಾರತ್ವವನ್ನು ಕಮಲಾ ಶ್ಲಾಘಿಸಿದರು. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‍ಗೆ, ಮೀನಾಕರಿ ಹಡಗನ್ನು, ಜಪಾನ್ ಪ್ರಧಾನಿಗೆ ಶ್ರೀಗಂಧದ ಬುದ್ಧನ ಮೂರ್ತಿಯನ್ನು ಕೊಡುಗೆಯಾಗಿ ಮೋದಿ ನೀಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

    ಈ ಮಧ್ಯೆ ಪಾಕ್‍ಗೆ ಬ್ರಿಟನ್ ಶಾಕ್ ನೀಡಿದೆ. ಕಾಶ್ಮೀರದಿಂದ ಭಾರತ ಸೇನೆ ಹಿಂತಿರುಗಿದರೆ ಆಫ್ಘನ್‍ನಂತಹ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೌಸ್ ಆಫ್ ಕಾಮನ್ಸ್ ನಲ್ಲಿ ಎಂಪಿ ಬಾಬ್ ಬ್ಲಾಕ್‍ಮನ್ ಹೇಳಿಕೆ ನೀಡಿದ್ದಾರೆ.