Tag: Bilaspur

  • ಹಿಮಾಚಲ ಪ್ರದೇಶ| ಬಿಲಾಸ್ಪುರ ಜಿಲ್ಲೆಯಲ್ಲಿ ಭೂಕುಸಿತಕ್ಕೆ 18 ಮಂದಿ ಬಲಿ

    ಹಿಮಾಚಲ ಪ್ರದೇಶ| ಬಿಲಾಸ್ಪುರ ಜಿಲ್ಲೆಯಲ್ಲಿ ಭೂಕುಸಿತಕ್ಕೆ 18 ಮಂದಿ ಬಲಿ

    ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಖಾಸಗಿ ಬಸ್ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದು, ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.

    ಬಸ್‌ನಲ್ಲಿ 30 ರಿಂದ 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹರಿಯಾಣದ ರೋಹ್ಟಕ್‌ನಿಂದ ಬಿಲಾಸ್ಪುರ್‌ ಬಳಿಯ ಘುಮಾರ್ವಿನ್‌ಗೆ ತೆರಳುತ್ತಿದ್ದಾಗ ಭೂಕುಸಿತವಾಗಿ ಬಸ್‌ ಅವಘಟಕ್ಕೆ ಸಿಲುಕಿತು.

    ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

    ‘ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಜನರು ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.

    ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಕೂಡ ಅಪಘಾತಕ್ಕೆ ದುಃಖ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

  • ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮೇಘಸ್ಫೋಟ – ಬೆಳೆ ಹಾನಿ, ಅವಶೇಷಗಳಡಿ ಹೂತುಹೋದ ವಾಹನಗಳು

    ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮೇಘಸ್ಫೋಟ – ಬೆಳೆ ಹಾನಿ, ಅವಶೇಷಗಳಡಿ ಹೂತುಹೋದ ವಾಹನಗಳು

    ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್ಪುರ (Bilaspur) ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ ಜಾವ ಮೇಘಸ್ಫೋಟ (Cloudburst) ಸಂಭವಿಸಿದ ಪರಿಣಾಮ ಹಲವಾರು ವಾಹನಗಳು ಅವಶೇಷಗಳಡಿ ಹೂತುಹೋಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯುಂಟಾಗಿದೆ.

    ನೈನಾ ದೇವಿ ವಿಧಾನಸಭಾ ಕ್ಷೇತ್ರದ ನಮ್ಹೋಲ್ ಪ್ರದೇಶದ ಗುತ್ರಹಾನ್ ಗ್ರಾಮದಲ್ಲಿ (Gutrahan Village) ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಶಿಮ್ಲಾದಲ್ಲಿ ದಟ್ಟ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು. ಶನಿವಾರ ಮತ್ತು ಭಾನುವಾರ ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಪ್ಲಾಸ್ಕ್‌ನಿಂದ ಹಲ್ಲೆ

    ಅಟ್ಟಾರಿ-ಲೇಹ್ ರಸ್ತೆ (NH-3), ಆಟ್-ಸೈಂಜ್ ರಸ್ತೆ (NH-305) ಮತ್ತು ಅಮೃತಸರ-ಭೋಟಾ ರಸ್ತೆ (NH-503A) ಸೇರಿದಂತೆ ಒಟ್ಟು 503 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ರಾಜ್ಯದಲ್ಲಿ ಸುಮಾರು 953 ವಿದ್ಯುತ್ ಪರಿವರ್ತಕಗಳು ಮತ್ತು 336 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ. ಇದನ್ನೂ ಓದಿ: ಉ.ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ – ಗೇರುಸೊಪ್ಪ ವಿದ್ಯುತ್‌ ಉತ್ಪಾದನಾ ಘಟಕ ಬಳಿಯೇ ಕುಸಿದ ಧರೆ

    ರಾಜ್ಯದಲ್ಲಿ ಜೂನ್ 20ರಿಂದ ಸೆಪ್ಟೆಂಬರ್ 12ರವರೆಗೆ ಒಟ್ಟು 386 ಜನರು ಸಾವನ್ನಪ್ಪಿದ್ದಾರೆ. 386 ಮಂದಿ ಪೈಕಿ 218 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದರೆ, 168 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ರಾಜ್ಯವು 4,465 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 12ರವರೆಗೆ ಸರಾಸರಿ 967.2 ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ: ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

  • ಎನ್‌ಎಸ್‌ಎಸ್ ಶಿಬಿರದಲ್ಲಿ ನಮಾಜ್ ಮಾಡುವಂತೆ ಒತ್ತಾಯ – 8 ಮಂದಿಯ ವಿರುದ್ಧ FIR

    ಎನ್‌ಎಸ್‌ಎಸ್ ಶಿಬಿರದಲ್ಲಿ ನಮಾಜ್ ಮಾಡುವಂತೆ ಒತ್ತಾಯ – 8 ಮಂದಿಯ ವಿರುದ್ಧ FIR

    ರಾಯ್ಪುರ: ರಾಷ್ಟ್ರೀಯ ಸೇವಾ ಯೋಜನೆ (NSS) ಶಿಬಿರದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ನಮಾಜ್ (Namaz) ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಛತ್ತೀಸ್‌ಗಢದ (Chhattisgarh) ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ (Guru Ghasidas Central University) ಏಳು ಶಿಕ್ಷಕರು ಮತ್ತು ಒಬ್ಬ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಛತ್ತೀಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಮಾರ್ಚ್ 31ರಂದು ಸುಮಾರು 159 ವಿದ್ಯಾರ್ಥಿಗಳನ್ನು ನಮಾಜ್ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. 159 ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ವರು ಮಾತ್ರ ಮುಸ್ಲಿಂ ಸಮುದಾಯದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

    ಶಿಬಿರದಿಂದ ವಾಪಸಾದ ಬಳಿಕ ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿಭಟನೆ ನಡೆಸಿದ್ದು, ನಮಾಜ್‌ಗೆ ಒತ್ತಾಯಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಲಪಂಥೀಯ ಸಂಘಟನೆಗಳು ಆಗ್ರಹಿಸಿದ್ದವು. ಘಟನೆ ಸಂಬಂಧ ಬಿಲಾಸ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಜನೇಶ್ ಸಿಂಗ್ ತನಿಖೆಗೆ ಆದೇಶಿಸಿದರು. ಅಲ್ಲದೇ ಕೊಟ್ವಾಲಿ (ನಗರ) ಎಸ್ಪಿ ಅಕ್ಷಯ್ ಸಬದ್ರ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದರು. ಇದನ್ನೂ ಓದಿ: ಇಸ್ಲಾಂ ನಲ್ಲಿ ಜಾತಿ, ಧರ್ಮ, ಭೇದ-ಭಾವ ಮಾಡಿ ಅಂತ ಹೇಳಿಲ್ಲ – ಜಮೀರ್‌

    ಸಮಿತಿಯ ತನಿಖಾ ವರದಿಯ ಆಧಾರದ ಮೇಲೆ, ಶಿಕ್ಷಕರಾದ ದಿಲೀಪ್ ಝಾ, ಮಧುಲಿಕಾ ಸಿಂಗ್, ಜ್ಯೋತಿ ವರ್ಮಾ, ನೀರಜ್ ಕುಮಾರಿ, ಪ್ರಶಾಂತ್ ವೈಷ್ಣವ್, ಸೂರ್ಯಭನ್ ಸಿಂಗ್, ಬಸಂತ್ ಕುಮಾರ್ ಮತ್ತು ವಿದ್ಯಾರ್ಥಿ ನಾಯಕ ಆಯುಷ್ಮಾನ್ ಚೌಧರಿ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಪ್ರಕರಣವನ್ನು ಕೋಣಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣದ ವರದಿಯನ್ನು ಕೋಟ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

  • ಛತ್ತೀಸ್‌ಗಢದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ – ಪ್ರಧಾನಿ ಮೋದಿ ಭಾಗಿ

    ಛತ್ತೀಸ್‌ಗಢದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ – ಪ್ರಧಾನಿ ಮೋದಿ ಭಾಗಿ

    ರಾಯ್ಪುರ: ಛತ್ತೀಸ್‌ಗಢದ (Chattisgarh) ಬಿಲಾಸ್‌ಪುರದಲ್ಲಿ (Bilaspur) ಇಂದು (ಶನಿವಾರ) ನಡೆಯಲಿರುವ ಭಾರತೀಯ ಜನತಾ ಪಕ್ಷದ (BJP) 2 ಪರಿವರ್ತನಾ ಯಾತ್ರೆಗಳ (Parivartana Yatra) ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

    ಕಾಂಗ್ರೆಸ್ (Congress) ಆಡಳಿತದ ಈ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದೆ. ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ 2 ಪರಿವರ್ತನಾ ಯಾತ್ರೆಗಳ ಸಮಾರೋಪ ಸಮಾರಂಭ ‘ಪರಿವರ್ತನ್ ಮಹಾಸಂಕಲ್ಪ’ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೋ (Arun Sao) ತಿಳಿಸಿದ್ದಾರೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಮೊದಲ ಪರಿವರ್ತನಾ ಯಾತ್ರೆಯು ಸೆಪ್ಟೆಂಬರ್ 12ರಂದು ದಂತೇವಾಡದಿಂದ ಕೈಗೊಂಡಿದ್ದು, ಎರಡನೇ ಯಾತ್ರೆ ಸೆಪ್ಟೆಂಬರ್ 15ರಂದು ಜಶ್‌ಪುರದಿಂದ ಪ್ರಾರಂಭವಾಯಿತು. ಎರಡೂ ಯಾತ್ರೆಗಳು 83 ಸ್ವಾಗತ ಸಭೆಗಳು, 4 ರೋಡ್ ಶೋಗಳು ಮತ್ತು ವಿವಿಧ ಸಾರ್ವಜನಿಕ ಸಭೆಗಳನ್ನು ಸಮಾಪ್ತಿಗೊಳಿಸಿದ್ದು, 87 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

    ಎರಡೂ ಯಾತ್ರೆಗಳಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವ ವಿಶ್ವಾಸವನ್ನು ಅರುಣ್ ಸಾವೋ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಧಗ ಧಗ – ಬೆಂಕಿ ನಂದಿಸಲು ಹರಸಾಹಸ

    ಪೊಲೀಸರ ಪ್ರಕಾರ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಪೊಲೀಸ್ ಪಡೆ, ವಿಶೇಷ ರಕ್ಷಣಾ ಪಡೆ, ಸಶಸ್ತ್ರ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಗೃಹರಕ್ಷಕ ದಳಕ್ಕೆ ಸೇರಿದ ಒಟ್ಟು 1,500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರ ಭೇಟಿಯ ದೃಷ್ಟಿಯಿಂದ ನಗರದ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಿಸಿದ್ದು, ಆ್ಯಂಟಿ ಡ್ರೋನ್ ಗನ್‌ಗಳನ್ನು ಸಹಾ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೆ ಶಂಕುಸ್ಥಾಪನೆ ಮಾತ್ರ ಆಗುತ್ತಿತ್ತು, ನಮ್ಮ ಅವಧಿಯಲ್ಲಿ ಶಂಕುಸ್ಥಾಪನೆಯಾಗಿ ಉದ್ಘಾಟನೆಯಾಗುತ್ತಿದೆ: ಮೋದಿ

    ಹಿಂದೆ ಶಂಕುಸ್ಥಾಪನೆ ಮಾತ್ರ ಆಗುತ್ತಿತ್ತು, ನಮ್ಮ ಅವಧಿಯಲ್ಲಿ ಶಂಕುಸ್ಥಾಪನೆಯಾಗಿ ಉದ್ಘಾಟನೆಯಾಗುತ್ತಿದೆ: ಮೋದಿ

    ಬಿಲಾಸ್‌ಪುರ: ಹಿಂದಿನ ಸರ್ಕಾರಗಳು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಚುನಾವಣೆಯ ಬಳಿಕ ಮರೆತು ಬಿಡುತ್ತಿದ್ದವು. ಆದರೆ ನಮ್ಮ ಸರ್ಕಾರ ಶಂಕುಸ್ಥಾಪನೆ ಮಾಡಿ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.

    ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು(AIIMS Bilaspur) ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಈ ಆಸ್ಪತ್ರೆಯನ್ನು ಹಸಿರು ಆಸ್ಪತ್ರೆ ಎಂಬುದಾಗಿ ಕರೆಯಲಾಗುವುದು ಎಂದು ತಿಳಿಸಿದರು.

    ಕಳೆದ 8 ವರ್ಷಗಳಲ್ಲಿ ನಾವು ಕೆಲಸ ಮಾಡಿದ್ದೇವೆ. ಅಭಿವೃದ್ಧಿಯ ಪ್ರಯೋಜನಗಳು ದೇಶದ ದೂರದ ಭಾಗಗಳಿಗೆ ತಲುಪಬೇಕಿದೆ. ಈ ರಾಜ್ಯವು “ರಾಷ್ಟ್ರ ರಕ್ಷಾ”ದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಈಗ ಈ ಆಸ್ಪತ್ರೆಯೂ “ಜೀವನ ರಕ್ಷಾ”ದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ

    ವೈದ್ಯಕೀಯ ಸಾಧನ ಪಾರ್ಕ್‌ಗೆ ಆಯ್ಕೆಯಾಗಿರುವ ನಾಲ್ಕು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಆಯ್ಕೆಯಾಗಿದೆ. ಪ್ರಪಂಚದ ಜನರು ಭಾರತಕ್ಕೆ ಬಂದಾಗ ಅವರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳು, ಸುಂದರವಾದ ಮತ್ತು ಆರೋಗ್ಯಕರ ಪರಿಸರದೊಂದಿಗೆ ಸಮಗ್ರ ಚಿಕಿತ್ಸೆ ನೀಡಬೇಕು. ಈ ಕಾರಣಕ್ಕೆ ಹಿಮಾಚಲದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಿದೆ ಎಂದು ಹೇಳಿದರು.

    ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ ಎಂದ ಅವರು ಹಿಮಾಚಲ ಪ್ರದೇಶವನ್ನು ಅವಕಾಶಗಳ ನಾಡು ಎಂದು ಬಣ್ಣಿಸಿದರು. ಪ್ರವಾಸೋದ್ಯಮ ಕ್ಷೇತ್ರ ಅಪಾರ ಉದ್ಯೋಗವನ್ನು ನೀಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಮತ್ತು ವಿದ್ಯುತ್ ಉತ್ಪಾದಿಸಲು ಫಲವತ್ತಾದ ಭೂಮಿಯನ್ನು ಒದಗಿಸುತ್ತದೆ ಎಂದು ಹೇಳಿದರು.

    ನೀವು ಹಾಕಿದ ಮತಗಳಿಂದ ಏಮ್ಸ್ ಬಿಲಾಸ್‌ಪುರ, ಅಟಲ್ ಟನಲ್, ಹೈಡ್ರೋ-ಎಂಜಿನಿಯರಿಂಗ್ ಕಾಲೇಜು, ಮತ್ತು ಮೆಡಿಕಲ್ ಡಿವೈಸ್ ಪಾರ್ಕ್ ಉದ್ಘಾಟನೆಯಾಗಿದೆ. ಅಭಿವೃದ್ಧಿ ಯೋಜನೆಗಳನ್ನು ಜೈರಾಮ್ ಠಾಕೂರ್ ರಾಜ್ಯಕ್ಕೆ ತಂದು ಯಶಸ್ವಿಗೊಳಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇಂದು ನರೇಂದ್ರ ಮೋದಿ ಬಿಲಾಸ್‌ಪುರದ ಏಮ್ಸ್ ಸೇರಿದಂತೆ ರೂ. 3,650 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅಕ್ಟೋಬರ್ 2017ರಲ್ಲಿ ಆಸ್ಪತ್ರೆಯ ಕಾಮಗಾರಿ ಕೆಲಸಗಳಿಗೆ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಿದ್ದರು.

    ಬಿಲಾಸ್ ಪುರದ ಏಮ್ಸ್ 1,470 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳು, 18 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳು ಸೇರಿದಂತೆ 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ಬಂಧಿಸಿದ್ದ ಅತ್ಯಾಚಾರ ಆರೋಪಿಗೆ ಕೊರೊನಾ- 60 ಪೊಲೀಸರಿಗೆ ಕ್ವಾರಂಟೈನ್

    ಮೈಸೂರಿನಲ್ಲಿ ಬಂಧಿಸಿದ್ದ ಅತ್ಯಾಚಾರ ಆರೋಪಿಗೆ ಕೊರೊನಾ- 60 ಪೊಲೀಸರಿಗೆ ಕ್ವಾರಂಟೈನ್

    ರಾಯ್‍ಪುರ: ಕರ್ನಾಟಕದ ಮೈಸೂರಿನಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಬಂಧಿಸಿ ಕರೆತಂದ ಹಿನ್ನೆಲೆಯಲ್ಲಿ 60 ಮಂದಿ ಪೊಲೀಸರನ್ನು ಕ್ವಾರಂಟೈನ್ ಮಾಡಿರುವ ಘಟನೆ ಛತ್ತೀಸ್‍ಗಢದ ಬಿಲಾಸ್‍ಪುರಲ್ಲಿ ಬೆಳಕಿದೆ ಬಂದಿದೆ.

    ಬಿಲಾಸ್‍ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಿ, ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಠಾಣೆಯ ಎಲ್ಲಾ ಪೊಲೀಸರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಿಸಾಲ್‍ಪುರ ಎಸ್‍ಪಿ ಪ್ರಶಾಂತ್ ಅರ್ಗವಾಲ್ ಮಾಹಿತಿ ನೀಡಿದ್ದಾರೆ.

    28 ವರ್ಷದ ಅತ್ಯಾಚಾರ ಆರೋಪಿಯನ್ನು ಮೈಸೂರಿನಲ್ಲಿ ಸಿವಿಲ್ ಪೊಲೀಸ್ ಠಾಣೆಯ ನಾಲ್ವರ ಪೊಲೀಸರ ತಂಡ ಬಂಧಿಸಿ ಬಿಲಾಸ್‍ಪುರಕ್ಕೆ ಕರೆತಂದಿತ್ತು. ಕಳೆದ ತಿಂಗಳು ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಮೈಸೂರಿನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭಿಸಿತ್ತು ಎಂದು ಎಸ್‍ಪಿ ತಿಳಿಸಿದ್ದಾರೆ.

    ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಆತನಿಗೆ ಟೆಸ್ಟ್ ನಡೆಸಿದ ವೇಳೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಕೂಡಲೇ ಎಚ್ಚೆತ್ತು ಎಲ್ಲಾ ಪೊಲೀಸರ ಗಂಟಲು ಮಾದರಿಯನ್ನು ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಅಲ್ಲದೇ ಆರೋಪಿಯ ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಎಸ್‍ಪಿ ವಿವರಿಸಿದ್ದಾರೆ.