Tag: bikramjeet kanwarpal

  • ಬಾಲಿವುಡ್ ನಟ ವಿಕ್ರಂಜಿತ್ ಕೊರೊನಾಗೆ ಬಲಿ

    ಬಾಲಿವುಡ್ ನಟ ವಿಕ್ರಂಜಿತ್ ಕೊರೊನಾಗೆ ಬಲಿ

    ಮುಂಬೈ: ಬಾಲಿವುಡ್ ಮತ್ತು ಕಿರುತೆರೆ ನಟ ವಿಕ್ರಂಜೀತ್ ಕನ್ವರ್ ಪಾಲ್ ನಿಧನರಾಗಿದ್ದಾರೆ. 52 ವರ್ಷದ ವಿಕ್ರಂಜಿತ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎಂದು ನಟ ಅಶೋಕ್ ಪಂಡಿತ್ ಮಾಹಿತಿ ನೀಡಿದ್ದಾರೆ. ಸೇನಾಧಿಕಾರಿಯಾಗಿದ್ದ ವಿಕ್ರಂಜಿತ್ ನಿವೃತ್ತಿ ಬಳಿಕ 2003ರಿಂದ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರು.

    https://twitter.com/ashokepandit/status/1388328529318666247

    ಇಂದು ಬೆಳಗ್ಗೆ ಕೊರೊನಾದಿಂದಾಗಿ ವಿಕ್ರಂಜಿತ್ ಸಾವನ್ನಪ್ಪಿರುವ ಸುದ್ದಿ ಆಘಾತವನ್ನುಂಟು ಮಾಡಿತು. ಓರ್ವ ನಿವೃತ್ತ ಸೇನಾಧಿಕಾರಿಯಾಗಿದ್ದ ವಿಕ್ರಂಜಿತ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಅವರ ಕುಟುಂಬ ಮತ್ತು ಆಪ್ತರ ಜೊತೆ ನಾವಿದ್ದೇವೆ ಎಂದು ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ.

    ಮನೋಜ್ ಬಾಜಪೇಯಿ, ರೋಹಿತ್ ರಾಯ್, ಶ್ರಿಯಾ, ನೀಲ್ ನಿತಿನ್ ಮುಕೇಶ್, ಸೇರಿದಂತೆ ಹಲವು ತಾರೆಯರು ಕಂಬನಿ ಮಿಡಿದಿದ್ದಾರೆ. ಓ ದೇವರೇ, ಎಂತಹ ನೋವಿನ ಸುದ್ದಿ. 14 ವರ್ಷಗಳಿಂದ ವಿಕ್ರಂ ನನಗೆ ಪರಿಚಯ. 1971ರಲ್ಲಿ ಸಿನಿಮಾವೊಂದರ ಚಿತ್ರೀಕರಣ ವೇಳೆ ನಮ್ಮ ಪರಿಚಯವಾಗಿತ್ತು. ಇದೊಂದು ಆಘಾತಕಾರವಾದ ಸುದ್ದಿ ಎಂದು ಮನೋಜ್ ಬಾಜಪೇಯಿ ಕಂಬನಿ ಮಿಡಿದಿದ್ದಾರೆ.