Tag: Biklu Shiva

  • ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ

    ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ

    ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಜಗದೀಶ್‌ನನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ವಹಿಸಿ 1ನೇ ಎಸಿಜೆಎಂ ಕೋರ್ಟ್‌ ಆದೇಶಿಸಿದೆ.

    ಜಗದೀಶ್‌ನನ್ನು (Jagga) ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ವಶಕ್ಕೆ ಪಡೆಯಿತು. 1 ನೇ ಎಸಿಜೆಎಂ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. 10 ದಿನ ಸಿಐಡಿ ಕಸ್ಟಡಿಗೆ ಪಡೆದಿದೆ. ಕೊಲೆ ಕೇಸ್ ಹಾಗೂ ಕೋಕಾ ಕಾಯ್ದೆಯಡಿ ಜಗ್ಗನನ್ನ ಸಿಐಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಬಿಕ್ಲು ಶಿವ ಹತ್ಯೆ ಕೇಸ್ – ಎ1 ಆರೋಪಿ ಜಗ್ಗ ಅರೆಸ್ಟ್

    ಜು.15 ರಂದು ಭಾರತಿನಗರದಲ್ಲಿ ಬಿಕ್ಲು ಶಿವನ ಕೊಲೆಯಾಗಿತ್ತು. ರೌಡಿಶೀಟರ್ ಕೊಲೆ ಕೇಸ್‌ನಲ್ಲಿ ಜಗದೀಶ್‌ ಎ1 ಆರೋಪಿಯಾಗಿದ್ದ. ಕೊಲೆಯ ನಂತರ ಚೆನ್ನೈ ಏರ್‌ಪೋರ್ಟ್‌ನಿಂದ ದುಬೈಗೆ ಎಸ್ಕೇಪ್ ಆಗಿದ್ದ.

    ಭಾರತಿನಗರ ಪೊಲೀಸ್‌ ಠಾಣೆಯಲ್ಲಿ ಬಿಕ್ಲು ಶಿವನ ಕೊಲೆ ಕೇಸ್ ದಾಖಲಾಗಿತ್ತು. ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್‌ಗೆ ಬಿಗ್‌ ರಿಲೀಫ್‌

  • ಬಿಕ್ಲು ಶಿವ ಕೊಲೆ ಕೇಸ್; ಬಂಧಿತ ಹಂತಕರ ಮೇಲೆ ರೌಡಿಶೀಟ್‌ ತೆರೆದ ಪೊಲೀಸರು

    ಬಿಕ್ಲು ಶಿವ ಕೊಲೆ ಕೇಸ್; ಬಂಧಿತ ಹಂತಕರ ಮೇಲೆ ರೌಡಿಶೀಟ್‌ ತೆರೆದ ಪೊಲೀಸರು

    ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಮಾಡಿ ಬಂಧನವಾಗಿರುವ ಹಂತಕರ ವಿರುದ್ಧ ಪೊಲೀಸರು ರೌಡಿಶೀಟ್‌ ತೆರೆದಿದ್ದಾರೆ.

    ಬಂಧಿತ 17 ಮಂದಿ ಆರೋಪಿಗಳಲ್ಲಿ 9 ಮಂದಿ ವಿರುದ್ಧ ರೌಡಿಶೀಟ್‌ ತೆರೆಯಲಾಗಿದೆ. ಕಿಂಗ್‌ಪಿನ್ ಕಿರಣ್, ಮದನ್, ವಿಮಲ್, ಪ್ರದೀಪ್, ಪ್ಯಾಟ್ರಿಕ್, ಸ್ಯಾಮ್ಯುಯೆಲ್, ಸೇರಿ 9 ಮಂದಿಯ ವಿರುದ್ಧ ರೌಡಿ ಪಟ್ಟಿಯನ್ನ ಭಾರತಿ ನಗರ ಪೊಲೀಸರು ತೆರೆದಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

    ಕೊಲೆ ಕೇಸ್ ಸೇರಿದಂತೆ ಬಂಧಿತರ ಮೇಲೆ ಹಲವು ಕೇಸ್‌ಗಳು ಇರುವುದು ತನಿಖೆಯ ವೇಳೆ ಪತ್ತೆಯಾಗಿದ್ದರಿಂದ ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ.‌ ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜಗ್ಗ ಅಲಿಯಾಸ್ ಜಗದೀಶ್‌, ಬಿಕ್ಲು ಶಿವನ ಕೊಲೆ ಬಳಿಕ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಆತ ಬಂಧನವಾದ ಬಳಿಕ ಆತನ ಮೇಲೆಯು ಕೂಡ ರೌಡಿ ಪಟ್ಟಿ ತೆರೆಯಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಆರೋಪಿ ವಿರುದ್ಧ ನಗರದ ಇಂದಿರಾನಗರ, ಜೆಬಿ ನಗರ, ಜೆಪಿ ನಗರ, ಕೆ.ಆರ್ ಪುರ ಸೇರಿದಂತೆ ಹಲವು ಕಡೆ ಪ್ರಕರಣಗಳಿದ್ದು, ಕೆಲವೊಂದು ಕೇಸ್‌ಗಳು ಟ್ರಯಲ್‌ನಲ್ಲಿರುವ ಕಾರಣ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿರುವ ಜಗ್ಗನ ಮೇಲೆ ಮತ್ತೆ ರೌಡಿ ಪಟ್ಟಿ ತೆರೆಯಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ – ಆರೋಪಿ ಜಗ್ಗ ದುಬೈಗೆ ಎಸ್ಕೇಪ್

  • ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

    ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

    – ಬೆಂಬಲಿಗರಿಲ್ಲದೇ ಬಿಕೋ ಎನ್ನುತ್ತಿದೆ ಶಾಸಕನ ಮನೆ
    – ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ

    ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಶಾಸಕ ಬೈರತಿ ಬಸವರಾಜ್ ಅವರು ಕಳೆದೆರಡು ದಿನಗಳಿಂದ ಮನೆಯಲ್ಲೇ ಇಲ್ಲ.

    ಬಿಕ್ಲು ಶಿವ ಹತ್ಯೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಅವರು ಎ5 ಆರೋಪಿಯಾಗಿದ್ದಾರೆ. ಭಾರತಿ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗುವಂತೆ ನೋಟಿಸ್ ನೀಡಲಾಗಿದೆ. ಆಗಿನಿಂದ ಶಾಸಕರು ಮನೆಯಲ್ಲಿಲ್ಲ. ಎರಡು ದಿನಗಳಿಂದ ಮನೆಗೆ ಬಂದಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಶಾಸಕರು ಮನೆಯಲ್ಲಿಲ್ಲದೇ ಬೆಂಬಲಿಗರು ಕೂಡ ಅತ್ತ ಸುಳಿದಿಲ್ಲ. ಹೀಗಾಗಿ, ಬೆಂಬಲಿಗರಿಲ್ಲದೇ ಶಾಸಕರ ಮನೆ ಬಿಕೋ ಎನ್ನುತ್ತಿದೆ.

    ಇಂದು ಬೆಳಗ್ಗೆ 11:30ಕ್ಕೆ ಠಾಣೆಗೆ ವಿಚಾರಣೆಗೆ ಶಾಸಕರು ಹಾಜರಾಗಬೇಕಿದೆ. ಅದಕ್ಕಾಗಿ ಠಾಣೆ ಮುಂದೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಠಾಣಾ ಸಿಬ್ಬಂದಿ ಜೊತೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

  • ಹೈಕೋರ್ಟ್ ಆದೇಶದಿಂದ ಅಡಕತ್ತರಿಯಲ್ಲಿ ಸಿಲುಕಿದ ಶಾಸಕ ಬೈರತಿ ಬಸವರಾಜ್

    ಹೈಕೋರ್ಟ್ ಆದೇಶದಿಂದ ಅಡಕತ್ತರಿಯಲ್ಲಿ ಸಿಲುಕಿದ ಶಾಸಕ ಬೈರತಿ ಬಸವರಾಜ್

    ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದ ಎ5 ಆರೋಪಿಯಾಗಿರುವ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್‌ಗೆ (Byrathi Basavaraj) ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.

    ಬಿಎನ್‌ಎಸ್‌ಎಸ್ 35 (3)ಯ ನಿಯಮಗಳನ್ನು ಪಾಲಿಸುವಂತೆ ಹೈಕೋರ್ಟ್ ತನಿಖಾಧಿಕಾರಿಗೆ ಸೂಚನೆ ನೀಡಿದೆ. ಅಲ್ಲದೇ, ಕೊಲೆಯಲ್ಲಿ ಆರೋಪಿ ಪಾತ್ರವಿರುವ ಬಗ್ಗೆ ದೂರುದಾರೆ ಹೇಳಿರುವುದರಿಂದ ಅರೆಸ್ಟ್ ಮಾಡದಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಸಹ ಹೈಕೋರ್ಟ್ ಹೇಳಿದೆ. ಹೀಗಾಗಿ, ಇವತ್ತಿನ ಹೈಕೋರ್ಟ್ ಆದೇಶ ಬೈರತಿ ಬಸವರಾಜ್‌ಗೆ ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ. ಇದನ್ನೂ ಓದಿ: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ

    7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಶಿಕ್ಷೆಗಳ ಸೆಕ್ಷನ್‌ಗಳಿದ್ದಾಗ ಈ ಹಿಂದೆ ಸಿಆರ್‌ಪಿಸಿ 41a ಅಡಿ ನೋಟಿಸ್ ಕೊಡಬಹುದಿತ್ತು. ಈಗ ಬಿಎನ್‌ಎಸ್‌ಎಸ್ 35 (3) ಅಡಿ ನೋಟಿಸ್ ನೀಡಿ ಕಳಿಸಬಹುದು. ಅದೂ ತನಿಖಾಧಿಕಾರಿಗೆ ಸದ್ಯಕ್ಕೆ ರೋಲ್ ಕಂಡುಬಂದಿಲ್ಲ ಅನ್ನಿಸಿದಾಗ ಮಾತ್ರ. ಹೈಕೋರ್ಟ್‌ನಿಂದ ಆದೇಶ ಹೊರಬೀಳ್ತಿದ್ದಂತೆ ಪುಲಕೇಶಿನಗರ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ದೇವರಾಜ್, ಎಸಿಪಿ ಗೀತಾ ಠಾಣೆಗೆ ದೌಡಾಯಿಸಿದರು.‌ ತನಿಖಾ ತಂಡದ ಜೊತೆ ಅಧಿಕಾರಿಗಳ ದಿಢೀರ್ ಸಭೆ ಕೂಡ ನಡೆಸುತ್ತಿದ್ದು, ನಾಳೆ ಶಾಸಕ ಬೈರತಿ ಬಸವರಾಜ್ ವಿಚಾರಣೆ ಸಂಬಂಧ ಸಿದ್ಧತೆ ಕೈಗೊಳ್ಳಲಾಗಿದೆ.

    ವಿಚಾರಣೆಯ ಆಯಾಮಗಳು, ಏನೆಲ್ಲಾ ಪ್ರಶ್ನೆಗಳನ್ನ ಮಾಡಬೇಕು? ತನಿಖೆ ವೇಳೆ ಬೈರತಿ ಬಸವರಾಜ್ ವಿರುದ್ಧ ಏನೆಲ್ಲಾ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಅಂತಾ ಪರಿಶೀಲನೆ ನಡೆಸಲಾಗಿದೆ. ಹೈಕೋರ್ಟ್ ಸೂಚನೆ ಅನ್ವಯ ವಿಚಾರಣೆ ನಡೆಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದು, ಅರೆಸ್ಟ್ ಆಗ್ತಾರಾ ಅಥವಾ ಬಿಎನ್‌ಎಸ್‌ಎಸ್ 35 ಅಡಿ ನೋಟಿಸ್ ಕೊಟ್ಟು ಕಳಿಸ್ತಾರಾ ಎನ್ನುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪೊಲೀಸರು ಈವರೆಗಿನ ತನಿಖೆಯಲ್ಲಿ ಬೈರತಿ ಬಸವರಾಜ್ ರೋಲ್ ಸಣ್ಣ ಪ್ರಮಾಣದಲ್ಲಿ ಕಂಡುಬಂದರೂ ಬಂಧನ ಸಾಧ್ಯತೆ ಹೆಚ್ಚಿದೆ. ಶಾಸಕರ ವಿಚಾರಣೆ ಬಳಿಕ ಬಂಧನವಾ ಇಲ್ಲಾ ನೋಡಿಸ್ ಕೊಟ್ಟು ಕಳಿಸ್ತಾರಾ ಎಂಬುದು ಸದ್ಯದ ಕುತೂಹಲ. ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸಲ್ಲಿ ಬಿಗ್‌ ಟ್ವಿಸ್ಟ್‌ – ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ: ಬಿಕ್ಲು ಶಿವ ತಾಯಿ

  • ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ

    ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ

    ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಕಿರಣ್‌ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹೈಕೋರ್ಟ್‌ (High Court) ವಜಾಗೊಳಿಸಿದೆ.

    ಬೆಂಗಳೂರಲ್ಲಿ ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಕಿರಣ್ ಬಂಧನವನ್ನು ಆತನ ಪತ್ನಿ ಪ್ರಶ್ನಿಸಿದ್ದರು. ಪತಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಕಿರಣ್‌ ಪತ್ನಿ ಆಂಥೋನಿ ಶಿರ್ಲಿನ್ಯಾ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬಿಕ್ಲು ಶಿವ ಮರ್ಡರ್ ಕೇಸ್ – ಕೊಲೆ ಮಾಡಿದ್ದು ನಾವು ಎಂದು ಐವರು ಶರಣಾಗತಿ

    ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಜುಲೈ 16 ರ ಬೆಳಗ್ಗೆ ಪೊಲೀಸರು ಬಂದು ಕಿರಣ್ ಬಗ್ಗೆ ವಿಚಾರಿಸಿದರು. ತಕ್ಷಣ ಕಿರಣ್ ಪೊಲೀಸ್ ಠಾಣೆಗೆ ತೆರಳಿದ್ದ. ನಂತರ ಈ ಬಗ್ಗೆ ಮಾಹಿತಿಯಿಲ್ಲ ಎಂದು ದೂರಿದರು.

    ಕಾನೂನು ಪ್ರಕಾರ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಸರ್ಕಾರದ ಪರ ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಪ ಹೇಳಿಕೆ ನೀಡಿದ್ದರು. ಸರ್ಕಾರದ ಹೇಳಿಕೆ ದಾಖಲಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಇದನ್ನೂ ಓದಿ: ರೌಡಿಶೀಟರ್ ಶಿವಪ್ರಕಾಶ್ ಕೊಲೆ ಕೇಸ್‌ – ಮಾಜಿ ಸಚಿವ ಬೈರತಿ ಬಸವರಾಜ್ A5 ಆರೋಪಿ