Tag: Bike stunt

  • ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು

    ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜೋಡಿಗಳು (Couple) ಮದುವೆ ಮುನ್ನ ಫೋಟೋ ಶೂಟ್ ಮಾಡುವುದು ಕಾಮನ್. ವಿವಿಧ ಸ್ಥಳಗಳಲ್ಲಿ, ಭಿನ್ನ ಭಿನ್ನವಾಗಿ ಫೋಟೋ ತೆಗೆಸಿಕೊಂಡು ಜೋಡಿಗಳು ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ (Pre-Wedding Shoot) ಬೈಕ್ ಸ್ಟಂಟ್ (Bike Stunt) ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.

    ಜೋಡಿಗಳಿಬ್ಬರು ಮದುವೆಗೆ ಧರಿಸಿರುವ ಬಟ್ಟೆಯನ್ನು ಧರಿಸಿ ಬೈಕ್‍ವೊಂದರಲ್ಲಿ ಕುಳಿತಿದ್ದಾರೆ. ಅದಾದ ಬಳಿಕ ಗಾಳಿಯಲ್ಲಿ ಬೈಕ್ ಹಾರಿಸಿದ್ದಾರೆ. ಅದು ಕಾರಿನ ಮೇಲೆ ಹಾರಿದೆ. ಅಷ್ಟೇ ಅಲ್ಲದೇ ಕೆಲವು ಸ್ಟಂಟ್‍ಗಳನ್ನು ಮಾಡಿದ್ದಾರೆ. ಈ ರೀತಿ ಸ್ಟಂಟ್ ಮಾಡಲು ಕ್ರೇನ್‍ನ ಸಹಾಯ ಪಡೆದಿದ್ದಾರೆ.

    ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ವೀಡಿಯೋಕ್ಕೆ ನೆಟ್ಟಿಗರು ಬಿನ್ನ ಬಿನ್ನ ಕಾಮೆಂಟ್‍ಗಳನ್ನು ಹಾಕುತ್ತಿದ್ದಾರೆ. ಇಷ್ಟೊಂದು ಸ್ಟಂಟ್‍ಗಳನ್ನೆಲ್ಲಾ ಮಾಡಿದ್ದೀರಾ, ಈಗ ಮದುವೆಯನ್ನಾದರೂ ಆಗಿದ್ದೀರಾ ಎಂದು ಒಬ್ಬಾತ ಕೇಳಿದ್ದಾನೆ. ಇದನ್ನೂ ಓದಿ: ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಇನ್ನೂ ನೆಟ್ಟಿಗರು ಈ ವೀಡಿಯೋಕ್ಕೆ ಧೂಮ್ 4 ಸಿನಿಮಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ ಇದಕ್ಕೆ ರೋಹಿತ್ ಶೆಟ್ಟಿ ಈ ಫೋಟೋ ಶೂಟ್‍ಗೆ ನಿರ್ದೇಶನ ಮಾಡುತ್ತಿದ್ದಾರೆಯೇ ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೆಂಕಿ ಕಟ್ಟಿಂಗ್ – ತಲೆ ಸುಟ್ಕೊಂಡು ಆಸ್ಪತ್ರೆ ಸೇರಿದ

    Live Tv
    [brid partner=56869869 player=32851 video=960834 autoplay=true]

  • ಬೈಕ್ ಸ್ಟಂಟ್ ರಾಣಿಯರಿಗೆ ಬಿತ್ತು ಭಾರೀ ದಂಡ

    ಬೈಕ್ ಸ್ಟಂಟ್ ರಾಣಿಯರಿಗೆ ಬಿತ್ತು ಭಾರೀ ದಂಡ

    ಲಕ್ನೋ: ಹುಡುಗಿಯರಿಬ್ಬರು ಬೈಕ್‍ನಲ್ಲಿ ಸ್ಟಂಟ್ ಮಾಡಿ ಅದನ್ನು ಚಿತ್ರೀಕರಣ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಪೊಲೀಸರು ಬೈಕ್ ರೈಡ್ ಮಾಡಿದ ಹುಡುಗಿಯ ಮೇಲೆ 28 ಸಾವಿರ ರೂಪಾಯಿ ದಂಡ ಪ್ರಯೋಗ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಶಿವಾಂಗಿ ದಬಾಸ್ ತನ್ನ ಸ್ನೇಹಿತೆ ಕುಸ್ತಿಪಟು ಸ್ನೇಹಾ ರಘವಂಶಿಯ ಹೆಗಲ ಮೇಲೆ ಕೂತು ಬುಲೆಟ್ ಬೈಕ್‍ನಲ್ಲಿ ಗಾಜಿಯಾಬಾದ್‍ನಲ್ಲಿ ರೌಂಡ್ಸ್ ಹೊಡೆದಿದ್ದಾಳೆ.

    ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಠಾಣೆ ಪೊಲೀಸರು ಬೈಕ್ ರೈಡ್ ಮಾಡಿದ ಸ್ನೇಹಾ ರಘವಂಶಿಗೆ 11,00 ರೂಪಾಯಿ ಮತ್ತು ಬೈಕ್‍ನ ಮಾಲಿಕ ಸಂಜಯ್ ಕುಮಾರ್ ಎಂಬವರಿಗೆ 17,000 ರೂಪಾಯಿ ಸೇರಿ ಒಟ್ಟು 28,000 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿವಾಂಗಿ, ನಾನು ನನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದೆ. ಇದು ಕೆಲವೇ ದಿನಗಳಲ್ಲಿ ವೈರಲ್ ಆಗಿತ್ತು. ಕಡೆಗೆ ಪೊಲೀಸರು ಈ ವೀಡಿಯೋವನ್ನು ನೋಡಿ ನಮಗೆ ದಂಡ ಪ್ರಯೋಗಿಸಿದ್ದಾರೆ ಎಂದಿದ್ದಾರೆ.

    ಗಾಜಿಯಾಬಾದ್ ಎಸ್.ಪಿ ರಾಮನಂದ್ ಕುಶ್ವಹ ಪ್ರತಿಕ್ರಿಯಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿ, ಲೈಸನ್ಸ್ ಇಲ್ಲದೆ ಬೈಕ್ ರೈಡ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ಸ್ಟಂಟ್ ಮಾಡಿರುವ ಕಾರಣಕ್ಕಾಗಿ ಈ ಹುಡುಗಿಯರಿಗೆ ದಂಡ ಹಾಕಲಾಗಿದೆ ಎಂದಿದ್ದಾರೆ.

  • ಬೈಕ್ ಸ್ಟಂಟ್ ಮಾಡಲು ಆಕ್ಷೇಪ – ವ್ಯಕ್ತಿಯನ್ನು ನಡುಬೀದಿಯಲ್ಲಿ 28 ಬಾರಿ ಚುಚ್ಚಿ ಕೊಂದ ಅಪ್ರಾಪ್ತರು

    ಬೈಕ್ ಸ್ಟಂಟ್ ಮಾಡಲು ಆಕ್ಷೇಪ – ವ್ಯಕ್ತಿಯನ್ನು ನಡುಬೀದಿಯಲ್ಲಿ 28 ಬಾರಿ ಚುಚ್ಚಿ ಕೊಂದ ಅಪ್ರಾಪ್ತರು

    – ಬರ್ಬರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – ಸಿನಿಮಾ ರೀತಿ ಕೊಲೆಗೈದ ಬಾಲಕರು

    ನವದೆಹಲಿ: ಬೈಕ್ ಸ್ಟಂಟ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯನ್ನು ಮೂವರು ಅಪ್ರಾಪ್ತ ಬಾಲಕರು ನಡುಬೀದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯ ರಘುಬೀರ್ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು 25 ವರ್ಷದ ಮನೀಶ್ ಜಗ್ಗಿ ಎಂದು ಗುರುತಿಸಲಾಗಿದೆ. ಮನೀಶ್ ವಾಸವಿದ್ದ ಏರಿಯಾದಲ್ಲಿ ದಿನ ಮೂವರು ಅಪ್ರಾಪ್ತ ಬಾಲಕರು ಬೈಕ್ ರೈಸ್ ಮಾಡುವುದು ಮತ್ತು ಜನರು ಓಡಾಡುವ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡು ಮನೀಶ್ ಇಲ್ಲಿ ಬೈಕ್ ರೇಸ್‌ ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ.

    ಮನೀಶ್ ಬೈಕ್ ಸ್ಟಂಟ್‍ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ಅಪ್ರಾಪ್ತರು ಆತನ ಮೇಲೆ ಜಗಳಕ್ಕೆ ನಿಂತಿದ್ದಾರೆ. ಈ ಜಗಳ ವಿಕೋಪಕ್ಕೆ ಹೋಗಿ, ಮೂವರು ಬಾಲಕರು ನಡುರಸ್ತೆಯಲ್ಲಿ ಆತನನ್ನು ಕೊಂದು ಹಾಕಿದ್ದಾರೆ. ಬಾಲಕರು ನಡುರಸ್ತೆಯಲ್ಲಿ ಆತನ್ನು ಎಳೆದಾಡಿಕೊಂಡು ಮರ್ಡರ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿನಿಮಾ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಚಾಕುವಿನಿಂದ 28 ಬಾರಿ ಇರಿದು ಮನೀಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆಯಲ್ಲಿ ಇನ್ನೊಂದು ಶಾಂಕಿಂಗ್ ಸಂಗತಿ ಎಂದರೆ, ಮನೀಶ್ ಕೊಲೆಯಾಗುವ ವೇಳೆ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದರು. ಆದರೆ ಯಾರೂ ಕೂಡ ಮನೀಶ್ ಸಹಾಯಕ್ಕೆ ಬಂದಿಲ್ಲ. ವಾಹನ ಸವಾರರು, ದಾರಿಹೋಕರು ಎಲ್ಲರೂ ಮನೀಶ್ ಸಾಯುವುದನ್ನು ನೋಡುತ್ತಾ ಮುಂದೆ ಹೋಗಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮನೀಶ್‌ನನ್ನು ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ಆತ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

  • ಆನೆಗುಂದಿ ಉತ್ಸವದಲ್ಲಿ ಗಮನ ಸೆಳೆದ ಗಾಳಿಪಟ ಹಾರಾಟ, ಬೈಕ್ ಸ್ಟಂಟ್

    ಆನೆಗುಂದಿ ಉತ್ಸವದಲ್ಲಿ ಗಮನ ಸೆಳೆದ ಗಾಳಿಪಟ ಹಾರಾಟ, ಬೈಕ್ ಸ್ಟಂಟ್

    – ಮೈ ನೆವಿರೇಳಿಸಿದ ಸವಾರರು

    ಕೊಪ್ಪಳ: ಆನೆಗೊಂದಿ ಉತ್ಸವಕ್ಕೂ ಮುನ್ನ ನಡೆಯುತ್ತಿರುವ ಗಾಳಿಪಟ ಹಾರಾಟ ಹಾಗೂ ಬೈಕ್ ಸ್ಟಂಟ್‍ಗಳು ನೆರೆದವರ ಮೈ ನೆವಿರೇಳುವಂತೆ ಮಾಡಿದವು.

    ಆನೆಗೊಂದಿ ಉತ್ಸವವನ್ನು ಜನಾಕರ್ಷಣೆಯನ್ನಾಗಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಹಮ್ಮಿಕೊಂಡಿರುವ ನಾನಾ ಸ್ಪರ್ಧೆ, ಪ್ರದರ್ಶನಗಳ ಪೈಕಿ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಹಾರಿಸುವ ಕ್ರೀಡೆ ಜನರ ಗಮನ ಸೆಳೆಯಿತು.

    ಶುಭ್ರ ಬಾನಂಗಳದಲ್ಲಿ ಹತ್ತಾರು ನಮೂನೆ, ನಾನಾ ವಿನ್ಯಾಸದ ಗಾಳಿಪಟಗಳು ಹಾರಾಡಿ ಚಿತ್ತಾರ ಮೂಡಿಸಿದವು. ಅಂತರಾಷ್ಟ್ರೀಯ ಗಾಳಿಪಟ ಪ್ರದರ್ಶಕರಾದ ಬೆಂಗಳೂರಿನ ಕೆ.ವಿ.ರಾವ್, ಮೈಸೂರಿನ ಸುಭಾಶ್ ಹಾಗೂ ದೊಡ್ಡಬಳ್ಳಾಪುರದ ಮುನಿಷ್ ಸುಮಾರು 30ಕ್ಕೂ ಹೆಚ್ಚು ಮಾದರಿಯ ಗಾಳಿಪಟ ಹಾರಿಸಿ ಜನರ ಗಮನ ಸೆಳೆದರು.

    ಇದರಲ್ಲಿ ಮುಖ್ಯವಾಗಿ ರೋರಿಂಗ್, ಟೇಲ್, ಸಿರೀಸ್, ಸ್ಟಂಟ್, ಡೆಲ್ಟಾ, ಸಿಡಿ, ಅಕ್ಟೋಪಸ್, ಡಾಲ್ಫಿನ್, ಎಲ್‍ಇಡಿ, ಪ್ಲೇನ್, ಈಗಲ್, ಸ್ಪೈಡರ್, ಟೈಗರ್ ಮಾದರಿಯ ಗಾಳಿಪಟಗಳು ಜನರ, ಮುಖ್ಯವಾಗಿ ಶಾಲಾ ಮಕ್ಕಳ ಗಮನ ಸೆಳೆದವು. ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ, ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಗಾಳಿ ಪಟ ಹಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

    ಭಟ್ಕಳ ಮೂಲದ ಸಾಹಸಿ ಬೈಕ್ ರೈಡರ್ ಗಳಾದ ಅಖಿಲ್, ಸೈಯದ್ ಗೌಸ್ ಹಾಗೂ ಸಚಿನ್ ನೀಡಿದ ಬೈಕ್ ಸ್ಟಂಟ್ ಗಳು ನೆರೆದವರಲ್ಲಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಈ ಯುವಕರು ಸುಮಾರು ಅರ್ಧ ಗಂಟೆಗಳ ಕಾಲ ಬೈಕ್ಸ್ ಸ್ಟಂಟ್ ಮಾಡಿದರು. ಫ್ರಿಸ್ಟೈಲ್ ರೈಡಿಂಗಿನಲ್ಲಿ ವೀಲ್ಹಿಂಗ್, ಸ್ಟಾಪಿ, ಫ್ಲ್ಯಾಗ್ ಮಾರ್ಚಿಂಗ್, ಡ್ರಪ್ಟಿಂಗ್, ಚೈನ್ ಶೋ, ಬರ್ನೊ, ಹ್ಯಾಂಡಲ್ ಕ್ರಿಷ್, ಸ್ಟಾಂಡಿಂಗ್, ಸ್ಲಿಪಿಂಗ್, 350 ಡಿಗ್ರಿ ಸ್ಟಂಟ್, ಫೈಯರ್ ರಿಂಗ್ ಹೀಗೆ ನಾನಾ ನಮೂನೆಯ ಸ್ಟಂಟ್ ಮಾಡುವ ಮೂಲಕ ಜನರ ಗಮನ ಸೆಳೆದರು.