Tag: Bike Racing

  • ಅರವಿಂದ್ ಬೈಕ್ ರೈಡಿಂಗ್ ಮೆಚ್ಚಿ, ಬಿಗ್‍ಮನೆಯ ಪಯಣ ಬಿಚ್ಚಿಟ್ಟ ಮನೆಮಂದಿ

    ಅರವಿಂದ್ ಬೈಕ್ ರೈಡಿಂಗ್ ಮೆಚ್ಚಿ, ಬಿಗ್‍ಮನೆಯ ಪಯಣ ಬಿಚ್ಚಿಟ್ಟ ಮನೆಮಂದಿ

    ಬಿಗ್ ಮನೆಗೆ ಅರವಿಂದ್ ಎಂಟ್ರಿಕೊಟ್ಟ ಬೈಕ್ ಬಂದಿದೆ. ಅರವಿಂದ್‍ಗೆ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿ ಮನೆಮನೆಯ ಉಳಿದ ಸದಸ್ಯರಿಗೂ ಆಗಿದೆ. ಅರವಿಂದ್ ತಮ್ಮ ಜರ್ನಿ ಬಗ್ಗೆ ಹೇಳಿದ ಬಳಿಕ ತನ್ನ ಪ್ರತಿ ಸ್ಪರ್ಧಿಗಳು ಕೂಡ ಅರವಿಂದ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

     

    ಅರವಿಂದ್ ನನಗೆ ಉತ್ತಮ ಸ್ನೇಹಿತ, ನನಗೆ ಟಾಸ್ಕ್ ವಿಷಯದಲ್ಲಿ ನನಗೆ ತುಂಬಾ ಸ್ಪೂರ್ತಿ ಆಗ್ತಿರಿ. ಯಾವತ್ತು ಖುಷಿಯಾಗಿ ಇರೋಕೆ ಇಷ್ಟ ಪಡುತ್ತೀರಿ ಇದು ನನಗೆ ತುಂಬಾ ಇಷ್ಟ ಆಗುತ್ತೆ ಎಂದು ದಿವ್ಯ ಸುರೇಶ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.

    ನನಗೆ ಅರವಿಂದ್ ಬೈಕ್ ರೇಸರ್ ಎಂದು ಕೇಳಿದ ಬಳಿಕ ನನಗೆ ಅವರನ್ನು ಈ ಮನೆಯಲ್ಲಿ ಕಾಣಲು ತುಂಬಾ ಸಂತೋಷ ಪಟ್ಟಿದ್ದೀನಿ. ನನಗೆ ಪ್ರಬಲವಾದ ಪ್ರತಿ ಸ್ಪರ್ಧಿಯಾಗಿ ಅರವಿಂದ್‍ನ್ನು ಕಂಡಿದ್ದೇನೆ. ಒಬ್ಬ ವ್ಯಕ್ತಿ ಅವನ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಬೇಕು ಎನ್ನುವುದಕ್ಕೆ ಅರವಿಂದ್ ಉತ್ತಮ ಉದಾಹರಣೆ. ಒಬ್ಬ ವ್ಯಕ್ತಿನ ನಂಬಿದರೆ ತುಂಬಾ ಚೆನ್ನಾಗಿ ನೋಡುಕೊಳ್ಳುತ್ತೀಯ ಎಂಬುದನ್ನು ನೀನು ನನಗೆ ತೋರಿಸಿಕೊಟ್ಟಿದ್ದೀಯ ಎಂದು ನಗುತ್ತಲೆ ಮಂಜು ತನ್ನ ಎದುರಾಳಿ ಅರವಿಂದ್ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್

    ಬೈಕ್ ರೇಸಿಂಗ್ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದೆ ಅಷ್ಟೆ. ಆದರೆ ನಿಮ್ಮನ್ನು ಈ ಮನೆಯಲ್ಲಿ ನೋಡಿದ ಬಳಿಕ ತುಂಬಾ ಹೆಮ್ಮೆ ಅನಿಸಿತು. ನೀವು ಈ ಮನೆಯಲ್ಲಿ ಎಲ್ಲರೊಂದಿಗು ಹೊಂದಿಕೊಂಡು ಇಷ್ಟು ವಾರ ಬಂದಿರುವುದು ತುಂಬಾ ಖುಷಿ ಆಯ್ತು. ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡುತ್ತೀರಿ ಇದೆಲ್ಲ ನನಗೆ ಹಿಡಿಸಿದೆ ಎಂದು ವೈಷ್ಣವಿ ತಿಳಿಸಿದರು.

    ಬಳಿಕ ಬಂದ ಪ್ರಶಾಂತ್ ಸಂಬರಗಿ, ನಾನು ಅರವಿಂದ್‍ನ ಮೊದಲ ಬಾರಿಗೆ ನೋಡಿದ್ದ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಕಾಣದೆ ಇಂದಿಗೂ ಕೂಡ ಹಾಗೆ ಇದೆ. ಅರವಿಂದ್ ಅವರ ಫಿಟ್ನೆಸ್ ಒಬ್ಬ ಕ್ರಿಕೆಟ್ ಆಟಗಾರನ ಫಿಟ್ನೆಸ್‍ಗಿಂತಲು ಮಿಗಿಲಾಗಿದೆ. ಅವರೊಂದಿಗಿದ್ದಿದ್ದು ನನಗೆ ತುಂಬಾ ಅಭಿಮಾನ ಮೂಡಿಸಿದೆ ಎಂದರು.

    ಅರವಿಂದ್ ಬಗ್ಗೆ ನೀವೆಲ್ಲರೂ ಹೇಳಿದ್ದೀರಿ. ಅರವಿಂದ್ ಎಂದರೆ ನನಗೆ ತುಂಬಾ ಗೌರವ. ನಾನು ಈ ಮನೆಯಲ್ಲಿ ಅರವಿಂದ್ ಜೊತೆ ತುಂಬಾ ಸಂತೋಷದಿಂದ ಕಳೆದಿದ್ದೇನೆ ನಾನು ಅರವಿಂದ್ ಅವರನನ್ನು ಸಂಭ್ರಮಿಸುತ್ತೇನೆ. ಅರವಿಂದ್ ಎಂದರೆ ತುಂಬಾ ಇಷ್ಟ ಎಂದು ದಿವ್ಯಾ ಉರುಡಗ ಮನದ ಮಾತು ಬಿಚ್ಚಿಟ್ಟರು.

    ಮನೆಯವರೆಲ್ಲರ ಅಭಿಪ್ರಾಯದ ಬಳಿಕ ಅರವಿಂದ್, ನಾನು ಈ ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಇಷ್ಟು ದಿನ ಕಳೆದಿರುವುದಕ್ಕೆ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಲ್ಲಿ ನನ್ನೊಂದಿಗೆ ಇದೇ ಸ್ನೇಹ ಮುಂದುವರಿಸಿ ಎಂದು ಎಲ್ಲರೊಂದಿಗು ಕೇಳಿಕೊಂಡರು.

  • 225 ಕಿ.ಮೀ ವೇಗದಲ್ಲಿ ಹೋಗ್ತಿದ್ದಾಗ ಬೈಕಿನ ಬ್ರೇಕ್ ಹಾಕ್ದ ಪಕ್ಕದ ಸವಾರ: ವಿಡಿಯೋ ನೋಡಿ!

    225 ಕಿ.ಮೀ ವೇಗದಲ್ಲಿ ಹೋಗ್ತಿದ್ದಾಗ ಬೈಕಿನ ಬ್ರೇಕ್ ಹಾಕ್ದ ಪಕ್ಕದ ಸವಾರ: ವಿಡಿಯೋ ನೋಡಿ!

    ಸ್ಯಾನ್ ಮರಿನೋ: ಮೋಟರ್ ರೇಸಿಂಗ್ ವೇಳೆ 225 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕಿನ ಮುಂಬದಿ ಬ್ರೇಕನ್ನು ಮತ್ತೊಂದು ಬೈಕಿನ ಸವಾರ ಹಾಕುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ನಡೆದ ಎಫ್‍ಐಎಂ ಮೋಟೋ2 ಗ್ಯಾಂಡ್ ಪ್ರಿಕ್ಸ್ ಅಂತರಾಷ್ಟ್ರೀಯ ಚಾಂಪಿಯನ್‍ಷಿಪ್‍ ಬೈಕ್ ರೇಸಿಂಗ್ ವೇಳೆ ಇಟಲಿಯ ರೈಡರ್ ರೊಮಾನೋ ಫೆನಾಟಿಯವರು 225 ಕಿ.ಮೀಗೂ ಅಧಿಕ ವೇಗದಲ್ಲಿ ಸಾಗುತ್ತಿರುವಾಗಲೇ, ತಮ್ಮ ಪಕ್ಕದಲ್ಲೇ ಅಷ್ಟೇ ವೇಗದಲ್ಲಿ ಸಾಗುತ್ತಿದ್ದ ಸ್ಟೈಫಾನೋ ಮಾನ್ಜಿಯ ಬೈಕಿನ ಮುಂಬಾಗದ ಬ್ರೇಕ್‍ನ್ನು ಒತ್ತಿದ್ದಾರೆ. ಬ್ರೇಕ್ ಒತ್ತುತ್ತಿದಂತೆ ಬೈಕ್ ಅಲುಗಾಡಿದ್ದು, ಕೂಡಲೇ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸವಾರ ಸ್ಟೈಫಾನೋ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

    ಈ ರೇಸಿಂಗ್ ಕೂಟವು ಅಂತರಾಷ್ಟ್ರೀಯ ಮಟ್ಟದಲ್ಲಿ ನೇರಪ್ರಸಾರವಾಗುತ್ತಿದ್ದು, ಬೈಕ್ ಸವಾರ ಮತ್ತೊಂದು ಬೈಕಿನ ಬ್ರೇಕ್ ಹಾಕುತ್ತಿರುವ ದೃಶ್ಯ ನೋಡುಗರನ್ನು ತಲ್ಲಣಗೊಳಿಸಿದೆ. ಅಲ್ಲದೇ ರೈಡರ್ ವಿರುದ್ಧ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

    ಕೂಡಲೇ ಎಚ್ಚೆತ್ತ ಮೋಟೋ ಜಿಪಿ ಆಯೋಜಕರು ಫೆನಾಟಿಗೆ 2 ವರ್ಷಗಳ ಕಾಲ ರೇಸ್ ಮೇಲೆ ನಿಷೇಧ ಹೇರಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾದ ಕೂಡಲೇ ಫೆನಾಟಿ ತಮ್ಮ ರೇಸಿಂಗ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

    https://twitter.com/2018MotoGP/status/1039597214648098816

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=P_WO9RtoBIk