Tag: Bike Inspection

  • ಪೊಲೀಸ್ ಜೀಪ್‍ಗೆ ತಳ್ಳಿ ಮಂಡ್ಯದಲ್ಲಿ ಪಿಎಸ್‍ಐ ಗೂಂಡಾಗಿರಿ

    ಪೊಲೀಸ್ ಜೀಪ್‍ಗೆ ತಳ್ಳಿ ಮಂಡ್ಯದಲ್ಲಿ ಪಿಎಸ್‍ಐ ಗೂಂಡಾಗಿರಿ

    ಮಂಡ್ಯ: ಬೈಕ್ ತಪಾಸಣೆ ವೇಳೆ ಯುವಕ ಪ್ರಶ್ನಿಸಿದ್ದಕ್ಕೆ ಪಿಎಸ್‍ಐ ಆತನ ಮೇಲೆ ಹಲ್ಲೆ ನಡೆಸಿ, ಅಮಾನವೀಯ ವರ್ತಿಸಿ ವಿಕೃತಿ ಮೆರೆದಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಘಟನೆ ನಡೆದಿದ್ದು, ಮದ್ದೂರು ಪೊಲೀಸ್ ಠಾಣೆ ಪಿಎಸ್‍ಐ ಅಯ್ಯನಗೌಡ ದುರ್ವರ್ತನೆ ತೋರಿದ್ದಾರೆ. ಯುವಕನನ್ನು ದನದ ರೀತಿ ಜೀಪಿಗೆ ತುಂಬಿದ್ದಾರೆ. ಮಾತ್ರವಲ್ಲದೆ ಯುವಕ ಜೀಪ್ ಹತ್ತುತ್ತಿದ್ದಂತೆ ಬನಬಂದಂತೆ ಥಳಿಸಿದ್ದಾರೆ. ಜೀಪ್ ಡೋರ್ ನಲ್ಲಿ ಯುವಕನ ಕಾಲು ಜಜ್ಜಿ ಅಮಾನವೀಯವಾಗಿ ವರ್ತಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ಯುವಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಬೈಕ್ ತಪಾಸಣೆ ವೇಳೆ ಯುವಕ ಪ್ರಶ್ನಿಸಿದ್ದು, ಈ ವೇಳೆ ಮಾತಿಗೆ ಮಾತು ಬೆಳಿದಿದೆ. ಇಷ್ಟಕ್ಕೆ ಗರಂ ಆದ ಪಿಎಸ್‍ಐ, ಅಮಾನವೀಯ ರೀತಿಯಲ್ಲಿ ವರ್ತಿಇಸಿದ್ದಾರೆ. ಅಧಿಕಾರಿಯ ವರ್ತನೆ ಕಂಡು ಸಾರ್ವಜನಿಕರ ಸಹ ಆಕ್ರೋಶ ವ್ಯಕ್ತಪಡಿಸಿದ್ದಾಋಎ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.