Tag: Bikaner

  • Rajasthan | ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – 9 ಮಂದಿ ಸಾವು, 8 ಜನರಿಗೆ ಗಾಯ

    Rajasthan | ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – 9 ಮಂದಿ ಸಾವು, 8 ಜನರಿಗೆ ಗಾಯ

    ಜೈಪುರ: ಸಿಲಿಂಡರ್ ಸ್ಫೋಟಗೊಂಡು 3 ಅಂತಸ್ತಿನ ಅಂಗಡಿ ಕುಸಿದು ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ (Rajasthan) ಬಿಕಾನೆರ್ (Bikaner) ಜಿಲ್ಲೆಯಲ್ಲಿ ನಡೆದಿದೆ.

    ಬಿಕಾನೆರ್ ನಗರದ ಜನನಿಬಿಡ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮದನ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಅಂಗಡಿಯ ಮೊದಲ ಮಹಡಿ ಕುಸಿದು ಬಿದ್ದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಬೆಂಕಿ ಹಚ್ಚೋ ಬಿಜೆಪಿ ಪ್ರಯೋಗ ವಿಫಲ: ದಿನೇಶ್ ಗುಂಡೂರಾವ್

    ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿದ್ದ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯವರೆಗೆ 9 ಜನರು ಸಾವನ್ನಪ್ಪಿದ್ದಾರೆ ಎಂದು ಎಎಸ್ಪಿ ವಿಶಾಲ್ ಜಂಗಿಡ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇದು ನಿರಂತರ ಕಾರ್ಯಾಚರಣೆ – ಕಿರಣ್ ರಿಜಿಜು

    ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣಾ ಮತ್ತು ಪೊಲೀಸರ ಜಂಟಿ ತಂಡ ಕಟ್ಟಡದ ಅಡಿಯಿಂದ ಐದು ಮೃತದೇಹಗಳನ್ನು ಹೊರತೆಗೆದಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕೋರ್ಟ್ ಆದೇಶದ ಬಳಿಕ ಜನಾರ್ದನ ರೆಡ್ಡಿ ಶಾಸಕತ್ವ ಅನರ್ಹತೆ ಬಗ್ಗೆ ತೀರ್ಮಾನ – ಯು.ಟಿ.ಖಾದರ್

  • ರಾಜಸ್ಥಾನದಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ 6 ಮಂದಿ ದುರ್ಮರಣ

    ರಾಜಸ್ಥಾನದಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ 6 ಮಂದಿ ದುರ್ಮರಣ

    ಜೈಪುರ: ರಾಜಸ್ಥಾನದ (Rajasthan) ಬಿಕಾನೇರ್‌ನ ಮಹಾಜನ್‌ನ ಜೈತ್‌ಪುರ ಟೋಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ.

    ಮೃತರನ್ನು ಆರತಿ, ದುಬ್ಬು, ಭೂಮಿಕಾ, ನೀರಜ್ ಕುಮಾರ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ. ಅವರು ಹನುಮಾನ್‌ಗಢ್‌ನ ದಬ್ವಾಲಿ ನಿವಾಸಿಗಳಾಗಿದ್ದು, ಹರಿಯಾಣದ ಪರವಾನಗಿ ಪ್ಲೇಟ್ ಹೊಂದಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನೂ ಓದಿ: Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಎಫ್‌ಐಆರ್‌!

    ಭೀಕರ ಅಪಘಾತಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ವೇಳೆ ಇಬ್ಬರು ಪ್ರಯಾಣಿಕರು ಕಾರಿನಿಂದ ಹೊರಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿದೆ. ಇದನ್ನೂ ಓದಿ: ವಿಶ್ವಾದ್ಯಂತ ಸಾಫ್ಟ್‌ವೇರ್‌ ಸ್ಥಗಿತ – ವಿಮಾನ, ಸ್ಟಾಕ್‌ ಎಕ್ಸ್‌ಚೇಂಜ್‌, ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

  • ರಾಜಸ್ತಾನದಲ್ಲಿ ಐಎಎಫ್‍ನ ಮಿಗ್-21 ಯುದ್ಧ ವಿಮಾನ ಪತನ- ಪೈಲಟ್ ಪಾರು

    ರಾಜಸ್ತಾನದಲ್ಲಿ ಐಎಎಫ್‍ನ ಮಿಗ್-21 ಯುದ್ಧ ವಿಮಾನ ಪತನ- ಪೈಲಟ್ ಪಾರು

    ಬಿಕಾನೇರ್: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು ರಾಜಸ್ಥಾನದ ಬಿಕಾನೇರ್ ಪ್ರದೇಶದ ಬಳಿ ಪತನವಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಿಕಾನೇರ್ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶೋಭಾಸರ್ ಕಿ ಧನಿ ಎಂಬ ಪ್ರದೇಶದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದೆ. ಮಿಗ್-21 ಟೇಕ್ ಆಫ್ ಆಗುವ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಬಹುಶಃ ಇದರಿಂದಲೇ ವಿಮಾನದ ತಾಂತ್ರಿಕ ವ್ಯವಸ್ಥೆಯಲ್ಲಿ ಏರುಪೇರಾಗಿ ವಿಮಾನ ಪತನವಾಗಿದೆ ಎಂದು ಐಎಎಫ್ ಅಧಿಕಾರಿಗಳು ಶಂಕಿಸಿದ್ದಾರೆ. ಈ ವಿಮಾನವನ್ನು ರಾಜಸ್ತಾನದಲ್ಲಿರುವ ಐಎಎಫ್‍ನ ನಾಲ್ ವಿಮಾನ ನಿಲ್ದಾಣದಿಂದ ಗಸ್ತು ಕಾರ್ಯಚರಣೆಗೆಂದು ತೆಗೆದುಕೊಂಡು ಹೋಗಲಾಗಿತ್ತು.

    ವಿಮಾನ ಪತನಗೊಳ್ಳುವ ವಿಷಯ ಅರಿವಿಗೆ ಬರುತ್ತಿದಂತೆ ಮೊದಲು ಪೈಲಟ್ ಪ್ಯಾರಾಚ್ಯೂಟ್ ನೆರವಿನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಶೋಭಾಸರ್ ಕಿ ಧನಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಬಿಕಾನೇರ್‍ನ ಎಸ್‍ಪಿ ಪ್ರದೀಪ್ ಮೋಹನ್ ಶರ್ಮಾ ಅವರು ತಿಳಿಸಿದ್ದಾರೆ.

    ಈ ಬಗ್ಗೆ ಐಎಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ರಾಜಸ್ತಾನದ ಬಿಕಾನೇರ್ ಬಳಿ ಮಿಗ್-21 ಯುದ್ಧ ವಿಮಾನ ಗಸ್ತು ತಿರುಗುತ್ತಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ತಾಂತ್ರಿಕ ದೋಷ ಉಂಟಾಗಿ ವಿಮಾನ ಪತನವಾಗಿರಬಹುದು. ಈ ಬಗ್ಗೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ರಾಷ್ಟ್ರಗಳು ಗಡಿಯಲ್ಲಿ ಒಬ್ಬರ ಮೇಲೊಬ್ಬರು ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಮಿಗ್-21 ಯುದ್ಧ ವಿಮಾನ ಪತನವಾಗಿದೆ. ಅಲ್ಲದೆ ಕಳೆದ ಫೆ. 27 ರಂದು ಪಾಕ್ ಹಾಗೂ ಭಾರತದ ಜೆಟ್‍ಗಳ ನಡುವೆ ಜಮ್ಮು-ಕಾಶ್ಮೀರಕ್ಕಾಗಿ ಡಾಗ್‍ಫೈಟ್ ಕೂಡ ನಡೆದಿತ್ತು. ಈ ಸಂದರ್ಭದಲ್ಲಿ ಮಿಗ್-21 ಚಲಾಯಿಸುತ್ತಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv