Tag: bijp

  • ಜಿಂದಾಲ್ ದಂಗಲ್‍ಗೆ ಟ್ವಿಸ್ಟ್- ಬಿಎಸ್‍ವೈ ಶತ್ರುವೇ ಈಗ ಬಿಜೆಪಿಯ ಪರಮಮಿತ್ರ

    ಜಿಂದಾಲ್ ದಂಗಲ್‍ಗೆ ಟ್ವಿಸ್ಟ್- ಬಿಎಸ್‍ವೈ ಶತ್ರುವೇ ಈಗ ಬಿಜೆಪಿಯ ಪರಮಮಿತ್ರ

    ಬೆಂಗಳೂರು: ಜಿಂದಾಲ್ ದಂಗಾಲ್‍ಗೆ ಸ್ಫೋಟಕ ಟ್ವಿಸ್ಟ್ ದೊರಕಿದ್ದು, ಜಿಂದಾಲ್ ಅಕ್ರಮದ ಬಗ್ಗೆ ಬಿಜೆಪಿಗೆ ಮಾಹಿತಿ ಕೊಟ್ಟವರಾರು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಒಂದು ಕಾಲದ ಬಿಎಸ್‍ವೈ ಶತ್ರುವಾಗಿದ್ದ ವ್ಯಕ್ತಿಯೇ ಈಗ ಮಿತ್ರರಾಗಿದ್ದಾರೆ. ಅವರು ಕೊಟ್ಟ ಮಾಹಿತಿಯಿಂದಾಗಿಯೇ ಬಿಜೆಪಿ ಈ ಹೋರಾಟಕ್ಕೆ ನಿರ್ಧರಿಸಿದ್ದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಜಿಂದಾಲ್‍ಗೆ ಸರ್ಕಾರಿ ಭೂಮಿ ಲೀಸ್ ಸಂಬಂಧ ಚರ್ಚೆ ನಡೆದಿದೆ. ಜಿಂದಾಲ್ ಹೋರಾಟ ಶುರುವಾಗುತ್ತಿದ್ದಂತೆಯೇ ಭೇಟಿ ನೀಡಿದ್ದು, ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂತೋಷ್ ಭೇಟಿ ಮೂಲಕ ಜಿಂದಾಲ್ ಹೋರಾಟಕ್ಕೆ ಹಿರೇಮಠ್ ಪ್ರೇರಿಪಿಸಿದ್ರಾ ಅನ್ನೋ ಅನುಮಾನ ಮೂಡಿದೆ. ಈ ಮೊದಲು ಯಡಿಯೂರಪ್ಪ ಭೇಟಿಗೆ ಎಸ್‍ಆರ್ ಹಿರೇಮಠ್ ಅವರು ಪತ್ರ ಬರೆದಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಹಿರೇಮಠ್ ಅವರು ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿ ಮಾಡಿದ್ದಾರೆ.

    ಬೇಟಿ ವೇಳೆ ಜಿಂದಾಲ್ ಅಕ್ರಮದ ಬಗ್ಗೆ ಸಂತೋಷ್ ಅವರಿಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. ಹಿರೇಮಠ್ ಕೊಟ್ಟ ದಾಖಲೆಗಳನ್ನು ಬಿಜೆಪಿ ನಾಯಕರಿಗೆ ಸಂತೋಷ್ ತಲುಪಿಸಿದ್ದಾರೆ. ಹಿರೇಮಠ್-ಸಂತೋಷ್ ಭೇಟಿ ಬೆನ್ನಲ್ಲೇ ನಿನ್ನೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಒಂದು ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದ ಹಿರೇಮಠ್, ಇಂದು ಅವರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಅಂದು ಯಡಿಯೂರಪ್ಪ ವಿರುದ್ಧ ಸಂಗ್ರಹಿಸಿದ್ದ ದಾಖಲೆಗಳು ಇಂದು ಸಿಎಂ ವಿರುದ್ಧ ಬಳಕೆಯಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

  • ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    – ಊಹಾಪೋಹಗಳಿಗೆ ಶಾಸಕ ಖಡಕ್ಕಾಗಿ ಪ್ರತಿಕ್ರಿಯೆ

    ಬೆಳಗಾವಿ: ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಬಿಜೆಪಿ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯೋಣ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗಣೇಶ್ ಹುಕ್ಕೇರಿಗೆ ಯಾವುದೇ ಅಸಮಾಧಾನ ಇಲ್ಲ. ಈಗಾಗಲೇ ಅವರ ತಂದೆ ಸಂಸದರಿದ್ದಾರೆ. ಗಣೇಶ್ ಹುಕ್ಕೇರಿಗೂ ವರಿಷ್ಠರು ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಏಳು ತಿಂಗಳಿಂದ ಇದನ್ನೇ ಹೇಳುತ್ತಿದ್ದಾರೆ. ಅಮಿತ್ ಶಾ ಜೊತೆ ಇದ್ದಾರಾ ಅಥವಾ ಮೋದಿ ಜೊತೆಗೆ ನಮ್ಮ ಶಾಸಕರು ಇದ್ದಾರೆಯಾ ಹೇಳಿ. ಇನ್ನೂ ಯಾರು ಬಿಜೆಪಿಗೆ ಹೋಗಿಲ್ಲ ಹೋದಾಗ ನೋಡೋಣ ಅಂತ ಅವರು ಹೇಳಿದ್ರು.

    ಯಾರು ಎಲ್ಲೂ ಹೋಗಲ್ಲ, ನಮ್ಮ ಪಕ್ಷ ಸುರಕ್ಷಿತವಾಗಿದೆ. ಕೆಲವರು ವೈಯಕ್ತಿಕ ಕೆಲಸದ ಮೇಲೆ ದೆಹಲಿಯಲ್ಲಿದ್ದಾರೆ. ಬಿಜೆಪಿಯವರು ಆರು ತಿಂಗಳಿನಿಂದ ಹೇಳ್ತಾನೆ ಇದ್ದಾರೆ ಅದನ್ನ ಪ್ರೂವ್ ಮಾಡೋಕು ಆಗ್ತಿಲ್ಲ. ಯಾರಾದ್ರೂ ದೊಡ್ಡ ಅಮೌಂಟ್ ಕೊಡ್ತೀನಿ ಅಂದ್ರೆ ಕೆಲವರು ಸ್ವಲ್ಪ ಯೋಚನೆ ಮಾಡ್ತಾರೆ. ಶನಿವಾರ ನಾನು, ಅವರು ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಗಣೇಶ್ ಹುಕ್ಕೇರಿ ಅವರು ಬಿಜೆಪಿಗೆ ಹೋಗಲ್ಲ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೇ ಶಾಸಕರು ಬಿಜೆಪಿ ಸೇರಿಲ್ಲ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದರೆ ಆ ಬಗ್ಗೆ ಕಾದು ನೋಡೋಣ. ಒಟ್ಟಿನಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಗಣೇಶ್ ಸ್ಪಷ್ಟನೆ:
    ಜನವರಿ 19ರಂದು ಶಾಸಕ ಗಣೇಶ್ ಹುಕ್ಕೇರಿಯವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವರ್ತ ಗಣೇಶ್ ಹುಕ್ಕೇರುಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷ ನನ್ನ ಮನೆ. ನನ್ನ ಮನೆಯನ್ನು ನಾನ್ಯಾಕೆ ತೊರೆದು ಹೋಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿಯೆದುರು ಸಿದ್ದರಾಮಯ್ಯ ಬಚ್ಚ- ಮಾಜಿ ಸಿಎಂ ಯಡಿಯೂರಪ್ಪ

    ಮೋದಿಯೆದುರು ಸಿದ್ದರಾಮಯ್ಯ ಬಚ್ಚ- ಮಾಜಿ ಸಿಎಂ ಯಡಿಯೂರಪ್ಪ

    ಉಡುಪಿ: ಮೋದಿಯೆದುರು ಸಿದ್ದರಾಮಯ್ಯ ಬಚ್ಚ. ನಿನಗೆ ಯಾರು ಭಯಪಡ್ತಾರೆ ಸಿದ್ದರಾಮಯ್ಯಾ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯ ಮೇಲೆ ಒಂದೂ ಆರೋಪಗಳಿಲ್ಲ. ನಿನ್ನ ಮೈಮೇಲೆ ಆರೋಪಗಳ ಸುರಿಮಳೆಯೇ ಇದೆ. ಸಿಎಂ ಅಂತಹ ವ್ಯಕ್ತಿಗೆ ಪ್ರಧಾನಿ ಮೋದಿ ಹೆದರಬೇಕಾ ಅಂತ ಪ್ರಶ್ನೆಮಾಡಿದರು.

    ಶ್ರೀಕೃಷ್ಣ- ಮಂಜುನಾಥಸ್ವಾಮಿ ಸಿಎಂ ಅವರನ್ನು ಕ್ಷಮಿಸಲ್ಲ. ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಬರದಿರುವುದು ಒಳ್ಳೆದಾಯ್ತು. ಸಿಎಂ ಬಂದ್ರೆ ಕೃಷ್ಣ ಮಠ ಅಪವಿತ್ರ ಆಗುತ್ತಿತ್ತು. ಧರ್ಮಸ್ಥಳ ದೇವಸ್ಥಾನಕ್ಕೆ ಸಿಎಂ ಮೀನು ಮಾಂಸ ತಿಂದು ಹೋದರು. ಮಂಜುನಾಥ ಸ್ವಾಮಿ ಬಾಗಿಲಲ್ಲೇ ತಡೆದು ನಿಲ್ಲಿಸಿದ. ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂದರು. ಶ್ರೀಕೃಷ್ಣ- ಮಂಜುನಾಥ ನಿನ್ನನ್ನು ಕ್ಷಮಿಸಲ್ಲ ಸಿದ್ದರಾಮಯ್ಯ ಎಂದು ಶಾಪ ಹಾಕಿದರು.

    ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಿಎಂ ಆಗಲು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಯಾತ್ರೆ ಹೊರಟಿದ್ದೇನೆ ಎಂದರು.

    ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇಂದು ಚಳಿಗಾಲದ ಅಧಿವೇಶನ ನಡೆಯಲು ಬಿಡಲ್ಲ ಎಂದು ಸವಾಲು ಹಾಕಿದರು. ಕ್ಲೀನ್ ಚಿಟ್ ಸಿಕ್ಕ ಎಲ್ಲ ಕೇಸು ಮರು ತನಿಖೆ ಮಾಡುತ್ತೇನೆ. ಸತ್ಯಾಂಶವನ್ನು ಹೊರಗೆಳೆಯುತ್ತೇನೆ ಅಂತ ಬಿಸೆ ವೈ ಹೇಳಿದ್ರು.