Tag: Bihar

  • ಬಿಹಾರ ಸಿಎಂ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ

    ಬಿಹಾರ ಸಿಎಂ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾದ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

    ಸಿಎಂ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಅವರ ರಾಜೀನಾಮೆಯನ್ನು ಕೇಳಿಲ್ಲ. ತೇಜಸ್ವಿ ಯಾದವ್ ರಾಜೀನಾಮೆಯನ್ನು ನೀಡುವುದೂ ಇಲ್ಲ ಎಂದು ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಇಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ  ಸಂಜೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

    ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಸಂಬಂಧ ಸಿಬಿಐ ದಾಖಲಿಸಿಕೊಂಡಿರುವ ದೂರಿನಿಂದ ತೇಜಸ್ವಿ ಯಾದವ್ ಆರೋಪ ಮುಕ್ತವಾಗಿ ಹೊರಬರಬೇಕು ಎಂದು ಜೆಡಿಯು ನಾಯಕರು ಹೇಳಿದ್ದರು. ಈ ಸಂಬಂಧ ತೇಜಸ್ವಿ ರಾಜೀನಾಮೆಗೆ ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದರು. ಆದರೆ ತೇಜಸ್ವಿ ಯಾದವ್ ರಾಜೀನಾಮೆ ನೀಡದೇ ಇದ್ದ ಕಾರಣ ನಿತೀಶ್ ಕುಮಾರ್ ಈಗ ರಾಜೀನಾಮೆ ನೀಡಿದ್ದಾರೆ.

     

     

  • ಶೌಚಾಲಯ ಕಟ್ಟದಿದ್ರೆ, ನಿಮ್ಮ ಹೆಂಡ್ತಿಯರನ್ನ ಮಾರ್ಕೊಳ್ಳಿ: ಜಿಲ್ಲಾ ಮ್ಯಾಜಿಸ್ಟ್ರೇಟ್

    ಶೌಚಾಲಯ ಕಟ್ಟದಿದ್ರೆ, ನಿಮ್ಮ ಹೆಂಡ್ತಿಯರನ್ನ ಮಾರ್ಕೊಳ್ಳಿ: ಜಿಲ್ಲಾ ಮ್ಯಾಜಿಸ್ಟ್ರೇಟ್

    ಔರಾಂಗಬಾದ್: ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯದ ಔರಂಗಾಬಾದ್ ಜೆಲ್ಲೆಯ ಮ್ಯಾಜಿಸ್ಟ್ರೇಟ್ ಕನ್ವಾಲ್ ತನುಜ್ ತಮ್ಮ ಭಾಷಣದಲ್ಲಿ ಆವೇಶಭರಿತರಾಗಿ ಶೌಚಾಲಯ ಕಟ್ಟಿಸಿಕೊಳ್ಳದವರು ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಜಿಲ್ಲೆಯ ಜಾಮ್‍ಹೋರ್ ಎಂಬ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಕನ್ವಾಲ್ ತನುಜ್ ಭಾಗಿಯಾಗಿದ್ದರು. ಈ ವೇಳೆ ಮನೆಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಮಹಿಳೆಯರು ಬಹಿರ್ದಸೆಗಾಗಿ ಹೊರ ಹೋಗಬೇಕಾಗಿದೆ. ಇದ್ರಿಂದಾಗಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸೇರಿದಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಕನ್ವಾಲ್ ತನುಜ್ ಆಕ್ರೋಶ ವ್ಯಕ್ತಪಡಿಸಿದ್ರು.

    ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರತಿಯೊಂದು ಮನೆಗೆ 12 ಸಾವಿರ ರೂ. ಧನ ಸಹಾಯ ಕೊಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳಿ. ಮನೆಯ ಹೆಣ್ಣು ಮಕ್ಕಳ ಮರ್ಯಾದೆಗಿಂತ 12 ಸಾವಿರ ರೂ. ಹೆಚ್ಚಿನದಲ್ಲ. ಭಾರತದಲ್ಲಿ 12 ಸಾವಿರ ರೂ. ಕಷ್ಟಪಡುವರು ಇಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗದಿದ್ರೆ, ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ಕನ್ವಾಲ್ ತನುಜ್ ಹೇಳಿದ್ದಾರೆ.

    ಇನ್ನೂ ಕನ್ವಾಲ್ ತನುಜ್ ಭಾಷಣದ ವೇಳೆಯಲ್ಲಿ ಗ್ರಾಮದ ವ್ಯಕ್ತಿಯೊಬ್ಬ ನನಗೆ ಶೌಚಾಲಯ ನಿರ್ಮಿಸಿಕೊಳ್ಳಲು 12 ಸಾವಿರ ರೂ. ಹಣವಿಲ್ಲ ಎಂದು ಕೇಳಿದಾಗ, ನಾನು ನಿನ್ನ ಹತ್ರ ನಂತರ ಮಾತನಾಡುತ್ತೇನೆ ಎಂದು ಕನ್ವಾಲ್ ತನುಜ್ ಉತ್ತರಿಸಿದ್ದಾರೆ.

    ಸರ್ಕಾರ ನೀಡುವ ಹಣವನ್ನು ನಿಮ್ಮ ಸ್ವಂತ ಖರ್ಚಿಗಾಗಿ ಬಳಸಿಕೊಳ್ಳಬೇಡಿ ಎಂದು ಅದರ ಸದುಪಯೋಗ ತೆಗೆದುಕೊಳ್ಳಬೇಕು ಎಂದು ಕನ್ವಾಲ್ ತನುಜ್ ಗ್ರಾಮಸ್ಥರಿಗೆ ತಿಳಿ ಹೇಳಿದರು. ಸದ್ಯ ತನ್ವಾಲ್ ತನುಜಾರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

  • ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ಪಾಟ್ನಾ: ಬಿಹಾರ ರಾಜ್ಯದ ಸರ್ಕಾರಿ ಕಚೇರಿಯ ಸಿಬ್ಬಂದಿ ಪ್ರತಿದಿನ ಹೆಲ್ಮೆಟ್ ಧರಿಸಿ ಬಂದು ತಮ್ಮ ಕೆಲಸ ನಿರ್ವಹಿಸುತ್ತಾರೆ. ಆಫೀಸ್‍ನ ಒಂದು ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಶ್ಚಿಮ ಬಿಹಾರದ ಚಂಪಾರಣ್ ಜಿಲ್ಲೆಯ ಅರೆರಾಜ್ ಬ್ಲಾಕ್‍ನ ಭೂ ದಾಖಲೆಗಳ ಕಚೇರಿಯ ಸಿಬ್ಬಂದಿ ತಮ್ಮ ಪ್ರಾಣ ರಕ್ಷಣೆಗಾಗಿ ಪ್ರತಿದಿನ ಹೆಲ್ಮೆಟ್ ಧರಿಸ್ತಾರೆ. ಕಚೇರಿಯ ಕಟ್ಟಡ ಬೀಳುವ ಹಂತದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ಹೆಲ್ಮೆಟ್ ಹಾಕ್ತಾರೆ.

    ಯಾವಗಲಾದ್ರೂ ಮೇಲ್ಚಾವಣಿಯ ಪ್ಲಾಸ್ಟರ್ ಕುಸಿದು ಬೀಳುತ್ತಿರುತ್ತದೆ. ಈಗಾಗಲೇ ಕೆಲ ಸಿಬ್ಬಂದಿಯ ತಲೆಯ ಮೇಲೆ ಸೀಲಿಂಗ್ ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ನಾವು ಹೆಲ್ಮೆಟ್ ಹಾಕ್ತೀವಿ ಎಂದು ಕಚೇರಿಯ ಉದ್ಯೋಗಿ ಎಂಡಿ ಪರ್ವೇಜ್ ಹೇಳ್ತಾರೆ.

    ಕಚೇರಿಯ ಕಟ್ಟಡಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಆದ್ರೆ ಅಧಿಕಾರಿಗಳಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಕಟ್ಟಡ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ಎರಡು ವರ್ಷಗಳ ಹಿಂದೆಯೇ ಕಟ್ಟಡ ವಾಸಕ್ಕೆ ಯೋಗ್ಯವಿಲ್ಲ ಮತ್ತು ಇದು ತುಂಬಾ ಅಪಾಯಕಾರಿ ಎಂದು ವರದಿ ನೀಡಿದ್ದಾರೆ. ಇನ್ನೂ ನಮಗೆ ಸರ್ಕಾರ ಮಾತ್ರ ಬೇರ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ ಎಂದು ಬಿಡಿಓ ಅಧಿಕಾರಿ ಅಮಿತ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಕಚೇರಿಯ ಸ್ಥಳಾಂತರದ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಸೋಮವಾರದೊಳಗೆ ಕಚೇರಿ ಮತ್ತು ಸಿಬ್ಬಂದಿಯನ್ನು ಕೃಷಿ ಭವನಕ್ಕೆ ಶಿಫ್ಟ್ ಮಾಡಲಾಗುತ್ತದೆ. ಕಚೇರಿಯ ಸ್ಥಳಾಂತರದ ಕಾರ್ಯವನ್ನು ಸ್ಥಳೀಯ ಬಿಡಿಓ ಅಧಿಕಾರಿ ನಿಧಾನಗತಿಯಲ್ಲಿ ಮಾಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅವರಿಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಬ್-ಡಿವಿಸನಲ್ ಆಫೀಸರ್ ವಿಜಯ್ ಪಾಂಡೆ ಹೇಳಿದ್ದಾರೆ.

  • ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಪಾಟ್ನಾ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಹೋದರ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಜೀವಂತವಾಗಿ ಸುಟ್ಟ ದಾರುಣ ಘಟನೆ ಭಾನುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.

    ಬಿಹಾರದ ಕತಿಹಾರ್ ಜಿಲ್ಲೆಯಯಲ್ಲಿ ಈ ಘಟನೆ ಸಂಭವಿಸಿದೆ. ಕೇದಾರ್ ಸಿಂಗ್(45) ಪತ್ನಿ ಪ್ರತಿಮಾ ದೇವಿ(40) ಅವರ ಇಬ್ಬರು ಪುತ್ರಿಯರಾದ ಡಿಂಪಲ್ ಕುಮಾರಿ(15) ಮತ್ತು ಸೋನಿ(17) ಮೃತಪಟ್ಟವರು. ಕೋಣೆಯಲ್ಲಿ ಮಲಗಿದ್ದ ಮಗ ಲಕ್ಷ್ಮಣ್ ಕುಮಾರ್ ಸಿಂಗ್(12) ಘಟನೆಯಿಂದ ಪಾರಾಗಿದ್ದಾನೆ.

    ಕೇದಾರ್ ಸಿಂಗ್ ಮತ್ತು ಆತನ ಸಹೋದರನ ಮಧ್ಯೆ ಪೂರ್ವಜರ ಆಸ್ತಿ ವಿಷಯದ ಬಗ್ಗೆ ಜಗಳವಿತ್ತು. ಹೀಗಾಗಿ ಈ ಆಸ್ತಿ ದ್ವೇಷದಿಂದ ಕೇದಾರಸಿಂಗ್ ಹಾಗೂ ಆತನ ಕುಟುಂಬಸ್ಥನ್ನ ಮನೆಯಲ್ಲಿ ಮಲಗಿದ್ದ ವೇಳೆ ಹೊರಗಡೆಯ ಬಾಗಿಲ ಕೊಂಡಿಯನ್ನು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ಆ ವೇಳೆ ಬೆಂಕಿ ಹತ್ತಿದಾಗ ಎಚ್ಚರಗೊಂಡ ಕೇದಾರ್ ಸಿಂಗ್ ಕಿರುಚಾಡಿತೊಡಗಿದ್ದಾರೆ. ಕೇದಾರ್ ಸಿಂಗ್ ಸಹೋದರ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದವರನ್ನು ಕಾಪಾಡಲು ಆಗದಿದ್ದಾಗ ಮನೆಯಲ್ಲಿ ಸುಟ್ಟು ಹೋಗಿದ್ದರು.

    ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗ ಲಕ್ಷ್ಮಣ್ ಸಿಂಗ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇದಾರ್ ಸಿಂಗ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗ ಆರೋಪಿ ಕೇದಾರ್ ಸಿಂಗ್ ನಾಪತ್ತೆಯಾಗಿದ್ದಾನೆ.

  • ಲಾಲೂ ಪ್ರಸಾದ್ ಯಾದವ್‍ಗೆ ಸಿಬಿಐ ಶಾಕ್- 12 ಕಡೆ ದಾಳಿ

    ಲಾಲೂ ಪ್ರಸಾದ್ ಯಾದವ್‍ಗೆ ಸಿಬಿಐ ಶಾಕ್- 12 ಕಡೆ ದಾಳಿ

    ನವದೆಹಲಿ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‍ಗೆ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ.

    2006ರಲ್ಲಿ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಹೋಟೆಲ್‍ಗಳಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಲಾಲೂ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 5.30ರ ವೇಳೆಗೆ ಲಾಲೂ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಅಲ್ಲದೆ ದೆಹಲಿ, ಪಾಟ್ನಾ, ಗುರಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿದೆ. ಲಾಲೂ ಪತ್ನಿ ರಾಬ್ರಿದೇವಿ, ಬಿಹಾರದಲ್ಲಿ ಸಚಿವರಾಗಿರೋ ಪುತ್ರ ತೇಜಸ್ವಿ ಯಾದವ್ ಮೇಲೆ ಕೂಡ ಸಿಬಿಐ ಕೇಸ್ ದಾಖಲಿಸಿಕೊಂಡಿದೆ.

    ಪುರಿ ಮತ್ತು ರಾಂಚಿಯಲ್ಲಿ ರೈಲ್ವೆಗಾಗಿ ಎರಡು ಹೋಟೆಲ್‍ಗಳನ್ನು ನಡೆಸಲು ಹರ್ಷ್ ಕೊಚ್ಚರ್ ಎಂಬವರಿಗೆ 15 ವರ್ಷಗಳ ಗುತ್ತಿಗೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ಲಾಲೂ ಪ್ರಸಾದ್ ಯಾದವ್ ಕುಟುಂಬ ಪಾಟ್ನಾದಲ್ಲಿ ಎರಡು ಎಕರೆ ಜಮೀನನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಮೊದಲಿಗೆ ಕೊಚ್ಚರ್ ಎರಡು ಎಕರೆ ಜಮೀನನ್ನು ಲಾಲೂ ಪ್ರಸಾದ್ ಯಾದವ್‍ರ ಪಕ್ಷದ ಸಂಸದರೊಬ್ಬರ ಪತ್ನಿಯ ಕಂಪೆನಿಗೆ ಮಾರಾಟ ಮಾಡಿದ್ದು, ಅನಂತರ ಜಮೀನು ಲಾಲು ಪತ್ನಿ ಮತ್ತು ಮಕ್ಕಳ ಹೆಸರಿಗೆ ವರ್ಗಾವಣೆಯಾಗಿದೆ ಎಂದು ವರದಿಯಾಗಿದೆ.

    ಹೋಟೆಲ್ ಗುತ್ತಿಗೆಗೆ ಸಂಬಂಧಿಸಿದಂತೆ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕರ್ಪೊರೇಷನ್‍ನ) ಮುಖ್ಯಸ್ಥ ಪಿಕೆ ಗೋಯಲ್ ಮೇಲೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

    ಇನ್ನು ದಾಳಿ ಬಗ್ಗೆ ಆರ್‍ಜೆಡಿ ಕಾರ್ಯಕರ್ತರು ಗರಂ ಆಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಅಪಾದಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ನಾವು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಆರ್‍ಜೆಡಿ ಮುಖಂಡ ಮನೋಜ್ ಜಾ ಹೇಳಿದ್ದಾರೆ. ಈ ಮಧ್ಯೆ ಸಿಎಂ ನಿತೀಶ್ ಕುಮಾರ್ ರಾಜ್‍ಗಿರ್‍ನಲ್ಲಿ ದಿಢೀರನೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

  • ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ

    ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ

    ನವದೆಹಲಿ: ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧಾರ ಕೈಗೊಂಡಿದೆ.

    ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆ ಸಂಬಂಧ ಬಿಜೆಪಿ ಸಂಸದೀಯ ಸಮಿತಿಯ ಸಭೆ ಸೋಮವಾರ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಮಿತ್ ಷಾ, ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ನಿರ್ಧಾರವನ್ನು ಮಿತ್ರ ಪಕ್ಷಗಳು ಬೆಂಬಲಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

    ಯಾರು ರಾಮನಾಥ್ ಕೋವಿಂದ್?
    ಉತ್ತರಪ್ರದೇಶದ ಕಾನ್ಪುರದ ದಿಹಾಟ್ ಎಂಬಲ್ಲಿ 1945 ಅಕ್ಟೋಬರ್ 1ರಂದು ರಾಮನಾಥ್ ಕೋವಿಂದ್ ಜನಿಸಿದ್ದು, ಕಾನ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಕಾಂ, ಎಲ್ಎಲ್ ಬಿ ಪದವಿ ಪಡೆದಿದ್ದಾರೆ. 1977 ರಿಂದ 1979ರವರೆಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. 1980ರಿಂದ 1993ರವರೆಗೆ ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 1994ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಇವರು 12 ವರ್ಷಗಳ ಕಾಲ ಸಂಸದರಾಗಿದ್ದರು.

    ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

  • ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಪಾಟ್ನಾ: ಚಲಿಸುತ್ತಿರುವ ರೈಲಿನಲ್ಲೇ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಬಳಿಕ ರೈಲಿನಿಂದ ಎಸೆದ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆ 10 ತರಗತಿ ಓದುತ್ತಿದ್ದು, ಭಾನುವಾರ ಚಿಕಿತ್ಸೆಗಾಗಿ ರಾಜ್ಯ ರಾಜಧಾನಿಯ ಆಸ್ಪತ್ರೆಗೆ ಬಂದ ವೇಳೆ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.

    ನಡೆದಿದ್ದೇನು?: ಲಖಿಸರಾಯಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಬಹಿರ್ದೆಸೆಗೆಂದು ಹೊರಬಂದಿದ್ದ ವೇಳೆ ಸಂತೋಷ್ ಯಾದವ್ ಹಾಗೂ ಮೃತ್ಯುಂಜಯ್ ಯಾದವ್ ಎಂಬ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಬಳಿಕ 6 ಮಂದಿ ಕಾಮುಕರು ಅತ್ಯಾಚಾರವೆಸಗಲು ಮುಂದಾದ್ರು. ಅಲ್ಲದೇ ರೈಲಿನೊಳಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿದ್ದಾರೆ. ಕೊಲೆ ಮಾಡಿ ರೈಲಿನಿಂದ ಬಿಸಾಕುವುದಾಗಿ ಮಾತನಾಡುತ್ತಿದ್ದಿದ್ದು ಕೇಳಿಸಿತ್ತು. ಆದ್ರೆ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ ಅಂತಾ ಸಂತ್ರಸ್ತೆ ತಿಳಿಸಿದ್ದಾಳೆ.

    ಕಾಮುಕರು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಗಂಭೀರ ಗಾಯಗೊಳಿಸಿ ಕಿವುಲ್ ಜಂಕ್ಷನ್ ಬಳಿ ರೈಲಿನಿಂದ ಆಕೆಯನ್ನು ಎಸೆದಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯ ಪೋಷಕರು ಹಾಗೂ ಸಂಬಂಧಿಕರಿಗೆ ವಿಚಾರ ತಲುಪಿಸಿದ್ದಾರೆ. ತದನಂತರ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

    ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲೆಂದು ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಆಕೆಗೆ ಬೆಡ್ ವ್ಯವಸ್ಥೆ ಸಿಗದೆ ಕೆಲವು ಗಂಟೆಗಳ ಕಾಲ ನೆಲದ ಮೇಲೆಯೇ ಬಾಲಕಿ ನರಳಾಟ ಅನುಭವಿಸಿದ್ದಳು.

    ಸದ್ಯ ಬಾಲಕಿಯ ಗುಪ್ತಾಂಗಕ್ಕೆ 2 ಡಜನ್ ನಷ್ಟು ಸ್ಟಿಚ್ ಹಾಕಿದ್ದಾರೆ. ಎರಡೂ ಪಾದಗಳಿಗೂ ಗಂಭೀರ ಗಾಯಗಳಾಗಿವೆ. ಅಲ್ಲದೇ ಸೊಂಟ, ದೇಹದ ಎಲುಬುಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಆದ್ರೆ ಸ್ಥಳೀಯ ಪೊಲೀಸರು ಪ್ರೇಮ ಸಂಬಂಧ ಕಲ್ಪಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಪ್ರಕರಣದ ಗಂಭೀರತೆ ಮತ್ತು ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿ ಜುವೆಲಿನ್ ಎಂಬಾತನನ್ನು ಬಂಧಿಸಿದ್ದಾರೆ.

  • ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಪಾಟ್ನಾ: ಶಾಲಾ ಯೂನಿಫಾರ್ಮ್ ಶುಲ್ಕ ಪಾವತಿಸದ್ದಕ್ಕೆ ಶಿಕ್ಷಕಿಯೊಬ್ಬರು ಇಬ್ಬರು ಬಾಲಕಿಯರನ್ನ ಅರೆಬೆತ್ತಲೆಯಾಗಿ ಮನೆಗೆ ಕಳುಹಿಸಿದ ಘಟನೆ ಬಿಹಾರದ ಬೆಗುಸರಾಯ್‍ನ ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಒಂದು ಮತ್ತು 2ನೇ ತರಗತಿಯ ಓದುವ ವಿದ್ಯಾರ್ಥಿನಿಯರನ್ನು ಶಿಕ್ಷಕಿ ಎಲ್ಲರ ಮುಂದೆ ಯೂನಿಫಾರ್ಮ್ ಬಟ್ಟೆ ಬಿಚ್ಚಿಸಿ ಮನೆಗೆ ಕಳುಹಿಸಿದ್ದಾಳೆ.

    ನಾವು ಬಡವರಾಗಿದ್ದೇವೆ. ಶುಲ್ಕ ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಬಾಲಕಿಯರ ತಂದೆ ಮನವಿ ಮಾಡಿದ್ದರೂ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಅವಮಾನ ಮಾಡಿದ್ದಾಳೆ.

    ಬಾಲಕಿಯರ ತಂದೆ ದೂರು ನೀಡಿದ್ದು, ಈಗ ಶಾಲೆಯ ಶಿಕ್ಷಕಿಯಾದ ಅಂಜನಾ ಕುಮಾರಿ ಮತ್ತು ಶಾಲಾ ಪ್ರಾಂಶುಪಾಲರಾದ ಎನ್.ಕೆ.ಝಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಂಜಿತ್ ಮಿಶ್ರಾ ತಿಳಿಸಿದ್ದಾರೆ.

    ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆರೋಪಿಗಳು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಅಶೋಕ್ ಚೌಧರಿ ತಿಳಿಸಿದ್ದಾರೆ.

     

  • ವರದಕ್ಷಿಣೆಗಾಗಿ ಹೆಂಡ್ತಿಯನ್ನ ಕೊಂದನೆಂದು ಗಂಡ ಜೈಲಿನಲ್ಲಿ, ಹೆಂಡತಿ ಲವರ್ ಜೊತೆ!

    ವರದಕ್ಷಿಣೆಗಾಗಿ ಹೆಂಡ್ತಿಯನ್ನ ಕೊಂದನೆಂದು ಗಂಡ ಜೈಲಿನಲ್ಲಿ, ಹೆಂಡತಿ ಲವರ್ ಜೊತೆ!

    ಪಾಟ್ನಾ: 2015ರಲ್ಲಿ ವರದಕ್ಷಿಣೆಗಾಗಿ ಹೆಂಡತಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಗಂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ರೆ ಅತ್ತ ಹೆಂಡತಿ ತನ್ನ ಪ್ರಿಯಕರನ ಜೊತೆಗಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ.

    ಬಿಹಾರದ ಮುಜಾಫರ್‍ಪುರದ ನಿವಾಸಿ ಪಿಂಕಿಗೆ 2015ರಲ್ಲಿ ಮನೋಜ್ ಶರ್ಮಾ ಜೊತೆ ವಿವಾಹವಾಗಿತ್ತು. ಆದ್ರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪಿಂಕಿ ನಾಪತ್ತೆಯಾಗಿದ್ದಳು. ಪಿಂಕಿ ಕುಟುಂಬಸ್ಥರು ಮನೋಜ್ ಶರ್ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ನಮ್ಮ ಮಗಳನ್ನ ಈತನೇ ಕೊಂದಿದ್ದಾನೆ ಎಂದು ಆರೋಪಿಸಿದ್ದರು.

    ಕೆಲವು ವಾರಗಳ ನಂತರ ಮುಜಾಫರ್‍ಪುರದ ಸರೈಯ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗಲಾರದಂತಹ ಕೊಳೆತ ಶವವೊಂದು ಪತ್ತೆಯಾಗಿತ್ತು. ಈ ಶವ ನಮ್ಮ ಮಗಳದ್ದೇ ಎಂದು ಪಿಂಕಿ ಪೋಷಕರು ಗುರುತಿಸಿದ್ದರು. ನಂತರ ಹೆಂಡತಿಯನ್ನ ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಮನೋಜ್ ಶರ್ಮಾ ಅವರನ್ನ ಪೊಲೀಸರು ಬಂಧಿಸಿದ್ರು. ಸದ್ಯ ಮನೋಜ್ ಶರ್ಮಾ ಜೈಲಿನಲ್ಲಿದ್ದಾರೆ.

    ಹೆಂಡತಿ ಬದುಕಿರೋದು ಗೊತ್ತಾಗಿದ್ದು ಹೇಗೆ?: ಕಳೆದ ಕೆಲವು ವಾರಗಳ ಹಿಂದೆ ಮನೋಜ್ ಶರ್ಮಾ ಅವರ ಕುಟುಂಬಸ್ಥರಿಗೆ ಪರಿಚಯಸ್ಥರೊಬ್ಬರ ಕರೆ ಬಂದಿತ್ತು. ಮಧ್ಯಪ್ರದೇಶದ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನಾನು ಪಿಂಕಿಯನ್ನ ಮತ್ತೊಬ್ಬ ವ್ಯಕ್ತಿಯ ಜೊತೆಯಲ್ಲಿ ನೋಡಿದೆ ಎಂದು ಅವರು ಹೇಳಿದ್ದರು. ಆ ಬಳಿಕ ಮನೋಜ್ ಶರ್ಮಾ ಕುಟುಂಬಸ್ಥರು ಕೂಡ ಜಬಲ್‍ಪುರಕ್ಕೆ ಹೋಗಿ ಪಿಂಕಿಯನ್ನು ಕಣ್ಣಾರೆ ನೋಡಿದ ಮೇಲೆ ನಮಗೆ ಮಾಹಿತಿ ನೀಡಿದ್ರು ಎಂದು ಸರೈಯ್ಯಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶತ್ರುಘ್ನ ಶಮಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪಿಂಕಿಗೆ ಮದುವೆಗೂ ಮುಂಚೆ ಮಯೂರ್ ಮಲಿಕ್ ಎಂಬಾತನ ಜೊತೆ ಸಂಬಂಧವಿತ್ತು. ತನಗೆ ಇಷ್ಟವಿಲ್ಲದೆ ಮನೋಜ್ ಶರ್ಮಾ ಜೊತೆ ಮದುವೆಯಾಗಿದ್ದಳು. ನಂತರ ಮಲಿಕ್ ಹಾಗೂ ಪಿಂಕಿ ಮುಜಾಫರ್‍ಪುರದಿಂದ ಓಡಿಹೋಗಿ ಜಬಲ್‍ಪುರದ ಕಾಂಟ್ ಪ್ರದೇಶದಲ್ಲಿ ನೆಲೆಸಿದ್ರು. ಇದೀಗ ಇಬ್ಬರನ್ನೂ ಬಿಹಾರಕ್ಕೆ ಕರೆದುಕೊಂಡು ಹೋಗಲಾಗ್ತಿದೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಜ್ ಅವರನ್ನ ಕೊಲೆ ಆರೋಪಿಯಾಗಿಸುವ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮುಂದೇನು?: ಮೊದಲಿಗೆ ಬಿಹಾರ ಪೊಲೀಸರು ಪಿಂಕಿ ಬದುಕಿದ್ದಾಳೆಂದು ಕೋರ್ಟ್‍ನಲ್ಲಿ ಸಾಬೀತುಪಡಿಸಿ, ಕೊಲೆಯೇ ಮಾಡದೆ ನಿರಪರಾಧಿಯಾಗಿದ್ರೂ ಶಿಕ್ಷೆ ಅನುಭವಿಸ್ತಿರೋ ಮನೋಜ್ ಶರ್ಮಾ ಅವರನ್ನ ಬಿಡುಗಡೆ ಮಾಡಿಸಲಿದ್ದಾರೆ. ಮನೋಜ್ ಶರ್ಮಾ ವಿರುದ್ಧ ಸಂಚು ರೂಪಿಸಿದವರು, ಶವವನ್ನ ಪಿಂಕಿಯದ್ದು ಎಂದು ಗುರುತಿಸಿದವರನ್ನೂ ಸೇರದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಾಂಟ್ ಪೊಲೀಸ್ ಠಾಣೆಯ ಅಧಿಕಾರಿ ಮಂಜೀತ್ ಸಿಂಗ್ ಹೇಳಿದ್ದಾರೆ.

  • ಬಹುಕೋಟಿ ಮೇವು ಹಗರಣ: ಲಾಲೂ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

    ಬಹುಕೋಟಿ ಮೇವು ಹಗರಣ: ಲಾಲೂ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

    ನವದೆಹಲಿ: ಬಹುಕೋಟಿ ಮೇವು ಹಗರಣ ಸಂಬಂಧ ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‍ ವಿಚಾರಣೆ ಎದುರಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

    ಲಾಲೂ ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.

    ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳು ಪ್ರತ್ಯೇಕ ವಿಚಾರಣೆ ಎದುರಿಸಬೇಕು ಅಷ್ಟೇ ಅಲ್ಲದೇ ಹಾಗೂ 9 ತಿಂಗಳೊಳಗೆ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ಸುಪ್ರೀಂ ಆದೇಶದಲ್ಲಿ ಹೇಳಿದೆ.

    ಏನಿದು ಪ್ರಕರಣ?
    20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲೂ ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.