Tag: Bihar Women

  • ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    – ʻಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆʼಗೆ ಪ್ರಧಾನಿ ಮೋದಿ ಚಾಲನೆ

    ಪಾಟ್ನಾ: ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಾಗಲೇ ಬಿಹಾರದ ಮಹಿಳೆಯರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi_ ಅವರಿಂದು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ (Mukhyamantri Mahila Rojgar Yojana) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

    ಈ ಯೋಜನೆಯ ಮೂಲಕ ಬಿಹಾರದಾದ್ಯಂತ (Bihar) 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

    ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ-ಪ್ರಮಾಣದ ಉದ್ಯಮಗಳನ್ನು ಮಹಿಳೆಯರು ನಡೆಸಬಹುದು, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದೆ.

    ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಬಿಹಾರದ ಮಹಿಳೆಯರ ಸಂತೋಷದಲ್ಲಿ ಪಾಲ್ಗೊಳ್ಳಲು ನನಗೆ ಹರ್ಷವಾಗುತ್ತಿದೆ. ನಾನು ಪರದೆಯ ಮೇಲೆ ಲಕ್ಷಾಂತರ ಮಹಿಳೆಯರನ್ನ ನೋಡುತ್ತಿದ್ದೇನೆ. ಅವರ ಆಶೀರ್ವಾದ ನಮಗೆಲ್ಲರಿಗೂ ಶಕ್ತಿಯ ಮೂಲವಾಗಿದೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: IAF ಗ್ರೂಪ್ ಕ್ಯಾಪ್ಟನ್ ಕಳಿಸಿದ ಮೇಲ್‌ನಿಂದ ಚೈತನ್ಯಾನಂದನ ಕಾಮಪುರಾಣ ಬಯಲಾಯ್ತು!

    ಬಿಹಾರ ಸಿಎಂ ನಿತೀಶ್ ಕುಮಾರ್ ಮಾತನಾಡಿ, ಪ್ರಧಾನಿ ನಿಮಗಾಗಿ ಬಹಳಷ್ಟು ಕೆಲಸ ಮಾಡ್ತಿದ್ದಾರೆ. ಹಿಂದಿನ ಸರ್ಕಾರ ಮಹಿಳೆಯರ ಪರ ಇರಲಿಲ್ಲ. ಲಾಲು ಪ್ರಸಾದ್‌ ಯಾದವ್ ಪದಚ್ಯುತಗೊಳಿಸಿದಾಗ, ಅವರು ತಮ್ಮ ಪತ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅವರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದರು. ಆದ್ರೆ ನಾವು ನಮ್ಮ ಕುಟುಂಬಗಳನ್ನ ನೋಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಬಿಹಾರಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 1.22 ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

  • ಮತ್ತೊಬ್ಬನನ್ನ ಮದ್ವೆಯಾಗಲು ಓಡಿಹೋದ 4 ಮಕ್ಕಳ ತಾಯಿ – ಮುಂದೇನಾಯ್ತು ನೋಡಿ…

    ಮತ್ತೊಬ್ಬನನ್ನ ಮದ್ವೆಯಾಗಲು ಓಡಿಹೋದ 4 ಮಕ್ಕಳ ತಾಯಿ – ಮುಂದೇನಾಯ್ತು ನೋಡಿ…

    ಪಾಟ್ನಾ: ಬಿಹಾರದ ಮಹಿಳೆಯೊಬ್ಬಳು (Bihar Women) ಮತ್ತೊಬ್ಬನನ್ನ ಮದುವೆಯಾಗಲು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಓಡಿಹೋಗಿರುವ ಘಟನೆ ಬಿಹಾರದ (Bihar) ಮುಜಾಫರ್‌ಪುರದಲ್ಲಿ ನಡೆದಿದೆ.

    ಕತ್ರಾ ಪೊಲೀಸ್ ಠಾಣಾ (Katra Police Station) ವ್ಯಾಪ್ತಿಯಲ್ಲಿ ವಾಸವಿದ್ದ‌ ಅಮೋದ್ ಮಹತೋ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದನು. ಬ್ಯಾಂಕ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದ ಪತ್ನಿ, ಸಂಜೆಯಾದರೂ ವಾಪಸ್‌ ಮನೆಗೆ ಹಿಂದಿರುಗದಿದ್ದಾಗ ಪತಿ ಕಿಡ್ನ್ಯಾಪ್‌ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ:  ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕೆ ಮತ್ತೊಬ್ಬನೊಂದಿಗೆ ಓಡಿಹೋಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಆಕೆಗೆ ಮದುವೆಯ ಆಮಿಷ ಒಡ್ಡಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಸಂತ್ರಸ್ತೆಗೆ ನಾಲ್ಕು ಮಕ್ಕಳಿದ್ದಾರೆ. ಪತಿ ಅಮೋದ್‌ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ. ಸದ್ಯ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.