Tag: Bihar Police

  • ದೆಹಲಿಯಲ್ಲಿ ಪೊಲೀಸರಿಂದ ಎನ್‌ಕೌಂಟರ್ – ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರ ಹತ್ಯೆ

    ದೆಹಲಿಯಲ್ಲಿ ಪೊಲೀಸರಿಂದ ಎನ್‌ಕೌಂಟರ್ – ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರ ಹತ್ಯೆ

    ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪೊಲೀಸರು ಎನ್‌ಕೌಂಟರ್ (Encounter) ನಡೆಸಿದ್ದು, ಬಿಹಾರದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಸಿಗ್ಮಾ ಗ್ಯಾಂಗ್‌ನ (Sigma Gang) ನಾಲ್ವರು ದರೋಡೆಕೋರರು (Gangsters) ಹತ್ಯೆಯಾಗಿದ್ದಾರೆ.

    ದೆಹಲಿ ಮತ್ತು ಬಿಹಾರ ಪೊಲೀಸರ ತಂಡ ಮತ್ತು ದರೋಡೆಕೋರರ ನಡುವೆ ಗುರುವಾರ ಮುಂಜಾನೆ 2:20ಕ್ಕೆ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ ನಡೆದಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಸಿಗ್ಮಾ ಗ್ಯಾಂಗ್‌ನ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ದರೋಡೆಕೋರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಎನ್‌ಕೌಂಟರ್ ನಡೆಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‌ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ

    ಗುಂಡಿನ ದಾಳಿಯಲ್ಲಿ ನಾಲ್ವರು ಆರೋಪಿಗಳಿಗೂ ಗುಂಡು ತಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ನಾಲ್ವರು ದರೋಡೆಕೋರರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇದನ್ನೂ ಓದಿ: ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ದರೋಡೆಕೋರರು ಯಾರು?
    ದರೋಡೆಕೋರರನ್ನು ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೊ (25), ಮನೀಶ್ ಪಾಠಕ್ (33), ಮತ್ತು ಅಮನ್ ಠಾಕೂರ್ (21) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಈ ಗ್ಯಾಂಗ್‌ನ ನಾಯಕನಾಗಿದ್ದ. ಹಲವಾರು ವರ್ಷಗಳಿಂದ ಈ ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಕಾಂಟ್ರಾಕ್ಟ್ ಪಡೆದು ಹತ್ಯೆ ನಡೆಸುವುದರಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ: ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ

    ರಂಜನ್ ಪಾಠಕ್ ಬಂಧನಕ್ಕೆ 25,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ರಂಜನ್ ಪಾಠಕ್ ಪೊಲೀಸರಿಗೆ ಬೇಕಾಗಿದ್ದ. ಅಲ್ಲದೇ ರಂಜನ್ ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲ ಬಹಿರಂಗಪಡಿಸಿದೆ. ಇತ್ತೀಚಿಗೆ ದರೋಡೆಕೋರರು ಬಿಹಾರ ಚುನಾವಣೆ ಸಂಬಂಧ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

    ಸಿಗ್ಮಾ ಗ್ಯಾಂಗ್ ಸುಮಾರು 7 ವರ್ಷಗಳಿಂದ ಸಕ್ರಿಯವಾಗಿದ್ದು, ಬಿಹಾರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೆಹಲಿಯಲ್ಲಿ ತಲೆಮರೆಸಿಕೊಂಡಿತ್ತು. ಹಲವು ದಿನಗಳವರೆಗೆ ಪೊಲೀಸರು ಇವರ ಚಲನವಲನಗಳನ್ನು ಪತ್ತೆಹಚ್ಚಿ ಬಳಿಕ ಕಾರ್ಯಾಚರಣೆಗೆ ಇಳಿದಿದ್ದಾರೆ. ಗ್ಯಾಂಗ್‌ನ ಜಾಲವನ್ನು ಪತ್ತೆಹಚ್ಚುವ ಸಲುವಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇವಿ ಬಿಎಂಟಿಸಿ ಬಸ್ಸು ಚಾಲಕರಿಂದ ದಿಢೀರ್‌ ಪ್ರತಿಭಟನೆ

  • ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆ ವೇಳೆ ಮೂರ್ಛೆ ಹೋದ ಮಹಿಳೆ – ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬುಲೆನ್ಸ್‌ನಲ್ಲೇ ಗ್ಯಾಂಗ್‌ ರೇಪ್‌

    ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆ ವೇಳೆ ಮೂರ್ಛೆ ಹೋದ ಮಹಿಳೆ – ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬುಲೆನ್ಸ್‌ನಲ್ಲೇ ಗ್ಯಾಂಗ್‌ ರೇಪ್‌

    ಪಾಟ್ನಾ: ಗೃಹರಕ್ಷಕ ದಳ (Home Guard) ನೇಮಕಾತಿ ವೇಳೆ ಮೂರ್ಛೆ ಹೋದ 26 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ (Bihar) ಬೋಧ್ ಗಯಾದಲ್ಲಿ ನಡೆದಿದೆ.

    ಆಂಬ್ಯುಲೆನ್ಸ್ (Ambulance) ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಬಂಧಿತರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯುವತಿ ಮಾತು ನಂಬಿ ಬಂದ ಯುವಕನ ಕಿಡ್ನ್ಯಾಪ್‌; 2.50 ಕೋಟಿಗೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಅರೆಸ್ಟ್

    ಏನಾಗಿತ್ತು?
    ಇದೇ ಜುಲೈ 24ರಂದು ಬೋಧ್‌ ಗಯಾದ ಬಿಹಾರ ಮಿಲಿಟರಿ ಪೊಲೀಸ್‌ ಮೈದಾನದಲ್ಲಿ ಗೃಹರಕ್ಷಕ ದಳದ ನೇಮಕಾತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಮಹಿಳೆ ಮೂರ್ಛೆ ಹೋಗಿದ್ದಳು. ಇದರಿಂದ ತರಬೇತಿ ಕ್ಯಾಂಪಸ್‌ನಲ್ಲೇ ಇದ್ದ ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು. ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪ್ರಜ್ಞಾಹೀನಳಾಗಿದ್ದ ನನ್ನ ಮೇಲೆ ಕೆಲ ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಸಂತ್ರಸ್ತೆ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆಗಾಗಿ ವಿಶೇಷ ತಂಡ ಮತ್ತು ವಿಧಿವಿಜ್ಞಾನ ತಂಡವನ್ನ ನಿಯೋಜನೆ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಅಂಬುಲೆನ್ಸ್‌ ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಇಬ್ಬರನ್ನು ತನಿಖಾ ತಂಡ ಬಂಧಿಸಿತು. ಸದ್ಯ ಇಬ್ಬರು ಪೊಲೀಸ್‌ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

  • ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಪಾಟ್ನಾ: ಬಿಹಾರ (Bihar) ರಾಜಧಾನಿ ಪಾಟ್ನಾದ (Patna) ಬಿಜೆಪಿ ನಾಯಕ ಹಾಗೂ ಉದ್ಯಮಿ ಗೋಪಾಲ್ ಖೇಮ್ಕಾ (Gopal Khemka) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಿಹಾರ ಪೊಲೀಸರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ಅಲಿಯಾಸ್ ರಾಜಾನನ್ನು ಪಾಟ್ನಾದ ಮಾಲ್ ಸಲಾಮಿ ಪ್ರದೇಶದಲ್ಲಿ ಎನ್‌ಕೌಂಟರ್ ಮಾಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ವಾಂಟೆಡ್ ಕ್ರಿಮಿನಲ್ ವಿಕಾಸ್‌ನನ್ನು ದಮೈಯಾ ಘಾಟ್ ಬಳಿ ನಸುಕಿನ ಜಾವ 2:45ರ ಸುಮಾರಿಗೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಘಟನಾ ಸ್ಥಳದಿಂದ ಒಂದು ಪಿಸ್ತೂಲ್, ಒಂದು ಗುಂಡು ಮತ್ತು ಒಂದು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಬಿಹಾರ ಪೊಲೀಸರು (Bihar Police) ಅಧಿಕೃತ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು| ಹೃದಯಾಘಾತಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಸಾವು

    ಮೃತ ವಿಕಾಸ್, ಗೋಪಾಲ್ ಖೇಮ್ಕಾ ಅವರನ್ನು ಕೊಲ್ಲಲು ಬಳಸಿದ ಆಯುಧಗಳನ್ನು ಪೂರೈಸಿದ್ದ. ಅಲ್ಲದೇ ಪ್ರಕರಣದ ಪ್ರಮುಖ ಶಂಕಿತ ಶೂಟರ್ ಉಮೇಶ್ ಜೊತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ 12ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ಏನಿದು ಪ್ರಕರಣ?
    ಬಿಹಾರದ ಪಾಟ್ನಾದಲ್ಲಿ ಬಿಜೆಪಿ ನಾಯಕ ಹಾಗೂ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ಪನಾಚೆ ಹೋಟೆಲ್ ಪಕ್ಕದಲ್ಲಿರುವ `ಟ್ವಿನ್ ಟವರ್’ ಸೊಸೈಟಿಯಲ್ಲಿ ಖೆಮ್ಕಾ ಅವರು ವಾಸಿಸುತ್ತಿದ್ದರು. ಅವರು ಮನೆ ಕಡೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

  • ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

    ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

    ಪಾಟ್ನಾ: ನೀಟ್‌ ಪರೀಕ್ಷೆ (NEET Paper Scam) ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಎಂದು ಬಂಧಿತ ವಿದ್ಯಾರ್ಥಿಯೊಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    ಬಿಹಾರದಿಂದ (Bihar) ಬಂಧಿಸಲ್ಪಟ್ಟ ನಾಲ್ವರಲ್ಲಿ ಅನುರಾಗ್ ಯಾದವ್, ಸಿಕಂದರ್ ಯಾದವೆಂದು ಇಬ್ಬರೂ ದಾನಪುರ ಪುರಸಭೆಯ ಜೂನಿಯರ್ ಇಂಜಿನಿಯರ್ ಕಾಲೇಜಿನವರು. ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಇವರನ್ನು ಕೂಡ ಬಂಧಿಸಲಾಗಿದೆ. ಇದನ್ನೂ ಓದಿ: ಹಿಂದುಳಿದ ವರ್ಗಗಳ ಮೀಸಲಾತಿ 65% ಹೆಚ್ಚಳ – ಬಿಹಾರ ಸರ್ಕಾರದ ನಿರ್ಧಾರ ರದ್ದು

    ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆಯನ್ನು ಸ್ವೀಕರಿಸಿದ್ದೆವು. ಬಿಹಾರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಮರುದಿನ ಪರೀಕ್ಷೆಯಲ್ಲಿ ನಿಖರವಾದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನನ್ನನ್ನು ರಾತ್ರಿಯಲ್ಲಿ ಓದಲು ಮತ್ತು ನೆನಪಿಟ್ಟುಕೊಳ್ಳಲು ಹೇಳಲಾಯಿತು. ನಾನು ಪರೀಕ್ಷೆಗೆ ಹೋದಾಗ, ನಾನು ಸರಿಯಾಗಿ ಕಂಠಪಾಠ ಮಾಡಿದ ಪ್ರಶ್ನೆಗಳಿಗಷ್ಟೇ ಉತ್ತರಿಸಿದ್ದೆ. ಪರೀಕ್ಷೆಯ ನಂತರ ಪೊಲೀಸರು ಬಂದು ನನ್ನನ್ನು ಬಂಧಿಸಿದರು. ನಾನು ನನ್ನ ಅಪರಾಧವನ್ನು ಒಪ್ಪಿಕೊಂಡೆ ತಪ್ಪೊಪ್ಪಿಕೊಂಡೆ ಎಂದು ಅನುರಾಗ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ನೀಟ್‌ ಯುಜಿ ವಿವಾದ – 1563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ರದ್ದು

    ಇತರ ಇಬ್ಬರು ಆರೋಪಿಗಳಾದ ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಅವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಬಹುದು. ನೀಟ್ ತೇರ್ಗಡೆಯಾಗಲು ಪ್ರತಿಯೊಬ್ಬ ಆಕಾಂಕ್ಷಿಗೆ 30-32 ಲಕ್ಷ ರೂ. ವೆಚ್ಚವಾಗುತ್ತದೆ ಅಂತಾ ಹೇಳಿದ್ದರು ಎಂದು ಯಾದವೆಂದು ಹೇಳಿದ್ದಾರೆ.

    ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಅಕ್ರಮಗಳ ಜ್ವಲಂತ ಸಮಸ್ಯೆ ಹೊಸ ತಿರುವು ಪಡೆದುಕೊಂಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಿಂದಿನ ದಿನ ಸೋರಿಕೆಯಾಗಿದೆ ಎಂಬುದನ್ನು ಬಂಧಿತ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.

  • ಮಕ್ಕಳಾಗದ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಬಹುಮಾನ – ಆಫರ್‌ ಕೊಟ್ಟಿದ್ದ 8 ಮಂದಿ ಅರೆಸ್ಟ್‌

    ಮಕ್ಕಳಾಗದ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಬಹುಮಾನ – ಆಫರ್‌ ಕೊಟ್ಟಿದ್ದ 8 ಮಂದಿ ಅರೆಸ್ಟ್‌

    – ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌ ಹೆಸರಲ್ಲಿ ದಂಧೆ

    ಪಾಟ್ನಾ: ಬಿಹಾರದಲ್ಲಿ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಕ್ಕಳಾಗದ ಮಹಿಳೆಯರನ್ನ (Impregnating Women) ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಆಫರ್‌ ಕೊಟ್ಟಿದ್ದ 8 ಮಂದಿಯನ್ನ ಪೊಲೀಸರು ಬಿಹಾರದ ನವಾಡದಲ್ಲಿ ಬಂಧಿಸಿದ್ದಾರೆ. ಖತರ್ನಾಕ್‌ಗಳು ʻಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌ʼ (All India Pregnant Job Service) ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

    ಮೊದಲಿಗೆ ಈ ಗ್ಯಾಂಗ್‌ ಬಿಹಾರ (Bihar) ರಾಜ್ಯದ ನವಾಡ ಜಿಲ್ಲೆಯಲ್ಲಿ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಅನ್ನೋ ಸಂಸ್ಥೆಯ ಹೆಸರಲ್ಲಿ ಜಾಹೀರಾತು ನೀಡಿತ್ತು. ಆಗ ವಾಟ್ಸಪ್‌, ಫೇಸ್‌ಬುಕ್‌ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲೂ ಜಾಹೀರಾತು ಪ್ರಸಾರವಾಗಿತ್ತು. ಈ ಜಾಹಿರಾತನ್ನು ನೋಡಿದ ಪುರುಷರು ಜಾಹೀರಾತಿನ ಜೊತೆಗೆ ಇದ್ದ ವಾಟ್ಸಪ್ ನಂಬರ್‌ ಸಂಪರ್ಕಿಸಿದರು. ಮಕ್ಕಳಾಗದ ಸ್ತ್ರೀಯರಿಗೆ (Womens) ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಹಕ್ಕೊತ್ತಾಯ ಮಾಡಿದ್ದರು. ಆ ನಂತರ ವಂಚಕರ ಅಸಲಿ ಆಟ ಶುರುವಾಗಿತ್ತು.

    ಮೊದಲಿಗೆ ನೋಂದಣಿ ಶುಲ್ಕದ ಹೆಸರಲ್ಲಿ ವಂಚಕರು 799 ರೂ. ಹಣವನ್ನು ಪಾವತಿ ಮಾಡುವಂತೆ ಹೇಳಿದ್ದರು. ಹಣ ನೀಡಿ ನೋಂದಣಿ ಆದ ಬಳಿಕ ಪುರುಷರಿಗೆ ಕೆಲವು ಮಹಿಳೆಯರ ಫೋಟೋಗಳನ್ನು ವಾಟ್ಸಪ್ ಮೂಲಕ ಕಳಿಸಿದ್ದರು. ಇಷ್ಟು ಮಹಿಳೆಯರ ಪೈಕಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಇಷ್ಟದ ಮಹಿಳೆಯ ಜೊತೆ ಸಂಗ ಬೆಳೆಸಬಹುದು. ಆಕೆಯನ್ನು ಗರ್ಭಿಣಿ ಮಾಡಿದರೆ ನಿಮಗೆ 13 ಲಕ್ಷ ರೂ. ಬಹುಮಾನ ಎಂದು ವಂಚಕರು ಆಮಿಷ ಒಡ್ಡಿದ್ದರು.

    5 ರಿಂದ 20,000 ರೂ.ವರೆಗೆ ಠೇವಣಿ ಇಡಬೇಕಿತ್ತು:
    ಪುರುಷರು ಆಯ್ಕೆ ಮಾಡಿಕೊಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಮುನ್ನ ಭದ್ರತಾ ಠೇವಣಿ ಹಣ ನೀಡಬೇಕು ಎಂದೂ ವಂಚಕರು ತಾಕೀತು ಮಾಡಿದ್ದರು. ಈ ಭದ್ರತಾ ಠೇವಣಿ ಹಣ ಮಹಿಳೆಯರ ಸೌಂದರ್ಯದ ಮೇಲೆ ನಿರ್ಧಾರ ಆಗುತ್ತದೆ ಎಂದು ಹೇಳಿದ್ದರು. ಸುಮಾರು 5 ಸಾವಿರ ರೂ. ನಿಂದ 20 ಸಾವಿರ ರೂ.ವರೆಗೆ ಠೇವಣಿ ಹಣ ಕಟ್ಟಬೇಕು ಎಂದು ಹೇಳುತ್ತಿದ್ದರು. ತುಂಬಾ ಸುಂದರವಾದ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸಬೇಕಿದ್ದರೆ 20 ಸಾವಿರ ರೂ. ಭದ್ರತಾ ಠೇವಣಿ ಭರಿಸಬೇಕು ಎಂದು ಸೂಚನೆ ನೀಡಲಾಗಿತ್ತು.

    ಠೇವಣಿ ಪಾವತಿಸಿದ ಮೇಲೆ ಎಲ್ಲರೂ ಮಾಯ:
    ಮೊದಲಿಗೆ ನೋಂದಣಿ ಶುಲ್ಕ ಪಾವತಿಸಿದ ಬಹುತೇಕರು ಭದ್ರತಾ ಠೇವಣಿ ಹಣ ಪಾವತಿ ಮಾಡುವಲ್ಲಿ ಸೋತಿದ್ದರು. ಆದ್ರೆ ಹಣ ಇದ್ದ ಕೆಲವರು ಭದ್ರತಾ ಠೇವಣಿಯನ್ನೂ ಪಾವತಿ ಮಾಡಿ ಫೋಟೋದಲ್ಲಿ ಕಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಕನಸು ಕಾಣುತ್ತಿದ್ದರು. ಆದ್ರೆ, ಹಣ ಕಟ್ಟಿಸಿಕೊಂಡ ಬಳಿಕ ವಂಚಕರು ತಮ್ಮ ಮೊಬೈಲ್ ಸಂಪರ್ಕ ಕಟ್ ಮಾಡಿಕೊಂಡುಬಿಟ್ಟರು. ಒಂದು ವೇಳೆ ಮಹಿಳೆ ಗರ್ಭಿಣಿಯಾದರೆ 13 ಲಕ್ಷ ರೂ., ಗರ್ಭ ಧರಿಸದೇ ಇದ್ದರೂ 5 ಲಕ್ಷ ರೂ. ಹಣ ಕೊಡುತ್ತೇವೆ ಎಂದು ವಂಚಕರು ಹೇಳಿದ್ದರು. ಠೇವಣಿ ಕಟ್ಟಿಸಿಕೊಂಡ ಬಳಿಕ ನಾಪತ್ತೆಯಾಗಿಬಿಡುತ್ತಿದ್ದರು.

    ಇವರಿಂದ ಹಣ ಕಳೆದುಕೊಂಡ ಬಹುತೇಕರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್ ಹಾಗೂ ಪ್ರಿಂಟರ್‌ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.

  • ಕುರ್ಕುರೆ, ಬಿಸ್ಕೆಟ್‌ ಪ್ಯಾಕ್‌ ಕದ್ದ ಆರೋಪ – ಬಾಲಕರನ್ನ ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕನ ವಿರುದ್ಧ ಕೇಸ್‌

    ಕುರ್ಕುರೆ, ಬಿಸ್ಕೆಟ್‌ ಪ್ಯಾಕ್‌ ಕದ್ದ ಆರೋಪ – ಬಾಲಕರನ್ನ ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕನ ವಿರುದ್ಧ ಕೇಸ್‌

    ಪಾಟ್ನಾ: ದಿನಸಿ ಅಂಗಡಿಯೊಂದರಲ್ಲಿ ಕುರ್ಕುರೆ, ಬಿಸ್ಕೆಟ್‌ (Kurkure, Biscuits) ಪ್ಯಾಕೆಟ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಬಿಹಾರದ (Bihar) ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.

    ಇದೇ ಅಕ್ಟೋಬರ್‌ 28 ರಂದು ಘಟನೆ ನಡೆದಿದ್ದು, ಬೀರ್‌ಪುರದ ಫಜಿಲ್‌ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೀಡಿಯೋ ವೈರಲ್‌ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ವೀಡಿಯೋದಲ್ಲಿ ಜನ ಸಮೂಹದ ಅಂಗಡಿ ಮಾಲೀಕ ನಾಲ್ಕು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವುದನ್ನು ಕಾಣಬಹುದಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು (Bihar Police) ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಈವರೆಗೆ ಬಂಧಿಸಿಲ್ಲ. ಇದನ್ನೂ ಓದಿ: ಮುಕೇಶ್‌ ಅಂಬಾನಿಗೆ 3ನೇ ಬಾರಿಗೆ ಕೊಲೆ ಬೆದರಿಕೆ – ಬೇಡಿಕೆ ಮೊತ್ತ 400 ಕೋಟಿಗೆ ಏರಿಕೆ

    ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸುವ ಸಮಯದಲ್ಲಿ ಕೆಲ ಹುಡುಗರು ಅಂಗಡಿಯಿಂದ ಕಳ್ಳತನ ಮಾಡುತ್ತಿರುವುದು ಕಂಡುಬಂದಿದೆ. ಕಳ್ಳತನ ಮಾಡುವಾಗ ಅಂಗಡಿ ಮಾಲೀಕನಿಗೆ ಸಿಕ್ಕಿಬಿದ್ದು ಥಳಿಕಕ್ಕೊಳಗಾಗಿದ್ದಾರೆ. ಒಟ್ಟಿನಲ್ಲಿ ಅಂಗಡಿಯವನು ಥಳಿಸಿದ್ದು, ದೊಡ್ಡ ತಪ್ಪು ಮತ್ತು ಅಮಾನವೀಯ ಎಂದು ಬೇಗುಸರೈ ಎಸ್ಪಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಜನ ಸಿಎಂ ಅಭ್ಯರ್ಥಿಗಳಿದ್ದಾರೆ, ಯಾರು ಸಿಎಂ ಆದ್ರೂ ತಪ್ಪಿಲ್ಲ: ಚೆನ್ನಾರೆಡ್ಡಿ ಪಾಟೀಲ್

    ಅಂಗಡಿ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರೂ ಒತ್ತಾಯಿಸಿದ್ದಾರೆ. ಆದ್ರೆ ಈವರೆಗೆ ಲಿಖಿತ ದೂರು ನೀಡಿಲ್ಲ. ಬೀರ್‌ಪುರ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ದಾಖಲಿಸುವಂತೆ ನಾವು ಕುಟುಂಬಸ್ಥರಿಗೆ ತಿಳಿಸಿದ್ದೇವೆ. ಅವರು ದೂರು ನೀಡಿದ ನಂತರವೇ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೃಹತ್‌ ಜಯದ ನಿರೀಕ್ಷೆಯಲ್ಲಿ ಪಾಕಿಸ್ತಾನ – ಸೆಮಿಸ್‌ ಹಾದಿಯ ಲೆಕ್ಕಾಚಾರ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಬ್ಬರು ಹೆಂಡ್ತೀರ ಮುದ್ದಿನ ಗಂಡ – ಪತ್ನಿಯರಿಂದ್ಲೇ ಬರ್ಬರವಾಗಿ ಕೊಲೆಯಾಗಿದ್ದೇಕೆ..?

    ಇಬ್ಬರು ಹೆಂಡ್ತೀರ ಮುದ್ದಿನ ಗಂಡ – ಪತ್ನಿಯರಿಂದ್ಲೇ ಬರ್ಬರವಾಗಿ ಕೊಲೆಯಾಗಿದ್ದೇಕೆ..?

    ಪಾಟ್ನ: ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ಮೊದಲ ಹೆಂಡತಿಯರಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬಿಹಾರದ (Bihar) ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಛಾಪ್ರಾ ಜಿಲ್ಲೆಯ ಮಹಿಳೆಯರು ಗಂಡನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಇತೀಚೆಗೆ ಬಕ್ರೀದ್‌ ಹಬ್ಬಕ್ಕೆ (Bakrid Festival) ತವರಿಗೆ ಮರಳಿದಾಗ ಪೊಲೀಸರು (Bihar Police) ಸಲ್ಮಾ ಹಾಗೂ ಅಮೀನಾ ಇಬ್ಬರೂ ಪತ್ನಿಯರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎಣ್ಣೆ ಹೊಡೆಯುವುನ್ನು ತಪ್ಪಿಸಲೆತ್ನಿಸಿದ ದಂಪತಿಯನ್ನು ಹೊಡೆದು ಕೊಂದ ಮದ್ಯವ್ಯಸನಿ!

    ಮುದ್ದಿನ ಗಂಡ ಮರ್ಡರ್‌ ಆಗಿದ್ದೇಗೆ?
    ಬೆಡ್ವಾಲಿಯಾ ರಾಯಪುರ ನಿವಾಸಿ ಅಲಂಗೀರ್ ಅನ್ಸಾರಿ (45), ಸರನ್ ಜಿಲ್ಲೆಯ ಚಿಂತಮಂಗಂಜ್ ಗ್ರಾಮದ ನಿವಾಸಿ ಸಲ್ಮಾಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಅಲಂಗೀರ್‌ ಮತ್ತು ಸಲ್ಮಾ ನಡುವೆ ಮನಸ್ತಾಪ ಶುರುವಾಗಿತ್ತು. ಹಾಗಾಗಿ ಸಲ್ಮಾ ಪತಿಯನ್ನ ತೊರೆದು ಬೇರೆ ಸ್ಥಳದಲ್ಲಿ ವಾಸ ಮಾಡಿಕೊಂಡಿದ್ದಳು. ಕಳೆದ 6 ತಿಂಗಳ ಹಿಂದೆ ಅಲಂಗೀರ್‌ ದೆಹಲಿಗೆ (NewDelhi) ಬಂದಿದ್ದಾಗ ಬಂಗಾಳ ಮೂಲದ ಮಹಿಳೆ ಅಮಿನಾಳನ್ನ ಮದುವೆಯಾಗಿದ್ದ.

    ಕೆಲವು ದಿನಗಳ ಹಿಂದೆ ದೆಹಲಿಗೆ ಬಂದಿದ್ದ ಸಲ್ಮಾ, ತನ್ನ ಗಂಡನ 2ನೇ ಹೆಂಡತಿ ಅಮೀನಾಳನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಳು, ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಬಕ್ರೀದ್‌ ಹಬ್ಬಕ್ಕೆ ತಮ್ಮ ಗ್ರಾಮಕ್ಕೆ ಬಂದಿದ್ದರು. ಜುಲೈ 9ರಂದು ಇಬ್ಬರು ಪತ್ನಿಯರೂ ಗಂಡನ ಮನೆಗೆ ಬಂದಿದ್ದರು. ಈ ನಡುವೆ ಯಾವುದೋ ವಿಚಾರಕ್ಕೆ ಮೂವರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸಲ್ಮಾ ಚಾಕು ತೆಗೆದು ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಇದನ್ನೂ ಓದಿ: ಪುನೀತ್ ಫೋಟೋ ತೆಗೆಸಿದ್ದೇ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವೇ? – ಮೃತನ ಪತ್ನಿ ಹೇಳಿದ್ದೇನು?

    ತಕ್ಷಣ ಅಲಂಗೀರ್‌ನನ್ನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಸಲ್ಮಾ-ಅಮೀಳಾನ್ನ ಬಂಧಿಸಿದ್ದಾರೆ. ಅಲಂಗೀರ್‌ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್‌ ಸರ್ಕಾರ ಸ್ಥಾಪನೆ – ಪೊಲೀಸರಿಗೆ ಸಿಕ್ತು ಹೀಗೊಂದು ದಾಖಲೆ

    100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್‌ ಸರ್ಕಾರ ಸ್ಥಾಪನೆ – ಪೊಲೀಸರಿಗೆ ಸಿಕ್ತು ಹೀಗೊಂದು ದಾಖಲೆ

    ಪಾಟ್ನಾ: 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ʼಇಸ್ಲಾಮಿಕ್ ಸರ್ಕಾರʼ ಸ್ಥಾಪಿಸುವ ಯೋಜನೆಗಳ ಕುರಿತು ಉಲ್ಲೇಖಿಸಿರುವ ದಾಖಲೆಯನ್ನು ಬಿಹಾರ್ ಪೊಲೀಸರಿಗೆ ಸಿಕ್ಕಿದ್ದು, ಅದನ್ನು ಬಹಿರಂಗಪಡಿಸಿದ್ದಾರೆ.

    ‘ಇಂಡಿಯಾ 2047- ಭಾರತದಲ್ಲಿ ಇಸ್ಲಾಂ ಆಡಳಿತದ ಕಡೆಗೆ’ ಎಂಬ ಶೀರ್ಷಿಕೆ ಇರುವ ಎಂಟು ಪುಟಗಳ ದಾಖಲೆಯನ್ನು ಜುಲೈ 13 ರಂದು ಬಿಹಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಭಯೋತ್ಪಾದಕ ಘಟಕವೊಂದನ್ನು ಪೊಲೀಸರು ಭೇದಿಸಿದ್ದಾರೆ. ಫುಲ್ವಾರಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ವೇಳೆ ಈ ದಾಖಲೆ ವಶಕ್ಕೆ ಪಡೆದಿದ್ದಾರೆ. ಪಾಟ್ನಾದ ಷರೀಫ್ ಪ್ರದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಹವಾಮಾನ ವೈಪರೀತ್ಯ- ಅಮರನಾಥ ಯಾತ್ರೆ ಪುನಃ ಸ್ಥಗಿತ

    ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಹಾಗೂ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಮಾಜಿ ಸದಸ್ಯ ಮತ್ತು ಪ್ರಸ್ತುತ ಪಿಎಫ್‌ಐ, ಎಸ್‌ಡಿಪಿಐ ಸದಸ್ಯನಾಗಿರುವ ಅಥರ್ ಪರ್ವೇಜ್ ಬಂಧಿತ ಆರೋಪಿಗಳಾಗಿದ್ದಾರೆ.

    ದಾಖಲೆಯಲ್ಲೇನಿದೆ?
    ಕೇವಲ ಶೇ.10ರಷ್ಟು ಮುಸ್ಲಿಂ ಜನಸಂಖ್ಯೆಯಿದ್ದರೂ ಭಾರತದಲ್ಲಿ ಇಸ್ಲಾಂ ಆಡಳಿತ ತರುವ ಬಗ್ಗೆ ಪಿಎಫ್‌ಐಗೆ ಆತ್ಮವಿಶ್ವಾಸವಿದೆ. ಬಹುಸಂಖ್ಯಾತ ಸಮುದಾಯವನ್ನು ಅಧೀನಗೊಳಿಸಿ, ಭಾರತದಲ್ಲಿ ಇಸ್ಲಾಂ ವೈಭವವನ್ನು ಮರಳಿ ತರುವ ಯೋಜನೆ ಕುರಿತು ಉಲ್ಲೇಖಿಸಲಾಗಿದೆ.

    ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಆ ಪ್ರಕಾರ PFI ಕಾರ್ಯಕರ್ತರು, ಮುಸ್ಲಿಂ ಸಮುದಾಯಕ್ಕೆ ಗುರಿ ಸಾಧನೆಗಾಗಿ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    ಪಕ್ಷ ಸೇರಿದಂತೆ ನಮ್ಮ ಎಲ್ಲಾ ಮುಂಚೂಣಿ ಸಂಸ್ಥೆಗಳು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುವತ್ತ ಗಮನಹರಿಸಬೇಕು. ನಾವು ನಮ್ಮ ಪಿಇ ವಿಭಾಗಕ್ಕೆ ಸದಸ್ಯರನ್ನು ನೇಮಿಸಿಕೊಂಡು ತರಬೇತಿ ನೀಡಲು ಪ್ರಾರಂಭಿಸುತ್ತೇವೆ. ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ತಂತ್ರಗಳು, ಕತ್ತಿಗಳು, ರಾಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ನೀಡಬೇಕು ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.

    ನಿಷ್ಠಾವಂತ ಮುಸ್ಲಿಮರನ್ನು ಕಾರ್ಯನಿರ್ವಾಹಕ ಮತ್ತು ನ್ಯಾಯಾಂಗ ಸ್ಥಾನಗಳು, ಪೊಲೀಸ್ ಮತ್ತು ಸೇನೆ ಸೇರಿದಂತೆ ಸರ್ಕಾರಿ ಇಲಾಖೆಗಳಿಗೆ ನೇಮಕ ಮಾಡುವುದು. ಪಿಎಫ್‌ಐ ಸಂಘಟನೆಯು ಮೇಲ್ಜಾತಿ ಹಿಂದೂಗಳ ಕಲ್ಯಾಣದಲ್ಲಿ ಮಾತ್ರ ಆಸಕ್ತಿ ಹೊಂದಿರುವ ಸಂಘಟನೆ ಎಂದು ಬಿಂಬಿಸುವ ಮೂಲಕ ಆರ್‌ಎಸ್‌ಎಸ್, ಎಸ್‌ಸಿ/ಎಸ್‌ಟಿ/ಒಬಿಸಿಗಳ ನಡುವೆ ಒಡಕು ಸೃಷ್ಟಿಸುವ ಯೋಜನೆಗಳನ್ನು ಸಹ ದಾಖಲೆಯಲ್ಲಿ ಪಟ್ಟಿ ಮಾಡಲಾಗಿದೆ.

    ಈ ಕಾರ್ಯಸಿದ್ಧಿಗಾಗಿ ನಮಗೆ ಸ್ನೇಹಪರ ಇಸ್ಲಾಮಿಕ್ ದೇಶಗಳಿಂದ ಸಹಾಯ ಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಇಸ್ಲಾಂ ಧರ್ಮದ ಧ್ವಜಧಾರಿಯಾಗಿರುವ ಟರ್ಕಿಯೊಂದಿಗೆ PFI ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದೆ. ಇತರ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ವಿಶ್ವಾಸಾರ್ಹ ಸ್ನೇಹ ಬೆಳೆಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ದಾಖಲೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ‘I2U2’ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಮೋದಿ

    ಪ್ರಕರಣ ಕುರಿತು ಮಾತನಾಡಿರುವ ಎಎಸ್‌ಪಿ ಫುಲ್ವಾರಿ ಷರೀಫ್ ಮನೀಶ್ ಕುಮಾರ್, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕಳೆದ ಎರಡು ತಿಂಗಳಿಂದ ಆರೋಪಿಗಳು ಬೇರೆ ರಾಜ್ಯದಿಂದ ಬರುತ್ತಿದ್ದರು. ಬರುವವರು ಟಿಕೆಟ್ ಕಾಯ್ದಿರಿಸುವಾಗ ಮತ್ತು ಹೋಟೆಲ್‌ಗಳಲ್ಲಿ ತಂಗುವಾಗ ಹೆಸರು ಬದಲಿಸಿಕೊಳ್ಳುತ್ತಿದ್ದರು. ಒಟ್ಟು 26 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

    ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

    ಪಾಟ್ನಾ: ತವರು ಮನೆಯಿಂದ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿಯೊಬ್ಬ, ತನ್ನ ಹೆಂಡತಿ ಮನೆಗೆ ಬರಲು ನಿರಾಕರಿಸಿದ ನಂತರ ವ್ಯಕ್ತಿ ತನ್ನ ನಾದಿನಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಛಪ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    Child Marriage Bride

    ಕೃಷ್ಣರಾಮ್ ಎಂಬ ವ್ಯಕ್ತಿ ತನ್ನ ಹೆಂಡತಿ ಸಂಕಾಂತಿ ದೇವಿಯನ್ನು ಮರಳಿ ಕರೆತರಲು ಅತ್ತೆಯ ಮನೆಗೆ ಹೋಗಿದ್ದಾಗ, ಆಕೆ ಅವನೊಂದಿಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೃಷ್ಣರಾಮ್ ತನ್ನ ಅಪ್ರಾಪ್ತ ನಾದಿನಿಯನ್ನು ಪುಸಲಾಯಿಸಿ, ಸುಳ್ಳು ಭರವಸೆ ನೀಡಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

    Child Marriage Bride

    ಪೋಷಕರಿಗೆ ಕಾದಿತ್ತು ಶಾಕ್: ತನ್ನ ಮಗಳನ್ನು ಅಪಹರಿಸಿದ್ದಕ್ಕಾಗಿ ಹುಡುಗಿಯ ತಂದೆ ತಕ್ಷಣವೇ ಕೃಷ್ಣರಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ಮಹಿಳಾ ಸಹಾಯವಾಣಿಗೆ ತಲುಪಿದಾಗ, ಅಪ್ರಾಪ್ತ ಹುಡುಗಿ ಸ್ವಂತ ಕುಟುಂಬದ ವಿರುದ್ಧವೇ ಬಾಲ್ಯ ವಿವಾಹದ ಆರೋಪ ಮಾಡಿರುವುದು ಕಂಡುಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ ನಂತರವೇ ಸತ್ಯಾಂಶ ತಿಳಿದು ಬಂದಿದೆ. ಅಲ್ಲದೆ, ರಾಮ್ ಅಪ್ರಾಪ್ತ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಕುಟುಂಬದ ವಿರುದ್ಧವೇ ಸುಳ್ಳು ದೂರು ದಾಖಲಿಸುವಂತೆ ಮಾಡಿದ್ದಾನೆ ಎನ್ನುವುದೂ ಗೊತ್ತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

    CRIME 2

    ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ರಾಮ್ ನನ್ನು ಬಂಧಿಸಿದ್ದಾರೆ. ಆರೋಪಿ ರಾಮ್‌ಗೆ ಕಳೆದ 12 ವರ್ಷಗಳಿಂದ ಸಂಕಾಂತಿ ದೇವಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದ. ಈತನಿಗೆ 4 ಮಕ್ಕಳಿದ್ದಾರೆ. ಈತನಿಂದ ತೊಂದರೆಗೀಡಾದ ದೇವಿ ಮತ್ತೆ ತನ್ನ ತಂದೆ ತಾಯಿಯ ಮನೆಗೆ ಹೋಗಿದ್ದಳು ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

  • ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ರಾಯಪುರ: ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಮಂಗಳೂರು ಮೂಲದ ದಂಪತಿಗೆ ಛತ್ತೀಸ್‌ಗಢ ರಾಯಪುರದ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

    POLICE JEEP

    ಮಂಗಳೂರು ಮೂಲದ ಜುಬೇರ್ ಹುಸೇನ್(42), ಆತನ ಪತ್ನಿ ಆಯೇಷಾ ಬಾನೋ(39) ಮತ್ತು ಧೀರಜ್ ಸಾವೋ(21), ಪಪ್ಪು ಮಂಡಲ್ ಮೇಲಿನ ಆರೋಪ ಸಾಬೀತಾಗಿದೆ.

    ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ನ್ಯಾಯಧೀಶ ಅಜಯ್ ಸಿಂಗ್ ರಜಪೂತ್ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಏನಿದು ಪ್ರಕರಣ?
    ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪದ ಮೇಲೆ 2013ರಲ್ಲಿ ಧೀರಜ್ ಸಾವೋನನ್ನು ಬಂಧಿಸಲಾಗಿತ್ತು. ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ಬ್ಯಾಂಕ್ ಖಾತೆಗೂ ಸಹ ಈತ ಹಣವನ್ನು ಜಮೆ ಮಾಡುತ್ತಿದ್ದನು.

    ಯಾರಿದು ಆಯೇಷಾ?
    ಈಕೆ ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದಳು. ಅದು ಅಲ್ಲದೇ ಈಕೆ ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಈ ಮೂಲಕ ಉಗ್ರರಿಗೆ ಹಣವನ್ನು ಜಮೆ ಮಾಡುತ್ತಿದ್ದಳು. ಯಾರಿಗೂ ಸಂದೇಹ ಬರದಂತೆ ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ಪರು ಬಂಧಕ್ಕೊಳಗಾದ ಬಳಿಕ 2013ರಲ್ಲಿ ಈಕೆಯನ್ನು ಬಿಹಾರದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.