Tag: Bihar elections

  • ಬಿಹಾರದಲ್ಲಿಎನ್‌ಡಿಎಗೆ ಸೋಲು,  ಮಹಾಮೈತ್ರಿ ಅಧಿಕಾರಕ್ಕೆ – ಯಾವ ಸಮೀಕ್ಷೆ ಏನು ಹೇಳಿದೆ?

    ಬಿಹಾರದಲ್ಲಿಎನ್‌ಡಿಎಗೆ ಸೋಲು, ಮಹಾಮೈತ್ರಿ ಅಧಿಕಾರಕ್ಕೆ – ಯಾವ ಸಮೀಕ್ಷೆ ಏನು ಹೇಳಿದೆ?

    ನವದೆಹಲಿ: ಬಿಹಾರದಲ್ಲಿಂದು ಅಂತಿಮ ಮತ್ತು ಮೂರನೇ ಹಂತದ ಮತದಾನ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಯಲ್ಲಿ ಆಡಳಿತರೂಢ ಸರ್ಕಾರದ ವಿರೋಧಿ ಅಲೆ ವ್ಯಕ್ತವಾಗಿದೆ.

    ಇಂದು 78 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ.56ರಷ್ಟು ಮತದಾನ ಆಗಿದೆ. ಪ್ರಧಾನಿ ಮೋದಿ ಚಾರ್ಮ್ ನಡುವೆಯೂ ಈ ಬಾರಿ ಆಡಳಿತ ವಿರೋಧಿ ಅಲೆಗೆ ತತ್ತರಿಸಿರುವ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಭಾರೀ ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ.

    10 ಲಕ್ಷ ಉದ್ಯೋಗದ ಭರವಸೆ ನೀಡಿದ್ದ ತೇಜಸ್ವಿ ಯಾದವ್ ಕಡೆಗೆ ಮತದಾರರು ಒಲವು ತೋರಿದಂತೆ ಕಾಣುತ್ತಿದೆ. ಆರ್‌ಜೆಡಿ+ ಕಾಂಗ್ರೆಸ್ ಮಹಾಘಟಬಂಧನ್‍ಗೆ ಸಾಧಿಸಲಿದ್ದು, ತೇಜಸ್ವಿ ಯಾದವ್ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಎಕ್ಸಿಟ್ ಪೋಲ್‍ಗಳು ಹೇಳುತ್ತಿವೆ. ಅದರಲ್ಲೂ ಟುಡೇಸ್ ಚಾಣಕ್ಯ ಎನ್‍ಡಿಎ+ 55ಗೆ ಸ್ಥಾನ ಮಹಾಘಟಬಂಧನ್‍ಗೆ 180 ಸ್ಥಾನವನ್ನು ನೀಡಿದೆ.

    ಯಾವ ಸಮೀಕ್ಷೆ ಏನು ಹೇಳಿದೆ?
    ಟುಡೇಸ್ ಚಾಣಕ್ಯ – ಎನ್‍ಡಿಎ 55, ಯುಪಿಎ 180, ಇತರೇ 8
    ಸಿವೋಟರ್ಸ್ – ಎನ್‍ಡಿಎ 116, ಯುಪಿಎ 120, ಎಲ್‍ಜೆಪಿ 01, ಇತರೇ 06
    ಎಬಿಪಿ ನ್ಯೂಸ್ – ಎನ್‍ಡಿಎ 104 – 128, ಯುಪಿಎ 108-131, ಎಲ್‍ಜೆಪಿ 01-03, ಇತರೇ 04-08

    ಜನ್‍ಕಿಬಾತ್ – ಎನ್‍ಡಿಎ 91 – 117, ಯುಪಿಎ 118-138, ಎಲ್‍ಜೆಪಿ 05-08, ಇತರೇ 03-06
    ಪೀಪಲ್ಸ್ ಪಲ್ಸ್ – ಎನ್‍ಡಿಎ 09 -110, ಯುಪಿಎ 100-115, ಎಲ್‍ಜೆಪಿ 03-05, ಇತರೇ 08-18
    ಪೋಲ್ ಆಫ್ ಪೋಲ್ – ಎನ್‍ಡಿಎ 112, ಯುಪಿಎ 122, ಎಲ್‍ಜೆಪಿ 04, ಇತರೇ 05

    ಒಟ್ಟು 243 ಸ್ಥಾನಗಳಿದ್ದು ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ.  2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‌ಜೆಡಿ , ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‌ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು. ಆದರೆ ಮಹಾಮೈತ್ರಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಗಿದ್ದರಿಂದ 2017ರಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದಿತ್ತು.

  • ಬಿಹಾರದಲ್ಲಿ ಮಹಾಮೈತ್ರಿಗೆ ಜಯ  – ಎನ್‌ಡಿಎಗೆ ಸೋಲು

    ಬಿಹಾರದಲ್ಲಿ ಮಹಾಮೈತ್ರಿಗೆ ಜಯ – ಎನ್‌ಡಿಎಗೆ ಸೋಲು

    ಪಾಟ್ನಾ: ಬಿಹಾರ ವಿಧಾಸಭಾ ಚುನಾವಣೆಯಲ್ಲಿ ಈ ಬಾರಿ ಯುಪಿಎ ಮಹಾಮೈತ್ರಿ ಅಧಿಕಾರಕ್ಕೆ  ಬರುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.

    ಒಟ್ಟು 243 ಸ್ಥಾನಗಳಿದ್ದು ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಟೈಮ್ಸ್‌ ನೌ ಸಿ ವೋಟರ್‌ ಸಮೀಕ್ಷೆಯಲ್ಲಿ ಮಹಾಮೈತ್ರಿ 120, ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ 116, ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ 1 ಇತರರು 6 ಸ್ಥಾನ ಗೆಲ್ಲಲ್ಲಿದ್ದಾರೆ ಎಂದು ಹೇಳಿದೆ.

    ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌ ಸಮೀಕ್ಷೆ ಯುಪಿಎಗೆ 118-138 ಸ್ಥಾನ, 91-117 ಸ್ಥಾನ ಆಡಳಿತರೂಢ ಎನ್‌ಡಿಎ ಸರ್ಕಾರಕ್ಕೆ ಸಿಗಲಿದೆ ಎಂದು ತಿಳಿಸಿದೆ.

    ಮೂರು ಹಂತದಲ್ಲಿ ನಡೆದ ಚುನಾವಣೆ ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ನ.10 ರಂದು ಫಲಿತಾಂಶ ಪ್ರಕಟವಾಗಲಿದೆ.

    2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‌ಜೆಡಿ , ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‌ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು. ಆದರೆ ಮಹಾಮೈತ್ರಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಗಿದ್ದರಿಂದ 2017ರಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದಿತ್ತು.

    https://twitter.com/TimesNow/status/1325070719038812160

  • ಇವಿಎಂ ಅಂದ್ರೆ ಮೋದಿ ವೋಟಿಂಗ್‌ ಮಷೀನ್‌, ನಾವು ಭಯಪಡಲ್ಲ- ರಾಹುಲ್‌ ಗಾಂಧಿ

    ಇವಿಎಂ ಅಂದ್ರೆ ಮೋದಿ ವೋಟಿಂಗ್‌ ಮಷೀನ್‌, ನಾವು ಭಯಪಡಲ್ಲ- ರಾಹುಲ್‌ ಗಾಂಧಿ

    ಪಾಟ್ನಾ: ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಅನ್ನು ಕಾಂಗ್ರೆಸ್‌ ಅಧ್ಯಕ್ಷ ಮೋದಿ ವೋಟಿಂಗ್‌ ಮಷೀನ್‌ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.

    ಬಿಹಾರದ ಅರಾರಿಯಾದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ನಾವು ಮೋದಿ ವೋಟಿಂಗ್‌ ಮಷೀನ್‌ ಅಥವಾ ಮೋದಿಯವರ ಮಾಧ್ಯಮಕ್ಕೆ ನಾನು ಭಯಪಡುವುದಿಲ್ಲ. ಈ ಬಾರಿ ಬಿಹಾರದ ಯುವಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ನಮಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸತ್ಯ ಯಾವಾಗಲೂ ಸತ್ಯವೇ. ನ್ಯಾಯ ಯಾವಾಗಲೂ ನ್ಯಾಯವೇ. ನಾವು ಈ ವ್ಯಕ್ತಿಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಅವರ ಚಿಂತನೆಯ ವಿರುದ್ಧ ಹೋರಾಡುತ್ತೇವೆ. ಅವರ ಚಿಂತನೆಯನ್ನು ನಾವು ಈ ಬಾರಿ ಸೋಲಿಸುತ್ತೇವೆ ಎಂದು ಹೇಳಿದರು.

    ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದ ರಾಹುಲ್‌ ಗಾಂಧಿ, ನರೇಂದ್ರ ಮೋದಿ ತಮ್ಮ ಸಭೆಗಳಲ್ಲಿ ನನ್ನ ಬಗ್ಗೆ ಅಹಿತಕರ ವಿಷಯಗಳನ್ನು ಹೇಳುತ್ತಾರೆ. ನನ್ನ ವಿರುದ್ಧ ಅವರು ಹೆಚ್ಚು ದ್ವೇಷವನ್ನು ಹರಡಲು ಪ್ರಯತ್ನಿಸುತ್ತಾರೆ. ಆದರೆ ನಾನು ಯಾವಾಗಲೂ ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತೇನೆ. ದ್ವೇಷವು ದ್ವೇಷವನ್ನು ಸೋಲಿಸಲು ಸಾಧ್ಯವಿಲ್ಲ, ಪ್ರೀತಿಯನ್ನು ಮಾತ್ರ ಮಾಡಬಹುದು. ನಾನು ಗೆದ್ದಿದ್ದೇನೆ ಎಂದು ಹೇಳಿದರು.

    ಈಗಾಗಲೇ 2 ಹಂತದ ಚುನಾವಣೆಗಳು ಮುಕ್ತಾಯಗೊಂಡಿದ್ದು ಮೂರನೇ ಮತ್ತು ಕೊನೆಯ ಹಂತದ ಚುನಾವಣೆ ನ.7 ರಂದು 78 ಕ್ಷೇತ್ರಗಳಿಗೆ ನಡೆಯಲಿದೆ. ಫಲಿತಾಂಶ ನ.10 ರಂದು ಪ್ರಕಟವಾಗಲಿದೆ.

  • ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ಪಾಟ್ನಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಲೋಕಜನ ಶಕ್ತಿ ಪಕ್ಷ(ಎಲ್‌ಜಿಪಿ) ಸೀತಾ ಮಂದಿರ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದೆ.

    ಬಿಹಾರ ಚುನಾವಣೆ ಮತ್ತು ದಸರಾ ಹಿನ್ನೆಲೆಯಲ್ಲಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಸೀತಾಮಹ್ರಿಗೆ ಇಂದು ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕಿಂತ ದೊಡ್ಡದಾದ ಸೀತಾ ದೇವಾಲಯವನ್ನು ಇಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.

    ‘ಬಿಹಾರ ಫಸ್ಟ್‌, ಬಿಹಾರಿ ಫಸ್ಟ್‌ʼ ಹೆಸರಿನ ಪ್ರಣಾಳಿಕೆಯನ್ನು ಎಲ್‌ಜೆಪಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸೀತಾ ದೇವಾಲಯ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದೆ.

    ಮುಂದೆ ಬಿಹಾರದಲ್ಲಿ ಎಲ್‌ಜೆಪಿ ಸರ್ಕಾರ ಬರಲಿದ್ದು ನಾವು ಶಂಕುಸ್ಥಾಪನೆ ನೆರವೇರಿಸುತ್ತೇವೆ. ಯಾರು ಈಗ ಮುಖ್ಯಮಂತ್ರಿ ಆಗಿದ್ದೃೋ ಅವರು ಮತ್ತೆ ಆಯ್ಕೆಯಾಗುವುದಿಲ್ಲ. ಬಿಜೆಪಿ ನಾಯಕತ್ವದ ಅಡಿಯಲ್ಲಿ ಬಿಜೆಪಿ- ಎಲ್‌ಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ಅಕ್ಟೋಬರ್‌ 28 ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್‌ 10 ರಂದು ಮತ ಎಣಿಕೆ ನಡೆಯಲಿದೆ.

  • ವೋಟ್ ಹಾಕಿ ಗೆಲ್ಸಿದ್ರೆ ಲಸಿಕೆ ಕೊಡ್ತೀರಾ, ಇಲ್ಲ ಜನ್ರನ್ನು ಸಾಯಿಸಿ ಬಿಡ್ತಿರಾ: ವಿಶ್ವನಾಥ್ ಪ್ರಶ್ನೆ

    ವೋಟ್ ಹಾಕಿ ಗೆಲ್ಸಿದ್ರೆ ಲಸಿಕೆ ಕೊಡ್ತೀರಾ, ಇಲ್ಲ ಜನ್ರನ್ನು ಸಾಯಿಸಿ ಬಿಡ್ತಿರಾ: ವಿಶ್ವನಾಥ್ ಪ್ರಶ್ನೆ

    – ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು

    ಮೈಸೂರು: ವೋಟ್ ಹಾಕಿ ಗೆಲ್ಲಿಸಿದರೆ ಉಚಿತ ಲಸಿಕೆ ಕೊಡುತ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನು ಸಾಯಿಸಿ ಬಿಡುತ್ತೀರಾ ಎಂದು ತಮ್ಮ ಪಕ್ಷದ ನಾಯಕರನ್ನೇ ಪರಿಷತ್ ಸದಸ್ಯ ವಿಶ್ವನಾಥ್ ಅವರು ಪ್ರಶ್ನೆ ಮಾಡಿದ್ದಾರೆ.

    ಸದ್ಯ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಬಿಹಾರದಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ತಿಳಿಸಿದೆ. ಇದೇ ವಿಚಾರ ಈಗ ಸಖತ್ ಚರ್ಚೆಯಾಗುತ್ತಿದೆ. ಇಂದು ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು ಎಂದಿದ್ದಾರೆ.

    ಕೊರೊನಾ ವಿಚಾರವನ್ನ ರಾಜಕೀಯಕ್ಕೆ ತರಬೇಡಿ. ವೋಟ್ ಹಾಕಿ ಗೆಲ್ಲಿಸಿದರೆ ಉಚಿತ ಲಸಿಕೆ ಕೊಡುತ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನು ಸಾಯಿಸಿ ಬಿಡುತ್ತೀರಾ? ಯಾವುದೇ ಪಕ್ಷವಾಗಲಿ ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಮ್ಮ ಪಕ್ಷದ ಪ್ರಣಾಳಿಕೆ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.

  • ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ- 8.5 ಲಕ್ಷ ವಶಕ್ಕೆ

    ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ- 8.5 ಲಕ್ಷ ವಶಕ್ಕೆ

    – ಕಚೇರಿಯ ಆವರಣದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹಣ ಪತ್ತೆ
    – ಚುನಾವಣೆ ಹೊತ್ತಲ್ಲೇ ಐಟಿ ದಾಳಿ

    ಪಾಟ್ನಾ: ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಬಿಹಾರದ ಕಾಂಗ್ರೆಸ್ ಪ್ರಧಾನ ಕಚೇರಿ ಸದಾಕತ್ ಆಶ್ರಮದ ಮೇಲೆ ಆದಾಯ ತೆರಿಗೆ ಅಧಿಕಾರಿ(ಐಟಿ)ಗಳು ದಾಳಿ ನಡೆಸಿದ್ದು, ಕಚೇರಿಯ ಆವರಣದ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 8.5 ಲಕ್ಷ ರೂ.ಪತ್ತೆಯಾಗಿದೆ.

    ಪಾಟ್ನಾದಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಎಂದು ನಂಬಲಾದ ಅಶುತೋಷ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ 8.5 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ಕಚೇರಿಯಲ್ಲಿ ಹಣ ಪತ್ತೆಯಾದ ಕುರಿತು ಬಿಹಾರ್ ಕಾಂಗ್ರೆಸ್ ಇನ್‍ಚಾರ್ಜ್ ಶಕ್ತಿ ಸಿಂಗ್ ಗೋಹಿಲ್ ಹಾಗೂ ರಾಷ್ಟ್ರೀಯ ಮಿಡಿಯಾ ಇನ್‍ಚಾರ್ಜ್ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಸದಾಕತ್ ಆಶ್ರಮದ ಮೇಲೆ ನಡೆದ ಐಟಿ ದಾಳಿಯನ್ನು ಶಕ್ತಿ ಸಿಂಗ್ ಗೋಹಿಲ್ ಅವರು ಖಂಡಿಸಿದ್ದು, ಕಾಂಗ್ರೆಸ್ ತಪ್ಪು ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಯು ಸರ್ಕಾರದ ಸೂಚನೆ ಮೇರೆಗೆ ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

    ಬಿಹಾರ ಚುನಾವಣೆಯಲ್ಲಿ ನಾವು ಸೋಲುತ್ತೇವೆ ಎಂಬುದು ಬಿಜೆಪಿ-ಜೆಡಿಯುಗೆ ತಿಳಿದಿದೆ. ಹೀಗಾಗಿ ಈ ರೀತಿಯ ಕೆಲಸ ಮಾಡುತ್ತಿದೆ. ಯಾರ ಕಾರಿನಿಂದ ಹಣ ವಶಪಡಿಸಿಕೊಳ್ಳಲಾಗಿದೆಯೋ ಅವರು ನಮಗೆ ಸಂಬಂಧವಿಲ್ಲ. ಹಣ ಹಾಗೂ ಕಾರು ಯಾರಿಗೆ ಸೇರಿದ್ದು ಎಂಬುದು ಸಹ ನಮಗೆ ತಿಳಿದಿಲ್ಲ ಎಂದು ಶಕ್ತಿ ಸಿಂಗ್ ಗೋಹಿಲ್ ಹೇಳಿದ್ದಾರೆ. ಅತ್ತ ಈ ದಾಳಿಯನ್ನು ಐಟಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

  • ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಬಿಜೆಪಿಯಿಂದ ಟಿಕೆಟ್!

    ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಬಿಜೆಪಿಯಿಂದ ಟಿಕೆಟ್!

    ನವದೆಹಲಿ: ಬಿಹಾರ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಕಾರ್ಯಕ್ಕೆ ಧಮುಕಿವೆ. ಘಟಾನುಘಟಿ ಬಾಹುಬಲಿಗಳು ಚುನಾವಣಾ ರಂಗ ಪ್ರವೇಶಕ್ಕೆ ಸಿದ್ಧರಾಗಿದ್ದು, ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ರೆ ಕುಟುಂಬಸ್ಥರಿಗೆ ಟಿಕೆಟ್ ಸಿಗುವಂತೆ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರೋದು ಬಿಹಾರ ರಾಜಕೀಯದಲ್ಲಿ ಕಾಣಸಿಗುವ ಇಂದಿನ ದೃಶ್ಯಗಳು.

    ಶುಕ್ರವಾರ ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿ ಹೊರಬಂದಿದ್ದು, ಬೆಚ್ಚಿಬೀಳುವ ಅಂಶಗಳನ್ನ ಹೊರಹಾಕಿವೆ. ಎಡಿಆರ್ ವರದಿ ಪ್ರಕಾರ 2005ರ ಬಳಿಕ ಅಪರಾಧ ಹಿನ್ನೆಲೆ ಅತಿ ಹೆಚ್ಚು ವ್ಯಕ್ತಿಗಳು ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.

    ಎಡಿಆರ್ ತನ್ನ ವರದಿಯಲ್ಲಿ 2005ರ ಬಿಹಾರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 10,875 ಅಭ್ಯರ್ಥಿಗಳ ಮಾಹಿತಿಯನ್ನ ಸಂಗ್ರಹಿಸಿದೆ. ಇದರ ಜೊತೆಗೆ 2005ರಿಂದ ಗೆದ್ದಿರುವ ಸಂಸದ ಮತ್ತು ಶಾಸಕರ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದೆ. 10,785 ಅಭ್ಯರ್ಥಿಗಳ ಪೈಕಿ 3,230 ಜನರು ತಮ್ಮ ಅಪರಾಧ ಪ್ರಕರಣಗಳಿರೋದನ್ನ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ. ಇವರಲ್ಲಿ 2,204 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

    2005ರಿಂದ ಬಿಹಾರದ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಶೇ.57ರಷ್ಟು ಜನಪ್ರತಿನಿಧಿ(ಸಂಸದ ಮತ್ತು ಶಾಸಕರು)ಗಳ ಮೇಲೆ ಅಪರಾಧ ಪ್ರಕರಣಗಳಿವೆ. ಇದರಲ್ಲಿ ಶೇ.37ರಷ್ಟು ಗಂಭೀರ ಪ್ರಕರಣಗಳಿವೆ. ಈ ಎಲ್ಲ ಮಾಹಿತಿಗಳ ಜೊತೆ ಇವರೆಲ್ಲರ ಸಂಪತ್ತಿಗೆ ಬಗ್ಗೆಯೂ ಎಡಿಆರ್ ವಿಶ್ಲೇಷಣೆ ಮಾಡಿದೆ.

    ನಿಷ್ಕಳಂಕ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ, ಕಳೆದ 15 ವರ್ಷದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಚುನಾವಣೆ ಟಿಕೆಟ್ ನೀಡಿದೆ. 2005ರ ಚುನಾವಣಾ ಅಖಾಡದಲ್ಲಿದ್ದ ಬಿಜೆಪಿಯ 426 ಅಭ್ಯರ್ಥಿಗಳ ಪೈಕಿ 252 ಜನರು ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಅಂದ್ರೆ ಬಿಜೆಪಿಯ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.59ರಷ್ಟು ಜನರ ಮೇಲೆ ಕಳಂಕದ ಕಪ್ಪು ಚುಕ್ಕೆಯಿದೆ.

    ಎರಡನೇ ಸ್ಥಾನದಲ್ಲಿ ಆರ್ ಜೆಡಿ ಪಕ್ಷವಿದೆ. ಕಳೆದ 15 ವರ್ಷದಲ್ಲಿ ಆರ್ ಜೆಡಿಯ 502 ಅಭ್ಯರ್ಥಿಗಳ ಪೈಕಿ 280 ಜನರು ಅಂದ್ರೆ ಶೇ.52ರಷ್ಟು ಜನರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಅದೇ ರೀತಿ ಜೆಡಿಯು ಪಕ್ಷದಿಂದ 454 ಮಂದಿ ಚುನಾವಣೆ ಎದುರಿಸಿದ್ದು, 234 ಅಭ್ಯರ್ಥಿಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು 394 ಅಭ್ಯರ್ಥಿಗಳ ಪೈಕಿ 170 ಜನರ ಮೇಲೆ ಕೇಸ್ ಗಳಿವೆ. ಇನ್ನುಳಿದಂತೆ ಎಲ್‍ಜೆಪಿಯ 330 ಅಭ್ಯರ್ಥಿಗಳಲ್ಲಿ 155 (ಶೇ.47) ಮಂದಿಗೆ ಅಪರಾಧ ಹಿನ್ನೆಲೆ ಇದೆ. ಎಡಿಆರ್ ಸರ್ವೇ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಎಸ್‍ಪಿ, ಬಿಎಸ್‍ಪಿ ಜನಪ್ರತಿನಿಧಿಗಳ ಮಾಹಿತಿಯನ್ನ ಹೊಂದಿದೆ.

    ಗಂಭೀರ ಪ್ರಕರಣಗಳು: 2005ರಿಂದ ಬಿಹಾರದಲ್ಲಿ ನಡೆದಿರುವ ಚುನಾವಣೆಗೆ ಶೇ.35ರಷ್ಟು ಗಂಭೀರ ಪ್ರಕರಣಳಗಳನ್ನ ಹೊಂದಿರುವಂತಹ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಕಾಂಗ್ರೆಸ್ ಶೇ.24, ಆರ್ ಜೆಡಿ ಶೇ.35, ಜೆಡಿಯು ಶೇ.35 ಮತ್ತು ಎಲ್‍ಜೆಪಿ ಶೇ.30ರಷ್ಟು ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

    ಬಿಜೆಪಿಯ ಶೇ.63ರಷ್ಟು ಸಂಸದರು, ಶಾಸಕರ ಮೇಲೆ ಅಪರಾಧ ಪ್ರಕರಣಗಳು: ಹೌದು, 2005ರಿಂದ ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಜಯಶಾಲಿಯಾಗಿರುವ 246 (ಸಂಸದರು ಮತ್ತು ಶಾಸಕರು) ಜನಪ್ರತಿನಿಧಿಗಳ 154 ಚುನಾಯಿತ ನಾಯಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಇವರಲ್ಲಿ 84 ಮಂದಿ ವಿರುದ್ಧ ಗಂಭೀರ ಪ್ರಕರಣಗಳಿವೆ.

    ಕಾಂಗ್ರೆಸ್ ನಿಂದ ಗೆದ್ದ 46 ಜನಪ್ರತಿನಿಧಿಗಳಲ್ಲಿ 25 ಮಂದಿ ಅಪರಾಧ ಪ್ರಕರಣಗಳು ದಾಖಲಾಗಿವೆ. 25ರಲ್ಲಿ 17 ಜನಪ್ರತಿನಿಧಿಗಳ ಹೆಸರು ಗಂಭೀರ ಪ್ರಕರಣಗಳಲ್ಲಿ ಕೇಳಿ ಬಂದಿವೆ. ಆರ್ ಜೆಡಿಯ 158ರಲ್ಲಿ 89(ಗಂಭೀರ 62), ಜೆಡಿಯು 296ರಲ್ಲಿ 149 (ಗಂಭೀರ 101) ಮತ್ತು ಎಲ್‍ಜೆಪಿಯ 27ರಲ್ಲಿ 19 (ಗಂಭೀರ 11) ಚುನಾಯಿತ ಪ್ರತಿನಿಧಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.

    ಕೋಟ್ಯಧಿಪತಿಗಳಿಗೆ ಕಾಂಗ್ರೆಸ್ಸಿನಿಂದ ಟಿಕೆಟ್: 2005ರಿಂದ ಚುನಾವಣೆ ಎದುರಿಸಿರುವ ಸಂಪತ್ತಿನ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದ್ದು, ಕಾಂಗ್ರೆಸ್ ಅತಿ ಹೆಚ್ಚು ಧನಿಕರಿಗೆ ಟಿಕೆಟ್ ನೀಡಿದೆ. 394 ಅಭ್ಯರ್ಥಿಗಳ ಸರಾಸರಿ ಸಂಪತ್ತು 3.44 ಕೋಟಿ ರೂ. ಇದೆ. ಅದೇ ರೀತಿ ಬಿಜೆಪಿಯ 426 ಅಭ್ಯರ್ಥಿಗಳ ಸರಾಸರಿ ಸಂಪತ್ತು 2.93 ಕೋಟಿ, ಜೆಡಿಯು 3.68 ಕೋಟಿ ರೂ ಮತ್ತು ಆರ್ ಜೆಡಿ 1.70 ಕೋಟಿ ಸಂಪತ್ತು ಹೊಂದಿದೆ.