Tag: Bihar Election

  • Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ

    Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ

    – ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಡಿಸಿಎಂ ಅಭ್ಯರ್ಥಿ

    ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ INDIA ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ವಿರೋಧ ಪಕ್ಷದ ನಾಯಕ, ಮಾಜಿ ಡಿಸಿಎಂ ತೇಜಸ್ವಿ ಯಾದವ್ (Tejashwi Yadav) ಅವರನ್ನು ಘೋಷಿಸಿಲಾಗಿದೆ. ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸುಧೀರ್ಘ ಚರ್ಚೆ ಬಳಿಕ ಅಂತಿಮವಾಗಿ ತೇಜಸ್ವಿ ಯಾದವ್ ಅವರ ಹೆಸರು ಘೋಷಿಸಲಾಯಿತು.

    ಇದೇ ಸಂದರ್ಭದಲ್ಲಿ ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಅಶೋಕ್ ಗೆಹ್ಲೋಟ್, ಮುಂಬರುವ ಬಿಹಾರ ಚುನಾವಣೆಯಲ್ಲಿ (Bihar Election) ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೈತ್ರಿಕೂಟ ನಿರ್ಧರಿಸಿದೆ. ಅವರಿಗೆ ದೀರ್ಘ ಭವಿಷ್ಯವಿದೆ. ನಿಶಾದ್ ಸಮುದಾಯದಲ್ಲಿ ಗಮನಾರ್ಹ ಪ್ರಭಾವ ಹೊಂದಿರುವ ಮುಖೇಶ್ ಸಹಾನಿ ಜೊತೆಗೆ, ಹಿಂದುಳಿದ ವರ್ಗದ ಮತ್ತೊಬ್ಬ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ:  Bihar Election | ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತ – ಮಾಧ್ಯಮಗಳ ಮುಂದೆ ಕಣ್ಣೀರು

    ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮಾತನಾಡಿ, ನಾವು ಬಿಹಾರಕ್ಕಾಗಿ ಕೆಲಸ ಮಾಡಲು ಮತ್ತು ಎನ್‌ಡಿಎಯ (NDA) ಡಬಲ್-ಎಂಜಿನ್ ಸರ್ಕಾರವನ್ನು ಕೊನೆಗೊಳಿಸಲು ಬಯಸುತ್ತೇವೆ, ಇಲ್ಲಿರುವ ಡಬಲ್ ಇಂಜಿನ್ ಪೈಕಿ ಒಂದು ಎಂಜಿನ್ ಭ್ರಷ್ಟಾಚಾರದಿಂದ ನಡೆಸಲ್ಪಟ್ಟರೇ ಇನ್ನೊಂದು ಎಂಜಿನ್ ಅಪರಾಧದಿಂದ ನಡೆಸಲ್ಪಡುತ್ತದೆ ಎಂದು ವಾಗ್ದಾಳಿ ನಡೆಸಿದರು.


    ಬಿಜೆಪಿ ನೇತೃತ್ವದ ಎನ್‌ಡಿಎದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಟೀಕಿಸಿದ ಅವರು, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ನಾವು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಆದರೆ ಎನ್‌ಡಿಎ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಅವರ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಅವರಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ನಿತೀಶ್ ಕುಮಾರ್ ಅವರಿಗೆ ಅನ್ಯಾಯವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಹೊಂದಿಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದರು.

  • Bihar Election | ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತ – ಮಾಧ್ಯಮಗಳ ಮುಂದೆ ಕಣ್ಣೀರು

    Bihar Election | ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತ – ಮಾಧ್ಯಮಗಳ ಮುಂದೆ ಕಣ್ಣೀರು

    • ಬಿಜೆಪಿ ವಿರುದ್ಧ ಅಧಿಕಾರಿಗಳ ಮೇಲೆ ಒತ್ತಡ ಆರೋಪ 

    ಪಾಟ್ನಾ: ಬಿಹಾರದ ಮೊಹಾನಿಯಾ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ (Shweta Suman)ಅವರ ನಾಮಪತ್ರವನ್ನು ತಿರಸ್ಕೃತಗೊಂಡಿದೆ. ಶ್ವೇತಾ ಸುಮನ್ ಉತ್ತರ ಪ್ರದೇಶದ ನಿವಾಸಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರ ನಾಮಪತ್ರವನ್ನು ಚುನಾವಣಾ ಆಯೋಗ (ECI) ರದ್ದುಗೊಳಿಸಿದೆ. ಈ ಮೂಲಕ ಮಹಾಘಟಬಂಧನ್‌ (Mahagathbandhan) ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಾ ಸುಮನ್, ಬಿಜೆಪಿ ಸಂವಿಧಾನವನ್ನು ಮುಗಿಸಲು ಹೊರಟಿದೆ. ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿತ್ತು. ಅಧಿಕಾರಿಗಳು ಅಸಹಾಯಕರು, ನಾನು ಖಂಡಿತವಾಗಿಯೂ ಕೋರ್ಟ್‌ಗೆ ಹೋಗುತ್ತೇನೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಸಂಗೀತಾ, ಅಧಿಸೂಚನೆ ದಿನಾಂಕದ ನಂತರ ತಮ್ಮ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಬಿಜೆಪಿಯಿಂದ ಬಂದವರಾಗಿರುವುದರಿಂದ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮಾತನಾಡುವ ವೇಳೆ ಅವರು ಕಣ್ಣೀರಿಟ್ಟಿದ್ದಾರೆ.

    ಇದಕ್ಕೂ ಮುನ್ನ ಸುಗೌಲಿಯ ಹಾಲಿ ಆರ್‌ಜೆಡಿ ಶಾಸಕ ಶಶಿಭೂಷಣ್ ಸಿಂಗ್, ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ದಾಖಲೆಗಳಲ್ಲಿ ದೋಷ ಕಂಡು ಬಂದಿದ್ದರಿಂದ ನಾಮಪತ್ರ ತಿರಸ್ಕಾರಗೊಂಡಿತ್ತು. ಆರ್‌ಜೆಡಿ ಪಕ್ಷದಿಂದ ಟಿಕೆಟ್‌ ಸಿಗದೇ ಬಂಡಾಯ ಅಭ್ಯಾರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಓಂ ಪ್ರಕಾಶ್ ಚೌಧರಿ ಅವರ ನಾಮಪತ್ರವನ್ನು ಪರಿಶೀಲನೆಯ ನಂತರ ರದ್ದುಗೊಳಿಸಲಾಗಿದೆ. ಅವರ ನಾಮಪತ್ರದಲ್ಲಿ ಹಲವಾರು ಪುಟಗಳು ಖಾಲಿ ಇದ್ದವು ಎಂದು ವರದಿಯಾಗಿದೆ.

    ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ (Bihar Election)ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.

  • ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

    ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

    – ಶಾಕ್‌ ನೀಡಿ ಮೈತ್ರಿ ಪರಿಶೀಲಿಸುವುದಾಗಿ ಹೇಳಿದ ಜೆಎಂಎಂ
    – 9 ಕ್ಷೇತ್ರಗಳಲ್ಲಿ INDIA ಮಧ್ಯೆ ಫ್ರೆಂಡ್ಲಿ ಫೈಟ್‌

    ನವದೆಹಲಿ: ಎನ್‌ಡಿಎ (NDA) ಸೋಲಿಸಲು ರಾಷ್ಟ್ರಮಟ್ಟದಲ್ಲಿ ಒಂದಾಗಿರುವ INDIA ಒಕ್ಕೂಟದಲ್ಲಿ ದೊಡ್ಡ ಬಿರುಕು ಮೂಡಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಮೈತ್ರಿ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ. ಅಷ್ಟೇ ಅಲ್ಲದೇ ಜಾರ್ಖಂಡ್‌ ಮುಕ್ತಿ ಮೋರ್ಚಾ (JMM) ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಮೈತ್ರಿಗೆ ಶಾಕ್‌ ನೀಡಿದೆ.

    ಸೋಮವಾರ ಎರಡನೇ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ಆದರೆ ಕೊನೆ ಹಂತದವರೆಗೂ ಮೈತ್ರಿಯಲ್ಲಿ ಸೀಟ್‌ ಹಂಚಿಕೆ ಮಾತುಕತೆ ಅಂತ್ಯವಾಗಿರಲಿಲ್ಲ. ಪರಿಣಾಮ ಆರ್‌ಜೆಡಿ ಯಾರ ಜೊತೆ ಚರ್ಚಿಸದೇ ಅಂತಿಮವಾಗಿ 143 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದರೆ ಕಾಂಗ್ರೆಸ್‌ 61, ಎಡ ಪಕ್ಷಗಳು 30, ವಿಐಪಿ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

    ಈ ಪೈಕಿ 9 ಕ್ಷೇತ್ರಗಳಲ್ಲಿ INDIA ಕೂಟದ ಮಧ್ಯೆಯೇ ಫ್ರೆಂಡ್ಲಿ ಫೈಟ್‌ ನಡೆಯಲಿದೆ. ಅದರಲ್ಲೂ ಕಾಂಗ್ರೆಸ್‌ ವಿರುದ್ಧವೇ ಅಭ್ಯರ್ಥಿಗಳನ್ನು ಪ್ರಕಟಿಸಿರುವುದು ವಿಶೇಷ. 6 ಕ್ಷೇತ್ರಗಳಲ್ಲಿ ಆರ್‌ಜೆಡಿ, 3 ಕ್ಷೇತ್ರಗಳಲ್ಲಿ ಸಿಪಿಐ ಕಣಕ್ಕೆ ಇಳಿದಿದೆ. ಇದನ್ನೂ ಓದಿ:  21 ವರ್ಷಗಳ ಹಿಂದಿನ ದರೋಡೆ ಕೇಸ್‌ – ನಾಮಪತ್ರ ಸಲ್ಲಿಸಿದ ಮರುಕ್ಷಣವೇ ಆರ್‌ಜೆಡಿ ಅಭ್ಯರ್ಥಿ ಅರೆಸ್ಟ್‌


    ಕನಿಷ್ಟ 5 ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ INDIA ಒಕ್ಕೂಟದಲ್ಲಿ ಸರಿಯಾಗಿ ಸೀಟ್‌ ಹಂಚಿಕೆಯಾಗದ ಕಾರಣ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ.

    ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಿತೂರಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನಮ್ಮ ಮೈತ್ರಿಯನ್ನು ಮರುಪರಿಶೀಲಿಸುವುದಾಗಿ ಜೆಎಂಎಂ ನಾಯಕ ಸುದಿವ್ಯ ಕುಮಾರ್ ಹೇಳಿಕೆ ನೀಡಿದ್ದು, ನಂಬಿಕೆ ದ್ರೋಹಕ್ಕೆ ತಕ್ಕ ಉತ್ತರ ನೀಡುವುದಾಗಿ ಗುಡುಗಿದ್ದಾರೆ.

    ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ನವೆಂಬರ್‌ 6 ಹಾಗೂ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್‌ 14 ರಂದು ಮತ ಎಣಿಕೆ ನಡೆಯಲಿದೆ.

  • ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ಪಾಟ್ನಾ: ಬಿಹಾರದಲ್ಲಿ (Bihar) ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಇನ್ನೂ ಅಂತಿಮಗೊಳ್ಳದ ಕಾರಣ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ (Lalu Prasad Yadav) ಕರೆ ಮಾಡಿ ನೇರವಾಗಿ ಮಾತನಾಡಿದ್ದಾರೆ.

    ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಶನಿವಾರ ಡೆಡ್‌ಲೈನ್‌ ಆಗಿದೆ. ಒಂದು ದಿನ ಮಾತ್ರ ಬಾಕಿ ಇದ್ದರೂ ಮೈತ್ರಿ ಪಕ್ಷದಲ್ಲಿ ಒಮ್ಮತ ಮೂಡಿಲ್ಲ.

    2020 ರಲ್ಲಿ ಕಾಂಗ್ರೆಸ್‌ (Congress) ಸ್ಪರ್ಧಿಸಿದ 70 ಕ್ಷೇತ್ರಗಳಲ್ಲಿ ಕೇವಲ 19 ರಲ್ಲಿ ಮಾತ್ರ ಜಯಗಳಿಸಿತ್ತು. ಹೀಗಿದ್ದರೂ ಕಾಂಗ್ರೆಸ್‌ ಅಷ್ಟೇ ಸ್ಥಾನಗಳನ್ನು ನೀಡುವಂತೆ ಕೇಳಿದ್ದು ಆರ್‌ಜೆಡಿ (RJD) ಸೋತ ಕ್ಷೇತ್ರಗಳನ್ನು ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಸೀಟು ಹಂಚಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

    ಮಾಧ್ಯಮಗಳು ವರದಿ ಮಾಡಿದಂತೆ ಕಳೆದ ಬಾರಿ ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೆ ಈ ಬಾರಿ 135 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಕಳೆದ ಬಾರಿ 70 ರಲ್ಲಿ ಕಣಕ್ಕೆ ಇಳಿದಿದ್ದರೆ ಈ ಬಾರಿ 60 ಕ್ಷೇತ್ರ ಪಡೆಯಬಹುದು ಎನ್ನಲಾಗುತ್ತಿದೆ.

    ಮುಖೇಶ್ ಸಹಾನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ 16 ಸ್ಥಾನಗಳು ಸಿಗುವ ಸಾಧ್ಯತೆಯಿದೆ. ತೇಜಸ್ವಿ ಯಾದವ್ ಅವರ ಆಡಳಿತದಲ್ಲಿ ಉಪಮುಖ್ಯಮಂತ್ರಿಯಾಗುವುದಾಗಿ ಬಹಿರಂಗವಾಗಿ ಹೇಳಿಕೊಳ್ಳುವ ಸಹಾನಿ 30 ರಿಂದ 40 ಸ್ಥಾನಗಳನ್ನು ಕೇಳುತ್ತಿದ್ದಾರೆ.

  • ಬಿಹಾರ ಚುನಾವಣೆಯಲ್ಲಿ ಗೆದ್ರೆ ಪ್ರತಿ ಮನೆಗೆ ಉದ್ಯೋಗ ಗ್ಯಾರಂಟಿ: ಸಮರ್ಥಿಸಿದ ಪರಮೇಶ್ವರ್

    ಬಿಹಾರ ಚುನಾವಣೆಯಲ್ಲಿ ಗೆದ್ರೆ ಪ್ರತಿ ಮನೆಗೆ ಉದ್ಯೋಗ ಗ್ಯಾರಂಟಿ: ಸಮರ್ಥಿಸಿದ ಪರಮೇಶ್ವರ್

    ಬೆಂಗಳೂರು: ಬಿಹಾರ ಚುನಾವಣೆಯಲ್ಲಿ (Bihar Election) ಇಂಡಿ ಕೂಟ ಗೆದ್ದರೆ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಕೊಡುವ ಗ್ಯಾರಂಟಿ ಘೋಷಣೆಯನ್ನ ಗೃಹಸಚಿವ ಪರಮೇಶ್ವರ್ (Parameshwar) ಸಮರ್ಥನೆ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜನಗಳಿಗೆ ಏನು ಬೇಕಾಗುತ್ತೆ ಅನ್ನೋದನ್ನ ತಿಳಿದುಕೊಂಡು ಚುನಾವಣೆ ಸಮಯದಲ್ಲಿ ಘೋಷಣೆ ಮಾಡುತ್ತೇವೆ. ಎಲ್ಲರೂ ಮಾಡೋದು ಅದೇ ಕೆಲಸ. ನಮ್ಮ ಮೈತ್ರಿ ಪಕ್ಷದವರು ಪ್ರತಿ ಮನೆಗೆ ಉದ್ಯೋಗ ಕೊಡ್ತೀನಿ ಅಂತ ಘೋಷಣೆ ಮಾಡಿದ್ದಾರೆ. ಉದ್ಯೋಗ ಅನ್ನೋದು ಬಹಳ ಮುಖ್ಯ. ಎಲ್ಲಾ ಕಡೆ ನಿರುದ್ಯೋಗದ ಸಮಸ್ಯೆ ಬಹಳ ಕಾಡ್ತಿದೆ. ಯುವಕರಿಗೆ ಉದ್ಯೋಗ ಸಿಕ್ತಿಲ್ಲ ಅನ್ನೋದು ದೊಡ್ಡ ಪ್ರಶ್ನೆ. ಹಾಗಾಗಿ ಚುನಾವಣೆ ಪ್ರಣಾಳಿಕೆ ಮಾಡಬೇಕು ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಂತ ಹಂತವಾಗಿ ಮಾಡ್ತಾರೆ. ಒಂದೇ ದಿನ ಘೋಷಣೆ ಮಾಡಿ, ಒಂದೇ ದಿನ ಕೆಲಸ ಕೊಡೋಕೆ ಆಗುತ್ತಾ? ನಾವು ಕರ್ನಾಟಕದಲ್ಲಿ 2.5 ಲಕ್ಷ ಖಾಲಿ ಇರೋ ಹುದ್ದೆ ಭರ್ತಿ ಮಾಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ವಿ. ನಾವು ಒಂದೇ ಬಾರಿ ಹುದ್ದೆ ಭರ್ತಿ ಮಾಡ್ತೀವಿ ಅಂತ ಅಲ್ಲ. ಈಗ ಪ್ರಾರಂಭ ಮಾಡಿದ್ದೇವೆ. ಒಳ ಮೀಸಲಾತಿ ತೊಂದರೆ ಆಗಿತ್ತು. ಈಗ ಅದೆಲ್ಲ ಬಗೆಹರಿಸಿಕೊಂಡು ನೇಮಕಾತಿ ಪ್ರಾರಂಭ ಮಾಡ್ತಿದ್ದೇವೆ. ಪೊಲೀಸ್ ಇಲಾಖೆ ಸೇರಿ ಬೇರೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಎಂದಿದ್ದಾರೆ.

    ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅವರು ಕೊಡಲಿಲ್ಲ. ಅವರು ಮಾಡಿದ್ರೆ ನಾವು ಯಾಕೆ ಟೀಕೆ ಮಾಡ್ತಿದ್ವಿ. ಮೋದಿ ಚುನಾವಣೆ ಸಮಯದಲ್ಲಿ ಹೇಳಿದ್ದು ನಿಜ. ಹೇಳಿದ್ದು ಮಾಡಿದ್ರೆ ಯಾರು ಕೇಳ್ತಿದ್ರು? ಅವರು ಮಾಡಿದ್ರೆ ಹೊಗಳುತಿದ್ವಿ. ನಾವು 5 ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ವಿ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ತುಮಕೂರು: ಬಿಹಾರ ಎಲೆಕ್ಷನ್‌ವರೆಗೂ (Bihar Election) ಸುಮ್ಮನೆ ಇದ್ದು ಬಿಡಿ, ಬಿಹಾರ ಎಲೆಕ್ಷನ್ ಕಳೆದು ಹೋಗಲಿ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಮಾರ್ಮಿಕವಾಗಿ ನುಡಿದಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾಧ್ಯಮದವರು, ಮತ್ತೆ ನೀವು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆವರೆಗೂ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ. ಕೆಎನ್ ರಾಜಣ್ಣರ ಈ ಮಾತಿನ ಮರ್ಮ ಹಲವು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಅಲ್ಲದೇ ಸಿಎಂ ಸಿದ್ದರಾಮಯ್ಯರ (Siddaramaiah) ಬಗ್ಗೆ ನನಗೆ ವಿಶ್ವಾಸ ಇದೆ ಎಂದೂ ಮತ್ತೆ ಮಂತ್ರಿಗಿರಿ ಸಿಗಬಹುದು ಅನ್ನೋದನ್ನೂ ಪರೋಕ್ಷವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಕೊಡಿ ಎಂದು ನಾನು ಕೇಳಿರಲಿಲ್ಲ. 2018 ರಲ್ಲಿ ನಾನು ಸೋತಾಗ ಸಿಎಂ ಸಿದ್ದರಾಮಯ್ಯ ಹೇಳಿದ್ರು ನೀನು ಗೆದ್ದರೆ ಮಿನಿಸ್ಟರ್ ಆಗ್ತಿದ್ದೆ ಕಣಯ್ಯಾ, ನಿನ್ನ ಬದಲು ತುಕಾರಂನನ್ನು ಮಾಡಿದೆ ಎಂದು ಹೇಳಿದರು. ಈ ಬಾರಿ ಅವರೇ ಕರೆದು ಸಚಿವ ಸ್ಥಾನ ಕೊಟ್ಟರು ಎಂದರು. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ಹೈಕಮಾಂಡ್‌ಗೆ ಸತ್ಯದ ಅರಿವಾಗಿದ್ಯಾ ಎಂಬ ಪ್ರಶ್ನೆಗೂ ಉತ್ತರಿಸಿದ ರಾಜಣ್ಣ, ಎಲ್ಲವೂ ಬಿಹಾರ ಎಲೆಕ್ಷನ್ ಕಳೆದ ಮೇಲೆಯೇ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

  • ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

    ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

    ನವದೆಹಲಿ: ಕೊನೆಗೂ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ಕೇಂದ್ರ ಚುನಾವಣಾ ಆಯೋಗ (Election Commission) ದಿನಾಂಕ ಘೋಷಣೆ ಮಾಡಿದೆ. ಈ ಬಾರಿ 2 ಹಂತಗಳಲ್ಲಿ ಮತದಾನ ನಡೆಯಲಿದೆ.

    ನವೆಂಬರ್‌ 6ರ ಗುರುವಾರ ಮೊದಲ ಹಂತ, ನವೆಂಬರ್‌ 11ರ ಮಂಗಳವಾರ 2ನೇ ಹಂತದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್‌ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 10 ರಂದು ಗೆಜೆಟ್‌ ಅಧಿಸೂಚನೆ ಪ್ರಕಟವಾಗಲಿದೆ. ಅದೇ ರೀತಿ 2ನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 13ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ.

    ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ.17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್‌ 18‌ ಮತ್ತು ಅಕ್ಟೋಬರ್‌ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್‌ 20 ಹಾಗೂ ಅ.23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ನವೆಂಬರ್‌ 6ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂದು ತಿಳಿಯಲಿದೆ.

    ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್‌ ಟೈಮ್‌ ವೋಟರ್ಸ್‌ ಇದ್ದಾರೆ. ಒಟ್ಟು 90,712 ಬೂತ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್‌ಗಳಿರಲಿವೆ. ಎಲ್ಲಾ ಬೂತ್‌ಗಳಲ್ಲೂ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

    ಒಟ್ಟಾರೆ 90,712 ಬೂತ್‌ ಮಟ್ಟದ ಅಧಿಕಾರಿಗಳು, 243 ಇಆರ್‌ಓ (ಮತದಾರರ ನೋಂದಣಾಧಿಕಾರಿ), 38 ಡಿಇಒ (ಜಿಲ್ಲಾ ಚುನಾವಣಾ ಅಧಿಕಾರಿ) ಬಳಿಕ ಮುಖ್ಯ ಚುನಾವಣಾ ಆಯುಕ್ತರು ಕರ್ತವ್ಯದಲ್ಲಿ ಇರಲಿದ್ದದಾರೆ. ಮತದಾರರಿಗೆ ಯಾವುದೇ ಗೊಂದಲಗಳಿದ್ದರೂ 1950 ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

    ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ (Nitish Kumar) ನೇತೃತ್ವದ ಎನ್‌ಡಿಎ (NDA) ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್‌ ಕುಮಾರ್‌ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. 2024ರಲ್ಲಿ ಮತ್ತೆ ನಿತೀಶ್‌ ಕುಮಾರ್‌ ಮಹಾಘಟಬಂಧನ್ ಜೊತೆಗಿನ ಸಂಬಂಧ ಕಡಿದುಕೊಂಡು ಎನ್‌ಡಿಎ ಜೊತೆಗೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.

  • ಇಂದು ಸಂಜೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ

    ಇಂದು ಸಂಜೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ

    ನವದೆಹಲಿ: ಇಂದು ಸಂಜೆ 4 ಗಂಟೆಗೆ ಭಾರತೀಯ ಚುನಾವಣಾ ಆಯೋಗ (Election Commission of India) ಸುದ್ದಿಗೋಷ್ಠಿ ನಡೆಸಿ ಬಿಹಾರ ವಿಧಾನಸಭಾ ಚುನಾವಣೆಯ (Bihar Election) ದಿನಾಂಕವನ್ನು ಪ್ರಕಟಿಸಲಿದೆ.

    ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಹಿಂದೆ ಬಿಹಾರದ 243 ಸ್ಥಾನಗಳಿಗೆ ಚುನಾವಣೆಯನ್ನು ನವೆಂಬರ್ 22ರ ಮೊದಲು ಮತ್ತು ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮೊದಲು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು.

    ರಾಜಕೀಯ ಪಕ್ಷಗಳು ಅಕ್ಟೋಬರ್ ಅಂತ್ಯದಲ್ಲಿ ಆಚರಿಸಲಾಗುವ ‘ಛಠ್ ಪೂಜೆ’ ಹಬ್ಬದ ನಂತರ ತಕ್ಷಣವೇ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಇತರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಹಬ್ಬಕ್ಕಾಗಿ ಊರಿಗೆ ಮರಳುತ್ತಾರೆ.  ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯವ ಸಾಧ್ಯತೆ ಇರುವುದರಿಂದ ಈ ಅವಧಿಯಲ್ಲೇ ಚುನಾವಣೆ ನಡೆಸಬೇಕೆಂದು ಮನವಿ ಮಾಡಿವೆ. ಇದನ್ನೂ ಓದಿ:  ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ (Nitish Kumar) ನೇತೃತ್ವದ ಎನ್‌ಡಿಎ (NDA) ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆಯಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ:  ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020 ರ ವಿಧಾನಸಭಾ ಚುನಾವಣೆಗಳು ಮೂರು ಹಂತಗಳಲ್ಲಿ ನಡೆದಿದ್ದವು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್‌ ಕುಮಾರ್‌ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. ನಿತೀಶ್‌ ಕುಮಾರ್‌ 2024 ರಲ್ಲಿ ಮಹಾಘಟಬಂಧನ್ ಜೊತೆಗಿನ ಸಂಬಂಧವನ್ನು ಮುರಿದು ಎನ್‌ಡಿಎ ಜೊತೆ ಮತ್ತೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.

  • ಬಿಹಾರ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ

    ಬಿಹಾರ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ

    – ಶೀಘ್ರದಲ್ಲೇ ಕರ್ನಾಟಕದ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆಯೂ ನಿರ್ಧಾರ

    ನವದೆಹಲಿ: ಬಿಜೆಪಿ (BJP) ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಲು ಸಿದ್ಧತೆ ನಡೆಸುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆ (Bihar Election) ಘೋಷಣೆಗೂ ಮುನ್ನ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಮಂಗಳವಾರ ತಿಳಿಸಿವೆ.

    ಪಕ್ಷದ ಹೈಕಮಾಂಡ್ ಉನ್ನತ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಚಿಸಿದೆ. ಸೆ.9 ರಂದು ಉಪ ರಾಷ್ಟ್ರಪತಿ ಚುನಾವಣೆಯ ನಂತರ ಸಮಾಲೋಚನಾ ಪ್ರಕ್ರಿಯೆಯು ಪುನರಾರಂಭಗೊಳ್ಳಲಿದ್ದು, ನಂತರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್: ಜೆಡಿಎಸ್ ಲೇವಡಿ

    ರಾಷ್ಟ್ರೀಯ ಅಧ್ಯಕ್ಷರನ್ನು ಅಂತಿಮಗೊಳಿಸುವ ಮೊದಲು, ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯಗಳಲ್ಲಿ ಹೊಸ ರಾಜ್ಯ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ

    ಜಾತಿ, ಪ್ರಾದೇಶಿಕ ಅಥವಾ ಸಾಮಾಜಿಕ ಸಮೀಕರಣಗಳಿಂದ ಆಯ್ಕೆಯಾಗುವುದನ್ನು ಪಕ್ಷದ ನಾಯಕತ್ವ ಬಯಸುವುದಿಲ್ಲ. ಬದಲಾಗಿ, ಹೊಸ ಅಧ್ಯಕ್ಷರು ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುವ ಮತ್ತು ಸಾಮರ್ಥ್ಯವಿರುವ ವ್ಯಕ್ತಿಯಾಗಿರಬೇಕು. ಈ ಹೆಸರು ಅಚ್ಚರಿ ಮೂಡಿಸುವ ಸಾಧ್ಯತೆಯಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅನುಭವ ಹೊಂದಿರುವ ಹಿರಿಯ ನಾಯಕನಿಗೆ ಜವಾಬ್ದಾರಿ ಹೋಗಲಿದೆ ಎಂದು ಮೂಲಗಳು ತಿಳಿಸಿವೆ.

  • ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

    ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

    – ಸುಪ್ರೀಂ ಆದೇಶದ ಅನ್ವಯ ಮತದಾರರ ಪಟ್ಟಿಯಯನ್ನು ಬಹಿರಂಗಪಡಿಸುವಂತಿಲ್ಲ
    – ಸುಳ್ಳು ಆರೋಪಗಳಿಗೆ ನಾವು ಹೆದರಲ್ಲ

    ನವದೆಹಲಿ: ಫಲಿತಾಂಶ ಪ್ರಕಟವಾದ ಬಳಿಕ ಬಳಿಕ ಹೈಕೋರ್ಟ್‌ನಲ್ಲಿ ದೂರು ದಾಖಲಿಸದೇ ಈಗ ಮತಗಳವಿನಂತಹ ಗಂಭೀರ ಆರೋಪದ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission) ತಿರುಗೇಟು ನೀಡಿದೆ.

    ರಾಹುಲ್‌ ಗಾಂಧಿ ಅವರ  ಮತಗಳವು ಆರೋಪಕ್ಕೆ ಇಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ಸುದ್ದಿಗೋಷ್ಠಿ ನಡೆಸಿ ಆಯೋಗದ ವಿರುದ್ಧ ಬಂದ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಆಯೋಗ ಹೇಳಿದ್ದೇನು?
    ಕೆಲವರು ಮತಗಳವು ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಕೇಳಿದರೆ ಉತ್ತರ ಸಿಗಲಿಲ್ಲ. ಇಂತಹ ಸುಳ್ಳು ಆರೋಪಕ್ಕೆ ಆಯೋಗ ಮತ್ತು ಮತದಾರರು ಹೆದರುವುದಿಲ್ಲ. ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ಮತದಾರರನ್ನು ಗುರಿಯಾಗಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಆರೋಪಗಳಿಗೆ ಆಯೋಗ ಹೆದರದೇ ಬಡವರು, ಮಹಿಳೆಯರು, ಯುವಜನತೆ ಎಲ್ಲಾ ಮತದಾರರ ಜೊತೆಗೆ ಯಾವುದೇ ಭೇದ ಭಾವ ಇಲ್ಲದೇ ನಿಲ್ಲುತ್ತದೆ.

     

    ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಸಿದ್ಧವಾಗಿರುವ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಕೆಲವೊಮ್ಮೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ. ಇದಕ್ಕೆ ಮತದಾರರ, ರಾಜಕೀಯ ಪಕ್ಷಗಳು, ಬೂತ್‌ ಲೆವೆಲ್‌ ಆಫೀಸರ್‌ (ಬಿಎಲ್‌ಓ) ಪಾಲುದಾರಿಕೆ ಬಹಳ ಮುಖ್ಯ. ಇದರಲ್ಲಿ ರಾಜ್ಯ ಸರ್ಕಾರದ ಅಧಿಕಾರಿಯೂ ಇರುತ್ತಾರೆ. ಅವರ ಮೂಲಕ ಎಲ್ಲ ಪ್ರಕ್ರಿಯೆ ನಡೆಯುತ್ತದೆ.

    ಡ್ರಾಫ್ಟ್ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೇಲೂ ಸಮಸ್ಯೆ ಬಂದರೆ ಜಿಲ್ಲಾಧಿಕಾರಿಗೆ ಮನವಿ ಮಾಡಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೂ ಮತದಾರರ ಪಟ್ಟಿ ನೀಡಲಾಗುತ್ತದೆ. ಬೂತ್‌ ಏಜೆಂಟ್ ಬಳಿಯೂ ಇದರ ಮಾಹಿತಿ ಇರುತ್ತದೆ. ಫಲಿತಾಂಶದ ಬಳಿಕವೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಫಲಿತಾಂಶ ಪ್ರಶ್ನಿಸಬಹುದು. 45 ದಿನಗಳ ಬಳಿಕ ಯಾವುದೇ ದೂರು ದಾಖಲಿಸದೇ ಆರೋಪ ಮಾಡುವುದು ಕಾನೂನು ಬಾಹಿರ. 45 ದಿನಗಳಲ್ಲಿ ಬಾರದ ಅನುಮಾನ ಈಗ ಬರುವುದು ಅದರ ಉದ್ದೇಶ ಏನು ಜನರಿಗೆ ಗೊತ್ತಿದೆ.

    ಮತದಾರರ ಪರಿಷ್ಕರಣೆ ಪ್ರತಿಬಾರಿ ನಡೆದರೆ ವಿಶೇಷ ಪರಿಷ್ಕರಣೆ ಬಹಳ ಕಡಿಮೆ ಆಗುತ್ತದೆ. ಕಳೆದ ಇಪ್ಪತ್ತು ವರ್ಷದಿಂದ ಬಿಹಾರದಲ್ಲಿ ವಿಶೇಷ ಪರಿಷ್ಕರಣೆ ನಡೆಯದ ಕಾರಣ ಮಾಡುವಂತೆ ಬಹಳ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಇಡೀ ಮತದಾರರ ಪರಿಷ್ಕರಣೆ ಹೊಸದಾಗಿ ಮಾಡಲಾಗುತ್ತದೆ. ಕೆಲವು ಮತದಾರರು ಎರಡು ಕಡೆಗೆ ಮತದಾನದ ಹಕ್ಕು ಹೊಂದಿರುತ್ತಾರೆ. ಕೆಲವರು ಹೆಸರು ಬದಲಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಮತದಾರರ ಪಟ್ಟಿ ಪರಿಶುದ್ಧ ಮಾಡಲು ವಿಶೇಷ ಪರಿಷ್ಕರಣೆ ಮಾಡಬೇಕು.

     

    ಆರೋಪ ಮಾಡುವ ವ್ಯಕ್ತಿ ಆ ಕ್ಷೇತ್ರದ ಮತದಾರರ ಆಗದಿದ್ದರೆ ಆರೋಪ ಮಾಡಿದಾಗ, ಈ ಬಗ್ಗೆ ಒಂದು ಪ್ರಮಾಣ ಪತ್ರ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳ ಮುಂದೆ ಪ್ರಮಾಣಿಸಬೇಕು. ಇದು ಚುನಾವಣಾ ಆಯೋಗದ ನಿಯಮಗಳಲ್ಲಿ ಉಲ್ಲೇಖ ಇದೆ. ಇದು ಹೊಸ ಕಾನೂನು ಅಲ್ಲ, ಬಹಳಷ್ಟು ಹಳೆಯ ಕಾನೂನು ಆಗಿದ್ದು

    ಮಷಿನ್ ರೀಡೆಬೆಲ್ ಡೇಟಾ ನೀಡುವುದರಿಂದ ಮತದಾರರ ಗೌಪ್ಯತೆ ಬಹಿರಂಗವಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆ ಅದನ್ನು ನೀಡಲು ಸಾಧ್ಯವಿಲ್ಲ. ವಿಶೇಷ ಪರಿಷ್ಕರಣೆ ಬಿಹಾರದಲ್ಲಿ (Bihar) ಮೊದಲ ಬಾರಿಗೆ ನಡೆಯುತ್ತಿಲ್ಲ. ಈ ಹಿಂದೆ 2003 ರಲ್ಲೇ ಪರಿಷ್ಕರಣೆ ಮಾಡಲಾಗಿತ್ತು. ಈಗ ಈ ಪರಿಷ್ಕರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಸುಮ್ಮನೇ ಆರೋಪ ಮಾಡಲಾಗುತ್ತಿದೆ.

    ಕೆಲವರು ಭ್ರಮೆ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಹೆಜ್ಜೆಗೆ ಹೆಜ್ಜೆ ಹಾಕಿ ಎಲ್ಲರೂ ಜೊತೆಯಾಗಿ ಪ್ರಕ್ರಿಯೆ ನಡೆಸುತ್ತಿರುವುದು ಸತ್ಯ. ಬಿಹಾರದ ಏಳು ಕೋಟಿಗೂ ಅಧಿಕ ಮತದಾರರು ಆಯೋಗದ ಜೊತೆಗೆ ನಿಂತಿದ್ದಾರೆ. ಇಂತಹ ಸಮಯದಲ್ಲಿ ಆಯೋಗದ ವಿರುದ್ಧ ಪ್ರಶ್ನೆ ಎತ್ತುವ ಪ್ರಶ್ನೆ ಬರುವುದಿಲ್ಲ.

    ಫಲಿತಾಂಶದ ಬಳಿಕ ಹೈಕೋರ್ಟ್‌ನಲ್ಲಿ ದೂರು ದಾಖಲಿಸದೇ ಮತಗಳ್ಳತನದಂತಹ ಗಂಭೀರ ಆರೋಪ ಮಾಡುವ ಮೂಲಕ ಜನರ ದಾರಿಯನ್ನು ತಪ್ಪಿಸಲಾಗುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅಪಮಾನ. 2019 ರಲ್ಲಿ ಮತದಾರರ ಮಾಹಿತಿ ಗೌಪ್ಯವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

    ಮತದಾರರ ಅನುಮತಿ ಇಲ್ಲದೇ ಅವರ ಮಾಹಿತಿಯನ್ನು ಮಾಧ್ಯಮದ ಮುಂದೆ ಇಡಲಾಯಿತು. ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೆ ಅವರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಲೋಕಸಭೆಯಲ್ಲಿ ಒಂದು ಕೋಟಿಗೂ ಸಿಬ್ಬಂದಿ, ಹತ್ತು ಲಕ್ಷಕ್ಕೂ ಬಿಎಲ್‌ಓಗಳು, 20 ಲಕ್ಷಕ್ಕೂ ಅಧಿಕ ಬೂತ್ ಏಜೆಂಟ್‌ಗಳು ಕೆಲಸ ಮಾಡಿದ್ದಾರೆ. ಇಷ್ಟು ಪಾರದರ್ಶಕ ವ್ಯವಸ್ಥೆಯಲ್ಲಿ ಮತಗಳವು ಸಾಧ್ಯವೇ?