Tag: biggboss kannada

  • ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬಿಗ್‍ಬಾಸ್ ಮನೆಯಲ್ಲಿ ಈ ವಾರ ಅಡುಗೆ ಮನೆಯ ಜವಾಬ್ದಾರಿಯನ್ನು ಪುರುಷ ಸದಸ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಚಪಾತಿ ವಿಚಾರವಾಗಿ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ಕಿಚನ್‍ನಲ್ಲಿ ಅಡುಗೆ ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ಪ್ರಶಾಂತ್ ಚಪಾತಿ ಹಿಟ್ಟನ್ನು ಕಲಿಸುತ್ತಿರುವುದನ್ನು ಅರವಿಂದ್ ನೋಡಿ ನಾನು ಆಗಲೇ ಕಲಸಬೇಡಿ ಎಂದು ಹೇಳಿದೆ. ನೀವು ನನ್ನ ಮಾತಾಗಲಿ, ಯಾರ ಮಾತು ಕೇಳುವುದಿಲ್ಲ ಎನ್ನುತ್ತಾರೆ. ಆಗ ಪ್ರಶಾಂತ್ ನಮ್ಮ ಮನೆಯಲ್ಲಿ ಒವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ, ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು ಆದರೆ, ಒತ್ತುವುದು ನಾವು ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ. ಸ್ವಲ್ಪವಾದರೂ ಅಪರೂಪಕ್ಕೆ ಕೇಳಿ ಎಂದು ಹೇಳುತ್ತಾರೆ.

    ನಂತರ ಪ್ರಶಾಂತ್ ಅದು ಚಪಾತಿ ಮಾಡುವ ವಿಧಾನ, ಹೊಸದಾಗಿ ನಾನೇನು ಮಾಡುತ್ತಿಲ್ಲ. ವೈಷ್ಣವಿಯವರು ಎಸಿ ಇದೆ ಕಲ್ಲಿನ ರೀತಿಯಾಗುತ್ತದೆ ಎಂದು ಹೇಳಿದಕ್ಕೆ ಒಳಗೆ ಇಟ್ಟಿದೆ. ಇಲ್ಲ ಬಿಸಾಕಿ ಬೇರೆ ಮಾಡೋಣಾ ಬಿಡಿ. ಏನು ಮಾಡುವುದಕ್ಕೆ ಆಗುತ್ತದೆ ಎನ್ನುತ್ತಾರೆ. ಇದನ್ನು ಕೇಳಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಶಾಕ್ ಆಗುತ್ತಾರೆ. ಬಳಿಕ ಬೀಸಾಕುವುದಾ ಸರ್.. ಏನು ಹೇಳುತ್ತಿದ್ದೀರಾ? ಹೇಳಿದರೆ ಕೋಪ ಮಾಡಿಕೊಳ್ಳುತ್ತೀರಾ ಒಂದು ಮಾತು ಕೇಳುವುದಿಲ್ಲ. ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ ಎಂದು ಹೇಳುತ್ತಾರೆ.

    ಆಯ್ತು ರಾಜಾ… ಒಂದಿಪ್ಪತ್ತು ಎರಡು ಬಾರಿ ಹೇಳಿದ್ಯಾ, ಕಲಸಿ ಇಟ್ಟರೆ ಮತ್ತಗೆ ಆಗುತ್ತದೆ ಎಂದು ಪದ್ಧತಿ ಹಾಗಾಗಿ ಕಲಿಸಿ ಇಟ್ಟೆ. ಮನೆಯಲ್ಲಿ ಚಪಾತಿ ಮಾಡುವುದು ನಾನೇ 40 ವರ್ಷದಲ್ಲಿ ಒಂದಿಪ್ಪತ್ತು ವರ್ಷ ಚಪಾತಿ ಮಾಡಿದ್ದೇನೆ. ಆ ಇಪ್ಪತ್ತು ವರ್ಷದಲ್ಲಿ 4 ಗಂಟೆ ಮುಂಚೆಯೇ ಚಪಾತಿ ಹಿಟ್ಟನ್ನು ಕಲಿಸಿ ಇಡುತ್ತಿದ್ದೆ. ಹಾಗೆ ಇಲ್ಲಿಯೂ ಮಾಡಲು ಹೋದೆ ಆದ್ರೆ ಆಗಲಿಲ್ಲ. ಬೇಡ ಅಂದರೆ ಬೀಸಾಕೋಣ, ಇಲ್ಲ ಬೇರೆ ಏನಾದರೂ ಮಾಡೋಣ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಇಲ್ಲ ಬಿಸಾಕಲು ಆಗುವುದಿಲ್ಲ ಎಂದರೆ, ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಲಿಮಿಟೆಡ್ ದಿನಸಿ ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದೇ ಆಗಿ ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ. ಇದಕ್ಕೆ ಪ್ರಶಾಂತ್‍ರವರು ಗೊತ್ತಿಲ್ಲದೇ ಅಲ್ಲ ಗೊತ್ತಿದೆ ಮಾಡಿದ್ದು, ಆದರೆ ಇಲ್ಲಿ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಮರು ವಾದ ಮಾಡುತ್ತಾರೆ.

  • ನಿಮ್ಮ ವಿಶೇಷ ಕಾಳಜಿ, ಪ್ರೀತಿಗೆ ಧನ್ಯವಾದ: ಸುದೀಪ್

    ನಿಮ್ಮ ವಿಶೇಷ ಕಾಳಜಿ, ಪ್ರೀತಿಗೆ ಧನ್ಯವಾದ: ಸುದೀಪ್

    ಬೆಂಗಳೂರು: ಕೆಲವು ದಿನಗಳಿಂದ ಅನಾರೋೀಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಸುಧಾರಿಸಿಕೊಂಡಿದ್ದಾರೆ. ಸದ್ಯ ಈ ವೇಳೆ ವಿಶೇಷ ಕಾಳಜಿ ತೋರಿಸಿದ ಚಂದನವನದ ನಟರಿಗೆ ಟ್ವೀಟ್ ಮಾಡುವ ಮೂಲಕ ಕಿಚ್ಚ ಧನ್ಯವಾದ ತಿಳಿಸಿದ್ದಾರೆ.

    ನಟ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಹೊರಗಡೆ ಕಾಣಿಸಿಕೊಂಡಿಲ್ಲ. ಕಿಚ್ಚನ ಅನಾರೋಗ್ಯದ ಸಮಯದಲ್ಲಿ ವಿಶೇಷ ಕಾಳಜಿ ತೋರಿಸುವ ಮೂಲಕ ವೈಯಕ್ತಿಕವಾಗಿ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸಿಂಪಲ್ ಸ್ಟಾಋ ನಟ ರಿಷಬ್ ಶೆಟ್ಟಿ ಹೆಸರನ್ನು ಸೂಚಿಸಿ ಧನ್ಯವಾದ ಹೇಳಿದ್ದಾರೆ.

    ಉಪೆಂದ್ರ, ಶಿವಣ್ಣ, ರವಿಚಂದ್ರನ್ ಮತ್ತು ರಿಷಬ್ ಶೆಟ್ಟಿ ಅವರು ಫೋನ್ ಮೂಲಕ ಕರೆ ಮಾಡಿ ಆರೋಗ್ಯ ವಿಚಾರಿಸಿ, ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿಸಿದಕ್ಕೆ ಧನ್ಯವಾದಗಳು. ಪ್ರೀತಿ, ಕಾಳಜಿ ಜೊತೆಗೆ ಉತ್ಸಾಹ ತುಂಬಿದ ಕೆಲವು ಸ್ನೇಹಿತರಿಗೆ ಮತ್ತು ಚಿತ್ರರಂಗದ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಈ ಮುನ್ನ ವಾರಾಂತ್ಯದಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋನ ವಾರದ ಕಥೆಯಲ್ಲಿ ಕಿಚ್ಚ ಪಾಲ್ಗೊಳ್ಳುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದರು. ಆದರೆ ಕೋವಿಡ್ ನಿಯಮದ ಪ್ರಕಾರ ಚಿತ್ರೀಕರಣ ಮಾಡಲು ಸಾಧ್ಯವಾಗದ ಕಾರಣ ಈ ವೀಕೆಂಡ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

  • ಶಮಂತ್ ಅನ್ವೇಷಣೆಗೆ ಶುಭಾ ಪೂಂಜಾ ರಿವ್ಯೂವ್

    ಶಮಂತ್ ಅನ್ವೇಷಣೆಗೆ ಶುಭಾ ಪೂಂಜಾ ರಿವ್ಯೂವ್

    ಬಿಗ್‍ಬಾಸ್ ತನ್ನ ಮನೆಯ ಸದಸ್ಯರಿಗೆ ಎಲ್ಲ ರೀತಿಯ ಅನುಭವಗಳನ್ನು ನೀಡುತ್ತದೆ. ಇದೀಗ ಮನೆಯ ಎಲ್ಲ ವಸ್ತುಗಳನ್ನ ಬಿಗ್‍ಬಾಸ್ ತೆಗೆದುಕೊಂಡಿದೆ. ಹೋದ ವಸ್ತುಗಳು ಮರಳಿ ಪಡೆಯಬೇಕಾದ್ರೆ ಟಾಸ್ಕ್ ನಲ್ಲಿ ಸದಸ್ಯರು ಗೆಲ್ಲಲಬೇಕು. ನಿನ್ನೆ ಇಡೀ ರಾತ್ರಿ ಗಾರ್ಡನ್ ಏರಿಯಾದಲ್ಲಿ ಹಾಸಿಗೆ, ದಿಂಬು ಇಲ್ಲದೇ ನಿದ್ದೆ ಮಾಡಿದ್ದರು. ಬೆಳಗ್ಗೆ ಹಲ್ಲುಜ್ಜಲು ಬ್ರಷ್ ಗೆ ಪರ್ಯಾಯವಾಗಿ ಹೊಸ ವಸ್ತುವನ್ನ ಶಮಂತ್ ಅನ್ವೇಷಣೆ ಮಾಡಿದ್ದಾರೆ. ಹೊಸ ಅನ್ವಷಣೆಯ ಬ್ರಷ್ ಬಳಸಿರುವ ಶೂಭಾ ಪೂಂಜಾ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ.

    ಮನೆಯಲ್ಲಿ ಹಲ್ಲುಜ್ಜಲು ಬ್ರಷ್ ಇಲ್ಲದ ಕಾರಣ ಬಹುತೇಕರು ಬೆರಳಿಗೆ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜಿದರು. ಆದ್ರೆ ಶಮಂತ್ ಪಾತ್ರೆ ತೊಳೆಯುವ ತಂತಿ ಬಾರ್ ನಿಂದ ಬ್ರಷ್ ತಯಾರಿಸಿದರು. ತಂತಿಯನ್ನ ಬೆರಳಿಗೆ ಸುತ್ತಿಕೊಂಡು ಅದಕ್ಕೆ ಪೇಸ್ಟ್ ಹಾಕಿ ಹಲ್ಲು ಉಜ್ಜಿದರು. ಈ ವೇಳೆ ಶಮಂತ್ ಆ ರೀತಿ ಹಲ್ಲು ಉಜ್ಜುಬೇಡ ಅಂತ ಕೆಲವರು ಸಲಹೆ ನೀಡಿದರು.

    ಇತ್ತ ಬಿಗ್‍ಬಾಸ್ ಮೇಲೆ ಮುನಿಸಿಗೊಂಡಿದ್ದ ಶುಭಾ, ಪದೇ ಪದೇ ವಸ್ತುಗಳನ್ನ ಹಿಂದಿರುಗಿಸುವಂತೆ ಕೇಳಿ ಕೊಳ್ಳುತ್ತಿದ್ದರು. ಈ ವೇಳೆ ಶಮಂತ್ ಹೇಳಿದಂತೆ ಆತನ ಹೊಸ ಅನ್ವೇಷಣೆಯ ಬ್ರಷ್ ಬಳಸಿ ಹಲ್ಲು ಉಜ್ಜಿದರು. ಹಲ್ಲು ಉಜ್ಜಿದ ಬಳಿಕ ಖುಷಿಯಾಗಿ ಕ್ಯಾಮೆರಾ ಬಂದ ಶುಭಾ, ನನ್ನ ಹಲ್ಲಿನ ಹೊಳಪಿಗೆ ಶಮಂತ್ ಟೂಥ್ ಬ್ರಷ್ ಕಾರಣ ಅಂತ ಒಳ್ಳೆಯ ರಿವ್ಯೂ ನೀಡಿದ್ರು.

  • ನಿಧಿಗೆ ಸಿಕ್ತು ಅರವಿಂದ್ ಸಿಹಿ ಮುತ್ತು

    ನಿಧಿಗೆ ಸಿಕ್ತು ಅರವಿಂದ್ ಸಿಹಿ ಮುತ್ತು

    ವಾರ ಒಂಟಿ ಮನೆ ಹಾಸ್ಟೆಲ್ ಆಗಿ ಬದಲಾಗಿದೆ. ಹುಡುಗಿಯರ ಹಾಸ್ಟೆಲ್‍ಗೆ ನಿಧಿ ಸುಬ್ಬಯ್ಯ ಮತ್ತು ಹುಡುಗರ ಹಾಸ್ಟೆಲ್‍ಗೆ ಪ್ರಶಾಂತ್ ಸಂಬರಗಿ ವಾರ್ಡನ್ ಆಗಿದ್ದಾರೆ. ಹುಡುಗರು ಪಕ್ಕದ ಹುಡುಗಿಯರನ್ನು ನೋಡಲು ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿದ್ರು. ಆದ್ರೆ ಲೇಡಿ ವಾರ್ಡನ್ ಯಾರನ್ನೂ ಒಳ ಬಿಡಲ್ಲ ಅಂತ ಹೇಳಿದ್ರು. ಈ ವೇಳೆ ಲೇಡಿ ವಾರ್ಡನ್‍ಗೆ ಪೂಸಿ ಹೊಡೆದ ಅರವಿಂದ್ ಕೈ ಹಿಡಿದು ಮುತ್ತು ಕೊಟ್ಟರು.

    ಬಿಗ್‍ಬಾಸ್ ಮನೆ ಎರಡು ಹಾಸ್ಟೆಲ್ ಗಳಾಗಿ ಡಿವೈಡ್ ಆಗಿದೆ. ಹುಡುಗಿಯರು ನಿಧಿ ಸುಬ್ಬಯ್ಯ ಬಳಿ ಬಂದು ಹಾಸ್ಟೆಲ್‍ಗೆ ಪ್ರವೇಶ ಪಡೆದರು. ಅತ್ತ ಪಕ್ಕದಲ್ಲಿಯೇ ಹುಡುಗರ ಹಾಸ್ಟೆಲಿನ ಅಡ್ಮಿಶನ್ ನಡೆಯುತ್ತಿತ್ತು. ನಿಧಿ ಬಳಿ ಬಂದ ಅರವಿಂದ್, ಚಕ್ರವರ್ತಿ, ರಾಜೀವ್, ಶಮಂತ್ ಹಾಸ್ಟೆಲ್ ಒಳಗೆ ಬಿಡಿ ಅಂತ ಕೇಳ್ಕೊಂಡ್ರು. ಆದ್ರೆ ನಿಧಿ ನೋ ಬಿಡಲ್ಲ ಅಂದ್ರು.

    ಅಲ್ಲಿಗೆ ಬಂದ ರಘು, ಏ ನೋಡ್ರೋ ವಾರ್ಡನ್ ಎಷ್ಟು ಸಖತ್ ಆಗಿದ್ದಾರೆ ಅಲ್ವಾ ಅಂತ ಹೇಳಿದ್ರು. ಚಕ್ರವರ್ತಿ ರಿಜಿಸ್ಟರ್ ಬುಕ್ ತೆಗೆದು ನಿನ್ನ ಹುಡುಗಿ ನಂಬರ್ ಬರೋಕೆ ಅಂದ್ರು. ಇಷ್ಟಕ್ಕೆ ಸುಮ್ಮನಾಗದ ಹುಡುಗರ ಗ್ಯಾಂಗ್, ಸಖತ್ ಆಗವಳೆ, ಸುಮ್ನೆ ನಗ್ತಾಳೆ ಅಂತ ಹಾಡು ಹೇಳಿ ಇಂಪ್ರೆಸ್ ಮಾಡೋಕೆ ಬಂದ್ರು. ಆದ್ರೆ ವಾರ್ಡನ್ ನಿಧಿ ಮಾತ್ರ ನಂಬರ್ ಕೊಡಲ್ಲ. ಹಾಸ್ಟೆಲ್ ಒಳಗೂ ಸಹ ಬಿಡಲ್ಲ ಅಂತ ಅಲ್ಲಿಂದ ಎದ್ದು ಹೋದ್ರು.

    ಹಾಸ್ಟೆಲ್ ಆಟದಲ್ಲಿ ಪುರುಷ ಸ್ಪರ್ಧಿಗಳು ಪಕ್ಕಾ ತರಲೆಗಳಾಗಿದ್ದಾರೆ. ಈ ಹಾಸ್ಟೆಲ್ ಟಾಸ್ಕ್ ನಲ್ಲಿ ಬಿಗ್‍ಬಾಸ್ ಹೇಳಿದಂತೆ ಅರವಿಂದ್-ದಿವ್ಯಾ ಯು, ಮಂಜು-ದಿವ್ಯಾ ಸುರೇಶ್, ರಘು-ವೈಷ್ಣವಿ ಲವ್ ಬಡ್ರ್ಸ್ ಗಳಾಗಿದ್ದಾರೆ. ರೀಲ್ ಆಟ ಆಡುತ್ತಾ ಈ ಜೋಡಿಗಳು ರಿಯಲ್ ಆಗಿ ಒಬ್ಬರಿಗೊಬ್ಬರು ಹತ್ರ ಆಗ್ತಿರೋದು ಮಾತ್ರ ಸತ್ಯ.

  • ದಯಮಾಡಿ ವದಂತಿಗಳನ್ನು ಹಬ್ಬಿಸಬೇಡಿ: ಕೈಮುಗಿದು ಬೇಡಿಕೊಂಡ ಪ್ರಥಮ್

    ದಯಮಾಡಿ ವದಂತಿಗಳನ್ನು ಹಬ್ಬಿಸಬೇಡಿ: ಕೈಮುಗಿದು ಬೇಡಿಕೊಂಡ ಪ್ರಥಮ್

    – ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪ್ರಥಮ್ ಮೊದಲ ಪ್ರತಿಕ್ರಿಯೆ

    – ನಟಿಯೊಂದಿಗೆ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಪ್ರಥಮ್

    ಬೆಂಗಳೂರು: ಸ್ನೇಹಿತನೊಂದಿಗೆ ಜಗಳವಾಡಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಡಿಸ್ಚಾರ್ಜ್ ಬಳಿಕ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಥಮ್, ಕೆಲವೊಂದು ರೂಮರ್ಸ್‍ನಿಂದ ಡಿಸ್ಟರ್ಬ್ ಆಗಿದ್ದೆ. ಇನ್ಮುಂದೆ ಯಾವತ್ತೂ ಈ ರೀತಿ ಮಾಡಲ್ಲ. ಸ್ವಲ್ಪ ಆತುರದ ನಿರ್ಧಾರ ತೆಗೆದುಕೊಂಡಿದ್ದೆ. ನನ್ನ ಬಗ್ಗೆ ಬಂದಿರೋ ವಿಷಯಗಳ ಬಗ್ಗೆ ಪರಿಶೀಲಿಸಿ. ಆದಷ್ಟು ಸತ್ಯಾಸತ್ಯತೆ ಪರಿಶೀಲಿಸಿ ವರದಿ ಪ್ರಸಾರ ಮಾಡಿ. ಮೀಡಿಯಾದವರು ಬೆಂಬಲಿಸಿ ಬೆಳೆಸಿದ್ದೀರ. ಇನ್ಮುಂದೆಯೂ ಇದೇ ರೀತಿ ಇರಲಿ ಅಂತಾ ಹೇಳಿದ್ರು.

    ಕಿಮ್ಸ್ ಆಸ್ಪತ್ರೆಯ ವೈದ್ಯರು ನನ್ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ನಾನು ಯಾರನ್ನೂ ನಂಬಲ್ಲ. ಕೆಲವೊಂದು ಸುದ್ದಿಗಳು ನನಗೆ ನೋವು ತರಿಸಿತು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದಕೊಂಡೆ ಅಂತಾ ಹೇಳಿದ್ರು.

    ಮಾಧ್ಯಮಕ್ಕೆ ಧನ್ಯವಾದ: ಒಬ್ಬ ಸಾಮಾನ್ಯ ಮನುಷ್ಯನನ್ನು ಬಿಗ್ ಬಾಸ್ ಮೂಲಕ ಎತ್ತರಕ್ಕೆ ತಂದ ಮಾಧ್ಯಮಗಳಿಗೆ ನನ್ನ ಅಭಿನಂದನೆ. ಬಿಗ್ ಬಾಸ್‍ನಲ್ಲಿ ಗೆದ್ದ ಹಣದಲ್ಲಿ ಯಾರಿಗೆಲ್ಲಾ ನೀಡುತ್ತೇನೆ ಅಂತಾ ಮಾತು ಕೊಟ್ಟಿದ್ದೇನೋ ಆ ಮಾತಿಗೆ ಬದ್ಧನಾಗಿರುತ್ತೇನೆ. ಬಿಗ್ ಬಾಸ್‍ನಿಂದ ಏಪ್ರಿಲ್ 3ಕ್ಕೆ ಹಣ ನನ್ನ ಕೈ ಸೇರಿದೆ. ಈ ಮಧ್ಯೆಯೇ ಜನ ವದಂತಿ ಹಬ್ಬಿಸಿರೋದು ಬಹಳ ದುಃಖ ತಂದಿದೆ. ವಿಶ್ರಾಂತಿಗೆ ಅಂತಾ ಹೋದ್ರೂ ನಾನು ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ. ಇಂದೇ ಹುಟ್ಟೂರಿನ ತವಸಾರೆ ಬೆಟ್ಟಕ್ಕೆ ಲೈಟ್ ಹಾಕಿಸ್ತೀನಿ. ಒಂದು ವಾರದ ನಂತರ ಶೂಟಿಂಗ್‍ಗೆ ಮರಳ್ತೀನಿ ಅಂತಾ ಹೇಳಿದ್ರು.

    ಸಾಲ ಮಾಡಿಲ್ಲ: ಯಾರೋ ಪ್ರಥಮ್ 2 ಕೋಟಿ ರೂ. ಸಾಲ ಮಾಡಿದ್ದಾನೆ ಅಂತಾ ಹೇಳಿರೋದು ನನ್ನ ಕಿವಿಗೆ ಬಿದ್ದಿತ್ತು. ದೇವರಾಣೆ ಹೇಳ್ತೀನಿ ನಾನು ಒಂದೇ ಒಂದು ರೂ. ಸಾಲ ಮಾಡಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿಗೆ ಕಿವಿಗೊಟ್ಟು ಪರಿಶೀಲಿಸದೆ ನನ್ನ ಬಗ್ಗೆ ಹಿಂದೆಯಿಂದ ಮಾತನಾಡಬೇಡಿ. ಬೇಕಿದ್ರೆ ಅದನ್ನು ಸ್ಪಷ್ಟಪಡಿಸಲು ನನ್ನ ಬಳಿಯೇ ಕೇಳಿ. ಉತ್ತರ ನೀಡುತ್ತೇನೆ. ಆದ್ರೆ ವದಂತಿಗಳನ್ನು ಮಾತ್ರ ಹಬ್ಬಿಸಬೇಡಿ ಅಂತಾ ಪ್ರಥಮ್ ಬೇಡಿಕೊಂಡ್ರು.

    ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕನ್ನಡದ ಜನಪ್ರಿಯ ನಟಿಯನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ಆ ನಟಿ, “ಪ್ರಥಮ್ ಇದು ನನ್ನ ಅಮ್ಮ. ನಿಮ್ಮ ದೊಡ್ಡ ಅಭಿಮಾನಿ” ಅಂತಾ ಹೇಳಿದ್ರು. ಆವಾಗ ನಾನು ಹೌದಾ.. ಹಾಯ್ ಮಮ್ಮಿ ಹೌ ಆರ್ ಯೂ ಅಂದೆ. ಆಗ ಆ ನಟಿ, ಪ್ರಥಮ್… ಅದು ನನ್ನ ಅಮ್ಮ ಅಂದ್ರು. ಅದಕ್ಕೆ ನಾನು ಹಾಯ್ ಅತ್ತೆ ಅಂತಾ ತಬ್ಬಿಕೊಂಡೆ. ಇದು ಕೇವಲ ತಮಾಷೆಗಾಗಿ ಮಾಡಿದೆ. ಆದ್ರೆ ಜನ ಇದನ್ನ ತಪ್ಪು ತಿಳಿದುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹುಡುಗಿಯರ ಹುಚ್ಚು ಇಲ್ಲ. ಕ್ರಿಕೆಟ್ ಬೆಟ್ಟಿಂಗ್ ಹುಚ್ಚು ಇಲ್ಲ. ದಯಮಾಡಿ ಈ ಥರ ಮಾಡ್ಬೇಡಿ. ಬಿಗ್ ಬಾಸ್ ಗೆದ್ದ ತಕ್ಷಣ ನಾನು ಬದಲಾಗಿಲ್ಲ. ನಾನಿರುವುದೇ ಹೀಗೆ. ಮೂರು ಸಿನಿಮಾ ಒಪ್ಕೊಂಡಿದ್ದೀನಿ ಅಂದ್ರು.

    https://www.youtube.com/watch?v=fRdynS3jT1E&spfreload=10