Tag: Biggboss Grand Finale

  • ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    – ಮಂಜು ಕುರಿತು ಹಾಡು ಬರೆದಿದ್ದ ಚಕ್ರವರ್ತಿ
    – 16 ಲಕ್ಷ ಮಂದಿಯಿಂದ ಪದ್ಯ ಶೇರ್

    ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಕೊನೆಯ ಟಾಪ್ 2 ಕಂಟೆಸ್ಟೆಂಟ್‍ನನ್ನು ವೇದಿಕೆ ಮೇಲೆ ಸುದಿಪ್ ಕರೆದುಕೊಂಡು ಬರುತ್ತಾರೆ. ನಂತರ ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಇತರ ಸ್ಪರ್ಧಿಗಳಿಗೆ ಪ್ರಶ್ನಿಸಿದಾಗ ಬಹುತೇಕ ಮಂದಿ ಮಂಜು ಹೆಸರನ್ನು ಸೂಚಿಸಿದ್ದರು. ಆದರೆ ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಬಹಳ ಭಾವುಕರಾಗಿ ಉತ್ತರಿಸಿದ್ದಾರೆ.

    7 ದೇಶಗಳಲ್ಲಿ 8 ಕೋಟಿ 76 ಲಕ್ಷ ಜನ ಕಳೆದ 15 ದಿನಗಳಲ್ಲಿ ಕನ್ನಡ ಬಿಗ್‍ಬಾಸ್ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಎರಡು ವಲಯದಲ್ಲಿ ಎರಡು ದಿಕ್ಕಿನಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರು ನನಗೆ ಒಂದು ರೀತಿ ತಮ್ಮಂದಿರು, ಅದರಲ್ಲಿ ಒಬ್ಬ ಅಂತರಾಷ್ಟ್ರೀಯ ಪ್ರತಿಭೆ, ಮತ್ತೊಬ್ಬ ಕುಡಿಯಲು ನೀರು ಕೂಡ ಇರದ ಊರಿನಿಂದ ಬಂದವನು. ಒಬ್ಬ ಯಶಸ್ಸು ಹಾಗೂ ಸೋಲು ಎರಡನ್ನು ಕಂಡು ಸೋತು ಗೆದ್ದವನು. ಆದರೆ ಒಬ್ಬ ಒಂದೇ ಒಂದು ಯಶಸ್ಸು ಸಿಕ್ಕಿದರೆ ನನ್ನ ಜೀವನ ಉದ್ದಾರ ಮಾಡಿಕೊಳ್ಳುತ್ತೇನೆ. ನೂರಾರು ಜನರಿಗೆ ನಾನು ಮಾದರಿಯಾಗುತ್ತೇನೆ ಎಂದು ನಿಂತಿದ್ದಾನೆ. ಒಬ್ಬನಿಗೆ ಛಲ ಇದ್ದರೆ, ಮತ್ತೊಬ್ಬನಿಗೆ ಅಮಾಯಕತ್ವವಿದೆ. ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ. ಇಷ್ಟನ್ನೆಲ್ಲಾ ನೋಡಿದಾಗ ನನ್ನ 66 ದಿನಗಳ ಜರ್ನಿ ನೋಡಿದಾಗ, ಕರ್ನಾಟಕದ ಜನತೆಯ ಆಶೀರ್ವಾದ ನೋಡಿದಾಗ ನನ್ನ ಮತ ಅಂತಃಕರ್ಣಕ್ಕೆ, ಹಳ್ಳಿ ಹಕ್ಕಿ ಪ್ರತಿಭೆಗೆ, ಇಂದು ನಾನು ಮಂಜು ಬಗ್ಗೆ ಬರೆದ ಒಂದು ಪದ್ಯವನ್ನು 16 ಲಕ್ಷ ಜನ ಶೇರ್ ಮಾಡಿದ್ದಾರೆ. ಅಷ್ಟು ಜನ ಮಂಜುರನ್ನು ಬಹಳ ಇಷ್ಟಪಡುತ್ತಿದ್ದಾರೆ ಎಂದು ಚಕ್ರವರ್ತಿ ಹೇಳಿದ್ದಾರೆ.

    ಮನೆಯಲ್ಲಿ ಕರೆಂಟ್ ಇಲ್ಲ, ಬಸ್ ಇಲ್ಲ, ಏನೂ ಇಲ್ಲದ ಒಬ್ಬ ಬಡ ಹುಡುಗ ಇಂತಹ ಒಂದು ದೊಡ್ಡ ಆಟಕ್ಕೆ ಬಂದು ಎಲ್ಲರೊಂದಿಗೆ ಸ್ಪರ್ಧಿಸುತ್ತಾನಲ್ಲ, ಅವನದ್ದು ನಿಜವಾದ ಶಕ್ತಿ, ಅದು ನಿಜವಾದ ತಾಕತ್ತು. ಅಂತಹ ಕೆಲಸ ಮಂಜು ಮಾಡಿದ್ದಾನೆ. ಅರವಿಂದ್ ಕೆಪಿಗೆ ಎಲ್ಲವನ್ನು ಭರಿಸಿಕೊಳ್ಳುವ ಶಕ್ತಿ ಎಲ್ಲ ಮಾರ್ಗಗಳಿದೆ. ಆದರೆ ಮಂಜು ಏನೂ ಇಲ್ಲದೇ ಬಂದಿದ್ದಾನೆ, ನಾನು ಅವನನ್ನು ಎಷ್ಟೋ ಬಾರಿ ಕೆಣಕಿದೆ. ಆದರೆ ಅವನು ಒಂದು ಕ್ಷಣ ಕೂಡ ಕುಗ್ಗಿದ್ದನ್ನು ನಾನು ನೋಡಲೇ ಇಲ್ಲ. ನಾನೇ ಎಷ್ಟೋ ಅಡ್ಡಗಳನ್ನು ಹಾಕಿದೆ. ಆದರೆ ಆ ಅಡ್ಡಗಳನ್ನೆಲ್ಲಾ ದಾಟಿ ನನ್ನ ಮನಸ್ಸನ್ನು ಹಾಗೂ ನನ್ನ ತಾಯಿ ಮನಸ್ಸನ್ನು ಗೆದ್ದಿದ್ದು, ನೂರಾರು ಕೋಟಿ ಜನರ ಆಶೀರ್ವಾದಕ್ಕೆ ಕಾರಣನಾಗಿದ್ದು ಮಂಜು. ಈ ಎಲ್ಲಾ ಕಾರಣಕ್ಕೆ ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಸೀಸನ್-8ರ ಗೆಲುವು ಮಂಜು ಪಾವಗಡ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುವ ಜೊತೆಗೆ ಮಂಜುರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

  • ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಫಿನಾಲೆ ವೇದಿಕೆಗೆ ಗಾಯಕ ರಘು ದೀಕ್ಷಿತ್ ಹಾಗೂ ರಾಜೇಶ್ ಕೃಷ್ಣನ್ ಎಂಟ್ರಿ ಕೊಡುವ ಮೂಲಕ ಸುದೀಪ್‍ಗೆ ಸರ್ಪ್ರೈಸ್ ನೀಡಿದ್ದಾರೆ.

    ವೇದಿಕೆ ಮೇಲೆ ಬಂದು ಸುದೀಪ್‍ರನ್ನು ಭೇಟಿ ಮಾಡಿದ ರಘು ದೀಕ್ಷಿತ್, ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಮ್ಯೂಸಿಕ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಳಿಕ ಇದೇ ಮೊದಲ ಬಾರಿಗೆ ಗಾಯಕ ರಾಜೇಶ್ ಕೃಷ್ಣನ್‍ರವರು ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಈ ವೇಳೆ ರಘು ದೀಕ್ಷಿತ್, ನಾನು ಯಾವುದಾರೂ ಮ್ಯೂಸಿಕ್ ಕಂಪೋಸ್ ಮಾಡಲು ಹೋದರೆ, ಜನ ನನಗೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ರೀತಿ ಮ್ಯೂಸಿಕ್ ನೀಡಿ ಎಂದು ಹೇಳುತ್ತಾರೆ. ಆದರೆ ನನಗೆ ಮತ್ತೆ ಆ ರೀತಿ ಮ್ಯೂಸಿಕ್ ನೀಡಲು ಸಾಧ್ಯವಿಲ್ಲ. ನಾನು ಮ್ಯೂಸಿಕ್ ನೀಡಿದ ಸೈಕೋ ಸಿನಿಮಾ ಇನ್ನೂ ತೆರೆ ಕಂಡಿರಲಿಲ್ಲ. ಆಗ ಯಾವುದೋ ರೇಡಿಯೋ ಜಿಂಗಲ್‍ನನ್ನು ಕೇಳಿ ವಿನಾಯಕ್ ಜೋಶಿಗೆ ಕರೆ ಮಾಡಿ ಸುದೀಪ್‍ರವರು ನಂಬರ್ ತೆಗೆದುಕೊಂಡು ಸ್ಕ್ರಿಪ್ಟ್ ನೀಡಿ ಏನಾದರೂ ಮಾಡು ಎಂದು ಹೇಳಿ ಅವಕಾಶ ನೀಡಿದರು ಎಂದು ಹೇಳುತ್ತಾ, ಮೊದಲ ಬಾರಿಗೆ ಸುದೀಪ್‍ಗೆ ಸಾಂಗ್ ಕಂಪೋಸ್ ಮಾಡಿದ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ.

    ಸುಮಾರು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸುದೀಪ್ ನಾನು ಸ್ನೇಹಿತರು ಆ ಸ್ನೇಹದ ಪ್ರತಿಕವಾಗಿ ಸುದೀಪ್ ಎಷ್ಟೋ ಹಾಡುಗಳನ್ನು ನನಗೆ ನೀಡಿದ್ದಾರೆ. ನನ್ನ ಮೇಲೆ ವಿಶ್ವಾಸ ಇಟ್ಟು, ನನ್ನ ಧ್ವನಿ ಹಾಗೂ ಎಕ್ಸ್ ಪ್ರೆಶನ್‍ನ್ನು ತುಂಬಾ ಇಷ್ಟಪಟ್ಟು, ಒಂದಷ್ಟು ಮುತ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಎರಡು ಹಾಡುಗಳನ್ನು ಹಾಡುತ್ತೇನೆ ಎಂದು ಚಂದು ಹಾಗೂ ಪಾರ್ಥ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.

    ನಾನು ಸುದೀಪ್‍ಗೆ ದೊಡ್ಡ ಬಿಗ್ ಫ್ಯಾನ್. ನಿನ್ನ ಈಗ ಸಿನಿಮಾವನ್ನು ಯಾವ ಭಾಷೆಯಲ್ಲಿ ಬಂದರೂ ನಾನು ನೋಡುತ್ತಲೆ ಇರುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಬಿಗ್‍ಬಾಸ್ ವೇದಿಕೆಯಲ್ಲಿ ಬರೀ ಡ್ಯಾನ್ಸ್ ಮಾತ್ರವಲ್ಲದೇ ಸಂಗೀತ ರಸಮಂಜರಿಯನ್ನು ಕೂಡ ಏರ್ಪಡಿಸುವ ಮೂಲಕ ಸ್ಪರ್ಧೀಗಳಿಗೆ ಮನರಂಜನೆಯನ್ನು ನೀಡಲಾಯಿತು. ಇದನ್ನೂ ಓದಿ:ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

  • ಪ್ರೀತಿ ಸದಾ ಇರಲಿ ಅಂತರಾಳದಿಂದ – ಗ್ರ್ಯಾಂಡ್ ಫಿನಾಲೆಯಲ್ಲಿ ನಿಧಿಗೆ ಕ್ಷಮೆಯಾಚಿಸಿದ ಅರವಿಂದ್

    ಪ್ರೀತಿ ಸದಾ ಇರಲಿ ಅಂತರಾಳದಿಂದ – ಗ್ರ್ಯಾಂಡ್ ಫಿನಾಲೆಯಲ್ಲಿ ನಿಧಿಗೆ ಕ್ಷಮೆಯಾಚಿಸಿದ ಅರವಿಂದ್

    ಬಿಗ್‍ಬಾಸ್ ಸೀಸನ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಕೆ.ಪಿ. ಅರವಿಂದ್ ನಿಧಿ ಸುಬ್ಬಯ್ಯಗೆ ಬಹಿರಂಗವಾಗಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನ ಟಾಸ್ಕ್ ವೇಳೆ ನಿಧಿ ಸುಬ್ಬಯ್ಯ ಹಾಗೂ ಕೆ.ಪಿ ಅರವಿಂದ್ ಮಧ್ಯೆ ಮಾತಿನ ಚಕಮಕಿ ನಡೆದು ಜಗಳ ಆಗಿತ್ತು. ಅಲ್ಲದೇ ಸೆಕೆಂಡ್ ಇನ್ನಿಂಗ್ಸ್ ವೇಳೆ ಕೂಡ ನಿಧಿ ಹಾಗೂ ಅರವಿಂದ್ ಮತ್ತೆ ಜಗಳ ಮಾಡಿಕೊಂಡಿದ್ದರು. ಇದೀಗ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡ ಅರವಿಂದ್ ಪತ್ರ ಬರೆಯುವ ಮೂಲಕ ನಿಧಿ ಸುಬ್ಬಯ್ಯಗೆ ಕ್ಷಮೆಯಾಚಿಸಿದ್ದಾರೆ.

    ಹಾಯ್ ಗೆಳತಿ, ಬಿಗ್‍ಬಾಸ್ ನೀಡಿರುವ ಅವಕಾಶದಲ್ಲಿ ನಾನು ನಿನ್ನ ಬಳಿ ಕ್ಷಮೆ ಕೇಳಲು ಇಚ್ಛಿಸುತ್ತೇನೆ. ನಿನ್ನಲ್ಲಿ ಒಂದು ಒಳ್ಳೆಯ ಸ್ನೇಹಿತೆಯನ್ನು ಕಂಡಿದ್ದೇನೆ. ಗೊತ್ತೊ, ಗೊತ್ತಿಲ್ಲದೆಯೋ ನನ್ನ ಮಾತು ನಿನಗೆ ನೋವುಂಟು ಮಾಡಿದೆ. ನೀನು ನೀಡಿದ ಸಲುಗೆಯನ್ನು ನಾನು ದುರುಪಯೋಗ ಮಾಡಿಕೊಂಡ ಬೇಸರ ನನಗಿದೆ. ಎಲ್ಲಾ ಸಂದರ್ಭದಲ್ಲಿ ಸಲುಗೆಯಿಂದ ಮಾತನಾಡಬಾರದು ಎಂಬ ಅರಿವು ನನಗಾಗಿದೆ. ನಿನ್ನಲ್ಲಿ ಬಂದು ಕ್ಷಮೆ ಕೇಳಿದಾಗ ನಾನು ನಿಜವಾಗಿಯೂ ಹೃದಯದಿಂದ ಬಂದು ನಿನಗೆ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಬೇಕಾಗಿತ್ತು ಮತ್ತು ಅದನ್ನು ಕಾಟಾಚಾರಕ್ಕೋಸ್ಕರ ಕೇಳಿದ್ದಲ್ಲ. ಈ ಸ್ನೇಹ ಜೀವನ ಪರ್ಯಂತ ಸಾಗಲಿ ಎಂದು ಅಂದುಕೊಳ್ಳುತ್ತೇನೆ. ಪ್ರೀತಿ ಸದಾ ಇರಲಿ ಅಂತರಾಳದಿಂದ, ಇಂತಿ ನಿನ್ನ ಸ್ನೇಹಿತ ಕೆ.ಪಿ ಅರವಿಂದ್ ಎಂದು ಪತ್ರ ಬರೆದಿದ್ದಾರೆ.

    ಪತ್ರ ಓದಿದ ನಂತರ ಸಂತಸದಿಂದ ನಿಧಿ ಸುಬ್ಬಯ್ಯ, ಖಂಡಿತ ನಾವಿಬ್ಬರು ಲೈಫ್ ಲಾಂಗ್ ಫ್ರೆಂಡ್ ಆಗಿರುತ್ತೇವೆ. ಇದನ್ನು ಇಷ್ಟು ದಿನ ನೀನು ನೆನಪಿನಲ್ಲಿಟ್ಟುಕೊಂಡು ಈಗ ಕ್ಷಮೆ ಕೇಳುತ್ತಿರುವುದು ನನಗೆ ಬೇಸರವಾಗುತ್ತಿದೆ. ಎಲ್ಲವನ್ನು ಮರೆತು ನಾವು ಹೊಸದಾಗಿ ಸ್ನೇಹವನ್ನು ಆರಂಭಿಸೋಣ. ಲವ್ ಯೂ ಆಲ್‍ವೇಸ್ ಮ್ಯಾನ್.. ಇದನ್ನು ನಿನ್ನ ಹಣೆಯ ಮೇಲೆ ಬರೆದುಕೊಂಡು ನೆನಪಿಟ್ಟುಕೋ ಎಂದಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್

  • ಬಿಗ್‍ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್

    ಬಿಗ್‍ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್

    ಬಿಗ್‍ಬಾಸ್ ಸೀಸನ್-8 ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಜರುಗುತ್ತಿದ್ದು, ಸ್ಪರ್ಧಿಗಳ ನಡುವೆ ಬಿಗ್‍ಬಾಸ್ ಟ್ರೋಫಿಗಾಗಿ ಟಫ್ ಫೈಟ್ ನಡೆಯುತ್ತಿದೆ. ಈ ಮಧ್ಯೆ ಬಿಗ್‍ಬಾಸ್ ಮನೆಯ ಟಾಪ್ 4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ದೊಡ್ಮನೆಯಿಂದ ಹೊರಬಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ಮನೆಯ ಇತರ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವೈಷ್ಣವಿ ಗೌಡ, ತಮ್ಮ ಹಾವ-ಭಾವ ಹಾಗೂ ನಡುವಳಿಕೆ, ಮುಗ್ಧತೆ, ಚಿಕ್ಕ-ಚಿಕ್ಕ ಚೇಷ್ಟೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಜೊತೆಗೆ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಮಂಜು ಪಾವಗಡ ಜೊತೆ ಹೆಚ್ಚಾಗಿ ಹಾಸ್ಯ ಮಾಡುವ ಮೂಲಕ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಸಖತ್ ಸೈಲೆಂಟ್ ಆಗಿದ್ದ ವೈಷ್ಣವಿ, ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಟಾಸ್ಕ್ ಹಾಗೂ ತಮ್ಮ ಹಾಸ್ಯದ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದರು. ಆದ್ರೆ ಇದೀಗ 10,21,831 ವೋಟ್‍ಗಳನ್ನು ಪಡೆಯುವ ಮೂಲಕ ವೈಷ್ಣವಿ ಬಿಗ್‍ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

    ಮೊದಲೇ ಕಿಚ್ಚ ಸುದೀಪ್ ಹೇಳಿದಂತೆ ಬಿಗ್‍ಬಾಸ್ ಮನೆಯ ಟಾಪ್-5 ಕಂಟೆಸ್ಟಂಟ್‍ಗಳ್ಯಾರು ಖಾಲಿ ಕೈನಲ್ಲಿ ಹೋಗುವುದಿಲ್ಲ ಎಂದು ತಿಳಿಸಿದ್ದರು. ಅದರಂತೆ ಟಾಪ್-4 ಕಂಟೆಸ್ಟಂಟ್‍ಗೆ ಹೊರಬಂದಿರುವ ಸ್ಪರ್ಧಿ ವೈಷ್ಣವಿ ಗೌಡ 3.5 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ. ಇನ್ನೂ ಬಿಗ್‍ಬಾಸ್ ಸೀಸನ್-8ರ ಟಾಪ್-5 ಕಂಟೆಸ್ಟಂಟ್ ಆಗಿ ಪ್ರಶಾಂತ್ ಸಂಬರಗಿ ದೊಡ್ಮನೆಯಿಂದ ಹೊರ ಬಂದಿದ್ದರು.ಇದನ್ನೂ ಓದಿ:ಬಿಗ್‍ಬಾಸ್ ಟಾಪ್ 5 ಕಂಟೆಸ್ಟೆಂಟ್ ಸಂಬರ್ಗಿ ಔಟ್