Tag: Biggboss Finale Week

  • ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಬಿಗ್‍ಬಾಸ್ ಫಿನಾಲೆಗೆ ಇನ್ನೇನು 2-3 ದಿನವಷ್ಟೇ ಬಾಕಿ ಇದೆ. ಈ ವಾರ ಫಿನಾಲೆ ವೀಕ್ ಆಗಿರುವುದರಿಂದ ಬಿಗ್‍ಬಾಸ್ ಸೀಸನ್-8ರ ಟಾಪ್ 5 ಸ್ಪರ್ಧಿಗಳ ಜರ್ನಿಯನ್ನು ಫೋಟೋ ಫ್ರೇಮ್ ನಿರ್ಮಿಸುವ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಅರವಿಂದ್, ವೈಷ್ಣವಿ, ಮಂಜು ನಂತರ ಇದೀಗ ಪ್ರಶಾಂತ್ ಸಂಬರ್ಗಿ ಫೋಟೋವನ್ನು ಗಾರ್ಡನ್ ಏರಿಯಾದಲ್ಲಿ ವಾಲ್ ಆಫ್ ದಿ ಫ್ರೇಮ್ ಕ್ರಿಯೆಟ್ ಮಾಡಲಾಗಿತ್ತು. ಇದನ್ನು ಕಂಡು ಪ್ರಶಾಂತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಪ್ರಶಾಂತ್, 115 ದಿನದ ಜರ್ನಿ ಇನ್ನೂ 4 ದಿನದಲ್ಲಿ ಮುಗಿಯುತ್ತದೆ. ಈ ಮನೆಯಲ್ಲಿ ಫ್ರೆಂಡ್ಸ್, ಶತ್ರು ಆದ್ರು ಮತ್ತೆ ಫ್ರೆಂಡ್ಸ್ ಆದ್ರು, ಪ್ರೀತಿ, ಅಣ್ಣ, ತಂಗಿ, ಫ್ರೆಂಡ್ ಎಲ್ಲರೂ ಮನೆಯವರ ರೂಪದಲ್ಲಿ ಸಿಕ್ಕಿದ್ರು. ಮಂಜು ಕಾಮಿಡಿ ಸೆನ್ಸ್ ನನಗೆ ಅರ್ಥ ಆಗಲು ಸಮಯ ಬೇಕಾಯಿತು. ಅವನು ವೈಯಕ್ತಿವಾಗಿ ಯಾವುದೇ ಕೆಟ್ಟವನಲ್ಲ. ಆಟದಲ್ಲಿ ಜಗಳವಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ನಮ್ಮ ಮಧ್ಯೆ ಇಲ್ಲ. ಸದ್ಯ ಈಗ ಮಂಜು ನನಗೆ ಸಹೋದರನಾಗಿದ್ದಾರೆ. ಬಿಗ್‍ಬಾಸ್ ನನ್ನ ಲೈಫ್‍ನಲ್ಲಿ ಒಂದು ಮೈಲಿಗಲ್ಲು. ಬಿಗ್‍ಬಾಸ್ ಜರ್ನಿ ಬಹಳ ಸೂಪರ್, ಧನ್ಯವಾದಗಳು ಬಿಗ್‍ಬಾಸ್ ಎಂದಿದ್ದಾರೆ.

    ಬಳಿಕ ದಿವ್ಯಾ ಉರುಡುಗ, ನನಗೆ ಈ ಮನೆಗೆ ಬಂದ ತಕ್ಷಣ ಪ್ರಶಾಂತ್ ಜೊತೆ ಅಣ್ಣ – ತಂಗಿ ಬಾಂಧವ್ಯ ಬೆಳೆಯಿತು. ಪ್ರಶಾಂತ್ ಅವರಲ್ಲಿ ಒಂದು ರೀತಿಯ ಮಗುವನ್ನು ಕಾಣುತ್ತೇನೆ. ಅವರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ. ಒಂದು ತುಂಬಾ ಮಗ್ಧತನ ಮತ್ತೊಂದು ಕ್ರೂರ ಹುಲಿ. ಅವರು ಖುಷಿಯಾಗಿದ್ದಾಗ ಅವರಂತ ಮನುಷ್ಯ ಇನ್ನೊಬ್ಬರಿಲ್ಲ. ಪ್ರಶಾಂತ್ ನನ್ನ ಜೀವನದ ಅಣ್ಣ. ನಿಮ್ಮ ಲೈಫ್‍ನಲ್ಲಿ ಎಲ್ಲಾ ಒಳ್ಳೆಯದಾಗಲಿ, ಯಾವತ್ತಿಗೂ ನಗುತ್ತೀರಿ ಎಂದಿದ್ದಾರೆ.

    ಪ್ರಶಾಂತ್ ರವರ ಬಗ್ಗೆ ತಿಳಿದುಕೊಳ್ಳಲು ನನಗೆ ಖುಷಿಯಾಗಿದೆ. ಟಿವಿಯಲ್ಲಿ ನೋಡುವುದಕ್ಕೂ, ನಿಜವಾಗಿಯೂ ನೋಡಲು ಪ್ರಶಾಂತ್‍ರವರು ತುಂಬಾ ಡಿಫರೆಂಟ್ ಆಗಿದ್ದಾರೆ. ನೀವು ಫಿನಾಲೆ ತನಕ ಬರಲು ನಿಮ್ಮಲ್ಲಿರುವ ಸಾಮಥ್ರ್ಯ ಕಾರಣ. ಒಂದು ಟಾಸ್ಕ್ ವೇಳೆ ನಾನು ಕೈ ಎತ್ತಿದ್ದು, ನನಗೆ ಈಗಲೂ ಬೇಸರವಾಗುತ್ತದೆ. ಇಂದಿಗೂ ನಾನು ಆ ಬಗ್ಗೆ ಪಶ್ಚಾತಾಪ ಪಡುತ್ತೇನೆ, ಕ್ಷಮಿಸಿ. ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮಗೆ ಒಳ್ಳೆಯದಾಗಲಿ ಎಂದು ವೈಷ್ಣವಿ ಹೇಳಿದ್ದಾರೆ.

    ಬಳಿಕ ಮಂಜು, ಬಿಗ್‍ಬಾಸ್ ಮನೆಯಲ್ಲಿ ನನ್ನ ಹಾಗೂ ಪ್ರಶಾಂತ್‍ರವರದ್ದು ಹಾವು, ಮುಂಗುಸಿ ಸಂಬಂಧ. ಆದರೆ ಬಿಗ್‍ಬಾಸ್ ಮನೆಯಲ್ಲಿ ಪ್ರಶಾಂತ್ ಇಲ್ಲದಿದ್ದರೆ ಈ ಜರ್ನಿ ಬಹಳ ಬೋರಿಂಗ್ ಆಗಿರುತ್ತಿತ್ತು. ಸರಸ, ವಿರಸ ಎಲ್ಲಾ ಇದ್ದರೆನೇ ಮನೆ ಅನಿಸಿಕೊಳ್ಳುವುದು. ಜಗಳ ಆಡಿದರೂ ಅದನ್ನು ತಿದ್ದುಕೊಂಡು ಹೋಗುತ್ತಿದ್ದೇವೆ. ಒಳ್ಳೆಯದಾಗಲಿ ಎಂದಿದ್ದಾರೆ.

    ಇನ್ನೂ ಅರವಿಂದ್, ಪ್ರಶಾಂತ್ ಈ ಜರ್ನಿಯಲ್ಲಿ ಇರಲಿಲ್ಲ ಅಂದರೆ ಒಗ್ಗರಣೆಯಲ್ಲಿ ಮೆಣಸಿನ ಕಾಯಿ ಕಡಿಮೆಯಾದಂತೆ, ಯಾವಗಲೂ ಚಟ-ಪಟ ಅಂತ ಅಂದರೆನೇ ಅದು ಒಗ್ಗರಣೆಯಾಗುತ್ತದೆ. ನಿಮ್ಮಿಂದ ಏನು ಮಾಡಬೇಕು ಏನು ಮಾಡಬಾರದು ಎರಡನ್ನು ಕೂಡ ತಿಳಿದುಕೊಂಡಿದ್ದೇನೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಧನ್ಯವಾದ. ಮುಂದೆ ಕೂಡ ನಾವು ಹೀಗೆ ಫ್ರೆಂಡ್ಸ್ ಆಗಿ ಮುಂದುವರಿಯುತ್ತೇವೆ ಅಂದುಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

  • ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ವಾರ ಬಿಗ್‍ಬಾಸ್ ಗ್ರಾಂಡ್ ಫಿನಾಲೆ ವೀಕ್ ಆಗಿರುವುದರಿಂದ ಪ್ರತಿದಿನ ದೊಡ್ಮನೆಯಲ್ಲಿ ಟಾಪ್ 5 ಸ್ಪರ್ಧಿಗಳ ವಾಲ್ ಆಫ್ ದಿ ಫ್ರೆಮ್ ಕ್ರಿಯೆಟ್ ಮಾಡಿ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜರ್ನಿಯನ್ನು ಮೆಲುಕು ಹಾಕಲಾಗುತ್ತಿದೆ.

    ಸದ್ಯ ಬಿಗ್‍ಬಾಸ್ 43ನೇ ದಿನ ಗಾರ್ಡನ್ ಏರಿಯಾದಲ್ಲಿ ಜಗಮಗಿಸುವ ಲೈಟ್ ಮಧ್ಯೆ ಮಂಜು ಪಾವಗಡ ಫೋಟೋ ಫ್ರೆಮ್ ಹಾಕಲಾಗಿತ್ತು. ಇದನ್ನು ನೋಡಿ ಮಂಜು ಫುಲ್ ಖುಷ್ ಆಗಿದ್ದಾರೆ. ಬಳಿಕ ನನ್ನ ಜೀವನದಲ್ಲಿ ಬಿಗ್‍ಬಾಸ್ ದೊಡ್ಡ ಇತಿಹಾಸ. ಇದು ದೊಡ್ಡ ವೇದಿಕೆ, ನನಗೆ ಈ ಜಾಗ ಎಂದರೆ ಬಹಳ ಇಷ್ಟ. ಇದು ನನಗೆ ಸುಮಾರು ವರ್ಷದ ಕನಸಾಗಿತ್ತು. ನಾನು ರಂಗಭೂಮಿ ಸಿನಿಮಾರಂಗಕ್ಕೆ ಪ್ರವೇಶಿಸಿ ಸುಮಾರು 9-10 ವರ್ಷವಾಯಿತು. ಮಜಾಭಾರತದಿಂದ ಬಂದು ಇಂದು ಬಿಗ್‍ಬಾಸ್ ಮನೆಗೆ ಬಂದು 110 ದಿನ, 20 ದೊಡ್ಡ ಗಣ್ಯರು, ದೊಡ್ಡ ಹೆಸರಿನಲ್ಲಿ ಗುರುತಿಸಿಕೊಂಡವರು. ಎಲ್ಲರೂ ಸಾಧನೆ ಮಾಡಿರುವವರು ಇಂದು ನನ್ನ ಸ್ನೇಹಿತರಾಗಿದ್ದಾರೆ. ಇಲ್ಲಿ ಬಂದು ಒಬ್ಬೊಬ್ಬರಿಂದ ಒಂದೊಂದು ಬಹಳ ಕಲಿತ್ತಿದ್ದೇನೆ. ಎಲ್ಲರಿಗೂ ಬಹಳ ಧನ್ಯವಾದ ಎಂದು ತಿಳಿಸಿದ್ದಾರೆ.

    ನಂತರ ವೈಷ್ಣವಿ ನೀವಿದ್ದ ಕಡೆ ನಗು ಇರುತ್ತದೆ. ನೀವು ಎಲ್ಲೆ ಇದ್ದರೂ, ಏನೇ ಮಾಡುತ್ತಿದ್ದರೂ ಎಂಗೇಜಿಂಗ್ ಆಗಿರುತ್ತೀರಾ. ಅದರಿಂದ ಎನರ್ಜಿ ಲೆವಲ್ ತುಂಬಾ ಹೈ ಆಗುತ್ತದೆ. ಈ ಮನೆಗೆ ತುಂಬಾ ನೀವು ಅವಶ್ಯಕತೆ, ನೀವು ಟಾಸ್ಕ್ ಆಡುವ ರೀತಿ, ಒಂದು ಟೀಂನನ್ನು ನಿಭಾಯಿಸುವ ರೀತಿ, ನಿಮ್ಮ ಟೀಂನಲ್ಲಿ ಇದ್ದಾಗ ನನಗೆ ಬಹಳ ಖುಷಿಕೊಟ್ಟಿದೆ. ಎಲ್ಲರನ್ನು ಯಾವಾಗಲೂ ನಗಿಸುತ್ತೀರಿ, ನಿಮ್ಮ ನಗು ಇಡೀ ಕರ್ನಾಟಕ ಅಲ್ಲ. ಭಾರತಕ್ಕೆ ಸ್ಪ್ರೆಡ್ ಆಗಲಿ ಎಂದು ವಿಶ್ ಮಾಡುತ್ತಾರೆ.

    ಬಳಿಕ ಪ್ರಶಾಂತ್ ಮಂಜು ಯಾವ ಸೋಲನ್ನು ಒಪ್ಪಿಕೊಳ್ಳದ ವ್ಯಕ್ತಿ, ಚೇರ್ ಟಾಸ್ಕ್‌ನಲ್ಲಿ ಮಂಜು ಆಡಿದ ಮೈಂಡ್ ಗೆ ನಾನು ಯಾವತ್ತು ಮರೆಯಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಮಂಜುಗೆ ಮಾತು ಬರುತ್ತದೆ. ಮಂಜುಗೆ ಮಾತೇ ಬಂಡವಾಳ. ಮಾತಿನಿಂದಲೇ ಅವನು ಮುಂದೆ ಹೋಗಬಹುದು ಒಳ್ಳೆಯದಾಗಲಿ. ಈ ವರ್ಷ ನಿಮಗೆ ಮದುವೆಯಾಗಲಿ, ಯಾವಾಗಲೂ ನಗುತ್ತೀರಿ, ನಗಿಸುತ್ತೀರಿ ಎಂದು ಹಾರೈಸುತ್ತಾರೆ.

    ಮತ್ತೊಂದೆಡೆ ದಿವ್ಯಾ ಉರುಡುಗ ಮಂಜು ಒಬ್ಬ ನಿಜವಾದ ಎಂಟರ್ಟೈನರ್, ಇಲ್ಲಿ ಇರುವವರಲ್ಲಿ ಬಹಳ ಕಂಫರ್ಟ್ ಇರುವ ವ್ಯಕ್ತಿ ಅಂದರೆ ಮಂಜು, ನಾನು ಅವನೊಂದಿಗೆ ತುಂಬಾ ಒಳ್ಳೆಯ ಕಾಲವನ್ನು ಕಳೆದಿದ್ದೇನೆ. ಮಂಜು ನನಗೆ ತುಂಬ ಒಳ್ಳೆಯ ಫ್ರೆಂಡ್. ನಾನು ಅವನೊಂದಿಗೆ ಎಲ್ಲವನ್ನು ಶೇರ್ ಮಾಡಿಕೊಳ್ಳಬಹುದು. ಮಂಜು ಸೇವ್ ಆಗಿದ್ದು, ತುಂಬಾ ಖುಷಿಯಾಗುತ್ತಿದೆ. ನಿನಗೆ ಒಳ್ಳೆಯದಾಗಲಿ ಖುಷಿಯಾಗಿರು ಎಂದು ಹೇಳುತ್ತಾರೆ.

    ನಂತರ ಮಾತನಾಡಿದ ಅರವಿಂದ್, ನನಗೆ ಮಂಜು ಟೈಮಿಂಗ್ ಅಂದರೆ ಬಹಳ ಇಷ್ಟ. ಮಂಜು ಒಳ್ಳೆ ಕಾಂಪಿಟೇಟರ್, ಮುಂದೆ ಆಚೆ ಕೂಡ ನಾವು ಹೀಗೆ ಇರುತ್ತೇವೆ ಎಂದು ಭಾವಿಸುತ್ತೇನೆ. ಗುಡ್ ಲಕ್ ಚೆನ್ನಾಗಿರಿ ಎಂದಿದ್ದಾರೆ.

    ಇನ್ನೂ ದಿವ್ಯಾ ಸುರೇಶ್ ನನ್ನ ಬಿಗ್‍ಬಾಸ್ ಜರ್ನಿ ಮಂಜು ಪಾವಗಡ ಇಲ್ಲದೇ ಇನ್ ಕಂಪ್ಲೀಟ್. ಇಷ್ಟು ದಿನ ನಿನಗೆ ಸ್ಫೂರ್ತಿ ಯಾರು ಅಂದರೆ ನಮ್ಮ ಅಮ್ಮ ಎಂದು ಹೇಳುತ್ತಿದ್ದೆ. ಆದ್ರೆ ಇನ್ನೂ ಮುಂದೆ ನಮ್ಮ ಅಮ್ಮ ಜೊತೆ ಮಂಜು ಪಾವಗಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಿನ್ನ ಜರ್ನಿ ನೋಡಿದರೆ ಜೀರೋಯಿಂದ ಬಿಗ್‍ಬಾಸ್ ತನಕ ಬರುವುದು ಬಹಳ ಕಷ್ಟ. ನೀನು ತುಂಬಾ ಒಳ್ಳೆಯವನು, ಒಳ್ಳೆಯ ಮನಸ್ಸಿದೆ ಯಾವಾಗಲೂ ಖುಷಿಯಾಗಿರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

  • ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಒಂದೊಂದು ಕೋರಿಕೆಯನ್ನು ತಿಳಿಸುವಂತೆ ಬಿಗ್‍ಬಾಸ್ ಸೂಚಿಸಿದ್ದರು. ಹಾಗಾಗಿ ಮನೆಯ ಸ್ಪರ್ಧಿಗಳು ತಮ್ಮ ಚಿಕ್ಕ ಚಿಕ್ಕ ಬಯಕೆಗಳನ್ನು ಬಿಗ್‍ಬಾಸ್ ಬಳಿ ತೊಡಿಕೊಂಡಿದ್ದರು. ಸದ್ಯ ಮಂಜು ಪಾವಗಡಗೆ ಸ್ಪೆಷಲ್ ಆಗಿ ಫ್ರೆಂಡ್ ಶಿಪ್ ಡೇಗೆ ವಿಶ್ ಮಾಡಬೇಕೆಂದು ಕೇಳಿಕೊಂಡಿದ್ದ ದಿವ್ಯಾ ಸುರೇಶ್ ಆಸೆಯನ್ನು ಬಿಗ್‍ಬಾಸ್ ಈಡೇರಿಸಿದ್ದಾರೆ.

    ಅದರಂತೆ ಗಾರ್ಡನ್ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಕೇಕ್, ಬಲೂನ್‍ಗಳ ರಾಶಿ, ಮಂಜು ಹಾಗೂ ದಿವ್ಯಾ ಸುರೇಶ್ ಫೋಟೋವೊಂದನ್ನು ಇರಿಸಿ ಸಿಂಗಾರಿಸಲಾಗಿತ್ತು. ಈ ಅರೆಂಜ್ ಮೆಂಟ್ಸ್ ನೋಡಿ ಮಂಜು ಶಾಕ್ ಆದರೆ, ಮನೆಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.

    ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಏಕಾಂತದಲ್ಲಿ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡಿದಾಗ ನನಗೆ ಗೌರವ ನೀಡಬೇಕು ಅನಿಸುತ್ತದೆ. ನೀವು ಹೋಗಿ ಬನ್ನಿ ಎಂದು ಕರೆಯಬೇಕು ಎನಿಸುತ್ತದೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ನಾನು ನಿನಗೆ ಬಹಳ ಹರ್ಟ್ ಮಾಡಿದ್ದೇನೆ. ಬಹಳ ಡೊಮಿನೇಟ್ ಆಗಿಬಿಟ್ಟೆ, ಕೊನೆ ಕೊನೆಯಲ್ಲಿ ನನ್ನಿಂದ ನಿನ್ನ ಆಟಕ್ಕೆ ತೊಂದರೆ ಆಯ್ತು ಎಂಬುವುದು ಅರ್ಥವಾಯಿತು. ನಾನು ನಿನ್ನ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟೆ ಜೊತೆಗೆ ನಿನ್ನ ಫ್ರೀಡಂನ ಕಂಟ್ರೋಲ್ ಕೂಡ ಮಾಡಾತ್ತಿದೆ. ಮನೆಯಿಂದ ಹೊರಗೆ ಹೋದ ನಂತರ ನಾನು ನಿನಗೆ ಕ್ಷಮೆ ಕೇಳಲು ಆಗಲಿಲ್ಲ. ನನಗೆ ನೀನು ಅಂದರೆ ತುಂಬಾ ಇಷ್ಟ. ಥ್ಯಾಂಕ್ಯು ನೀನು ನನಗೆ ಫ್ರೆಂಡ್ ಆಗಿದ್ದಕ್ಕೆ. ಹೀಗೆ ನನ್ನ ಜೊತೆ ಯಾವಾಗಲೂ ಇರು, ನೀನು ನನ್ನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ.

    ಇದಕ್ಕೆ ಮಂಜು, ಗೊತ್ತೊ, ಗೊತ್ತಿಲ್ಲದೇ ಮಾಡುವ ತಪ್ಪನ್ನು ತಿದ್ದುಕೊಳ್ಳಬೇಕು ಎಂಬುವುದು ನಿನಗೆ ಅರ್ಥವಾಯಿತಲ್ಲಾ ನನಗೆ ಖುಷಿಯಾಯಿತು. ಇದು ದೊಡ್ಡ ವೇದಿಕೆ ಇಲ್ಲಿಂದ ಆಚೆ ಹೋದ ಬಳಿಕ ಎಲ್ಲರೂ ಒಳ್ಳೆದನ್ನು ಮಾತನಾಡಬೇಕು, ಒಳ್ಳೆ ಅವಕಾಶಗಳು ಸಿಗಬೇಕು. ಚೆನ್ನಾಗಿ ಹಾಗೂ ಖುಷಿಯಾಗಿರು ಎಂದು ವಿಶ್ ಮಾಡುತ್ತಾರೆ. ಅಲ್ಲದೇ ಇದನ್ನೆಲ್ಲಾ ನಾನು ಸಿನಿಮಾದಲ್ಲಿ ನೋಡಿದ್ದೆ. ಇದು ಯಾವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.

    ನಂತರ ಇಬ್ಬರೂ ಕೇಕ್ ಕತ್ತರಿಸಿ ಫ್ರೆಂಡ್ ಶಿಪ್ ಡೇ ಸೆಲೆಬ್ರೆಟ್ ಮಾಡುತ್ತಾರೆ. ನಂತರ ಕೇಕ್ ತಿನ್ನುವ ವೇಳೆ ಮಂಜು ನಮ್ಮ ಹುಡುಗ್ರು ಇದನ್ನೆಲ್ಲಾ ನೋಡಿದರೆ ಫುಲ್ ಶಾಕ್ ಆಗುತ್ತಾರೆ. ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇರುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾರೆ.  ಇದನ್ನೂ ಓದಿ:BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS