Tag: biggboss 8

  • 50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

    50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

    ಬೆಂಗಳೂರು: ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಸೀಸನ್ 8 ನಾಳೆ ಶುರುವಾಗುತ್ತಿದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಬಿಗ್‍ಬಾಸ್ ಎಷ್ಟು ದಿನಗಳು ನಡೆಯಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅರ್ಧದಲ್ಲಿಯೇ ಮೊಟಕುಗೊಂಡಿದ್ದ ಕಾರ್ಯಕ್ರಮಕ್ಕೆ ಮತ್ತೆ ಪ್ರಾರಂಭವಾಗುತ್ತಿದೆ. ಶೂಟಿಂಗ್‍ಗೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಬಿಗ್‍ಬಾಸ್ ಕಾರ್ಯಕ್ರಮ ಮತ್ತೆ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ನಾಳೆ ಸಂಜೆ 6 ಗಂಟೆಯಿಂದ ಪ್ರಾರಂಭವಾಗಿ 5 ತಾಸು ಕಾರ್ಯಕ್ರಮ ಕಿಚ್ಚನ ನೀರೂಪಣೆಯಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ:  ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?

    100 ದಿನದ ಈ ರಿಯಾಲಿಟಿ ಶೋ ಕೊರೊನಾದಿಂದಾಗಿ 72 ದಿನಕ್ಕೆ ಮೊಟಕುಗೊಳಿಸಲಾಗಿತ್ತು. ಅಂತಿಮಹಂತದ ಸ್ಪರ್ಧೆಗೆ 28 ದಿನ ಬಾಕಿ ಉಳಿದಿತ್ತು. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಎಷ್ಟು ದಿನ ಬಿಗ್‍ಬಾಸ್ ಕಾರ್ಯಕ್ರಮ ನಡೆಯುತ್ತದೆ ಎನ್ನುವುದಕ್ಕೂ ಉತ್ತರ ಸಿಕ್ಕಿದೆ. ಬರೋಬ್ಬರಿ 50 ದಿನಗಳ ಕಾಲ ಈ ಕಾರ್ಯಕ್ರಮ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

    ಕಿಚ್ಚಸುದೀಪ್ ನಿರೂಪಣೆಯಲ್ಲಿ ಸೆಕೆಂಡ್ ಇನ್ನಿಂಗ್ಸ್‍ನ ಮಹಾಸಂಚಿಕೆಯ ಮೊದಲ ದಿನದ ಮಹಾ ಸಂಚಿಕೆ ಮೂಡಿಬರ್ತಿದೆ. ಈ ಮೊದಲೇ ಮನೆಯಲ್ಲಿದ್ದ 12 ಸ್ಪರ್ಧಿಗಳು ಮಾತ್ರ ಬರುತ್ತಾರ ಅಥವಾ ಹೊಸಬರು ಎಂಟ್ರಿಕೊಡಲಿದ್ದಾರಾ ಎನ್ನುವುದು ಈಗ ಇರುವ ಕೂತುಹೊಲವಾಗಿದೆ. ಒಂಟಿ ಮನೆಯಲ್ಲಿ ಈ ಹಿಂದಿನ ಸಂಚಿಕೆಗಳಲ್ಲಿ ಇರುವುದಕ್ಕಿಂತ ವಿಭಿನ್ನವಾಗಿ ಏನೆಲ್ಲಾ ಇರಲಿದೆ. ಬಿಗ್‍ಬಾಸ್, ಮಸಾಲೆ, ಒಗ್ಗರಣೆ ಮನೆಯಲ್ಲಿ ಎಷ್ಟರ ಮಟ್ಟಿಗೆ ಮನರಂಜನೆ ನೀಡುತ್ತದೆ ಎಂಬುದನ್ನು ಇನ್ನು ನೋಡಹುದಾಗಿದೆ. ಬಿಗ್‍ಬಾಸ್ ಅಸಲಿ ಆಟ ನಾಳೆಯಿಂದ ಶುರುವಾಗುತ್ತಿದೆ.

  • ಬಿಗ್‍ಬಾಸ್ ಸೀಸನ್ 8ರ ಪ್ರೋಮೋ ಶೂಟ್ ಫೋಟೋ ಹಂಚಿಕೊಂಡ ಕಿಚ್ಚ

    ಬಿಗ್‍ಬಾಸ್ ಸೀಸನ್ 8ರ ಪ್ರೋಮೋ ಶೂಟ್ ಫೋಟೋ ಹಂಚಿಕೊಂಡ ಕಿಚ್ಚ

    – ಶೀಘ್ರವೇ ಕಾರ್ಯಕ್ರಮ ಆರಂಭ ಅಂದ್ರು ವಿಕ್ರಾಂತ್ ರೋಣ

    ಬೆಂಗಳೂರು: ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್, ಈ ಬಾರಿ ಮಹಾಮಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಜನವರಿಗೆ ಮುಂದೂಡಲ್ಪಟ್ಟಿತ್ತು. ಆದರೆ ಜನವರಿ ಕೊನೆಯಾಗುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ ಎಂದು ಅಭಿಮಾನಿಗಳು ಬೇಸರ ಪಡುತ್ತಿದ್ದಾಗಲೇ ಇದೀಗ ನಿರೂಪಕ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಹೌದು, ಈ ಸಂಬಂಧ ಪ್ರಮೋ ಶೂಟ್ ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟ್ ನಡೆಯುತ್ತಿದೆ. ಸದ್ಯದಲ್ಲಿಯೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು ಪ್ರತಿಬಾರಿ ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋ ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತದೆ. ಅಂತೆಯೇ ಈ ಬಾರಿ ಕೂಡ ಅದೇ ಸೆಟ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ತಿಂಗಳ ಹಿಂದೆಯೇ ಬಿಗ್ ಬಾಸ್ ಮನೆಯ ರಿಪೇರಿ ಕಾರ್ಯ ಶುರು ಮಾಡಲಾಗಿತ್ತು. ಈ ಬಾರಿ ಸ್ಪರ್ಧಿಗಳಿಗೆ ಸಪ್ರ್ರೈಸ್ ನೀಡುವಂತಹ ಥೀಮ್‍ನಲ್ಲಿ ಮನೆಯನ್ನು ರೆಡಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

    ಈ ಹಿಂದೆ ಬಿಗ್‍ಬಾಸ್ ಪ್ರಸಾರವಾಗುವ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಕೊರೊನಾ ಆತಂಕದ ನಡುವೆಯೂ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಬಿಗ್‍ಬಾಸ್ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿವೆ.