Tag: biggboss- 4

  • ದಯಮಾಡಿ ವದಂತಿಗಳನ್ನು ಹಬ್ಬಿಸಬೇಡಿ: ಕೈಮುಗಿದು ಬೇಡಿಕೊಂಡ ಪ್ರಥಮ್

    ದಯಮಾಡಿ ವದಂತಿಗಳನ್ನು ಹಬ್ಬಿಸಬೇಡಿ: ಕೈಮುಗಿದು ಬೇಡಿಕೊಂಡ ಪ್ರಥಮ್

    – ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪ್ರಥಮ್ ಮೊದಲ ಪ್ರತಿಕ್ರಿಯೆ

    – ನಟಿಯೊಂದಿಗೆ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಪ್ರಥಮ್

    ಬೆಂಗಳೂರು: ಸ್ನೇಹಿತನೊಂದಿಗೆ ಜಗಳವಾಡಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಡಿಸ್ಚಾರ್ಜ್ ಬಳಿಕ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಥಮ್, ಕೆಲವೊಂದು ರೂಮರ್ಸ್‍ನಿಂದ ಡಿಸ್ಟರ್ಬ್ ಆಗಿದ್ದೆ. ಇನ್ಮುಂದೆ ಯಾವತ್ತೂ ಈ ರೀತಿ ಮಾಡಲ್ಲ. ಸ್ವಲ್ಪ ಆತುರದ ನಿರ್ಧಾರ ತೆಗೆದುಕೊಂಡಿದ್ದೆ. ನನ್ನ ಬಗ್ಗೆ ಬಂದಿರೋ ವಿಷಯಗಳ ಬಗ್ಗೆ ಪರಿಶೀಲಿಸಿ. ಆದಷ್ಟು ಸತ್ಯಾಸತ್ಯತೆ ಪರಿಶೀಲಿಸಿ ವರದಿ ಪ್ರಸಾರ ಮಾಡಿ. ಮೀಡಿಯಾದವರು ಬೆಂಬಲಿಸಿ ಬೆಳೆಸಿದ್ದೀರ. ಇನ್ಮುಂದೆಯೂ ಇದೇ ರೀತಿ ಇರಲಿ ಅಂತಾ ಹೇಳಿದ್ರು.

    ಕಿಮ್ಸ್ ಆಸ್ಪತ್ರೆಯ ವೈದ್ಯರು ನನ್ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ನಾನು ಯಾರನ್ನೂ ನಂಬಲ್ಲ. ಕೆಲವೊಂದು ಸುದ್ದಿಗಳು ನನಗೆ ನೋವು ತರಿಸಿತು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದಕೊಂಡೆ ಅಂತಾ ಹೇಳಿದ್ರು.

    ಮಾಧ್ಯಮಕ್ಕೆ ಧನ್ಯವಾದ: ಒಬ್ಬ ಸಾಮಾನ್ಯ ಮನುಷ್ಯನನ್ನು ಬಿಗ್ ಬಾಸ್ ಮೂಲಕ ಎತ್ತರಕ್ಕೆ ತಂದ ಮಾಧ್ಯಮಗಳಿಗೆ ನನ್ನ ಅಭಿನಂದನೆ. ಬಿಗ್ ಬಾಸ್‍ನಲ್ಲಿ ಗೆದ್ದ ಹಣದಲ್ಲಿ ಯಾರಿಗೆಲ್ಲಾ ನೀಡುತ್ತೇನೆ ಅಂತಾ ಮಾತು ಕೊಟ್ಟಿದ್ದೇನೋ ಆ ಮಾತಿಗೆ ಬದ್ಧನಾಗಿರುತ್ತೇನೆ. ಬಿಗ್ ಬಾಸ್‍ನಿಂದ ಏಪ್ರಿಲ್ 3ಕ್ಕೆ ಹಣ ನನ್ನ ಕೈ ಸೇರಿದೆ. ಈ ಮಧ್ಯೆಯೇ ಜನ ವದಂತಿ ಹಬ್ಬಿಸಿರೋದು ಬಹಳ ದುಃಖ ತಂದಿದೆ. ವಿಶ್ರಾಂತಿಗೆ ಅಂತಾ ಹೋದ್ರೂ ನಾನು ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ. ಇಂದೇ ಹುಟ್ಟೂರಿನ ತವಸಾರೆ ಬೆಟ್ಟಕ್ಕೆ ಲೈಟ್ ಹಾಕಿಸ್ತೀನಿ. ಒಂದು ವಾರದ ನಂತರ ಶೂಟಿಂಗ್‍ಗೆ ಮರಳ್ತೀನಿ ಅಂತಾ ಹೇಳಿದ್ರು.

    ಸಾಲ ಮಾಡಿಲ್ಲ: ಯಾರೋ ಪ್ರಥಮ್ 2 ಕೋಟಿ ರೂ. ಸಾಲ ಮಾಡಿದ್ದಾನೆ ಅಂತಾ ಹೇಳಿರೋದು ನನ್ನ ಕಿವಿಗೆ ಬಿದ್ದಿತ್ತು. ದೇವರಾಣೆ ಹೇಳ್ತೀನಿ ನಾನು ಒಂದೇ ಒಂದು ರೂ. ಸಾಲ ಮಾಡಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿಗೆ ಕಿವಿಗೊಟ್ಟು ಪರಿಶೀಲಿಸದೆ ನನ್ನ ಬಗ್ಗೆ ಹಿಂದೆಯಿಂದ ಮಾತನಾಡಬೇಡಿ. ಬೇಕಿದ್ರೆ ಅದನ್ನು ಸ್ಪಷ್ಟಪಡಿಸಲು ನನ್ನ ಬಳಿಯೇ ಕೇಳಿ. ಉತ್ತರ ನೀಡುತ್ತೇನೆ. ಆದ್ರೆ ವದಂತಿಗಳನ್ನು ಮಾತ್ರ ಹಬ್ಬಿಸಬೇಡಿ ಅಂತಾ ಪ್ರಥಮ್ ಬೇಡಿಕೊಂಡ್ರು.

    ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ತಮಾಷೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕನ್ನಡದ ಜನಪ್ರಿಯ ನಟಿಯನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ಆ ನಟಿ, “ಪ್ರಥಮ್ ಇದು ನನ್ನ ಅಮ್ಮ. ನಿಮ್ಮ ದೊಡ್ಡ ಅಭಿಮಾನಿ” ಅಂತಾ ಹೇಳಿದ್ರು. ಆವಾಗ ನಾನು ಹೌದಾ.. ಹಾಯ್ ಮಮ್ಮಿ ಹೌ ಆರ್ ಯೂ ಅಂದೆ. ಆಗ ಆ ನಟಿ, ಪ್ರಥಮ್… ಅದು ನನ್ನ ಅಮ್ಮ ಅಂದ್ರು. ಅದಕ್ಕೆ ನಾನು ಹಾಯ್ ಅತ್ತೆ ಅಂತಾ ತಬ್ಬಿಕೊಂಡೆ. ಇದು ಕೇವಲ ತಮಾಷೆಗಾಗಿ ಮಾಡಿದೆ. ಆದ್ರೆ ಜನ ಇದನ್ನ ತಪ್ಪು ತಿಳಿದುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹುಡುಗಿಯರ ಹುಚ್ಚು ಇಲ್ಲ. ಕ್ರಿಕೆಟ್ ಬೆಟ್ಟಿಂಗ್ ಹುಚ್ಚು ಇಲ್ಲ. ದಯಮಾಡಿ ಈ ಥರ ಮಾಡ್ಬೇಡಿ. ಬಿಗ್ ಬಾಸ್ ಗೆದ್ದ ತಕ್ಷಣ ನಾನು ಬದಲಾಗಿಲ್ಲ. ನಾನಿರುವುದೇ ಹೀಗೆ. ಮೂರು ಸಿನಿಮಾ ಒಪ್ಕೊಂಡಿದ್ದೀನಿ ಅಂದ್ರು.

    https://www.youtube.com/watch?v=fRdynS3jT1E&spfreload=10

  • ಫೋರ್ಟಿಸ್ ಆಸ್ಪತ್ರೆಯಲ್ಲಿ ಬೆತ್ತಲಾಗಿ ಓಡಾಟ – ಕಿಮ್ಸ್ ಗೆ ಪ್ರಥಮ್ ಶಿಫ್ಟ್

    ಫೋರ್ಟಿಸ್ ಆಸ್ಪತ್ರೆಯಲ್ಲಿ ಬೆತ್ತಲಾಗಿ ಓಡಾಟ – ಕಿಮ್ಸ್ ಗೆ ಪ್ರಥಮ್ ಶಿಫ್ಟ್

    ಬೆಂಗಳೂರು: ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ಸೀಜನ್ 4 ವಿನ್ನರ್ ಪ್ರಥಮ್‍ರನ್ನ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಮಂಗಳವಾರ ರಾತ್ರಿ ಗೆಳೆಯ ಲೋಕಲ್ ಲೋಕಿ ಜೊತೆ ಗಲಾಟೆ ಮಾಡಿಕೊಂಡು ತಡರಾತ್ರಿ ಫೇಸ್‍ಬುಕ್ ಲೈವ್‍ನಲ್ಲಿ ನಿದ್ದೆ ಮಾತ್ರೆ ಸೇವಿಸಿದ್ದೇನೆಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಥಮ್‍ರನ್ನ ಮೊದಲಿಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ್ ಕೊಂಚ ಚೇತರಿಕೆ ಕಂಡಿದ್ರು. ಆದ್ರೆ ಬುಧವಾರ ಮಧ್ಯಾಹ್ನ ಫೋರ್ಟಿಸ್ ಐಸಿಯುನಲ್ಲಿ ಪ್ರಥಮ್ ಗಲಾಟೆ ಮಾಡಿದ್ದರು. ತಡರಾತ್ರಿ ಆಸ್ಪತ್ರೆ ಸಿಬ್ಬಂದಿ ಜೊತೆ ಜೋರಾಗಿ ಗಲಾಟೆ ಮಾಡಿದ್ದು, ಬೆತ್ತಲಾಗಿ ಆಸ್ಪತ್ರೆಯಲ್ಲಿ ಓಡಾಡಿ ಆತಂಕ ಮೂಡಿಸಿದ್ದರು.

    ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆ ಮೇರೆಗೆ ಪ್ರಥಮ್ ಪೋಷಕರು ನಿಮ್ಹಾನ್ಸ್ ಗೆ ದಾಖಲಿಸಲು ಯತ್ನಿಸಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೋಷಕರು ಪ್ರಥಮ್‍ರನ್ನು ನಿಮ್ಹಾನ್ಸ್ ಗೆ ಕರೆದೊಯ್ದಿದ್ದರು. ನಿಮ್ಹಾನ್ಸ್ ನಲ್ಲಿ ತಲೆ ಸ್ಕಾನಿಂಗ್ ಬಳಿಕ ಮತ್ತೆ ಪ್ರಥಮ್ ಗಲಾಟೆ ಮಾಡಿದ್ದಾರೆ. ನಾನೇನು ಹುಚ್ಚನಲ್ಲ, ನಿಮ್ಹಾನ್ಸ್ ಗೆ ನನ್ನನ್ನು ಯಾಕೆ ಕರೆದುಕೊಂಡು ಬಂದ್ರಿ ಅಂತ ಪೋಷಕರ ಮುಂದೆಯೂ ಪ್ರಥಮ್ ಗಲಾಟೆ ಮಾಡಿದ್ದಾರೆ. ಬಳಿಕ ನಿಮ್ಹಾನ್ಸ್ ಬದಲಿಗೆ ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ್‍ರನ್ನ ದಾಖಲು ಮಾಡಲಾಗಿದೆ.

    ತಡರಾತ್ರಿ ಸ್ನೇಹಿತ ಲೋಕಿ, ಪ್ರಥಮ್ ಆರೋಗ್ಯ ವಿಚಾರಣೆ ಮಾಡಿ ಬಂದಿದ್ದಾರೆ. ಬಳಿಕ ಮಾತನಾಡಿದ ಲೋಕಿ, ಸದ್ಯದಲ್ಲಿಯೇ ನಮ್ಮಿಬ್ಬರ ಮಧ್ಯೆ ಇರೋ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಅಂತ ಹೇಳಿದ್ರು. ಮೂಲಗಳ ಪ್ರಕಾರ ಇಬ್ಬರ ಮಧ್ಯೆ ಸಂಧಾನ ನಡೆಯಲಿದ್ದು, ಪ್ರಥಮ್ ವಿರುದ್ಧ ನೀಡಿರುವ ಕೇಸನ್ನ ಲೋಕಿ ವಾಪಸ್ ಪಡೆಯಲಿದ್ದಾರೆ ಎನ್ನಲಾಗಿದೆ.

  • ಕೊನೆಗೂ ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಯೋಧರ ನೆರವಿಗೆ ನೀಡಲು ಹೊರಟ ಪ್ರಥಮ್

    ಕೊನೆಗೂ ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಯೋಧರ ನೆರವಿಗೆ ನೀಡಲು ಹೊರಟ ಪ್ರಥಮ್

    ಬೆಂಗಳೂರು: ಕೊನೆಗೂ ಪ್ರಥಮ್ ಬಿಗ್ ಬಾಸ್ ಸೀಸನ್-4ರಲ್ಲಿ ಗೆದ್ದ ಬಹುಮಾನದ ಹಣವನ್ನ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ಮುಂದಾಗಿದ್ದಾರೆ.

    ಇಷ್ಟು ದಿನ ಅಂದುಕೊಂಡ ಮಾತನ್ನ ಉಳಿಸಿಕೊಳ್ಳಲಿಲ್ಲ ಅಂತ ಪ್ರಥಮ್ ಮೇಲೆ ಆರೋಪದ ಸುರಿಮಳೆ ಕೇಳಿಬರ್ತಿತ್ತು. ಆದ್ರೆ ಅನೇಕ ಕಾರಣಗಳಿಂದ ಬಹುಮಾನದ ಹಣ ಇಲ್ಲಿವರೆಗೂ ಪ್ರಥಮ್ ಕೈ ಸೇರಿರಲಿಲ್ಲ.

    ಇದೀಗ ಹಣ ಸಿಕ್ಕ ಕೂಡಲೇ ಪ್ರಥಮ್ ಮೈಸೂರಿಗೆ ತೆರಳಿ ಯೋಧರ ನೆರವಿಗಾಗಿ ಬ್ಯಾಂಕ್ ಮೂಲಕ ಚೆಕ್ ತೆಗೆದುಕೊಂಡು ಅದನ್ನ ಪಿಎಮ್ ರಿಲೀಫ್ ಫಂಡ್‍ಗೆ ಕೊಡೋಕೆ ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಥಮ್ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಬಿಗ್‍ಬಾಸ್‍ನಲ್ಲಿ ಹಣವನ್ನು ಏನು ಮಾಡಬೇಕು ಎಂದು ವೇದಿಕೆಯ ಮೇಲೆ ನಿಂತು ಪ್ರಥಮ್ ತನ್ನ ತಂದೆಯನ್ನ ಕೇಳಿದ್ದರು. ಇದಕ್ಕೆ ಪ್ರಥಮ್ ತಂದೆ ಯೋಧರು ಹಾಗೂ ನಾಡಿನ ಮೃತ ರೈತರ ಕುಟುಂಬಕ್ಕೆ ಹಣ ನೀಡು ಎಂದು ಹೇಳಿದ್ದರು. ಅದರಂತೆ ಯೋಧರು ಹಾಗೂ ರೈತರಿಗಾಗಿ ಬಹುಮಾನದ ಹಣವನ್ನು ಸಮರ್ಪಿಸುತ್ತೇನೆಂದು ವೇದಿಕೆ ಮೇಲೆಯೇ ಪ್ರಥಮ್ ಹೇಳಿದ್ದರು.