Tag: Biggbass

  • ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಬೆಂಗಳೂರು: ಅಮ್ಮನನ್ನು ಮರೆಯುತ್ತಿದ್ದೇನೆ ಎಂದು ದೀಪಿಕಾ ದಾಸ್ ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ದೀಪಿಕಾ ದಾಸ್ ಬಿಗ್‍ಮನೆಗೆ ಎಂಟ್ರಿ ಕೊಟ್ಟ ಮೊದಲ ಎರಡು ವಾರಗಳ ಕಾಲ ಯಾವುದೇ ಸ್ಪರ್ಧಿಯ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ನಂತರ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಮಾಡುತ್ತಾ, ಮಾಡುತ್ತಾ ಮನೆಯ ಸದಸ್ಯರ ಜೊತೆ ಚೆನ್ನಾಗಿ ಮಾತನಾಡಲು ಶುರು ಮಾಡಿದ್ದಾರೆ. ದೀಪಿಕಾ ಯಾವುದೇ ಗೇಮ್ ಬಂದರೂ ತುಂಬಾ ಚೆನ್ನಾಗಿ ಆಟವಾಡುತ್ತಿದ್ದರು. ಆದರೆ ಸೋಮವಾರದ ಸಂಚಿಕೆಯಲ್ಲಿ ದೀಪಿಕಾ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ.

    ಹೌದು. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಪ್ರಿಯಾಂಕಾ, ದೀಪಿಕಾ ಮತ್ತು ಚಂದನ್ ಆಚಾರ್ ಮೂವರಿಗೆ ಬಿಗ್‍ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಟಾಸ್ಕಿನಲ್ಲಿ ಪ್ರಿಯಾಂಕಾ ವಿಜೇತರಾಗಿದರು. ಕ್ಯಾಪ್ಟನ್ ಆದವರಿಗೆ ಅವರ ಮನೆಯವರಿಂದ ಬಿಗ್‍ಬಾಸ್ ಧ್ವನಿ ಕೇಳಿಸುತ್ತಾರೆ. ಅದೇ ರೀತಿ ಪ್ರಿಯಾಂಕಾ ಅವರ ಅಮ್ಮ ಮಾತಾಡಿದ್ದಾರೆ.

    ಇತ್ತ ಟಾಸ್ಕ್ ಬಗ್ಗೆ ದೀಪಿಕಾ, ಕಿಶನ್ ಮಾತಾಡುತ್ತಿದ್ದರು. ಆಗ ದೀಪಿಕಾ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ನಂತರ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ. ಆಗ ಪ್ರಿಯಾಂಕಾ ಮತ್ತು ಕಿಶನ್ ಸಮಾಧಾನ ಮಾಡಿದ್ದಾರೆ. ಆದರೂ ದೀಪಿಕಾ, ಅಮ್ಮನನ್ನು ನಾನು ಮರೆಯುತ್ತಿದ್ದೇನೆ ಎಂದು ಪ್ರಿಯಾಂಕಾರನ್ನು ತಬ್ಬಿಕೊಂಡು ಜೋರಾಗಿ ಕಣ್ಣೀರು ಹಾಕಿದ್ದಾರೆ.

  • ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ತುಂಬಾ ಖುಷಿ ತಂದಿದೆ: ಸುದೀಪ್

    ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ತುಂಬಾ ಖುಷಿ ತಂದಿದೆ: ಸುದೀಪ್

    ಬೆಂಗಳೂರು: ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕನ್ನಡ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಹೌದು…ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ನಟ ಸಲ್ಮಾನ್ ಖಾನ್ ಕನ್ನಡ ಬಿಗ್‍ಬಾಸ್ ಶೋನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    “ಬಿಗ್‍ಬಾಸ್ ವೇದಿಕೆಯಿಂದ ಸಲ್ಮಾನ್ ಖಾನ್ ಸರ್ ಅವರನ್ನು ಸಂಪರ್ಕಿಸಲಾಗಿತ್ತು. ನಿಜಕ್ಕೂ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ಕನ್ನಡ ಬಿಗ್‍ಬಾಸ್‍ಗೆ ಇದೇ ಮೊದಲ ಬಾರಿಗೆ ವಿಡಿಯೋ ಕಾಲ್ ಬಂದಿತ್ತು. ಅದರಲ್ಲೂ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿ ತಂದಿದೆ. ‘ದಬಾಂಗ್3’ ಸಿನಿಮಾ ಯಾವಾಗಲು ನನಗೆ ಬಹಳ ವಿಶೇಷವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ಜೊತೆಗೆ ಪ್ರಭುದೇವ, ಸೋನಾಕ್ಷಿ ಸಿನ್ಹಾ ಕೂಡ ವಿಡಿಯೋ ಕಾಲ್ ಮೂಲಕ ಕನ್ನಡ ಬಿಗ್‍ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಸುದೀಪ್ ಬಳಿ ಕನ್ನಡವನ್ನು ಹೇಳಿಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಸುದೀಪ್ ಅವರನ್ನು ಹೊಗಳಿದ್ದಾರೆ.

    ಸಲ್ಮಾನ್ ಖಾನ್ ಮತ್ತು ಸುದೀಪ್ ‘ದಬಾಂಗ್3’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ಮುಂದೆ ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಿಗ್‍ಬಾಸ್ ವೇದಿಕೆಯ ಮೇಲೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರಭುದೇವ ಅವರು ನಿರ್ದೇಶನ ಮಾಡಿದ್ದು, ಇದೇ ಡಿಸೆಂಬರ್ 20 ರಂದು ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

  • ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಾಳುಗಳ ಸಂಭಾವ್ಯ ಪಟ್ಟಿ ಲಭ್ಯವಾಗಿದೆ. ಇದೇ ಭಾನುವಾರ ಬಿಗ್ ಬಾಸ್ ಕಾರ್ಯಕ್ರಮ ಶುಭ ಆರಂಭಗೊಳ್ಳಲಿದೆ.

    ಈ ಬಾರಿ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ. ಕಳೆದ ಸೀಸನ್ ರೀತಿಯಲ್ಲಿಯೇ ಈ ಬಾರಿಯೂ ಗಣ್ಯರು ಮತ್ತು ಶ್ರೀಸಾಮನ್ಯರ ಕೊಲಾಬರೇಷನ್ ಇರಲಿದೆ. ಸಿನಿಮಾ ಕ್ಷೇತ್ರದಿಂದ ಇಬ್ಬರು ಗ್ಲ್ಯಾಮರಸ್ ನಟಿಯರ ಹೆಸರು ಕೇಳಿಬರುತ್ತಿದ್ದು, ನಟಿ ಸುಮನ್ ರಂಗನಾಥನ್, ಶುಭಾ ಪುಂಜಾ, ನಟ ಅನಿರುದ್ಧ್ ಮತ್ತು ಕಿರಿಕ್ ಪಾರ್ಟಿಯ ಚಂದನ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ.

    ಮನರಂಜನೆ ಆಧಾರದ ಮೇಲೆ ಬೇರೆ ಬೇರೆ ವಲಯಗಳಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಿನಿಮಾ, ಕಿರುತೆರೆ, ಸಂಗೀತ, ಮಾಧ್ಯಮ, ಶ್ರೀಸಾಮಾನ್ಯ ಮತ್ತು ವಿವಾದದಿಂದ ಹೆಸರು ಮಾಡಿದ್ದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಂಗೀತಗಾರ ನವೀನ್ ಸಜ್ಜು, ಚನ್ನಪ್ಪ ಮತ್ತು ತುಳಿಸಿ ಪ್ರಸಾದ್ ಹೋಗುವ ಸಾಧ್ಯತೆ ಇದೆ.

    ಈ ಬಾರಿ ಸಂಭಾವ್ಯ ಪಟ್ಟಿಯಲ್ಲಿ ಹೆಚ್ಚಾಗಿ ಕಿರುತೆರೆ ಕಲಾವಿದರೇ ಕಾಣಿಸಿಕೊಳ್ಳುತ್ತಿದ್ದಾರೆ. ಕುರಿ ಪ್ರತಾಪ್ , ಶಿವರಾಜ್ ಕೆ.ಆರ್ ಪೇಟೆ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ, ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಂಜನಿ ಜೊತೆಗೆ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿಬರುತ್ತಿದೆ.

    ಎಂದಿನಂತೆ ಕಿಚ್ಚ ಸುದೀಪ್ ನಿರುಪಣೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರಲಿದೆ. ಹೊಸದಾಗಿ ನಿರ್ಮಾಣವಾದ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಒಟ್ಟು 18 ಸ್ಪರ್ಧಿಗಳು ತುದಿಕಾಲಲ್ಲಿ ಕುಳಿತಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv