Tag: bigg ott kannada

  • ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಶ್ರೀನಿವಾಸ್ ಗೌಡ

    ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಓಟಿಟಿ ಕನ್ನಡ ಇದೀಗ 27ನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಚಾರಗಳಿಂದ ದೊಡ್ಮನೆ ಹೈಲೈಟ್ ಆಗಿದೆ. ಇದೀಗ ಹಬ್ಬದ ಹ್ಯಾಂಗೋವರ್‌ನಿಂದ ಹೊರಬಂದಿರುವ ಸೋನು ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ತಾವು ಸ್ಕೂಲಲ್ಲಿ ಇದ್ದಾಗ ಕಳ್ಳತನ ಮಾಡುತ್ತಿದ್ದೆ ಎಂದು ಸೋನು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದಾರೆ.

    ದೊಡ್ಮನೆಯಲ್ಲಿ ಗೌರಿ ಮತ್ತು ಗಣೇಶ ಹಬ್ಬವನ್ನ ಬಿಗ್ ಬಾಸ್ ಮನೆ ಮಂದಿ ಅದ್ದೂರಿಯಾಗಿ ಆಚರಿಸಿದ್ದರು. ಸದ್ಯ ಈ ಹಬ್ಬದ ಹ್ಯಾಂಗೋವರ್‌ನಿಂದ ಹೊರಬಂದಿರುವ ಸೋನು, ಬಳಸಿರುವ ಆಭರಣವನ್ನು ಎತ್ತಿಡಲು ಮುಂದಾಗಿದ್ದರು. ಈ ವೇಳೆ ತಮ್ಮ ಜೀವನದ ಇಂಟ್ರೆಸ್ಟಿಂಗ್ ವಿಚಾರವೊಂದನ್ನ ಸೋನು ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ನಾನು ಜಾತ್ರೆಗೆ ಹೋದಾಗ ಕದಿಯುತ್ತಿದ್ದೆ. ಸುಮ್ಮನೆ ಹೇಳಿದ್ದೀನಿ ನಾನು ಕದಿಯುತ್ತಿರಲಿಲ್ಲ. ಈ ವೇಳೆ ಸೋಮಣ್ಣ ಜಾತ್ರೆಯಲ್ಲಿ ಕದಿಯುತ್ತಿದ್ರಾ ನೀವು? ಸುಮ್ಮನೆ ಸುಮ್ಮನೆ ಈ ರೀತಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಎಲ್ಲೂ ಕದ್ದಿರುತ್ತಾರೆ. ಪೆನ್ಸಿಲ್ ಕದಿಯೋದು ಎಲ್ಲಾ. ನೀವೂ ಕದ್ದಿರುತ್ತೀರಾ ಅಲ್ವಾ ಎಂದು ಸೋನು, ಚೈತ್ರಾ ಅವರನ್ನ ಕೇಳಿದ್ದಾರೆ. ನಾನು ಯಾಕೆ ಕದಿಯಲಿ? ಇವಳು ಕದಿಯೋದು ಆಮೇಲೆ ಎಲ್ಲರಿಗೂ ಹೇಳ್ಕೊಂಡು ಬರೋದು ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ. ಸ್ಕೂಲ್‌ನಲ್ಲಿ ಫ್ರೆಂಡ್ಸ್ ಬಾಕ್ಸ್‌ನಲ್ಲಿ ನಾನು ರಬರ್ ಕದಿಯುತ್ತಿದ್ದೆ, ಹಲ್ಲಲ್ಲಿ ರಬರ್‌ನ ಜಾಸ್ತಿ ಕಚುತ್ತಿದ್ದೆ ಆಮೇಲೆ ಫ್ರೆಂಡ್ಸ್ ಹೊಸದು ತಂದಾಗ ನಾನು ಮನೆಗೆ ಎತ್ಕೊಂಡು ಹೋಗುತ್ತಿದ್ದೆ ಎಂದು ಸೋನು ತಮ್ಮ ಶಾಲಾ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ.

    ಸೋನು ಗೌಡ ತಮ್ಮ ಸ್ಕೂಲ್ ದಿನಗಳನ್ನು ನೆನಪಿಸಿಕೊಳ್ಳುವಾಗ ಸೋಮಣ್ಣ ಕೂಡ ಕಳ್ಳತನ ಮಾಡಿರುವ ಘಟನೆಯನ್ನು ವಿವರಿಸುತ್ತಾರೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಒಂದು ಗಿಫ್ಟ್ ಅಂಗಡಿ ಇತ್ತು ಅಲ್ಲಿ ಸಣ್ಣ ಸಣ್ಣ ಸೈಜ್‌ನಲ್ಲಿ ಗ್ರೀಟಿಂಗ್ ಕಾರ್ಡ್‌ಗಳು ಬರುತ್ತಿತ್ತು. ಆಗ ನನ್ನ ಕೈಯಲ್ಲಿ ಕಮಾಯಿ ಇರಲಿಲ್ಲ ಅದಿಕ್ಕೆ ಕಳ್ಳತನ ಮಾಡಿದ್ದೆ ಎಂದು ಸೋಮಣ್ಣ ಕೂಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ

    ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಮನೆಯ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದೊಡ್ಮನೆಯಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ರೂಪೇಶ್ ಇದೀಗ ಬಿಗ್ ಬಾಸ್ ಓಟಿಟಿಯಲ್ಲಿ ಕೊನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ, ಗಾಯನದ ಮೂಲಕ ಮನರಂಜಿಸಿರುವ ರೂಪೇಶ್ ಶೆಟ್ಟಿ, ದೊಡ್ಮನೆಯ ಕಡೆಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಗಿರುವ ರೂಪೇಶ್ ಮುಂದಿನ ವಾರದ ನಾಮಿನೇಷನ್‌ನಿಂದ ಕೂಡ ಬಚಾವ್ ಆಗಿದ್ದಾರೆ. ನಾಯಕ ಆಗಿರುವವರಿಗೆ ನಾಮಿನೇಟ್ ಮಾಡುವಂತೆ ಇಲ್ಲ. ಈ ಮೂಲಕ ಒಂದು ವಾರಗಳ ಕಾಲ ರೂಪೇಶ್ ಸೇಫ್ ಆಗಿದ್ದಾರೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್ ಘೋಷಿಸಿದ ರಶ್ಮಿಕಾ ಮಂದಣ್ಣ

    ಇನ್ನು ಎರಡು ವಾರ ಮಾತ್ರ ಬಿಗ್ ಬಾಸ್ ಓಟಿಟಿ ಇರಲಿದೆ. ಕೊನೆಯ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಇರುವುದಿಲ್ಲ. ಆಗ ಯಾವುದೇ ಟಾಸ್ಕ್ ಇರುವುದಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಮುಗಿಯುವವರೆಗೂ ಕೊನೆಯ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಹಾಗಾಗಿ ಮನೆಯ ಕಡೆಯ ಕ್ಯಾಪ್ಟನ್ ಆಗಿ ರೂಪೇಶ್ ಆಯ್ಕೆಯಾಗಿದ್ದಾರೆ.

    ಇನ್ನು ಮಹಿಳಾ ಸ್ವರ್ಧಿಗಳು ಕ್ಯಾಪ್ಟನ್ ಆಗಲೇ ಇಲ್ಲ. ಮೊದಲ ವಾರದ ಕ್ಯಾಪ್ಟನ್ ಆಗಿ ಅರ್ಜುನ್ ರಮೇಶ್, ಎರಡನೇ ವಾರ ಜಶ್ವಂತ್ ಬೋಪಣ್ಣ, ಮೂರನೇ ವಾರ ಸೋಮಣ್ಣ ಮಾಚಿಮಾಡ, ಕೊನೆಯ ವಾರದ ನಾಯಕನಾಗಿ ರೂಪೇಶ್ ಸೆಲೆಕ್ಟ್ ಆಗಿದ್ದಾರೆ.‌ ಇನ್ನು ಯಾರಿಗೆ ಬಿಗ್‌ ಬಾಸ್‌ ಓಟಿಟಿ ಗೆಲುವಿನ ಪಟ್ಟ ಸಿಗಲಿದೆ ಎಂಬುದನ್ನ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]