Tag: Bigg Boss Winner

  • ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    `ಬಿಗ್ ಬಾಸ್’ (Bigg Boss) ಖ್ಯಾತಿಯ ಸಾನ್ಯ ಅಯ್ಯರ್, (Sanya Iyer) ತಮ್ಮ ಸಿನಿಮಾಗಳ ವಿಚಾರಕ್ಕಿಂತ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಬಾರಿ ಸದ್ದು ಮಾಡ್ತಿದ್ದಾರೆ. ಸಾನ್ಯ ಮತ್ತು ರೂಪೇಶ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

    ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಹೈಲೈಟ್ ಆಗಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಕೂಡ ಹೊರಹೊಮ್ಮಿದ್ದರು. ಈ ಶೋ ಬಳಿಕವೂ ಸಾನ್ಯ ಮತ್ತು ರೂಪೇಶ್ ಸ್ನೇಹ ಮುಂದುವರೆದಿದೆ. ಹೀಗಿರುವಾಗ ಸಾನ್ಯ, ರೂಪೇಶ್ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ

    ಕರ್ನಾಟಕ ಕರಾವಳಿ ಭಾಗದ ವಿಶೇಷವಾಗಿ ಮಂಗಳೂರು, ದಕ್ಷಿಣ ಕನ್ನಡ ಭಾಗದಲ್ಲಿ ಶೆಟ್ಟಿ ಸಂಪ್ರದಾಯದಲ್ಲಿ (Shetty Ritual) ವಿವಾಹಿತ ಮಹಿಳೆಯರು ಈ ಉಂಗುರ ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹವಾಗಿರೋ ಸೂಚನೆ ಕೊಡುವ ಆಭರಣ ಇದೀಗ ಸಾನ್ಯ ಅಯ್ಯರ್ ಬೆರಳಿನಲ್ಲಿದೆ.

    ಈಗ ಸಾನ್ಯಾ ಅವರ ಬೆರಳಲ್ಲಿ ಈ ಉಂಗುರ ಕಾಣಿಸಿಕೊಂಡಿದ್ದು, ನಟಿ ಕದ್ದುಮುಚ್ಚಿ ಮದುವೆಯಾಗಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಸ್ನೇಹವೇ ಈ ಎಲ್ಲಾ ಸಂಶಯಗಳಿಗೆ ಕಾರಣವಾಗಿದೆ. ಸಾನ್ಯ, ರೂಪೇಶ್ ಇಬ್ಬರು ಒಬ್ಬರನೊಬ್ಬರು ಇಷ್ಟಪಡುತ್ತಿರುವ ವಿಚಾರ ನೇರವಾಗಿ ಅಲ್ಲದೇ ಇದ್ದರು. ಪರೋಕ್ಷವಾಗಿ ಬಿಗ್ ಬಾಸ್ ಮನೆಯಲ್ಲಿ (Bigg Boss House) ತಿಳಿಸಿದ್ದರು.

    ಫೋಟೋಶೂಟ್‌ನಲ್ಲಿ ಸಾನ್ಯ, ಶೆಟ್ಟಿ ಸಂಪ್ರದಾಯದ ಉಂಗುರ ಧರಿಸಿರುವುದು ಹಲವು ವದಂತಿಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಈ ಉಂಗುರವನ್ನ ಫ್ಯಾಷನ್‌ಗಾಗಿಯೂ ಬಳಸುತ್ತಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ, ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ

    ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ

    ಹಿಂದಿ ಕಿರುತೆರೆಯ `ಬಿಗ್ ಬಾಸ್’ 12ರ (Bigg Boss Hindi 12) ವಿನ್ನರ್ ದೀಪಿಕಾ ಕಾಕರ್  (Deepika Kakar) ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೀಪಿಕಾ ಮತ್ತು ನಟ ಶೋಯೆಬ್ ಇಬ್ರಾಹಿಂ (Shoaib Ibrahim) ದಂಪತಿ ತಾವು ಮೊದಲ ಮಗುವಿನ (First Child) ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ, ಪಾಪಾರಾಜಿಗಳಿಗೆ ಸುನೀಲ್ ಶೆಟ್ಟಿ ಅಭಯ

     

    View this post on Instagram

     

    A post shared by Dipika (@ms.dipika)

    ಸಾಕಷ್ಟು ಸೀರಿಯಲ್‌ಗಳ ಮೂಲಕ ಹಿಂದಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಟಿ ದೀಪಿಕಾ ಕಾಕರ್ ಬಿಗ್ ಬಾಸ್ ಸೀಸನ್ 12ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇನ್ನೂ ಸೀರಿಯಲ್‌ವೊಂದರಲ್ಲಿ ದೀಪಿಕಾ ಮತ್ತು ಶೋಯೆಬ್ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರಿಗೂ (Love) ಪ್ರೇಮಾಂಕುರವಾಗಿತ್ತು. ಬಳಿಕ  2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

     

    View this post on Instagram

     

    A post shared by Shoaib Ibrahim (@shoaib2087)

    ಇದೀಗ ದೀಪಿಕಾ ಮತ್ತು ಶೋಯೆಬ್ ಇಬ್ರಾಹಿಂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ (Pregnancy News) ಸಿಹಿಸುದ್ದಿಯನ್ನು ವಿಶೇಷ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

     

    View this post on Instagram

     

    A post shared by Dipika (@ms.dipika)

    ಇನ್ನೂ ಕಳೆದ ವರ್ಷ ದೀಪಿಕಾ ಅವರಿಗೆ ಗರ್ಭಪಾತವಾಗಿತ್ತು. ಹಾಗಾಗಿ ಈ ವರ್ಷ ಕೊಂಚ ಸಮಯ ತೆಗೆದುಕೊಂಡು, ಈ ಸಿಹಿಸುದ್ದಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್‌ ಬಾಸ್‌ನಲ್ಲಿ ಗೆದ್ದ ರೂಪೇಶ್‌ ಶೆಟ್ಟಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ..?

    ಬಿಗ್‌ ಬಾಸ್‌ನಲ್ಲಿ ಗೆದ್ದ ರೂಪೇಶ್‌ ಶೆಟ್ಟಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ..?

    ಬಿಗ್‌ ಬಾಸ್‌ನಲ್ಲಿ ಗೆದ್ದ ರೂಪೇಶ್‌ ಶೆಟ್ಟಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ..?

    Live TV
    [brid partner=56869869 player=32851 video=960834 autoplay=true]

     

  • ರೂಪೇಶ್‌ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯ ಅಯ್ಯರ್

    ರೂಪೇಶ್‌ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಪ್ರೇಮ ಪಕ್ಷಿಗಳಾಗಿ (Love Birds) ಸಾನ್ಯ, ರೂಪೇಶ್ ಶೆಟ್ಟಿ (Roopesh Shetty) ಹೈಲೈಟ್ ಆಗಿದ್ದರು. ಇದೀಗ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿ ಗೆಲುವಿಗೆ ಸಾನ್ಯ (Sanya Iyer) ಸಂಭ್ರಮಿಸಿದ್ದಾರೆ. ಹೊಸ ವರ್ಷಕ್ಕೆ ರೂಪೇಶ್ ಜೊತೆಗಿನ ಮೊದಲ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.

    ಒಟಿಟಿಯಿಂದ ಪರಿಚಿತರಾದ ರೂಪೇಶ್ ಮತ್ತು ಸಾನ್ಯ, ಟಿವಿ ಬಿಗ್ ಬಾಸ್‌ನಲ್ಲೂ ಜೊತೆಯಾಗಿದ್ದರು. ಸಾನ್ಯ ಎಲಿಮಿನೇಷನ್ (Elimination) ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟರ ಮಟ್ಟಿಗೆ ಇಬ್ಬರ ಫ್ರೆಂಡ್‌ಶಿಪ್ ಗಾಢವಾಗಿತ್ತು. ಈಗ ಬಿಗ್ ಬಾಸ್ ವಿನ್ನರ್ ಆಗಿ, ಟ್ರೋಫಿ ಮತ್ತು 60 ಲಕ್ಷ ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಾನ್ಯ ಫೋಟೋ ಶೇರ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    ಪಿಕ್ಚರ್ ಬ್ಲರ್ ಆಗಿದೆ ಆದರೆ ಖುಷಿ ನೂರಾಗಿದೆ. ಹೊಸ ವರ್ಷ ಬೆಸ್ಟ್ ಆಗಿ ಶುರುವಾಗಿದೆ. ನನ್ನ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ (Bigg Boss) ಗೆದ್ದಿದ್ದಾರೆ ಎಂದು ಸಾನ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಗೆಲುವಿನ ನಂತರ ತೆಗೆದ ತಮ್ಮ ಮೊದಲ ಫೋಟೋವನ್ನು ಸಾನ್ಯ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಇನ್ನೂ ನಟಿಯ ಪೋಸ್ಟ್ ನೋಡಿರುವ ನೆಟ್ಟಿಗರು, ಬೆಸ್ಟ್ ಜೋಡಿ, ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಆಟಕ್ಕೆ (Bigg Boss) ತೆರೆ ಬಿದ್ದಿದೆ. 100 ದಿನಗಳ ದೊಡ್ಮನೆ ಆಟ ಪೂರ್ಣಗೊಳಿಸಿ, ಕರಾವಳಿ ಕುವರ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಇದೀಗ ತಮ್ಮ ಗೆಲುವನ್ನ ಅಭಿಮಾನಿಗಳಿಗೆ ರೂಪೇಶ್ ಶೆಟ್ಟಿ (Roopesh Shetty) ಅರ್ಪಿಸಿದ್ದಾರೆ. ಗೆದ್ದ ನಂತರ ರೂಪೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ ಎಂದು ರೂಪೇಶ್ ಮಾತನಾಡಿದ್ದಾರೆ.

    ಒಟಿಟಿ ಮತ್ತು ಟಿವಿ ಬಿಗ್ ಬಾಸ್ (Bigg Boss) 142 ದಿನಗಳ ಆಟದಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿಜೇತರಾಗಿದ್ದಾರೆ. ಒಟಿಟಿಯಲ್ಲೂ ಟಾಪರ್ ಆಗಿದ್ದ ರೂಪೇಶ್ ಈಗ ಬಿಗ್ ಬಾಸ್‌ನಲ್ಲೂ ವಿನ್ನರ್ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್‌ ಅಡಿಗಗೆ ಸೆಡ್ಡು ಹೊಡೆದು ಬಿಗ್‌ ಬಾಸ್‌ ಟ್ರೋಫಿ ಗೆದ್ದಿದ್ದಾರೆ.

    ನಾನು ಕೊನೆಗೂ ವಿನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ಬಿಗ್ ಬಾಸ್ ಒಟಿಟಿ ಸೀಸನ್‌ನಿಂದ ಇಲ್ಲಿಯ ತನಕ 142 ದಿನಗಳ ಜರ್ನಿ ಎಂದರೆ ಸುಲಭ ಅಲ್ಲ. ನನಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್. ಈ ಪಯಣದಲ್ಲಿ ಏಳು-ಬೀಳುಗಳು ಇದ್ದವು. ಪ್ರತಿ ಕ್ಷಣದಲ್ಲೂ ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ರಿ ಎಂದು ವೋಟ್ ಮಾಡಿದ ಎಲ್ಲರಿಗೂ ರೂಪೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಾನು ಗೆದ್ದಿಲ್ಲ, ನೀವು ನನ್ನನ್ನು ಗೆಲ್ಲಿಸಿದ್ದೀರಿ ಎಂದು ಹೇಳಿದ್ದಾರೆ.

    ಜನರ ವೋಟ್‌ನಿಂದ (Vote) ನನಗೆ ಆತ್ಮವಿಶ್ವಾಸ ಸಿಕ್ತು. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರಿಗೂ ಇನ್ನೂ ಹೆಮ್ಮೆ ಆಗುವಂತೆ ಮಾಡುತ್ತೇನೆ. ನಾನು ಗೆದ್ದಿರುವುದಲ್ಲ, ನೀವು ಗೆಲ್ಲಿಸಿರುವುದು. ಈ ಗೆಲುವು ನಿಮ್ಮಿಂದ. ನಿಮ್ಮ ಪ್ರೀತಿಗೆ ಬರೀ ಮಾತುಗಳಲ್ಲಿ ಥ್ಯಾಂಕ್ಸ್ ಹೇಳಿದರೆ ಕಡಿಮೆ. ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿ ಯಾವಾಗಲೂ ಇರುತ್ತದೆ ಎಂದಿದ್ದಾರೆ ರೂಪೇಶ್ ಶೆಟ್ಟಿ. ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ಬಿಗ್ ಬಾಸ್ ವೇದಿಕೆಗೆ ಧನ್ಯವಾದಗಳು. ಸುದೀಪ್ (Sudeep) ಮತ್ತು ಪರಮೇಶ್ವರ್ ಗುಂಡ್ಕಲ್ ಅವರಿಗೆ ಥ್ಯಾಂಕ್ಸ್ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಆಕರ್ಷಕ ಟ್ರೋಫಿ ಜೊತೆಗೆ 60 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

    ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

    ಬೆಂಗಳೂರು: ಕಿರುತೆರೆ ನಟ ಮತ್ತು ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಫುಡ್ ಟ್ರಕ್ ನಡೆಸುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಫುಡ್ ಟ್ರಕ್ ಅನ್ನು ಕ್ಲೋಸ್ ಮಾಡಲಾಗಿತ್ತು. ಇದೀಗ ಹೊಸ ರೂಪ ನೀಡಿ ಮತ್ತೆ ಶೈನ್ ಫುಡ್ ಟ್ರಕ್ ಆರಂಭಿಸಿದ್ದಾರೆ.

    ಶೈನ್ ಶೆಟ್ಟಿ ‘ಗಲ್ಲಿ ಕಿಚನ್’ ಫುಡ್ ಟ್ರಕ್‍ಗೆ ಹೊಸ ರೂಪ ನೀಡಿ ಮತ್ತೆ ಪ್ರಾರಂಭಿಸಿದ್ದಾರೆ. ಹಳೆಯ ಗಲ್ಲಿ ಕಿಚನ್‍ಗಿಂತ ಹೊಸ ಗಲ್ಲಿ ಕಿಚನ್ ದೊಡ್ಡದಾಗಿದೆ. ಹೊಸ ರೂಪದಲ್ಲಿ ಬಂದಿರುವ ಗಲ್ಲಿ ಕಿಚನ್ ಅನ್ನು ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಮತ್ತೆ ಗಲ್ಲಿ ಕಿಚನ್ ಪ್ರಾರಂಭಿಸಿದ ಸಂತಸವನ್ನು ಶೈನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

    ಈ ಸಂಭ್ರಮದಲ್ಲಿ ಶೈನ್ ಶೆಟ್ಟಿ ಸ್ನೇಹಿತರು ಮತ್ತು ಬಿಗ್‍ಬಾಸ್ ಸ್ಪರ್ಧಿಗಳು ಭಾಗಿಯಾಗಿದ್ದರು. ಚಂದನ್ ಆಚಾರ್, ಚಂದನಾ ಅನಂತಕೃಷ್ಣ, ಚೈತ್ರ ವಾಸುದೇವನ್ ಸೇರಿದಂತೆ ಅನೇಕರು ಶೈನ್‍ ಶೆಟ್ಟಿ ಹೊಸ ಫುಡ್ ಟ್ರಕ್‍ಗೆ ಶುಭಹಾರೈಸಿದ್ದಾರೆ.

    ಶೈನ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಅವಕಾಶಗಳು ಸಿಗದಿದ್ದಾಗ ಟ್ರಕ್ ಫುಡ್ ಮೂಲಕ ಶೈನ್ ಜೀವನ ಸಾಗಿಸುತ್ತಿದ್ದರು. ನಂತರ ರಿಯಾಲಿಟಿ ಶೋ ಬಿಗ್‍ಬಾಸ್‍ಗೆ ಹೋಗಲು ಆಫರ್ ಬಂದಿತ್ತು. ಶೈನ್ ಬಿಗ್‍ಬಾಸ್ ಮನೆಗೆ ಹೋಗಿದ್ದಾಗ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು.

    ಮತ್ತೆ ಕೊರೊನಾ ಲಾಕ್‍ಡೌನ್‍ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ ‘ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಅಮ್ಮ ನನಗಿಂತ ತುಂಬಾ ಫೇಮಸ್ ಆಗಿದ್ದಾರೆ: ಶೈನ್

    ಅಮ್ಮ ನನಗಿಂತ ತುಂಬಾ ಫೇಮಸ್ ಆಗಿದ್ದಾರೆ: ಶೈನ್

    ಬೆಂಗಳೂರು: ನನಗಿಂತ ನಮ್ಮ ಅಮ್ಮ ತುಂಬಾ ಫೇಮಸ್ ಆಗಿದ್ದಾರೆ ಎಂದು ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್ ಶೆಟ್ಟಿ ಹೇಳಿದ್ದಾರೆ.

    ಮೊದಲಿಗೆ ಸಂದರ್ಶನದಲ್ಲಿ ಮಾತನಾಡುವಾಗ, ಈ ಕ್ಷಣ ನಾನು ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನ್ನ ಇಷ್ಟು ವರ್ಷ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಫಲ ಸಿಕ್ಕಿದೆ. ದೇವರು ಕೊಡಬೇಕಾದರೆ ಎಲ್ಲವನ್ನು ಒಂದೇ ಬಾರಿ ಕೊಡುತ್ತಾರೆ ಎನ್ನುವಂತ ಫೀಲಿಂಗ್‍ನಲ್ಲಿ ನಾನಿದ್ದೇನೆ ಎಂದು ಗೆಲುವಿನ ಅನುಭವವನ್ನು ಶೈನ್ ಹಂಚಿಕೊಂಡಿದ್ದಾರೆ.

    ಬಳಿಕ ಅಮ್ಮನ ಬಗ್ಗೆ ಮಾತನಾಡಿದ ಶೈನ್, ನಾನು ಬಿಗ್‍ಬಾಸ್ ಮನೆಯೊಳಗೆ ಇದ್ದಾಗ ಮಾಧ್ಯಮದವರು ನಮ್ಮ ಅಮ್ಮನನ್ನು ಸಂದರ್ಶನ ಮಾಡಿದ್ದಾರೆ. ಅಲ್ಲದೆ ಏನೋ ಉದ್ಘಾಟನೆ ಮಾಡಲು ಹೋಗಿದ್ದರಂತೆ. ನಾನು ಬಿಗ್‍ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ನನಗೆ ಗೊತ್ತಾಗಿದೆ ಎಂದರು.

    ನನಗಿಂತ ನಮ್ಮ ಅಮ್ಮ ತುಂಬಾ ಫೇಮಸ್ ಆಗಿಬಿಟ್ಟಿದ್ದಾರೆ. ಇದೇ ಫೇಮ್ ಮುಂಚಿತವಾಗಿ ಸಿಕ್ಕಿದಿದ್ದರೆ ನನ್ನ ಪೇಜ್‍ಗೆ ತುಂಬಾ ಫಾಲೋವರ್ಸ್ ಇರುತ್ತಿದ್ದರು. ನಿಜಕ್ಕೂ ಅಮ್ಮ ತುಂಬಾ ಸಂತೋಷದಿಂದ ಇದ್ದಾರೆ. ನಾನು ಹೊರಗಡೆ ಬಂದ ತಕ್ಷಣ ಅಮ್ಮ ತಬ್ಬಿಕೊಂಡರು. ಬೇರೆ ಏನು ಮಾತನಾಡಿಲ್ಲ ಎಂದರು.

    ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ತುಂಬು ಹೃದಯದ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಷ್ಟು ವರ್ಷದ ಪ್ರಯತ್ನಕ್ಕೆ, ಇಷ್ಟು ವರ್ಷದ ಛಲ ಇಟ್ಟುಕೊಂಡು ಮುಂದೆ ಬಂದಿದ್ದಕ್ಕೆ ಒಂದು ಸಾರ್ಥಕತೆಯನ್ನು ನೀವು ವೋಟ್ ಮಾಡುವ ಮೂಲಕ ನನಗೆ ನೀಡಿದ್ದೀರಿ. ದೇವರು ತುಂಬಾನೇ ಕಷ್ಟ, ನೋವು ಕೊಡುತ್ತಾನಂತೆ. ಆ ಕಷ್ಟಗಳನ್ನು ತಡೆದುಕೊಂಡು ಮುಂದೆ ಹೋದರೆ ನಮಗೆ ಗೆಲುವು ಸಿಗುತ್ತೆ ಎಂದು ಹೇಳುತ್ತಾರೆ. ಆ ಗೆಲುವು ನನಗೆ ಅಭಿಮಾನಿಗಳ ವೋಟ್‍ಗಳಿಂದ ಸಿಕ್ಕಿದೆ. ನನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಶೈನ್ ತಿಳಿಸಿದ್ದಾರೆ.