Tag: bigg boss telugu 8

  • ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಟಾಲಿವುಡ್‌ ಸೂಪರ್‌ ಸ್ಟಾರ್‌ ನಾಗಾರ್ಜುನ (Nagarjuna) ನಡೆಸಿಕೊಡುತ್ತಿದ್ದ ಬಿಗ್‌ ಬಾಸ್‌ ತೆಲುಗು ಸೀಸನ್‌ 8 (Bigg Boss Telugu 8) ಕ್ಕೆ ತೆರೆ ಬಿದ್ದಿದೆ. ಕರ್ನಾಟಕದ ಮೈಸೂರು ಮೂಲದ ನಿಖಿಲ್‌ ಮಲಿಯಕ್ಕಲ್‌ (Nikhil Maliyakkal) ಬಿಗ್‌ ಬಾಸ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

    ತೆಲುಗು ಟಿವಿ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ಕರ್ನಾಟಕ ಮೂಲದ ನಿಖಿಲ್‌, ಬಿಗ್‌ ಬಾಸ್‌ ಶೋ ಆರಂಭದ ಮೊದಲ ದಿನದಿಂದ ಮನೆಯಲ್ಲಿದ್ದರು. ಫೈನಲ್‌ನಲ್ಲಿ ಅವರು ಗೌತಮ್ ಕೃಷ್ಣ ಅವರನ್ನು ಸೋಲಿಸಿದ್ದಾರೆ. ಗೌತಮ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಈ ಸೀಸನ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಈಗ ರನ್ನರ್‌ ಅಪ್‌ ಆಗಿದ್ದಾರೆ. ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

    ರಿಯಾಲಿಟಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ನಟ ರಾಮ್‌ ಚರಣ್‌ ಆಗಮಿಸಿದ್ದರು. ವಿನ್ನರ್‌ ನಿಖಿಲ್‌ಗೆ ಬಿಗ್‌ ಬಾಸ್‌ ಟ್ರೋಫಿ, 55 ಲಕ್ಷ ರೂ. ನಗದು ಮತ್ತು ಮಾರುತಿ ಸುಜುಕಿ ಡಿಜೈರ್ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು.

    ಅಲ್ಲದೇ, ಹೆಚ್ಚುವರಿಯಾಗಿ ಶೋ ಸಮಯದಲ್ಲಿ ನಿಖಿಲ್‌ಗೆ ಸಂಭಾವನೆಯಾಗಿ ದಿನಕ್ಕೆ 32,143 ರೂ.ನಂತೆ ವಾರಕ್ಕೆ 2.25 ಲಕ್ಷ ರೂ. ಬಂದಿದೆ. ಇದನ್ನೂ ಓದಿ: ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ

    ನಿಖಿಲ್ ಮಳಿಯಕ್ಕಲ್ ಕರ್ನಾಟಕದ ಮೈಸೂರು ಮೂಲದವರು. ಅವರ ತಂದೆ ಶಶಿ ಅಲ್ವಿನ್ ಮತ್ತು ತಾಯಿ ಸುಲೇಖಾ ಮಲಿಯಕ್ಕಲ್. ನಿಖಿಲ್‌ಗೆ ದಿಶಾಂಕ್ ಮಳಿಯಕ್ಕಲ್ ಎಂಬ ಕಿರಿಯ ಸಹೋದರನಿದ್ದಾನೆ.

  • Bigg Boss ಸ್ಪರ್ಧಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    Bigg Boss ಸ್ಪರ್ಧಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮದಂತೆ ತೆಲುಗಿನ ಬಿಗ್‌ ಬಾಸ್‌ ಸೀಸನ್‌ 8ಕ್ಕೂ (Bigg Boss Telugu 8) ಅದ್ಧೂರಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ತೆಲುಗಿನ ಬಿಗ್ ಬಾಸ್ ಕುರಿತು ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಬಿಗ್ ಬಾಸ್‌ನಲ್ಲಿರುವಾಗಲೇ ಖ್ಯಾತ ಯೂಟ್ಯೂಬರ್ ಗಂಗವ್ವಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಮೊದಲ ಹಂತದ ಶೂಟಿಂಗ್ ಮುಗಿಸಿದ ಮಂಸೋರೆ

    60 ವರ್ಷ ದಾಟಿದರೂ ಯಾವ ಸ್ಪರ್ಧಿಗಳಿಗೂ ಕಮ್ಮಿಯಿಲ್ಲ ಎಂಬಂತೆ ಟಫ್ ಫೈಟ್ ಕೊಡುತ್ತಿದ್ದ ವೈಲ್ಡ್ ಕಾರ್ಡ್ ಎಂಟ್ರಿ ಗಂಗಮ್ಮಗೆ ಸೋಮವಾರ ರಾತ್ರಿ (ಅ.21) ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬಿದೆ. ಶೋನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಕೂಡಲೇ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.

     

    View this post on Instagram

     

    A post shared by Milkuri Gangavva (@gangavva)

    ಅಂದಹಾಗೆ, ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್‌ನಲ್ಲಿ ಹಾಸ್ಯ ಭರಿತ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ ಗಂಗವ್ವ ಈ ಹಿಂದೆ ‘ಬಿಗ್ ಬಾಸ್ ಸೀಸನ್ 4’ರಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಅರ್ಧಕ್ಕೆ ಶೋ ತೊರೆದಿದ್ದರು. ಇದೀಗ ಮತ್ತೆ ತೆಲುಗಿನ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಂಜಿಸುತ್ತಿದ್ದಾರೆ.

  • ತೆಲುಗಿನ ಬಿಗ್ ಬಾಸ್‌ನಲ್ಲಿ ಕನ್ನಡದ ಕಲರವ- ಅಮ್ಮ, ಮಗನ ಬಾಂಧವ್ಯ ಕಂಡು ವೀಕ್ಷಕರು ಭಾವುಕ

    ತೆಲುಗಿನ ಬಿಗ್ ಬಾಸ್‌ನಲ್ಲಿ ಕನ್ನಡದ ಕಲರವ- ಅಮ್ಮ, ಮಗನ ಬಾಂಧವ್ಯ ಕಂಡು ವೀಕ್ಷಕರು ಭಾವುಕ

    ತೆಲುಗಿನ ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Telugu 8)  ಕನ್ನಡದ ಕಲರವ ಕೇಳಿ ಬಂದಿದೆ. ಈ ಶೋನಲ್ಲಿ ಮೈಸೂರು ಮೂಲದ ಕನ್ನಡದ ನಟ ನಿಖಿಲ್ ಮಳಿಯಕ್ಕಲ್ (Nikhil Maliyakkal) ಅಧ್ಬುತವಾಗಿ ಆಟವಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿರುವ ಮಗ ನಿಖಿಲ್‌ಗೆ ತಾಯಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅಮ್ಮನ ಪತ್ರ ಕಂಡು ನಿಖಿಲ್ ಕಣ್ಣೀರಿಟ್ಟಿದ್ದಾರೆ.


    ಬಿಗ್ ಬಾಸ್‌ನಲ್ಲಿ ನಿಖಿಲ್ ಬೇಸರಕ್ಕೆ ಒಳಗಾಗಿ ನಾನು ನಿಮ್ಮನ್ನ ನೋಡದೇ ಇರುವುದಕ್ಕೆ ಆಗುತ್ತಿಲ್ಲ ಎಂದು ತಾಯಿಗೆ ಪತ್ರ ಬರೆದಿದ್ದರು. ಇದಕ್ಕಾಗಿ ಶೋನಲ್ಲಿ ತಾಯಿ ಬರೆದ ಪತ್ರವನ್ನು ಪ್ರಕಟಿಸಲಾಯಿತು. ನೀನು ಹೇಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್‌ನಲ್ಲಿದ್ದಾರೆ. ನೀನು ಆಡುತ್ತಿರುವುದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್ ಮಾಡುವುದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ ಎಂದು ಹೇಳಿದ್ದಾರೆ. ಈ ಪತ್ರವನ್ನು ಪ್ರೇರಣಾ ಓದಿ ಹೇಳಿದ್ದಾರೆ. ಅದನ್ನು ಕೇಳಿ ನಿಖಿಲ್ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ಈ ಶೋನಲ್ಲಿ ನಿಖಿಲ್ ಜೊತೆ ಕನ್ನಡದವರೇ ಆದ ಪ್ರೇರಣಾ ಕಂಬಂ, ಪೃಥ್ವಿರಾಜ್ ಶೆಟ್ಟಿ, ಯಶಮಿ ಗೌಡ ಕೂಡ ಭಾಗಿಯಾಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಈ ಪ್ರತಿಭೆಗಳು ಇದೀಗ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ.

  • ಭಾವಿ ಪತ್ನಿ ಜೊತೆ ಬಿಗ್ ಬಾಸ್‌ಗೆ ಬರಲಿದ್ದಾರೆ ಸಮಂತಾ ಮಾಜಿ ಪತಿ

    ಭಾವಿ ಪತ್ನಿ ಜೊತೆ ಬಿಗ್ ಬಾಸ್‌ಗೆ ಬರಲಿದ್ದಾರೆ ಸಮಂತಾ ಮಾಜಿ ಪತಿ

    ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೆ (Bigg Boss Telugu 8) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಶೋ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಭಾವಿ ಪತ್ನಿ ಶೋಭಿತಾ (Sobhita) ಜೊತೆ ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ (Nagachaitanya) ದೊಡ್ಮನೆಗೆ ಬರಲಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

    ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಈ ವಾರಾಂತ್ಯ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬರಲಿದ್ದಾರೆ. ವೇದಿಕೆ ಮೇಲೆ ಬಂದು ಹೋಸ್ಟ್ ನಾಗಾರ್ಜುನ ಜೊತೆ ಮಾತನಾಡಿ ತೆರಳುತ್ತಾರಾ? ಅಥವಾ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.

    ಇನ್ನೂ ಇದುವರೆಗೂ ನಾಗಚೈತನ್ಯ ಮತ್ತು ಶೋಭಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಬಿಗ್ ಬಾಸ್‌ಗೆ ಜೊತೆಯಾಗಿ ಬಂದರೆ ಟಿಆರ್‌ಪಿ ಕೂಡ ಹೆಚ್ಚುತ್ತದೆ. ಅಭಿಮಾನಿಗಳು ಕೂಡ ಅವರನ್ನು ನೋಡಲು ಶೋನತ್ತ ಆಸಕ್ತಿ ವಹಿಸುತ್ತಾರೆ.

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

    ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.

  • ಸೆಪ್ಟೆಂಬರ್‌ನಿಂದ ತೆಲುಗು ಬಿಗ್ ಬಾಸ್ ಶುರು- ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು

    ಸೆಪ್ಟೆಂಬರ್‌ನಿಂದ ತೆಲುಗು ಬಿಗ್ ಬಾಸ್ ಶುರು- ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಶುರುವಾಗಲು ದಿನಗಣನೆ ಆರಂಭವಾಗಿದೆ. ಇದರ ನಡುವೆ ತೆಲುಗಿನ ಬಿಗ್ ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೇ ಸೆಪ್ಟೆಂಬರ್‌ನಿಂದ ತೆಲುಗಿನ ಬಿಗ್ ಬಾಸ್ ಸೀಸನ್- 8 (Bigg Boss Telugu 8) ಶುರುವಾಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದರ ಜೊತೆ ಸಂಭಾವ್ಯರ ಪಟ್ಟಿಯಲ್ಲಿ ಅನೇಕರ ಹೆಸರು ಹರಿದಾಡುತ್ತಿದೆ. ಅದರಲ್ಲಿ ಇಬ್ಬರು ಕನ್ನಡತಿಯರ ಹೆಸರು ಇದೆ.

    ಇದೇ ಸೆ.8ರಂದು ಬಿಗ್ ಬಾಸ್ ತೆಲುಗಿಗೆ ಅದ್ಧೂರಿ ಚಾಲನೆ ಸಿಗಲಿದೆ. ಸಂಜೆ 6 ಗಂಟೆಯಿಂದ ಶೋ ಪ್ರಾರಂಭವಾಗಲಿದೆ. ನಾಗಾರ್ಜುನ ಅಕ್ಕಿನೇನಿ ಅವರ ಬಿಗ್‌ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಉದ್ಯಮಿ ಕಬೀರ್‌ ಜೊತೆಗಿನ ಡೇಟಿಂಗ್‌ ಸುದ್ದಿ ಸುಳ್ಳು ಎಂದ ಕೃತಿ ಸನೋನ್

    ಬಿಗ್ ಬಾಸ್ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ, ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಮೂಲತಃ ಕನ್ನಡದವರಾದ ಯಶ್ಮಿ ಗೌಡ (Yashmi Gowda), ತೇಜಸ್ವಿನಿ ಗೌಡ (Tejaswini Gowda) ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದರೆ, ನಂದಮೂರಿ ಕುಟುಂಬದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಚೈತನ್ಯ ಕೃಷ್ಣ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಅಧಿಕೃತ ಮಾಹಿತಿಗಾಗಿ ಸೆ.8ರವರೆಗೂ ಕಾದುನೋಡಬೇಕಿದೆ.