Tag: bigg boss telagu 7

  • ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ತೆಲುಗಿನ ಬಿಗ್ ಬಾಸ್‌ಗೆ (Bigg Boss Telugu 7) ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತೆ ಇದೆ. ನಾಗಾರ್ಜುನ ಅಕ್ಕಿನೇನಿ ನಿರೂಪಣೆಯಲ್ಲಿ ಶೋ ಮುನ್ನುಗ್ಗುತ್ತಿದೆ. ಇದೀಗ ತೆಲುಗಿನ ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಲರವ ಶುರುವಾಗಿದೆ. ಕನ್ನಡದ ಕಂಪು ತೆಲುಗು ವೇದಿಕೆಯಲ್ಲಿ ಪಸರಿಸುತ್ತಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ:ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ದರ್ಶನ್

    ಈ ಬಾರಿ ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಯೊಳಗೆ ಇರುವ ಸದಸ್ಯರನ್ನು ಮಾತನಾಡಿಸಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಶೋಭಾ ಅವರ ತಂದೆ ಮಗಳ ಜೊತೆ ಮಾತನಾಡಿದಾಗ, ಶೋಭಾ ಅವರು, ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಪ್ರಿಯಾಂಕಾ ಜೈನ್ (Priyanka Jain) ಜೊತೆ ಮಾತನಾಡಿ, ಅವರು ಕೂಡ ಕನ್ನಡದವರು ಎಂದರು. ಆಗ ಪ್ರಿಯಾಂಕಾ, ನಿಮ್ಮನ್ನು ನೋಡಿದರೆ ನನ್ನ ಅಪ್ಪನ ನೆನಪಾಗುತ್ತದೆ ಎಂದರು. ಬಳಿಕ ಶೋಭಾ ತಂದೆ ಎಲ್ಲರಿಗೂ ಶುಭಾಶಯ ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲುಗು ಬಿಗ್‌ಬಾಸ್‌ನಲ್ಲಿಯೂ ಕನ್ನಡ ಮಾತನಾಡಿದ್ದಕ್ಕೆ ಕನ್ನಡದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹದ್ದೇ ವೇದಿಕೆಯಾಗಿದ್ರು ಕನ್ನಡದ ಮರೆಯದ ನಟಿಮಣಿಯರಿಗೆ ಭೇಷ್‌ ಎಂದಿದ್ದಾರೆ ಫ್ಯಾನ್ಸ್.

    ಈ ಹಿಂದೆ ಶೋಭಾ ಶೆಟ್ಟಿ, ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದರು. ಶ್ರೀಲೀಲಾ ಅವರನ್ನು ಬಿಗ್‌ಬಾಸ್ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆಗ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದದರು. ಹೇಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದರು. ಕನ್ನಡದವರೊಬ್ಬರು ತೆಲುಗು ಬಿಗ್‌ಬಾಸ್ ಮನೆಯೊಳಗೆ ಇರುವುದನ್ನು ಕಂಡು ಶ್ರೀಲೀಲಾ ಕರ್ನಾಟಕ ಮೀಟ್ಸ್ ಕರ್ನಾಟಕ ಎಂದು ಖುಷಿಯಿಂದ ಮಾತನಾಡಿದ್ದರು.

    ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಶೋಭಾ ತನು ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್ 6 ವರ್ಷ ಪ್ರಸಾರ ಕಂಡಿತ್ತು. ಕಾವೇರಿ, ರುಕ್ಕು ಎಂಬ ಸೀರಿಯಲ್‌ನಲ್ಲಿ ನಟಿ ಅಭಿನಯಿಸಿದ್ದರು. ‘ಅಂಜನಿಪುತ್ರ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ತಂಗಿ ಪಾತ್ರದಲ್ಲಿ ಶೋಭಾ ನಟಿಸಿದ್ದರು.

  • Bigg Boss ವೇದಿಕೆಯಲ್ಲಿ ಬಾಳ ಸಂಗಾತಿಯ ಬಗ್ಗೆ ರಿವೀಲ್‌ ಮಾಡಿದ ‘ಅಗ್ನಿಸಾಕ್ಷಿ’ ನಟಿ

    Bigg Boss ವೇದಿಕೆಯಲ್ಲಿ ಬಾಳ ಸಂಗಾತಿಯ ಬಗ್ಗೆ ರಿವೀಲ್‌ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ ಸಮರ್ಥ ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಇದೀಗ ‘ಬಿಗ್ ಬಾಸ್’ (Bigg Boss) ವೇದಿಕೆಯಲ್ಲಿ ಪ್ರೀತಿಸಿದ ಹುಡುಗನ ಬಗ್ಗೆ ಶೋಭಾ ಬಾಯ್ಬಿಟ್ಟಿದ್ದಾರೆ.

    ವಾರಾಂತ್ಯದ ನಾಗಾರ್ಜುನ ಅಕ್ಕಿನೇನಿ ಅವರ ಪಂಚಾಯತಿಯಲ್ಲಿ ಶೋಭಾ ಶೆಟ್ಟಿ ತಾವು ಎಂಗೇಜ್ ಆಗಿರುವ ಹುಡುಗನ ಬಗ್ಗೆ ರಿವೀಲ್ ಮಾಡಿದ್ದಾರೆ. ಯಶವಂತ್ ರೆಡ್ಡಿ ಜೊತೆ ಕಳೆದ ಮೂರುವರೆ ವರ್ಷಗಳಿಂದ ಪ್ರೀತಿಸುತ್ತಿರೋದಾಗ ನಾಗಾರ್ಜುನ ಬಳಿ ಹೇಳಿಕೊಂಡಿದ್ದಾರೆ.

    ಶೋಭಾ ತಂದೆ ಮತ್ತು ಬಾಯ್‌ಫ್ರೆಂಡ್ ಯಶವಂತ್ ಕೂಡ ಎಂಟ್ರಿ ಕೊಟ್ಟು ಶೋಭಾಗೆ ಅಚ್ಚರಿ ಮೂಡಿಸಿದ್ದಾರೆ. ಇಬ್ಬರನ್ನೂ ನೋಡ್ತಿದ್ದಂತೆ ನಟಿ ಭಾವುಕರಾಗಿದ್ದಾರೆ. ಬಳಿಕ ಯಶವಂತ್‌ಗೆ ಮೊದಲು ಪ್ರಪೋಸ್ ಮಾಡಿದ್ದೇ ನಾನು ಎಂದು ಶೋಭಾ ಹೇಳಿದ್ದಾರೆ. ನಿರೂಪಕ ನಾಗಾರ್ಜುನ ಕೂಡ ಹೊಸ ಜೋಡಿಗೆ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:‘ಟೈಗರ್ 3’ ಸಿನಿಮಾದ ಫಸ್ಟ್ ಡೇ ಕಲೆಕ್ಷನ್: ದಾಖಲೆ ಪುಡಿಪುಡಿ

    ಯಶವಂತ್ (Yashwanth) ಜೊತೆ ‘ಬುಜ್ಜಿ ಬಂಗಾರಮ್’ ಎಂಬ ಪ್ರಾಜೆಕ್ಟ್‌ನಲ್ಲಿ ಶೋಭಾ ಶೆಟ್ಟಿ ಜೊತೆಯಾಗಿ ನಟಿಸಿದ್ದರು. ಇದೀಗ ಮೂರುವರೆ ವರ್ಷದ ನಂತರ ಮೊದಲ ಬಾರಿಗೆ ಬಿಗ್ ಬಾಸ್ ಶೋನಲ್ಲಿ ಲವ್ ಬಗ್ಗೆ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಶುಭಹಾರೈಸಿದ್ದಾರೆ.

    ತೆಲುಗು ಬಿಗ್ ಬಾಸ್‌ನಲ್ಲಿ(Bigg Boss Telagu 7) ಖಡಕ್ ಸ್ಪರ್ಧಿಯಾಗಿರೋ ಶೋಭಾ ಆಟ ನೋಡಿ ನಮ್ಮ ಕನ್ನಡದ ಹುಡುಗಿ ಕನ್ನಡದ ‘ಬಿಗ್ ಬಾಸ್‌’ನಲ್ಲಿರಬೇಕಿತ್ತು ಎಂದು ಸಖತ್ ಟ್ರೋಲ್ ಕೂಡ ಮಾಡಿದ್ದಾರೆ.

  • Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

    Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

    ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದಾರೆ. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಬ್ಲೌಸ್ ಧರಿಸದೇ ಸೀರೆಯುಟ್ಟ ನಿಹಾರಿಕಾ

    ತೆಲುಗು ಬಿಗ್ ಬಾಸ್ ಸೀಸನ್-7 ಇದೀಗ 60 ದಿನಗಳನ್ನ ಪೂರೈಸಿದೆ. ಬೆಂಗಳೂರಿನ ಬೆಡಗಿ ಶೋಭಾ, ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡ್ತಿದ್ದಾರೆ. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದಾರೆ. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ ಬಿಗ್ ಬಾಸ್ ಶೋನಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಖತ್‌ ಟ್ರೋಲ್‌ (Troll) ಕೂಡ ಆಗ್ತಿದೆ.

    ಎದುರಾಳಿಯ ಮಾತಿಗೆ ಕೌಂಟರ್ ಕೊಡೋ ಶೋಭಾ ಆಟಕ್ಕೆ ನೋಡಿ‌, ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಕನ್ನಡದ ಶೋನಲ್ಲಿ ಶೋಭಾ ಇಲ್ಲ ಅಂತ ಬೇಸರ ಮಾಡಿಕೊಳ್ಳಬೇಡಿ. ಕನ್ನಡದಲ್ಲಿ ಸಂಗೀತಾ- ತನಿಷಾ ಮಾಸ್ ಆಗಿ ಆಟ ಆಡ್ತಿದ್ದಾರೆ. ಶೋಭಾರಂತಯೇ ಇಲ್ಲಿಯೂ ಕೂಡ ಠಕ್ಕರ್ ಕೊಡುವವರು ಇದ್ದಾರೆ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.

    ಒಟ್ನಲ್ಲಿ ಕನ್ನಡದ ‘ಬಿಗ್ ಬಾಸ್’ ಜೊತೆ ಪರಭಾಷೆಯ ಬಿಗ್ ಬಾಸ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ

    ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ಅಗ್ನಿಸಾಕ್ಷಿ, ರುಕ್ಕು ಸೀರಿಯಲ್‌ನಲ್ಲಿ ನಟಿಸಿದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ (Bigg Boss House) ಕಾಲಿಟ್ಟಿದ್ದಾರೆ. ತೆಲುಗು ಸೀರಿಯಲ್‌ಗಳ ಮೂಲಕ ಗುರುತಿಸಿಕೊಂಡಿದ್ದ ನಟಿ, ಈಗ ನಾಗಾರ್ಜುನ (Nagarjuna) ನಿರೂಪಣೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ತೆಲುಗಿನಲ್ಲಿ ದೊಡ್ಮನೆ ಆಟ ಆರಂಭವಾಗಿದೆ. ಬಿಗ್ ಬಾಸ್ ಸೀಸನ್ 7ಗೆ (Bigg Boss Telugu 7) ಭಾನುವಾರ (ಸೆ.3) ಚಾಲನೆ ಸಿಕ್ಕಿದೆ. ಶಕೀಲಾ, ಕಿರಣ್ ರಾಥೋಡ್ ಇರುವ ಈ ಸೀಸನ್‌ನಲ್ಲಿ ಕನ್ನಡದ ಯುವ ನಟಿ ಶೋಭಾ ಶೆಟ್ಟಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಗ್ಲ್ಯಾಮರ್ ತುಂಬಲು ಶೋಭಾ ಕೂಡ ಸಾಥ್ ನೀಡಿದ್ದಾರೆ.

    ಈ ಶೋ ಶುರುವಾಗುವ ಮುನ್ನವೇ ಶೋಭಾ ಶೆಟ್ಟಿ ಮನೆಗೆ ಹೋಗುತ್ತಾರೆ ಎಂಬ ಅಂತೆ ಕಂತೆ ಸುದ್ದಿಯಿತ್ತು. ಈಗ ಸ್ಪಷ್ಟನೆ ಸಿಕ್ಕಿದೆ. ತೆಲುಗು ಪ್ರೇಕ್ಷಕರನ್ನ ಕನ್ನಡದ ನಟಿ ಗೆದ್ದು ಬೀಗಲಿ ಎಂಬುದೇ ಕನ್ನಡ ಸಿನಿ ಪ್ರೇಮಿಗಳ ಆಶಯ.

    ಅಗ್ನಿಸಾಕ್ಷಿ (Agnisakshi) ಸೀರಿಯಲ್‌ನಲ್ಲಿ ನಾಯಕಿ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್ ಸನ್ನಿಧಿ ಸಹೋದರಿ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ನಟಿಸಿದ್ದರು. ತೆಲುಗು ಕಿರುತೆರೆಯಲ್ಲಿ ನಟಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ಬಿಗ್ ಬಾಸ್‌ಗೆ ಕನ್ನಡದ ನಟಿ ಕಿರಣ್ ರಾಥೋಡ್

    ತೆಲುಗಿನ ಬಿಗ್ ಬಾಸ್‌ಗೆ ಕನ್ನಡದ ನಟಿ ಕಿರಣ್ ರಾಥೋಡ್

    ನ್ನಡದ ಕ್ಷಣ ಕ್ಷಣ, ಗನ್, ಮಾಣಿಕ್ಯ (Maanikya) ಸಿನಿಮಾಗಳ ಮೂಲಕ ಪರಿಚಿತರಾದ ನಟಿ ಕಿರಣ್ ರಾಥೋಡ್ (Kiran Rathod) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ದೊಡ್ಮನೆ ಆಟಕ್ಕೆ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಿಗ್ ಬಾಸ್ ಮನೆಗೆ (Bigg Boss House) ಹಾಟ್ ನಟಿ ಕಿರಣ್ ಎಂಟ್ರಿ ಕೊಟ್ಟಿದ್ದಾರೆ.

    ತೆಲುಗಿನ ಎವರ್ ಗ್ರೀನ್ ನಟ ನಾಗಾರ್ಜುನ (Nagarjuna) ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 7ಕ್ಕೆ ಸೆ.3ರಂದು ಚಾಲನೆ ಸಿಕ್ಕಿದೆ. ಕನ್ನಡದ ಮಾಣಿಕ್ಯ ಚಿತ್ರದ ನಟಿ ಕಿರಣ್ ಬಿಗ್ ಬಾಸ್‌ನಲ್ಲಿದ್ದಾರೆ. ಜೊತೆಗೆ ಶಕೀಲಾ, ಅಗ್ನಿಸಾಕ್ಷಿ ನಟಿ ಶೋಭಾ ಶೆಟ್ಟಿ, ಪ್ರಿಯಾಂಕ ಜೈನ್, ಶಿವಾಜಿ, ದಾಮಿನಿ, ಸಂದೀಪ್, ನಟ ಗೌತಮ್ ಕೃಷ್ಣ ಸೇರಿದಂತೆ ಹಲವರು ಭಾಗಿದ್ದಾರೆ.

    ಈ ಸೀಸನ್  ಎಲ್ಲವೂ ಉಲ್ಟಾ ಪಲ್ಟಾ ನೀವು ಅಂದುಕೊಂಡಂತೆ ಇರಲ್ಲ ಅಂತಾ ನಾಗಾರ್ಜುನ ಈಗಾಗಲೇ ಕುತೂಹಲ ಕೆರಳಿಸಿದ್ದಾರೆ. ಟಾಸ್ಕ್, ಮನೆಯ ಮಾದರಿ, ಎಲ್ಲವೂ ಕೊಂಚ ಡಿಫರೆಂಟ್ ಆಗಿಯೇ ಇರಲಿದೆ ಎಂದು ಸುಳಿವು ಈಗಾಗಲೇ ನೀಡಿದ್ದಾರೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ನಿನ್ನೆ (ಸೆ.3) ಎಪಿಸೋಡ್ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಖುಷಿ (Kushi) ಪ್ರಚಾರ ಕಾರ್ಯಕ್ಕೆ ವಿಜಯ್ ದೇವರಕೊಂಡ(Vijay Devarakonda) ಬಂದಿದ್ದರು. ಆಗ ವಿಜಯ್ ಬಳಿ ಸಮಂತಾ ಎಲ್ಲಿ ಎಂದು ನಾಗಾರ್ಜುನ ಕೇಳಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಇದೇ ಸೆಪ್ಟೆಂಬರ್‌ನಿಂದ ಶೋ ಶುರುವಾಗಲಿದೆ. ಬಿಗ್ ಬಾಸ್ ಶೋಗಾಗಿ ಕಾದು ಕೂರುವ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಬಿಗ್ ಬಾಸ್ ಮನೆಗೆ ಮಲಯಾಳಂ ನಟಿ ಶಕೀಲಾ(Shakeela) ಕಾಲಿಡುತ್ತಿದ್ದಾರೆ.

    ನಾಗರ್ಜುನ ಅಕ್ಕಿನೇನಿ(Nagarjuna Akkineni) ನಿರೂಪಣೆಯ ಬಿಗ್ ಬಾಸ್ (Bigg Boss) ಪ್ರೋಮೋ ಈಗಾಗಲೇ ರಿವೀಲ್ ಆಗಿದೆ. ಸಾಕಷ್ಟು ಫನ್ ಈ ಸೀಸನ್‌ನಲ್ಲಿ ಇರಲಿದೆ ಕಾದುನೋಡಿ ಎಂದು ಫ್ಯಾನ್ಸ್‌ಗೆ ತಲೆಗೆ ಹುಳಬಿಟ್ಟಿದ್ದಾರೆ. ಇದೆಲ್ಲದರ ನಡುವೆ ದೊಡ್ಮನೆಗೆ ಹಾಟ್ ನಟಿ ಶಕೀಲಾ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    1994ರಲ್ಲಿ ತಮಿಳಿನ ಪ್ಲೇಗರ್ಲ್ಸ್ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಶಕೀಲಾ: ಆತ್ಮಕಥಾ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು- ರಾಜಕೀಯದ ಬಗ್ಗೆ ಹೇಳಿದ್ದಾರೆ.

    ಸದ್ಯ ಶಕೀಲಾ ಬಿಗ್ ಬಾಸ್‌ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಶೋ ಮೂಲಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]