Tag: Bigg Boss Second Innings

  • ಆ ಬೆರಳಿನ ಅರ್ಥವೇನು? – ಚಕ್ರವರ್ತಿ ವಿರುದ್ಧ ಸುದೀಪ್ ಕೆಂಡಾಮಂಡಲ

    ಆ ಬೆರಳಿನ ಅರ್ಥವೇನು? – ಚಕ್ರವರ್ತಿ ವಿರುದ್ಧ ಸುದೀಪ್ ಕೆಂಡಾಮಂಡಲ

    ಬಿಗ್ ಬಾಸ್ ಮನೆಯಿಂದ ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ಚಂದ್ರಚೂಡ್ ಅವರು ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕಿಚ್ಚ ಸುದೀಪ್ ಸಹ ಚಕ್ರವರ್ತಿಯವರ ಚಳಿ ಬಿಡಿಸಿದ್ದಾರೆ.

    ಹೌದು ಇಂದು ವಾರದ ಕತೆ ಕಿಚ್ಚ ಜೊತೆ ವೇಳೆ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದು ಬಿಡುವುದಿಲ್ಲ ಎಂದಿದ್ದಾರೆ. ನಮ್ಮ ಕೈಯ್ಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದಾರೆ.

    ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳುತ್ತಾರೆ.

    ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳುತ್ತಾರೆ. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಆಗ ಸುದೀಪ್ ಯಾವ ನಿಮ್ಮ ಪ್ರಕಾರ ಯಾವ ಮಟ್ಟಕ್ಕೆ ಕಾಣಿಸಿರಬಹುದು ಎಂದು ಮರಳಿ ಕೇಳುತ್ತಾರೆ, ತುಂಬಾ ಕೆಟ್ಟದಾಗಿ ಕಾನೀಸುತ್ತದೆ ಎಂದು ಚಕ್ರವರ್ತಿ ಮತ್ತೆ ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಸುದೀಪ್, ಯಾವುದೇ ಸ್ಪರ್ಧಿಗಳಲ್ಲಿ ಯಾರೇ ಆಗಲಿ, ನಾನು ನನ್ನ ಮಾನ, ಮರ್ಯಾದೆ ಹರಾಜು ಹಾಕಿಕೊಳ್ಳುವುದಕ್ಕೆ ಮನೆಯೊಳಗೆ ಹೋಗಿದ್ದೇನೆ ಎಂದುಕೊಂಡರೆ ಯಾರೂ ತಡೆಯಲು ಆಗಲ್ಲ ಸರ್, ಕಾಪಾಡಬಹುದು, ನಡೆಯುತ್ತಿರುವುದನ್ನು ನಿಮ್ಮ ಬಳಿಗೆ ತಲುಪಿಸಬಹುದು. ಆದರೆ ಯಾರಿಗೂ ಏನೂ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಕೆಲವು ಕಾನೂನಿನ ಚೌಕಟ್ಟು ಮೀರಿ ನಡೆದಾಗ ಹೊರಗಡೆ ಕಳುಹಿಸುತ್ತೇವೆ. ಅದನ್ನು ಬಿಟ್ಟರೆ ಎಲ್ಲವೂ ನಿಮಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿದ್ದಾರೆ.

    ಅಲ್ಲದೆ ನೀವು ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತೀರಿ ಎಂದು ಹೇಳುತ್ತೀರಿ, ಹೀಗಿರಬೇಕಾದರೆ ಯಾವ ರೇಂಜ್‍ಗೆ ಕೆಟ್ಟದಾಗಿ ಕಾಣಿಸಿರಬಹುದು ಯೋಚಿಸಿ. ಅವರ ತಾಯಂದಿರು, ಮನೆಯವರು ಕರೆ ಮಾಡಿ ಅವರು ತೋರಿಸಿದ್ದು ಯಾವ ಸನ್ನೆ ಎಂದು ಕೇಳಿದರೆ ಏನು ವಿವರಣೆ ಕೊಡುತ್ತೀರಿ? ಮಾತೆತ್ತಿದರೆ ಜನ ನೋಡುತ್ತಿದ್ದಾರೆ ಎನ್ನುತ್ತೀರಿ ಇದು ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 8 ಸೀಸನ್‍ನಲ್ಲಿ 160 ಜನ ಬಿಗ್ ಬಾಸ್ ಮನೆಗೆ ಹೋಗಿರಬಹುದು. ಮುಂದಿನ 10 ವರ್ಷಗಳಲ್ಲಿ ಇನ್ನೂ 160 ಜನ ಅಂದುಕೊಂಡರೂ ಅಂದಾಜು 300 ಜನರಿಗೆ ಸೀಮಿತವಾದ ಅದ್ಭುತ ವೇದಿಕೆ ಇದು. ಹೊರಗಡೆ ಲಕ್ಷಾಂತರ ಜನ ಬಿಗ್ ಬಾಸ್ ಮನೆ ಒಳಗೆ ಹೋಗಲು ಕಾಯುತ್ತಿದ್ದಾರೆ. ಇಷ್ಟು ಪವರ್‍ಫುಲ್ ಆಗಿರುವ ವೇದಿಕೆಯಲ್ಲಿ ನೀವು ನಡೆದುಕೊಳ್ಳಬೇಕಾದ ರೀತಿ ಸಹ ಮುಖ್ಯ ಆಗುತ್ತೆ. ಇದರಲ್ಲಿ ನೀವು ಫೇಲ್ ಆಗಿದ್ದೀರಿ ಎಂದು ನನಗನ್ನಿಸುತ್ತಿದೆ. ಮೊದಲು ತಪ್ಪು ಮಾಡಿದಾಗ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದಿರಿ ಇದನ್ನು ನೀವು ಉಳಿಸಿಕೊಂಡಿರಾ ಎಂದು ಸುದೀಪ್ ಬೇಸರದಿಂದ ಪ್ರಶ್ನಿಸಿದ್ದಾರೆ.

    ಅದರಲ್ಲೂ ಈ ಬಾರಿ ನನಗೆ ತುಂಬಾ ನೋವಾಯಿತು. ನಮ್ಮ ಮನೆಯಲ್ಲಿ ತಂಗಿ, ಹೆಂಡತಿ, ತಾಯಿ ಅಕ್ಕ ಇರುತ್ತಾರೆ ಯಾವನೋ ಒಬ್ಬ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆ ರೀತಿ ತೋರಿಸಿದಾಗ ನಾವು ಏನು ಮಾಡಬಹುದು? ಸಿಟ್ಟು ಬರುತ್ತೆ, ನಾವು ಶಕ್ತಿ ಇಲ್ಲದಿದ್ದರೂ ಅವರ ಕೆನ್ನೆಗೆ ಹೊಡೆಯುತ್ತೇವೆ ಎಂದು ಚಕ್ರವರ್ತಿ ಉತ್ತರಿಸುತ್ತಾರೆ. ಹಾಗೇ ಅವರು ನಮ್ಮ ಬಿಗ್ ಬಾಸ್ ಫ್ಯಾಮಿಲಿಗೆ ಸೇರಿದ್ದಾರೆ, ಕೋಟ್ಯಂತರ ಜನ ನೋಡುತ್ತಿದ್ದಾರೆ. ಏನು ಅಭಿಪ್ರಾಯ ಕೊಟ್ಟಿರಿ ಎಂದು ಸುದೀಪ್ ಕೇಳಿದ್ದಾರೆ.

    ಅಲ್ಲದೆ ಮಾತನಾಡಿದಾಗ ಬೀಪ್ ಮಾಡಿ ಪ್ರಸಾರ ಮಾಡಬಹುದು. ಆದರೆ ಬೆರಳು ಮಾಡಿದಾಗ ಬ್ಲರ್ ಮಾಡಬೇಕಾಗುತ್ತದೆ. ಅದು ಇನ್ನೂ ಅಸಹ್ಯವಾಗಿ ಕಾಣುತ್ತದೆ ಈ ರೀತಿ ಮಾಡಬೇಡಿ. ನಿಮ್ಮ ಗೌರವ ಕಾಪಾಡುವುದು. ಹೆಣ್ಣುಮಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರಶ್ನಿಸುವುದು ನನ್ನ ಜವಾಬ್ದಾರಿ. ನಾನು ಈ ವೇದಿಕೆ ಮೇಲಿರುವುದು ನಿಮಗೋಸ್ಕರ ಅದನ್ನು ನೀವು ಮರೆಯಬೇಡಿ ಎಂದು ಹೇಳಿದ್ದಾರೆ.

    ಬಳಿಕ ಚಕ್ರವರ್ತಿ ಪ್ರತಿ ವಾರ ನನ್ನನ್ನೇ ಬೈತಾರೆ, ನಾನೇ ಟಾರ್ಗೆಟ್ ಆಗುತ್ತಿದ್ದೇನೆ ಅನ್ನಿಸುತ್ತಿದೆ ಎಂದು ಸ್ಪರ್ಧಿಗಳ ಬಳಿ ಹೇಳುತ್ತಾರೆ. ಅಲ್ಲದೆ ನಾನೊಬ್ಬ ಸ್ತ್ರೀ ವಿರೋಧಿ, ಸ್ತ್ರೀ ಪೀಡಕನ ರೀತಿ ಬಿಂಬಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಪ್ರಶಾಂತ್ ಬಳಿ ಚಕ್ರವರ್ತಿ ಮತ್ತೆ ಹೇಳಿಕೊಳ್ಳುತ್ತಾರೆ. ಬಳಿಕ ಇದನ್ನು ಸುದೀಪ್ ಅವರ ಬಳಿಯೂ ಹೇಳುತ್ತಾರೆ. ಪ್ರತಿ ವಾರ ನನ್ನನ್ನು ಸ್ತ್ರೀ ನಿಂದಕ, ಸ್ತ್ರೀ ಪೀಡಕನನ್ನಾಗಿ ಮಾಡಿದ್ದೀರಿ. ನಿಮ್ಮ ಬಾಯಲ್ಲಿ ಇಷ್ಟು ವಾರ ನಾನೊಬ್ಬ ಕ್ರಿಮಿನಲ್ ಆಗಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ನೀವು ಮಾಡಿದ್ದನ್ನೇ ನನ್ನ ಬಾಯಲ್ಲಿ ಹೇಳಿದ್ದೇನೆ. ನಿಮ್ಮನ್ನು ಹೊಗಳಿಯೂ ಇದ್ದೇನೆ, ನಿಮ್ಮ ಬುದ್ಧಿ, ಬರವಣಿಗೆಗೆ ಅಭಿಮಾನಿ ಎಂದು ಸಹ ಹೊಗಳಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ತುಂಬಾ ಸುಧೀರ್ಘವಾಗಿ ಚಕ್ರವರ್ತಿ ಹಾಗೂ ಸುದೀಪ್ ಮಾತನಾಡಿದ್ದಾರೆ.

  • ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

    ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

    ಬಿಗ್ ಬಾಸ್ ಕನ್ನಡ 8ನೇ ಸೀಸನ್ ಕೊನೆಗೂ ಅಂತಿಮ ಹಂತ ತಲುಪಿದ್ದು, ಯಾರು ವಿನ್ನರ್ ಎಂಬ ಕಾತರ, ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಇದಕ್ಕೆ ಹೆಚ್ಚು ದಿನ ಬಾಕಿ ಉಳಿದಿಲ್ಲ, ಇನ್ನು ಕೇವಲ 15 ದಿನಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರೆಂದು ತಿಳಿಯಬಹುದು.

    ಹೌದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ದಿನಾಂಕ ಪಕ್ಕಾ ಆಗಿದ್ದು, ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರು ಖಚಿತಪಡಿಸಿದ್ದಾರೆ. ಇಂದು ವಾರದ ಕತೆ ಕಿಚ್ಚ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಫಿನಾಲೆ ದಿನಾಂಕವನ್ನು ಬಹಿರಂಗಪಡಿಸಿದ್ದು, ಇವತ್ತಿಗೆ ಅಂದರೆ ಶನಿವಾರದಿಂದ 15ನೇ ದಿನಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಆಗಸ್ಟ್ 8ರಂದು ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ.

    ಇವತ್ತಿನಿಂದ 15ನೇ ದಿನಕ್ಕೆ ಫಿನಾಲೆ ನಡೆಯಲಿದೆ, 9 ಜನ ಕಂಟೆಸ್ಟೆಂಟ್ಸ್ ಇನ್ನೂ ಮನೆಯಲ್ಲಿ ಇದ್ದಾರೆ. ಅದರಲ್ಲಿ 5 ಜನ ನಾಮಿನೇಟ್ ಆಗಿದ್ದಾರೆ. ಇವತ್ತು ಉಳಿದುಕೊಂಡವರು ಫಿನಾಲೆ ವೇದಿಕೆಯ ಮೆಟ್ಟಿಲಿನವೆರೆಗೆ ಆಲ್‍ಮೋಸ್ಟ್ ಹೋದ ಹಾಗೆ ಎಂದು ಹೇಳಿದ್ದಾರೆ. ಈ ಮೂಲಕ ಫಿನಾಲೆ ಮುಹೂರ್ತವನ್ನು ಬಹಿರಂಗಪಡಿಸಿದ್ದಾರೆ. ಫಿನಾಲೆ ಸುಳಿವು ನೀಡಿ ಮತ್ತಷ್ಟು ಕಾತರತೆಯನ್ನು ಹೆಚ್ಚಿಸಿದ್ದಾರೆ.

    ಕಿಚ್ಚ ಸುದೀಪ್ ಹೀಗೆ ಹೇಳುತ್ತಿದ್ದಂತೆ ಬಿಗ್ ಬಾಸ್ ಫಿನಾಲೆ ಹೇಗೆ ನಡೆಯಲಿದೆ, ಸ್ವರೂಪ ಹೇಗಿರಲಿದೆ? ಯಾರ್ಯಾರು ಭಾಗವಹಿಸುತ್ತಾರೆ. ಎನ್ನೆಲ್ಲ ವಿಶೇಷತೆ ಇರುತ್ತೆ. ವಿನ್ನರ್ ಯಾರು, ರನ್ನರ್ ಯಾರು ಎಂಬೆಲ್ಲ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತಿದೆ. ಆದರೆ ಕಾರ್ಯಕ್ರಮದ ಕುರಿತು ಸಂಪೂರ್ಣ ಚಿತ್ರಣ ಸಿಗಲು ಇನ್ನೂ ಕೆಲ ದಿನಗಳ ಕಾಲ ಕಾಯಲೇ ಬೇಕಿದೆ. ಆಗ ಮಾತ್ರ ಪಕ್ಕಾ ಮಾಹಿತಿ ಸಿಗಲಿದೆ.

    ಬಿಗ್ ಬಾಸ್ ಕನ್ನಡ 8ರ ಈ ಸೀಸನ್‍ನಲ್ಲಿ ತುಂಬಾ ವಿಶೇಷಗಳಿವೆ. ಇದರಲ್ಲಿ ಮೊದಲೆಯದು ಇದೇ ಮೊದಲ ಬಾರಿಗೆ ಸ್ಪರ್ಧಿಳು ಎರಡು ಇನ್ನಿಂಗ್ಸ್ ಆಡಿದ್ದಾರೆ. ಆರಂಭದಲ್ಲಿ ಕೊರೊನಾ ಕಾರಣದಿಂದ ಬಿಗ್ ಬಾಸ್ ಮೊಟಕುಗೊಂಡಿತ್ತು, ಬಳಿಕ ಮನೆಗೆ ತೆರಳಿದ್ದರು. ಮತ್ತೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೂಲಕ ಕಿಕ್ಕೇರಿಸುತ್ತಿದೆ. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಸ್ಪರ್ಧಿಗಳು ಫುಲ್ ರೊಚ್ಚಿಗೆದ್ದು ಆಟವಾಡಿದ್ದಾರೆ. ಹೀಗಾಗಿ ಗೆಲ್ಲುವರ್ಯಾರು, ಟ್ರೋಫಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಹೆಚ್ಚಿದೆ. ಇದು ತಿಳಿಯಬೇಕಾದಲ್ಲಿ ಇನ್ನೂ ಕೆಲ ದಿನಗಳ ಕಾಲ ಕಾಯಲೇಬೇಕಿದೆ.

  • ಮತ್ತೆ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ

    ಮತ್ತೆ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ

    ದೊಡ್ಮನೆಯಲ್ಲಿ ಪ್ರಶಾಂತ್ ಸಂಬರಗಿ ಅವರು ಏರು ಧ್ವನಿಯಲ್ಲಿ ಮಾತನಾಡುವುದು ಆಗಾಗ ಜಗಳ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಅವರು ಬಲವಾದ ಕಾರಣಕ್ಕೆ ಧ್ವನಿ ಎತ್ತಿದ್ದು, ತಮ್ಮನ್ನು ಕಳಪೆ ಎನ್ನುವುದು ಯಾವ ಆಧಾರದ ಮೇಲೆ ಎಂದು ಪ್ರಶ್ನಿಸಿದ್ದಾರೆ.

    ಟಾಸ್ಕ್ ವಿಚಾರವಾಗಿ ಯಾರು ಕಳಪೆ, ಯಾರು ಅತ್ಯುತ್ತಮ ಎಂಬ ಚರ್ಚೆಯನ್ನು ಮನೆಯರೆಲ್ಲ ಮಾಡುತ್ತಿದ್ದರು. ಈ ವೇಳೆ ಪ್ರಶಾಂತ್ ಸಂಬರಗಿ ಅವರಿಗೆ ಮೂವರು ಕಳಪೆ ಹಾಗೂ ಮೂವರು ಅತ್ಯತ್ತಮ ಎಂದು ವೋಟ್ ಹಾಕಿದರು. ಟೈ ಆದ ಪರಿಣಾಮ ಕ್ಯಾಪ್ಟನ್ ತಮ್ಮ ಅಭಿಪ್ರಾಯ ತಿಳಿಸಬೇಕಾಯಿತು. ಈ ವೇಳೆ ಎರಡನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ದಿವ್ಯಾ ಉರುಡುಗ ಅವರು ಪ್ರಶಾಂತ್ ಸಂಬರಿ ಅವರನ್ನು ಕಳಪೆ ಎಂದರು. ಹೀಗೆ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಪ್ರಶಾಂತ್, ಎಲ್ಲರೂ ಪ್ರಯತ್ನಿಸಿದ್ದೇವೆ, ಎಲ್ಲರೂ ಚೆನ್ನಾಗಿ ಆಡಿದ್ದೇವೆ, ಟಾಸ್ಕ್‍ಗಾಗಿ ಗಾಯ ಮಾಡಿಕೊಂಡಿದ್ದೇವೆ. ಹೀಗಿರುವಾಗ ಯಾರೂ ಕಳಪೆ ಅಲ್ಲ, ಈ ಬಾರಿ ಯಾರೂ ಕಳಪೆಯಲ್ಲ ಎಂದು ಬಿಗ್ ಬಾಸ್‍ಗೆ ಹೇಳಬಹುದು ಎಂದು ವಾದ ಮಾಡಿದ್ದಾರೆ.

    ಬಳಿಕ ವೈಷ್ಣವಿ ಸಹ ಪ್ರಶಾಂತ್ ಸಂಬರಗಿ ಅವರು ತಾವೂ ಆಡಲಿಲ್ಲ, ಆಡುವವರಿಗೂ ಅವಕಾಶ ನೀಡಲಿಲ್ಲ. ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುತ್ತಾರೆ. ಇದಕ್ಕೆ ಸಿಟ್ಟಿಗೆದ್ದ ಸಂಬರಗಿ, ನಾನು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ, ಏನೂ ಮಾಡಿಯೇ ಇಲ್ಲ ಎನ್ನುವ ರೀತಿಯಲ್ಲಿ ಹೇಳಬೇಡಿ, ನಾನು ಪ್ರಯತ್ನಪಟ್ಟಿದ್ದೇನೆ ಆದರೆ ನನಗೆ ಆಡಲು ಆಗಿಲ್ಲ. ಅದರ ಹಿಂದಿನ ದಿನ ನನಗೆ ರಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು, ಚಿಕಿತ್ಸೆ ಪಡೆದಿದ್ದೇನೆ. ಅಲ್ಲದೆ ಬಹುತೇಕರು ಅವಕಾಶ ಕಳೆದುಕೊಂಡಿದ್ದಾರೆ ಅವರ ಬಗ್ಗೆ ಮಾತನಾಡುವುದಿಲ್ಲ, ಕೇವಲ ನನ್ನ ಬಗ್ಗೆ ಮಾತ್ರ ಮಾತನಾಡುತ್ತೀರಿ ಎಂದು ತಿವಿದಿದ್ದಾರೆ.

    ನಾನು ಒಂದು ಗೇಮ್‍ನಲ್ಲಿ ಆಡದಿರುವುದನ್ನು ಚುಚ್ಚಿ ತೋರಿಸುತ್ತೀರಿ ಎಂದರೆ ನಿಮ್ಮ ಮನಸ್ಥಿತಿ ಹೇಗಿರಬೇಕು. ಆಡಿದ್ದೇನೆ, 10 ಬಾರಿ ಆಚೆ ಬಂದಿದ್ದೇನೆ, ದಿವ್ಯಾ ಸುರೇಶ್ ನನ್ನನ್ನು ಮರಳಿ ಔಟ್ ಎಂದು ಕಳುಹಿಸಿದ್ದಾರೆ. ಎಲ್ಲರೂ ಫಸ್ಟ್ ಕ್ಲಾಸ್ ಆಗಬೇಕೆಂದೇನಿಲ್ಲ. ಅವಕಾಶ ಕಳೆದುಕೊಂಡಿದ್ದೇನೆ ಎಂದು ಹೇಳಬೇಡಿ ಎಂದಿದ್ದಾರೆ.

    ದಯವಿಟ್ಟು ಸುಖಾಸುಮ್ಮನೆ ಕಳಪೆ ಎಂದು ಹೇಳಬೇಡಿ, ಯೋಚನೆ ಮಾಡಿ ಹೇಳಿ, ನಿಮ್ಮ ಮನಸ್ಸನ್ನು, ಎದೆಯನ್ನು ಮುಟ್ಟಿಕೊಂಡು ಮಾತನಾಡಿ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನನ್ನು ಕಳಪೆ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ವೈಷ್ಣವಿ ವಿರುದ್ಧ ಕಿಡಿಕಾರಿದ್ದಾರೆ. ಕ್ಯಾಪ್ಟನ್ ಆಗಿ ನೀವೂ ಇದಕ್ಕೆ ಧ್ವನಿಗೂಡಿಸಿ ಎಂದು ದಿವ್ಯಾ ಉರುಡುಗ ಅವರಿಗೆ ಹೇಳಿದ್ದಾರೆ. ಈ ಮೂಲಕ ಕಳಪೆ ವಿಚಾರವಾಗಿ ರೊಚ್ಚಿಗಿದ್ದಾರೆ.

  • ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು

    ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು

    ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇದ್ದು, ಜನರನ್ನು ರಂಜಿಸುತ್ತಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಸಣ್ಣ ಜಗಳವಾಗಿದ್ದರಿಂದ ಮುನಿಸಿಕೊಂಡು ಮಾತನಾಡುವುದನ್ನು ಬಿಟ್ಟಿದ್ದರು. ಆದರೆ ಇದೀಗ ಬಿಗಿದಪ್ಪಿಕೊಳ್ಳುವ ಮೂಲಕ ಒಂದಾಗಿದ್ದಾರೆ.

    ಹೌದು ಬಿಗ್ ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ಇಬ್ಬರ ನಡುವೆ ಸಣ್ಣ ಜಗಳವಾಗಿರುತ್ತದೆ. ಆ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಡುತ್ತಾರೆ. ದಿವ್ಯಾ ಉರುಡುಗ ಮಾತನಾಡಿಸಿದರೂ ಅರವಿಂದ್ ಮಾತನಾಡದೆ ಸದ್ಯಕ್ಕೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳುತ್ತಾರೆ, ಆಗ ದಿವ್ಯಾ ಉರುಡುಗ ಬೇಸರದಿಂದ ಬೆಡ್ ರೂಂ ಕಡೆಗೆ ಹೋಗುತ್ತಾರೆ. ಇದಾದ ಬಳಿಕ ಇಂದು ಬೆಳಗ್ಗೆ ದಿವ್ಯಾ ಉರುಡುಗ ಅವರನ್ನು ಸ್ವತಃ ಅರವಿಂದ್ ಬಿಗಿದಪ್ಪುತ್ತಾರೆ. ಆಗ ದಿವ್ಯಾ ಉರುಡುಗ ಸಹ ಗಟ್ಟಿಯಾಗಿ ಹಿಡಿದು ಹಗ್ ಮಾಡುತ್ತಾರೆ. ಈ ವೇಳೆ ಇಬ್ಬರೂ ಭಾವುಕರಾಗುತ್ತಾರೆ, ಇಬ್ಬರ ಕಣ್ಣಂಚಲ್ಲಿ ನೀರು ಬರುತ್ತವೆ.

    ಬಳಿಕ ಅರವಿಂದ್ ದಿವ್ಯಾ ಜೊತೆಗೆ ಗಾರ್ಡನ್ ಏರಿಯಾಗೆ ಬಂದು ಹಗ್ ಮಾಡಿಕೊಂಡೇ ನಿಲ್ಲುತ್ತಾರೆ. ಅರವಿಂದ್ ಮಾತನಾಡಿಸದ್ದಕ್ಕೆ ದಿವ್ಯಾ ಉರುಡುಗ ಫುಲ್ ಅಪ್ಸೆಟ್ ಆಗಿರುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡಿರಲಿಲ್ಲ. ಇದೀಗ ಅರವಿಂದ್ ಹಗ್ ಮಾಡಿದ್ದಕ್ಕೆ ದಿವ್ಯಾ ಉರುಡುಗ ಫುಲ್ ಆಕ್ಟಿವ್ ಆಗಿದ್ದು, ಕಿಚನ್‍ನಲ್ಲಿ ಕೆಲಸ ಮಾಡುವಾಗ ಶುಭಾ ಪೂಂಜಾ ಸಹ ದಿವ್ಯಾಗೆ ಕಿಂಡಲ್ ಮಾಡುತ್ತಾರೆ. ನೀನು ನಿನ್ನೆ ದೇವದಾಸ್ ಮೂಡಲ್ಲಿದ್ದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಗುತ್ತ ಈಗಲೂ ಹಾಗೇ ಇದ್ದೇನೆ ಎನ್ನುತ್ತಾರೆ.

    ಇದಾದ ಬಳಿಕ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಅರವಿಂದ್ ಬಳಿ ದಿವ್ಯಾ ಉರುಡುಗ ಆಗಮಿಸುತ್ತಾರೆ. ಆಗ ಅರವಿಂದ್ ಬಟ್ಟೆಯನ್ನು ನೆನೆಸಿಡು ಎನ್ನುತ್ತಾರೆ. ಹೀಗೆ ಮಾತನಾಡುತ್ತಲೇ ದಿವ್ಯಾ ಭಾವುಕರಾಗಿ ಅರವಿಂದ್ ಅವರನ್ನು ಮತ್ತೊಮ್ಮೆ ತಬ್ಬಿಕೊಳ್ಳುತ್ತಾರೆ. ಹೀಗೆ ಪ್ರಣಯ ಪಕ್ಷಿಗಳು ಇಂದು ಒಂದಾಗುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ.

  • ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

    ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

    ಬಿಗ್‍ಬಾಸ್ ಮನೆಯಿಂದ ಈ ವಾರ ಪ್ರಿಯಾಂಕಾ ತಿಮ್ಮೇಶ್ ಅವರು ಹೊರ ನಡೆಯಲಿದ್ದಾರೆ.

    ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಲ್ಲಿ ಎಲ್ಲರೊಂದಿಗೂ ಬೆರೆತು, ತುಂಬಾ ಸೈಲೆಂಟಾಗಿದ್ದ ಪ್ರಿಯಾಂಕಾ, ಯಾರು ಏನೇ ಹೇಳಿದರೂ ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟಾಸ್ಕ್ ವೇಳೆ ಸಹ ತಮ್ಮದೇ ಛಾಪು ಮೂಡಿಸಿದ್ದರು.

    ತುಂಬಾ ಸೈಲೆಂಟ್ ಆಗಿದ್ದ ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಆಗಾಗ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಚಕ್ರವರ್ತಿ ಅವರ ಜೊತೆ ಏರು ಧ್ವನಿಯಲ್ಲಿ ಜಗಳವನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಕ್ರವರ್ತಿ ಅವರ ಜೊತೆ ನಡೆದ ಜಗಳದಲ್ಲಿ ತಮ್ಮ ಉಗ್ರಾವತಾರವನ್ನು ತೋರಿಸಿದ್ದರು. ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿಬೀಳಿಸಿದ್ದರು.

    ಟಾಸ್ಕ್ ವಿಚಾರವಾಗಿ ಅನ್ಯಾಯ ನಡೆದಾಗಲೆಲ್ಲ ಪ್ರಿಯಾಂಕಾ ಅವರು ಧ್ವನಿ ಎತ್ತಿದ್ದಾರೆ. ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ವೇಳೆ ಅರವಿಂದ್ ವಿರುದ್ಧ ಕಿಡಿಕಾರಿದ್ದರು. ಹೀಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಆ್ಯಕ್ಟಿವ್ ಆಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಿಯಾಂಕಾ ಇದೀಗ ಎಲಿಮಿನೇಟ್ ಆಗುತ್ತಿದ್ದಾರೆ.

    ಈ ಹಿಂದೆಯೇ ಪ್ರಿಯಾಂಕಾ ಅವರು ಮನೆಯಿಂದ ಹೊರನಡೆಯುವ ಸಂಭವವಿತ್ತು. ಆದರೆ ನಿಧಿ ಸಿಬ್ಬಯ್ಯ ಅವರು ಪ್ರಿಯಾಂಕಾ ಅವರನ್ನು ಸೇವ್ ಮಾಡಿದ್ದರು. ಹೀಗಾಗಿ ಮತ್ತುಷ್ಟು ದಿನಗಳ ಕಾಲ ಬಿಗ್‍ಬಾಸ್ ಮನೆಯಲ್ಲಿ ಮುಂದುವರಿದಿದ್ದರು. ಆದರೆ ಈ ವಾರ ಅವರು ಮನೆಯಿಂದ ಹೊರ ನಡೆಯುತ್ತಿದ್ದಾರೆ.

  • ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ಹಲವು ಬಾರಿ ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ. ಆದರೂ ಕೆಲ ಸಂದರ್ಭಗಳಲ್ಲಿ ಎಡವಟ್ಟುಗಳು ಆಗುತ್ತಲೇ ಇವೆ. ಹೀಗಾಗಿ ಈ ವಾರದ ಪಂಚಾಯಿತಿಯಲ್ಲಿ ಸಹ ಸುದೀಪ್ ಮತ್ತೆ ಚಕ್ರವರ್ತಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವೈಷ್ಣವಿ ಅವರ ಬಗ್ಗೆ ಪ್ರಶಾಂತ್ ಸಂಬರಗಿ ಬಳಿ ಸುಳ್ಳು ಹೇಳಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಯಾಕೆ ಸುಳ್ಳು ಹೇಳಿದ್ದೀರಿ, ಯಾಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಿರಿ, ನಾವೂ ಮನೆಯಲ್ಲಿ ಮತ್ತೆ ಈ ಶೋ ನೋಡಬೇಕು. ನೀವಾಡಿದ ಮಾತುಗಳನ್ನು ಬೀಪ್ ಮಾಡಬೇಕು. ಎಷ್ಟು ಬಾರಿ ಬೀಪ್ ಮಾಡಬೇಕು ಎಂದು ತುಂಬಾ ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಆ ರೀತಿ ಮಾತನಾಡಬಾರದಿತ್ತು, ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ.

    ನೀವು ಹೀಗೆ ಸುಳ್ಳು ಹೇಳಿದರೆ ವೈಷ್ಣವಿ ಅವರ ವ್ಯಕ್ತಿತ್ವ ಏನಾಗಬೇಕು, ಈ ಶಬ್ದ ಬಳಸ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೂ ಚಕ್ರವರ್ತಿ ವಾದ ಮಾಡಿದ್ದಾರೆ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳುತ್ತೀರಿ, ನಾನಿದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವ ಕಾಪಾಡುವುದು ನನ್ನ ಕರ್ತವ್ಯ. ಆಟದಲ್ಲಿ ಬಿಗ್ ಬಾಸ್ ಚೌಕಟ್ಟಿನಲ್ಲೇ ಇರಬೇಕು. ಯಾವುದೋ ಒಂದರಿಂದ ಮನೆಯಲ್ಲಿನವರ ಅಭಿಪ್ರಾಯವೇ ಬದಲಾಗುತ್ತಿದೆ ಎಂದರೆ ಅದನ್ನು ನೋಡಿಕೊಂಡು, ಹಾಳಾಗಲಿ ಎಂದು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಹಾಗಂತ ನನಗೆ ಹತ್ತಿರ, ನನಗೆ ಬೇಕಾದವರು ಎಂದು ಬಿಡಲು ಆಗಲ್ಲ ಎಂದು ಸುದೀಪ್ ಖಾರವಾಗಿ ಎಚ್ಚರಿಸಿದ್ದಾರೆ.

    ನೀವು ಹೇಳಿದ್ದನ್ನು ಪ್ರಶಾಂತ್ ನಂಬಿದ್ದರೆ ವೈಷ್ಣವಿ ವ್ಯಕ್ತಿತ್ವ ಏನಾಗಬೇಡ, ವೈಷ್ಣವಿ ಬಗ್ಗೆ ಕೆಟ್ಟ ಅಭಿಪ್ರಾಯ ಸಂಬರಗಿ ಅವರಲ್ಲಿ ಉಳಿಯುತ್ತಿತ್ತು ಎಂದಿದ್ದಾರೆ. ನಿಮ್ಮ ಓದಿಗೆ, ನಿಮ್ಮ ತಿಳುವಳಿಕೆ, ನಿಮಗಿರುವ ಜ್ಞಾನವನ್ನು ಈ ವೇದಿಕೆಯಲ್ಲಿ ಇನ್ನಷ್ಟು ಜನ ಕಲಿಯಲಿ ಎಂದು ಕಳೆದ ಬಾರಿ ಹೇಳಿದ್ದೆ. ಆದರೆ ನೀವು ಯಾವ ಭಾಷೆ ಬಳಸಿದಿರಿ? ಮನೆಯಲ್ಲಿ ನಾವೂ ಕುಳಿತು ನೋಡಬೇಕು ಈ ಶೋವನ್ನು. ಎಷ್ಟು ಸಲ ಬೀಪ್ ಮಾಡುವುದು. ಇದು ನಿಮ್ಮ ವಿದ್ಯೆಯೇ? ಏನು ಭಾಷೆ ಇದು ಒಳಗಡೆ ಎಂದು ಚಕ್ರವರ್ತಿ ಅವರು ಬಳಿಸಿದ ಅವಾಚ್ಯ ಶಬ್ದಗಳ ಬಗ್ಗೆ ಚಳಿ ಬಿಡಿಸಿದ್ದಾರೆ.

  • ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

    ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಪ್ರತಿ ದಿನ ಜಗಳ ಆಗುತ್ತಲೇ ಇದೆ. ಅದೇ ರೀತಿ ಇದೀಗ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ನಡೆದಿದ್ದು, ಅರವಿಂದ್ ಸಂಬರಗಿಗೆ ಚಳಿ ಬಿಡಿಸಿದ್ದಾರೆ.

    ಹೌದು ಬಿಗ್ ಬಾಸ್ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ ಅವಧಿ ಮುಗಿದಿದೆ ಎನ್ನುತ್ತಲೇ ಎಲ್ಲರೂ ಚಪ್ಪಾಳೆ ತಟ್ಟಿದ್ದು, ಬಳಿಕ ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಅವರ ಕೈ ಕುಲುಕಿದ್ದಾರೆ. ಈ ವೇಳೆ ಅರವಿಂದ್ ಅದು ಸುಳ್ಳು, ಇದನ್ನು ನಂಬಬೇಡ. ಹುಚ್ಚ ಬಂದರು, ಅವರು ಸ್ನೇಹಿತರಂತೆ ಚೆನ್ನಾಗಿದ್ದು, ಹಿಂದೆ ಮಾತನಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಉತ್ತರಿಸಿ ನಾನು ನೇರವಾಗಿಯೇ ಮಾತನಾಡುತ್ತೇನೆ. ನಿನಗೆ ಸ್ಪೋರ್ಟಿವ್ ಸ್ಪಿರಿಟ್ ಇಲ್ಲ ಗುರು ಎಂದಿದ್ದಾರೆ.

    ನನ್ನ ಕ್ಯಾರೆಕ್ಟರ್ ಬಗ್ಗೆ ನೀವು ಮಾತನಾಡಬೇಕಿಲ್ಲ, ನಿಮ್ದು ನೀವು ನೋಡ್ಕೊಳಿ. ನಿಮ್ಮ ಮಾರ್ಗದರ್ಶನ ನಮಗೆ ಬೇಕಾಗಿಲ್ಲ. ನಿನ್ನ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿನಗೆ ಒಂದು ವಿಮರ್ಶೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದರೆ ಹೇಗೆ ಎಂದು ಸಂಬರಗಿ ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಅರವಿಂದ್ ಕ್ರಿಟಿಸಿಸಂ ತೆಗೆದುಕೊಳ್ಳುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ಹುಚ್ಚ ಆಚೆ ಹೋಗಿ ವಿದ್ಯಾ ಉರುಡುಗ ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬರಗಿ ಪ್ರತಿಕ್ರಿಯಿಸಿ, ಹೌದು ಫೇವರಿಟಿಸಂ ಮಾಡುತ್ತಿದ್ದೀಯಾ ಎಂದು ನಾನು ಹೇಳಿದೆ. ಎರಡು ವಿಚಾರದಲ್ಲಿ ಫೇವರಿಟಿಸಂ ಆಗಿತ್ತು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ತಕ್ಷಣ ಅರವಿಂದ್ ನೀನ್ಯಾರು ಕೇಳಲು, ನೀನೇನು ಬಿಗ್ ಬಾಸಾ? ಎಂದು ಜೋರಾಗಿ ಕೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸಾ ಎಂದು ಪ್ರಶಾಂತ್ ಮರು ಪ್ರಶ್ನಿಸಿದ್ದಾರೆ.

    ನೀನು ಆಟದಲ್ಲೇ ಇಲ್ಲ ನಿನ್ಯಾಗ್ಯಾಕೆ, ನೀನು ಅಡ್ವಕೇಟಾ ಅವರ ಪರ ಎಂದು ಪ್ರಶ್ನಿಸಿದ್ದಾರೆ. ಹೌದು ನಾನು ನ್ಯಾಯದ ಪರ ಮಾತನಾಡುವ ಅಡ್ವೋಕೇಟ್, ನೀನು ಮೋಸ ಮಾಡಿದ್ದೀಯಾ, ಎಷ್ಟು ಗೇಮ್‍ನಲ್ಲಿ ಚೀಟಿಂಗ್ ಮಾಡಿದ್ದೀಯಾ ಎಂದು ಹೇಳುತ್ತೇನೆ ಎಂದಿದ್ದಾರೆ. ಆಯ್ತು ಹೇಳು ಎಲ್ಲರೂ ನೋಡುತ್ತಿದ್ದಾರೆ, ಅಲ್ಲದೆ ಮುಂದೆ ನೀನು ನನ್ನ ಫ್ರೆಂಡ್ ಎಂದು ನೈಸ್ ಆಗಿ ಮಾತನಾಡುವುದು, ಬೇರೆಯವರ ಬಳಿ ಹೋಗಿ ನಮ್ಮ ವಿರುದ್ಧವೇ ಮಾತನಾಡುವುದು ಇದು ಯಾವ ರೀತಿಯ ಕನ್ನಿಂಗ್, ಮುಚ್ಚೋ ಎಂದು ಅರವಿಂದ್ ವಾರ್ನ್ ಮಾಡಿದ್ದಾರೆ.

    ಮುಚ್ಗೊಂಡು ಕೂರು ಎಂದು ಅರವಿಂದ್ ಹೇಳಿದ ತಕ್ಷಣ ನೀನ್ ಕೂರು ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಅರವಿಂದ್ ಕೂರಲ್ಲ ಏನ್ ಮಾಡ್ತಿಯಾ ಎಂದು ರಾಂಗ್ ಆಗಿದ್ದಾರೆ. ಆಗ ಸಂಬರಗಿ ಸಹ ನೀನ್ ಏನ್ ಮಾಡ್ತಿಯಾ ಎಂದು ಎದ್ದಿದ್ದಾರೆ. ಅರವಿಂದ್ ಸಹ ತರಕಾರಿ ಕಟ್ ಮಾಡುತ್ತಿದ್ದ ಚಾಕು ಕೆಳಗಿಟ್ಟು ಏನೂ ಎಂದು ಸಿಟ್ಟಿಂದ ಬಂದಿದ್ದಾರೆ. ಆಗ ರಘು ತಡೆದಿದ್ದಾರೆ. ಬಳಿಕ ಸಂಬರಗಿ ಏನು ಮಾಡ್ತಿಯಾ ಎಂದಿದ್ದಾರೆ, ನಾನು ಏನೂ ಮಾಡಲ್ಲ, ನೀನ್ ಹೇಳ್ತಿಯಲ್ಲ ಏನ್ ಮಾಡ್ತಿದಿಯಾ ಹೇಳು ಎಂದು ಜೋರಾಗಿಯೇ ಮಾತನಾಡಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಆದರೆ ಅಷ್ಟರಲ್ಲಿ ರಘು, ಹಾಗೂ ಶಮಂತ್ ತಡೆದಿದ್ದಾರೆ.

  • ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

    ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಫೈಟ್ ನಡೆಯುತ್ತಲೇ ಇರುತ್ತೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತಾರೆ. ಅದೇ ರೀತಿ ಇಂದೂ ಸಹ ಫುಲ್ ಜಗಳವಾಡಿದ್ದಾರೆ.

    ವೈಷ್ಣವಿ ಸಂಬಂಧ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮತ್ತೆ ಜಗಳವಾಡಿಕೊಂಡಿದ್ದು, ಚಕ್ರವರ್ತಿಯವರು ನಮಕ್ ಹರಾಮ್ ಎಂದೆಲ್ಲ ಬೈದಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಮದ ಸಹ ನಿಂದಿಸಿದ್ದಾರೆ. ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಇಷ್ಟಕ್ಕೇ ಸಂಬರಗಿ ಇಬ್ಬರ ಸಂಬಂಧ ಹಾಳು ಮಾಡಬೇಡ, ವೈಷ್ಣವಿ ಬಗ್ಗೆ ನನಗೆ ಗೌರವ ಇದೆ. ಹೀಗೆ ಹೇಲಬೇಡ ಎಂದಿದ್ದಾರೆ. ಆಗ ನನಗೇಕೆ ಬುದ್ಧಿವಾದ ಹೇಳೋಕೆ ಬರ್ತಿಯಾ ನೀನು ನಿನ್ನ ಪಾಡಿಗೆ ಇರು ಎಂದು ಚಕ್ರವರ್ತಿ ಕಿರಿಚಿದ್ದಾರೆ. ಇಂತಹ ಹೊಲಸು ಕೆಲಸ ಮಾಡಬೇಡ, ನಾನು ಕೇಳಬೇಡ ಎಂದರು ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ ಎಂದು ಚಕ್ರವರ್ತಿ ಫುಲ್ ರಾಂಗ್ ಆಗಿದ್ದಾರೆ.

    ಪರ್ಸನಲ್ ಆಗಿ ಮಾತನಾಡಿದ್ದನ್ನು ಮತ್ತೆ ಯಾರ ಬಳಿಯೂ ಕೇಳಬಾರದು, ಅದಕ್ಕೆ ಸ್ನೇಹ ಅನ್ನಲ್ಲ, ನೀನು ನನ್ನ ಬಳಿ ಅರವಿಂದ ಹಾಗೂ ದಿವ್ಯಾ ಉರುಡುಗ ಬಗ್ಗೆ ಮಾತನಾಡಿದ್ದನ್ನು ಹೇಳಬೇಕಾ, ತಾಕತ್ ಇದ್ದರೆ ರಘು, ದಿವ್ಯಾ ಉರುಡುಗ, ಅರವಿಂದ್ ಬಗ್ಗೆ ಮಾತನಾಡಿದ್ದನ್ನು ಹೇಳು ಬಾ ಎಂದು ರೇಗಿದ್ದಾರೆ.

    ನಾನು ಒಬ್ಬ ಅಪ್ಪ, ಅಮ್ಮಂಗೆ ಹುಟ್ಟಿದ್ದೇನೆ, ಸರಿಯಾಗಿಯೇ ಮಾತನಾಡಿದ್ದೇನೆ ಎಂದು ಜೋರಾಗಿ ಮಾತನಾಡಿದ್ದಾರೆ. ಬಳಿಕ ಪ್ರಶಾಂತ್ ಸಂಬರಗಿ ವೈಷ್ಣವಿ ಬಳಿ ಮಾತನಾಡಿದ್ದು, ನಾನು ನಿನ್ನನ್ನು ತುಂಬಾ ಗೌರವಿಸುತ್ತೇನೆ, ಎಮೋಶನಲಿ ಕನೆಕ್ಟ್ ಆಗಿದ್ದೇನೆ. ಎತ್ತರದ ಸ್ಥಾನದಲ್ಲಿ ಇಟ್ಟಿದ್ದೇನೆ. ಒಬ್ಬ ವ್ಯಕ್ತಿ ನೀವು ನನಗೆ ಈ ರೀತಿ ಮಾಡಿದ್ದೀರಿ ಎಂದರೆ ಬೇಜಾರಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ. ಪ್ರಶಾಂತ್ ಫುಲ್ ಎಮೋಶನ್ ಆಗಿದ್ದಾರೆ. ಅಲ್ಲದೆ ವೈಷ್ಣವಿ ಹೀಗೆ ಹೇಳಿದ್ದಾರಾ, ಅವರನ್ನೇ ಕೇಳಲಾ ಎಂದು ನಾನು 3 ಬಾರಿ ಕೇಳಿದೆ. ನೀನು ಆ ರೀತಿ ಮಾಡಲ್ಲ ಎಂದು ನನಗೆ ಖಂಡಿತವಾಗಿಯೂ ಗೊತ್ತಿತ್ತು. ಆದರೂ ಖಚಿತಪಡಿಸಿಕೊಂಡೆ ಎಂದಿದ್ದಾರೆ. ಈ ಮೂಲಕ ವೈಷ್ಣವಿಗೆ ಸಂಬರಗಿ ಸ್ಪಷ್ಟನೆ ನೀಡಿದ್ದಾರೆ.

  • ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಹಬ್ಬ ಎನ್ನುವುದು ತಿಳಿದಿರುವ ವಿಚಾರ. ಆದರೆ ಇದರ ಹಿಂದೆ ವೀಕೆಂಡ್ ಎರಡು ದಿನಗಳಿಗಾಗಿ ದೊಡ್ಮನೆ ಮಂದಿ ಇಷ್ಟೆಲ್ಲಾ ತಯಾರಾಗ್ತಾರಾ, ಇಷ್ಟೆಲ್ಲಾ ಯೋಚಿಸುತ್ತಾರಾ ಎಂಬ ಆಶ್ಚರ್ಯ ಇದೀಗ ಕಾಡತೊಡಗಿದೆ.

    ಹೌದು ಈ ಕುತೂಹಲವನ್ನು ಕಿಚ್ಚ ಸುದೀಪ್ ಅವರು ಈ ಬಾರಿಯ ಸೂಪರ್ ಸಂಡೇಯಲ್ಲಿ ಕೆದಿಕಿದ್ದು, ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ಉತ್ತರ ನೀಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಮಾತನಾಡಲು ಸ್ಪರ್ಧಿಗಳು ಇಷ್ಟೆಲ್ಲಾ ತಯಾರಾಗ್ತಾರಾ ಎಂದು ಆಶ್ಚರ್ಯವಾಗುತ್ತಿದೆ. ಎಲ್ಲರೂ ಅವರ ಬಟ್ಟೆ, ಮೇಕಪ್ ಬಗ್ಗೆ ಮಾತನಾಡಿದ್ದು, ಯಾವ್ಯಾವ ರೀತಿ ತಯಾರಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ನಲ್ಲಿ ಶೋನಲ್ಲಿ ಭಾಗವಹಿಸಲು ಯಾವ ರೀತಿಯ ಬಟ್ಟೆ ಹಾಕೋಬೇಕು, ಹೇರ್ ಸ್ಟೈಲ್ ಯಾವ ರೀತಿ ಇರಬೇಕೆಂದು ಬಹುತೇಕ ಎಲ್ಲರಿಗೂ ಕನ್ಫ್ಯೂಸ್ ಇರುತ್ತದೆ. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಶುಭಾ ಪೂಂಜಾ, ದಿವ್ಯಾ ಸುರೇಶ್ ಎಂದು ಮನೆ ಮಂದಿ ಹೇಳಿದ್ದಾರೆ. ಅಲ್ಲದೆ ಇನ್ನೂ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್ ಸಂಬರಗಿ ಉತ್ತರಿಸಿದ್ದು, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವ ವೀಕೆಂಡ್‍ಗೆ, ಯಾವ ಬಟ್ಟೆ, ಯಾವ ರೀತಿ ಕಾಸ್ಟೂಮ್ ಮಾಡಿಕೊಳ್ಳಬೇಕೆಂಬ ಪಟ್ಟಿ ಅವರ ಕಾಸ್ಟೂಮ್ ಡಿಸೈನರ್ ಇಂದ ಬಂದಿರುತ್ತದೆ. ಅವರಿಗೆ ಕನ್ಫ್ಯೂಸ್ ಆಗಲ್ಲ. ಆದರೆ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಹೆಚ್ಚು ಕನ್ಫ್ಯೂಸ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಹಿಯರಿಂಗ್, ಫಿಂಗರ್, ಹೇರ್ ಸ್ಟೈಲ್, ಬಟ್ಟೆ, ಸ್ಲಿಪ್ಪರ್ ತನಕ ದಿವ್ಯಾ ಸುರೇಶ್ ಅವರಿಗೆ ಕನ್ಫ್ಯೂಶನ್ ಇರುತ್ತದೆ. ಹೀಲ್ಸ್ ಹಾಕ್ಲಾ, ಸ್ಲಿಪ್ಪರ್ ಹಾಕ್ಲಾ, ಶೂ ಹಾಕ್ಲಾ ಎಂದು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ವೀಕೆಂಡ್‍ಗೆ ಹೇಗೆ ರೆಡಿ ಆಗ್ತಾರೆ, ಎಷ್ಟೆಲ್ಲಾ ಕಷ್ಟ ಪಡ್ತಾರೆ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಕೆದಕಿದ್ದಾರೆ. ಅಲ್ಲದೆ ಮುಂದಿನ ಶನಿವಾರ ನಿಮ್ಮಿಷ್ಟದ ಬಟ್ಟೆ ಹಾಕಿಕೊಂಡು ಬನ್ನಿ, ಯಾರು ಚೆನ್ನಾಗಿ ಕಾಣುತ್ತಾರೋ ನೋಡೋಣ ಎಂದು ಸುದೀಪ್ ಹೇಳಿದ್ದಾರೆ.

  • ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಆಯ್ಕೆಯಾಗುತ್ತಿದ್ದಂತೆ ಮನೆಯಲ್ಲಿ ಸಂತಸ ಹರಿದಿದೆ. ಕಿಚ್ಚ ಸುದೀಪ್ ಸಹ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲರ ಜೊತೆಗೆ ಡಿಯುಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.

    ಹೌದು ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಕ್ಕೆ ದಿವ್ಯಾ ಅವರ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದು, ಶುಭ ಕೋರಿದ್ದಾರೆ, ಜೊತೆಗೆ ಕಿವಿ ಮಾತನ್ನು ಹೇಳಿದ್ದಾರೆ. ತುಂಬಾ ಸಂತೋಷ ಆಗ್ತಿದೆ ಕಣೆ ನಿನ್ನ ಮಾತನ್ನು ನೀನು ಇಂದು ಉಳಿಸಿಕೊಂಡೆ, ಫಸ್ಟ್ ಫೀಮೇಲ್ ಕ್ಯಾಪ್ಟನ್ ನಾನಾಗಬೇಕು ಎಂದು ಯಾವಾಗಲೂ ಹೇಳುತ್ತಿರುತ್ತಿದ್ದೆ. ಆ ಮಾತನ್ನು ಇಂದು ಉಳಿಸಿಕೊಂಡಿದ್ದೀಯಾ. ಎಲ್ಲರಿಗೂ ತುಂಬಾ ಖುಷಿಯಾಗಿದೆ. ನೀನು ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಬೇಕೆಂಬುದು ತುಂಬಾ ದಿನದ ಬಯಕೆಯಾಗಿತ್ತು. ಇಂದು ಈಡೇರಿದೆ ಎಂದಿದಾರೆ. ಇದನ್ನೂ ಓದಿ: ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

    ಕ್ಯಾಪ್ಟೆನ್ಸಿಯನ್ನು ಚೆನ್ನಾಗಿ ನಿಭಾಯಿಸು, ಚೆನ್ನಾಗಿ ಆಡು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊ. ಕ್ಯಾಪ್ಟೆನ್ಸಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಚೆನ್ನಾಗಿರು ಮಗಳೇ, ಚೆನ್ನಾಗಿ ಆಡು. ಆರೋಗ್ಯವನ್ನು ಚೆನ್ನಾಗಿ ನೋಡಿಕೋ, ಹೆಚ್ಚು ನೀರು ಕುಡಿ, ಚೆನ್ನಾಗಿರು ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಮಗಳಿಗೆ ಶುಭ ಹಾರೈಸಿದ್ದಾರೆ.

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದಕ್ಕೆ ದಿವ್ಯಾ ಉರುಡುಗ ಸಹ ತುಂಬಾ ಖುಷಿಯಾಗಿದ್ದು, ಇದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲ ಮಹಿಳಾ ಸ್ಪರ್ಧಿಗಳಿಂದಲೇ ಇದು ಸಾಧ್ಯವಾಗಿದೆ. ನಿಮ್ಮ ಕಷ್ಟಗಳನ್ನು ಫುಲ್ ಫಿಲ್ ಮಾಡುತ್ತೇನೆ. ನೆಕ್ಸ್ಟ್ ಎಲ್ಲ ಹುಡುಗಿಯರೇ ನಿಂತುಕೊಳ್ಳಬೇಕೆಂಬ ಆಸೆಯಿದೆ ಎಂದಿದ್ದಾರೆ.