Tag: Bigg Boss Second Innings

  • ವೈಷ್ಣವಿ ಮನೆಯಲ್ಲಿ ಎಲ್ಲರೂ ರೇಷ್ಮೆನಾ?- ಅಣ್ಣ, ಅತ್ತಿಗೆ ಹೇಳಿದ್ದೇನು?

    ವೈಷ್ಣವಿ ಮನೆಯಲ್ಲಿ ಎಲ್ಲರೂ ರೇಷ್ಮೆನಾ?- ಅಣ್ಣ, ಅತ್ತಿಗೆ ಹೇಳಿದ್ದೇನು?

    ಅಂತೂ ಇಂತು ಬಿಗ್ ಬಾಸ್ ಮನೆ ಇಂದಿಗೆ ಕ್ಲೋಸ್ ಆಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಇದೇ ವೇಳೆ ಬಿಗ್ ಬಾಸ್ ಸೀಸನ್ 8ರ ಟಾಪ್ 4 ಕಂಟೆಸ್ಟ್ ಆಗಿ ಎಲಿಮಿನೇಟ್ ಆಗಿರುವ ವೈಷ್ಣವಿ ಗೌಡ ಕಿಚ್ಚ ಸುದೀಪ್ ಜೊತೆ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ವೈಷ್ಣವಿ ಮಾತನಾಡುವಾಗಲೇ ಕಿಚ್ಚ ಸುದೀಪ್ ರೇಷ್ಮೆ ಟಾಪಿಕ್ ತೆಗೆದಿದ್ದಾರೆ. ವೈಷ್ಣವಿ ಅವರೆ ಎಷ್ಟು ವರ್ಷದಿಂದ ಈ ಕಣ್ಣಿಗೆ ಕಾಣದ ರೇಷ್ಮೆ ಸೀರೆಯನ್ನು ಎತ್ಕೊಂಡು ಓಡಾಡುತ್ತಿದ್ದೀರಿ ತಾವು ಎಂದು ಸುದೀಪ್ ಕೇಳಿದ್ದಾರೆ. ಆಗ ಉತ್ತರಿಸಿದ ವೈಷ್ಣವಿ ನಿಜ ಹೇಳಬೇಕೆಂದರೆ ನನಗೆ ಆ ರೀತಿ ಮಾತನಾಡಲು ತುಂಬಾ ಖುಷಿ ಆಗುತ್ತದೆ. ಆದರೆ ಆ ರೀತಿ ಮಾತನಾಡಿದರೆ ಯಾರಿಗೂ ಅರ್ಥ ಆಗಲ್ಲ, ಕನೆಕ್ಟ್ ಆಗಲ್ಲ. ಆದರೆ ನಾನು ಮಾತ್ರ ಒಳಗೊಳಗೇ ಎಂಜಾಯ್ ಮಾಡುತ್ತಿರುತ್ತೇನೆ ಎಂದಿದ್ದಾರೆ.

    ಎಷ್ಟು ವರ್ಷದಿಂದ ಈ ರೀತಿ ಎಂದು ಮತ್ತೆ ಸುದೀಪ್ ಕೇಳಿದ್ದು, ಆರೇಳು ವರ್ಷದಿಂದ ಇದು ಆರಂಭವಾಗಿದೆ ಎಂದಿದ್ದಾರೆ. ಬಳಿಕ ಇದು ವಂಶವಾಹವೇ, ಡಿಎನ್‍ಎ ವಿಷಯವೇ ಅಥವಾ ನಿಮ್ಮಿಂದ ಆರಂಭವಾಗುತ್ತಿದೆಯೆ ಮನೆಯಲ್ಲಿ ಎಂದು ಕೇಳಿದ್ದಾರೆ. ಆಗ ನನ್ನಿಂದಿಲೇ ಆರಂಭವಾಗಿದೆ ಸರ್, ಮನೆಯಲ್ಲಿ ಎಲ್ಲರೂ ನೇರವಾಗಿ ಮಾತನಾಡುತ್ತಾರೆ. ಆ ತರ ರೇಷ್ಮೆ ಎಲ್ಲಾ ಇಲ್ಲ ಎಂದಿದ್ದಾರೆ.

    ಬಳಿಕ ಕಿಚ್ಚ ಸುದೀಪ್ ವೈಷ್ಣವಿ ಅವರ ಅಣ್ಣನ ಬಳಿ ಕೇಳಿದ್ದು, ಇಲ್ಲ ಸರ್, ಈ ರೀತಿ ಮಾತನಾಡುವುದಿಲ್ಲ ಅವರು, ಏನೇ ಸಲಹೆ ಕೊಡುವುದಿದ್ದರೂ ನೇರವಾಗಿಯೇ ಕೊಡುತ್ತಾರೆ. ಎನೇ ತಪ್ಪು ಎದ್ದರೂ ಆಗಲೇ ಹೇಳುತ್ತಾರೆ ಎಂದಿದ್ದಾರೆ. ಅಲ್ಲದೆ ರೇಷ್ಮೆ ಎಂಬ ಹೆಸರನ್ನು ಎಷ್ಟು ಒಪ್ಪುತ್ತೀರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಅವರಿಗೆ ಶೇ.100ರಷ್ಟು ಒಪ್ಪುತ್ತದೆ. ಬಿಗ್ ಬಾಸ್ ಮನೆಯಲ್ಲಿ ಅವರು ಅದೇ ರೀತಿ ವರ್ತಿಸಿದ್ದಾರೆ. ಇದೂ ನಿಜವಾಗಿಯೂ ಒಳ್ಳೆಯದು ಎಂದು ನನಗೆ ಅನ್ನಿಸಿತು. ಅವರು ನಡೆದುಕೊಳ್ಳುವುದಕ್ಕೂ ಹೆಸರಿಗೂ ತುಂಬಾ ಮ್ಯಾಚ್ ಆಗುತ್ತಿದೆ ಎಂದಿದ್ದಾರೆ.

    ವೈಷ್ಣವಿಗೆ ರೇಷ್ಮೆ ಹೆಸರು ಬಂದಿದ್ದು ಹೇಗೆ?
    ಬಿಗ್ ಬಾಸ್ ಮನೆಯಲ್ಲಿದ್ದಾಗ ತುಂಬಾ ನಯವಾಗಿ, ಒಗಟಾಗಿ, ಪರೋಕ್ಷವಾಗಿ ಮಾತನಾಡುತ್ತಿದ್ದಕ್ಕೆ ಸುದೀಪ್ ಅವರು ವೈಷ್ಣವಿಗೆ ರೇಷ್ಮೆ ಎಂದು ಹೆಸರಿಟ್ಟಿದ್ದರು. ಅಲ್ಲಿಂದ ಪ್ರತಿ ವಾರ ವೀಕೆಂಡ್‍ನಲ್ಲಿ ರೇಷ್ಮೆ ಎಂದು ವೀಷ್ಣವಿಗೆ ಸುದೀಪ್ ರೇಗಿಸುತ್ತಿದ್ದರು. ರೇಷ್ಮೆ ಸೀರೆಯಲ್ಲಿ ಕಲ್ಲು ಕಟ್ಟಿ ಹೊಡೆಯುತ್ತೀರಿ ಎಂದು ಹೇಳುತ್ತಿದ್ದರು. ಹೀಗೆ ಈ ಹೆಸರು ಸೀಸನ್ ಮುಗಿಯುವವರೆಗೂ ಮುಂದುವರಿಯಿತು.

  • ಕಾಮಿಡಿಯನ್‍ಗಿಂತ ನೀನು ವಿಲನ್ ಆಗು ಮಂಜಾ- ಪ್ರಶಾಂತ್ ಸಂಬರಗಿ ಸಲಹೆ

    ಕಾಮಿಡಿಯನ್‍ಗಿಂತ ನೀನು ವಿಲನ್ ಆಗು ಮಂಜಾ- ಪ್ರಶಾಂತ್ ಸಂಬರಗಿ ಸಲಹೆ

    ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಫುಲ್ ಬಿಂದಾಸ್ ಆಗಿ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಹೀಗೆ ಮಾತನಾಡುವಾಗ ಮಂಜು ಪಾವಗಡ ಅವರ ಸಿನಿಮಾ ಕರಿಯರ್ ಬಗ್ಗೆ ಪ್ರಶಾಂತ್ ಸಂಬರಗಿ ಸಲಹೆಯೊಂದನ್ನು ನೀಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿರುವಾಗ ಪ್ರಶಾಂತ್ ಸಂಬರಗಿ ಮಂಜು ಪಾವಗಡಗೆ ಈ ಸಲಹೆ ನೀಡಿದ್ದು, ನೀನು ಕಾಮಿಡಿಯನ್ ಆಗುವ ಬದಲು ವಿಲನ್ ಆಗು ಮಂಜಾ ಎಂದು ಹೇಳಿದ್ದಾರೆ. ಮಂಜಾ ನೀನು ನೆಗೆಟಿವ್ ಶೇಡ್ ಮಾಡಬಹುದು, ಕಾಮಿಡಿಯನ್‍ಗಿಂತ ನಿನ್ನ ಲುಕ್ ನೆಗೆಟಿವ್ ಪಾತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಮಂಜು ಮಧ್ಯೆ ಪ್ರವೇಶಿಸಿ ನನಗೆ ತುಂಬಾ ಇಷ್ಟ ಸರ್ ಎಂದಿದ್ದಾರೆ.

    ವಿಶೇಷವಾಗಿ ಗ್ರಾಮೀಣ ಸೊಗಡಿನ ಕಥೆ ಹಾಗೂ ಟೌನ್ ಬ್ಯಾಕ್‍ಡ್ರಾಪ್ ಸ್ಟೋರಿಗಳಲ್ಲಿ ನೀನು ವಿಲನ್ ಪಾತ್ರ ಮಾಡಬಹುದು ಎಂದು ಪ್ರಶಾಂತ್ ಹೇಳಿದ್ದಾರೆ. ವಾಸ್ತವವೆಂದರೆ ನನಗೆ ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡಲು ತುಂಬಾ ಆಸೆ, ಅಂತಹದ್ದೇ ಪಾತ್ರಗಳನ್ನು ಮಾಡಬೇಕು ಸರ್, ಅದು ನನ್ನ ದೊಡ್ಡ ಕನಸು. ನನಗೆ ನೆಗೆಟಿವ್ ಕ್ಯಾರೆಕ್ಟರ್ ತುಂಬಾ ಇಷ್ಟ ಸರ್, ನಾನು ಇಂಡಸ್ಟ್ರಿಗೆ ಬಂದಿದ್ದೇ ಅದಕ್ಕಾಗಿ. ಬಂದ ತಕ್ಷಣ ಆಸೆ ಹುಟ್ಟಿದ್ದೇ ಅದು, ಹಾಗೇ ಆಗಬೇಕು ಎಂದುಕೊಂಡಿದ್ದೇನೆ ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ.

    ಸೆಟ್ ಆಗುತ್ತೆ ನೆಗೆಟಿವ್ ಶೇಡ್ ಟ್ರೈ ಮಾಡು ಎಂದು ಮತ್ತೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಹೌದು ಸರ್ ಮಾಡಬೇಕು ಎಂದು ಮಂಜು ಹೇಳಿದ್ದಾರೆ. ಈ ಮೂಲಕ ಮಂಜು ಪಾವಗಡ ತಮ್ಮ ಸಿನಿಮಾ ಕರಿಯರ್ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ.

  • ಅರ್ಧ ವರ್ಷ ಆಯ್ತು ನಾನು ನಿಮಗೆ ಸಿಕ್ಕಿ

    ಅರ್ಧ ವರ್ಷ ಆಯ್ತು ನಾನು ನಿಮಗೆ ಸಿಕ್ಕಿ

    ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ತಮ್ಮ ಮೊದಲ ಭೇಟಿಯನ್ನು ನೆನೆದಿದ್ದು, ಇಬ್ಬರೂ ಒಬ್ಬರಿಗೊಬ್ಬರು ಮಾತನಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿಯೇ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದು, ಇದೀಗ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಸ್ನೇಹ ಬೆಳೆದಿದೆ.

    ಗಾರ್ಡನ್ ಏರಿಯಾದಲ್ಲಿ ಕೂತಾಗ ಇಬ್ಬರೂ ಇದೇ ವಿಚಾರವಾಗಿ ಮಾತನಾಡಿಕೊಂಡಿದ್ದು, ದಿವ್ಯಾ ಉರುಡುಗ ಮಾತು ಆರಂಭಿಸಿ, ನಾವು ಸೇರಿ 6 ತಿಂಗಳಾಯಿತು. ಅಂದರೆ ನೀವು ನನಗೆ ಸಿಕ್ಕು ಅರ್ಧ ವರ್ಷ ಆಯಿತು ಎಂದು ಹೇಳಿದ್ದಾರೆ. ಬಳಿಕ ಅರವಿಂದ್ ತಿಂಗಳುಗಳನ್ನು ಲೆಕ್ಕ ಹಾಕಿದ್ದಾರೆ. ಇದು ಜುಲೈ ಅಲ್ವಾ, ನಾನಿನ್ನು ಜುಲೈನಲ್ಲೇ ಇದ್ದೇನೆ ಎಂದು ಅರವಿಂದ್ ಹೇಳಿದ್ದಾರೆ. ಆಗ ದಿವ್ಯಾ ಉರುಡುಗ ನಕ್ಕಿದ್ದಾರೆ.

    ಆಗಸ್ಟ್ ನಲ್ಲಿದ್ದೇವೆ ಆಯ್ತಾ, ಆದರೆ ನಾವು ಸಿಕ್ಕು 6 ತಿಂಗಳಾಯಿತು ಎಂದು ಅನ್ನಿಸುವುದೇ ಇಲ್ಲ ಅಲ್ವಾ? ಮೊನ್ನೆ ಸಿಕ್ಕಂಗಿದೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಬಳಿಕ ತುಂಬಾ ಯೋಚನೆನಾ ಎಂದು ಅರವಿಂದ್ ಪ್ರಶ್ನಿಸಿದ್ದು, ದಿವ್ಯಾ ಭಾವುಕರಾಗಿದ್ದಾರೆ. ಆಗ ಅರವಿಂದ್ ಯಾಕೆ ದುಃಖ ಬರ್ತಿದೆ ಎಂದು ಕೇಳಿ, ದಿವ್ಯಾರ ಮಂಡಿ ಸವರಿದ್ದಾರೆ.

    ನಂತರ ಅರವಿಂದ್‍ಗೆ ದಿವ್ಯಾ ಉರುಡುಗ ಪ್ರಶ್ನೆಗಳನ್ನು ಕೇಳಿದ್ದು, ಈ ಮನೆಯಲ್ಲಿ ಆಲ್‍ಔಟ್ ಯಾರು ಎಂದಿದ್ದಾರೆ, ಸನ್ನೆ ಮೂಲಕ ಅರವಿಂದ್ ನೀನು ಎಂದಿದ್ದಾರೆ, ಸ್ಮಾರ್ಟ್ ಯಾರು ಎಂದು ಕೇಳಿದ್ದಾರೆ. ಅದಕ್ಕೂ ನೀನೇ ಎಂದು ಸನ್ನೆ ಮಾಡಿದ್ದಾರೆ. ಇಂಟಲಿಜೆಂಟ್, ಬ್ಯೂಟಿಫುಲ್, ಕ್ಯೂಟೆಸ್ಟ್ ಯಾರು ಎಂದು ಕೇಳಿದ್ದಾರೆ. ಇದಕ್ಕೂ ದಿವ್ಯಾ ಉರುಡುಗ ಅವರನ್ನು ತೋರಿಸಿದ್ದಾರೆ. ಬಳಿಕ ಈ ಮನೆಯಲ್ಲಿ ಬೈಕ್ ಓಡಿಸುವವರು ಯಾರೆಂದು ಕೇಳಿದಾಗ ನಾನೇ ಎಂದು ಅರವಿಂದ್ ಸನ್ನೆ ಮಾಡಿದ್ದಾರೆ. ಹೀಗೆ ಇಬ್ಬರ ನಡುವೆ ಪ್ರಶ್ನೋತ್ತರಗಳು ನಡೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿರುವಾಗಲೇ ಜೋಡಿ ಫುಲ್ ಮಾತುಕತೆಯಲ್ಲಿ ತೊಡಗಿದೆ.

  • ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

    ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

    ದೊಡ್ಮನೆಯಿಂದ ಈ ವಾರ ಮತ್ತೊಬ್ಬರು ಹೊರ ಹೋಗಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.

    ಹೌದು ಶಮಂತ್ ಬ್ರೋ ಗೌಡ ಅವರ ಬರಹ, ಕವನ ರಚನೆ, ತಾವು ಬರೆದ ಕವನವನ್ನು ಉಲ್ಟಾ ಓದುವುದು ಹೀಗೆ ತಮ್ಮ ವಿಭಿನ್ನ ಟ್ಯಾಲೆಂಟ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದೆ. ಲಕ್ಕಿ ಬಾಯ್ ಎಂದೇ ಕರೆಸಿಕೊಂಡಿದ್ದ ಶಮಂತ್, ಫಿನಾಲೆ ವೀಕ್‍ಗೆ ಎಂಟ್ರಿ ಕೊಡುವ ಮುನ್ನವೇ ಮನೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಮನೆಯಲ್ಲಿ ಸದಸ್ಯರ ಸಂಖ್ಯೆ ಆರಕ್ಕೆ ಇಳಿಕೆಯಾಗಿದೆ.

    ನಿನ್ನೆಯಷ್ಟೇ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದರು. ಇಂದು ಶಮಂತ್ ಬ್ರೋ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಈಗ ಸದ್ಯ ಮನೆಯಲ್ಲಿ ಕೆ.ಪಿ.ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.

    ಶಮಂತ್ ಮೊದಲ ಇನ್ನಿಂಗ್ಸ್ ನಲ್ಲೇ ಎಲಿಮಿನೇಟ್ ಆಗಿದ್ದರು. ಆದರೆ ಅದೃಷ್ಟವೆಂಬಂತೆ ಬಚಾವ್ ಆಗಿದ್ದರು. ಬಳಿಕ ರಘು ಅವರು ಶಮಂತ್ ಅವರನ್ನು ಸೇವ್ ಮಾಡಿದ್ದರು. ಹೀಗೆ ಅವರ ಅದೃಷ್ಟದ ಫಲವಾಗಿ ಇಲ್ಲಿವರೆಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಫಿನಾಲೆಗೆ ಇನ್ನೊಂದು ವಾರ ಇರುವಾಗ ಎಲಿಮಿನೇಟ್ ಆಗಿದ್ದಾರೆ.

    ತಮ್ಮ ವಿಭಿನ್ನ ಕವನಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಮಂತ್ ಬ್ರೋ ಗೌಡ, ಸಖತ್ ಆ್ಯಕ್ಟಿವ್ ಆಗಿದ್ದರು. ಟಾಸ್ಕ್ ಗಳನ್ನು ಸಹ ಅಷ್ಟೇ ಆ್ಯಕ್ಟಿವ್ ಆಗಿ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಶಮಂತ್ ರಚಿಸಿದ ಹಾಡುಗಳನ್ನು ಮೆಚ್ಚಿ ಬಿಗ್ ಬಾಸ್ ಬೆಳಗ್ಗೆ ಇವರ ಹಾಡುಗಳನ್ನು ಪ್ರಸಾರ ಮಾಡಿರುವುದೂ ಇದೆ. ಅಲ್ಲದೆ ಕವನವನ್ನು ಉಲ್ಟಾ ಓದುವ ಮೂಲಕ ಸಹ ಗಮನ ಸೆಳೆದಿದ್ದರು. ಆದರೆ ಈ ವಾರ ಅವರು ದೊಡ್ಮನೆಯಿಂದ ಹೊರ ನಡೆದಿದ್ದಾರೆ.

  • ಇವಾಗ್ಲೇ ಮದ್ವೆಗೆ ರೆಡಿ ಆಗಿದ್ದೀರಲ್ರೀ..

    ಇವಾಗ್ಲೇ ಮದ್ವೆಗೆ ರೆಡಿ ಆಗಿದ್ದೀರಲ್ರೀ..

    ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ಎಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂಬುದು ತಿಳಿದಿರುವ ವಿಚಾರ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರು ಇಂದು ಜೋಡಿಯ ಕಾಲೆಳೆದಿದ್ದು, ಮನೆಯವರನ್ನು ಮಾತನಾಡಿಸಲು ಆರಂಭಿಸುತ್ತಿದ್ದಂತೆ ಇವಾಗ್ಲೇ ಮದ್ವೆಗೆ ರೆಡಿ ಆಗಿದ್ದೀರಲ್ರೀ.. ಎಂದು ಕೇಳಿದ್ದಾರೆ.

    ಸುದೀಪ್ ಅವರು ಈ ಪ್ರಶ್ನೆ ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಅಂದಹಾಗೆ ಸುದೀಪ್ ಅವರು ಈ ಪ್ರಶ್ನೆ ಕೇಳುವುದಕ್ಕೆ ಕಾರಣವೂ ಇದೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರು ಕ್ರೀಮ್ ಕಲರ್‍ನ ಡ್ರೆಸ್ ಹಾಕಿದ್ದರು, ಅದೂ ಸಹ ಸಾಂಸ್ಕೃತಿಕ ಉಡುಗೆ. ಇಬ್ಬರೂ ಅದೇ ಕಲರ್ ಹಾಗೂ ಸಾಂಸ್ಕೃತಿಕ ಉಡುಗೆ ತೊಟ್ಟಿದ್ದರಿಂದ ಇವಾಗ್ಲೇ ಮದ್ವೆಗೆ ರೆಡಿ ಆಗಿದ್ದೀರಲ್ರೀ ಎಂದು ಕಿಚ್ಚ ಪ್ರಶ್ನಿಸಿದರು.

    ಬಳಿಕ ನಿಮ್ಮ ಡ್ರೆಸ್ ಬಗ್ಗೆ ಹೇಳಿ ಎಂದು ಅರವಿಂದ್ ಅವರನ್ನು ಕೇಳಿದ್ದಾರೆ. ಒಂದು ಶೇರ್ವಾನಿ ತರದ ಲಾಂಗ್ ಕೋಟ್ ಹಾಗೂ ಒಂದು ರೇಷ್ಮೆ ಕಚ್ಚೆ ಪಂಚೆ ಸರ್ ಎಂದು ಅರವಿಂದ್ ಉತ್ತರಿಸಿದ್ದಾರೆ. ಬಳಿಕ ದಿವ್ಯಾ ಉರುಡುಗ ಉತ್ತರಿಸಿದ್ದು, ಆಫ್ ಫೈಟ್ ಲೆಹಂಗಾ ಸರ್, ಎಲಿಗೆಂಟ್ ಆಗಿ, ಸಿಂಪಲ್ ಆಗಿ ಎಂದಿದ್ದಾರೆ. ಬಳಿಕ ತಲೆಗೆ ಏನೋ ಮುಡ್ಕೊಂಡಿದಿರಾ ಎಂದು ಸುದೀಪ್ ಕೇಳಿದ್ದಾರೆ. ಹೂವು ಸರ್ ಎಂದಿದ್ದಾರೆ. ಆಗ ಸುದೀಪ್ ಮಾತನಾಡಿ ನಾನು ಮತ್ತೊಬ್ಬ ಕಂಟೆಸ್ಟ್ ಗೆ ಕೇಳಿರುವ ಪ್ರಶ್ನೆಗೂ ನೀವು ರೆಡಿ ಆಗಿರುವುದಕ್ಕೂ ಸರಿ ಇದೆ ಎಂದಿದ್ದಾರೆ.

    ಬಳಿಕ ದಿವ್ಯಾ ಉರುಡುಗ ಇದಕ್ಕೆ ಸ್ಪಷ್ಟನೆ ನೀಡಿ, ಸ್ವಲ್ಪ ಟ್ರೆಡಿಶನಲ್ ಆಗಿ, ಚೆನ್ನಾಗಿ ರೆಡಿ ಆಗೋಣ ಎಂದು ಈ ಡ್ರೆಸ್ ಹಾಕಿದ್ವಿ ಎಂದಿದ್ದಾರೆ. ಆಗ ಸುದೀಪ್ ಯಾರು ಹೇಲಿದ್ದು ಹಾಗಂತ ಎಂದಿದ್ದಾರೆ. ಸರ್ ಇದು ವೈಷ್ಣವಿ ರಡಿ ಮಾಡಿದ್ದು ಎಂದು ತೊದಲಿದ್ದಾರೆ. ಅಷ್ಟಕ್ಕೆ ಸುದೀಪ್ ಮಧ್ಯ ಪ್ರವೇಶಿಸಿ ಅವರು ಪಾರ್ಟಿಗೆ ಹೋಗೋ ತರ ರೆಡಿ ಆಗಿದ್ದಾರೆ ನೀವು ಮದ್ವೆಗೆ ಹೋಗುವ ರೀತಿ ಕಾಣುತ್ತಿದ್ದೀರಿ ಎಂದು ಕಾಲೆಳೆದಿದ್ದಾರೆ.

    ಅದೇ ನನ್ನ ಬಟ್ಟೆ ಆ ರೀತಿ ಇತ್ತಲ್ವಾ ಈ ತರ ಲುಕ್ ಚೆನ್ನಾಗಿ ಕಾಣಿಸುತ್ತೆ ಅಂತ ರೆಡಿ ಆದೆ ಎಂದಿದ್ದಾರೆ. ಹೂವೆಲ್ಲ ಮುಡಿದುಕೊಂಡು ಸಂಡೇಗೆ ರೆಡಿ ಆಗುವುದನ್ನು ಕಡಿಮೆ ನೋಡಿದ್ದೇವೆ ನಾವು, ನಮ್ಮ ಅನಿಸಿಕೆಯಲ್ಲಿ ಸಂಡೆಗಾಗಿಯೇ ರೆಡಿ ಆಗಿದ್ದು ಎಂದು ಭಾವಿಸಿ ಕಾರ್ಯಕ್ರಮ ಮುಂದುವರಿಸುತ್ತೇವೆ ಎಂದು ಸುದೀಪ್ ಹೇಳಿದ್ದಾರೆ. ಆಗ ಮನೆ ಮಂದಿ ನಕ್ಕಿದ್ದಾರೆ.

    ಎಪಿಸೋಡ್‍ಗೋಸ್ಕರ ನಾವಿಲ್ಲಿ ಬರುತ್ತೇವೆ ಎಂದು ರೆಡಿ ಆಗಿದ್ದೀರೆಂದು ಭಾವಿಸುತ್ತೇವೆ, ನಮ್ಮ ಖುಷಿಗಾಗಿ. ಸತ್ಯ ಏನೆಂದು ಕೇಳಲ್ಲ ನಾನು, ಬಲವಂತವಾಗಿ ನಮ್ಮಿಂದ ಯಾರೂ ಸೆಳ್ಳು ಹೇಳುವ ಹಾಗೆ ಆಗಬಾರದು. ಯಾಕ್ ಸುಮ್ನೆ ಎಂದು ಸುದೀಪ್ ಹೇಳಿ ಕಾಲೆಳೆದಿದ್ದಾರೆ.

  • ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್

    ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್

    ಬಿಗ್ ಬಾಸ್ ಮನೆಯಲ್ಲಿ ಬಬ್ಲಿ ಬಬ್ಲಿಯಾಗಿ ನಗುತ್ತ ಎಲ್ಲರ ಜೊತೆ ಬೆರೆಯುತ್ತಿದ್ದ ಶುಭಾ ಪೂಂಜಾ ಅವರು ಈ ವಾರ ಮನೆಯಿಂದ ಹೊರ ನಡೆದಿದ್ದಾರೆ.

    ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಅವರು ಇದನ್ನು ಅನೌನ್ಸ್ ಮಾಡಿದ್ದು, ಶುಭಾ ಪೂಂಜಾ ಅವರು ಮನೆಯಿಂದ ಹೊರ ನಡೆದಿದ್ದಾರೆ. ಟಾಸ್ಕ್ ಗಳಲ್ಲಿ ಹೆಚ್ಚೇನು ಭಾಗವಹಿಸದಿದ್ದರೂ, ಮೆನಯವರೊಂದಿಗೆ ಬೆರೆತು ಚೆನ್ನಾಗಿ ಮಾತನಾಡಿಕೊಂಡಿದ್ದರು. ಇದೀಗ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಔಟ್ ಆಗಿದ್ದಾರೆ.

    ಆಗಸ್ಟ್ 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಐವರು ಸ್ಪರ್ಧಿಗಳು ಮಾತ್ರ ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ. ಇದಕ್ಕೂ ಮುನ್ನ ಮೂವರು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಬೇಕು. ಹೀಗಾಗಿ ಈ ವಾರ ಶನಿವಾರವೇ ಎಲಿಮಿನೇಶನ್ ನಡೆದಿದೆ. ಮುಂದಿನ ವಾರ ಮಧ್ಯದಲ್ಲಿ ಸಹ ಮತ್ತೊಂದು ಎಲಿಮಿನೇಶ್ ನಡೆಯಲಿದೆ.

    ಶುಭಾ ಅವರು ಮನೆಯಿಂದ ಹೊರ ಹೋಗುತ್ತಿರುವುದಕ್ಕೆ ಮನೆ ಮಂದಿಯಲ್ಲಿ ಭೇಸರ ಮೂಡಿದ್ದು, ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಟಾಸ್ಕ್ ನಲ್ಲಿ ಗೆದ್ದು ಈ ಸೀಸನ್‍ನಲ್ಲಿ ಮೊದಲ ಬಾರಿಗೆ ವಿನ್ ಆಗಿದ್ದರು, ಈ ಮೂಲಕ ಶುಭಾ ಖುಷಿಪಟ್ಟಿದ್ದರು. ಆದರೆ ತರಲೆ, ಕೀಟಲೆ ಮಾಡುತ್ತ, ಬಬ್ಲಿ ಬಬ್ಲಿಯಾಗಿ ಮಾತನಾಡುತ್ತ ರಂಜಿಸುತ್ತಿದ್ದರು.

    ಇದೀಗ ಮಂಜು ಪಾವಗಡ, ಕೆ.ಪಿ.ಅರವಿಂದ್ ಹಾಗೂ ವೈಷ್ಣವಿ ಸ್ಟ್ರಾಂಗ್ ಕಂಟಸ್ಟೆಂಟ್ ಆಗಿದ್ದಾರೆ. ಇವರು ಫಿನಾಲೆಯಲ್ಲಿ ಉಳಿದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಈ ವಾರ ಯಾರ್ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದೇ ಕುತೂಹಲವಾಗಿದೆ.

  • ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಬಿಗ್ ಬಾಸ್ ಕೊನೇಯ ವಾರಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ಗೆ ಚಕ್ರವರ್ತಿ ಚಂದ್ರಚೂಡ್ ಆಗಮಿಸಿದ್ದು, ಈ ವೇಳೆ ಮನೆಯಲ್ಲಿನ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ದಿವ್ಯಾ ಉರುಡುಗ ಅವರನ್ನು ಕಾಂಗರೂ ಮರಿಗೆ ಹೋಲಿಸಿದ್ದಾರೆ. ನೀರಿದ್ದಾಗ ಹೇಗೆ ಮಾಡಬೇಕು, ನೀರಿಲ್ಲದಾಗ ಹೇಗೆ ಮಾಡಬೇಕು, ಹೇಗೆ ತನ್ನವರನ್ನು ಕಾಪಾಡಿಕೊಳ್ಳಬೇಕು ಎಂಬ ಗುಣವಿದೆ. ಆದರೆ ಅದಕ್ಕೆ ಬೆನ್ನ ಹಿಂದೆ ಯಾರಾದರೂ ಇರಲೇಬೇಕು. ಇನ್ನು ಊರ ನಾಯಿ, ಕಾಡು ನಾಯಿ ಜೊತೆ ಹೋಗಿ ಬಿಟ್ಟಿದೆ. ನಾಯಿಗಳು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹೇಗಾದರೂ ಮಾಡಿ ಬದುಕುತ್ತವೆ. ಇದನ್ನು ತುಂಬಾ ಜನ ಪೆಟ್ ಎಂದು ಮುದ್ದು ಮಾಡಿ, ಪ್ಯಾಂಟ್, ಶರ್ಟ್ ಹೊಲಿಸುತ್ತಾರೆ. ಆದರೆ ಇಂತಹ ನಾಯಿ ಯಾವಾಗಲೂ ಒಬ್ಬರ ಮೇಲೆ ಅವಲಂಬಿತವಾಗಿರಬೇಕು, ಇಲ್ಲವಾದಲ್ಲಿ ಅದಕ್ಕೆ ಬದುಕಲು ಆಗುವುದಿಲ್ಲ ಎಂದು ಶಮಂತ್‍ಗೆ ಹೇಳಿದ್ದಾರೆ.

    ಅಲ್ಲಿ ಒಂದು ನರಿ ಇದೆ, ಇನ್ನೊಬ್ಬರ ತಪ್ಪುಗಳ ಮೇಲೆ ಸವಾರಿ ಮಾಡುತ್ತದೆ, ತನ್ನ ಸರಿಗಳ ಮೇಲೆ ಸವಾರಿ ಮಾಡಲ್ಲ. ಆದರೆ ಅದು ತುಂಬಾ ಬ್ರಿಲಿಯಂಟ್, ಜನರ ನಾಡಿ ಮಿಡಿತ ನೋಡಿಕೊಂಡು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಆಟವಾಡುತ್ತಿದೆ ಎಂದು ಪ್ರಶಾಂತ್ ಸಂಬರಗಿ ಹೆಸರನ್ನು ಹೇಳಿದ್ದಾರೆ. ತುಂಬಾ ಅದ್ಭುತವಾದ ಹುಲಿಯೊಂದಿದೆ. ಆ ಹುಲಿ ಯಾವಾಗಲೂ ಫ್ರಿಡ್ಜ್ ಇಟ್ಟುಕೊಳ್ಳುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತದೆ. ಬಾಕಿ ವಿಚಾರಗಳಲ್ಲಿ ತುಂಬಾ ಆರಾಮವಾಗಿರುತ್ತದೆ. ಅದಕ್ಕೆ ಬೇರೆನೂ ಗೊತ್ತಾಗಲ್ಲ ಅದೇ ಕೆಪಿ ಅರವಿಂದ್ ಎಂದು ಹೇಳಿದ್ದಾರೆ. ಆದರೆ ಆ ಹುಲಿ ಈ ಕೊನೇಯ ವಾರದಲ್ಲಿ ಸರ್ವೈವ್ ಆಗಬೇಕೆಂದರೆ ನನ್ನ ಬೇಟೆಯಲ್ಲಿ ತಪ್ಪಿದೆ, ಒನ್ ಸೈಡೆಡ್ ಆಗುತ್ತಿದೆ ಎನ್ನುವುದು ಅದಕ್ಕೆ ಅರಿವಾಗಬೇಕು ಎಂದು ಅರ್ಥವಾಗಬೇಕಿದೆ ಎಂದಿದ್ದಾರೆ.

    ಒಂದು ಜಿಂಕೆ ಇದೆ ಅದಕ್ಕೆ ಅಲಂಕಾರವೇ ಒಳ್ಳೆಯ ಗುಣ, ವಿನಯ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಅಮಾಯಕ ಎಂದು ಅನ್ನಿಸಿದ್ದು ದಿವ್ಯಾ ಸುರೇಶ್. ಎಷ್ಟೇ ಬೇಟೆಗಾರರು ಬಂದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯವಿದೆ. ಆದರೆ ಆ ಜಿಂಕೆಗೆ ಸೋಲು ಗೆಲವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುವ ಶಕ್ತಿ ಬೇಕು ಎಂದಿದ್ದಾರೆ. ಒಂದು ಮೊಲ ಇದೆ ಅದಕ್ಕೆ ವಯಸ್ಸು, ಆಯಸ್ಸು ಯಾವುದೂ ಗೊತ್ತಾಗಲ್ಲ, ಯಾವಾಗಲೂ ಏನಾದರೂ ಕೇಳುತ್ತಲೇ ಇರುತ್ತದೆ. ಅದನ್ನು ತಬ್ಬಿಕೊಂಡು ಮುದ್ದಾಡಬೇಕೆನ್ನಿಸುತ್ತದೆ. ಆದರೆ ಅದು ಯಾರಿಗೆ ವಾಸನೆ ಹಿಡಿದಿರುತ್ತದೆಯೋ ಅವರ ಜೊತೆ ಮಾತ್ರ ಇರುತ್ತದೆ ಎಂದು ಶುಭಾ ಪೂಂಜಾ ಬಗ್ಗೆ ಹೇಳಿದ್ದಾರೆ.

    ಸಾರಂಗ ಇದೆ, ಅದು ನೋಡಕ್ಕೂ ಚೆಂದ, ವಾದ್ಯವಾಗುತ್ತದೆ. ಮಾತು ಕಡಿಮೆ ಆಡುತ್ತದೆ. ತನ್ನಪಾಡಿಗೆ ತಾನು ಹೋಗುತ್ತಿರುತ್ತದೆ. ಯಾವುದೇ ಪ್ರಭೇದ ಅಲ್ಲ. ಆದರೆ ಅದು ಸೌಂಡ್ ಮಾಡಲ್ಲ, ಅದು ಸದ್ದು ಮಾಡಿದರೆ ಸಾರಂಗಗಳು ಹಿಂಡಾಗಿ ಬರುತ್ತವೆ ಅವರೇ ವೈಷ್ಣವಿ ಎಂದಿದ್ದಾರೆ. ತುಂಬಾ ಚೆಂದದ ಸಾರಂಗ, ಮಾಡುವ ಕಡೆ ಶಬ್ದ ಮಾಡಬೇಕು. ಆಗ ಅದ್ಭುತವಾಗಿ ಕಾಣುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

    ಇನ್ನೊಂದು ಮುದ್ದು ಕೋಣ ಇದೆ ಕೆಸರಲ್ಲಿ, ನದಿಯಲ್ಲಿ ಎಲ್ಲಾದರೂ ಹಾಕಿ, ಏನೂ ಹಾಕಿದರೂ ನಗಿಸುವುದೊಂದೇ ಅದರ ಗುಣ. ಏನು ಮಾಡಿದರೂ ನಿನ್ನ ಜೊತೆ ಚೆನ್ನಾಗಿರುತ್ತೇನೆ ಎನ್ನುತ್ತಿರುತ್ತದೆ, ಹಳ್ಳಿ ಹಕ್ಕಿ, ಪ್ರತಿಭಾವಂತ ಅದು ಮಂಜು ಪಾವಗಡ, ಅದಕ್ಕೊಂದು ಚೆಪ್ಪಾಳೆ ಎಂದಿದ್ದಾರೆ.

  • ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

    ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

    ದೊಡ್ಮನೆಯ ಪ್ರಣಯ ಪಕ್ಷಿಗಳು ಎಂದೇ ಬಿಂಬಿತವಾಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಂದು ಫುಲ್ ಜೊತೆ ಜೊತೆಯಾಗಿಯೇ ಕಾಲ ಕಳೆದಿದ್ದು, ಕೊನೇಯ 11 ದಿನಗಳು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ, ಬಿಗ್ ಬಾಸ್ ನೀಡಿದ ಲಕ್ಸುರಿ ಐಟಂ ಟಾಸ್ಕ್‍ನಲ್ಲಿ ಸಹ ಒಟ್ಟಿಗೆ ಆಡಿದ್ದಾರೆ.

    ಹೌದು ಅರವಿಂದ್ ಒಬ್ಬರೇ ಕುಳಿತಾಗ ದಿವ್ಯಾ ಉರುಡುಗ ಆ ಕಡೆ ಹೋಗುತ್ತಾರೆ, ಆಗ ಅರವಿಂದ್ ಬಾ ಕುಳಿತುಕೋ ಎನ್ನುತ್ತಾರೆ. ಹಾಗೇ ಹೇಳುತ್ತಲೇ ದಿವ್ಯಾ ಉರುಡುಗ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಕಂಡೀಶನ್ ಹಾಕುತ್ತಾರೆ. ನೀವು ಇಲ್ಲೇ ಕುಳಿತುಕೋ ಎಂದು ಹೇಳಿದರೆ ಆದರೆ ನನಗೆ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ, ನಾನು ಕುಳಿತುಕೊಂಡರೆ ಮಾತನಾಡಿಸುತ್ತೇನೆ, ನೀವು ಸ್ಟ್ರಾಟಜಿ ಅಂತೆಲ್ಲ ಹೇಳಂಗಿಲ್ಲ ಎನ್ನುತ್ತಾರೆ.

    ನಾನು ಏನು ಬೇಕಾದರೂ ಹೇಳಬಹದು ಎಂದು ಅರವಿಂದ್ ಅನ್ನುತ್ತಾರೆ, ಹಾಗೇ ಹೇಳಿದರೆ ಫೇರ್ ರೀತಿ ಅನ್ನಿಸುವುದಿಲ್ಲ, ನೀವು ಮೈಂಡ್ ಖಾಲಿ ಮಾಡಿಕೊಳ್ಳುತ್ತೀರಾ ಎನ್ನುತ್ತಾರೆ. ಅಲ್ಲದೆ ನಾನು ಕುಳಿತುಕೊಳ್ಳಬೇಕಾ ಎದ್ದು ಹೋಗಬೇಕಾ ಎಂದು ದಿವ್ಯಾ ಉರುಡುಗ ಪ್ರಶ್ನಿಸುತ್ತಾರೆ ಆಗ ಅರವಿಂದ್ ಕಿವಿ ಮುಚ್ಚಿಕೊಳ್ಳುತ್ತಾರೆ.

    ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಮಹಾನಟಿ ಅಲ್ಲ, ಮಹಾನಟ ಎನ್ನುತ್ತಾರೆ. ಆಗ ಅರವಿಂದ್ ಯಾರು ಎಂದು ಪ್ರಶ್ನಿಸುತ್ತಾರೆ ಇಷ್ಟಕ್ಕೆ ದಿವ್ಯಾ ಬಿದ್ದು ಬಿದ್ದು ನಗುತ್ತಾರೆ. ಇಷ್ಟಾಗುತ್ತಲೇ ಲಕ್ಸುರಿ ಐಟಂ ಟಾಸ್ಕ್ ಅನೌನ್ಸ್ ಆಗುತ್ತದೆ. ಸೋಫಾ ಮೇಲೆ ಅಕ್ಕಪಕ್ಕ ಕುಳಿತಿದ್ದ ದಿವ್ಯಾ ಉರುಡುಗ, ಅರವಿಂದ್ ಅವರಿಗೆ ಕಚಗುಳಿ ಇಡಲು ಆರಂಭಿಸುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಕಚಗುಳಿ ಇಟ್ಟು ಸಖತ್ ನಕ್ಕಿದ್ದಾರೆ.

    ಈ ದೃಶ್ಯವನ್ನು ಪ್ರಶಾಂತ್ ಸಂಬರಗಿ ಮಾತ್ರ ಫುಲ್ ಗಂಭಿರವಾಗಿ ನೋಡಿದ್ದಾರೆ. ಹೀಗೆ ಕಚಗುಳಿ ಇಟ್ಟು ಫುಲ್ ನಕ್ಕಿದ್ದಾರೆ. ಬಳಿಕ ಇಬ್ಬರೂ ಟಾಸ್ಕ್ ಮಾಡಲು ತೆರಳಿದ್ದು, ನಂಬರ್ ಪ್ಲೇಟ್ ಟಾಸ್ಕ್‍ನಲ್ಲಿ ದಿವ್ಯಾ ಉರುಡುಗ ವಿನ್ ಆಗಿದ್ದಾರೆ. ಅರವಿಂದ್ ಬೇಗನೇ ನಂಬರ್ ಪ್ಲೇಟ್ ಸಂಗ್ರಹಿಸಿದರೂ ಕ್ಯಾಪ್ಟನ್ ಬಳಿ ಬೇಗ ನೀಡದ ಕಾರಣ ಸೋತಿದ್ದಾರೆ. ಬಳಿಕ ಸುಖಾಸುಮ್ಮನೇ ಸೋತೆ ಎಂದು ಪಶ್ಚಾತಾಪಪಟ್ಟಿದ್ದಾರೆ.

  • ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

    ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

    ವಾರ ಬಿಗ್ ಬಾಸ್ ಎಲಿಮಿನೇಶನ್‍ನಲ್ಲಿ ಫುಲ್ ಟ್ವಿಸ್ಟ್ ಇಟ್ಟಿದ್ದು, ಕಿಚ್ಚನ ಮಾತಿಗೆ ಮನೆ ಮಂದಿ ಎಲ್ಲ ಫುಲ್ ಶಾಕ್ ಆಗಿದ್ದಾರೆ. ಇಂದು ಎಲಿಮಿನೇಶನ್ ಆಗಿಲ್ಲ, ಆದರೆ ಈ ವಾರ ಎಲಿಮಿನೇಶನ್ ಆಗಲಿದ್ದಾರೆ. ಬಿಗ್ ಬಾಸ್ ಮನೆಯಿಂದ ನೇರವಾಗಿ ಮನೆಗೆ ಹೋಗುತ್ತಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಹೌದು ಈ ಭಾನುವಾರ ಒಬ್ಬರು ಮನೆ ಬಿಟ್ಟು ಹೋಗಲ್ಲ. ಆದರೆ ಈ ವಾರ ಮನೆ ಬಿಟ್ಟು ಹೊರ ಹೋಗುತ್ತಾರೆ. ಆದರೆ ಯಾವಾಗ, ಯಾರು ಎಲಿಮಿನೇಟ್ ಆಗುತ್ತಾರೆ ಗೊತ್ತಿಲ್ಲ. ಆದರೆ ಮುಂದಿನ ಶನಿವಾರ ನಾನು ಬರುವಷ್ಟರಲ್ಲಿ ಒಬ್ಬರು ಇರುವುದಿಲ್ಲ. ಹೀಗುವ ಕ್ಷಣ ಯಾವಾಗಬೇಕಾದರೂ ಬರಬಹುದು. ಆ ಕಂಟೆಸ್ಟೆಂಟಿನ ಸಮಯ ಈಗ ಸ್ಟಾರ್ಟ್ ಆಗುತ್ತದೆ ಎಂದು ಸುದೀಪ್ ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಮನೆ ಮಂದಿ ಫುಲ್ ಶಾಕ್ ಆಗಿದ್ದು, ಎಲ್ಲರೂ ಈ ಬಗ್ಗೆ ಯೋಚಿಸುತ್ತಿದ್ದಾರೆ.

    ಪ್ರತಿ ಕ್ಷಣವನ್ನೂ ಉಪಯೋಗಿಸಿಕೊಳ್ಳಿ, ಈಗಿನಿಂದ ಪ್ರತಿ ಕ್ಷಣವನ್ನೂ ನಿಮ್ಮ ಕ್ಷಣವನ್ನಾಗಿಸಿಕೊಳ್ಳಿ. ಒಂದು ಬೇಜಾರಿದೆ, ವೇದಿಕೆ ಮೇಲೆ ನಾನು ನಿಮಗೆ ಸಿಗುವುದಿಲ್ಲ, ಆದರೆ ಮತ್ತೆ ಸಿಗೋಣ ಎಂದು ಹೇಳಿದ್ದಾರೆ.

    ಬಳಿಕ ಸ್ಪರ್ಧಿಗಳು ಮಾತನಾಡಿದ್ದು, ಯಾರನ್ನು, ಯಾವಾಗಬೇಕಾದರೂ, ಹೇಗೆ ಬೇಕಾದರೂ ಕಳುಹಿಸಬಹುದು. ಅವರು ಹೋಗುವುದೇ ನಮಗೆ ಗೊತ್ತಾಗುವುದಿಲ್ಲವಲ್ಲ ಎಂದು ಶಾಕ್ ಆಗಿದ್ದಾರೆ. ಅಲ್ಲದೆ ಎಲ್ಲರೂ ಜೊತೆ ಜೊತೆಗೇ ಇರ್ರಪ್ಪ ಎಂದು ಪ್ರಶಾಂತ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೇ ವೇಳೆ ಎಲ್ಲರೂ ನಾಮಿನೇಟ್ ಆದವರಿಗೆ ಗುಡ್ ಲಕ್ ಹೇಳಿದ್ದಾರೆ.

    ಅಲ್ಲದೆ ನಾನು ಎಲಿಮಿನೇಟ್ ಆಗುತ್ತೇನೆ, ಜರ್ನಿ ವಿಟಿ ನೋಡುತ್ತೇನೆ, ಸುದೀಪ್ ಸರ್ ಜೊತೆ ನಿಲ್ಲುತ್ತೇನೆ ಎಂದು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಹೀಗೆ ಎಗರಿಸಿಕೊಂಡು ಹೋದರೆ ಹೇಗೆ ಎಂದು ಶುಭಾ ಸಹ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.

    ಅಂದಹಾಗೆ ಈ ವಾರ ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ, ಶಮಂತ್, ಪ್ರಶಾಂತ್ ಹಾಗೂ ಶುಭಾ ಪೂಂಜಾ ಅವರು ನಾಮಿನೇಟ್ ಆಗಿದ್ದು, ಇಂದು ಒಬ್ಬರು ಎಲಿಮಿನೇಟ್ ಆಗಬೇಕಿತ್ತು. ಆದರೆ ಈ ವಾರ ಮನೆಗೆ ಹೋಗುತ್ತಿದ್ದಾರೆ. ಯಾರು ಹೋಗುತ್ತಾರೆ ಕಾದು ನೋಡಬೇಕಿದೆ.

  • ಅಲ್ಲಾ ರೀ ನಾವು ಅಷ್ಟೂ ಡ್ಯಾನ್ಸ್ ಮಾಡಿಲ್ವಾ?

    ಅಲ್ಲಾ ರೀ ನಾವು ಅಷ್ಟೂ ಡ್ಯಾನ್ಸ್ ಮಾಡಿಲ್ವಾ?

    ಬಿಗ್ ಬಾಸ್ಕ್ ವೀಕೆಂಡ್‍ನಲ್ಲಿ ಸೂಪರ್ ಸಂಡೇ ವಿತ್ ಸುದೀಪ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದು ತಿಳಿದಿರುವ ವಿಚಾರ. ಆದರೆ ಈ ವಾರ ಸ್ಪರ್ಧಿಗಳು ಸ್ವಲ್ಪ ಎಕ್ಸ್ಟ್ರಾ ಮನರಂಜನೆ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಪ್ರಶಾಂತ್ ಸಂಬರಗಿ ಅವರ ಡ್ಯಾನ್ಸ್ ಹೆಚ್ಚು ಗಮನ ಸೆಳೆದಿದೆ.

    ಹೌದು ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರಗಿ ಅವರಿಗೆ ಡ್ಯಾನ್ಸ್ ಮಾಡಲು ತಿಳಿಸಿದ್ದು, ಶಮಂತ್ ಹಾಗೂ ವೈಷ್ಣವಿ ಅವರಿಗೆ ಹಾಡು ಹೇಳಲು ಸೂಚಿಸಿದ್ದರು. ಅದರಂತೆ ಪ್ರಶಾಂತ್ ನ್ಯಾಚುರಲ್ ಸ್ಟಾರ್ ಆಗಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಸಿನಿಮಾದ ಸಾಂಗ್‍ಗೆ ಪ್ರಶಾಂತ್ ಸಂಬರಗಿ ಅವರು ಹಾಕಿರುವ ಸ್ಟೆಪ್ಸ್ ಕಂಡು ಸ್ವತಃ ಸುದೀಪ್ ಶಾಕ್ ಆಗಿದ್ದಾರೆ.

    ಡ್ಯಾನ್ಸ್ ನೋಡಿದ ಕಿಚ್ಚ ಸುದೀಪ್, ಅಲ್ಲಾರಿ ನನಗೆ ಡ್ಯಾನ್ಸ್ ಮಾಡಲು ಅಷ್ಟೇನು ಬರಲ್ಲ. ಆದರೆ ಡ್ಯಾನ್ಸ್ ಮಾಡದೇನೆ ಹಾಡು ಮಾಡಿಲ್ಲ ರೀ ಎಂದು ಕೇಳಿದ್ದಾರೆ. ಆರಂಭದಲ್ಲಿ ಪ್ರಶಾಂತ್ ಅನಿಸುತಿದೆ ಯಾಕೋ ಇಂದು ಹಾಡಿಗೆ ಡ್ಯಾನ್ಸ್ ಮಾಡಿದ್ದು, ಇದನ್ನು ಕಂಡ ಸುದೀಪ್, ನೀವು ಹಾಡಿಗೆ ಡ್ಯಾನ್ಸ್ ಮಾಡುವ ಬದಲು ಮುಂದೆ ಏನು ಮಾಡಲಿ ಎಂದು ಯೋಚಿಸುತ್ತಿದ್ದಂಗೆ ಇತ್ತು ನಿಮ್ಮ ಡ್ಯಾನ್ಸ್ ಎಂದಿದ್ದಾರೆ.

    ಬಳಿಕ ಕೋಟಿಗೊಬ್ಬ 2 ಸಿನಿಮಾದ ಟೈಟಲ್ ಟ್ರ್ಯಾಕ್‍ಗೆ ಡ್ಯಾನ್ಸ್ ಮಾಡಿದ್ದು, ಇದನ್ನು ಕಂಡ ಕಿಚ್ಚ ಸುದೀಪ್ ಸ್ವತಃ ಶಾಕ್ ಆಗಿದ್ದಾರೆ. ನನಗೆ ಗೊತ್ತು ನಾನು ಅದ್ಭುತವಾಗಿ ಡ್ಯಾನ್ಸ್ ಅಂತೂ ಮಾಡಿಲ್ಲ, ಡ್ಯಾನ್ಸೇ ಇಲ್ದೇ ಇರೋ ರೀತಿ ಹಾಡನ್ನು ಮಾಡಿಲ್ಲ ರೀ ನಾನು. ಕೈ ಅಲ್ಲಾಡಿಸದ ಹಾಗೆ ಡ್ಯಾನ್ಸ್ ಮಾಡಿದಿರೆಲ್ರಿ ಎಂದು ಹೇಳಿದ್ದಾರೆ. ಈ ಮೂಲಕ ಈ ವಾರ ವೀಕ್ಷಕರನ್ನು ನಕ್ಕು ನಲಿಸಿದ್ದಾರೆ.