Tag: Bigg Boss Season 9

  • Exclusive- ಬಿಗ್ ಬಾಸ್ 9 ಮನೆಗೆ ಎಂಟ್ರಿ ಕೊಟ್ಟಿರುವ ವಿಚಿತ್ರ, ವಿಶೇಷ, ವಿಕ್ಷಿಪ್ತ ಸ್ಪರ್ಧಿಗಳು

    Exclusive- ಬಿಗ್ ಬಾಸ್ 9 ಮನೆಗೆ ಎಂಟ್ರಿ ಕೊಟ್ಟಿರುವ ವಿಚಿತ್ರ, ವಿಶೇಷ, ವಿಕ್ಷಿಪ್ತ ಸ್ಪರ್ಧಿಗಳು

    ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆ ಏನಿರಬೇಕು? ಅವರು ಕೇವಲ ಸಿನಿಮಾ ಮತ್ತು ಕಿರುತೆರೆಯ ಸಿಲೆಬ್ರಿಟಿಗಳೇ ಆಗಿರಬೇಕಾ? ಆಯ್ಕೆಗೆ ಇಂಥದ್ದೇ ಮಾನದಂಡಗಳು ಇಲ್ಲವಾದ್ದರಿಂದ, ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಜನರಿಗೆ ಗೊತ್ತಿರುವ, ಸೋಷಿಯಲ್ ಮೀಡಿಯಾದಲ್ಲೂ ಆರ್ಭಟಿಸಿದವರಿಗೂ ಅವಕಾಶ ನೀಡಲಾಗುತ್ತಿದೆ. ಅಂತಹ ವಿಚಿತ್ರ, ವಿಶೇಷ ವ್ಯಕ್ತಿಗಳು ಕೂಡ ಈ ಬಾರಿ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಫಿನಾಡು ಚಂದು

    ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು ಕಾಫಿನಾಡು ಚಂದು (Coffenadu chandu). ಬಿಗ್ ಬಾಸ್ ಓಟಿಟಿಯಲ್ಲೇ ಚಂದು ಕಾಣಿಸಿಕೊಳ್ಳಬೇಕಿತ್ತು ಎಂದು ಹಲವರು ಅಪೇಕ್ಷೆ ಪಟ್ಟಿದ್ದರು. ಆದರೆ, ಈ ಬಾರಿ ಅವರಿಗೆ ಅವಕಾಶ ಸಿಕ್ಕಿದೆ. ಹ್ಯಾಪಿ ಬರ್ತಡೇ ಪದಗಳನ್ನು ತಮ್ಮದೇ ಆದ ಹಾಡಿನ ಮೂಲಕ ಹೇಳಿ ಫೇಮಸ್ ಆದವರು. ಮೂಲತಃ ಚಿಕ್ಕಮಗಳೂರಿನವರಾದು ಚಂದು, ಅಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ಸಣ್ಣಪುಟ್ಟ ಸಮಾಜ ಸೇವೆ ಮಾಡುವ ಇವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ಐಶ್ವರ್ಯಾ ಪಿಸ್ಸೆ

    ಬೆಂಗಳೂರು ಮೂಲದ ಐಶ್ವರ್ಯ ಪಿಸ್ಸೆ (Aishwarya Pissay) ಭಾರತೀಯ ಸರ್ಕ್ಯೂಟ್ ಮತ್ತು ಆಫ್ ರೋಡ್ ಮೋಟಾರ್ ಸೈಕಲ್ ರೇಸರ್. ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮೋಟಾರ್ ಸೈಕಲ್ ಕ್ರೀಡೆಯ ಆಟಗಾರ್ತಿ ಕೂಡ ಇವರಾಗಿದ್ದಾರೆ. ಬೆಂಗಳೂರಿನ ಪುಟ್ಟ ಪುಟ್ಟ ರಸ್ತೆಗಳಲ್ಲಿ ಬೈಕ್ ರೇಸ್ ಮಾಡುತ್ತಿದ್ದ ಈ ಹುಡುಗಿ ಆ ನಂತರ ಇದೀಗ ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಐಶ್ವರ್ಯಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಬೆಂಗಳೂರಿನಲ್ಲೇ ಮೋಟಾರ್ ಸೈಕಲ್ ತರಬೇತಿ ಪಡೆದಿರುವ ಐಶ್ವರ್ಯಾ, ಆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಬೈಕರ್ ಎನ್ನುವುದು ವಿಶೇಷ.

    ರಿವ್ಯೂ  ನವಾಜ್

    ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿವ್ಯೂ ವ್ಯಾಖ್ಯಾನವನ್ನೇ ಬದಲಿಸಿದವರು ನವಾಜ್ (Nawaz). ಪ್ರಾಸ ಪದಗಳನ್ನು ಪಂಚಿಂಗ್ ಡೈಲಾಗ್ ನಂತೆ ಹೇಳುತ್ತಾ, ತಮ್ಮದೇ ಆದ ನೋಡುಗರನ್ನು ಹೊಂದಿದವರು ನವಾಜ್. ಮೂಲತಃ ಬೆಂಗಳೂರಿನ ಹುಡುಗ. ಬಾಲ್ಯದಿಂದಲೇ ಬಡತನದಲ್ಲಿ ಬೆಳೆದವರು. ನವಾಜ್ ಹೇಳುವ ಪಂಚಿಂಗ್ ಡೈಲಾಗ್‍ ಗೆ ಉಪೇಂದ್ರ, ಡಾಲಿ ಧನಂಜಯ್ ಸೇರಿದಂತೆ ಹಲವರು ಫಿದಾ ಆಗಿದ್ದಾರೆ. ಇವರ ಮಾತುಗಳನ್ನು ಕೇಳಲೆಂದೇ ಹಲವರು ಸಿನಿಮಾ ರಿಲೀಸ್ ಆದಾಗ ಇವರ ಮುಂದೆ ನಿಂತು ಕೇಳಿದ್ದೂ ಇದೆ. ಒಂದು ರೀತಿಯಲ್ಲಿ ಸಿನಿಮಾ ರಂಗದ ಡಾರ್ಲಿಂಗ್ ಆಗಿಯೇ ನವಾಜ್ ಹೆಸರು ಮಾಡಿದ್ದಾರೆ. ಈ ರೀತಿಯ ರಿವಿವ್ಯುಗೆ ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದಾರೆ. ಎಲ್ಲ ಸಿನಿಮಾಗೂ ಒಂದೇ ರೀತಿಯಲ್ಲಿ ಡೈಲಾಗ್ ಹೊಡೆಯುವುದು ಸಿನಿಮಾಗೆ ಮಾಡುವ ಅವಮಾನ ಎಂದೇ ಕೆಲವರು ಟೀಕಿಸಿದ್ದಾರೆ. ಈ ಬಾರಿ ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

    ಸಂದೇಶ್ ಪ್ರಸನ್ನ ಕುಮಾರ್

    ಬೆಂಗಳೂರು ಮೂಲದ ಮತ್ತೋರ್ವ ಬೈಕ್ ರೇಸರ್ ಆಗಿರುವ ಸಂದೇಶ್ ಪ್ರಸನ್ನ (Sandesh Prasannakumar) ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೋಗುತ್ತಿದ್ದಾರೆ. ಸಂದೇಶ್ ಪ್ರಸನ್ನ ಕುಮಾರ್ ಕೂಡ ಈಗಾಗಲೇ ಹಲವು ರೇಸ್ ಗಳಲ್ಲಿ ಭಾಗಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ರೇಸ್ ನಲ್ಲೂ ಭಾಗಿಯಾದ ಹೆಗ್ಗಳಿಕೆ ಇವರದ್ದು. ಬಿಗ್ ಬಾಸ್ ಮನೆಗೆ ಸಂದೇಶ್ ಹೋಗುತ್ತಾರೆ ಎನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ಅಚ್ಚರಿ ಎನ್ನುವಂತೆ ಇವರ ಪ್ರವೇಶ ಆಗಿದೆ. ಈಗಾಗಲೇ ಮೋಟಾರ್ ಸೈಕಲ್ ರೇಸರ್ ಆಗಿರುವ ಐಶ್ವರ್ಯ ಕೂಡ ಮನೆಯಲ್ಲಿ ಇದ್ದಾರೆ. ಅವರ ಜೊತೆ ಇವರೂ ಸೇರ್ಪಡೆ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಬಿಗ್ ಬಾಸ್ ಓಟಿಟಿ ಮುಗಿದ ಒಂದು ವಾರದ ಗ್ಯಾಪ್ ನಂತರ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತಿದೆ. ಸೆ.24 ಕ್ಕೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಡಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾದವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಹಳೆ ಮತ್ತು ಹೊಸ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೊಂದು ವೇಳೆ ಏನಾದರೂ ಮಾಜಿಗಳಿಗೂ ಅವಕಾಶ ಸಿಕ್ಕರೆ ಬ್ರಹ್ಮಾಂಡ ಗುರೂಜಿಯನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ನೋಡುಗರು.

    ಈಗಾಗಲೇ ಜಿಂಗಲಕಾ ಲಕಾ ಲಕಾ ಅನ್ನುತ್ತಾ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ 9 ನಲ್ಲಿ ಭಾಗಿ ಆಗುತ್ತಿರುವುದರಿಂದ ಗುರೂಜಿಗಳ ಕಾಂಬಿನೇಷನ್ ಸಖತ್ತಾಗಿ ಇರಲಿದೆ ಎನ್ನುವುದು ಪ್ರೇಕ್ಷಕರು ಊಹೆ. ಅಲ್ಲದೇ, ಇಬ್ಬರೂ ಉತ್ತರ ದಕ್ಷಿಣ ಧೃವಗಳು ಆಗಿರುವುದರಿಂದ ಒಳ್ಳೆಯ ಮನರಂಜನೆಯೇ ಪ್ರೇಕ್ಷಕರಿಗೆ ಸಿಗಲಿದೆ ಎನ್ನುವ ಅಂದಾಜು ನೋಡುಗರದ್ದು. ಹಾಗಾಗಿ ಮತ್ತೆ ಬ್ರಹ್ಮಾಂಡ ಗುರೂಜಿಯನ್ನು ಮನೆ ಒಳಗೆ ಕಳುಹಿಸಿ ಎಂದು ನೆಟ್ಟಿಗರು ವಾಹಿನಿಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

    ಈ ನಡುವೆ ಸೀಸನ್ 9ಗೆ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವ ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯಾರು ಹೋಗುತ್ತಾರೋ, ಯಾರು ಗಾಸಿಪ್ ಕಾಲಂನಲ್ಲೇ ಉಳಿಯುತ್ತಾರೋ ಕಾದು ನೋಡಬೇಕು. ಆದರೆ, ಈ ಬಾರಿ ಹೊಸ ಬಗೆಯ ಸ್ಪರ್ಧಿಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಜೊತೆಗೆ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯರ್ ಆಯ್ಕೆ ಆಗಿರುವುದರಿಂದ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.

    ಈಗಾಗಲೇ ದೊಡ್ಮನೆ ಒಳಗೆ ಹೋಗುವವರು ಅಂತಿಮ ಪಟ್ಟಿ ಸಿದ್ಧವಾಗಿದೆ. ನಾಳೆಯಿಂದಲೇ ಅಥವಾ ಶನಿವಾರ ಬೆಳಗ್ಗೆಯಿಂದ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಗಳು ಚಿತ್ರೀಕರಣವಾಗಲಿವೆ. ಶನಿವಾರ ಸಂಜೆ ಹೊತ್ತಿಗೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಅರ್ಧ ಮಾಹಿತಿ, ರಾತ್ರಿ ಒಳಗೆ ಪೂರ್ಣ ಮಾಹಿತಿ ಹೊರ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    Breaking-‘ಬಿಗ್ ಬಾಸ್’ ಮನೆಗೆ ಜೊತೆ ಜೊತೆಯಲಿ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ ಹೋಗೋದು ಪಕ್ಕಾ

    ಬಿಗ್ ಬಾಸ್ ಕನ್ನಡ ಓಟಿಟಿ ಫಿನಾಲೆ ಹಂತ ತಲುಪಿದೆ. ಇದೇ ವಾರ ಕೊನೆಯ ಆಟ ಆಗಿರುವುದರಿಂದ ಬಿಗ್ ಬಾಸ್ ಸೀಸನ್ 9ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ವಾಹಿನಿಯು ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಮೂಲಗಳ  ಪ್ರಕಾರ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ (Aniruddha) ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ.

    ಬಿಗ್ ಬಾಸ್ (Bigg Boss Kannada) ಮತ್ತೆ ಶುರುವಾಗಲಿದೆ ಎಂದು ಸುದ್ದಿ ಹರಡಿದಾಗಲೇ ‘ಜೊತೆ ಜೊತೆಯಲಿ’ ಸೀರಿಯಲ್ ಸೆಟ್ ನಲ್ಲಿ ಈ ಬಾರಿ ಅನಿರುದ್ಧ ಬಿಗ್ ಬಾಸ್ ಮನೆಗೆ ಹೋಗುತ್ತಾರಂತೆ. ಅದಕ್ಕಾಗಿ ಅವರು ಧಾರಾವಾಹಿ ಬಿಡಲಿದ್ದಾರೆ ಅಥವಾ ಬೇಗ ಧಾರಾವಾಹಿಯನ್ನು ಮುಗಿಸಲು ತಿಳಿಸಿದ್ದಾರೆ ಅಂತೆಲ್ಲ ಮಾತುಗಳು ಕೇಳಿ ಬಂದಿದ್ದು ನಿಜ. ವಾಹಿನಿಯೂ ಕೂಡ ಅನಿರುದ್ಧ ಅವರನ್ನು ಆಹ್ವಾನಿಸಿದ್ದು ಸುಳ್ಳಲ್ಲ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅನಿರುದ್ಧ ಇರಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಜೊತೆ ಜೊತೆಯಲಿ ಟೀಮ್ ಜೊತೆ ಕಿರಿಕ್ ಮಾಡಿಕೊಂಡ ಸಂದರ್ಭದಲ್ಲಿಇಂಥದ್ದೊಂದು ನಿರ್ಧಾರವನ್ನು ನಿರ್ಮಾಪಕರು ತಗೆದುಕೊಂಡಿದ್ದಾರೆ. ಆದರೆ, ವಾಹಿನಿಗಳು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತವೆ ಎನ್ನುವುದೇ ಈಗಿರುವ ಪ್ರಶ್ನೆ.

    ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss Season 9) ಹೋಗಲು ಅನಿರುದ್ಧ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಆದರೂ, ಕೂಡ ಇಂಥದ್ದೊಂದು ಸುದ್ದಿಯು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಪಾತ್ರಕ್ಕೆ ಬೇರೆ ಶೇಪು ಕೊಟ್ಟಿರುವುದರಿಂದ ಅನಿರುದ್ಧ ಅವರು ಮತ್ತೆ ಆ ಧಾರಾವಾಹಿಯಲ್ಲಿ ನಟಿಸುವ ಆಸೆಯನ್ನು ಕೈ ಬಿಟ್ಟಿದ್ದಾರೆ. ಬಂದಿರುವ ಬಿಗ್ ಬಾಸ್ ಅವಕಾಶವನ್ನು ಒಪ್ಪಿಕೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಬಿಗ್ ಬಾಸ್ (Bigg boss) ಶೋ ಸದ್ಯ ಓಟಿಟಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಓಟಿಟಿನಲ್ಲಿ ಮುಕ್ತಾಯವಾಗಲು ಇನ್ನೂ ಎರಡು ವಾರ ಬಾಕಿ ಇದೆ. ಈ ಬೆನ್ನಲ್ಲೇ ಎಲ್ಲಾ ರಿಯಾಲಿಟಿ ಶೋಗಳ ಬಾಸ್, ಬಿಗ್ ಬಾಸ್ ಸೀಸನ್ ಒಂಭತ್ತು ಇದೀಗ ಟಿವಿಪರದೆಯಲ್ಲಿ ಬರಲು ಸಜ್ಜಾಗಿದೆ.

    ಸುದೀಪ್ (Sudeep) ನೇತೃತ್ವ ʻಬಿಗ್ ಬಾಸ್ʼ ರಿಯಾಲಿಟಿ ಶೋ ಓಟಿಟಿನಲ್ಲಿ ಸಖತ್ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ವಾಹಿನಿ ಗುಡ್ ನ್ಯೂಸ್ ಕೊಟ್ಟಿದೆ. `ಬಿಗ್ ಬಾಸ್’ ಕನ್ನಡ ಸೀಸನ್ 9 ಟಿವಿ ಪರದೆಯಲ್ಲಿ ಬರಲು ಈಗಾಗಲೇ ದಿನಗಣನೆ ಶುರುವಾಗಿದೆ. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಮೊದಲ ಬಾರಿಗೆ ಬಿಗ್ ಬಾಸ್ ಶೋ ಓಟಿಟಿನಲ್ಲಿ (Bigg boss ott) ಪ್ರಸಾರವಾಗಿದ್ದು, ಈ ಶೋ ಮುಕ್ತಾಯಗೊಳ್ಳಲು ಇನ್ನು ಎರಡು ವಾರ ಬಾಕಿಯಿದೆ. ಓಟಿಟಿಯಲ್ಲಿ ಯಾರು ವಿನ್ನರ್ ಆಗಬಹುದು ಎಂಬುದರ ಬಗ್ಗೆ ನೋಡುಗರಿಗೆ ಕುತೂಹಲವಿದೆ. ಓಟಿಟಿಯಲ್ಲಿ ಗಮನ ಸೆಳೆದ ಕೆಲ ಸ್ಪರ್ಧಿಗಳಿಗೆ `ಬಿಗ್ ಬಾಸ್ ಸೀಸನ್ 9′ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

    ಸುದೀಪ್ ನೇತೃತ್ವದಲ್ಲಿ ಮೂಡಿಬರಲಿರುವ `ಬಿಗ್ ಬಾಸ್ ಕನ್ನಡ ಸೀಸನ್ 9′ ಬರಲಿದೆ ಎಂಬುದನ್ನ ಖಾಸಗಿ ವಾಹಿನಿ ಅಧಿಕೃತವಾಗಿ ತಿಳಿಸಿದ್ದಾರೆ. ಹಾಗಾದ್ರೆ ಸೀಸನ್ 9ರ ಬಿಗ್ ಬಾಸ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ಹೊರ ಬಂತು ಹೊಸ ಫೋಟೋ: ನಾಳೆಯೇ ದೊಡ್ಮನೆ ಪ್ರವೇಶ

    ‘ಬಿಗ್ ಬಾಸ್’ ಮನೆಯಿಂದ ಹೊರ ಬಂತು ಹೊಸ ಫೋಟೋ: ನಾಳೆಯೇ ದೊಡ್ಮನೆ ಪ್ರವೇಶ

    ನಿರೀಕ್ಷಿತ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಫೋಟೋವೊಂದು ಹೊರ ಬಂದಿದೆ. ಒಂದು ಕೈ ಕಣ್ಣು ಮುಚ್ಚಿರುವ ಮತ್ತೊಂದು ಕೈ ಕತ್ತು ಹಿಡಿದಿರುವ ಈ ಫೋಟೋ ಏನನ್ನು ಸೂಚಿಸುತ್ತದೆ ಎಂದು ಹಲವರು ತಲೆ ಕೆಡಿಸಿಕೊಂಡು ಕೂತಿದ್ದಾರೆ. ಈ ಫೋಟೋವನ್ನು ಕನ್ನಡ ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಓವರ್ ದಿ ಟಾಪ್ ಎಂದು ಬರೆದು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

    ಎಂದಿನಂತೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವವರನ್ನು ಗ್ರ್ಯಾಂಡ್ ಎಂಟ್ರಿ ಕಾರ್ಯಕ್ರಮದ ಮೂಲಕ ಬರಮಾಡಿಕೊಳ್ಳುವುದು ಸಂಪ್ರದಾಯ. ಇದರ ಚಿತ್ರೀಕರಣ ನಾಳೆಯೇ ನಡೆಯಲಿದೆ. ಆಗಸ್ಟ್ 6 ರಿಂದ ಬಿಗ್ ಬಾಸ್ ಪ್ರಾರಂಭವಾಗಬೇಕಿದ್ದರಿಂದ ನಾಳೆ ಬೆಳಗ್ಗೆಯಿಂದ ಗ್ರ್ಯಾಂಡ್ ಎಂಟ್ರಿ ಶೂಟಿಂಗ್ ಶುರುವಾಗಲಿದೆ. ಈಗಾಗಲೇ ಸುದೀಪ್ ಅವರು ಶೂಟಿಂಗ್ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಅವರಿಗಾಗಿಯೇ ಒಂದು ಸ್ಪೆಷಲ್ ಮನೆಯನ್ನೂ ಕಟ್ಟಿಕೊಟ್ಟಿದೆ ವಾಹಿನಿ. ಇದನ್ನೂ ಓದಿ:ಪತಿ ಪಾದದ ಬಳಿ ಕೂತು ಪೂಜಿಸಿದಕ್ಕೆ ಟ್ರೋಲ್ ಆದ ನಟಿ ಪ್ರಣಿತಾ

    ಬಿಗ್ ಬಾಸ್ ಮನೆಯ ಅಂತಿಮ ಕೆಲಸಗಳು ಮುಗಿದಿದ್ದು, ನಾಳೆಯಿಂದ ಆ ಮನೆ ಲಾಕ್ ಆಗಲಿದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಯೊಳಗೆ ಇರಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ. ಈಗಾಗಲೇ ಕೆಲವು ಹೆಸರುಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಆ ಹೆಸರುಗಳಲ್ಲಿ ಯಾರೆಲ್ಲ ಮನೆಯೊಳಗೆ ಇರಲಿದ್ದಾರೆ ಎನ್ನುವುದು ಶುಕ್ರವಾರ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 6 ರಿಂದ ಓಟಿಟಿಯಲ್ಲಿ ಕನ್ನಡದ ಬಿಗ್ ಬಾಸ್: ಪ್ರೊಮೋ ರಿಲೀಸ್

    ಆಗಸ್ಟ್ 6 ರಿಂದ ಓಟಿಟಿಯಲ್ಲಿ ಕನ್ನಡದ ಬಿಗ್ ಬಾಸ್: ಪ್ರೊಮೋ ರಿಲೀಸ್

    ನ್ನಡದ ಬಿಗ್ ಬಾಸ್ ಶೋಗೆ ದಿನಗಣನೆ ಶುರುವಾಗಿದೆ. ಆಗಸ್ಟ್ ನಿಂದ ಕನ್ನಡದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದಿನಾಂಕ ಘೋಷಣೆ ಆಗಿರಲಿಲ್ಲ. ಇದೀಗ ವಾಹಿನಿಯು ದಿನಾಂಕವನ್ನು ಘೋಷಣೆ ಮಾಡಿದ್ದು, ಆಗಸ್ಟ್ 6 ರಿಂದ ವೂಟ್ಸ್ ಓಟಿಟಿಯಲ್ಲಿ ಸಂಜೆ 7 ಗಂಟೆಯಿಂದ ಪ್ರಸಾರವಾಗಲಿದೆ. ಈಗಾಗಲೇ ಪ್ರೊಮೋ ಕೂಡ ರಿಲೀಸ್ ಆಗಿದೆ.

    ರಿಲೀಸ್ ಆಗಿರುವ ಪ್ರೋಮೋ ಸಖತ್ ಕ್ಯೂರಿಯಾಸಿಟಿ ಮೂಡಿಸುತ್ತಿದ್ದು, ಈ ಬಾರಿ ದೊಡ್ಮೆನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಹಲವು ಹೆಸರುಗಳು ಕೇಳಿ ಬರುತ್ತಿದ್ದು, ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಟಿವಿ ಶೋ ಅಲ್ಲ, ಓಟಿಟಿ ಶೋ ಎಂದೇ ಪ್ರೊಮೋದಲ್ಲಿ ಸ್ಪಷ್ಟವಾಗಿ ಹೇಳುವ ಮೂಲಕ ಗೊಂದಲವನ್ನು ನಿವಾರಿಸಿದ್ದಾರೆ ಸುದೀಪ್. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ದೊಡ್ಮನೆ ಈಗಾಗಲೇ ಸಿದ್ಧಗೊಂಡಿದೆ. ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆಯೂ ಶುರುವಾಗಿದೆಯಂತೆ. ಆಗಸ್ಟ್ 4 ಮತ್ತು 5 ರಂದು ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಓಟಿಟಿಯಲ್ಲಿ ಫಿನಾಲೆ ಮುಗಿಯುತ್ತಿದ್ದಂತೆಯೇ ಟಿವಿಗಾಗಿ ಮತ್ತೊಂದು ಬಿಗ್ ಬಾಸ್ ಶೋ ಶುರುವಾಗಲಿದೆಯಂತೆ. ಓಟಿಟಿಯಲ್ಲಿ ವಿನ್ ಆದ ಸ್ಪರ್ಧಿಯು ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಮನೆಯಲ್ಲೂ ಇರುತ್ತಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದ್ರಾ? ಚಾನೆಲ್ ಹೇಳುವುದೇನು?

    ಬಿಗ್ ಬಾಸ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದ್ರಾ? ಚಾನೆಲ್ ಹೇಳುವುದೇನು?

    ನ್ನಡ ಕಲರ್ಸ್ ವಾಹಿನಿಯ ಅತ್ಯಂತ ದುಬಾರಿ ಶೋ ಬಿಗ್ ಬಾಸ್ ಮುಂದಿನ ತಿಂಗಳಿಂದ ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳು ನಡೆಯುತ್ತಿವೆ. ಬಿಗ್ ಬಾಸ್ ಮನೆ ರೆಡಿ ಆಗುತ್ತಿರುವ ಕುರಿತು ವಾಹಿನಿಯ ಮುಖ್ಯಸ್ಥರೆ ಈಗಾಗಲೇ ತಿಳಿಸಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರ ಪ್ರೊಮೋಗಳನ್ನು ಚಿತ್ರೀಕರಣ ಮಾಡಲಾಗಿದೆ. ಈ ನಡುವೆ ಬಿಗ್ ಬಾಸ್ ಆಯ್ಕೆಯ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದಾರಾ ಎನ್ನುವ ಅನುಮಾನ ಹುಟ್ಟಿದೆ.

    ಈ ಕುರಿತು ವಾಹಿನಿಯೇ ಒಂದಷ್ಟು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಿಗ್ ಬಾಸ್ ಶೋ ಸ್ಪರ್ಧಿಗಳು ನೇರವಾಗಿ ಆಯ್ಕೆ ಆಗುವುದರಿಂದ ಮತ್ತು ಅವರನ್ನು ವಾಹಿನಿಯೇ ಆಯ್ಕೆ ಮಾಡುವುದರಿಂದ ಈ ವಿಷಯದಲ್ಲಿ ಯಾರಾದರೂ ದುಡ್ಡು ಕೇಳಿದರೆ ದೂರು ಕೊಡಿ ಎಂದು ಹೇಳಿದೆ. ಕೆಲವರು ಬಿಗ್ ಬಾಸ್ ಹೆಸರಿನಲ್ಲಿ ವಸೂಲಿಗೆ ಇಳಿದಿರುವ ಕುರಿತು ಮಾಹಿತಿಯು ವಾಹಿನಿಗೆ ಬಂದಿದ್ದರಿಂದ, ಇಂಥದ್ದೊಂದು ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಬಿಗ್ ಬಾಸ್ ಮನೆಗೆ ಹೋಗಲು ತರಬೇತಿ, ಇನ್ಫ್ಯೂಲೆನ್ಸ್ ಹೆಸರಿನಲ್ಲಿ ಕೆಲವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿಯು ವಾಹಿನಿಗೆ ಸಿಕ್ಕಿದೆ ಅಂತೆ. ಹಾಗಾಗಿ ಯಾರೂ ದುಡ್ಡು ಕೊಡಬೇಡಿ, ಮೋಸ ಹೋಗಬೇಡಿ ಎಂದು ವಾಹಿನಿಯು ಎಚ್ಚರಿಸಿದೆ. ಹಾಗೇನಾದರೂ ದುಡ್ಡು ಕಳೆದುಕೊಂಡರೆ ವಾಹಿನಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದೆ.

    Live Tv
    [brid partner=56869869 player=32851 video=960834 autoplay=true]