Tag: Bigg Boss Season 9

  • BREAKING: ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    BREAKING: ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    ರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಸೀಸನ್ 9ರ (Bigg Boss Kannada Season 9) ವಿನ್ನರ್ ಆಗಿದ್ದಾರೆ. ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.

    ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.

    ರಾಕೇಶ್ ಅಡಿಗಗೆ (Rakesh Adiga) ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

    ಈ ಬಾರಿ ‘ಬಿಗ್ ಬಾಸ್​​ ಕನ್ನಡ’ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಒಟ್ನಲ್ಲಿ ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಸ್ಪರ್ಧಿ ಜೇಬಿಗೆ ಭಾರೀ ಮೊತ್ತದ ಬಹುಮಾನ: ನಟ ಸುದೀಪ್ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಕೋಪ ಮಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಮನೆಯಲ್ಲಿರುವ ಹಲವಾರು ಜನರ ಜೊತೆ ಅವರು ಹೀಗೆ ಕೋಪ ಮಾಡಿಕೊಂಡಿದ್ದಾರೆ. ಜಗಳವನ್ನೂ ಆಡಿದ್ದಾರೆ. ಆದರೆ, ಪ್ರಶಾಂತ್ ಸಂಬರ್ಗಿ ವಿಷಯದಲ್ಲಿ ಅವರು ಪದೇ ಪದೇ ರೊಚ್ಚಿಗೇಳುತ್ತಲೇ ಇರುತ್ತಾರೆ.

    ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಗಲಾಟೆ ಆಗಿದ್ದು, ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ. ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ. ಅವರು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಟಾಸ್ಕ್. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಇದೀಗ ಬಿಗ್ ಬಾಸ್ (Bigg Boss Season 9) ಮನೆಯ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಅದರಂತೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.

    ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ (Prashant Sambargi) ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ಣ ಹೇಳಿದರೆ. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ (Anupama Gowda) ಹೇಳಿದ್ದು ಜಗಳಕ್ಕೆ ಕಾರಣವಾಯಿತು. ಸಂಬರ್ಗಿಯ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಸರಿಬರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು.

    ತಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಕೇಳಿಕೊಂಡರು ರೂಪೇಶ್ ರಾಜಣ್ಣ. ಕೋಪಗೊಂಡಿದ್ದ ರೂಪೇಶ್ ಅವರನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯ ಸಮಾಧಾನಿಸಿದರು. ಆದರೆ, ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ರೂಪೇಶ್ ಕೂಗಾಡಿದ್ರು ಎಂದು ನೊಂದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯ್ಯರ್ ನಡುವೆ ಕಿರಿಕಿರಿ, ಬ್ರೇಕಪ್ ಸೂಚನೆ

    ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯ್ಯರ್ ನಡುವೆ ಕಿರಿಕಿರಿ, ಬ್ರೇಕಪ್ ಸೂಚನೆ

    ಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ (Sanya Iyer) ಮನಸ್ತಾಪ ಬಿಗ್ ಬಾಸ್ (Bigg Boss Season 9) ನೋಡುಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಚಿಕ್ಕ ಚಿಕ್ಕ ವಿಷಯಕ್ಕೂ ರೂಪೇಶ್ ಮೇಲೆ ಸಾನ್ಯ ಕೋಪ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರೂಪೇಶ್ ಸದಾ ತನ್ನ ಜೊತೆಯೇ ಇರಬೇಕು ಎಂದು ಸಾನ್ಯ ಬಯಸುತ್ತಿದ್ದಾಳೆ. ಈ ಕಿರಿಕಿರಿ ಕೇವಲ ನೋಡುಗರಿಗೆ ಮಾತ್ರವಲ್ಲ, ಸ್ವತಃ ರೂಪೇಶ್ ತಟ್ಟಿದೆ. ಹಾಗಾಗಿಯೇ ಸಾನ್ಯಾ ಮೇಲೆ ರೂಪೇಶ್ ಅಸಮಾಧಾನ ತೋಡಿಕೊಂಡಿದ್ದಾರೆ. ‘ದಯವಿಟ್ಟು ನನ್ನಿಂದ ದೂರ ಇರು’ ಎಂದು ಬಾಯ್ಬಿಟ್ಟೂ ಹೇಳಿದ್ದಾರೆ.

    ರೂಪೇಶ್ ಶೆಟ್ಟಿ (Rupesh Shetty) ಮತ್ತು ಸಾನ್ಯಾ ಐಯ್ಯರ್ ಇಬ್ಬರೂ ಬಿಗ್ ಬಾಸ್ ಮನೆಯ ‘ದಿ ಬೆಸ್ಟ್ ಜೋಡಿ’ ಎಂದೇ ಬಿಂಬಿಸಲಾಗಿತ್ತು. ಇಬ್ಬರ ನಡುವೆ ರಿಲೇಶನ್ ಶಿಪ್ ಇದೆ ಎಂದೂ ಹಲವರು ಮಾತನಾಡಿಕೊಂಡರು. ಅವರೂ ಹಾಗೆಯೇ ಇದ್ದರು. ಅವರ ಮಾತುಕತೆ, ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಥೇಟ್ ಪ್ರೇಮಿಗಳಂತೆಯೇ ಇರುತ್ತಿದ್ದವು.  ಸದಾ ಅಂಟಿಕೊಂಡೇ ಇರುತ್ತಿದ್ದ ಜೋಡಿಯನ್ನು ಅಗಲುವಂತೆ (Break Up) ಮಾಡಿದ್ದು ಕಿಚ್ಚ ಸುದೀಪ್. ಅಲ್ಲಿಂದ ರೂಪೇಶ್ ವರಸೆಯೇ ಬದಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಮೈಮರೆತು ಮಲಗಿದ್ದ ಈ ಜೋಡಿ ಕಂಡು ಸುದೀಪ್ ಕಿಡಿಕಾರಿದ್ದರು. ಬಿಗ್ ಬಾಸ್ ಮನೆ ಇರುವುದು ಅಂಥದ್ದಕ್ಕಲ್ಲ ಎಂದೂ ಎಚ್ಚರಿಸಿದ್ದರು. ಸುದೀಪ್ ಆಡಿದ ಮಾತಿಗೆ ರೂಪೇಶ್ ಕಣ್ಣೀರೂ ಕೂಡ ಹಾಕಿದ್ದರು. ಅಲ್ಲಿಂದ ರೂಪೇಶ್ ಬದಲಾಗುತ್ತಾ ಬರುತ್ತಿದ್ದಾರೆ. ಸಾಧ್ಯವಾದಷ್ಟು ಸಾನ್ಯರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಾನ್ಯಾ ಮಾತ್ರ ರೂಪೇಶ್ ನಿಂದ ದೂರ ಹೋಗುತ್ತಿಲ್ಲ. ರೂಪೇಶ್ ದೂರ ಹೋದಷ್ಟು ಸಾನ್ಯ ಮತ್ತಷ್ಟು ಹತ್ತಿರಕ್ಕೆ ಬರುತ್ತಿದ್ದಾಳೆ. ಇದು ರೂಪೇಶ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಊಟ ಮಾಡುತ್ತಿದ್ದ ರೂಪೇಶ್ ಬಳಿ ಬಂದು ತನ್ನನ್ನು ಬಿಟ್ಟು ಊಟ ಮಾಡಿದ್ದಕ್ಕೆ ಸಾನ್ಯ ಕೋಪಿಸಿಕೊಳ್ಳುತ್ತಾಳೆ. ಪದೇ ಪದೇ ಯಾಕೆ ಹೀಗೆ ನನ್ನನ್ನು ನೋಯಿಸ್ತೀಯಾ ಎಂದು ಕೇಳುತ್ತಾಳೆ. ಉದ್ದೇಶ ಪೂರ್ವಕವಾಗಿಯೇ ನೀನು ಹೀಗೆ ಮಾಡ್ತಿದ್ದೀಯಾ ಎಂದು ಆರೋಪಿಸುತ್ತಾಳೆ. ಅದರಲ್ಲೂ ತನ್ನನ್ನು ಬಿಟ್ಟು ರೂಪೇಶ್ ಊಟ ಮಾಡಿದ್ದು, ಸಾನ್ಯಾಗೆ ಅಪಾರ ನೋವು ತಂದಿದೆ. ಅದನ್ನು ಹೇಳಿಯೂ ಕೊಳ್ತಾಳೆ. ಆದರೆ, ರೂಪೇಶ್ ಮಾತ್ರ ಆಕೆಯ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಸಾನ್ಯಳಿಂದ ದೂರ ಇರುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಾನ್ಯಾಗೆ ಮಾತ್ರ ಇನ್ನೂ ಅದು ಅರ್ಥವಾಗುತ್ತಿಲ್ಲ. ಬಹುಶಃ ರೂಪೇಶ್ ದೂರ ಇರುವ ಮೂಲಕ ಸಾನ್ಯಾರಿಂದ ಸ್ನೇಹ ಕಡಿದುಕೊಳ್ಳುವ ಸೂಚನೆಯನ್ನಂತೂ ಕೊಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ಮಯೂರಿ ಔಟ್: ನೋವಿನಿಂದಲೇ ಹೊರ ನಡೆದ ನಟಿ

    ‘ಬಿಗ್ ಬಾಸ್’ ಮನೆಯಿಂದ ಮಯೂರಿ ಔಟ್: ನೋವಿನಿಂದಲೇ ಹೊರ ನಡೆದ ನಟಿ

    ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಕಿರುತೆರೆಗೆ ಪರಿಚಿತರಾದ ಮಯೂರಿ (Mayuri) ಇದಾದ ಬಳಿಕ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದರು. ದೊಡ್ಮನೆಯಲ್ಲಿ ಸೈ ಎನಿಸಿಕೊಂಡಿದ್ದ ಹುಬ್ಬಳ್ಳಿ ಹುಡುಗಿ ಮಯೂರಿ ಬಿಗ್ ಬಾಸ್ ಮನೆಯಿಂದ ಇದೀಗ ಎಲಿಮಿನೇಟ್ ಆಗಿದ್ದಾರೆ.

    ಸೀರಿಯಲ್ , ಸಿನಿಮಾ, ರಿಯಾಲಿಟಿ ಶೋ ಜಡ್ಜ್ ಆಗಿ, ಮಯೂರಿ ಗುರುತಿಸಿಕೊಂಡಿದ್ದರು. ಬಳಿಕ ಬಿಗ್ ಬಾಸ್ (Bigg Boss Season 9) ಮನೆಗೆ ನಟಿ ಕಾಲಿಟ್ಟಿದ್ದರು. ಈಗ ದೊಡ್ಮನೆಯ ಆಟ ಮಯೂರಿಗೆ ಅಂತ್ಯವಾಗಿದೆ. ಸುದೀಪ್ ಇಲ್ಲದೇ ಎಲಿಮಿನೇಷನ್ ನಡೆದಿರೋದು ಮನೆಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಬಿಗ್ ಬಾಸ್ ಶೋನ ರೂವಾರಿ ಸುದೀಪ್ (Sudeep) ಅವರು ಪತ್ನಿ ಪ್ರಿಯಾ ಜತೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. (ಅ. 23) ಭಾರತ ಹಾಗೂ ಪಾಕಿಸ್ತಾನದ ನಡುವಣ ಮ್ಯಾಚ್ ಅನ್ನ  ಈ ದಂಪತಿ ವೀಕ್ಷಿಸಿದ್ದಾರೆ. ಇದರ ಜೊತೆಗೆ ಸುದೀಪ್ ಅನುಪಸ್ಥಿತಿಯಲ್ಲಿ ವಾರಾಂತ್ಯದ ಎಲಿಮಿನೇಷನ್ (Eliminate) ಕೂಡ ನಡೆದಿದೆ.

    ಇನ್ನೂ ವೀಕೆಂಡ್ ನಲ್ಲಿ ನೇಹಾ ಮತ್ತು ಮಯೂರಿ ನಡುವೆ ಜಟಾಪಟಿ ಇತ್ತು. ಆ ಪೈಕಿ ಮಯೂರಿ ಔಟ್ ಆದರು. ಸದಾ ಮಗುವಿನ ಚಿಂತೆಯಲ್ಲಿ ಇರುತ್ತಿದ್ದ‌‌ ಈ‌ ನಟಿ. ಮನೆಯಿಂದ ಹೊರಹೋಗಬೇಕು ಎಂಬುದು ಮಯೂರಿ ಆಸೆ ಆಗಿತ್ತು. ಇದುವೇ ಅವರಿಗೆ ಮುಳುವಾಗಿದೆ. ಬಿಗ್ ಬಾಸ್ ಮನೆಯ ಆಟಕ್ಕೆ ಬ್ರೇಕ್ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಸದ್ಯಕ್ಕೆ ಈಡೇರದಿದ್ದರೂ, ಮುಂದಿನ ದಿನಗಳಲ್ಲಿ ಕಂಡಿತಾ ಸಾಧ್ಯವಾಗಬಹುದು ಎಂದು ಪ್ರಶಾಂತ್ ಸಂಬರ್ಗಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಆರ್ಯವರ್ಧನ್ ಗುರೂಜಿ ಬೇಡಿಕೆ ಏನಾಗಿತ್ತು? ಯಾಕೆ ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾದರು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ ಪ್ರಶಾಂತ್ ಸಂಬರ್ಗಿ(Prashant Sambargi) , ಕ್ಯಾಮೆರಾ ಮುಂದೆ ಬಂದು ‘ಬಿಗ್ ಬಾಸ್ ನನ್ನದು ಊಟ ಆಯಿತು, ನಿಮ್ಮದು ಆಯಿತಾ ಅಂದ್ಕೋತೀನಿ. ಥ್ಯಾಂಕ್ಸ್ ಬಿಗ್ ಬಾಸ್’ ಅಂದರು. ಅದನ್ನು ಗಮನಿಸುತ್ತಿದ್ದ ಆರ್ಯವರ್ಧನ್ ಗುರೂಜಿ, ‘ನೀವಷ್ಟೇ ಕ್ಯಾಮೆರಾ ಮುಂದೆ ಮಾತಾಡ್ಬೇಕಾ? ನಾನೂ ಮಾತಾಡ್ತೀನಿ’ ಅಂತ ಕ್ಯಾಮೆರಾ ಎದುರು ನಿಂತರು. ಪ್ರಶಾಂತ್ ಸಂಬರ್ಗಿ ರೀತಿಯಲ್ಲೇ ಗುರೂಜಿ ಕೂಡ ಬಿಗ್ ಬಾಸ್ ಗೆ ಏನಾದರೂ ಕೇಳುತ್ತಾರೆ ಅಂದುಕೊಂಡರೆ ಲೆಕ್ಕಾಚಾರವೇ ಉಲ್ಟಾ ಆಯಿತು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ‘ ಐ ಲವ್ ಯೂ ರಚಿತಾ’ (Rachita) ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್ ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮತ್ತೆ ಮಾತು ಮುಂದುವರೆಸಿದ ಗುರೂಜಿ, ‘ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು’ ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾದರು.

    ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಆನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು. ಅಷ್ಟಕ್ಕೆ ಸುಮ್ಮನಾಗದ ಗುರೂಜಿ, ‘ಇಲ್ಲಿ ಎಲ್ಲರೂ ನೈಟ್ ಹಗ್ ಮಾಡ್ತಾರೆ. ಅಯ್ಯಯ್ಯೋ ನಂಗೆ ನೋಡೋಕೆ ಆಗ್ತಿಲ್ಲ. ಅವರನ್ನೆಲ್ಲ ನೋಡಿ ನಿನ್ನ ಹಗ್ ಮಾಡ್ಬೇಕು ಅನಿಸ್ತಿದೆ’ ಎಂದು ತಮ್ಮೊಳಗೆ ತುಮುಲಗಳನ್ನು ಬಿಚ್ಚಿಟ್ಟರು ಗುರೂಜಿ.

    ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ’ ಎಂದು ಆಶ್ವಾಸನೆ ನೀಡಿದರು. ಗುರೂಜಿ ಮಾತುಗಳನ್ನು ಕೇಳಿಸಿಕೊಂಡ ದೊಡ್ಮನೆ ಸದಸ್ಯರು ಗುರೂಜಿ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರು. ಗುರೂಜಿ ಮಾತು ಒಂದು ಕ್ಷಣ ಅಚ್ಚರಿ ಮತ್ತೊಂದು ಕ್ಷಣ ಭಾವುಕತೆಗೆ ನೂಕಿದ್ದು ಸುಳ್ಳಲ್ಲ. ಮನೆಯಿಂದ ಗುರೂಜಿ ಆಚೆ ಬಂದ ತಕ್ಷಣವೇ ರಚಿತಾ ಅವರು ಹಗ್ ಮಾಡಿಕೊಂಡು ಪತಿಯನ್ನು ಸ್ವಾಗತಿಸಿಕೊಳ್ಳಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಬಿಗ್ ಬಾಸ್ (Bigg Boss Season 9) ಮನೆಯ ಪ್ರಣಯ ಪಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದವರು ರೂಪೇಶ್ ಶೆಟ್ಟಿ (Rupesh Shetty) ಹಾಗೂ ಸಾನ್ಯ ಅಯ್ಯರ್. ಈ ಜೋಡಿಯ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿ ಹೀಗೆಯೇ ನಗ್ತಾ ಇರಲಿ ಎಂದು ಹಾರೈಸಿದ್ದರು. ಹಾಗಂತ ರೂಪೇಶ್ ಶೆಟ್ಟಿ ಆಗಲಿ, ಸಾನ್ಯ ಅಯ್ಯರ್ ಆಗಲಿ ನೋಡುಗರಿಗೆ ಮುಜುಗರ ಪಡುವಂತೆ ಯಾವತ್ತೂ ನಡೆದುಕೊಂಡವರಲ್ಲ. ಆದರೆ, ಮೊನ್ನೆ ಹಾಗಾಗಲಿಲ್ಲ. ಅವರ ಉದ್ದೇಶ ಅದಾಗದೇ ಇರಬಹುದು. ಅದೇ ಇರಬಹುದು ಎನ್ನುವ ಕಾರಣಕ್ಕಾಗಿ ಸುದೀಪ್ ಸಿಡಿದೆದ್ದರು.

    ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್  (Sanya Iyer) ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇವರ ಎದುರು ಆರ್ಯವರ್ಧನ್ (Aryavardhan Guruji) ಮಲಗಿದ್ದರು. ಮೂವರು ಮಲಗಿಕೊಂಡೇ ಹರಟೆ ಹೊಡೆಯುತ್ತಿದ್ದರು. ತಾವು ಮಲಗಿದ ರೀತಿ ಸರಿ ಇಲ್ಲ ಅಂತ ರೂಪೇಶ್ ಗಾಗಲಿ, ಸಾನ್ಯ ಅಯ್ಯರ್ ಗಾಗಲೇ ಅನಿಸದೇ ಇರಬಹುದು. ಆದರೆ, ಅದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದಾರೆ. ಆ ರೀತಿ ವರ್ತಿಸೋದು ತಪ್ಪು ಎಂದು ಸುದೀಪ್ ಮೂಲಕ ಹೇಳಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ರೂಪೇಶ್ ಮತ್ತು ಸಾನ್ಯ ಆ ರೀತಿ ಮಾಡಿದ್ದಕ್ಕೆ  ಗರಂ ಆದ ಸುದೀಪ್ (Kichcha Sudeep) ‘ಕ್ಯಾಪ್ಟೆನ್ಸಿ ರೂಮ್ ನಲ್ಲಾಗಿದ್ದು ನಾಟ್ ಆಕ್ಸೆಪ್ಟಬಲ್. ಇದರಿಂದ ಕಂಟೆಂಟ್ ಸಿಗುತ್ತದೆ ಅಂದುಕೊಂಡಿದ್ದರೆ, ದಿಸ್ ಈಸ್ ನಾಟ್ ಎ ಶೋ ಫಾರ್ ದಟ್. ಈ ಮನೆ ಅದಕ್ಕಲ್ಲ’ ಎಂದು ಕಿಚ್ಚ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟರು. ಸುದೀಪ್ ಅವರ ಮಾತಿನಿಂದ ಶಾಕ್ ಗೆ ಒಳಗಾದ ಈ ಜೋಡಿಗೆ ನಂತರ ಸಮಾಧಾನ ಮಾಡ್ತಾ, ‘ಯಾವುದೂ ಏನೂ ಹೊರಗೆ ಡ್ಯಾಮೇಜ್ ಆಗಿಲ್ಲ. ನೆಕ್ಸ್ಟ್ ಆಗೋದನ್ನ ತಡೆಯೋ ಪ್ರಯತ್ನ. ಫೋಕಸ್ ಮಿಸ್ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

    ಈ ಎಚ್ಚರಿಕೆಯನ್ನು ರೂಪೇಶ್ ಶೆಟ್ಟಿ ತುಂಬಾ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ. ಈ ಘಟನೆಯಿಂದ ನೊಂದುಕೊಂಡಿದ್ದ ರೂಪೇಶ್ ಮೊದಲು ಕಣ್ಣೀರು ಹಾಕಿದರು. ಇದೀಗ ಸಾನ್ಯರಿಂದ ದೂರ ಉಳಿಯುತ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯ ಕಾಯುತ್ತಿದ್ದರೂ, ಹೋಗಲಿಲ್ಲ. ಅಲ್ಲದೇ, ಸಾನ್ಯ ಜೊತೆ ಸರಿಯಾಗಿಯೂ ಅವರು ಮಾತನಾಡುತ್ತಿಲ್ಲ. ಪ್ರತಿ ನಿತ್ಯ ಸಾನ್ಯ ಜೊತೆನೇ ಕೂತು ಊಟ ಮಾಡುತ್ತಿದ್ದ ರೂಪೇಶ್, ಕಿಚ್ಚನ ಎಚ್ಚರಿಕೆಯ ಮಾತುಗಳ ನಂತರ ಸಾನ್ಯ ಜೊತೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ‘ಈ ರೀತಿ ನೀನು ಮಾಡಬೇಡ’ ಎಂದು ಸಾನ್ಯ ಹೇಳಿದರೂ, ರೂಪೇಶ್ ಈವರೆಗೂ ಬದಲಾಗಿಲ್ಲ.

    ರೂಪೇಶ್ ಈ ನಡೆಯಿಂದ ಸಾನ್ಯ ಕೂಡ ಅಪ್ ಸೆಟ್ ಆಗಿದ್ದಾರೆ. ನೇರವಾಗಿಯೇ ರೂಪೇಶ್ ಬಳಿ ಬಂದು ‘ಮೊದಲಿನ ಹಾಗೆ ನೀನು ಇಲ್ಲ. ತುಂಬಾ ಚೇಂಜ್ ಆಗಿದ್ದೀಯಾ. ನಿನಗೆ ಅಪ್ ಸೆಟ್ ಆಗಿದೆ ಅಂತಾನೇ ನಿನ್ನ ಜೊತೆ ನಾನು ಇರಬೇಕು ಅಂತ ಬರ್ತಿರೋದು. ಆದರೆ, ನೀನು ಅವೈಡ್ ಮಾಡ್ತಿದ್ದೀಯಾ’ ಎಂದು ಹಲವು ಪ್ರಶ್ನೆಗಳನ್ನು ಬೇಸರದಿಂದಲೇ ಕೇಳಿದರು ಸಾನ್ಯ. ‘ನನ್ನ ಬಗ್ಗೆ ಸದ್ಯ ನೀನೇ ಏನೇ ಅಂದುಕೊಂಡಿದ್ದರೂ, ನಿನ್ನ ಮೇಲಿನ ಕಾಳಜಿ ಬದಲಾಗಲ್ಲ’ ಎನ್ನುವ ಮೂಲಕ ರೂಪೇಶ್ ಆಕೆಗೆ ಸಮಾಧಾನ ಮಾಡಿದ್ದಾರೆ. ಆದರೆ, ಈ ಪ್ರೀತಿ ಹಾಗೆಯೇ ಉಳಿಯತ್ತಾ? ಅಥವಾ ಸುದೀಪ್ ಅವರ ಮಾತಿನ ಕಾರಣದಿಂದಾಗಿ ಬ್ರೇಕ್ ಅಪ್ ಆಗತ್ತಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್

    ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್

    ದುರ್ಗಾ, ಸೀತಾ ವಲ್ಲಭ, ಸೀರಿಯಲ್ ಮೂಲಕ ಮೋಡಿ ಮಾಡಿದ್ದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಕಾಲಿಟ್ಟಿದ್ದರು. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದ ದರ್ಶ್ ಇದೀಗ ಮೂರನೇ ವಾರಕ್ಕೆ ದೊಡ್ಮನೆಯಿಂದ ಹೊರ ನಡೆದಿದ್ದಾರೆ.

    ನಟನೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ದರ್ಶ್ ಚಂದ್ರಪ್ಪ (Darsh Chandrappa) ಬಿಗ್ ಬಾಸ್ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ತಮ್ಮ ಖಡಕ್ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ಕೂಡ ಇದೆ. ಚಿನ್ನದ ಗಣಿ ಟಾಸ್ಕ್‍ನಲ್ಲಿ ಉತ್ತಮವಾಗಿ ಆಟವಾಡಿ ದರ್ಶ್ ಸೈ ಎನಿಸಿಕೊಂಡಿದ್ದರು. ಆದರೆ ಇದೀಗ ಪ್ರೇಕ್ಷಕರ ವೋಟ್ ದರ್ಶ್ ಕೈಹಿಡಿಯಲಿಲ್ಲ. ಬಿಗ್ ಬಾಸ್ ನ ಮೂರನೇ ವಾರದ ಆಟದಲ್ಲಿ ದರ್ಶ್ ಎಲಿಮಿನೇಟ್ ಆಗಿದ್ದಾರೆ.

    ಮೊದಲ ವಾರ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಉರುಡುಗ (Divya Uruduga) ಅವರ ಪರ ನಿಂತು ದರ್ಶ್ ಅವರು ಸಂಬರ್ಗಿಗೆ (Prashanth Sambargi) ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ದರ್ಶ್ ಅವರ ಈ ಮಾತುಗಳು ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಿತ್ತು. ಐಶ್ವರ್ಯಾ ಪಿಸ್ಸೆ, ನವಾಜ್ ನಂತರ ಇದೀಗ ದರ್ಶ್ ಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗಿದೆ.

    ಪ್ರತಿಭಾವಂತ ನಟ ದರ್ಶ್‍ಗೆ, ಬಿಗ್ ಬಾಸ್ ನಂತರ ಒಂದೊಳ್ಳೆ ಅವಕಾಶಗಳು ಸಿಗಲಿ, ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಲಿ ಎಂಬುದೇ ಅಭಿಮಾನಿಗಳ ಆಶಯ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ ನಟಿ ದೀಪಿಕಾ ದಾಸ್ (Deepika Das). ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಮನೆಯ ಅಷ್ಟೂ ಸದಸ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ (Captain) ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.

    ಇತ್ತ ಮಗಳು ಬಿಗ್ ಬಾಸ್ ಮನೆಯಲ್ಲಿ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆಯೇ ದೀಪಿಕಾ ದಾಸ್ ತಾಯಿಯು ಮಗಳಿಗೆ ವಾಯ್ಸ್ ನೋಟ್ಸ್ ಕಳುಹಿಸಿ ಅಭಿನಂದಿಸಿದ್ದಾರೆ. ‘ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನೀನು ಕ್ಯಾಪ್ಟನ್ ಆಗಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆರಾಮಾಗಿ ಆಟವಾಡು. ಎಲ್ಲರೊಂದಿಗೆ ಹೊಂದಿಕೊಂಡಿರು. ಜಾಸ್ತಿ ಮಾತಾಡು, ಜಾಸ್ತಿ ಆಡು’ ಎಂದು ಮಗಳಿಗೆ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು. 16 ವಾರಗಳ ಕಾಲ ಅವರು ಮನೆಯಲ್ಲಿದ್ದರು. ಆದರೆ, ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಸಿಕ್ಕಿರಲಿಲ್ಲ. ಸೀಸನ್ 9ಕ್ಕೂ (Bigg Boss Season 9) ಅವರು ಮರು ಆಯ್ಕೆಯಾಗಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೂರನೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆ ಅವರದ್ದು.

    ಕ್ಯಾಪ್ಟೆನ್ಸಿ ಆಯ್ಕೆಯಾಗಿ ಹಲವು ಟಾಸ್ಕ್ ಗಳನ್ನು ಸ್ಪರ್ಧಿಗಳು ಆಡಬೇಕಿತ್ತು. ಕ್ಯಾಪ್ಟೆನ್ಸಿಗಾಗಿಯೇ ಟಾಸ್ಕ್ ಗಳು ಸಿದ್ಧವಾಗಿದ್ದವು. ಗೋಲ್ಡ್ ಮೈನ್  ಟಾಸ್ಕ್ ನಲ್ಲಿ ಔಟ್ ಆಗಿದ್ದ ದೀಪಿಕಾ ದಾಸ್ ನಂತರ ನಾಲಿಗೆ ನುಲಿ ಚಟುವಟಿಕೆಯಲ್ಲಿ ಗೆಲುವು ಸಾಧಿಸಿ ಮತ್ತೆ ಆಟಕ್ಕೆ ಹಿಂದಿರುಗಿದರು. ಆಕೃತಿ ಹುಡುಕಾಟದಲ್ಲಿ ದೀಪಿಕಾ ದಾಸ್ ಗೆಲ್ಲುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಪಟ್ಟಕ್ಕಾಗಿ ಅನುಪಮಾ ಗೌಡ (Anupama Gowda) ಹಾಗೂ ರೂಪೇಶ್ ಶೆಟ್ಟಿ (Rupesh Shetty) ಕೂಡ ರೇಸ್ ನಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashant Sambargi) ಮತ್ತು ರೂಪೇಶ್ ರಾಜಣ್ಣ ನಡೆ ಒಂದು ಕಡೆಯಾದರೆ, ಉಳಿದವರ ಆಟ ಮತ್ತೊಂದು ಕಡೆ ಆಗಿದೆ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಅಂತಾರಲ್ಲ ಹಾಗಾಗಿದೆ ಬಿಗ್ ಬಾಸ್ ಮನೆಯ ಪರಿಸ್ಥಿತಿ. ದೊಡ್ಮನೆಯಲ್ಲಿರುವ ಬಹುತೇಕ ಸದಸ್ಯರು ಟಾಸ್ಕ್ ಗಾಗಿ ಕಿತ್ತಾಡಿಕೊಂಡರೆ, ಸಂಬರ್ಗಿ ಮತ್ತು ರೂಪೇಶ್ ವೈಯಕ್ತಿಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದಾರೆ. ಈ ಜಗಳವು ಅವರ ಕುಟುಂಬದ ಸದಸ್ಯರಿಗೆ ಮುಜುಗರ ಪಡುವಂತಾಗಿದೆ.

    ವೈಯಕ್ತಿಕವಾಗಿ ಅವರಿಬ್ಬರೂ ಹೇಗಾದರೂ ಕಿತ್ತಾಡಿಕೊಳ್ಳಲಿ, ಯಾವ ಪದಗಳಿಂದಲಾದರೂ ನಿಂದಿಸಿಕೊಳ್ಳಲಿ. ಆದರೆ, ತಮ್ಮ ಮನೆಯ ಸದಸ್ಯರಿಗೆ ಅಪಮಾನ ಮಾಡುವಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎನ್ನುವ ಮಾತು ಬಿಗ್ ಬಾಸ್ ಪ್ರೇಮಿಗಳದ್ದು. ಗೋಲ್ಡ್ ಮೈನ್ ಟಾಸ್ಕ್ ನಲ್ಲಂತೂ ಇಬ್ಬರೂ ನಾಲಿಗೆ ಹರಿಬಿಟ್ಟು, ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡಿದರು. ಅದರಲ್ಲೂ ಪ್ರಶಾಂತ್ ಸಂಬರ್ಗಿ ತಾಯಿಗೆ ಅಪಮಾನ ಮಾಡುವ ರೀತಿಯಲ್ಲಿ ರೂಪೇಶ್ ರಾಜಣ್ಣ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡರು. ರೂಪೇಶ್ (Rupesh Rajanna) ಆಡಿದ ಆ ಮಾತು ಸಂಬರ್ಗಿಯನ್ನು ಸಖತ್ ಕೆರಳಿಸಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಇದೇ ವಿಚಾರವಾಗಿ ಸಂಬರ್ಗಿ ಮತ್ತು ರೂಪೇಶ್ ಪದೇ ಪದೇ ಜಗಳ ಮಾಡುತ್ತಿದ್ದಾರೆ. ‘ನನ್ನ ತಾಯಿಗೆ ಅವಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೂಪೇಶ್ ಮೇಲೆ ಸಂಬರ್ಗಿ ಕೂಗಾಡಿದ್ದಾರೆ. ಕೊನೆಗೂ ತಾವು ಮಾಡಿದ್ದ ತಪ್ಪಿನ ಅರಿವಾಗಿ ರೂಪೇಶ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುವೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎಂದು ಮತ್ತೆ ಚುಚ್ಚಿದ್ದಾರೆ.

    ಗೋಲ್ಡ್ ಮೈನ್ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರ್ಗಿಗೆ ರಾಜಾ ಇಲಿ, ಹೇಡಿ, ಕುತಂತ್ರಿ ಅಂತೆಲ್ಲ ಕರೆದಿದ್ದಾರೆ ರೂಪೇಶ್ ರಾಜಣ್ಣ. ಇಷ್ಟೆಲ್ಲ ಅನಿಸಿಕೊಂಡಿದ್ದ ಸಂಬರ್ಗಿ ಕೂಡ ಸುಮ್ಮನೆ ಕೂತಿಲ್ಲ, ರೂಪೇಶ್ ರಾಜಣ್ಣಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ರೋಲ್‌ಕಾಲ್ ಹೋರಾಟಗಾರ ಎಂದೆಲ್ಲ ಜರಿದಿದ್ದಾರೆ. ‘ತಾವು ರೋಲ್‌ಕಾಲ್ ಮಾಡಿದ್ರೆ ಪ್ರೂ ಮಾಡಿ. ನೇಣಿಗೂ ಸಿದ್ಧನಿದ್ದೇನೆ’ ಎಂದು ರೂಪೇಶ್ ರಾಜಣ್ಣ ಮರು ಉತ್ತರ ನೀಡಿದ್ದರು. ಈ ಇಬ್ಬರ ಗಲಾಟೆ ಬಿಗ್ ಬಾಸ್ ನೋಡುಗರಿಗಂತೂ ಸಖತ್ ಕಿರಿಕಿರಿ ಮಾಡುತ್ತಿರುವುದಂತೂ ಸತ್ಯ.

    Live Tv
    [brid partner=56869869 player=32851 video=960834 autoplay=true]

  • ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಅದರಲ್ಲಿ ಬಹುಪಾಲು ಪ್ರೀತಿ, ಪ್ರೇಮ, ಬ್ರೇಕ್ ಅಪ್, ಕ್ರಶ್ ಕುರಿತದ್ದೇ ಆಗಿರುತ್ತವೆ. ಬಿಗ್ ಬಾಸ್ ಓಟಿಟಿ ನಡೆದ ಸಂದರ್ಭದಲ್ಲಂತೂ ದೊಡ್ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳಿಗೆ ಲವ್ ಫೆಲ್ಯುವರ್ ಆಗಿತ್ತು. ಎರಡನೇ ಸಂಬಂಧವನ್ನೂ ಇಟ್ಟುಕೊಂಡವರಿದ್ದರು. ತಮ್ಮ ಜೀವನದಲ್ಲಾದ ಘಟನೆಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟು ನೋಡುಗರು ಆಡಿಕೊಂಡು ನಗುವಂತೆ ಮಾಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಅದು ಮುಂದುವರೆದಿದೆ.

    ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಡಿಗ್ಲಾಮ್ ಪಾತ್ರ ಮಾಡಿದ್ದ, ಅಳುಮುಂಜಿ ಹುಡುಗಿ ಎಂದೇ ಖ್ಯಾತರಾಗಿದ್ದ ಕಾವ್ಯಶ್ರೀ ಗೌಡ (Kavyashree Gowda) ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಒಂದಲ್ಲ, ಎರಡೆರಡು ಕ್ರಶ್ ಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವಾಗ ಅವರು ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನೂ ನೆನಪಿಸಿಕೊಂಡಿದ್ದಾರೆ. ಎರಡು ಕ್ರಶ್ ಗಳಲ್ಲಿ ಒಂದಕ್ಕೆ ಯಶ್ ಸ್ಪೂರ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ

    ಇವರಿಗೆ ಪ್ರಪ್ರಥಮ ಬಾರಿಗೆ ಕ್ರಶ್ (Crush) ಆಗಿದ್ದು ಅಜ್ಜಿ ಊರಿಗೆ ಜಾತ್ರೆಗೆ ಹೋದಾಗಂತೆ. ಅಜ್ಜಿ ಊರಿಗೆ ಜಾತ್ರೆಗೆಂದು ಹೋಗಿದ್ದೆ. ಅಲ್ಲೊಂದು ಗುಂಪಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಹುಡುಗ ಥೇಟ್ ಯಶ್ ತರಹವೇ ಇದ್ದ. ಹಾಗಾಗಿ ಅವನ ಮೇಲೆ ಮೊದಲ ಬಾರಿಗೆ ಕ್ರಶ್ ಆಯಿತು. ಆ ಹುಡುಗರ ಗುಂಪು ನನ್ನನ್ನೇ ಫಾಲೋ ಮಾಡುತ್ತಿತ್ತು. ತೀರಾ ಹತ್ತಿರ ಬರೋಕೆ ಶುರುವಾಯಿತು. ನನಗೆ ಭಯನೋ ಭಯ. ಯಶ್ ರೀತಿಯಲ್ಲೇ ಕಾಣುತ್ತಿದ್ದ ಆ ಹುಡುಗ ತೀರಾ ಸಮೀಪಕ್ಕೆ ಬಂದು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತನ್ನ ಫೋನ್ ನಂಬರ್ ಇರುವ ಚೀಟಿ ಹಾಕಿದ್ದ ಎಂದು ನೆನಪಿಸಿಕೊಂಡಿದ್ದಾರೆ ಕಾವ್ಯಶ್ರೀ ಗೌಡ.

    ಮತ್ತೊಮ್ಮೆ ಕ್ರಶ್ ಆಗಿದ್ದು ಕೂಡ ದೇವಸ್ಥಾನದಲ್ಲೇ ಎಂದಿದ್ದಾರೆ ನಟಿ. ಇವರು ತಿರುಪತಿ ಬೆಟ್ಟ ಹತ್ತುವಾಗ ಇವರನ್ನೇ ಫಾಲೋ ಮಾಡುತ್ತಿದ್ದ ಹುಡುಗನ ಮೇಲೆ ಕ್ರಶ್ ಆಗಿತ್ತಂತೆ. ‘ನಾನು ಮತ್ತು ನನ್ನ ತಾಯಿ ತಿರುಪತಿ ಬೆಟ್ಟ ಏರುತ್ತಿದ್ದವು. ಆ ಹುಡುಗ, ನಮ್ಮನ್ನೇ ಫಾಲೋ ಮಾಡಿಕೊಂಡು ಬರುತ್ತಿದ್ದ. ಬೆಟ್ಟ ಹತ್ತುವಾಗ ನಮಗಿಂತ ಮುಂಚೆ ಇರುತ್ತಿದ್ದ, ನಂತರ ಮತ್ತೆ ಹಿಂದುಳಿಯುತ್ತಿದ್ದ. ಅವನು ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುವ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಅವನು ಲಡ್ಡು ಇಟ್ಟುಬಿಟ್ಟಿದ್ದ. ಜೊತೆಗೆ ಫೋನ್ ನಂಬರ್ ಇರುವ ಚೀಟಿನೂ ಇತ್ತು’ ಎಂದು ಎರಡನೇ ಕ್ರಶ್ ಬಗ್ಗೆ ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]