ಬಿಗ್ ಬಾಸ್ ತೆಲುಗು ಸೀಸನ್ 8(Bigg Boss Season 8) ಶುರುವಾಗಿದೆ. ಈ ಸೀಸನ್ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿತ್ತು. ಕಳೆದ ವರ್ಷದಂತೆ ಈ ವರ್ಷವೂ ನಿರೂಪಕರ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ಎದ್ದಿತ್ತು. ನಟ ನಾಗಾರ್ಜುನ (Nagarjuna) ಬದಲು ಬೇರೆ ನಿರೂಪಕರು ಈ ಬಾರಿ ಇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಮಾತು ಸುಳ್ಳಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 8 ಅನ್ನು ನಾಗಾರ್ಜುನ ಅವರೇ ನಡೆಸಿಕೊಡುತ್ತಿದ್ದಾರೆ.

ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.
ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.




























ಒಂದೇ ಬಟ್ಟೆಯಲ್ಲಿ ಒಂದು ವಾರ ಇದ್ದ ನಿರ್ಮಲಾ!
ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಗೀತಾ, ಚಂದ್ರಕಲಾ ಮೋಹನ್, ವಿಶ್ವನಾಥ್, ನಿರ್ಮಲಾ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದರೆ ಇವರುಗಳ ಪೈಕಿ ನಿರ್ಮಲಾ ತನ್ನ ಆಟವನ್ನು ಮನೆಯಲ್ಲಿ ಮುಗಿಸಿ ಹೊರಬಂದಿದ್ದಾರೆ.

