Tag: Bigg boss season 7

  • ಕೊನೆಗೂ ರಿವೀಲ್ ಆಯ್ತು ಬಿಗ್ ಬಾಸ್ ರೇಡಿಯೋ ಧ್ವನಿ

    ಕೊನೆಗೂ ರಿವೀಲ್ ಆಯ್ತು ಬಿಗ್ ಬಾಸ್ ರೇಡಿಯೋ ಧ್ವನಿ

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಬಿಗ್ ಬಾಸ್ ರೇಡಿಯೋದಲ್ಲಿ ಕೇಳುವ ಧ್ವನಿ ಯಾರದ್ದು ಎನ್ನುವುದು ಈಗ ರಿವೀಲ್ ಆಗಿದೆ.

    ಕನ್ನಡದ ಬಿಗ್ ಬಾಸ್ ಸೀನನ್-1ರಿಂದ 6ರವರೆಗೆ ಬಿಗ್ ಹೌಸ್‍ನಲ್ಲಿ ಸ್ಪರ್ಧಿಗಳ ಗಾಸಿಪ್, ಜಗಳ, ಮನರಂಜನೆ, ವೀಕೇಂಡ್ ನಲ್ಲಿ ಕಿಚ್ಚ ಸುದೀಪ್ ಜೊತೆ ಮಾತಿನ ಕಲರವ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ಬಿಗ್ ಬಾಸ್ ಸೀಸನ್-7ರಲ್ಲಿ ಸಾಕಷ್ಟು ಹೊಸ ಎಲಿಮೆಂಟ್‍ಗಳು ಸೇರಿದೆ. ಅದರಲ್ಲಿ ಬಿಗ್ ಬಾಸ್ ರೇಡಿಯೋ ಕೂಡ ಒಂದು. ಬಿಗ್ ಬಾಸ್ ಧ್ವನಿ ಬಿಟ್ಟು ಸ್ಪರ್ಧಿಗಳು ಅಲರ್ಟ್ ಆಗುವ ಧ್ವನಿ ಎಂದರೆ ಅದು ಬಿಗ್ ಬಾಸ್ ರೇಡಿಯೋದಲ್ಲಿ ಕೇಳಿಬರುವ ಧ್ವನಿಗೆ ಮಾತ್ರ.

    ಬಿಗ್ ಬಾಸ್ ಮನೆಯ ಬಿಗ್ ರೇಡಿಯೋದಲ್ಲಿ ಬರುವ ಧ್ವನಿ ಯಾರದ್ದು ಎನ್ನುವುದು ಈಗ ರಿವಿಲ್ ಆಗಿದೆ. ಆ ಧ್ವನಿ ಬೇರೆಯಾದದ್ದೂ ಅಲ್ಲ, ಅದು ಆರ್‌ಜೆ ಶ್ರದ್ಧಾ ಅವರದ್ದು. ಇಂಜಿನಿಯರಿಂಗ್ ಓದಿರುವ ಶ್ರದ್ಧಾ ಅವರು ತಮ್ಮ ಐಟಿ ಜಾಬ್ ಬಿಟ್ಟು ಆರಿಸಿಕೊಂಡಿದ್ದು ರೇಡಿಯೋ ಜಾಕಿ ವೃತ್ತಿಯನ್ನು. ಆರ್‍ಜೆ ಆದ ಮೇಲೆ ರೇಡಿಯೋದಲ್ಲಿ ಶ್ರದ್ಧಾ ಅವರು ತಮ್ಮ ಸ್ವೀಟ್ ವಾಯ್ಸ್ ನಿಂದ ಕೇಳುಗರನ್ನು ಮನರಂಜಿಸುತ್ತಿದ್ದರು. ಕೇವಲ ಆರ್‌ಜೆ ಆಗಿ ಮಾತ್ರವಲ್ಲ ಶ್ರದ್ಧಾ ನಿರೂಪಕಿಯಾಗಿಯೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಶ್ರದ್ಧಾ ನಿರೂಪಣೆ ಮಾಡಿ ಕಮಾಲ್ ಮಾಡಿದ್ದರು. ಅಕುಲ್ ಬಾಲಾಜಿ ಜೊತೆ ಕೋ-ಹೋಸ್ಟ್ ಆಗಿ ಶ್ರದ್ಧಾ ಮಿಂಚಿದ್ದರು. ಸದ್ಯ ಶ್ರದ್ಧಾ ಅವರು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಾನ್ ಫಿಕ್ಷನ್ ಟೀಮ್ ಒಂದರಲ್ಲಿ ಪ್ರೊಗ್ರಾಮಿಂಗ್ ಹೆಡ್ ಆಗಿ ಕಾರ್ಯನಿರ್ವಸುತ್ತಿದ್ದಾರೆ.

  • ಬಿಗ್ ಬಾಸ್‍ನಲ್ಲಿ ಕುರಿ ಪ್ರತಾಪ್ ಉಳಿಸಲು ಡಿ ಬಾಸ್ ಫ್ಯಾನ್ಸ್ ಹೊಸ ಪ್ಲಾನ್

    ಬಿಗ್ ಬಾಸ್‍ನಲ್ಲಿ ಕುರಿ ಪ್ರತಾಪ್ ಉಳಿಸಲು ಡಿ ಬಾಸ್ ಫ್ಯಾನ್ಸ್ ಹೊಸ ಪ್ಲಾನ್

    – ಒಡೆಯ ಬ್ಯಾನರ್‌ನಲ್ಲಿ ‘ವೋಟ್ ಫಾರ್ ಕುರಿ’

    ಬೆಂಗಳೂರು: ತಮ್ಮ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಕುರಿ ಪ್ರತಾಪ್‍ರನ್ನು ಬಿಗ್ ಬಾಸ್ ಸೀಸನ್-7ರ ಮನೆಯಲ್ಲಿ ಉಳಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ಪ್ಲಾನ್ ಮಾಡಿದ್ದಾರೆ.

    ಬಿಗ್ ಬಾಸ್ ಸೀಸನ್-7ರಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ವ್ಯಕ್ತಿ ಅಂದರೆ ಅದು ಕುರಿ ಪ್ರತಾಪ್, ಇನ್ನು ಉಳಿದವರು ಧಾರಾವಾಹಿ ನಟ, ನಟಿಯರು, ಡ್ಯಾನ್ಸರ್ ಇರುವ ಕಾರಣ ಧಾರಾವಾಹಿ ನೋಡದೆ ಇರುವವರಿಗೆ ಅವರ ಪರಿಚಯ ಇರುವುದಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ಕುರಿ ಪ್ರತಾಪ್ ಅವರ ಕಾಮಿಡಿಯನ್ನು ಜನ ನೋಡಿರುತ್ತಾರೆ. ಇನ್ನು ಮಜಾ ಟಾಕೀಸ್‍ನಲ್ಲಿ ಕುರಿ ಪ್ರತಾಪ್ ಎಲ್ಲರನ್ನು ನಕ್ಕು ನಲಿಸಿದ್ದಾರೆ. ಅದೇ ರೀತಿ ಸದ್ಯ ಬಿಗ್ ಬಾಸ್ ಸೀಸನ್-7ರ ಹಾಸ್ಯ ಪ್ರತಿಭೆಯಾಗಿರುವ ಕುರಿ ಪ್ರತಾಪ್ ಅವರಿಗೆ ಹೆಚ್ಚು ವೋಟ್ ಮಾಡಿ ಎಂದು ಡಿ ಬಾಸ್ ಅಭಿಮಾನಿಗಳು ವಿನೂತನ ರೀತಿ ಮನವಿ ಮಾಡಿಕೊಂಡಿದ್ದಾರೆ.

    ಕುರಿ ಪ್ರತಾಪ್ ತುಂಬಾ ಮುಗ್ಧ. ಅವರು ಅಷ್ಟು ಬೇಗ ಅಗ್ರೆಸ್ಸೀವ್ ಆಗೋಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಬಿಗ್ ಬಾಸ್ ಶೋನಲ್ಲಿ ಎಲ್ಲರನ್ನು ನಕ್ಕು ನಲಿಸಿ, ಮನರಂಜನೆ ನೀಡುತ್ತಿರುವವರ ಸಾಲಿನಲ್ಲಿ ಅವರಿದ್ದಾರೆ. ಮೊದಲ ಮೂರು-ನಾಲ್ಕು ವಾರಗಳಲ್ಲಿ ಕುರಿ ಪ್ರತಾಪ್ ಅವರು ನಾಮಿನೇಷನ್ ಲಿಸ್ಟ್ ಗೆ ಬಂದೇ ಇರಲಿಲ್ಲ. ಇತ್ತೀಚೆಗಷ್ಟೇ ಅವರು ಕೂಡ ನಾಮಿನೇಟ್ ಲಿಸ್ಟ್ ನಲ್ಲಿ ಅವರ ಹೆಸರು ಸೇರಿಕೊಂಡಿದೆ. ಅದರೆ ಜನರು ವೋಟ್ ಮಾಡಿ ಅವರನ್ನು ಸೇವ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಕುರಿ ಪ್ರತಾಪ್ ಅವರಲ್ಲಿ ಇದೆ. ಹೀಗಾಗಿ ನಾಮಿನೇಟ್ ಆದರೂ ಅವರು ಸೇವ್ ಆಗುತ್ತಾ ಬಂದಿದ್ದಾರೆ.

    ಕುರಿ ಪ್ರತಾಪ್ ಅವರ ಅಭಿಮಾನಿಗಳು ಅವರನ್ನು ಉಳಿಸಲು ಹೆಚ್ಚೆಚ್ಚು ವೋಟ್ ಮಾಡುತ್ತಿದ್ದಾರೆ. ಹಾಗೆಯೇ ಜೊತೆಯಲ್ಲಿರುವವರಿಗೂ ವೋಟ್ ಮಾಡಿ ಎಂದು ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಅವರ ಸಿನಿಮಾದ ಬ್ಯಾನರನ್ನೇ ಪ್ರತಾಪ್ ಅವರನ್ನು ಉಳಿಕೊಳ್ಳಲು ಅಭಿಮಾನಿಗಳು ಬಳಸಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಭಾರೀ ನಿರೀಕ್ಷಿತ `ಒಡೆಯ’ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳು ಥಿಯೇಟರ್ ಮುಂದೆ ಡಿ ಬಾಸ್ ಜೊತೆ ಕೆಲ ಅಭಿಮಾಗಳ ಫೋಟೋ ಬ್ಯಾನರ್ ಹಾಕುವುದು ಸಹಜ. ಆದರೆ ಹೀಗೆ ಹಾಕಿದ್ದ ಬ್ಯಾನರ್‌ವೊಂದರಲ್ಲಿ ‘ವೋಟ್ ಫಾರ್ ಕುರಿ’ ಎಂದು ಬರೆದು ಕುರಿ ಪ್ರತಾಪ್ ಫೋಟೋವನ್ನು ಕೂಡ ಹಾಕಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ಕುರಿ ಪ್ರತಾಪ್ ಅಭಿಮಾನಿಗಳ ಐಡಿಯಾಗೆ ಫಿದಾ ಆಗಿದ್ದಾರೆ.