Tag: Bigg Boss OTT

  • ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಬಿಗ್ ಬಾಸ್ ಓಟಿಟಿ ಮುಗಿದ ಒಂದು ವಾರದ ಗ್ಯಾಪ್ ನಂತರ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತಿದೆ. ಸೆ.24 ಕ್ಕೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಡಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾದವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಹಳೆ ಮತ್ತು ಹೊಸ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೊಂದು ವೇಳೆ ಏನಾದರೂ ಮಾಜಿಗಳಿಗೂ ಅವಕಾಶ ಸಿಕ್ಕರೆ ಬ್ರಹ್ಮಾಂಡ ಗುರೂಜಿಯನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ನೋಡುಗರು.

    ಈಗಾಗಲೇ ಜಿಂಗಲಕಾ ಲಕಾ ಲಕಾ ಅನ್ನುತ್ತಾ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ 9 ನಲ್ಲಿ ಭಾಗಿ ಆಗುತ್ತಿರುವುದರಿಂದ ಗುರೂಜಿಗಳ ಕಾಂಬಿನೇಷನ್ ಸಖತ್ತಾಗಿ ಇರಲಿದೆ ಎನ್ನುವುದು ಪ್ರೇಕ್ಷಕರು ಊಹೆ. ಅಲ್ಲದೇ, ಇಬ್ಬರೂ ಉತ್ತರ ದಕ್ಷಿಣ ಧೃವಗಳು ಆಗಿರುವುದರಿಂದ ಒಳ್ಳೆಯ ಮನರಂಜನೆಯೇ ಪ್ರೇಕ್ಷಕರಿಗೆ ಸಿಗಲಿದೆ ಎನ್ನುವ ಅಂದಾಜು ನೋಡುಗರದ್ದು. ಹಾಗಾಗಿ ಮತ್ತೆ ಬ್ರಹ್ಮಾಂಡ ಗುರೂಜಿಯನ್ನು ಮನೆ ಒಳಗೆ ಕಳುಹಿಸಿ ಎಂದು ನೆಟ್ಟಿಗರು ವಾಹಿನಿಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

    ಈ ನಡುವೆ ಸೀಸನ್ 9ಗೆ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವ ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯಾರು ಹೋಗುತ್ತಾರೋ, ಯಾರು ಗಾಸಿಪ್ ಕಾಲಂನಲ್ಲೇ ಉಳಿಯುತ್ತಾರೋ ಕಾದು ನೋಡಬೇಕು. ಆದರೆ, ಈ ಬಾರಿ ಹೊಸ ಬಗೆಯ ಸ್ಪರ್ಧಿಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಜೊತೆಗೆ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯರ್ ಆಯ್ಕೆ ಆಗಿರುವುದರಿಂದ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.

    ಈಗಾಗಲೇ ದೊಡ್ಮನೆ ಒಳಗೆ ಹೋಗುವವರು ಅಂತಿಮ ಪಟ್ಟಿ ಸಿದ್ಧವಾಗಿದೆ. ನಾಳೆಯಿಂದಲೇ ಅಥವಾ ಶನಿವಾರ ಬೆಳಗ್ಗೆಯಿಂದ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಗಳು ಚಿತ್ರೀಕರಣವಾಗಲಿವೆ. ಶನಿವಾರ ಸಂಜೆ ಹೊತ್ತಿಗೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಅರ್ಧ ಮಾಹಿತಿ, ರಾತ್ರಿ ಒಳಗೆ ಪೂರ್ಣ ಮಾಹಿತಿ ಹೊರ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಬಿಗ್ ಬಾಸ್ ಮನೆ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರದ್ದು. ಮೊದಲ ದಿನದಿಂದ ಕೊನೆಯ ದಿನದವರೆಗೂ ಜಗಳ, ಕೋಪ, ಪ್ರೀತಿ ಮಾಡಿಕೊಂಡೇ ಎಲ್ಲರ ಗಮನ ಸೆಳೆದವರು. ಅದರಲ್ಲೂ ಜಯಶ್ರೀ (Jayashree), ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಗೆಳೆತನ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರು ರಾಕೇಶ್ ಅಡಿಗನನ್ನು (Rakesh Adiga) ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ:ಕೆಜಿಎಫ್ ತಾತಾ ನಟನೆಯ ‘ನ್ಯಾನೋ ನಾರಾಯಣಪ್ಪ’ ಟ್ರೇಲರ್ ರಿಲೀಸ್

    ಈ ಕುರಿತು ಮಾತನಾಡಿರುವ ಸೋನು, ‘ನಾನು ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನು ಮುಂದಿನ ಹಂತ ತಲುಪಿದ್ದಾನೆ ಎಂದು ಕೇಳಿ ಸಂಭ್ರಮಿಸಿದೆ. ಮತ್ತೆ ಅವನು ಬಿಗ್ ಬಾಸ್ ಗೆದ್ದು ಬರಲಿ. ನನ್ನ ಕೊನೆ ಆಸೆ ಏನು ಅಂತ ಸದ್ಯ ಕೇಳಿದರೆ, ಅದು ರಾಕೇಶ್ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ವಿನ್ ಆಗಬೇಕು’ ಎಂದಿದ್ದಾರೆ ಸೋನು. ತಮ್ಮಿಬ್ಬರ ಸ್ನೇಹ, ಪ್ರೀತಿ ಮತ್ತು ಪ್ರೇಮಕ್ಕಿಂತಲೂ ಮಿಗಿಲಾಗಿದ್ದು ಎನ್ನುವುದು ಸೋನು ಮಾತು.

    ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ (Negative) ಕಾಮೆಂಟ್ ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

    ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ (Positive) ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • `ಬಿಗ್ ಬಾಸ್’ ಸೀಸನ್ 9ಕ್ಕೆ ಪ್ರವೇಶಿಸುವ ಸ್ಪರ್ಧಿಗಳು ಇವರೇ ನೋಡಿ

    `ಬಿಗ್ ಬಾಸ್’ ಸೀಸನ್ 9ಕ್ಕೆ ಪ್ರವೇಶಿಸುವ ಸ್ಪರ್ಧಿಗಳು ಇವರೇ ನೋಡಿ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆಪ್ಟೆಂಬರ್ 24ಕ್ಕೆ ಶುರುವಾಗಲಿದೆ. ಪ್ರತಿ ದಿನ ಟಿವಿ ಪರದೆಯಲ್ಲಿ ರಂಜಿಸಲು ಬಿಗ್ ಬಾಸ್ ಬರುತ್ತಿದೆ. ಈ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.

    ಬಿಗ್ ಬಾಸ್ ಓಟಿಟಿ ಮುಗಿದು, ಸೀಸನ್ 9ಕ್ಕೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಓಟಿಟಿಯಲ್ಲಿ ಗಮನ ಸೆಳೆದ ದಿ ಬೆಸ್ಟ್ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ಈ ನಾಲ್ಕು ಜನ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ.

    ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ನಟಿ ಪ್ರೇಮ ಅವರು ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಅಂತರ ಕಾಯ್ದುಕೊಂಡಿರುವ ನಟಿ ಸೀಸನ್ 9ರಲ್ಲಿ ಬರಲಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಾಫಿನಾಡು ಚಂದು ಬಿಗ್ ಬಾಸ್‌ಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    `ಕಮಲಿ’ ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ಖ್ಯಾತಿಯ ಸಮೀಕ್ಷಾ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

    ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಿಯಾಂಕ ಕಾಮತ್ ಕೂಡ ಟಿವಿ ಸೀಸನ್ ಬಿಗ್ ಬಾಸ್ 9ರಲ್ಲಿ ಬರಲಿದ್ದಾರೆ. ಇವರ ಜೊತೆ ದಿವ್ಯ ವಸಂತ ಕೂಡ ಇರಲಿದ್ದಾರೆ.

    ಮಜಾ ಭಾರತ ಶೋ ಮೂಲಕ ಮೋಡಿ ಮಾಡಿರುವ ಚಂದ್ರಪ್ರಭ ಮತ್ತು ರಾಘವೇಂದ್ರ ಅವರು ಕೂಡ ತಮ್ಮ ಕಾಮಿಡಿ ಮೂಲಕ ದೊಡ್ಮನೆಯಲ್ಲಿ ರಂಜಿಸಲಿದ್ದಾರೆ. ಸರಿಗಮಪ ಶೋನ ಗಾಯಕಿ ಆಶಾ ಭಟ್ ಕೂಡ ಇರಲಿದ್ದಾರೆ. ಸೆಪ್ಟೆಂಬರ್‌ 24ರಂದು ಸಂಜೆ 6ಕ್ಕೆ ಗ್ರ್ಯಾಂಡ್‌ ಲಾಂಚ್‌ನಲ್ಲಿ ಸ್ಪರ್ಧಿಗಳ ಪಟ್ಟಿ ಅಧಿಕೃತವಾಗಿ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.

    ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ ಕಾಮೆಂಟ್ (Comment) ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

    ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ (Bigg Boss OTT) ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ (Negative) ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ (Video) ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯಿತು. ಅವರು ಬಿಗ್ ಬಾಸ್ ಮನೆಗೆ ಹೋದಾಗ ಆ ಕುರಿತು ಬಹಿರಂಗವಾಗಿಯೇ ಹೇಳಿಕೊಂಡರು. ಅಲ್ಲದೇ, ಆ ಹುಡುಗನ ಬಳಿ ಮತ್ತೊಂದು ವಿಡಿಯೋ ಇರುವುದಾಗಿಯೂ ತಿಳಿಸಿದ್ದರು. ಈ ವಿಷಯ ಕೇಳಿದ ಬಿಗ್ ಬಾಸ್ ಮನೆಯೇ ಶಾಕ್ ಗೆ ಒಳಗಾಗಿತ್ತು. ಈ ಕುರಿತು ಸೋನು ಮತ್ತೆ ಮಾತನಾಡಿದ್ದಾರೆ.

    ಖಾಸಗಿ ಸಂಗತಿಗಳು ಅಂದರೆ, ಇಬ್ಬರಲ್ಲೇ ಇರಬೇಕಾದದ್ದು. ಆದರೆ, ಆ ಹುಡುಗ ನಂಬಿಕೆ ದ್ರೋಹ ಮಾಡಿದ್ದಾನೆ ಎನ್ನುತ್ತಾರೆ ಸೋನು. ‘ನಾನು ಆ ಹುಡುಗನನ್ನು ನಂಬಿದ್ದೆ. ತುಂಬಾ ಇಷ್ಟ ಪಡುತ್ತಿದ್ದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಅನ್ನುತ್ತಾರೆ.

    ಆ ವಿಡಿಯೋವನ್ನು ಅವನು ಹಾಕಿದ್ದಾನೋ ಅಥವಾ ಬೇರೆ ಯಾರಾದರೂ ಹಾಕಿದ್ದಾರೋ ಅದು ಬೇರೆ ವಿಚಾರ. ಆದರೆ, ಆ ಹುಡುಗ ವಿಡಿಯೋವನ್ನು ಶೂಟ್ ಮಾಡಿದ ಮೇಲೆ ಅಲ್ಲವೆ ಅಷ್ಟೊಂದು ಆಗಿದ್ದು? ಈ ರೀತಿ ಯಾವ ಹುಡುಗಿಗೂ ಮೋಸ ಆಗಬಾರದು. ಆ ಕಾರಣಕ್ಕಾಗಿಯೇ ನಾನು ಬಹಿರಂಗವಾಗಿಯೇ ಅದನ್ನು ಹೇಳಿದೆ. ಇಂತಹ ತಪ್ಪು ನಡೆಯಬಾರದು ಎನ್ನುವ ಕಾರಣಕ್ಕಾಗಿಯೇ ಎರಡನೇ ವಿಡಿಯೋ ಬಗ್ಗೆಯೂ ನಾನು ಮಾತನಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಆ ಹುಡುಗ ನನ್ನ ಖಾಸಗಿ ವಿಡಿಯೋ ಶೂಟ್ ಮಾಡಿದ್ದೆ ತಪ್ಪು: ಸೋನು ಶ್ರೀನಿವಾಸ್ ಗೌಡ

    ಆ ಹುಡುಗ ನನ್ನ ಖಾಸಗಿ ವಿಡಿಯೋ ಶೂಟ್ ಮಾಡಿದ್ದೆ ತಪ್ಪು: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಓಟಿಟಿ (Bigg Boss OTT) ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರ ಖಾಸಗಿ ವಿಡಿಯೋ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯಿತು. ಅವರು ಬಿಗ್ ಬಾಸ್ ಮನೆಗೆ ಹೋದಾಗ ಆ ಕುರಿತು ಬಹಿರಂಗವಾಗಿಯೇ ಹೇಳಿಕೊಂಡರು. ಅಲ್ಲದೇ, ಆ ಹುಡುಗನ ಬಳಿ ಮತ್ತೊಂದು ವಿಡಿಯೋ ಇರುವುದಾಗಿಯೂ ತಿಳಿಸಿದ್ದರು. ಈ ವಿಷಯ ಕೇಳಿದ ಬಿಗ್ ಬಾಸ್ ಮನೆಯೇ ಶಾಕ್ ಗೆ ಒಳಗಾಗಿತ್ತು. ಈ ಕುರಿತು ಸೋನು ಮತ್ತೆ ಮಾತನಾಡಿದ್ದಾರೆ.

    ಖಾಸಗಿ ಸಂಗತಿಗಳು ಅಂದರೆ, ಇಬ್ಬರಲ್ಲೇ ಇರಬೇಕಾದದ್ದು. ಆದರೆ, ಆ ಹುಡುಗ ನಂಬಿಕೆ ದ್ರೋಹ ಮಾಡಿದ್ದಾನೆ ಎನ್ನುತ್ತಾರೆ ಸೋನು. ‘ನಾನು ಆ ಹುಡುಗನನ್ನು ನಂಬಿದ್ದೆ. ತುಂಬಾ ಇಷ್ಟ ಪಡುತ್ತಿದ್ದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಅನ್ನುತ್ತಾರೆ.

    ಆ ವಿಡಿಯೋವನ್ನು (Private Video) ಅವನು ಹಾಕಿದ್ದಾನೋ ಅಥವಾ ಬೇರೆ ಯಾರಾದರೂ ಹಾಕಿದ್ದಾರೋ ಅದು ಬೇರೆ ವಿಚಾರ. ಆದರೆ, ಆ ಹುಡುಗ ವಿಡಿಯೋವನ್ನು ಶೂಟ್ ಮಾಡಿದ ಮೇಲೆ ಅಲ್ಲವೆ ಅಷ್ಟೊಂದು ಆಗಿದ್ದು? ಈ ರೀತಿ ಯಾವ ಹುಡುಗಿಗೂ ಮೋಸ ಆಗಬಾರದು. ಆ ಕಾರಣಕ್ಕಾಗಿಯೇ ನಾನು ಬಹಿರಂಗವಾಗಿಯೇ ಅದನ್ನು ಹೇಳಿದೆ. ಇಂತಹ ತಪ್ಪು ನಡೆಯಬಾರದು ಎನ್ನುವ ಕಾರಣಕ್ಕಾಗಿಯೇ ಎರಡನೇ ವಿಡಿಯೋ ಬಗ್ಗೆಯೂ ನಾನು ಮಾತನಾಡಿದೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸಿಂಪತಿಗಾಗಿ ಇದನ್ನೆಲ್ಲ ಹೇಳಲಿಲ್ಲ ಎನ್ನುವ ಸೋನು, ಇಂತಹ ವಿಚಾರವನ್ನು ಹೇಳಿಕೊಂಡರೆ ನಮಗೆ ತಾನೆ ಕಷ್ಟ ಆಗೋದು. ಆದರೂ, ನಾನು ಹೇಳಿದೆ. ಕಾರಣ, ಮೋಸ (Cheat) ಹೇಗೆ ನಡೆಯುತ್ತದೆ ಎಂದು ತಿಳಿಸಲು. ಆ ಹುಡುಗ ಅಂತಲ್ಲ, ಯಾರೂ ಈ ಕೆಲಸವನ್ನು ಮಾಡಬಾರದು. ಒಂದೇ ಒಂದು ಸಲ ತಮ್ಮ ಮನೆಯ ಹೆಣ್ಣು ಮಕ್ಕಳನ್ನೂ ನೆನಪಿಸಿಕೊಳ್ಳಬೇಕು ಎನ್ನುವುದು ಸೋನು ಮಾತು.

    Live Tv
    [brid partner=56869869 player=32851 video=960834 autoplay=true]

  • ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಿಗರೇಟು ಸೇದಿದರು ಎನ್ನುವುದೇ ದೊಡ್ಡ ಸುದ್ದಿ ಆಯಿತು. ಟ್ರೋಲ್ ಪೇಜುಗಳಲ್ಲಿ ಮತ್ತು ನೋಡುಗರು ಕೂಡ ಈ ಕುರಿತು ಕಾಮೆಂಟ್ ಮಾಡಿದ್ದರು. ಸೋನು ಇದನ್ನೆಲ್ಲ ಮಾಡ್ತಾರಾ ಅಂತ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದರು. ಆದರೂ, ಆಗಾಗ್ಗೆ ಬಿಗ್ ಬಾಸ್ ಮನೆಯಲ್ಲಿ ಸ್ಮೋಕಿಂಗ್ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಕುರಿತು ಸ್ವತಃ ಸೋನು ಗೌಡ ಅವರ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಬಿಗ್ ಬಾಸ್ (Bigg Boss OTT) ಮನೆಗೂ ಹೋಗುವ ಮುನ್ನ ತಮ್ಮ ಬ್ರ್ಯಾಂಡ್ ಬಗ್ಗೆಯೂ ಸೋನು ಹೇಳಿದ್ದರಂತೆ. ಅದನ್ನೇ ತರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರಂತೆ. ಹಾಗಾಗಿ ಬಿಗ್ ಬಾಸ್ ಟೀಮ್ ಕೂಡ ಸೋನು ನೆಚ್ಚಿನ ಬ್ರ್ಯಾಂಡ್ ಅನ್ನೇ ಒದಗಿಸಿತ್ತಂತೆ. ಬಿಗ್ ಬಾಸ್ ಮನೆಯಲ್ಲಿ ಸ್ಮೋಕ್ (Smoking) ಮಾಡಲು ಕಂಪೆನಿ ಕೊಡುತ್ತಿದ್ದದ್ದು ರಾಕೇಶ್ ಅಡಿಗ. ಹಾಗಾಗಿ ಪದೇ ಪದೇ ಆ ಸ್ಥಳಕ್ಕೆ ಇಬ್ಬರೂ ಹೋಗುತ್ತಿದ್ದರಂತೆ. ಮೊದಲ ಬಾರಿಗೆ ಸೋನು ಸಿಗರೇಟು ಕೇಳಿದಾಗ ಸ್ವತಃ ರಾಕೇಶ್ ಅಡಿಗ ಅಚ್ಚರಿ ವ್ಯಕ್ತ ಪಡಿಸಿದ್ದರಂತೆ.

    ನೋಡಿದವರು ಏನು ಅನ್ನುತ್ತಾರೆ ಹೀಗೆ ಸಿಗರೇಟು (Cigarette) ಸೇದಿದರೆ ಎಂದು ರಾಕೇಶ್ ಅಡಿಗ ಕೇಳಿದಾಗ, ನಾನು ಯಾವುದನ್ನೂ ಮುಚ್ಚಿ ಇಡುವುದಿಲ್ಲ. ಹಾಗೆಯೇ ನಾನು ಅಡಿಕ್ಟ್ ಅಲ್ಲ. ಬೇಕು ಅಂತಾನೂ ಅನಿಸಲ್ಲ. ಎದುರಿಗೆ ಇದ್ದಾಗ ಅದನ್ನು ಮಾಡಬೇಕು ಅನಿಸತ್ತೆ. ಹಾಗಾಗಿ ಸಿಗರೇಟು ಸೇದಿದ್ದೇನೆ. ಬಹುಶಃ ನನಗೆ ರಾಕೇಶ್ ಅಡಿಗ (Rakesh Adiga) ಅಷ್ಟೊಂದು ಪರಿಚಯ ಆಗುವುದಕ್ಕೆ ಕಾರಣವೇ ಸ್ಮೋಕಿಂಗ್ ರೂಮ್. ತೀರಾ ಕ್ಲೋಸ್ ಆಗಿದ್ದು ಅದೇ ಏರಿಯಾದಲ್ಲಿ ಅನ್ನುತ್ತಾರೆ ಸೋನು.

    ಹಾಗಂತ ಧೂಮಪಾನ ಮಾಡುವುದರಿಂದ ಅಪಾಯವಿದೆ ಎಂದು ಸೋನುಗೂ ಗೊತ್ತಿದೆ. ಹಾಗಾಗಿಯೇ ಅವರು ನಿತ್ಯವೂ ಅದನ್ನು ಮಾಡುವುದಿಲ್ಲವಂತೆ. ಯಾವಾಗಲಾದರೂ ಸ್ಮೋಕ್ ಮಾಡುವೆ. ನಾನು ಚಟಕ್ಕೆ ಬಿದ್ದವರಂತೆ ಸೇದುವುದಿಲ್ಲವೆಂದು ಅವರು ಸ್ಪಷ್ಟ ಪಡಿಸುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ ಎಂದು ಹೇಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಸಿನಿಮಾಗೆ ಕಿಚ್ಚ ಸುದೀಪ್ ಸರ್ ಹೀರೋ ಆಗಬೇಕು : ಸೋನು ಶ್ರೀನಿವಾಸ್ ಗೌಡ

    ನನ್ನ ಸಿನಿಮಾಗೆ ಕಿಚ್ಚ ಸುದೀಪ್ ಸರ್ ಹೀರೋ ಆಗಬೇಕು : ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ (Bigg Boss OTT) ಮನೆಯಿಂದ ಆಚೆ ಬರುವ ನಟ- ನಟಿಯರಿಗೆ ಅನೇಕ ನಿರ್ದೇಶಕರು ಗಾಳ ಹಾಕಿಕೊಂಡು ಕೂತಿರುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾಗಿಯೇ ಬಿಗ್ ಬಾಸ್ ಮನೆಯಿಂದ ಬಂದ ಪ್ರಥಮ್, ಶಶಿ ಸೇರಿದಂತೆ ಹಲವರು ನಾಯಕ ನಟರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇನ್ನೂ ಕೆಲವು ನಟಿಯರು ಕೂಡ ಅವಕಾಶ ಪಡೆದರು. ಇಂಥದ್ದೊಂದು ಅವಕಾಶ ಸೋನುಗೂ ಬಂದಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಹೌದು, ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಗೆ ಹೋಗುವ ಮುಂಚೆಯೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಅವುಗಳು ಬಿಡುಗಡೆ ಆಗಬೇಕು. ಸೋನು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬರುತ್ತಿವೆಯಂತೆ. ಆದರೆ, ಸಿಕ್ಕ ಸಿನಿಮಾಗಳಲ್ಲಿ ನಾನು ನಟಿಸಲಾರೆ ಎಂದಿದ್ದಾರೆ ಸೋನು. ನನ್ನ ಪಾತ್ರಕ್ಕೆ ಮಹತ್ವ ಇರಬೇಕು ಮತ್ತು ಸ್ಟಾರ್ ನಟರ ಸಿನಿಮಾ ಮೂಲಕ ಮತ್ತೆ ನಾನು ಎಂಟ್ರಿ ಕೊಡಬೇಕು ಅಂದಿದ್ದಾರೆ.

    ಅದರಲ್ಲೂ ಕಿಚ್ಚ ( Kiccha) ಸುದೀಪ್ (Sudeep)ಅವರು ನಾನು ನಟಿಸುವ ಸಿನಿಮಾದಲ್ಲಿ ಹೀರೋ ಆಗಿರಬೇಕು. ಅಂತಹ ಸ್ಟಾರ್ ನಟರ ಜೊತೆ ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ. ಹಾಗಂತ ಕೇವಲ ಅವರ ಸಿನಿಮಾಗಳಲ್ಲಿ (Cinema)  ಮಾತ್ರ ನಟಿಸುತ್ತೇನೆ ಅಂತಲ್ಲ, ನನಗೆ ಡ್ರೀಮ್ ಇರುವುದು ಹಾಗೆ. ಕನ್ನಡದಲ್ಲೂ ಸಾಕಷ್ಟು ಒಳ್ಳೆಯ ನಟರು ಇದ್ದಾರೆ. ನನಗೆ ಒಳ್ಳೆಯ ಪಾತ್ರ ಸಿಕ್ಕಾಗ ಕಂಡಿತಾ ಅದನ್ನು ಉಪಯೋಗಿಸಿಕೊಳ್ಳುತ್ತೇನೆ. ಸಿನಿಮಾ ರಂಗದಲ್ಲಿ ದೊಡ್ಡ ಕನಸು ಕಂಡಿರುವೆ ಅಂತಾರೆ.

    ಬಿಗ್ ಬಾಸ್ ಮನೆಯಲ್ಲಿ ಸಖತ್ ಬೋಲ್ಡ್ ಆಗಿಯೇ ಮಾತನಾಡಿರುವ ಸೋನು ಶ್ರೀನಿವಾಸ್ ಗೌಡ, ಅತೀ ಹೆಚ್ಚು ಸುದ್ದಿ ಮಾಡಿದ ಸ್ಪರ್ಧಿಯೂ ಹೌದು. ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ನೇರಾನೇರ ಹೇಳಿ, ಜಗಳ ಮಾಡಿಕೊಂಡು ಹುಡುಗಿ ಕೂಡ. ಆದರೂ, ಆ ಬಗ್ಗೆ ಅವರಿಗೆ ಬೇಸರವಿಲ್ಲವಂತೆ. ನಾನು ಇರುವುದು ಹೀಗೆ. ನನಗೆ ಏನು ಅನಿಸತ್ತೋ ಅದನ್ನು ನೇರವಾಗಿಯೇ ಹೇಳುತ್ತೇನೆ. ಹಾಗಾಗಿಯೇ ನಾನು ಹೀಗೆ ಇರೋದು ಎನ್ನುತ್ತಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ಹುಡುಗಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda)   ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟು ಸಾಕಷ್ಟು ವಿಚಾರದಲ್ಲಿ ಗಮನ ಸೆಳೆದಿದ್ದರು. ಬಿಗ್ ಬಾಸ್ ಓಟಿಟಿನಲ್ಲಿ ಫಿನಾಲೆ ಕೊನೆಯ ಹಂತದಲ್ಲಿ ಎಲಿಮಿನೇಟ್ ಆದರು. ಇಂಟರ್‌ನೆಟ್‌ನ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು ಅವರ ಸಂಬಳದ ಬಗ್ಗೆ ರಿವೀಲ್ ಮಾಡಿದ್ದಾರೆ.

    ನೇರ ಮಾತು, ಖಡಕ್ ಅವತಾರದ ಮೂಲಕ ಬಿಗ್ ಬಾಸ್ (Bigg Boss) ಮನೆಯಲ್ಲಿ ಗುರುತಿಸಿಕೊಂಡಿದ್ದ ಸೋನು ಶ್ರೀನಿವಾಸ್ ಗೌಡ ಅವರು ದೊಡ್ಮನೆಗೆ ಬರುವ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ಮತ್ತು ಹೊಸ ಬ್ರ್ಯಾಂಡ್‌ಗಳನ್ನ ಪ್ರಸ್ತುತಪಡಿಸುವ ಮೂಲಕ ನೆಟ್ಟಗರಿಗೆ ಪರಿಚಿತರಾಗಿದ್ದರು. ಸಾಮಾಜಿಕ ಜಾಲತಾಣದಿಂದ ಅವರು ಗಳಿಸುತ್ತಿದ್ದ ಸಂಬಳ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ. ಇದನ್ನೂ ಓದಿ: ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    `ಬಿಗ್ ಬಾಸ್’ ಖ್ಯಾತಿಯ ಸೋನು ಅವರು ಈ ಹಿಂದೆ ರೀಲ್ಸ್ ಮೂಲಕ ತಿಂಗಳಿಗೆ 3 ಲಕ್ಷ ರೂಪಯಿ ದುಡಿಯುತ್ತಿದ್ದರು. ಒಂದು ತಿಂಗಳಿಗೆ 3 (3 Lakh) ಲಕ್ಷ ದುಡಿಯುತ್ತೇನೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಸೋನು ರಿವೀಲ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ (Bigg Boss OTT) ಮನೆಯಲ್ಲಿ ರಾಕೇಶ್  ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ (Sonu Srinivas Gowda)ಮುತ್ತಿನ ಕಾರಣದಿಂದಾಗಿಯೇ ಹೆಚ್ಚು ಸುದ್ದಿ ಮಾಡಿದರು. ಸೋನು ಕೇಳಿದಾಗೆಲ್ಲ ರಾಕೇಶ್ ಮುತ್ತಿಟ್ಟಿದ್ದಾನೆ. ಜಯಶ್ರೀ ಉರಿಸುವುದಕ್ಕಾಗಿಯೂ ಸೋನುಗೆ ರಾಕೇಶ್ ಕಿಸ್ ಮಾಡಿದ್ದಾರೆ. ಅಲ್ಲದೇ, ಸೋನುಗೆ ಕೋಪ ತರಿಸಲು ಜಯಶ್ರೀಗೂ (Jayashree) ರಾಕೇಶ್ ಮುತ್ತಿಟ್ಟಿದ್ದಾನೆ.  ಈ ಮುತ್ತಿನಾಟ (Kiss) ಭಾರೀ ಸದ್ದು ಮಾಡಿದೆ.

    ಈಗಾಗಲೇ ರಾಕೇಶ್ (Rakesh Adiga) ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾನೆ. ರಾಕೇಶ್ ನನ್ನು ತುಂಬಾ ಇಷ್ಟ ಪಡುವ ಸೋನು ಮನೆಯಿಂದ ಆಚೆ ಬಂದಿದ್ದಾರೆ. ರಾಕೇಶ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಅವರು ಹಂಚಿಕೊಂಡಿದ್ದಾರೆ. ರಾಕೇಶ್ ತುಂಬಾ ಒಳ್ಳೆಯ ಹುಡುಗ. ಒಂದು ರೀತಿಯಲ್ಲಿ ಅವನ ಪ್ರೀತಿ ಅಮ್ಮನ ರೀತಿಯದ್ದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.

    ಅವನ ಮೇಲೆ ವಿಪರೀತಿ ಸೆಳೆತ ಇದ್ದದ್ದು ನಿಜ. ಅದು ಲವರ್ ಮಧ್ಯೆ ಇರುವಂತಹ ಆಕರ್ಷಣೆ ಅಲ್ಲ. ಅದೊಂದು ರೀತಿಯಲ್ಲಿ ಮಗ ಮತ್ತು ತಾಯಿ ಮಧ್ಯದಲ್ಲಿರುವ ಮಮಕಾರ. ನನಗೆ ರಾಕೇಶ್ ಹಾಗೆ. ಬೇರೆಯವರು ಏನು ಅಂದುಕೊಂಡರೂ ಡೋಂಟ್ ಕೇರ್. ನಾನು ನೇರವಾಗಿಯೇ ಮಾತನಾಡುವ ಹುಡುಗಿ. ಹಾಗಾಗಿಯೇ ಅವನು ನನಗೆ ಇಷ್ಟವಾದ. ನನಗೆ ಏನು ಅನಿಸುತ್ತಿತ್ತೋ ಅದನ್ನು ರಾಕೇಶ್ ಜೊತೆ ಮಾಡಿರುವೆ. ಆದರೆ, ಯಾವುದೂ ನಮ್ಮ ಮಧ್ಯೆ ಕೆಟ್ಟದ್ದು ಅನ್ನುವುದು ಇಲ್ಲ ಎನ್ನುತ್ತಾರೆ ಸೋನು.

    Live Tv
    [brid partner=56869869 player=32851 video=960834 autoplay=true]