Tag: Bigg Boss OTT

  • ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಟ್ರ್ಯಾಜಿಡಿ ಕಥೆಗಳೇ ಓಡುತ್ತಿದ್ದರೆ, ಮತ್ತೊಂದು ಕಡೆ ಆರ್ಯವರ್ಧನ್ ಗುರೂಜಿ ತಮ್ಮ ಪಾಡಿಗೆ ತಾವು ಅನಿಸಿದನ್ನೂ ಮಾಡುತ್ತಾ ಹೋಗುತ್ತಿದ್ದಾರೆ. ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್ ಸೇರಿದಂತೆ ಹಲವರು ತಮ್ಮ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ಶೋಷಣೆಯನ್ನು ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಬ್ರೇಕ್ ಅಪ್ ಕಥೆಗಳನ್ನು ಹೇಳಿದ್ದರೆ ಮತ್ತಷ್ಟು ಜನ ಡಿವೋರ್ಸ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ನಡುವೆ ಆರ್ಯವರ್ಧನ್ ಗುರೂಜಿ ಬೇರೆ ರೀತಿಯಲ್ಲೇ ಇದನ್ನು ವ್ಯಾಖ್ಯಾನಿಸಿದ್ದಾರೆ.

    ತಂದೆ ತಾಯಿ ಗಲಾಟೆ, ಪ್ರೇಮ, ವಿರಹ, ಬ್ರೇಕ್ ಅಪ್ ಈ ರೀತಿಯ ವಿಷಯಗಳನ್ನು ಮನೆಯಲ್ಲಿ ಇದ್ದವರು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ನಡೆದಿರುತ್ತವೆ. ಅವುಗಳನ್ನು ದಾಟಿಕೊಂಡು ಮುಂದೆ ಸಾಗಬೇಕು ಎಂದಿದ್ದಾರೆ. ಸಿಂಪತಿ ಪಡೆಯುವಂತಹ ವಿಷಯಗಳನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ನಡುವೆ ತಾವು ಸಾವಿರಾರು ಕೋಟಿ ಒಡೆಯರು ಎಂದು ಆರ್ಯರ್ವಧನ್ ಗುರೂಜಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ತಮ್ಮದು ಮೂಲತಃ ಹಳ್ಳಿ. ತಮ್ಮ ಹಿರಿಯರ ಆಸ್ತಿಯು ಸುಮಾರು ಐದು ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ನಾನಂತೂ ಕಷ್ಟದಲ್ಲಿ ಹುಟ್ಟಿಲ್ಲ. ಒಳ್ಳೆಯ ರೀತಿಯಲ್ಲೇ ಬದುಕಿದ್ದೇನೆ. ಅನೇಕರಿಗೆ ಸಹಾಯ ಮಾಡಿದ್ದೇನೆ. ಸಿನಿಮಾ ರಂಗಕ್ಕೂ ಸಾಲ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನೇಕ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆರ್ಯವರ್ಧನ್ ಗುರೂಜಿ ಸಾಲ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಯಾರೆಲ್ಲ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿಕೊಳ್ಳಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ಬಿಗ್ ಬಾಸ್ ನ ಹವಾ ಜೋರಾಗಿದೆ. ಶೋನ್‌ನಲ್ಲಿ  16 ಸ್ಪರ್ಧಿಗಳಲ್ಲಿ ಒಬ್ಬರಾದ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್ ಕೂಡ‌ ಸದ್ದು ಮಾಡ್ತಿದ್ದಾರೆ. ಇನ್ನು ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ‘ಬಿಗ್ ಬಾಸ್’ ಟಾಸ್ಕ್ ವೊಂದನ್ನು ನೀಡಿದ್ದರು. ಅದೇ ‘ನಾನು ಯಾರು?’. ತಮ್ಮ ತಮ್ಮ ಜೀವನದ ಕುರಿತು ಸ್ಪರ್ಧಿಗಳು ‌ಮಾತನಾಡಬೆಕು. ಇದೇ ಟಾಸ್ಕ್‌ನಲ್ಲಿ ಸಾನ್ಯ ಅಯ್ಯರ್ ತಮಗೆ ಎದುರಾದ ಕಷ್ಟ ಮತ್ತು ತಮ್ಮ ಸವಾಲಿನ ಬಗ್ಗೆ ಮನಬಿಚ್ಚಿ ಮಾತನಾಡಿದರು.

    ಅಮ್ಮ, ಚಿಕ್ಕಮ್ಮ, ನನ್ನನ್ನ ಕ್ಷಮಿಸಿ ಎಂದ್ಹೇಳುತ್ತಾ, ತಮ್ಮ ಜೀವನದ ಕರಾಳ ವಿಚಾರವನ್ನು ಸಾನ್ಯ ವಿವರಿಸಿದ್ದಾರೆ. ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್ ಮ್ಯಾರೇಜ್. ನನ್ನ ಕಣ್ಣೇದುರೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು. ರಿಲೇಶನ್‌ಶಿಪ್ ಅಂದ್ರೆ ಹೀಗೇ ಅಂತ ನಾನು ಅಂದುಕೊಂಡಿದ್ದೆ. ನಾನೂ ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿದ್ದೆ. ಅದೂ ಕೂಡ ಅಬ್ಯೂಸಿವ್ ಆಗಿತ್ತು. ನಾನು ಅವನಿಗಾಗಿ ನಟನಾ‌ ಕ್ಷೇತ್ರ ಬಿಡಲು ತಯಾರಿದ್ದೇ. ರಿಲೇಶನ್‌ಶಿಪ್ ಉಳಿಯಬೇಕು ಎಂಬ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ರೆಡಿಯಾಗಿದ್ದೆ. ಆದರೂ ಅದು ವರ್ಕ್ ಆಗಲಿಲ್ಲ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ

    ನನ್ನ ನಂಬಿಕೆಗೆ ಮೋಸ ಆಗಿದ್ದು, ನನ್ನ ಮಲತಂದೆಯಿಂದ  ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು. ಒಬ್ಬರು ನನ್ನ ಬಯೋಲಾಜಿಕಲ್ ಫಾದರ್. ಮತ್ತೊಬ್ಬರು ಮಲತಂದೆ. ಬಯೋಲಾಜಿಕಲ್ ಫಾದರ್‌ ಜೊತೆ ಸಂಬಂಧ ಅಷ್ಟಕಷ್ಟೆ. ಮಲತಂದೆ ಜೊತೆ ನನ್ನ ರಿಲೇಶನ್‌ಶಿಪ್ ಚೆನ್ನಾಗಿತ್ತು. ಆದರೆ ನಾನು ಬೆಳೆದಿದ್ದೇ ಅವರ ಜೊತೆ. ನನ್ನಮ್ಮನಿಗೆ ಅವರು ಫ್ರೆಂಡ್ ಆಗಿದ್ದಾಗಿನಿಂದಲೂ ನನಗೆ ಅವರು ಗೊತ್ತಿತ್ತು. ಆದ್ರೆ, ಮದುವೆ ಆದ್ಮೇಲೆ ನನ್ನಮ್ಮನಿಗೆ ಗೊತ್ತಾಯಿತು ಅದು ತಪ್ಪಾದ ನಿರ್ಧಾರ ಅಂತ’’

    ಮಲತಂದೆ ನನ್ನ ತಾಯಿ ಜೊತೆನೇ ಇರಬೇಕು ಎಂಬ ಕಾರಣಕ್ಕೆ ನನ್ನ ಹೆಸರನ್ನ ಹಾಳು ಮಾಡಲು ಮುಂದಾಗ್ತಾರೆ. ಹೇಗೆ ಅಂದ್ರೆ, ನನ್ನ ಬಾಯ್‌ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ನನ್ನಮ್ಮನನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನನ್ನ ವಿಡಿಯೋನ ಇಟ್ಟುಕೊಂಡು ಮೊದಲು ಅಜ್ಜಿಗೆ, ಚಿಕ್ಕಮ್ಮಗೆ ತೋರಿಸ್ತಾರೆ. ಆ ವಿಡಿಯೋದಲ್ಲಿ ಏನೂ ಇರಲಿಲ್ಲ. ಆದರೂ ಅವಮಾನ ಮಾಡ್ತಾರೆ.

    ಸಿಂಗಲ್ ಪೇರೆಂಟ್ ಆಗಿ ದೀಪಾ ತನ್ನ ಮಗಳನ್ನ ಹ್ಯಾಂಡಲ್‌ ಮಾಡೋಕೆ ಆಗುತ್ತಿಲ್ಲ. ಅವರಿಗೆ ಒಬ್ಬ ಮೇಲ್ ಫಿಗರ್ ಬೇಕು ಅಂತ ಚೀಪ್ ಟ್ರಿಕ್ ಯೂಸ್ ಮಾಡ್ತಾರೆ. ನಾನು ಅವರನ್ನ ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನಿ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ. ಆ ಪ್ರೀತಿಯನ್ನ ಇನ್ನೊಬ್ಬರಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ. ಈಗ ಹಾಗೆ ಮಾಡಲ್ಲ. ನಾನು ಸ್ವಾವಲಂಬಿ ಆಗಿರುತ್ತೇನೆ. ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ನಟಿ ಸಾನ್ಯ ಅಯ್ಯರ್ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]