Tag: bigg boss ott kannada

  • `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ

    `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ

    `ಬಿಗ್ ಬಾಸ್’ ಒಟಿಟಿ (Bigg Boss) ಮೂಲಕ ಕಮಾಲ್ ಮಾಡಿದ್ದ ನಟಿ ಜಯಶ್ರೀ ಕನಸಿನ ಮನೆಯ ಗೃಹಪ್ರವೇಶ (House Warming) ನೆರವೇರಿದೆ. ಮಾರಿಮುತ್ತು (Actress Marimuttu) ಮೊಮ್ಮಗಳು ಜಯಶ್ರೀ ಹೊಸ ಮನೆಗೆ ಕುಟುಂಬ ಸಮೇತ ಪಾದಾರ್ಪಣೆ ಮಾಡಿದ್ದಾರೆ.

    ನಟಿ, ಉದ್ಯಮಿಯಾಗಿ ಸೈ ಎನಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಾರಿ ಮುತ್ತು ಮೊಮ್ಮಗಳು ಸಾಕಷ್ಟು ಸಂಕಷ್ಟಗಳ ನಡುವೆ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ನಾಯಂಡಳ್ಳಿಯಲ್ಲಿ ಮನೆ ಖರೀದಿಸಿದ್ದು, ಇತ್ತೀಚೆಗೆ ನೂತನ ನಿವಾಸದ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ಜಯಶ್ರೀ ಮತ್ತು ಭಾವಿಪತಿ ಸ್ಟೀವನ್ ಕನಸಿನ ಮನೆಯ ಸಂಭ್ರಮದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಲೋಕೇಶ್, ಸ್ಪೂರ್ತಿ, ಸೋನು ಗೌಡ, ಉದಯ್ ಸೂರ್ಯ, ಚೈತ್ರಾ ಕೂಡ ಈ ವೇಳೆ ಸಾಕ್ಷಿಯಾಗಿದ್ದಾರೆ.

    ಸಾಕಷ್ಟು ಏಳು ಬೀಳಿನ ನಂತರ ಹೊಸ ಹೆಜ್ಜೆ ಇಡ್ತಿರುವ ನಟಿ ಜಯಶ್ರೀಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಆಟದಲ್ಲಿ ಎಡವಿಬಿದ್ದ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಆಟದಲ್ಲಿ ಎಡವಿಬಿದ್ದ ಸೋನು ಶ್ರೀನಿವಾಸ್ ಗೌಡ

    ದೊಡ್ಮನೆಯಲ್ಲಿ ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿದ್ದ ಸೋನು, ಬಿಗ್ ಬಾಸ್(Bigg boss) ಫಿನಾಲೆ ತಲುಪಿದ್ದರು. ಆದರೆ ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. ಯಾವುದೇ ಫಿಲ್ಟರ್ ಇಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ದೊಡ್ಮನೆಯ ಆಟದಲ್ಲಿ ಎಡವಿ ಬಿದ್ದಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ನೇರ ಮಾತಿನಿಂದ ಗಮನ ಸೆಳೆದ ಸ್ಪರ್ಧಿಗೆ ಲಕ್ಕು ಕೈ ಕೊಟ್ಟಿದೆ. ಬಿಗ್ ಬಾಸ್ ಓಟಿಟಿಯ 42 ದಿನಗಳ ಆಟಕ್ಕೆ ಬ್ರೇಕ್ ಬಿದ್ದಿದೆ. ಫಿನಾಲೆ ಕೊನೆಯ ಹಂತದಲ್ಲಿ ಸೋನು ಎಲಿಮಿನೇಟ್ ಆಗಿ, ಟಿವಿ ಬಿಗ್ ಬಾಸ್‌ಗೆ ಹೋಗುವ ಅವಕಾಶವು ಕೈ ತಪ್ಪಿದೆ. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದುಕೊಂಡಿದ್ದ ಫ್ಯಾನ್ಸ್ ಸೋನು ಎಲಿಮಿನೇಷನ್‌ನಿಂದ ಶಾಕ್ ಆಗಿದೆ. ಫಿನಾಲೆಗೆ ಹೋಗುವ ನಾಲ್ಕು ಸ್ಪರ್ಧಿಗಳ ಪೈಕಿ ಸೋನು ಕೂಡ ಒಬ್ಬರಾಗಿರುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಓಟಿಟಿಯಲ್ಲಿ ವೀಕ್ಷಕರ ಸಪೋರ್ಟ್ ಸಿಗದ ಕಾರಣ, ಸೋನು ಔಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಓಟಿಟಿ (Bigg Boss) 42 ದಿನಗಳ ಆಟಕ್ಕೆ ತೆರೆಬಿದ್ದಿದೆ. ಅಭಿಮಾನಿಗಳ ಪ್ರೀತಿ ಮತ್ತು ವೋಟ್‌ನಿಂದ್ ಬಿಗ್ ಬಾಸ್ ಮನೆಯ ಟಾಪರ್ ಆಗಿ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸೀಸನ್ 9ಕ್ಕೆ ರೂಪೇಶ್ ಶೆಟ್ಟಿ(Roopesh Shetty) ಆಯ್ಕೆ ಆಗಿದ್ದಾರೆ.

    ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಹಾಡು, ಡ್ಯಾನ್ಸ್, ಅಡುಗೆ, ಟಾಸ್ಕ್ ಎಲ್ಲದರಲ್ಲೂ ರೂಪೇಶ್ ಸೈ ಎನಿಸಿಕೊಂಡಿದ್ದಾರೆ. ಅವರ ವಿಶಿಷ್ಟ ವ್ಯಕ್ತಿತ್ವದಿಂದ ಕರ್ನಾಟಕದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅಭಿಮಾನಿಗಳ ವೋಟ್‌ನಿಂದ ಟಾಪರ್ ಆಗಿ ಬಿಗ್ ಬಾಸ್ ಓಟಿಟಿ ಟಾಪರ್ ಗೆಲುವಿನ ಪಟ್ಟ ಪಡೆದಿದ್ದಾರೆ. ಟಾಪರ್ ರೂಪೇಶ್ ಶೆಟ್ಟಿ ಅವರಿಗೆ 5 ಲಕ್ಷ ಬಹುಮಾನ ಕೂಡ ಸಿಕ್ಕಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ತುಳು ಮತ್ತು ಕನ್ನಡ ಚಿತ್ರಗಳ ಮೂಲಕ ಮೋಡಿ ಮಾಡಿದ್ದ ನಟ ರೂಪೇಶ್ ಬಿಗ್ ಬಾಸ್ ಓಟಿಟಿಯ ಟಾಪರ್ ಆಗಿ ಹೊರಹೊಮ್ಮಿದ್ದರು. ಈಗ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಸೀಸನ್ 9ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸೆಪ್ಟೆಂಬರ್ 24ಕ್ಕೆ ಟಿವಿ ಬಿಗ್ ಬಾಸ್ (Bigg Boss) ಶುರುವಾಗಿದೆ. ಇನ್ನು ಓಟಿಟಿ ಮೂಲಕ ಕಮಾಲ್ ಮಾಡಿದ್ದ ರೂಪೇಶ್ ಶೆಟ್ಟಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಡೈರೆಕ್ಟ್ ಎಂಟ್ರಿ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಬಿಗ್ ಬಾಸ್ ಓಟಿಟಿ(Bigg Boss Ott) ಮೂಲಕ ಮೋಡಿ ಮಾಡಿರುವ ಸ್ಪರ್ಧಿ ನಂದಿನಿ(Nandini) 5 ವಾರಕ್ಕೆ ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಹಿಂದಿ ರಿಯಾಲಿಟಿ ಶೋ ವಿನ್ನರ್ ನಂದಿನಿ ಬಿಗ್ ಬಾಸ್ ಮನೆಗೆ ಬರಲು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದರಂತೆ.

    ಬಿಗ್ ಬಾಸ್ ಓಟಿಟಿ ಮುಗಿಯಲು ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಓಟಿಟಿ ವಿನ್ನರ್ ಯಾರಾಗಲಿದ್ದಾರೆ ಎಂಬುದರ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹೀಗಿರುವಾಗ ಕಳೆದ ವಾರ ಮನೆಯಿಂದ ಹೊರ ಬಂದ ನಂದಿನಿ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ನಂದಿನಿ ಅವರ ಸಡನ್ ಎಲಿಮಿನೇಷನ್ ನೆಟ್ಟಿಗರ ಶಾಕ್ ಕೊಟ್ಟಿರುವ ಬೆನ್ನಲ್ಲೇ ಅವರ ಸಂಭಾವನೆ ವಿಷ್ಯ ಕೂಡ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ದೊಡ್ಮನೆಯಲ್ಲಿ ಟಫ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದ ನಂದಿನಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ನಂದು ಮತ್ತು ಜಶ್ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಹೀಗಿರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಹೀಗಿರುವಾಗ ಅವರ ಸಂಭಾವನೆ ವಿಷ್ಯ ಕೂಡ ಸಖತ್ ಚರ್ಚೆ ಆಗುತ್ತಿದೆ. ಒಂದು ವಾರಕ್ಕೆ 5 ಲಕ್ಷದಂತೆ, 5 ವಾರಕ್ಕೆ 25 ಲಕ್ಷ ರೂಪಾಯಿ ಸಂಭಾವನೆಯನ್ನ ನಂದಿನಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮೂಲಗಳ ಪ್ರಕಾರ 25 ಲಕ್ಷ ರೂಪಾಯಿ ಸಿಕ್ಕಿದೆ ಎನ್ನಲಾಗುತ್ತಿದೆ.

    ಇನ್ನೂ ನಂದಿನಿ ಮತ್ತಷ್ಟು ಪ್ರಾಜೆಕ್ಟ್‌ ಮತ್ತು ರಿಯಾಲಿಟಿ ಶೋಗಳ ಮೂಲಕ ಮೋಡಿ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಬಿಗ್ ಬಾಸ್ ಓಟಿಟಿ (Bigg Boss Ott) ಇದೀಗ ಕಡೆಯ ಹಂತದಲ್ಲಿದೆ. ಓಟಿಟಿ ಸೀಸನ್ ಮುಗಿಯಲು ಒಂದೇ ವಾರ ಬಾಕಿಯಿದೆ. ದೊಡ್ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಇನ್ನು ನಂದಿನಿ ಮತ್ತು ಜಶ್ವಂತ್ ರಿಯಲ್ ಪ್ರೇಮಿಗಳಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ನಂದಿನಿ ಎಲಿಮಿನೇಟ್ ಆಗಿದ್ದಾರೆ. ಗರ್ಲ್‌ಫ್ರೆಂಡ್ ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಕ್ಲೋಸ್ ಆಗಿದ್ದಾರೆ.

    ರಿಯಲ್ ಲೈಫ್‌ನಲ್ಲೂ ಪ್ರೇಮಿಗಳಾಗಿದ್ದ ನಂದಿನಿ (Nandini) ಮತ್ತು ಜಶ್ವಂತ್ (jashwanth) ದೊಡ್ಮನೆಗೆ ಕಾಲಿಟ್ಟಿದ್ದರು. ಒಂದು ವಾರದ ನಂತರ ಬಿಗ್ ಬಾಸ್ ಆದೇಶದಂತೆ ಪ್ರತ್ಯೇಕ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಮನೆಯಲ್ಲಿ ನಂದು ಮತ್ತು ಜಶ್ ಹಾಗೂ ಸಾನ್ಯ ಮತ್ತು ರೂಪೇಶ್ ಒಂದು ಟೀಮ್ ಆಗಿ ಹೈಲೈಟ್ ಆಗಿದ್ದರು. ಇನ್ನೂ ಸಾನ್ಯ ಜತೆಗಿನ ಜಶ್ವಂತ್ ಒಡನಾಟ ನಂದಿನಿಯ ಮುನಿಸಿಗೆ ಕಾರಣವಾಗಿತ್ತು. ಇವರಿಬ್ಬರ ಮಧ್ಯೆ ಮನಸ್ತಾಪ ಕೂಡ ಜಾಸ್ತಿಯಾಗಿತ್ತು. ‌

    ನಂದಿನಿ ಎಲಿಮಿನೇಷನ್ ಬಳಿಕ ಜಶ್ವಂತ್, ಸಾನ್ಯ ಜೊತೆ ಸಲುಗೆಯಿಂದ ಇರುವುದು ಮನೆಯ ಮಂದಿಯ ಗಮನಕ್ಕೆ ಬಂದಿದೆ. ನಂದುನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತಿನಲ್ಲಿ ಹೇಳಿದ್ದರು ಕೂಡ ನಡೆಯಲ್ಲಿ ಬೇರೆಯದ್ದೇ ವಿಚಾರ ಮನೆಯವರ ಗಮನಕ್ಕೂ ಬಂದಿದೆ. ಜಶ್ ಮತ್ತು ಸಾನ್ಯ ಹತ್ತಿರವಾಗುತ್ತಿದ್ದಂತೆ ರೂಪೇಶ್ ಅವರು ಟೆನ್ಷನ್ ಆಗಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಮಾತುಕಥೆ ಆಗಿದೆ. ಇದನ್ನೂ ಓದಿ:ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್

    ದಿನ ಕಳೆದಂತೆ ಸಾನ್ಯ ಜೊತೆಗಿನ ಜಶ್ವಂತ್ ಸಲುಗೆ ನಂದಿನಿಗೆ ಬೇಸರ ತಂದಿತ್ತು. ಈ ವಿಚಾರವಾಗಿ ಸಾಕಷ್ಟು ಬಾರಿ ನಂದು ಬೇಸರ ಮಾಡಿಕೊಂಡಿದ್ದಾರೆ. ಜಶ್ ನನಗೆ ಸಮಯ ನೀಡುತ್ತಿಲ್ಲ ಎಂದು ಮುನಿಸಿಕೊಂಡಿದ್ದು ಇದೆ. ಇದಾದ ನಂತರ ನಂದಿನಿ, ಜಶ್ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಪೊಸೆಸಿವ್ ಎಂಬುದು ಎಲ್ಲರಿಗೂ ತಿಳಿಯಿತು. ಹೀಗಿರುವಾಗ ನಂದಿನ ಎಲಿಮಿನೇಷನ್ ನಂತರ ಸಾನ್ಯ ಜೊತೆ ಜಶ್ ಕ್ಲೋಸ್ ಆಗಿರುವುದು ಎಲ್ಲರ ಗಮನಕ್ಕೆ ಬಂದಿದೆ.

    ನಂದು ಇದ್ದಾಗ ಸಾನ್ಯ, ರೂಪೇಶ್ ಜೊತೆ ಇರುತ್ತಿದ್ದರು. ಆದರೆ ಈಗ ಇವರಿಬ್ಬರ ಮಧ್ಯೆ ಜಶ್ವಂತ್ ಎಂಟ್ರಿ ಕೊಟ್ಟಿದ್ದಾರೆ. ಜಶ್ವಂತ್ ಈ ನಡೆಯಿಂದ ರೂಪೇಶ್ ಟೆನ್ಷನ್ ಮಾಡಿಕೊಂಡಿದ್ದಾರೆ. ಇನ್ನೂ ಬಿಗ್ ಬಾಸ್ ಓಟಿಟಿ ಗೆಲುವಿನ ಪಟ್ಟವನ್ನ ಗಿಟ್ಟಿಸಿಕೊಳ್ಳಲು ಒಂದೇ ವಾರ ಬಾಕಿಯಿದೆ. ಯಾರಿಗೆ ಟ್ರೋಫಿ ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ಬಿಗ್‍ಬಾಸ್(Bigg Boss) ಮನೆಯಲ್ಲಿ ರೂಪೇಶ್ ಅವರದ್ದು ಕೊನೆಯ ಕ್ಯಾಪ್ಟೆನ್ಸಿಯಾಗಿತ್ತು. ಆದರೆ ಈ ವಾರ ರೂಪೇಶ್ ಎಷ್ಟು ಚೆನ್ನಾಗಿ ಕ್ಯಾಪ್ಟೆನ್ಸಿ ನಿಭಾಯಿಸಿದ್ದರೋ ಅಷ್ಟೇ ಒನ್ ಸೈಡ್ ಆಗಿದ್ದ ಎಂಬ ಆರೋಪವೂ ಕೇಳಿ ಬಂತು. ಹೆಚ್ಚಿನ ಪ್ರಧಾನ್ಯತೆಯನ್ನು ಫ್ರೆಂಡ್ ಎನ್ನುವ ಕಾರಣಕ್ಕೆ ಸಾನ್ಯಾಳಿಗೆ(Sanya) ನೀಡಿದ ಎಂಬುದು ಮನೆಯ ಸದಸ್ಯರಿಗೆ ಕೊಂಚ ಬೇಸರವನ್ನು ತರಿಸಿತ್ತು. ಆ ಬಗ್ಗೆ ಇಂದು ವಾರದ ಕಥೆ ಕಿಚ್ಚ ಸದೀಪನ ಜೊತೆ ವೇದಿಕೆಯಲ್ಲೂ ಬಹಳಷ್ಟು ಚರ್ಚೆಗೆ ಕಾರಣವಾಯಿತು.

    ಕಿಚ್ಚ ಸುದೀಪ್(Sudeep) ವೇದಿಕೆ ಬರುವುದಕ್ಕೂ ಮುನ್ನ ಈ ಬಗ್ಗೆ ಒಂದು ಕ್ಲೂ ಕೂಡ ಕೊಟ್ಟಿದ್ದರು. ಕೊನೆವಾರದಲ್ಲಿ ಬಿದ್ದರೆ ಏಳುವುದಕ್ಕೆ ಟೈಮ್ ಇರುವುದಿಲ್ಲ. ಸ್ನೇಹ ಹಾಗೂ ಆಟ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದು ಗೊತ್ತಿರಬೇಕು ಎಂದಾಗ ಇಂದು ರೂಪೇಶ್ ಮಾಡಿದ ಯಡವಟ್ಟು ಅನಾವರಣವಾಗುತ್ತದೆ ಎಂಬುದು ಸ್ಪಷ್ಟವಾಯಿತು. ಅದರಂತೆ ವೇದಿಕೆ ಮೇಲೆ ರೂಪೇಶ್‍ಗೆ ಆ ಪ್ರಶ್ನೆ ಕೇಳಿದರು. ಸ್ನೇಹ ಮತ್ತು ಆಟವನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದಾಗ ರೂಪೇಶ್(Rupesh) ಆಟ ಅಂತ ಬಂದಾಗ ಸ್ನೇಹ, ಸಂಬಂಧ, ಎಮೋಷನಲ್ ನೋಡಬಾರದು ಎಂಬ ಅರ್ಥದಲ್ಲಿಯೇ ವಿವರಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನೀಡಿದ್ದರು. ವಿವರಣೆ ಕೇಳಿಸಿಕೊಂಡ ಕಿಚ್ಚ, ಒಂದು ಕ್ಷಣ ನಗೆ ಬೀರಿ, ಓಕೆ ವೆಲ್ ಡನ್ ಅಂತ ಮನೆಯ ಸದಸ್ಯರ ಬಳಿ ರಿಯಾಕ್ಷನ್ ಕೇಳಿದರು. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ,(Somanna) ನಂಗೆ ಈ ಹಿಂದೆ ಅನುಭವವಾಗಿತ್ತು. ಅದನ್ನು ಹೇಳಿದ್ದೆ ಕೂಡ, ವೋಟ್ ಕೂಡ ಒಂದು ಸಲ ಮಾಡಿದ್ದೆ. ಯಾವುದೋ ಒಂದು ವಿಚಾರ ಬಂದಾಗ ಒಬ್ಬ ವ್ಯಕ್ತಿಯ ಪರ ಮಾತನಾಡುವುದಲ್ಲ. ಹೌದು ಕಣ್ಣೀರಿಗೆ ಒಂದು ಬೆಲೆ ಇರುತ್ತದೆ. ಭಾವನೆಗೂ ಒಂದು ಬೆಲೆ ಇರುತ್ತದೆ. ಆದರೆ ಅದೇ ವೀಕ್ನೆಸ್ ಆಗಬಾರದು. ನಾನು ತುಂಬಾ ಸಲ ಕಂಡಿದ್ದೇನೆ. ಕಣ್ಣೀರು ಹಾಕಿದ ಕೂಡಲೇ ಅದನ್ನು ಬ್ಯಾಲೆನ್ಸ್ ಮಾಡಬಹುದು. ಪಾಪ ಅನಿಸುತ್ತದೆ. ಅದು ಪಾಪ ಅಲ್ಲ. ಅದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ನಡೆದಿದೆ. ಅವರು ಒಂದು ಟಾಸ್ಕ್‌ನಲ್ಲಿ ಸೋತಾಗ ಕಣ್ಣೀರು ಹಾಕುತ್ತಾರೆ. ಕಣ್ಣೀರು ಹಾಕಿದ ತಕ್ಷಣ ಅವಕಾಶ ಸಿಗುತ್ತದೆ. ಇಲ್ಲಿ ಕಣ್ಣೀರು ಎಕ್ಸಿಕ್ಯೂಟ್ ಮಾಡುವುದಕ್ಕೆ ಬಂದಿಲ್ಲ. ಬೇಕಾಬಿಟ್ಟಿ ಹಾಕಿದರೆ ಅದಕ್ಕೊಂದು ಅರ್ಥವೇ ಇರುವುದಿಲ್ಲ ಎಂದಿದ್ದಾರೆ.

    ಸುದೀಪ್ ಅವರ ಮಾತುಕತೆ ಮುಗಿದು ಒಂದು ಬ್ರೇಕ್ ಕೊಟ್ಟಾಗ ಮನೆಯಲ್ಲಿ ಕಣ್ಣೀರಿನ ಕಥೆಯ ಮಹಾಯುದ್ಧವೇ ನಡೆದಿದೆ. ಜಯಶ್ರೀ(Jaya shree) ಹಾಗೂ ಸೋನು ಕುಳಿತಲ್ಲಿಗೆ ಬಂದ ಸಾನ್ಯಾ, ಸೋಮಣ್ಣ ಕೊಟ್ಟ ರೀಸನ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನೀನು ಇವಳನ್ನು ರಾಂಗ್ ಇನ್ಫರ್ಮೇಶನ್ ಕೊಟ್ಟಿದ್ದೀಯಾ ಅದಕ್ಕೆ ಈ ರೀತಿಯೆಲ್ಲಾ ಆಗಿದೆ ಅಂತ. ಆಗ ಸಾನ್ಯಾಳಾ ಮಾತು ತಡೆದ ಜಯಶ್ರೀ, ನೀನು ರೂಪೇಶ್ ಕೂತು ಮಾತನಾಡುವಾಗ ನಾವಿಬ್ಬರು ನಿಮ್ಮ ಎದುರಿಗಿನ ಸೋಫಾದಲ್ಲಿಯೇ ಇದ್ದೇವು. ನೀನು ರೂಪೇಶ್ ಜೊತೆ ಮಾತನಾಡುವಾಗ ಇಟ್ ವಾಸ್ ನಾಟ್ ಸ್ಯಾಟಿಫೈ ಎಂಬಂತೆ ಇತ್ತು. ನೀನು ಕಣ್ಣಲ್ಲಿ ನೀರು ತುಂಬಿಕೊಂಡೆ ಮಾತನಾಡುತ್ತಿದ್ದೆ. ಅದಕ್ಕೆ ನೀನು ಅಳುತ್ತಿದ್ದಿಯಾ ಅಂತ ಅಂದುಕೊಂಡೆವು ಎಂದಾಗ, ಸಾನ್ಯಾ ಅವಳ ಪಕ್ಕದಲ್ಲಿಯೇ ನಿಂತಿದ್ದ ರೂಪೇಶ್‍ನನ್ನು ಕರೆದು ನೀನು ಕ್ಯಾಪ್ಟನ್ ಆಗಿದ್ದವನು ಹೇಳು ನಾನು ಕಣ್ಣೀರು ಹಾಕಿದ್ನಾ ಎಂದಾಗ, ರೂಪೇಶ್ ಇಲ್ಲ ಎಂದಿದ್ದಾನೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ಮತ್ತೆ ಸೋನು(Sonu) ಮತ್ತು ಜಯಶ್ರೀ ಕಡೆಗೆ ಸಾನ್ಯಾಳ ಗಮನ ತಿರುಗಿದೆ. ಅದೇಗೆ ಹೇಳುತ್ತೀರಾ. ನೀವೂ ಹೇಳಿದ್ದಕ್ಕೆ ಸೋಮಣ್ಣ ಇವತ್ತು ಆ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದಿದ್ದಾರೆ. ಜಯಶ್ರೀ ಎಮೋಷನಲ್(Emotional) ಅಂದಿದ್ದಾಳೆ, ಸೋನು ಕಣ್ಣೀರು ಹಾಕಿದ್ದೀಯಾ ಅಂತ ಮತ್ತೆ ಮತ್ತೆ ವಾದ ಮಾಡಿದ್ದಾರೆ. ಜಗಳ ತಾರಕ್ಕೇರಿದಾಗ ಆಯಿತು ಬಿಡು ನೀನು ಕಣ್ಣೀರು ಹಾಕಿಲ್ಲ ತಾನೇ. ಜನ ನೋಡಿದ್ದಾರೆ ಅಂತ ಸೋನು ಸುಮ್ಮನೆ ಆಗಿದ್ದಾರೆ. ಈ ಮಧ್ಯೆ ಇದೇ ಕಣ್ಣೀರಿನ ವಿಚಾರ ಸೋಮಣ್ಣ ಹಾಗೂ ರೂಪೇಶ್ ನಡುವೆಯೂ ವಾದ ಪ್ರತಿವಾದ ನಡೆದಿದೆ. ಅವಳ ಕಣ್ಣೀರು ನೋಡಿ ನಾನು ಅವಕಾಶ ಹೇಗೆ ಕೊಟ್ಟಿದ್ದೇನೆ ಎಂದು ಸೋಮಣ್ಣನ ಬಳಿ ಕೇಳಿದ್ದಾರೆ. ಆದರೆ ಕೆಲವೊಂದು ವಿಚಾರಗಳು ಡ್ರ್ಯಾಗ್ ಆಗಿದೆ. ಅಷ್ಟರಲ್ಲಿ ಬಿಗ್ ಬಾಸ್ ವೇದಿಕೆ ಸಿದ್ಧವಾಯಿತು. ಸುದೀಪ್ ಪ್ರತ್ಯಕ್ಷವಾದರು. ಹೀಗಾಗಿ ಜಗಳ ಅಲ್ಲಿಗೆ ನಿಂತಿತು.

    Live Tv
    [brid partner=56869869 player=32851 video=960834 autoplay=true]

  • ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ರೂಪೇಶ್ ಬುದ್ಧಿವಂತ ಎಂಬುದು ಮನೆಯವರಿಗೆ ಈಗಾಗಲೇ ಗೊತ್ತು. ಆದರೆ ರೂಪೇಶ್(Rupesh) ಫ್ರೆಂಡ್ ಲೈಫ್ ಹಳ್ಳ ಹಿಡಿಯುತ್ತಿದ್ದರೆ ಅದನ್ನು ಸರಿ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಬ್ಬ ಫ್ರೆಂಡ್ ಎಂದರೆ ಹೀಗೂ ಇರಬೇಕು ಎಂಬ ಮಾದರಿಯಾಗಿದ್ದಾನೆ. ಯಾಕೆಂದ್ರೆ ಬಿಗ್ ಬಾಸ್(Bigg Boss) ಮನೆಯಲ್ಲಿ ನಡೆದದ್ದು, ನಾಲ್ಕು ಜನ ಬೆಸ್ಟ್ ಫ್ರೆಂಡ್ಸ್‍ಗಳ ಮನಸ್ತಾಪ. ಇತ್ತ ಫ್ರೆಂಡ್ಶಿಪ್ ಹಾಳಾಗಬಾರದು, ಸಂಬಂಧವೂ ಕೆಡಬಾರದು, ಒಂದು ಪ್ರೀತಿಯೂ ಬ್ರೇಕಪ್ ಆಗಬಾರದು ಎಂದು ಎಲ್ಲವನ್ನು ತುಂಬಾ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾನೆ ಎಂದೇ ಹೇಳಬಹುದು.

    ಸಾನ್ಯಾ ನಡೆದುಕೊಳ್ಳುತ್ತಿರುವ ರೀತಿ ನಂದಿನಿಗೆ(Nandini) ಖಂಡಿತ ಹರ್ಟ್ ಆಗಿದೆ. ಜೊತೆಗೆ ರೂಪೇಶ್ ಗಮನಕ್ಕೂ ಸಾನ್ಯಾ ಮತ್ತು ಜಶ್ವಂತ್ ತುಂಬಾ ಕ್ಲೋಸ್ ಆಗುತ್ತಿರುವುದು ಬಂದಿದೆ. ಈ ಕಡೆ ಅದನ್ನು ಕಂಡು ನಂದಿನಿ ತುಂಬಾನೆ ಹರ್ಟ್ ಆಗಿದ್ದಾಳೆ. ಡಿಸ್ಟೆನ್ಸ್ ಮೆಂಟೈನ್ ಮಾಡುತ್ತಿದ್ದಾಳೆ. ಇದೆಲ್ಲವನ್ನು ಗಮನಿಸಿದಾಗ ಸಾನ್ಯಾಳನ್ನು ಜಶ್ವಂತ್‍ನಿಂದ(Jashwanth) ದೂರ ಇಡಬೇಕು ಎಂಬುದು ರೂಪೇಶ್‍ಗೆ ಅರಿವಾಗಿದೆ. ಆದರೆ ಹೇಗೆ? ನೇರವಾಗಿ ಹೇಳಿದರೆ ನನ್ನ ಬಗ್ಗೆಯೇ ತಪ್ಪಾಗಿ ತಿಳಿದುಕೊಳ್ತಿಯಾ ಅಂತ ಸಾನ್ಯಾ(Sanya) ಹರ್ಟ್ ಮಾಡಿಕೊಳ್ಳುತ್ತಾಳೆ. ಆದರೆ ರೂಪೇಶ್ ಸಖತ್ ಐಡಿಯಾ ಮಾಡಿದ್ದ. ಸಾನ್ಯಾಳ ಬಳಿ ಬೇಸರವಾದವನಂತೆ ನಟಿಸಿದ. ನಿನ್ನ ನಾನು ಬೆಸ್ಟ್ ಫ್ರೆಂಡ್ ಅಂತ ಹೇಳಿಕೊಂಡಿದ್ದೆ. ಆದರೆ ನೀನು ನನ್ನ ಜೊತೆಗಿಂತ ಹೆಚ್ಚು ಜಶ್ವಂತ್ ಜೊತೆಗೆ ಇರ್ತೀಯಾ. ಆ ಪದಕ್ಕೆ ತೂಕ ಇರುವುದಿಲ್ಲ ಎಂದು ಹರ್ಟ್ ಮಾಡಿಕೊಂಡವನಂತೆ ಮಾಡಿದಾಗ ಸಾನ್ಯಾ ಪ್ರಾಮೀಸ್ ಮಾಡಿದ್ದಳು. ಸರಿ ಇನ್ನು ಮುಂದೆ ಅವನ ಸಂಘ ಸೇರಲ್ಲ ಅಂತ.

    ಆದರೆ ಮತ್ತೆ ಅದೇ ತಪ್ಪು ಮಾಡುತ್ತಿದ್ದಳು. ಇಲ್ಲಿ ರೂಪೇಶ್ ಮತ್ತು ನಂದಿನಿ ಗೇಮ್ ಆಡುವುದಕ್ಕೆ ಶುರು ಮಾಡಿದರು. ಇದು ಜಶ್ವಂತ್‍ಗೆ ಬೇಗ ಅರ್ಥವಾಯಿತು. ನಂದಿನಿ ಒಬ್ಬಳೆ ಬೆಡ್ ಮೇಲೆ ಇದ್ದಾಗ ಮಾತನಾಡುವುದಕ್ಕೆ ಹೋದ. ಆಗಲೂ ನಂದಿನಿ ಆಯ್ತಪ್ಪ ನಾನೇ ಸರಿ ಇಲ್ಲ. ನಂದೆ ತಪ್ಪು ನನ್ನ ಬಿಟ್ ಬಿಡು ಎಂದಳು. ಒಂದು ಹಗ್ ಮಾಡ್ತೀನಿ ಎಂದಾಗಲೂ ಅವಳು ಒಪ್ಪಲೇ ಇಲ್ಲ. ಆಗಲೇ ಜಶ್ವಂತ್‍ಗೆ ಕೊಂಚ ರಿಯಲೈಸ್ ಆಗಿತ್ತು. ಆಮೇಲೆ ಸ್ವಲ್ಪ ರೂಪೇಶ್ ಹಾಗೂ ನಂದಿನಿ ಸೇರಿ ಉರಿಸುವುದಕ್ಕೆ ಮುಂದಾದರು. ಇಲ್ಲಿಗೆ ಜಶ್ವಂತ್ ಕೊಂಚ ಮಟ್ಟಿಗೆ ಸರಿ ಹೋದ. ನಂದಿನಿ ಇದ್ದ ಕಡೆಗೆ ಹೋಗುತ್ತಿದ್ದ, ನಂದಿನಿ ಯಾವ ಜಾಗದಲ್ಲಿ ಇರುವುದಿಲ್ಲವೋ ಅಲ್ಲಿ ಕುಳಿತುಕೊಳ್ಳಲೆ ಇರುತ್ತಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ಆದರೆ ನಂದಿನಿ ಇನ್ನು ಕೂಡ ಸಂಪೂರ್ಣ ಮೊದಲಿನಂತೆ ಆಗಿಲ್ಲ. ಜಶ್ವಂತ್‍ಗೆ ಎಲ್ಲವನ್ನು ಅರಿವು ಮಾಡಿಸಬೇಕು ಎಂಬುದೇ ಅವಳ ಉದ್ದೇಶವಾಗಿತ್ತು. ಅತ್ತ ರೂಪೇಶ್ ಹತ್ತಿರ ಸಾನ್ಯಾ, ಜಶ್ವಂತ್ ಬಗ್ಗೆಯೇ ಹೇಳುತ್ತಿದ್ದಾಳೆ. ನಂದಿನಿ ತುಂಬಾ ಎಮೋಷನಲ್ ಆದರೆ ಜಶ್ವಂತ್ ತುಂಬಾ ಪ್ರಾಕ್ಟಿಕಲ್. ಅವನು ಹೇಳುತ್ತಿದ್ದ ನನಗಿನ್ನು 24 ವರ್ಷ. ಸಾಧಿಸುವುದು ತುಂಬಾ ಇದೆ ಅಂತ ಎಂದಾಗ ಏನಾದರೂ ಇರಲಿ ಅವರಿಬ್ಬರ ನಡುವೆ ಹೋಗುವುದು ತಪ್ಪು. ಮೊದಲು ಅವನು ಅವಳನ್ನ ಅರ್ಥ ಮಾಡಿಕೊಳ್ಳಬೇಕು. ಅವಳ ಫೀಲಿಂಗ್ಸ್‌ಗೆ ಬೆಲೆ ಕೊಡುವವನು ಅಲ್ಲವೇ ಅಲ್ಲ ಆತ ಎಂದು ರೂಪೇಶ್ ಹೇಳಿದ್ದಾನೆ. ಇದನ್ನೂ ಓದಿ: ತನ್ನ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಪಾಪರಾಜಿಗಳ ಮೇಲೆ ಉರ್ಫಿ ಖಡಕ್‌ ಕ್ಲಾಸ್

    ಮಾತು ಮುಂದುವರಿಸಿದ ಸಾನ್ಯಾ, ಇದು ಗೇಮ್. ಪರ್ಸನಲ್ ತಲೇಲಿ ಇಟ್ಟುಕೊಳ್ಳಬಾರದು. ಈಗ ಹೊರಗಡೆ ನಿನ್ನ ಗರ್ಲ್ ಫ್ರೆಂಡ್ ಇದ್ದು. ಪೊಸೆಸಿವ್ ಆಗಿದ್ದರೇ, ನೀನು ನನ್ನ ಹಗ್ ಮಾಡೋದು, ಹೆಗಲ ಮೇಲೆ ಕೈ ಹಾಕೋದು ಮಾಡುತ್ತಾ ಇರಲಿಲ್ಲವಾ ಎಂಬ ಪ್ರಶ್ನೆಗೆ ರೂಪೇಶ್, ಖಂಡಿತ ಅವಳಿಗೆ ಇದೆಲ್ಲಾ ಇಷ್ಟ ಇಲ್ಲ ಎಂದಿದ್ದರೆ ಅವಳಿಗೆ ನಾನು ಗೌರವ ಕೊಡಲೇಬೇಕು. ಹೀಗಾಗಿ ನಾನು ಅವಾಯ್ಡ್ ಮಾಡುತ್ತಿದ್ದೆನೇನೋ ಎಂದಿದ್ದಾನೆ.

    Live Tv

    [brid partner=56869869 player=32851 video=960834 autoplay=true]

  • ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ನುಷ್ಯನಿಗೆ ತಾಳ್ಮೆ ಇರುವುದು ಸಹಜ. ಆದರೆ ತುಂಬಾ ಪ್ರೆಶರ್ ಆದಾಗ ಆ ತಾಳ್ಮೆ ಎಂಬ ಕಟ್ಟೆ ಒಡೆಯುತ್ತದೆ. ಅದು ಒಡೆದಾಗ ಎದುರಿಗಿದ್ದವರು ಯಾರು ಬೇಕಾದರೂ ಅದರ ಅಪಾಯದಲ್ಲಿ ಸಿಲುಕಬಹುದು. ಇಂದು ಬಿಗ್ ಬಾಸ್ ಮನೆಯಲ್ಲಿ ಕಂಡದ್ದು ಅದೇ. ಆರ್ಯವರ್ಧನ್ ಗುರೂಜಿಗೆ ಕೋಪ ಬಂದರೆ ಏನಾಗಬಹುದು ಎಂಬ ಸುಳಿವು ಸಿಕ್ಕಿದೆ.

    ಆರ್ಯವರ್ಧನ್ ಗುರೂಜಿ ಎಂದಾಕ್ಷಣ ಬಿಗ್ ಬಾಸ್ ಮನೆಯ ಯಾವ ಸದಸ್ಯರನ್ನು ಕೇಳಿದರು ಎಲ್ಲರೂ ಹೇಳುವುದು ಅವರು ಒಂಥರ ಮಗುವಿನಂಥವರು. ಅವರಿಗೆ ಮಗುವಿನಂಥ ಮನಸ್ಸಿದೆ ಎಂದು. ಅದರ ಜೊತೆಗೆ ಇನ್ನು ಒಂದು ಮಾತು ಕೂಡ ಕೇಳಿ ಬಂದಿದೆ. ಗುರೂಜಿಗೂ ಒಮ್ಮೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆದರೆ ನೋವಾದರೂ ಆ ನೋವನ್ನು ತೋರಿಸಿಕೊಳ್ಳಲ್ಲ. ಬದಲಿಗೆ ಅವರೇ ಅನುಭವಿಸಿ, ಖುಷಿಯನ್ನು ಹಂಚುತ್ತಾರೆ ಎನ್ನುತ್ತಾರೆ.

    ಅದಷ್ಟೇ ಅಲ್ಲದೆ ಕೆಲವೊಮ್ಮೆ ಏನೇ ಪ್ರಶ್ನೆ ಕೇಳಿದರೂ ಅದು ಗುರೂಜಿಗೆ ಅರ್ಥವಾಗಿರುವುದಿಲ್ಲ ಎಂದೇ ಕಾಣುತ್ತದೆ. ಅಥವಾ ಅದಕ್ಕೆ ಸರಿಯಾದ ಉತ್ತರ ಕೊಡುವುದಕ್ಕೂ ಬರಲ್ಲ. ಅದು ಈಗಾಗಲೇ ಕಿಚ್ಚ ಸುದೀಪ್ ವೇದಿಕೆಯಲ್ಲೂ ಪ್ರೂವ್ ಆಗಿದೆ. ಆದರೆ ಅದನ್ನು ಕಿಚ್ಚ ಸುದೀಪ್ ತಮಾಷೆಯಂತೆಯೇ ಬಿಂಬಿಸಿ ಸುಮ್ಮನೆ ಆಗಿದ್ದಾರೆ. ಗುರೂಜಿಯ ಮುಖಭಾವವನ್ನು ಆ ಸಮಯದಲ್ಲಿ ನೋಡಿದರೆ ಅವರು ಅವರದ್ದೇ ಯೋಚನಾ ಲೋಕದಲ್ಲಿ ಇರುತ್ತಾರೆ ಎಂಬ ಭಾವನೆ ಬರುತ್ತದೆ. ಇದೆಲ್ಲಾ ಗುರೂಜಿಯ ಮೇಲೆ ಪ್ರಭಾವ ಬೀರಿದೆಯೇನೋ? ಮನೆಯಲ್ಲಿ ಯಾವಾಗಲೂ ಸೀರಿಯಸ್‌ನೆಸ್ ಇಲ್ಲದಂತೆ ಆಡುವುದು ಗುರೂಜಿಗೆ ಕಿರಿಕಿರಿಯಾಗಿತ್ತು ಎನಿಸುತ್ತದೆ. ಅದೆಲ್ಲವನ್ನು ಇವತ್ತು ಒಂದೇ ಸಲ ಹೊರಹಾಕಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

    ಇಂದಿಗೆ ಸೋಮಣ್ಣ ಕ್ಯಾಪ್ಟೆನ್ಸಿ ಮುಗಿದಿದೆ. ರೂಪೇಶ್ ಕೊನೆಯ ಕ್ಯಾಪ್ಟನ್ ಆಗಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ ಬಗ್ಗೆ ಏನು ಅನ್ನಿಸಿತು, ಎಷ್ಟು ಮಾರ್ಕ್ಸ್ ಕೊಡುತ್ತೀರಾ ಎಂಬುದು ಮನೆಯ ಸದಸ್ಯರ ಟಾಸ್ಕ್ ಆಗಿರುತ್ತೆ. ಎಲ್ಲರೂ ಸೋಮಣ್ಣ ಅವರ ಕ್ಯಾಪ್ಟೆನ್ಸಿಗೆ ಸಮಾಧಾನಗೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹೇಳುವ ಸರದಿ ಆರ್ಯವರ್ಧನ್ ಅವರಿಗೆ ಬಂತು. ಆಗ, ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಹೇಳಿಕೊಳ್ಳುತ್ತಾ ಇದ್ದರು. ಬರುವಾಗ ಬಹಳಷ್ಟು ನೋವಲ್ಲಿ ಬಂದಿದ್ರು ಎನಿಸುತ್ತೆ. ಆದರೆ ಯಾರು ಊಹೆ ಮಾಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅವರಿಗೆ ಗೊತ್ತಿತ್ತು. ಯಾರ್ ಯಾರನ್ನು ಕ್ಯಾಪ್ಟನ್ ಮಾಡಬೇಕು ಅಂತ. ಅವರ ಟೀಂನಲ್ಲಿ ಮಾಡಿದ ಸೆಲೆಕ್ಷನ್, ನಡೆದುಕೊಂಡ ರೀತಿ ಚೆನ್ನಾಗಿದೆ. ಜಯಶ್ರೀ ಅವರು ಹಠ ಹಿಡಿದು ಗೆದ್ದರು. ಆದರೆ ಸೋಮಣ್ಣ ಸ್ವಲ್ಪ ನೊಂದುಕೊಂಡರು ಎಂದರು. ಆಗ ಸೋಫಾ ಮೇಲೆ ಕುಳಿತಿದ್ದ ಜಯಶ್ರೀ ಏನೋ ಮಾತನಾಡಿದಂತೆ ಆಯಿತು.

    ಆಗ ಆರ್ಯವರ್ಧನ್ ಕೊಂಚ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಕೇಳಿ. ನಿಮ್ಮದೆಲ್ಲಾ ಮುಚ್ಚಿಕೊಂಡು ಕೇಳಲಿಲ್ಲವಾ..? ನಾನು ರಾಶಿ ಭವಿಷ್ಯ ಹೇಳಿದಾಗ ಹರ್ಕೊಳ್ತಾ ಇದ್ರಿ. ಜೀವನ ಕೆಟ್ಟದಾದಾಗ ಇಲ್ಲ ವಿಷ ಕುಡಿತೀರಾ, ಇಲ್ಲ ಹೋಗಿ ಸಾಯ್ತೀರ. ನಿಮ್ಮ ನಾಯಿ ಬುದ್ಧಿ ಕೋತಿ ಬುದ್ಧಿ ಎಲ್ಲಾ ನಿಮ್ಮ ಊರಲ್ಲಿ ಇಟ್ಕೊಳಿ. ಇದು ಬಿಗ್ ಬಾಸ್, ಬಿಗ್ ಬಾಸ್‌ಗೆ ಮೊದಲು ಮರ್ಯಾದೆ ಕೊಡಿ. ನಾಯಿ ಥರ ಎಲ್ಲಾ ಆಡಬೇಡಿ. ಒಳ್ಳೆ ದೆವ್ವದ ಥರ ಆಡುತ್ತೀರಾ. ನನ್ನ ಮಾತುಗಳು ಪರ್ಫೆಕ್ಟ್ ಆಗಿ ಇದ್ದಾವೆ.

    ಉದಾಹರಣೆಗಳನ್ನು ಕೊಟ್ಟು ಮಾತನಾಡುತ್ತೇನೆ. ನಾವೂ ದಿವಸ ನೂರು ಜನಕ್ಕೆ ಬೈಯ್ಯುವವರು. ಮೂರು ಜನಕ್ಕೆ ಬೈಯ್ಯುವುದು ದೊಡ್ಡ ಕೆಲಸವೇನಲ್ಲ. ನಾಯಿಗೆ ಉಗಿದವರಂತೆ ಉಗಿಯುತ್ತೀನಿ. ಉಗಿದರೆ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೇ ಹೇಳುತ್ತೇನೆ. ನಾಲ್ಕು ಪದ ಅರ್ಥ ಆಗಬಹುದು. ಆದರೆ ನಾಲ್ಕು ನೂರು ವರ್ಷದ ಮಾತನ್ನು ಬೇಕಾದರೂ ಮಾತನಾಡುತ್ತೇನೆ ಎಂದು ಗರಂ ಆಗಿ ಬಳಿಕ ಮಾತನಾಡಿ, ಬಿಗ್ ಬಾಸ್‌ನಲ್ಲಿ ಎಲ್ಲಾ ಗೇಮ್ ಅನ್ನು ಅಟ್ಯಾಕ್ ಮಾಡುವ ತಾಕತ್ತು ಇರುವುದು ಸೋಮಣ್ಣನಿಗೆ ಮಾತ್ರ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    Live Tv
    [brid partner=56869869 player=32851 video=960834 autoplay=true]

  • ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಬಿಗ್‍ಬಾಸ್ ಮನೆಯಲ್ಲಿ ಒಂದು ಕ್ಯೂಟ್ ಜೋಡಿ ಇದೆ. ಅದು ಯಾರು ಅಂತ ಕೇಳಿದರೆ ನಂದು ಅಂಡ್ ಜಶು ಅಂತ ಎಲ್ಲರೂ ಹೇಳುತ್ತಾರೆ. ನಂದಿನಿ ಹಾಗೂ ಜಶ್ವಂತ್ ಬಿಗ್‍ಬಾಸ್ ಮನೆಗೆ ಬಂದ ಮೇಲೆ ಪ್ರೀತಿಯಲ್ಲಿ ಬಿದ್ದವರಲ್ಲ. ಪ್ರೀತಿಯಲ್ಲಿ ಬಿದ್ದಿದ್ದವರನ್ನು ಬಿಗ್‍ಬಾಸ್ ಮನೆಗೆ ಕರೆತಂದದ್ದು. ಇಬ್ಬರು ಈಗಲೂ ಬಿಗ್‍ಬಾಸ್ ಮನೆಯಲ್ಲಿ ಲವ್ ಬರ್ಡ್ಸ್‌ಗಳು ಹಾರಾಡಿದಂತೆಯೇ ಹಾರಾಡುತ್ತಿರುತ್ತಾರೆ. ಆದರೆ ಅದ್ಯಾಕೋ ಜಶ್ವಂತ್‍ಗೆ ಹಳೇ ಗರ್ಲ್ ಫ್ರೆಂಡ್ ನೆನಪಾಗಿದ್ದಾಳೆ.

    ಹಳೇ ಗರ್ಲ್ ಫ್ರೆಂಡ್ ಎಂದಾಕ್ಷಣಾ ಬೇರೆ ಇನ್ನೇನನ್ನೋ ಅರ್ಥೈಸಿಕೊಳ್ಳಬೇಡಿ. ಜಶ್ವಂತ್‍ಗೆ ಹಳೆ ನಂದಿನಿ ಬೇಕು ಎಂಬ ಹಂಬಲ ಹೆಚ್ಚಾಗಿದೆ. ಇಂದು ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಅಡುಗೆ ಯಾರು ಮಾಡಬೇಕು ಎಂಬುದು ವೂಟ್‍ನಲ್ಲಿ ಜನರಿಂದ ಬಂದ ಉತ್ತರದ ಮೇಲೆಯೇ ನಿರ್ಧಾರವಾಗುತ್ತದೆ. ಅದರಂತೆ ಇಂದು ಅಡುಗೆ ಮಾಡುವ ಜವಾಬ್ದಾರಿ ನಂದಿನಿ ಅವರ ಮೇಲೆ ಬಂದಿದೆ. ಬಿಗ್‍ಬಾಸ್ ಸೂಚನೆಯಂತೆ ನಂದಿನಿ ಅನ್ನ, ಟೊಮೇಟೊ ಗೊಜ್ಜು ಮಾಡಿದ್ದಾಳೆ. ಎಲ್ಲರೂ ಖುಷಿಯಾಗಿ ತಿಂದಿದ್ದಾರೆ. ಕ್ಯಾಮೆರಾಗೆ ಖುಷಿಯಿಂದ ಹೇಳಿಕೊಂಡ ನಂದಿನಿ, ಮಮ್ಮಿ, ಪಪ್ಪಾ ನೋಡಿ ಇಲ್ಲಿ ನಾನು ಟೊಮೇಟೊ ಅನ್ನ ಮಾಡಿದ್ದೀನಿ. ಕರಿಬೇವಿನ ಸೊಪ್ಪನ್ನು ಸೀಯಿಸಿ ಬಿಟ್ಟಿದ್ದೀನಿ. ಸೋ ನಿಮ್ಮ ಮಗಳೇ ಎಂಬುದು ಅರ್ಥ ಆಯ್ತು ಎಂದಿದ್ದಾರೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಅದಕ್ಕೂ ಮುನ್ನ ಟೊಮೇಟೊ ಹಚ್ಚಿಕೊಡಲು ಜಶ್ವಂತ್ ಸಹಾಯ ಮಾಡಿದ್ದಾರೆ. ಈ ವೇಳೆ ಜಶ್ವಂತ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಎಂದು ಟೊಮೇಟೊದಲ್ಲಿ ಹಾರ್ಟ್ ಶೇಪ್ ಕೂರಿಸಿ ನಂದಿನಿಗೆ ಖುಷಿ ಕೊಟ್ಟಿದ್ದಾರೆ. ಆದರೆ ತಿನ್ನುವುದಕ್ಕೆ ಜಶ್ವಂತ್ ಬಂದಿದ್ದಾರೆ. ತಿಂಡಿ ಹೇಗಿದೆ ಅಂತ ಜಶ್ವಂತ್ ಹೇಳದೇ ಇರುವುದಕ್ಕೆ ನಂದಿನಿ ಬೇಸರ ಮಾಡಿಕೊಂಡಿದ್ದಾರೆ. ಆ ಮಧ್ಯೆ ಸಣ್ಣ ಚೇಷ್ಟೆಯ ಜಗಳವೂ ಆಗಿದೆ. ತಿಂಡಿ ತಿನ್ನುತ್ತಿದ್ದ ಜಶ್ವಂತ್ ಅನ್ನು ಹಗ್ ಮಾಡಲು ಬಂದಿದ್ದಾರೆ. ಆದರೆ ಜಶ್ವಂತ್ ಸರಿಯಾದ ಹಗ್ ಕೊಡದೇ ಇದ್ದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ನೀನು ಹಗ್ ಬೇರೆಯವರ ಹತ್ತಿರವೇ ತೆಗೆದುಕೋ ಎಂದು ಮುಂದೆ ಸಾಗಿದ್ದಾರೆ.

    ನಂತರ ಕೂಡಲೇ ಅಲ್ಲಿಂದ ಎದ್ದು ಜಶ್ವಂತ್ ನಂದಿನಿಯನ್ನು ಸಮಾಧಾನ ಮಾಡಲು ಹೋಗಿ ವಿವರಣೆ ನೀಡಲು ಯತ್ನಿಸಿದಾಗ ನಂದಿನಿ ಕೂಡ ನಿನ್ನೆ ಆಗಿದ್ದನ್ನು ವಿವರಿಸಿದ್ದಾರೆ. ನಿನ್ನೆ ಹಗ್ ಮಾಡಲು ಬಂದರೆ ಹಗ್ ಕೊಡದೇ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಅದಕ್ಕೆ ನಂಗೆ ಬೇಸರ ಆಯ್ತು ಎಂದಿದ್ದಾರೆ. ಬಳಿಕ ಬೇಸರದಲ್ಲಿದ್ದ ನಂದಿನಿಯನ್ನು ಗಟ್ಟಿಯಾಗಿ ತಬ್ಬಿ ಸಮಾಧಾನ ಮಾಡಿದ್ದಾರೆ. ಚಿವುಟಿದ ನಂದಿನಿ ಅಲ್ಲಿಂದ ಮುಂದೆ ಸಾಗಿದ್ದಾರೆ. ನಂದಿನಿ ಚಿವುಟಿದ ನೋವು ಹಾಗೆ ಇದ್ದಿದ್ದರಿಂದ ಕೆರೆದುಕೊಂಡು ಕುಳಿತಿದ್ದ ಜಶು, ಸೋಮಣ್ಣ ಬಂದ ಮೇಲೆ ನಂಗೆ ಹಳೇ ಗರ್ಲ್ ಫ್ರೆಂಡ್ ಬೇಕು ಎಂದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಜೈಲು ಫಿಕ್ಸ್

    ಯಾಕೆಂದರೆ ನಂದಿನಿ ಅಲ್ಲಿಂದ ಹೋಗುವಾಗ ಚಮಕಾಯಿಸುವಂತೆ ಹೋಗಿದ್ದಾರೆ. ಆದರೆ ಆ ಸ್ಟೈಲ್ ರೂಪೇಶ್ ನದ್ದಾಗಿತ್ತು. ಇದು ಜಶ್ವಂತ್‍ಗೆ ಉರಿದಿದೆ. ಅಯ್ಯೋ ರೂಪೇಶ್ ಯಾಕೆ. ಅದು ಅವನೇ ಮಾಡುವುದು ಎಂದಿದ್ದಾನೆ. ಅದಕ್ಕೆ ನಂದು ಅದು ರೂಪೇಶ್ ರೀತಿ ಅಲ್ಲ ಎಂದು ಹೇಳಿ ಹೋಗುತ್ತಾರೆ. ಅಲ್ಲಿಗೆ ಬಂದ ಸೋಮಣ್ಣನ ಬಳಿ ಜಶ್ವಂತ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ರೂಪೇಶ್ ಮತ್ತು ನಂದು ಚಿಲ್ ಮಾಡುತ್ತಾರಲ್ವಾ. ಈಗ ನಂದು ಸ್ವಲ್ಪ ರೂಪೇಶ್ ಥರನೇ ಮಾಡುವುದು. ನಂಗೆ ಏನಪ್ಪ ಇದು ಅಂತ ಇಷ್ಟ ಆಗುತ್ತಿಲ್ಲ. ಆಕ್ಚುಲಿ ನಂದು ಕ್ಯೂಟ್ ಆಗಿ ಇದು ಅದು ಮಾಡುತ್ತಾಳೆ. ಆದರೆ ಈಗ ರೂಪೇಶ್ ಥರ ಇದು ಅದು ಮಾಡುತ್ತಾಳೆ. ನಂಗೆ ನನ್ನ ಗರ್ಲ್ ಫ್ರೆಂಡ್ ವಾಪಾಸ್ ಬೇಕು ಎಂದು ಬೇಜಾರು ಮಾಡಿಕೊಂಡು ನಂದು ಮಾಡಿದ ತಿಂಡಿ ತಿಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಬಿಗ್ ಬಾಸ್ ಮನೆಯಲ್ಲಿ ಈ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ ತಮ್ಮ ತಮ್ಮ ಯೋಚನಾ ಲಹರಿಗೆ ಮ್ಯಾಚ್ ಆಗುವವರನ್ನು ಫ್ರೆಂಡ್ಸ್ ಮಾಡಿಕೊಂಡಿಕೊಂಡಿದ್ದಾರೆ. ಇದೀಗ ಸಾನ್ಯ ಜೊತೆಗಿನ ಜಶ್ವಂತ್ ಫ್ರೆಂಡ್‌ಶಿಪ್ ನಂದು ಮುನಿಸಿಗೆ ಕಾರಣವಾಗಿದೆ.

    ದೊಡ್ಮನೆಯಲ್ಲಿ ಸಾನ್ಯ, ರೂಪೇಶ್, ನಂದು, ಜಶ್ವಂತ್, ಒಂದು ಟೀಂ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುವಾಗ ಜೋಡಿಯಾಗಿಯೇ ಬಂದಿದ್ದ ನಂದು ಮತ್ತು ಜಶ್ವಂತ್ ನಡುವೆ ಇದೀಗ ಮನಸ್ತಾಪ ಉಂಟಾಗಿದೆ. ಸಾನ್ಯ ಜತೆ ಜಶ್ವಂತ್ ಕ್ಲೋಸ್ ಆಗಿ ಮೂವ್ ಆಗಿರೋದನ್ನ ನೋಡಿ, ನಂದು ತನ್ನ ಬಾಯ್‌ಫ್ರೆಂಡ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಾನ್ಯ ಮತ್ತು ರೂಪೇಶ್ ಕಪಲ್ ಆಗಿರೋದ ಅಥವಾ ನಾವು ಕಪಲ್ ಆ ಎಂದು ಜಶ್ವಂತ್ ಜತೆ ನಂದು ಮಾತನಾಡಿದ್ದಾರೆ. ಸಾನ್ಯ ಜೊತೆ ಸಖತ್ ಸಲಿಗೆಯಿಂದ ಇರೋದನ್ನ ನೋಡಿ, ನೋಡುವವರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ನೀವು ರೀತಿ ಕಾಣಿಸಿಕೊಳ್ಳಬೇಡಿ ಎಂದು ನಂದು ಜಶ್ವಂತ್‌ಗೆ ಹೇಳಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ಈ ವೇಳೆ ನೀನು ರೂಪೇಶ್ ಜತೆ ಕ್ಲೋಸ್ ಆಗಿದ್ಯಾ ಆದರೆ ನನಗೇನು ಸಮಸ್ಯೆ ಇಲ್ಲ ಎಂಬ ಜಶ್ವಂತ್ ಮಾತನಾಡಿದ್ದಾರೆ. ಈಗ ಎನು ಪ್ರೂವ್ ಮಾಡೋಕೆ ಟ್ರೈ ಮಾಡುತ್ತಿದ್ಯಾ ಎಂದು ನಂದು ಜಶ್ವಂತ್‌ ವಿರುದ್ಧ ಫುಲ್‌ ಗರಂ ಆಗಿದ್ದಾರೆ. ಸಾನ್ಯ ಜೊತೆಗಿನ ಜಶ್ವಂತ್ ಅತಿಯಾದ ಸಲುಗೆ ನೋಡಿ ನಂದು ಕಣ್ಣೀರು ಹಾಕಿದ್ದಾರೆ. ಜಶ್ವಂತ್‌ ಮತ್ತು ಸಾನ್ಯ ಫ್ರೆಂಡ್‌ಶಿಪ್‌ ಇದೀಗ ನಂದು ನಿದ್ದೆಗೆಡಿಸಿದೆ.

    Live Tv
    [brid partner=56869869 player=32851 video=960834 autoplay=true]